Levítico 25
ಪವಿತ್ರ ಬೈಬಲ್, ಈಸಿ ಓದುವಿಕೆ ಆವೃತ್ತಿ (KAN2010) vs ARC
1 ಯೆಹೋವನು ಮೋಶೆಯೊಡನೆ ಸೀನಾಯಿ ಬೆಟ್ಟದಲ್ಲಿ ಮಾತಾಡಿದನು. ಯೆಹೋವನು ಹೇಳಿದ್ದೇನೆಂದರೆ:
1 Falou mais o Senhor a Moisés no monte Sinai, dizendo:
2 “ಇಸ್ರೇಲರಿಗೆ ಹೀಗೆ ಹೇಳು: ನಾನು ನಿಮಗೆ ಕೊಡುತ್ತಿರುವ ದೇಶಕ್ಕೆ ನೀವು ಪ್ರವೇಶಿಸುವಿರಿ. ಆ ಸಮಯದಲ್ಲಿ ನೀವು ಭೂಮಿಗೆ ವಿಶ್ರಾಂತಿಯ ಸಮಯವಿರುವುದಕ್ಕೆ ಬಿಡಬೇಕು. ಇದು ಯೆಹೋವನನ್ನು ಸನ್ಮಾನಿಸುವುದಕ್ಕಾಗಿರುವ ವಿಶೇಷವಾದ ವಿಶ್ರಾಂತಿಯ ಸಮಯವಾಗಿರುವುದು.
2 Fala aos filhos de Israel e dize-lhes: Quando tiverdes entrado na terra, que eu vos dou, então, a terra guardará um sábado ao Senhor .
3 ನೀವು ಆರು ವರ್ಷಗಳು ನಿಮ್ಮ ಹೊಲದಲ್ಲಿ ಬೀಜಬಿತ್ತುವಿರಿ. ಆರು ವರ್ಷಗಳು ನಿಮ್ಮ ದ್ರಾಕ್ಷಿತೋಟಗಳಲ್ಲಿ ಕೆಲಸಮಾಡುವಿರಿ. ಅದರ ಫಲಗಳನ್ನು ಒಟ್ಟುಗೂಡಿಸುವಿರಿ.
3 Seis anos semearás a tua terra, e seis anos podarás a tua vinha, e colherás a sua novidade.
4 ಆದರೆ ಏಳನೆಯ ವರ್ಷದಲ್ಲಿ ನೀವು ಭೂಮಿಗೆ ವಿಶ್ರಾಂತಿ ಕೊಡುವಿರಿ. ಇದು ಯೆಹೋವನನ್ನು ಸನ್ಮಾನಿಸಲು ನೇಮಕವಾದ ವಿಶ್ರಾಂತಿಯ ವಿಶೇಷ ಸಮಯವಾಗಿರುವುದು. ನೀವು ನಿಮ್ಮ ಹೊಲಗಳಲ್ಲಿ ಬೀಜವನ್ನು ಬಿತ್ತಬಾರದು, ದ್ರಾಕ್ಷಿತೋಟದ ಕೆಲಸವನ್ನು ಮಾಡಬಾರದು.
4 Porém, ao sétimo ano, haverá sábado de descanso para a terra, um sábado ao Senhor ; não semearás o teu campo, nem podarás a tua vinha.
5 ಕೊಯ್ಲಿನ ನಂತರ ತನ್ನಷ್ಟಕ್ಕೆ ತಾನೇ ಬೆಳೆದ ಪೈರನ್ನೂ ಕೊಯ್ಯಬಾರದು. ನೀವು ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಲ್ಲಿ ಬಂದ ದ್ರಾಕ್ಷಿಯನ್ನು ಸಂಗ್ರಹಿಸಬಾರದು. ಭೂಮಿಗೆ ಒಂದು ವರ್ಷದ ವಿಶ್ರಾಂತಿಯಿರುವುದು.
5 O que nascer de si mesmo da tua sega não segarás e as uvas da tua vide não tratada não vindimarás; ano de descanso será para a terra.
6 “ಸಬ್ಬತ್ ವರ್ಷದಲ್ಲಿ ಭೂಮಿಯು ತಾನಾಗಿ ಫಲಿಸುವ ಬೆಳೆಯಿಂದ ನಿಮಗೆ ಸಾಕಷ್ಟು ಆಹಾರವಿರುವುದು. ನಿಮ್ಮ ದಾಸದಾಸಿಯರಿಗೂ ಸಾಕಷ್ಟು ಆಹಾರವಿರುವುದು. ನಿಮ್ಮ ದೇಶದಲ್ಲಿ ವಾಸವಾಗಿರುವ ಕೂಲಿಯಾಳುಗಳಿಗೂ ಪರದೇಶಸ್ಥರಿಗೂ ಸಾಕಷ್ಟು ಆಹಾರವಿರುವುದು.
6 Mas a novidade do sábado da terra vos será por alimento, a ti, e ao teu servo, e à tua serva, e ao teu jornaleiro, e ao estrangeiro que peregrina contigo;
7 ನಿಮ್ಮ ದನಗಳಿಗೂ ಇತರ ಪ್ರಾಣಿಗಳಿಗೂ ತಿನ್ನುವುದಕ್ಕೆ ಸಾಕಷ್ಟು ಆಹಾರವಿರುವುದು.
