Marcos 14

ಪವಿತ್ರ ಬೈಬಲ್, ಈಸಿ ಓದುವಿಕೆ ಆವೃತ್ತಿ (KAN2010) vs NAA

Sair da comparação
NAA Nova Almeida Atualizada 2017
1 ಪಸ್ಕ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬಕ್ಕೆ ಕೇವಲ ಎರಡು ದಿನಗಳಿದ್ದವು. ಮಹಾಯಾಜಕರು ಹಾಗೂ ಧರ್ಮೋಪದೇಶಕರು ಯಾವುದಾದರೊಂದು ಸುಳ್ಳು ಅಪವಾದವನ್ನು ಕಂಡುಹಿಡಿದು ಯೇಸುವನ್ನು ಬಂಧಿಸಿ ಆತನನ್ನು ಕೊಲ್ಲಬೇಕೆಂದಿದ್ದರು.
1 Dois dias depois seria celebrada a Páscoa e a Festa dos Pães sem Fermento. Os principais sacerdotes e os escribas procuravam uma forma de prender Jesus, à traição, para matá-lo.
2 “ಆದರೆ ಹಬ್ಬದ ಸಮಯದಲ್ಲಿ ನಾವು ಯೇಸುವನ್ನು ಬಂಧಿಸಲು ಸಾಧ್ಯವಿಲ್ಲ. ಜನರು ಕೋಪಗೊಂಡು, ಗಲಭೆ ಎಬ್ಬಿಸುವ ಸಾಧ್ಯತೆಯಿದೆ” ಎಂದು ಅವರು ಮಾತಾಡಿಕೊಂಡರು.
2 Pois diziam: — Não durante a festa, para que não haja tumulto entre o povo.
3 ಬೆಥಾನಿಯದಲ್ಲಿ ಯೇಸು ಕುಷ್ಠರೋಗಿ ಸಿಮೋನನ ಮನೆಯಲ್ಲಿ ಊಟಮಾಡುತ್ತಿದ್ದಾಗ ಸ್ತ್ರೀಯೊಬ್ಬಳು ಆತನ ಬಳಿಗೆ ಬಂದಳು. ಆಕೆಯ ಬಳಿ ಅತ್ಯಂತ ಬೆಲೆಬಾಳುವ ಪರಿಮಳದ್ರವ್ಯದ ಭರಣಿ ಇತ್ತು. ಈ ಪರಿಮಳದ್ರವ್ಯವನ್ನು ಶುದ್ಧವಾದ ನಾರ್ಡ್‌ ತೈಲದಿಂದ ಮಾಡಲಾಗಿತ್ತು. ಆ ಸ್ತ್ರೀಯು ಭರಣಿಯನ್ನು ತೆರೆದು, ಆ ತೈಲವನ್ನು ಯೇಸುವಿನ ತಲೆಯ ಮೇಲೆ ಸುರಿದಳು.
3 Quando Jesus estava em Betânia, fazendo uma refeição na casa de Simão, o leproso, veio uma mulher, trazendo um frasco feito de alabastro com um perfume muito valioso, de nardo puro; e, quebrando o frasco, derramou o perfume sobre a cabeça de Jesus.
4 ಅಲ್ಲಿದ್ದ ಕೆಲವು ಶಿಷ್ಯರು ಇದನ್ನು ನೋಡಿ ಕೋಪಗೊಂಡು ಆಕ್ಷೇಪಿಸಿದರು. “ಆ ಪರಿಮಳತೈಲವನ್ನು ಹಾಳುಮಾಡಿದ್ದೇಕೆ?
4 Alguns dos que estavam ali ficaram indignados e diziam entre si: — Para que este desperdício de perfume?
5 ಅದು ಒಂದು ವರ್ಷದ ಸಂಪಾದನೆಗಿಂತ ಹೆಚ್ಚು ಬೆಲೆಬಾಳುತ್ತಿತ್ತು. ಅದನ್ನು ಮಾರಿ ಬಂದ ಹಣವನ್ನು ಬಡಜನರಿಗೆ ಕೊಡಬಹುದಾಗಿತ್ತು” ಎಂದು ಹೇಳಿ ಆ ಸ್ತ್ರೀಯನ್ನು ಕಟುವಾಗಿ ಟೀಕಿಸಿದರು.
5 Este perfume poderia ter sido vendido por mais de trezentos denários, para ser dado aos pobres. E murmuravam contra ela.
6 ಯೇಸು, “ಆಕೆಗೆ ತೊಂದರೆ ಕೊಡಬೇಡಿ. ನೀವು ಆಕೆಯನ್ನು ಕಾಡಿಸುವುದೇಕೆ? ಅವಳು ನನಗಾಗಿ ಬಹಳ ಒಳ್ಳೆಯದನ್ನು ಮಾಡಿದಳು.
6 Mas Jesus disse:
7 ನಿಮ್ಮೊಡನೆ ಬಡಜನರು ಯಾವಾಗಲೂ ಇರುತ್ತಾರೆ. ನಿಮಗೆ ಇಷ್ಟಬಂದ ಸಮಯದಲ್ಲಿ ನೀವು ಅವರಿಗೆ ಸಹಾಯ ಮಾಡಬಹುದು. ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ.
7 Porque os pobres estarão sempre com vocês, e, quando quiserem, podem fazer-lhes o bem, mas a mim vocês nem sempre terão.
