Levítico 24

ಪವಿತ್ರ ಬೈಬಲ್, ಈಸಿ ಓದುವಿಕೆ ಆವೃತ್ತಿ (KAN2010) vs ARIB

Sair da comparação
ARIB Almeida Revisada Imprensa Bíblica
1 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
1 Disse mais o Senhor a Moisés:
2 “ಎಣ್ಣೆ ಮರದ ಕಾಯಿಗಳನ್ನು ಕುಟ್ಟಿ ತೆಗೆದ ಶುದ್ಧವಾದ ಎಣ್ಣೆಯನ್ನು ಇಸ್ರೇಲರು ನಿನ್ನ ಬಳಿಗೆ ತರಬೇಕೆಂದು ಆಜ್ಞಾಪಿಸು. ದೇವದರ್ಶನಗುಡಾರದಲ್ಲಿರುವ ದೀಪಗಳನ್ನು ಉರಿಸಲು ಆ ಎಣ್ಣೆ ಬೇಕಾಗಿರುತ್ತದೆ. ಆ ದೀಪಗಳು ಆರಿಹೋಗದೆ ಉರಿಯುತ್ತಲೇ ಇರಬೇಕು.
2 Ordena aos filhos de Israel que te tragam, para o candeeiro, azeite de oliveira, puro, batido, a fim de manter uma lâmpada acesa continuamente.
3 ದೇವದರ್ಶನಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ಸಾಯಂಕಾಲದಿಂದ ಉದಯದವರೆಗೆ ದೀಪಗಳು ಉರಿಯುತ್ತಿರುವಂತೆ ಆರೋನನು ಅವುಗಳನ್ನು ಸರಿಪಡಿಸುವನು. ಇದು ತೆರೆಯ ಹೊರಗೆ ಒಡಂಬಡಿಕೆಯ ಪೆಟ್ಟಿಗೆಯ ಮುಂದೆ ಇರುವುದು. ಈ ನಿಯಮ ಶಾಶ್ವತವಾದದ್ದು.
3 Arão a conservará em ordem perante o Senhor, continuamente, desde a tarde até a manhã, fora do véu do testemunho, na tenda da revelação; será estatuto perpétuo pelas vossas gerações.
4 ಶುದ್ಧಚಿನ್ನದಿಂದ ಮಾಡಿದ ದೀಪಸ್ತಂಭದಲ್ಲಿ ದೀಪಗಳು ಯೆಹೋವನ ಸನ್ನಿಧಿಯಲ್ಲಿ ಯಾವಾಗಲೂ ಉರಿಯುತ್ತಿರುವಂತೆ ಆರೋನನು ನೋಡಿಕೊಳ್ಳಬೇಕು.
4 Sobre o candelabro de ouro puro conservará em ordem as lâmpadas perante o Senhor continuamente.
5 “ಶ್ರೇಷ್ಠ ಗೋಧಿಹಿಟ್ಟನ್ನು ತೆಗೆದುಕೊಂಡು ಹನ್ನೆರಡು ರೊಟ್ಟಿಗಳನ್ನು ಮಾಡಬೇಕು. ಪ್ರತಿ ರೊಟ್ಟಿಯನ್ನು ಮಾಡಲು ಆರು ಸೇರು ಹಿಟ್ಟನ್ನು ಉಪಯೋಗಿಸಬೇಕು.
5 Também tomarás flor de farinha, e dela cozerás doze pães; cada pão será de dois décimos de efa.
6 ವುಗಳನ್ನು ಯೆಹೋವನ ಸನ್ನಿಧಿಯಲ್ಲಿರುವ ಚಿನ್ನದ ಮೇಜಿನ ಮೇಲೆ ಎರಡು ಸಾಲಾಗಿ ಇಡಬೇಕು. ಒಂದೊಂದು ಸಾಲಿನಲ್ಲಿ ಆರಾರು ರೊಟ್ಟಿಗಳಿರುವವು.
6 E pô-los-ás perante o Senhor, em duas fileiras, seis em cada fileira, sobre a mesa de ouro puro.
7 ಪ್ರತಿ ಸಾಲಿನಲ್ಲಿ ಶುದ್ಧವಾದ ಧೂಪದ್ರವ್ಯವನ್ನಿಡಬೇಕು. ಇದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿತವಾದ ಸಮರ್ಪಣೆಯನ್ನು ಯೆಹೋವನ ಜ್ಞಾಪಕಕ್ಕೆ ತರುವುದು.
7 Sobre cada fileira porás incenso puro, para que seja sobre os pães como memorial, isto é, como oferta queimada ao Senhor;
8 ರತಿ ಸಬ್ಬತ್‌ದಿನದಲ್ಲಿ ಆರೋನನು ಯೆಹೋವನ ಸನ್ನಿಧಿಯಲ್ಲಿ ರೊಟ್ಟಿಯನ್ನು ಕ್ರಮವಾಗಿ ಯಾವಾಗಲೂ ಇಡಬೇಕು. ಇಸ್ರೇಲರೊಂದಿಗೆ ಮಾಡಲ್ಪಟ್ಟ ಒಡಂಬಡಿಕೆಯು ಶಾಶ್ವತವಾದದ್ದು.