7 e ao teu gado, e aos teus animais que estão na tua terra, toda a sua novidade será por mantimento.
8 “ಅದಲ್ಲದೆ, ಏಳು ವರ್ಷಗಳ ಏಳು ಗುಂಪುಗಳನ್ನು ಲೆಕ್ಕಿಸಬೇಕು. ಈ ಏಳು ಗುಂಪುಗಳು ಸೇರಿ ನಲವತ್ತೊಂಭತ್ತು ವರ್ಷಗಳಾಗಿರುವವು. ಆ ಸಮಯದಲ್ಲಿ ಭೂಮಿಗೆ ಏಳು ವರ್ಷಗಳ ವಿಶ್ರಾಂತಿಯಿರುವುದು.
8 Também contarás sete semanas de anos, sete vezes sete anos, de maneira que os dias das sete semanas de anos te serão quarenta e nove anos.
9 ದೋಷಪರಿಹಾರಕ ದಿನದಲ್ಲಿ ಅಂದರೆ ಐವತ್ತನೆಯ ವರ್ಷದ ಏಳನೆಯ ತಿಂಗಳ ಹತ್ತನೆಯ ದಿನದಲ್ಲಿ ದೇಶದಲ್ಲೆಲ್ಲಾ ಕೊಂಬನ್ನೂದಿಸಬೇಕು.
9 Então, no mês sétimo, aos dez do mês, farás passar a trombeta do jubileu; no Dia da Expiação, fareis passar a trombeta por toda a vossa terra.
10 ಐವತ್ತನೆಯ ವರ್ಷವನ್ನು ನೀವು ವಿಶೇಷ ವರ್ಷವನ್ನಾಗಿ ಮಾಡಬೇಕು. ನಿಮ್ಮ ದೇಶದಲ್ಲಿ ವಾಸಿಸುವ ಜನರೆಲ್ಲರಿಗೆ ನೀವು ಸ್ವಾತಂತ್ರ್ಯವನ್ನು ಘೋಷಿಸಬೇಕು. ಈ ಸಮಯವು ‘ಜ್ಯೂಬಿಲಿ’ ಎಂಬುದಾಗಿ ಕರೆಯಲ್ಪಡುವುದು. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಸ್ವಾಸ್ತ್ಯಕ್ಕೆ ಹಿಂತಿರುಗಿ ಹೋಗುವನು; ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಕುಟುಂಬಕ್ಕೆ ಹಿಂತಿರುಗುವನು.
10 E santificareis o ano quinquagésimo e apregoareis liberdade na terra a todos os seus moradores; Ano de Jubileu vos será, e tornareis, cada um à sua possessão, e tornareis, cada um à sua família.
11 ಐವತ್ತನೆಯ ವರ್ಷವು ನಿಮಗೆ ವಿಶೇಷವಾದ ಆಚರಣೆಯಾಗಿರುವುದು. ಬೀಜವನ್ನು ಬಿತ್ತಬೇಡಿರಿ. ತನ್ನಷ್ಟಕ್ಕೆ ತಾನೇ ಬೆಳೆದ ಪೈರುಗಳನ್ನು ಕೊಯ್ಯಬೇಡಿರಿ. ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಿಂದ ದ್ರಾಕ್ಷಿಯನ್ನು ಸಂಗ್ರಹಿಸಬೇಡಿರಿ.
11 O ano quinquagésimo vos será jubileu; não semeareis, nem segareis o que nele nascer de si mesmo, nem nele vindimareis as uvas das vides não tratadas.
12 ಆ ವರ್ಷ ಜ್ಯೂಬಿಲಿಯಾಗಿದೆ. ಅದು ನಿಮಗೆ ಪವಿತ್ರ ಸಮಯವಾಗಿರುವುದು. ಹೊಲದಿಂದ ದೊರಕುವ ಪೈರುಗಳು ನಿಮಗೆ ಆಹಾರವಾಗಿರುವುದು.
12 Porque jubileu é, santo será para vós; a novidade do campo comereis.
13 ಜ್ಯೂಬಿಲಿ ವರ್ಷದಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಸ್ವಾಸ್ತ್ಯಕ್ಕೆ ಹೋಗುವನು.
13 Neste Ano de Jubileu, tornareis cada um à sua possessão.
14 “ಭೂಮಿಯನ್ನು ನೆರೆಯವನಿಗೆ ಮಾರುವಾಗ ಅಥವಾ ಅವನಿಂದ ಭೂಮಿಯನ್ನು ಕೊಂಡುಕೊಳ್ಳುವಾಗ ಮೋಸ ಮಾಡಬೇಡಿ.
14 E, quando venderdes alguma coisa ao vosso próximo ou a comprardes da mão do vosso próximo, ninguém oprima a seu irmão.