8 ಈಕೆ ನನಗಾಗಿ ತನ್ನಿಂದ ಸಾಧ್ಯವಾದ ಒಂದು ಕಾರ್ಯವನ್ನು ಮಾಡಿದಳು. ನಾನು ಸಾಯುವುದಕ್ಕಿಂತ ಮುಂಚೆ ನನ್ನನ್ನು ಸಮಾಧಿಗೆ ಸಿದ್ಧಮಾಡಲು ಆಕೆ ನನ್ನ ದೇಹದ ಮೇಲೆ ಪರಿಮಳತೈಲ ಸುರಿದಳು.
8 Ela fez o que pôde: ungiu o meu corpo antecipadamente para a sepultura.
9 ನಾನು ಸತ್ಯವನ್ನು ಹೇಳುತ್ತೇನೆ. ಪ್ರಪಂಚದಲ್ಲಿ ಸುವಾರ್ತೆ ಸಾರಲ್ಪಡುವಲ್ಲೆಲ್ಲಾ ಈಕೆ ಮಾಡಿದ ಈ ಕಾರ್ಯವನ್ನು ತಿಳಿಸುವುದರಿಂದ ಜನರು ಈಕೆಯನ್ನು ನೆನಪುಮಾಡಿಕೊಳ್ಳುವರು” ಎಂದು ಹೇಳಿದನು.
9 Em verdade lhes digo que, onde for pregado em todo o mundo o evangelho, também será contado o que ela fez, para memória dela.
10 ನಂತರ ಹನ್ನೆರಡು ಮಂದಿ ಅಪೊಸ್ತಲರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ಯೇಸುವನ್ನು ಹಿಡಿದುಕೊಡಬೇಕೆಂಬ ದುರುದ್ದೇಶದಿಂದ ಮಹಾಯಾಜಕರೊಡನೆ ಮಾತಾಡಲು ಹೋದನು.
10 E Judas Iscariotes, um dos doze, foi falar com os principais sacerdotes, para lhes entregar Jesus.
11 ಮಹಾಯಾಜಕರು ಇದರ ಬಗ್ಗೆ ಬಹಳ ಸಂತೋಷಗೊಂಡು, ಹಣಕೊಡುವುದಾಗಿ ಯೂದನಿಗೆ ಮಾತುಕೊಟ್ಟರು. ಆದ್ದರಿಂದ ಅವರಿಗೆ ಯೇಸುವನ್ನು ಹಿಡಿದುಕೊಡಲು ಅತ್ಯಂತ ಉತ್ತಮವಾದ ಸಮಯಕ್ಕಾಗಿ ಯೂದನು ಕಾಯತ್ತಿದ್ದನು.
11 Eles, ouvindo isto, se alegraram e prometeram dar dinheiro a ele; nesse meio-tempo, Judas buscava uma boa ocasião para entregar Jesus.
12 ಅಂದು ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನವಾಗಿತ್ತು. ಯೆಹೂದಿಗಳು ಯಾವಾಗಲೂ ಪಸ್ಕಹಬ್ಬದ ಕುರಿಮರಿಗಳನ್ನು ಯಜ್ಞಮಾಡುವ ಸಮಯ ಇದಾಗಿತ್ತು. ಯೇಸುವಿನ ಶಿಷ್ಯರು ಆತನ ಬಳಿಗೆ ಬಂದು, “ನಾವು ಪಸ್ಕಹಬ್ಬದ ಊಟವನ್ನು ನಿನಗಾಗಿ ಎಲ್ಲಿ ಸಿದ್ಧಪಡಿಸೋಣ?” ಎಂದು ಕೇಳಿದರು.
12 E, no primeiro dia da Festa dos Pães sem Fermento, quando se fazia o sacrifício do cordeiro pascal, os discípulos de Jesus lhe perguntaram: — Onde quer que façamos os preparativos para que o senhor possa comer a Páscoa?
13 ಯೇಸು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ನೀವು ಪಟ್ಟಣದೊಳಕ್ಕೆ ಹೋದಾಗ, ಒಬ್ಬ ಮನುಷ್ಯನು ನೀರಿನ ಕೊಡವನ್ನು ಹೊತ್ತುಕೊಂಡು ನಿಮ್ಮ ಎದುರಿಗೆ ಬರುವನು. ಅವನನ್ನೇ ಹಿಂಬಾಲಿಸಿರಿ.
13 Então Jesus enviou dois dos seus discípulos, dizendo-lhes:
14 ಅವನು ಒಂದು ಮನೆಯೊಳಗೆ ನಡೆದು ಹೋಗುತ್ತಾನೆ. ನೀವು ಆ ಮನೆಯ ಯಜಮಾನನಿಗೆ, ‘ನಮ್ಮ ಗುರುವು ತನ್ನ ಶಿಷ್ಯರ ಸಂಗಡ ಪಸ್ಕ ಹಬ್ಬದ ಊಟ ಮಾಡಲು ಒಂದು ಕೋಣೆಯನ್ನು ತೋರಿಸಬೇಕೆಂದು ಕೇಳುತ್ತಾನೆ’ ಎಂದು ಹೇಳಿ.
14 Sigam esse homem e digam ao dono da casa em que ele entrar que o Mestre pergunta: “Onde fica o meu aposento no qual comerei a Páscoa com os meus discípulos?”