8 em cada dia de sábado, isso se porá em ordem perante o Senhor continuamente; e, a favor dos filhos de Israel, um pacto perpétuo.
9 ಆ ರೊಟ್ಟಿಯು ಆರೋನನಿಗೆ ಮತ್ತು ಅವನ ಪುತ್ರರಿಗೆ ಸಲ್ಲತಕ್ಕದ್ದು. ಅವರು ರೊಟ್ಟಿಯನ್ನು ಪವಿತ್ರಸ್ಥಳದಲ್ಲಿ ತಿನ್ನುವರು. ಯಾಕೆಂದರೆ ಅದು ಮಹಾ ಪವಿತ್ರವಾದದ್ದು. ಅದು ಅಗ್ನಿಯ ಮೂಲಕ ಅರ್ಪಿಸಿದ ಯಜ್ಞಗಳಲ್ಲಿ ಒಂದಾಗಿದೆ. ಆ ರೊಟ್ಟಿಯು ಶಾಶ್ವತವಾಗಿ ಆರೋನನಿಗೆ ಸಲ್ಲತಕ್ಕದ್ದು.”
9 Pertencerão os pães a Arão e a seus filhos, que os comerão em lugar santo, por serem coisa santíssima para eles, das ofertas queimadas ao Senhor por estatuto perpétuo.
10 ಇಸ್ರೇಲಿನ ಒಬ್ಬ ಸ್ತ್ರೀಗೆ ಒಬ್ಬ ಮಗನಿದ್ದನು. ಅವನ ತಂದೆ ಈಜಿಪ್ಟಿನವನು. ಪಾಳೆಯದಲ್ಲಿದ್ದ ಇಸ್ರೇಲರ ಮಧ್ಯದಿಂದ ಅವನು ಹೊರಬಂದನು. ಅವನು ಒಬ್ಬ ಇಸ್ರೇಲನೊಡನೆ ಜಗಳವಾಡತೊಡಗಿದನು.
10 Naquele tempo apareceu no meio dos filhos de Israel o filho duma mulher israelita, o qual era filho dum egípcio; e o filho da israelita e um homem israelita pelejaram no arraial;
11 ಅವನು ದೂಷಿಸಲು ಪ್ರಾರಂಭಿಸಿ ಯೆಹೋವನ ನಾಮದ ಬಗ್ಗೆ ಕೆಟ್ಟಮಾತುಗಳನ್ನು ಹೇಳತೊಡಗಿದನು. ಆದ್ದರಿಂದ ಜನರು ಅವನನ್ನು ಮೋಶೆಯ ಬಳಿಗೆ ಹಿಡಿದು ತಂದರು. (ಆ ಮನುಷ್ಯನ ತಾಯಿಯ ಹೆಸರು ಶೆಲೋಮೀತ್. ಅವಳು ದಾನ್ ಕುಲದವನಾದ ದಿಬ್ರೀಯನ ಮಗಳು.)
11 e o filho da mulher israelita blasfemou o Nome, e praguejou; pelo que o trouxeram a Moisés. Ora, o nome de sua mãe era Selomite, filha de Dibri, da tribo de Dã.
12 ಜನರು ಅವನನ್ನು ಸೆರೆಹಿಡಿದು, ಯೆಹೋವನ ಸ್ಪಷ್ಟವಾದ ಆಜ್ಞೆಗಾಗಿ ಕಾದುಕೊಂಡಿದ್ದರು.
12 Puseram-no, pois, em detenção, até que se lhes fizesse declaração pela boca do Senhor.
13 ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
13 Então disse o Senhor a Moisés:
14 “ದೂಷಣೆ ಮಾಡಿದ ಮನುಷ್ಯನನ್ನು ಪಾಳೆಯದ ಹೊರಗಿರುವ ಸ್ಥಳಕ್ಕೆ ತನ್ನಿರಿ. ಬಳಿಕ ಅವನ ದೂಷಣೆ ಮಾತುಗಳನ್ನು ಕೇಳಿದ ಎಲ್ಲಾ ಜನರನ್ನು ಒಟ್ಟಾಗಿ ಕರೆಸಿರಿ. ಆ ಜನರು ತಮ್ಮ ಕೈಗಳನ್ನು ಅವನ ತಲೆಯ ಮೇಲೆ ಇಡುವರು. ಆ ಬಳಿಕ ಎಲ್ಲಾ ಜನರು ಅವನಿಗೆ ಕಲ್ಲೆಸೆದು ಕೊಲ್ಲಬೇಕು.
14 Tira para fora do arraial o que tem blasfemado; todos os que o ouviram porão as mãos sobre a cabeça dele, e toda a congregação o apedrejará.