15 ನಿಮ್ಮ ನೆರೆಯವನ ಭೂಮಿಯನ್ನು ಕೊಂಡುಕೊಳ್ಳಲು ನೀವು ಬಯಸುವುದಾದರೆ, ಆಗ ಕಳೆದ ಜ್ಯೂಬಿಲಿ ವರ್ಷದಿಂದ ಈಗ ಎಷ್ಟು ವರ್ಷವಾಯಿತೆಂದು ಲೆಕ್ಕಿಸಿ ಸರಿಯಾದ ಬೆಲೆಯನ್ನು ನಿರ್ಣಯಿಸಿರಿ. ನೀವು ಭೂಮಿಯನ್ನು ಮಾರುವುದಾದರೆ, ಪೈರುಗಳನ್ನು ಕೊಯ್ಯುವುದಕ್ಕಿರುವ ವರ್ಷಗಳನ್ನು ಲೆಕ್ಕಿಸಿ ಸರಿಯಾದ ಬೆಲೆಯನ್ನು ನಿರ್ಣಯಿಸಿರಿ.
15 Conforme o número dos anos desde o jubileu, comprarás ao teu próximo; e, conforme o número dos anos das novidades, ele venderá a ti.
16 ಇನ್ನೂ ಅನೇಕ ವರ್ಷಗಳು ಇದ್ದರೆ, ಬೆಲೆ ಹೆಚ್ಚಾಗಿರುವುದು. ವರ್ಷಗಳು ಕಡಿಮೆಯಾಗಿದ್ದರೆ, ಬೆಲೆ ಕಡಿಮೆಯಾಗಿರುವುದು. ಯಾಕೆಂದರೆ ನಿಮ್ಮ ನೆರೆಯವನು ನಿಜವಾಗಿ ಕೇವಲ ಕೆಲವೇ ಪೈರುಗಳನ್ನು ನಿಮಗೆ ಮಾರುತ್ತಿದ್ದಾನೆ. ಮುಂದಿನ ಜ್ಯೂಬಿಲಿ ವರ್ಷದಲ್ಲಿ ಭೂಮಿಯು ತಿರುಗಿ ಅವನ ಕುಟುಂಬಕ್ಕೆ ಸೇರುವುದು.
16 Conforme a multidão dos anos, aumentarás o seu preço; e, conforme a diminuição dos anos, abaixarás o seu preço; porque, conforme o número das novidades, é que ele te vende.
17 ನೀವು ಒಬ್ಬರಿಗೊಬ್ಬರು ಮೋಸ ಮಾಡಬಾರದು. ನೀವು ದೇವರಿಗೆ ಭಯಪಡಬೇಕು! ನಾನೇ ನಿಮ್ಮ ದೇವರಾದ ಯೆಹೋವನು!
17 Ninguém, pois, oprima ao seu próximo; mas terás temor do teu Deus; porque eu sou o Senhor , vosso Deus.
18 “ನನ್ನ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಜ್ಞಾಪಕಮಾಡಿಕೊಳ್ಳಿರಿ. ಅವುಗಳಿಗೆ ವಿಧೇಯರಾಗಿರಿ. ಆಗ ನೀವು ನಿಮ್ಮ ದೇಶದಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
18 E fazei os meus estatutos, e guardai os meus juízos, e fazei-os; assim, habitareis seguros na terra.
19 ಮತ್ತು ಭೂಮಿಯು ಒಳ್ಳೆಯ ಪೈರುಗಳನ್ನು ಕೊಡುವುದು. ಆಗ ನಿಮಗೆ ಬೇಕಾದಷ್ಟು ಆಹಾರವಿರುವುದು ಮತ್ತು ನೀವು ದೇಶದಲ್ಲಿ ಸುರಕ್ಷಿತವಾಗಿ ಜೀವಿಸುವಿರಿ.
19 E a terra dará o seu fruto, e comereis a fartar e nela habitareis seguros.
20 “ಒಂದುವೇಳೆ ನೀವು, ‘ನಾವು ಬೀಜಗಳನ್ನು ಬಿತ್ತದಿದ್ದರೆ ಅಥವಾ ಪೈರುಗಳನ್ನು ಸಂಗ್ರಹಿಸದಿದ್ದರೆ ಏಳನೆಯ ವರ್ಷದಲ್ಲಿ ನಮಗೆ ತಿನ್ನಲು ಏನೂ ಇರುವುದಿಲ್ಲ’ ಎಂದು ಹೇಳಬಹುದು.
20 E se disserdes: Que comeremos no ano sétimo, visto que não havemos de semear nem colher a nossa novidade?
21 ಚಿಂತೆ ಮಾಡಬೇಡಿರಿ! ಆರನೆಯ ವರ್ಷದಲ್ಲಿ ನನ್ನ ಆಶೀರ್ವಾದವು ನಿಮ್ಮ ಮೇಲಿರುವುದು. ಆ ವರ್ಷ ಭೂಮಿಯಲ್ಲಿ ಬೆಳೆದ ಪೈರುಗಳು ಮೂರು ವರ್ಷಗಳವರೆಗೆ ಬೆಳೆಯುತ್ತಿರುವುದು.