15 ಆ ಯಜಮಾನನು ಮೇಲಂತಸ್ತಿನಲ್ಲಿ ಸಿದ್ಧವಾಗಿರುವ ಒಂದು ದೊಡ್ಡ ಕೋಣೆಯನ್ನು ತೋರಿಸುತ್ತಾನೆ. ಅಲ್ಲಿ ನಮಗಾಗಿ ಊಟವನ್ನು ಸಿದ್ಧಪಡಿಸಿರಿ” ಎಂದನು.
15 E ele lhes mostrará um espaçoso cenáculo mobiliado e pronto; ali façam os preparativos.
16 ಆದ್ದರಿಂದ ಶಿಷ್ಯರು ಅಲ್ಲಿಂದ ಹೊರಟು, ಪಟ್ಟಣದೊಳಗೆ ಹೋದರು. ಯೇಸು ಹೇಳಿದ ರೀತಿಯಲ್ಲಿಯೇ ಪ್ರತಿಯೊಂದೂ ನಡೆಯಿತು. ಶಿಷ್ಯರು ಪಸ್ಕಹಬ್ಬದ ಊಟವನ್ನು ಸಿದ್ಧಪಡಿಸಿದರು.
16 Os discípulos saíram, foram à cidade e, achando tudo como Jesus lhes tinha dito, prepararam a Páscoa.
17 ಸಾಯಂಕಾಲದಲ್ಲಿ ಯೇಸು ಹನ್ನೆರಡು ಜನ ಅಪೊಸ್ತಲರೊಂದಿಗೆ ಆ ಮನೆಗೆ ಹೋದನು.
17 Ao cair da tarde, Jesus chegou com os doze.
18 ಅವರೆಲ್ಲರೂ ಊಟ ಮಾಡುತ್ತಿರುವಾಗ, ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ. ಈಗ ಅವನು ನನ್ನೊಂದಿಗೆ ಊಟಮಾಡುತ್ತಿದ್ದಾನೆ” ಎಂದನು.
18 Quando estavam à mesa e comiam, Jesus disse:
19 ಇದನ್ನು ಕೇಳಿದಾಗ ಶಿಷ್ಯರಿಗೆ ಬಹಳ ದುಃಖವಾಯಿತು. ಪ್ರತಿಯೊಬ್ಬ ಶಿಷ್ಯನೂ ಯೇಸುವಿಗೆ, “ಖಂಡಿತವಾಗಿ ನಾನು ನಿನಗೆ ದ್ರೋಹಮಾಡುವುದಿಲ್ಲ” ಎಂದನು.
19 E eles começaram a entristecer-se e a perguntar-lhe, um por um: — Por acaso seria eu?
20 ಯೇಸು, “ಈ ಹನ್ನೆರಡು ಜನರಲ್ಲಿ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ. ಅವನು ನನ್ನೊಡನೆ ಒಂದೇ ಬಟ್ಟಲಿನಲ್ಲಿ ತನ್ನ ರೊಟ್ಟಿಯನ್ನು ಅದ್ದುತ್ತಿದ್ದಾನೆ.
20 Jesus respondeu:
21 ಮನುಷ್ಯಕುಮಾರನು ಹಿಂಸಿಸಲ್ಪಟ್ಟನು. ಪವಿತ್ರ ಗ್ರಂಥದಲ್ಲಿಯೂ ಅದನ್ನು ಬರೆಯಲಾಗಿದೆ. ಆದರೆ ಮನುಷ್ಯಕುಮಾರನನ್ನು ಕೊಲ್ಲಲು ಹಿಡಿದುಕೊಡುವ ವ್ಯಕ್ತಿಯ ಸ್ಥಿತಿ ಬಹಳ ಭೀಕರವಾಗಿರುತ್ತದೆ. ಅವನು ಹುಟ್ಟದೇ ಇದ್ದಿದ್ದರೆ ಅವನಿಗೆ ಒಳ್ಳೆಯದಾಗುತ್ತಿತ್ತು” ಎಂದನು.
21 Pois o Filho do Homem vai, como está escrito a seu respeito; mas ai daquele por quem o Filho do Homem está sendo traído! Melhor seria para ele se nunca tivesse nascido!
22 ಅವರು ಊಟಮಾಡುತ್ತಿರುವಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು, ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ ಅದನ್ನು ಮುರಿದು, ತನ್ನ ಶಿಷ್ಯರಿಗೆ ಕೊಟ್ಟನು. ಯೇಸು ಅವರಿಗೆ, “ಈ ರೊಟ್ಟಿಯನ್ನು ತೆಗೆದುಕೊಂಡು ತಿನ್ನಿರಿ. ಈ ರೊಟ್ಟಿಯು ನನ್ನ ದೇಹ” ಎಂದನು.
22 E, enquanto comiam, Jesus pegou um pão e, abençoando-o, o partiu e lhes deu, dizendo:
23 ನಂತರ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ ಅದನ್ನು ತನ್ನ ಶಿಷ್ಯರಿಗೆ ಕೊಟ್ಟನು. ಶಿಷ್ಯರೆಲ್ಲರೂ ಅದರಲ್ಲಿ ಕುಡಿದರು.
23 A seguir, Jesus pegou um cálice e, tendo dado graças, o deu aos seus discípulos; e todos beberam dele.
24 ಯೇಸು, “ಇದು ನನ್ನ ರಕ್ತ. ಒಡಂಬಡಿಕೆಯ ರಕ್ತ. ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ.