15 ನೀನು ಇಸ್ರೇಲರಿಗೆ ಹೀಗೆ ಹೇಳಬೇಕು: ದೇವದೂಷಣೆ ಮಾಡಿದವನಿಗೆ ಶಿಕ್ಷೆಯಾಗಬೇಕು.
15 E dirás aos filhos de Israel: Todo homem que amaldiçoar o seu Deus, levará sobre si o seu pecado.
16 ಯಾವನಾದರೂ ಯೆಹೋವನ ನಾಮದ ವಿರುದ್ಧ ಮಾತಾಡಿದರೆ, ಅವನಿಗೆ ಮರಣಶಿಕ್ಷೆಯಾಗಬೇಕು. ಜನರೆಲ್ಲರೂ ಅವನಿಗೆ ಕಲ್ಲೆಸೆದು ಕೊಲ್ಲಬೇಕು. ಯೆಹೋವನ ನಾಮವನ್ನು ನಿಂದಿಸುವ ಪರದೇಶಸ್ಥರಿಗೂ ಅದೇ ರೀತಿಯ ಶಿಕ್ಷೆಯಾಗಬೇಕು. ಯೆಹೋವನ ನಾಮವನ್ನು ನಿಂದಿಸುವವನಿಗೆ ಮರಣಶಿಕ್ಷೆಯಾಗಬೇಕು.
16 E aquele que blasfemar o nome do Senhor, certamente será morto; toda a congregação certamente o apedrejará. Tanto o estrangeiro como o natural, que blasfemar o nome do Senhor, será morto.
17 “ಒಬ್ಬನು ಇನ್ನೊಬ್ಬನನ್ನು ಕೊಂದರೆ, ಕೊಂದವನಿಗೆ ಮರಣಶಿಕ್ಷೆಯಾಗಬೇಕು.
17 Quem matar a alguém, certamente será morto;
18 ಇನ್ನೊಬ್ಬನಿಗೆ ಸೇರಿದ ಪಶುವನ್ನು ಕೊಲ್ಲುವವನು ಅದಕ್ಕೆ ಪ್ರತಿಯಾಗಿ ಇನ್ನೊಂದು ಪಶುವನ್ನು ಕೊಡಬೇಕು.
18 e quem matar um animal, fará restituição por ele, vida por vida.
19 “ಒಬ್ಬನು ತನ್ನ ನೆರೆಯವನನ್ನು ಅಂಗವಿಕಲನನ್ನಾಗಿ ಮಾಡಿದರೆ, ಅವನಿಗೂ ಅದೇ ರೀತಿ ಮಾಡಬೇಕು.
19 Se alguém desfigurar o seu próximo, como ele fez, assim lhe será feito:
20 ಮುರಿದ ಮೂಳೆಗೆ ಬದಲಾಗಿ ಅವನ ಮೂಳೆಯನ್ನು ಮುರಿಯಬೇಕು. ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗೆಯಬೇಕು.
20 quebradura por quebradura, olho por olho, dente por dente; como ele tiver desfigurado algum homem, assim lhe será feito.
21 ಒಬ್ಬನು ಪಶುವೊಂದನ್ನು ಕೊಂದರೆ, ಅವನು ಅದಕ್ಕೆ ಬದಲಾಗಿ ಈಡು ಕೊಡಬೇಕು. ಆದರೆ ಒಬ್ಬನು ಇನ್ನೊಬ್ಬನನ್ನು ಕೊಂದರೆ, ಕೊಂದವನಿಗೆ ಮರಣಶಿಕ್ಷೆಯಾಗಬೇಕು.
21 Quem, pois, matar um animal, fará restituição por ele; mas quem matar um homem, será morto.
22 “ಈ ಕಟ್ಟಳೆ ನ್ಯಾಯವಾದದ್ದು. ಅದು ನಿಮ್ಮ ಸ್ವದೇಶದವರಿಗೆ ಅನ್ವಯಿಸುವಂತೆ ಪರದೇಶಸ್ಥರಿಗೂ ಅನ್ವಯಿಸುವುದು. ಯಾಕೆಂದರೆ ನಾನೇ ನಿಮ್ಮ ದೇವರಾದ ಯೆಹೋವನು!”
22 uma mesma lei tereis, tanto para o estrangeiro como para o natural; pois eu sou o Senhor vosso Deus.
23 ಬಳಿಕ ಮೋಶೆಯು ಇಸ್ರೇಲರೊಂದಿಗೆ ಮಾತಾಡಿದನು. ಆಗ ಅವರು ದೂಷಣೆ ಮಾಡಿದ ಮನುಷ್ಯನನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಅವನಿಗೆ ಕಲ್ಲೆಸೆದು ಕೊಂದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಮಾಡಿದರು.
23 Então falou Moisés aos filhos de Israel. Depois eles levaram para fora do arraial aquele que tinha blasfemado e o apedrejaram. Fizeram, pois, os filhos de Israel como o Senhor ordenara a Moisés.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Levítico 24, comparar traduções ou montar um estudo — tudo direto pelo WhatsApp.