21 Então, eu mandarei a minha bênção sobre vós no sexto ano, para que dê fruto por três anos.
22 ನೀವು ಎಂಟನೆಯ ವರ್ಷದಲ್ಲಿ ಬೀಜ ಬಿತ್ತಿದಾಗ, ನೀವು ಇನ್ನೂ ಹಳೆಯ ಬೆಳೆಯನ್ನು ತಿನ್ನುತ್ತಿರುವಿರಿ. ಒಂಭತ್ತನೆಯ ವರ್ಷದವರೆಗೆ ಅಂದರೆ ಎಂಟನೆಯ ವರ್ಷದಲ್ಲಿ ಬೀಜ ಫಸಲು ಕೊಡುವವರೆಗೆ ನೀವು ಹಳೆಯ ಬೆಳೆಯನ್ನು ತಿನ್ನುವಿರಿ.
22 E, no oitavo ano, semeareis e comereis da colheita velha até ao ano nono; até que venha a sua novidade, comereis a velha.
23 “ಭೂಮಿಯು ನನಗೆ ಸೇರಿದ್ದು. ಆದ್ದರಿಂದ ನೀವು ನಿಜವಾಗಿಯೂ ಅದನ್ನು ಶಾಶ್ವತವಾಗಿ ಮಾರುವುದಕ್ಕಾಗುವುದಿಲ್ಲ. ನೀವು ಕೇವಲ ನನ್ನ ಆಶ್ರಯದಲ್ಲಿ ವಾಸಿಸುತ್ತಿರುವ ಪರದೇಶಸ್ಥರೂ ಪ್ರವಾಸಿಗಳೂ ಆಗಿದ್ದೀರಿ.
23 Também a terra não se venderá em perpetuidade, porque a terra é minha; pois vós sois estrangeiros e peregrinos comigo.
24 ಜನರು ತಮ್ಮ ಭೂಮಿಯನ್ನು ಮಾರಿದರೆ ಅದನ್ನು ಬಿಡಿಸಿಕೊಳ್ಳುವ ಹಕ್ಕು ಅವರ ಕುಟುಂಬಕ್ಕಿದೆ.
24 Portanto, em toda a terra da vossa possessão dareis resgate à terra.
25 ನಿಮ್ಮ ದೇಶದಲ್ಲಿ ಒಬ್ಬನು ತನ್ನ ಆಸ್ತಿಯನ್ನು ಮಾರುವಷ್ಟು ಬಡವನಾದರೆ ಅವನ ಹತ್ತಿರದ ಸಂಬಂಧಿಯು ತನ್ನ ಸಂಬಂಧಿಯ ಆಸ್ತಿಯನ್ನು ಮರಳಿ ಕೊಂಡುಕೊಳ್ಳಬೇಕು.
25 Quando teu irmão empobrecer e vender alguma porção da sua possessão, então, virá o seu resgatador, seu parente, e resgatará o que vendeu seu irmão.
26 ತನ್ನ ಭೂಮಿಯನ್ನು ಮರಳಿ ಪಡೆಯಲು ಒಬ್ಬನಿಗೆ ಹತ್ತಿರದ ಸಂಬಂಧಿ ಇಲ್ಲದಿರಬಹುದು. ಆದರೆ ತನ್ನ ಭೂಮಿಯನ್ನು ತನಗಾಗಿ ಮರಳಿ ಪಡೆಯುಲು ಅವನು ಸಾಕಷ್ಟು ಹಣವನ್ನು ಪಡೆಯಬಹುದು.
26 E, se alguém não tiver resgatador, porém a sua mão alcançar e achar o que basta para o seu resgate,
27 ಆಗ ಅವನು ಭೂಮಿಯನ್ನು ಮಾರಿ ಎಷ್ಟು ವರ್ಷವಾಯಿತೆಂದು ಲೆಕ್ಕ ಮಾಡಬೇಕು. ಅವನು ಆ ಸಂಖ್ಯೆಯನ್ನು ಉಪಯೋಗಿಸಿ ಭೂಮಿಗೆ ಕೊಡತಕ್ಕ ಹಣವನ್ನು ನಿರ್ಧರಿಸಬೇಕು. ಬಳಿಕ ಅವನು ಭೂಮಿಯನ್ನು ಮರಳಿ ಕೊಂಡುಕೊಳ್ಳಬೇಕು. ಆಗ ಭೂಮಿಯು ಮತ್ತೆ ಅವನ ಸ್ವತ್ತಾಗುವುದು.
27 então, contará os anos desde a sua venda, e o que ficar restituirá ao homem a quem o vendeu, e tornará à sua possessão.
28 ಆದರೆ ಭೂಮಿಯನ್ನು ಮರಳಿ ಕೊಂಡುಕೊಳ್ಳಲು ಬೇಕಾದಷ್ಟು ಹಣ ಅವನಿಗೆ ದೊರಕದಿದ್ದರೆ, ಅವನು ಆ ಭೂಮಿಯನ್ನು ಯಾರಿಗೆ ಮಾರಿದ್ದಾನೋ ಅವನ ವಶದಲ್ಲಿ ಜ್ಯೂಬಿಲಿ ವರ್ಷದವರೆಗೆ ಇಡಬೇಕು. ಬಳಿಕ ಆ ವಿಶೇಷ ಬಿಡುಗಡೆಯ ಕಾಲದಲ್ಲಿ ಭೂಮಿಯು ಮೊದಲಿನ ಯಜಮಾನನ ಕುಟುಂಬಕ್ಕೆ ಮರಳಿ ಹೋಗುವುದು. ಹೀಗಾಗಿ ಆಸ್ತಿಯು ತಿರುಗಿ ಅದರ ಸರಿಯಾದ ಕುಟುಂಬಕ್ಕೆ ಸೇರುವುದು.