24 Então lhes disse:
25 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಾನು ದೇವರ ರಾಜ್ಯದಲ್ಲಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ದಿನದವರೆಗೆ ಇದನ್ನು ಕುಡಿಯುವುದೇ ಇಲ್ಲ” ಎಂದನು.
25 Em verdade lhes digo que nunca mais beberei do fruto da videira, até aquele dia em que beberei o vinho novo, no Reino de Deus.
26 ಆಗ ಶಿಷ್ಯರೆಲ್ಲರೂ ಒಂದು ಹಾಡನ್ನು ಹಾಡಿದರು. ನಂತರ ಅವರು ಆಲಿವ್ ಮರದ ಗುಡ್ಡಕ್ಕೆ ಹೋದರು.
26 E, tendo cantado um hino, saíram para o monte das Oliveiras.
27 ನಂತರ ಯೇಸು ಶಿಷ್ಯರಿಗೆ, “ನೀವೆಲ್ಲರೂ ಭಯಗೊಂಡು ಹಿಂಜರಿಯುವಿರಿ.
27 E Jesus disse aos discípulos:
28 ಆದರೆ ನಾನು ಸತ್ತು ಪುನರುತ್ಥಾನ ಹೊಂದಿದ ಮೇಲೆ ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತೇನೆ” ಎಂದನು.
28 Mas, depois da minha ressurreição, irei adiante de vocês para a Galileia.
29 ಪೇತ್ರನು, “ಉಳಿದ ಶಿಷ್ಯರೆಲ್ಲರು ಭಯಗೊಂಡು ಹಿಂಜರಿದರೂ ನಾನು ಹಿಂಜರಿಯುವುದಿಲ್ಲ” ಎಂದು ಉತ್ತರಿಸಿದನು.
29 Então Pedro disse a Jesus: — Ainda que o senhor venha a ser um tropeço para todos, não o será para mim!
30 ಯೇಸು, “ನಾನು ಸತ್ಯವನ್ನು ಹೇಳುತ್ತೇನೆ. ಈ ರಾತ್ರಿ ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮುಂಚೆ ನೀನು ಮೂರು ಸಾರಿ, ನನ್ನನ್ನು ನೀನು ತಿಳಿದೇ ಇಲ್ಲವೆಂದು ಹೇಳುವೆ” ಎಂದು ಉತ್ತರಿಸಿದನು.
30 Mas Jesus lhe disse:
31 ಆದರೆ ಪೇತ್ರನು ಖಚಿತವಾಗಿ, “ನಾನು ನಿನ್ನೊಂದಿಗೆ ಸಾಯಬೇಕಾದರೂ ಸರಿಯೇ, ನಿನ್ನನ್ನು ತಿಳಿದೇ ಇಲ್ಲವೆಂದು ನಾನೆಂದಿಗೂ ಹೇಳುವುದಿಲ್ಲ” ಎಂದು ಉತ್ತರಿಸಿದನು. ಉಳಿದ ಶಿಷ್ಯರು ಸಹ ಇದೇ ರೀತಿ ಹೇಳಿದರು.
31 Mas Pedro insistia com mais veemência: — Ainda que me seja necessário morrer com o senhor, de modo nenhum o negarei. E todos os outros diziam a mesma coisa.
32 ಯೇಸು ಮತ್ತು ಆತನ ಶಿಷ್ಯರು ಗೆತ್ಸೆಮನೆ ಎಂಬ ಸ್ಥಳಕ್ಕೆ ಹೋದರು. ಯೇಸು ತನ್ನ ಶಿಷ್ಯರಿಗೆ, “ನಾನು ಪ್ರಾರ್ಥಿಸಿ ಬರುವ ತನಕ ಕುಳಿತಿರಿ” ಎಂದು ಹೇಳಿ
32 Então foram a um lugar chamado Getsêmani. Ali, Jesus disse aos seus discípulos:
33 ಪೇತ್ರನನ್ನು, ಯಾಕೋಬನನ್ನು ಮತ್ತು ಯೋಹಾನನನ್ನು ತನ್ನ ಜೊತೆ ಕರೆದುಕೊಂಡು ಹೋದನು. ನಂತರ ಯೇಸು ಬಹಳ ಗಲಿಬಿಲಿಗೊಂಡು, ದುಃಖದಿಂದ ತುಂಬಿದವನಾದನು.
33 E, levando consigo Pedro, Tiago e João, começou a sentir-se tomado de pavor e de angústia.
34 ಯೇಸು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ದುಃಖದಿಂದ ತುಂಬಿಹೋಗಿದೆ. ಎಚ್ಚರವಾಗಿದ್ದು ಇಲ್ಲಿಯೇ ಕಾದುಕೊಂಡಿರಿ” ಎಂದನು.
34 E lhes disse:
35 ಯೇಸು ಅವರಿಂದ ಸ್ವಲ್ಪದೂರ ನಡೆದುಹೋಗಿ ನೆಲದ ಮೇಲೆ ಬೋರಲಬಿದ್ದು, ಪ್ರಾರ್ಥಿಸುತ್ತಾ “ಸಾಧ್ಯವಾದರೆ, ಈ ಸಂಕಟದ ಗಳಿಗೆ ನನಗೆ ಬಾರದಿರಲಿ” ಎಂದು ಬೇಡಿಕೊಂಡನು.
