Levítico 16

ಪವಿತ್ರ ಬೈಬಲ್, ಈಸಿ ಓದುವಿಕೆ ಆವೃತ್ತಿ (KAN2010) vs NAA

Sair da comparação
NAA Nova Almeida Atualizada 2017
1 ಆರೋನನ ಇಬ್ಬರು ಪುತ್ರರು ಯೆಹೋವನಿಗೆ ಆತನು ಆಜ್ಞಾಪಿಸದೇ ಇದ್ದ ಧೂಪವನ್ನು ಅರ್ಪಿಸುತ್ತಿದ್ದಾಗ ಸತ್ತರು. ಅದಾದ ನಂತರ ಯೆಹೋವನು ಮೋಶೆಯೊಡನೆ ಮಾತಾಡಿದನು.
1 O Senhor falou a Moisés, depois da morte dos dois filhos de Arão, quando estes chegaram diante do Senhor e morreram.
2 ಆತನು ಹೇಳಿದ್ದೇನೆಂದರೆ: “ನಿನ್ನ ಸಹೋದರನಾದ ಆರೋನನೊಡನೆ ಮಾತಾಡು. ಅವನು ತನಗೆ ಇಷ್ಟಬಂದಾಗಲೆಲ್ಲಾ ತೆರೆಯ ಹಿಂದಿರುವ ಮಹಾ ಪವಿತ್ರಸ್ಥಳದೊಳಕ್ಕೆ ಹೋಗಬಾರದೆಂದು ಅವನಿಗೆ ಹೇಳು. ಆ ತೆರೆಯ ಹಿಂದೆ ಇರುವ ಕೋಣೆಯೊಳಗೆ ಪವಿತ್ರ ಪೆಟ್ಟಿಗೆಯು ಇರುತ್ತದೆ. ಕೃಪಾಸನವು ಪವಿತ್ರ ಪೆಟ್ಟಿಗೆಯ ಮೇಲ್ಭಾಗದಲ್ಲಿರುತ್ತದೆ. ಕೃಪಾಸನದ ಮೇಲೆ ಮೇಘದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಆರೋನನು ಆ ಕೋಣೆಯೊಳಗೆ ಹೋದರೆ ಸಾಯುವನು!
2 O Senhor disse a Moisés: — Diga a seu irmão Arão que não entre no santuário a qualquer hora, para dentro do véu, diante do propiciatório que está sobre a arca, para que não morra; porque aparecerei na nuvem sobre o propiciatório.
3 “ದೋಷಪರಿಹಾರಕ ದಿನದಲ್ಲಿ ಆರೋನನು ಮಹಾ ಪವಿತ್ರಸ್ಥಳದೊಳಗೆ ಪ್ರವೇಶಿಸುವ ಮೊದಲು ಪಾಪಪರಿಹಾರಕ ಯಜ್ಞವಾಗಿ ಹೋರಿಯನ್ನೂ ಸರ್ವಾಂಗಹೋಮವಾಗಿ ಟಗರನ್ನೂ ಅರ್ಪಿಸಬೇಕು.
3 Mas é assim que Arão deverá entrar no santuário: com um novilho, para oferta pelo pecado, e um carneiro, para holocausto.
4 ಆರೋನನು ತನ್ನ ಪೂರ್ಣಶರೀರವನ್ನು ನೀರಿನಿಂದ ತೊಳೆದುಕೊಳ್ಳಬೇಕು. ಬಳಿಕ ಅವನು ಈ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಆರೋನನು ಪವಿತ್ರ ನಾರಿನ ನಿಲುವಂಗಿಯನ್ನೂ ನಾರಿನ ಚಡ್ಡಿಯನ್ನೂ ಧರಿಸಿಕೊಂಡಿರಬೇಕು. ಅವನು ನಾರಿನ ನಡುಕಟ್ಟನ್ನು ಕಟ್ಟಿಕೊಳ್ಳಬೇಕು; ನಾರಿನ ಮುಂಡಾಸವನ್ನು ಇಟ್ಟುಕೊಳ್ಳಬೇಕು. ಇವುಗಳು ಪವಿತ್ರವಾದವುಗಳಾಗಿವೆ.