28 Mas, se a sua mão não alcançar o que basta para restituir-lha, então, a que for vendida ficará na mão do comprador até ao Ano do Jubileu; porém, no Ano do Jubileu, sairá, e ele tornará à sua possessão.
29 “ಯಾವನಾದರೂ ಪೌಳಿಗೋಡೆಯುಳ್ಳ ಪಟ್ಟಣದಲ್ಲಿರುವ ಮನೆಯನ್ನು ಮಾರಿದರೆ, ಅದನ್ನು ಮಾರಿದ ದಿನ ಮೊದಲುಗೊಂಡು ಒಂದು ವರ್ಷ ಪೂರ್ಣಗೊಳ್ಳುವವರೆಗೆ ಹಿಂದಕ್ಕೆ ಪಡೆಯುವ ಹಕ್ಕು ಅವನಿಗೆ ಇನ್ನೂ ಇರುತ್ತದೆ. ಮನೆಯನ್ನು ಬಿಡಿಸಿಕೊಳ್ಳುವ (ಮರಳಿ ಪಡೆಯುವ) ಹಕ್ಕು ಒಂದು ವರ್ಷದವರೆಗೆ ಇರುವುದು.
29 E, quando alguém vender uma casa de moradia em cidade murada, então, a pode resgatar até que se cumpra o ano da sua venda; durante um ano inteiro, será lícito o seu resgate.
30 ಆದರೆ ಮಾಲಿಕನು ಒಂದು ವರ್ಷ ಪೂರ್ಣಗೊಳ್ಳುವ ಮೊದಲು ಮನೆಯನ್ನು ಮರಳಿ ಕೊಂಡುಕೊಳ್ಳದಿದ್ದರೆ, ಆಗ ಪೌಳಿಗೋಡೆಯುಳ್ಳ ಪಟ್ಟಣದಲ್ಲಿರುವ ಮನೆಯು ಅದನ್ನು ಕೊಂಡುಕೊಂಡವನಿಗೂ ಅವನ ಸಂತತಿಯವರಿಗೂ ಸೇರುವುದು. ಮನೆಯು ಜ್ಯೂಬಿಲಿ ವರ್ಷದಲ್ಲಿ ಅದರ ಮೊದಲಿನ ಯಜಮಾನನಿಗೆ ಸೇರುವುದಿಲ್ಲ.
30 Mas, se, passando-se-lhe um ano inteiro, ainda não for resgatada, então, a casa que estiver na cidade que tem muro, em perpetuidade, ficará ao que a comprou, pelas suas gerações; não sairá no jubileu.
31 ಗೋಡೆಗಳಿಲ್ಲದ ಪಟ್ಟಣಗಳನ್ನು ಬಯಲಿನ ಹೊಲಗಳಂತೆ ಪರಿಗಣಿಸಬೇಕು. ಆದ್ದರಿಂದ ಆ ಸಣ್ಣ ಪಟ್ಟಣಗಳಲ್ಲಿ ಕಟ್ಟಿದ ಮನೆಗಳು ಜ್ಯೂಬಿಲಿ ವರ್ಷದಲ್ಲಿ ಅವುಗಳ ಮೊದಲಿನ ಯಜಮಾನನಿಗೆ ಮರುಳಿ ಹೋಗುತ್ತವೆ.
31 Mas as casas das aldeias que não têm muro em roda serão estimadas como o campo da terra; para elas haverá resgate, e sairão no jubileu.
32 “ಆದರೆ ಲೇವಿಯರ ಪಟ್ಟಣಗಳ ಕುರಿತು ಹೇಳುವುದಾದರೆ, ಲೇವಿಯರು ತಮಗೆ ಸೇರಿದ ಪಟ್ಟಣಗಳಲ್ಲಿರುವ ತಮ್ಮ ಮನೆಗಳನ್ನು ಯಾವಾಗ ಬೇಕಾದರೂ ಹಿಂದಕ್ಕೆ ಕೊಂಡುಕೊಳ್ಳಬಹುದು.
32 Mas, no tocante às cidades dos levitas, às casas das cidades da sua possessão, direito perpétuo de resgate terão os levitas.
33 ಒಬ್ಬನು ಲೇವಿಯಿಂದ ಮನೆಯನ್ನು ಕೊಂಡುಕೊಂಡರೆ, ಲೇವಿಯರ ಪಟ್ಟಣದಲ್ಲಿರುವ ಆ ಮನೆಯು ಜ್ಯೂಬಿಲಿ ಸಮಯದಲ್ಲಿ ತಿರುಗಿ ಲೇವಿಯರಿಗೆ ಸೇರುವುದು. ಯಾಕೆಂದರೆ ಲೇವಿಯರ ಪಟ್ಟಣಗಳಲ್ಲಿರುವ ಮನೆಗಳು ಲೇವಿ ಕುಟುಂಬಕ್ಕೆ ಸೇರಿದ್ದಾಗಿವೆ. ಇಸ್ರೇಲ್ ಜನರು ಆ ಪಟ್ಟಣಗಳನ್ನು ಲೇವಿಯರಿಗೆ ಕೊಟ್ಟಿದ್ದಾರೆ. ಅವು ಇಸ್ರೇಲರ ಮಧ್ಯದಲ್ಲಿರುವ ಲೇವಿಯರ ಆಸ್ತಿಯಾಗಿವೆ.