35 E, adiantando-se um pouco, prostrou-se em terra; e orava para que, se possível, lhe fosse poupada aquela hora.
36 ಬಳಿಕ ಯೇಸು, “ಅಪ್ಪಾ, ತಂದೆಯೇ! ನಿನಗೆ ಎಲ್ಲವೂ ಸಾಧ್ಯ. ಈ ಸಂಕಟದ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೆ ನನ್ನ ಚಿತ್ತದಂತೆ ಮಾಡದೆ, ನಿನ್ನ ಚಿತ್ತದಂತೆಯೇ ಮಾಡು” ಎಂದು ಪ್ರಾರ್ಥಿಸಿದನು.
36 E dizia:
37 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದಾಗ ಅವರು ನಿದ್ರಿಸುತ್ತಿರುವುದನ್ನು ಕಂಡು, ಪೇತ್ರನಿಗೆ, “ಸೀಮೋನನೇ, ಏಕೆ ನಿದ್ರೆ ಮಾಡುತ್ತಿರುವೆ? ನೀನು ನನ್ನೊಡನೆ ಒಂದು ಗಂಟೆ ಕಾಲ ಎಚ್ಚರವಾಗಿರಲು ಸಾಧ್ಯವಾಗಲಿಲ್ಲವೇ?
37 E, voltando, achou-os dormindo. E disse a Pedro:
38 ನೀನು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸು. ಮನಸ್ಸೇನೋ ಸಿದ್ಧವಾಗಿದೆ, ಆದರೆ ದೇಹಕ್ಕೆ ಬಲ ಸಾಲದು” ಎಂದನು.
38 Vigiem e orem, para que não caiam em tentação; o espírito, na verdade, está pronto, mas a carne é fraca.
39 ಪುನಃ ಯೇಸು ದೂರ ಹೋಗಿ, ಮೊದಲಿನಂತೆಯೇ ಪ್ರಾರ್ಥಿಸಿದನು.
39 Retirando-se de novo, orou repetindo as mesmas palavras.
40 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿ ಬಂದಾಗ ಅವರು ನಿದ್ರಿಸುತ್ತಿರುವುದನ್ನು ಕಂಡನು. ಅವರ ಕಣ್ಣುಗಳು ಬಹಳ ಆಯಾಸಗೊಂಡಿದ್ದವು. ಯೇಸುವಿಗೆ ಏನು ಹೇಳಬೇಕೆಂದು ಆ ಶಿಷ್ಯರಿಗೆ ತಿಳಿಯಲಿಲ್ಲ.
40 E voltando, achou-os outra vez dormindo, porque os olhos deles estavam pesados; e não sabiam o que lhe responder.
41 ಯೇಸು ಮೂರನೆಯ ಸಾರಿ ಪ್ರಾರ್ಥಿಸಿದ ಮೇಲೆ, ತನ್ನ ಶಿಷ್ಯರ ಬಳಿಗೆ ಹಿಂತಿರುಗಿ, “ನೀವು ಇನ್ನೂ ನಿದ್ರಿಸುತ್ತಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೀರಾ? ಪಾಪಿಗಳ ಕೈಗೆ ಮನುಷ್ಯಕುಮಾರನನ್ನು ಒಪ್ಪಿಸುವ ಸಮಯ ಬಂದಿದೆ.
41 E, quando voltou pela terceira vez, Jesus lhes disse:
42 ಮೇಲೇಳಿ! ನಾವು ಹೋಗಬೇಕು. ನನ್ನನ್ನು ಆ ಜನರಿಗೆ ಹಿಡಿದುಕೊಡುವವನು ಇಲ್ಲಿಗೆ ಬರುತ್ತಿದ್ದಾನೆ” ಎಂದನು.
42 Levantem-se, vamos embora! Eis que o traidor se aproxima.
43 ಯೇಸು ಇನ್ನೂ ಮಾತಾಡುತ್ತಿರುವಾಗ, ಯೂದನು ಅಲ್ಲಿಗೆ ಬಂದನು. ಹನ್ನೆರಡು ಜನ ಅಪೊಸ್ತಲರಲ್ಲಿ ಯೂದನು ಒಬ್ಬನಾಗಿದ್ದನು. ಯೂದನೊಡನೆ ಕತ್ತಿ ಮತ್ತು ದೊಣ್ಣೆಗಳಿಂದ ಸುಸಜ್ಜಿತರಾಗಿದ್ದ ಅನೇಕ ಜನರಿದ್ದರು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಹಿರಿಯ ಯೆಹೂದ್ಯ ನಾಯಕರುಗಳು ಈ ಜನರನ್ನು ಕಳುಹಿಸಿದ್ದರು.
43 E logo, enquanto Jesus ainda falava, chegou Judas, um dos doze, e, com ele, uma multidão com espadas e porretes, vinda da parte dos principais sacerdotes, escribas e anciãos.
44 ಯೇಸು ಯಾರೆಂಬುದನ್ನು ಜನರಿಗೆ ತೋರಿಸಲು ಯೂದನು ಒಂದು ಉಪಾಯ ಮಾಡಿದನು. ಯೂದನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಯೇಸು. ಅವನನ್ನು ಸೆರೆಹಿಡಿದು ಎಚ್ಚರಿಕೆಯಿಂದ ಕಾಯುತ್ತಾ ಕರೆದುಕೊಂಡು ಹೋಗಿರಿ!” ಎಂದು ಹೇಳಿಕೊಟ್ಟಿದ್ದನು.