4 Ele vestirá a túnica sagrada de linho, terá as calças de linho sobre a pele, porá o cinto de linho na cintura e se cobrirá com a mitra de linho; são estas as vestes sagradas. Banhará o seu corpo em água e então porá essas vestes.
5 “ಆರೋನನು ಇಸ್ರೇಲರಿಂದ ಪಾಪಪರಿಹಾರಕ ಯಜ್ಞಕ್ಕಾಗಿ ಎರಡು ಹೋತಗಳನ್ನು ಮತ್ತು ಸರ್ವಾಂಗಹೋಮಕ್ಕಾಗಿ ಒಂದು ಟಗರನ್ನು ತೆಗೆದುಕೊಳ್ಳಬೇಕು.
5 — Da congregação dos filhos de Israel pegará dois bodes, para a oferta pelo pecado, e um carneiro, para o holocausto.
6 ಬಳಿಕ ಆರೋನನು ಪಾಪಪರಿಹಾರಕ ಯಜ್ಞಕ್ಕೋಸ್ಕರ ಹೋರಿಯನ್ನು ಅರ್ಪಿಸಬೇಕು. ಈ ಪಾಪಪರಿಹಾರಕ ಯಜ್ಞವು ಅವನಿಗಾಗಿ ಇರುತ್ತದೆ. ಆರೋನನು ತನಗೂ ತನ್ನ ಕುಟುಂಬದವರಿಗೂ ಪ್ರಾಯಶ್ಚಿತ್ತ ಮಾಡಲು ಇದನ್ನು ಮಾಡಬೇಕು.
6 Arão trará o novilho da sua oferta pelo pecado e fará expiação por si e pela sua casa.
7 “ತರುವಾಯ ಆರೋನನು ಆ ಎರಡು ಹೋತಗಳನ್ನು ತೆಗೆದುಕೊಂಡು ಅವುಗಳನ್ನು ದೇವದರ್ಶನಗುಡಾರದ ಬಾಗಿಲಿನಲ್ಲಿ ಯೆಹೋವನ ಸನ್ನಿಧಿಗೆ ತರಬೇಕು.
7 Também pegará os dois bodes e os porá diante do Senhor , à porta da tenda do encontro.
8 ಆರೋನನು ಚೀಟುಹಾಕಿ ಒಂದು ಹೋತವನ್ನು ಯೆಹೋವನಿಗಾಗಿಯೂ ಇನ್ನೊಂದನ್ನು ಅಜಾಜೇಲನಿಗಾಗಿಯೂ ಎಂದು ನಿರ್ಧರಿಸಬೇಕು.
8 Lançará sortes sobre os dois bodes: uma sorte para o Senhor , e a outra para o bode emissário.
9 “ಬಳಿಕ ಆರೋನನು ಚೀಟು ಹಾಕುವುದರ ಮೂಲಕ ಯೆಹೋವನಿಗೋಸ್ಕರ ಆರಿಸಲ್ಪಟ್ಟ ಹೋತವನ್ನು ಅರ್ಪಿಸುವನು. ಆರೋನನು ಈ ಹೋತವನ್ನು ಪಾಪಪರಿಹಾರಕ ಯಜ್ಞವಾಗಿ ಅರ್ಪಿಸಬೇಕು.
9 Arão fará chegar o bode sobre o qual cair a sorte para o Senhor e o oferecerá por oferta pelo pecado.
10 ಆದರೆ ಚೀಟು ಹಾಕುವುದರ ಮೂಲಕ ಅಜಾಜೇಲನಿಗಾಗಿ ಆರಿಸಲ್ಪಟ್ಟ ಹೋತವನ್ನು ಜೀವಂತವಾಗಿ ಯೆಹೋವನ ಸನ್ನಿಧಿಗೆ ತರಬೇಕು ಮತ್ತು ಈ ಹೋತವನ್ನು ಮರುಭೂಮಿಯಲ್ಲಿರುವ ಅಜಾಜೇಲನಿಗೆ ಕಳುಹಿಸಬೇಕು. ಜನರಿಗೋಸ್ಕರ ಪ್ರಾಯಶ್ಚಿತ್ತ ಮಾಡಲು ಹೀಗೆ ಮಾಡಬೇಕು.