33 E, havendo feito resgate um dos levitas, então, a casa comprada e a cidade da sua possessão sairão no jubileu; porque as casas das cidades dos levitas são a sua possessão no meio dos filhos de Israel.
34 ಅಲ್ಲದೆ ಲೇವಿಯರ ಪಟ್ಟಣಗಳ ಸುತ್ತಲಿರುವ ಹೊಲಗಳನ್ನು ಮತ್ತು ಹುಲ್ಲುಗಾವಲುಗಳನ್ನು ಮಾರಬಾರದು. ಆ ಹೊಲಗಳು ಎಂದೆಂದಿಗೂ ಲೇವಿಯರಿಗೆ ಸೇರಿವೆ.
34 Mas o campo do arrabalde das suas cidades não se venderá, porque lhes é possessão perpétua.
35 “ಒಂದುವೇಳೆ ನಿಮ್ಮ ಸ್ವದೇಶದ ವ್ಯಕ್ತಿಯೊಬ್ಬನು ಬಹಳ ಬಡವನಾಗಿ ಗತಿಹೀನನಾಗಬಹುದು. ಅವನು ನಿಮ್ಮ ಮಧ್ಯದಲ್ಲಿ ಪ್ರವಾಸಿಯಂತೆ ವಾಸಿಸಲು ನೀವು ಅವಕಾಶ ಕೊಡಬೇಕು.
35 E, quando teu irmão empobrecer, e as suas forças decaírem, então, sustentá-lo-ás como estrangeiro e peregrino, para que viva contigo.
36 ಅವನಿಗೆ ನೀವು ಸಾಲ ಕೊಡುವ ಹಣದ ಮೇಲೆ ಬಡ್ಡಿಯನ್ನು ಹೊರಿಸಬಾರದು. ದೇವರನ್ನು ಗೌರವಿಸಿರಿ. ನಿಮ್ಮ ಸ್ವಂತ ದೇಶದವನು ನಿಮ್ಮ ಸಂಗಡ ವಾಸಿಸಲಿ.
36 Não tomarás dele usura nem ganho; mas do teu Deus terás temor, para que teu irmão viva contigo.
37 ನೀವು ಅವನಿಗೆ ಸಾಲಕೊಡುವ ಹಣದ ಮೇಲೆ ಬಡ್ಡಿಯನ್ನು ಹೊರಿಸಬಾರದು. ನೀವು ಅವನಿಗೆ ಮಾರುವ ಆಹಾರಪದಾರ್ಥಗಳಿಂದ ಲಾಭವನ್ನು ಗಳಿಸಲು ಪ್ರಯತ್ನಿಸಬಾರದು.
37 Não lhe darás teu dinheiro com usura, nem darás o teu manjar por interesse.
38 ನಾನೇ ನಿಮ್ಮ ದೇವರಾದ ಯೆಹೋವನು! ನಾನು ನಿಮಗೆ ಕಾನಾನ್ ದೇಶವನ್ನು ಕೊಟ್ಟು ನಿಮ್ಮ ದೇವರಾಗಿರಲು ನಿಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದೆನು.
38 Eu sou o Senhor , vosso Deus, que vos tirei da terra do Egito, para vos dar a terra de Canaã, para ser vosso Deus.
39 “ಒಂದುವೇಳೆ ನಿಮ್ಮ ಸ್ವದೇಶಸ್ಥನು ಬಹಳ ಬಡವನಾಗಿ ತನ್ನನ್ನು ಗುಲಾಮನನ್ನಾಗಿ ನಿಮಗೆ ಮಾರಿಕೊಂಡರೆ ನೀವು ಅವನನ್ನು ಗುಲಾಮನನ್ನಾಗಿ ದುಡಿಸಬಾರದು.
39 Quando também teu irmão empobrecer, estando ele contigo, e se vender a ti, não o farás servir serviço de escravo.
40 ಅವನು ಕೂಲಿಯಾಳಿನಂತೆಯೂ ಜ್ಯೂಬಿಲಿ ವರ್ಷದವರೆಗೆ ನಿಮ್ಮ ಮಧ್ಯದಲ್ಲಿ ಪ್ರವಾಸಿಯಂತೆಯೂ ಇರುವನು.
40 Como jornaleiro, como peregrino estará contigo; até ao Ano do Jubileu te servirá.
41 ಬಳಿಕ ನಿಮ್ಮನ್ನು ಬಿಟ್ಟುಹೋಗಲು ಅವನಿಗೆ ಹಕ್ಕಿದೆ. ಅವನು ತನ್ನ ಮಕ್ಕಳನ್ನು ಕರೆದುಕೊಂಡು ತನ್ನ ಕುಟುಂಬಕ್ಕೆ ಮರಳಿ ಹೋಗಬಹುದು. ಅವನು ತನ್ನ ಪೂರ್ವಿಕರ ಸ್ವತ್ತನ್ನು ಹಿಂದಕ್ಕೆ ಪಡೆಯಬಹುದು.