44 Ora, o traidor tinha dado a eles um sinal: “Aquele que eu beijar, é esse; prendam e levem-no com segurança.”
45 ಆದ್ದರಿಂದ ಯೂದನು ಯೇಸುವಿನ ಬಳಿಗೆ ಹೋಗಿ, “ಗುರುವೇ!” ಎಂದು ಹೇಳಿ ಯೇಸುವಿಗೆ ಮುದ್ದಿಟ್ಟನು.
45 E logo que chegou, aproximando-se de Jesus, Judas disse: — Mestre! E o beijou.
46 ಆಗ ಆ ಜನರು ಯೇಸುವನ್ನು ಬಂಧಿಸಿದರು.
46 Então eles agarraram Jesus e o prenderam.
47 ಯೇಸುವಿನ ಹತ್ತಿರ ನಿಂತಿದ್ದ ಶಿಷ್ಯರಲ್ಲಿ ಒಬ್ಬನು ತನ್ನ ಕತ್ತಿಯನ್ನು ಹೊರಗೆಳೆದು ಪ್ರಧಾನಯಾಜಕನ ಸೇವಕನಿಗೆ ಹೊಡೆದು, ಅವನ ಕಿವಿಯನ್ನು ಕತ್ತರಿಸಿ ಹಾಕಿದನು.
47 Nisto, um dos que estavam ali, sacando da espada, feriu o servo do sumo sacerdote e cortou-lhe a orelha.
48 ಆಗ ಯೇಸು, “ಒಬ್ಬ ಅಪರಾಧಿಯನ್ನು ಬಂಧಿಸುವಂತೆ ನೀವು ಕತ್ತಿಗಳನ್ನು ಮತ್ತು ದೊಣ್ಣೆಗಳನ್ನು ತೆಗೆದುಕೊಂಡು ಬರಬೇಕಿತ್ತೇ?
48 Jesus lhes disse:
49 ಪ್ರತಿದಿನ ದೇವಾಲಯದಲ್ಲಿ ನಾನು ಉಪದೇಶಿಸುತ್ತಾ ನಿಮ್ಮೊಡನೆ ಇದ್ದೆನು. ಅಲ್ಲಿ ನೀವು ನನ್ನನ್ನು ಬಂಧಿಸಲಿಲ್ಲ. ಆದರೆ ಈ ಎಲ್ಲಾ ಸಂಗತಿಗಳು ಪವಿತ್ರಗ್ರಂಥದಲ್ಲಿ ಬರೆದಿರುವಂತೆ ನಡೆದಿವೆ” ಎಂದನು.
49 Todos os dias eu estava com vocês no templo, ensinando, e vocês não me prenderam; mas isto é para que se cumprissem as Escrituras.
50 ಆಗ ಯೇಸುವಿನ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.
50 Então todos o deixaram e fugiram.
51 ಯೇಸುವಿನ ಶಿಷ್ಯನಾಗಿದ್ದ ಒಬ್ಬ ಯುವಕನು ಅಲ್ಲಿದ್ದನು. ಅವನು ನಾರುಬಟ್ಟೆಯನ್ನು ಧರಿಸಿದ್ದನು. ಜನರು ಅವನನ್ನು ಸಹ ಹಿಡಿದುಕೊಂಡರು.
51 Um jovem, coberto unicamente com um lençol, seguia Jesus. Eles o agarraram,
52 ಅವನು ತಾನು ಧರಿಸಿಕೊಂಡಿದ್ದ ನಾರುಬಟ್ಟೆಯನ್ನು ಅಲ್ಲಿಯೇ ಬಿಟ್ಟು ಬರೀಮೈಯಲ್ಲಿ ಓಡಿಹೋದನು.
52 mas ele largou o lençol e fugiu nu.
53 ಯೇಸುವನ್ನು ಬಂಧಿಸಿದ್ದ ಜನರು ಪ್ರಧಾನಯಾಜಕನ ಮನೆಗೆ ಆತನನ್ನು ಕರೆದುಕೊಂಡು ಹೋದರು. ಎಲ್ಲಾ ಮಹಾಯಾಜಕರುಗಳು, ಹಿರಿಯ ಯೆಹೂದ್ಯನಾಯಕರುಗಳು, ಹಾಗೂ ಧರ್ಮೋಪದೇಶಕರು ಅಲ್ಲಿ ಸೇರಿದ್ದರು.
53 E levaram Jesus ao sumo sacerdote, e então se reuniram todos os principais sacerdotes, os anciãos e os escribas.
54 ಪೇತ್ರನು ಯೇಸುವನ್ನು ದೂರದಲ್ಲಿ ಹಿಂಬಾಲಿಸುತ್ತಾ ಪ್ರಧಾನಯಾಜಕನ ಮನೆಯ ಅಂಗಳದೊಳಕ್ಕೆ ಹೋಗಿ, ಕಾವಲುಗಾರರೊಡನೆ ಕುಳಿತುಕೊಂಡು ಬೆಂಕಿಯಿಂದ ಚಳಿಕಾಯಿಸಿಕೊಳ್ಳತೊಡಗಿದನು.
54 Pedro seguiu Jesus de longe até o interior do pátio do sumo sacerdote e estava assentado entre os servos, aquentando-se ao fogo.