41 Então, sairá do teu serviço, ele e seus filhos com ele, e tornará à sua família e à possessão de seus pais tornará.
42 ಯಾಕೆಂದರೆ ಅವರು ನನ್ನ ಸೇವಕರಾಗಿದ್ದಾರೆ. ನಾನು ಅವರನ್ನು ಈಜಿಪ್ಟಿನಲ್ಲಿ ಗುಲಾಮತನದಿಂದ ಹೊರಗೆ ಬರಮಾಡಿದೆನು; ಅವರು ಮತ್ತೆ ಗುಲಾಮರಾಗಬಾರದು.
42 Porque são meus servos, que tirei da terra do Egito; não serão vendidos como se vendem os escravos.
43 ನೀವು ಈ ವ್ಯಕ್ತಿಗೆ ಕ್ರೂರ ಯಾಜಮಾನರಾಗಿರಬಾರದು. ನೀವು ನಿಮ್ಮ ದೇವರನ್ನು ಗೌರವಿಸಬೇಕು.
43 Não te assenhorearás dele com rigor, mas do teu Deus terás temor.
44 “ನಿಮ್ಮ ಸುತ್ತಲಿರುವ ಬೇರೆ ಜನಾಂಗಗಳಿಂದ ನೀವು ಸೇವಕಸೇವಕಿಯರನ್ನು ಖರೀದಿ ಮಾಡಬಹುದು.
44 E, quanto a teu escravo ou a tua escrava que tiveres, serão das gentes que estão ao redor de vós; deles comprareis escravos e escravas.
45 ಅಲ್ಲದೆ ನಿಮ್ಮ ದೇಶದಲ್ಲಿ ವಾಸಿಸುವ ಪರದೇಶಸ್ಥರಿಂದ ಮಕ್ಕಳನ್ನು ಗುಲಾಮರನ್ನಾಗಿ ಕೊಂಡುಕೊಳ್ಳಬಹುದು. ಗುಲಾಮರಾದ ಮಕ್ಕಳು ನಿಮಗೆ ಸೇರಿದವರಾಗಿದ್ದಾರೆ.
45 Também os comprareis dos filhos dos forasteiros que peregrinam entre vós, deles e das suas gerações que estiverem convosco, que tiverem gerado na vossa terra; e vos serão por possessão.
46 ಗುಲಾಮರಾದ ಈ ಪರದೇಶಸ್ಥರನ್ನು ನೀವು ಸತ್ತನಂತರ ನಿಮ್ಮ ಮಕ್ಕಳಿಗೆ ಕೊಡಬೇಕು. ಹೀಗೆ ಅವರು ನಿಮ್ಮ ಮಕ್ಕಳಿಗೆ ಸೇರಿದವರಾಗುವರು. ಅವರು ಎಂದೆಂದೂ ನಿಮ್ಮ ಗುಲಾಮರಾಗಿರುವರು. ನಿಮ್ಮ ಈ ಪರದೇಶಸ್ಥರನ್ನು ಗುಲಾಮರನ್ನಾಗಿ ಮಾಡಿಕೊಳ್ಳಬಹುದು. ಆದರೆ ನೀವು ಇಸ್ರೇಲ್ ಜನರಾದ ನಿಮ್ಮ ಸ್ವಂತ ಸಹೋದರರ ಮೇಲೆ ಕ್ರೂರವಾದ ಒಡೆಯರಾಗಿರಬಾರದು.
46 E possuí-los-eis por herança para vossos filhos depois de vós, para herdarem a possessão; perpetuamente os fareis servir, mas sobre vossos irmãos, os filhos de Israel, cada um sobre o seu irmão, não vos assenhoreareis dele com rigor.
47 “ಒಂದುವೇಳೆ ನಿಮ್ಮ ಸ್ವದೇಶದವನು ಬಡವನಾಗಿದ್ದು, ನಿಮ್ಮ ಮಧ್ಯದಲ್ಲಿ ವಾಸಿಸಲು ಬಂದ ಐಶ್ವರ್ಯವಂತನಾದ ಪರದೇಶಸ್ಥನಿಗಾಗಲಿ ಅಥವಾ ಅವನ ಕುಟುಂಬದ ಸದಸ್ಯನಿಗಾಗಲಿ ತನ್ನನ್ನು ಮಾರಿಕೊಂಡಿದ್ದರೂ ಅವನಿಗೆ ತನ್ನನ್ನು ಬಿಡಿಸಿಕೊಳ್ಳುವ ಹಕ್ಕಿದೆ.
47 E, quando a mão do estrangeiro e peregrino que está contigo alcançar riqueza, e teu irmão, que está com ele, empobrecer e se vender ao estrangeiro ou peregrino que está contigo, ou à raça da linhagem do estrangeiro,
48 ಅವನ ಸಂಬಂಧಿಕರಲ್ಲಿ ಯಾರಾದರೂ ಅವನನ್ನು ಮರಳಿ ಕೊಂಡುಕೊಳ್ಳಬಹುದು.
48 depois que se houver vendido, haverá resgate para ele; um de seus irmãos o resgatará:
49 ಅವನ ದೊಡ್ಡಪ್ಪನಾಗಲಿ ಚಿಕ್ಕಪ್ಪನಾಗಲಿ ಅವರ ಮಕ್ಕಳಾಗಲಿ ಅವನನ್ನು ಮರಳಿ ಕೊಂಡುಕೊಳ್ಳಬಹುದು. ಅವನ ಹತ್ತಿರದ ಸಂಬಂಧಿಯು ಅವನನ್ನು ಕೊಂಡುಕೊಳ್ಳಬಹುದು. ಅವನಿಗೆ ಸಾಕಷ್ಟು ಹಣ ದೊರಕಿದರೆ, ಅವನು ತಾನೇ ಹಣ ಕೊಟ್ಟು ಮತ್ತೆ ಸ್ವತಂತ್ರನಾಗಬಹುದು.
49 ou seu tio ou o filho de seu tio o resgatará; ou um dos seus parentes, da sua família, o resgatará; ou, se a sua mão alcançar riqueza, se resgatará a si mesmo.
50 “ನೀವು ಬೆಲೆಯನ್ನು ತೀರ್ಮಾನಿಸುವುದು ಹೇಗೆಂದರೆ: ಅವನು ತನ್ನನ್ನು ಪರದೇಶಸ್ಥನಿಗೆ ಮಾರಿಕೊಂಡ ದಿನದಿಂದ ಹಿಡಿದು ಮುಂದಿನ ಜ್ಯೂಬಿಲಿ ವರ್ಷದವರೆಗೆ ವರ್ಷಗಳನ್ನು ಲೆಕ್ಕಿಸಿ ಬೆಲೆಯನ್ನು ತೀರ್ಮಾನಿಸಿರಿ. ಯಾಕೆಂದರೆ ಅವನು ತನ್ನನ್ನು ಕೇವಲ ಕೆಲವು ವರ್ಷಗಳವರೆಗೆ ಕೂಲಿಗೆ ಒಪ್ಪಿಸಿದ್ದಾನೆ.
50 E contará com aquele que o comprou, desde o ano que se vendeu a ele até ao Ano do Jubileu; e o dinheiro da sua venda será conforme o número dos anos, conforme os dias de um jornaleiro estará com ele.
51 ಜ್ಯೂಬಿಲಿ ವರ್ಷಕ್ಕೆ ಇನ್ನೂ ಹೆಚ್ಚು ವರ್ಷಗಳು ಇರುವುದಾದರೆ, ಅವನು ಬಹಳ ಹೆಚ್ಚು ಹಣವನ್ನು ಕೊಡಬೇಕಾಗುತ್ತದೆ.
51 Se ainda muitos anos faltarem, proporcionalmente a eles restituirá, do dinheiro pelo qual foi vendido, o seu resgate.
52 ಜ್ಯೂಬಿಲಿ ವರ್ಷಕ್ಕೆ ಕೇವಲ ಸ್ವಲ್ಪ ವರ್ಷಗಳು ಉಳಿದಿದ್ದರೆ, ಸ್ವಲ್ಪ ಹಣವನ್ನು ಕೊಡಬೇಕಾಗುತ್ತದೆ.
52 E, se ainda restarem poucos anos até ao Ano do Jubileu, então, fará contas com ele; segundo os seus anos, restituirá o seu resgate.
53 ಆದರೆ ಅವನು ಪರದೇಶಸ್ಥನೊಡನೆ ಪ್ರತಿ ವರ್ಷ ಕೂಲಿಯಾಳಾಗಿ ವಾಸಿಸುವನು. ಪರದೇಶಸ್ಥನು ಆ ವ್ಯಕ್ತಿಯ ಮೇಲೆ ಕ್ರೂರ ಯಜಮಾನನಾಗಿ ಇರುವುದಕ್ಕೆ ಬಿಡಬೇಡಿರಿ.
53 Como jornaleiro, de ano em ano, estará com ele; não se assenhoreará sobre ele com rigor diante dos teus olhos.
54 “ಯಾರೂ ಅವನನ್ನು ಬಿಡಿಸದಿದ್ದರೂ ಜ್ಯೂಬಿಲಿ ವರ್ಷದಲ್ಲಿ ಅವನು ಮತ್ತು ಅವನ ಮಕ್ಕಳು ಬಿಡುಗಡೆ ಹೊಂದುವರು.
54 E, se desta sorte se não resgatar, sairá no Ano do Jubileu, ele e seus filhos com ele.
55 ಯಾಕೆಂದರೆ, ಇಸ್ರೇಲರು ನನ್ನ ಸೇವಕರಾಗಿದ್ದಾರೆ. ನಾನು ಅವರನ್ನು ಈಜಿಪ್ಟಿನಲ್ಲಿ ದಾಸತ್ವದಿಂದ ಬಿಡಿಸಿದ್ದರಿಂದ ಅವರು ನನ್ನ ದಾಸರಾಗಿದ್ದಾರೆ. ನಾನೇ ನಿಮ್ಮ ದೇವರಾದ ಯೆಹೋವನು!
55 Porque os filhos de Israel me são servos; meus servos são eles, que tirei da terra do Egito. Eu sou o Senhor , vosso Deus.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Levítico 25, comparar traduções ou montar um estudo — tudo direto pelo WhatsApp.