55 ಮಹಾಯಾಜಕರು ಹಾಗೂ ಹಿರಿಯ ಸಭೆಯವರೆಲ್ಲರು ಆತನನ್ನು ಕೊಲ್ಲಲು ಬೇಕಾದ ಒಂದು ತಪ್ಪನ್ನು ಆತನಲ್ಲಿ ಕಂಡುಹಿಡಿಯುವುದಕ್ಕೆ ಪ್ರಯತ್ನಿಸಿದರು. ಆದರೆ ಯೇಸುವನ್ನು ಕೊಲ್ಲಲು ಸರಿಯಾದ ಯಾವುದೇ ಆಧಾರವನ್ನು ಕಂಡುಹಿಡಿಯಲು ಸಮಿತಿಗೆ ಸಾಧ್ಯವಾಗಲಿಲ್ಲ.
55 E os principais sacerdotes e todo o Sinédrio procuravam algum testemunho contra Jesus para o condenar à morte, mas não achavam nada.
56 ಅನೇಕ ಜನರು ಬಂದು, ಯೇಸುವಿನ ವಿರುದ್ಧ ಸುಳ್ಳು ಸಂಗತಿಗಳನ್ನು ಹೇಳಿದರು. ಆದರೆ ಅವರೆಲ್ಲರು ಒಂದಕ್ಕೊಂದು ಹೊಂದಾಣಿಕೆಯಾಗದಂತಹ ಬೇರೆಬೇರೆ ಸಂಗತಿಗಳನ್ನು ಹೇಳಿದರು.
56 Pois muitos testemunhavam falsamente contra Jesus, mas os depoimentos não eram coerentes.
57 ನಂತರ ಕೆಲವು ಜನರು ನಿಂತುಕೊಂಡು, ಯೇಸುವಿನ ವಿರುದ್ಧ ಕೆಲವು ಅಪವಾದಗಳನ್ನು ಹೊರಿಸುತ್ತಾ,
57 E, levantando-se alguns, testemunhavam falsamente, dizendo:
58 “ಈ ಮನುಷ್ಯನು, ‘ಕೈಯಿಂದ ಕಟ್ಟಿದ ಈ ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕೈಯಿಂದ ಕಟ್ಟಿಲ್ಲದ ಇನ್ನೊಂದು ದೇವಾಲಯವನ್ನು ಕಟ್ಟುತ್ತೇನೆ’ ಎಂದು ಹೇಳಿದ್ದನ್ನು ನಾವು ಕೇಳಿದೆವು” ಎಂದರು.
58 — Nós o ouvimos declarar: “Eu destruirei este santuário edificado por mãos humanas e, em três dias, construirei outro, não por mãos humanas.”
59 ಆದರೂ ಜನರು ಹೇಳಿದ ಈ ಸಂಗತಿಗಳು ಹೊಂದಿಕೆಯಾಗಲಿಲ್ಲ.
59 Nem assim o testemunho deles era coerente.
60 ಆಗ ಪ್ರಧಾನಯಾಜಕನು ಎಲ್ಲಾ ಜನರೆದುರಿಗೆ ಎದ್ದುನಿಂತು, ಯೇಸುವಿಗೆ, “ಈ ಜನರು ನಿನಗೆ ವಿರುದ್ಧವಾಗಿ ಹೊರಿಸುತ್ತಿರುವ ಈ ಆರೋಪಗಳ ಬಗ್ಗೆ ನೀನು ಏನಾದರೂ ಹೇಳಬೇಕೆಂದಿರುವೆಯೋ? ಜನರು ಹೇಳುತ್ತಿರುವುದು ನಿಜವೇ?” ಎಂದು ಕೇಳಿದನು.
60 E, levantando-se o sumo sacerdote, no meio, perguntou a Jesus: — Você não diz nada em resposta ao que estes depõem contra você?
61 ಆದರೆ ಯೇಸು ಮೌನವಾಗಿದ್ದನು. ಯಾವ ಉತ್ತರವನ್ನೂ ಕೊಡಲಿಲ್ಲ.
61 Jesus, porém, guardou silêncio e nada respondeu. O sumo sacerdote tornou a interrogá-lo: — Você é o Cristo, o Filho do Deus Bendito?
62 ಯೇಸು, “ಹೌದು, ನಾನೇ ದೇವರ ಮಗನು. ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ಕುಳಿತಿರುವುದನ್ನೂ ಆಕಾಶದ ಮೇಘಗಳ ಮೇಲೆ ಬರುವುದನ್ನೂ ನೀನು ಕಾಣುವೆ” ಎಂದು ಉತ್ತರಿಸಿದನು.
62 Jesus respondeu:
63 ಪ್ರಧಾನಯಾಜಕನು ಬಹಳ ಕೋಪದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು, “ನಮಗೆ ಇನ್ನೂ ಹೆಚ್ಚಿನ ಸಾಕ್ಷಿಗಳ ಅವಶ್ಯಕತೆಯಿಲ್ಲ.
63 O sumo sacerdote, rasgando as suas vestes, disse: — Por que ainda precisamos de testemunhas?
64 ಇವನು ದೇವರ ವಿರುದ್ಧವಾಗಿ ಹೇಳಿದ ಮಾತನ್ನು ನೀವೆಲ್ಲರೂ ಕೇಳಿದ್ದೀರಿ. ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದನು.
64 Vocês ouviram a blasfêmia. Qual é o parecer de vocês? E todos o julgaram réu de morte.
65 ಅಲ್ಲಿದ್ದ ಕೆಲವು ಜನರು ಯೇಸುವಿಗೆ ಉಗುಳಿ, ಆತನ ಮುಖವನ್ನು ಮುಚ್ಚಿ, ಮುಷ್ಠಿಯಿಂದ ಗುದ್ದಿ, “ನಮಗೆ ಪ್ರವಾದನೆ ಹೇಳು” ಎಂದರು. ನಂತರ ಕಾವಲುಗಾರರು ಯೇಸುವನ್ನು ದೂರ ಕರೆದುಕೊಂಡು ಹೋಗಿ, ಆತನನ್ನು ಹೊಡೆದರು.
65 Alguns começaram a cuspir nele, a cobrir-lhe o rosto, a bater nele e a dizer-lhe: — Profetize! E os guardas davam-lhe bofetadas.
66 ಆ ಸಮಯದಲ್ಲಿ ಪೇತ್ರನು ಇನ್ನೂ ಅಂಗಳದಲ್ಲಿದ್ದನು. ಪ್ರಧಾನಯಾಜಕನ ದಾಸಿಯಾಗಿದ್ದ ಹುಡುಗಿಯೊಬ್ಬಳು ಪೇತ್ರನ ಬಳಿಗೆ ಬಂದಳು.
66 Estando Pedro embaixo no pátio, veio uma das empregadas do sumo sacerdote
67 ಪೇತ್ರನು ಬೆಂಕಿಯ ಹತ್ತಿರ ಚಳಿ ಕಾಯಿಸಿಕೊಳ್ಳುತ್ತಿರುವುದನ್ನು ಅವಳು ಕಂಡು, ಪೇತ್ರನನ್ನು ಹತ್ತಿರದಿಂದ ದಿಟ್ಟಿಸಿ ನೋಡಿ, “ನೀನು ನಜರೇತಿನವನಾದ ಯೇಸುವಿನ ಜೊತೆ ಇದ್ದವನಲ್ಲವೇ?” ಎಂದಳು.
67 e, vendo Pedro, que se aquecia, fixou os olhos nele e disse: — Você também estava com Jesus, o Nazareno.
68 ಆದರೆ ಪೇತ್ರನು ಆಕೆಯ ಮಾತನ್ನು ನಿರಾಕರಿಸಿ, “ನೀನು ಏನು ಹೇಳುತ್ತಿರುವೆಯೋ ನನಗೆ ತಿಳಿಯದು” ಎಂದು ಹೇಳಿ ಎದ್ದು, ಅಂಗಳದ ಪ್ರವೇಶದ್ವಾರದ ಬಳಿಗೆ ಹೋದನು.
68 Mas ele negou, dizendo: — Não o conheço, nem compreendo o que você está falando. E saiu para o pórtico. E o galo cantou.
69 ಪೇತ್ರನು ಅಲ್ಲಿರುವುದನ್ನು ಆ ದಾಸಿಯು ನೋಡಿ, ಅಲ್ಲಿ ನಿಂತಿದ್ದ ಜನರಿಗೆ, “ಈ ಮನುಷ್ಯನು ಯೇಸುವನ್ನು ಹಿಂಬಾಲಿಸಿದ ಜನರಲ್ಲಿ ಒಬ್ಬನು” ಎಂದು ಹೇಳಿದಳು.
69 E a empregada, vendo-o, tornou a dizer aos que estavam ali: — Este é um deles.
70 ಪುನಃ ಪೇತ್ರನು ಆಕೆಯ ಮಾತನ್ನು ನಿರಾಕರಿಸಿದನು.
70 Mas ele negou outra vez. E, pouco depois, os que estavam ali disseram outra vez a Pedro: — Com certeza você é um deles, porque também é galileu.
71 ಆಗ ಪೇತ್ರನು ತನಗೆ ಶಾಪ ಹಾಕಿಕೊಳ್ಳುತ್ತಾ “ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ, ನೀವು ಹೇಳುತ್ತಿರುವ ಈ ಮನುಷ್ಯನನ್ನು ನಾನು ತಿಳಿದಿಲ್ಲ!” ಎಂದು ಬಲವಾಗಿ ಹೇಳಿದನು.
71 Ele, porém, começou a praguejar e a jurar: — Não conheço esse homem de quem vocês estão falando!
72 ಪೇತ್ರನು ಇದನ್ನು ಹೇಳಿದ ಮೇಲೆ ಕೋಳಿ ಎರಡನೇ ಸಾರಿ ಕೂಗಿತು. “ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮುಂಚೆ, ನೀನು ನನ್ನನ್ನು ತಿಳಿದಿಲ್ಲವೆಂದು ಮೂರು ಸಾರಿ ಹೇಳುವೆ” ಎಂದು ಯೇಸು ತನಗೆ ಹೇಳಿದ್ದನ್ನು ಪೇತ್ರನು ಜ್ಞಾಪಿಸಿಕೊಂಡು ಬಹಳ ದುಃಖದಿಂದ ಗೋಳಾಡಿದನು.
72 E no mesmo instante o galo cantou pela segunda vez. Então Pedro se lembrou da palavra que Jesus lhe tinha dito: “Antes que o galo cante duas vezes, você me negará três vezes.” E, caindo em si, começou a chorar.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Marcos 14, comparar traduções ou montar um estudo — tudo direto pelo WhatsApp.