10 Mas o bode sobre o qual cair a sorte para bode emissário será apresentado vivo diante do Senhor , para fazer expiação por meio dele e enviá-lo ao deserto como bode emissário.
11 “ಬಳಿಕ ಆರೋನನು ಹೋರಿಯನ್ನು ತನ್ನ ಪಾಪಪರಿಹಾರಕ ಯಜ್ಞವಾಗಿ ಅರ್ಪಿಸುವನು. ಆರೋನನು ತನಗಾಗಿಯೂ ತನ್ನ ಕುಟುಂಬದವರಿಗಾಗಿಯೂ ಪ್ರಾಯಶ್ಚಿತ್ತ ಮಾಡುವನು. ಆರೋನನು ಹೋರಿಯನ್ನು ತನ್ನ ಪಾಪಪರಿಹಾರಕ ಯಜ್ಞವಾಗಿ ವಧಿಸುವನು.
11 — Arão fará chegar o novilho da sua oferta pelo pecado e fará expiação por si e pela sua casa; matará o novilho da sua oferta pelo pecado.
12 ಬಳಿಕ ಅವನು ಯೆಹೋವನ ಸನ್ನಿಧಿಯಲ್ಲಿರುವ ವೇದಿಕೆಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತೆಗೆದುಕೊಳ್ಳಬೇಕು. ಆರೋನನು ಪರಿಮಳ ಧೂಪ ದ್ರವ್ಯದ ಪುಡಿಯಲ್ಲಿ ಎರಡು ಹಿಡಿ ತೆಗೆದುಕೊಳ್ಳುವನು. ಆರೋನನು ಆ ಧೂಪವನ್ನು ತೆರೆಯ ಹಿಂದೆ ಇರುವ ಕೋಣೆಗೆ ತೆಗೆದುಕೊಂಡು ಬರಬೇಕು.
12 Pegará também, de sobre o altar, o incensário cheio de brasas de fogo, diante do Senhor , e dois punhados de incenso aromático bem moído e o trará para dentro do véu.
13 ಆರೋನನು ಯೆಹೋವನ ಸನ್ನಿಧಿಯಲ್ಲಿ ಬೆಂಕಿಯ ಮೇಲೆ ಧೂಪವನ್ನು ಹಾಕಬೇಕು. ಆಗ ಒಡಂಬಡಿಕೆಯ ಪೆಟ್ಟಿಗೆ ಮೇಲಿರುವ ಕೃಪಾಸವನ್ನು ಧೂಪದ ಹೊಗೆಯು ಮುಚ್ಚಿಕೊಳ್ಳುವುದು. ಹೀಗೆ ಮಾಡುವುದರಿಂದ ಆರೋನನು ಸಾಯುವುದಿಲ್ಲ.
13 Porá o incenso sobre o fogo, diante do Senhor , para que a nuvem do incenso cubra o propiciatório, que está sobre a arca do testemunho. Assim, Arão não correrá o risco de ser morto.
14 ಅಲ್ಲದೆ ಆರೋನನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಕೃಪಾಸನದ ಪೂರ್ವಭಾಗದಲ್ಲಿ ತನ್ನ ಬೆರಳಿನಿಂದ ಚಿಮಿಕಿಸಬೇಕು. ಕೃಪಾಸನದ ಮುಂಭಾಗದಲ್ಲಿ ಅವನು ತನ್ನ ಬೆರಳಿನಿಂದ ರಕ್ತವನ್ನು ಏಳು ಬಾರಿ ಚಿಮಿಕಿಸುವನು.
14 Ele pegará um pouco do sangue do novilho e, com o dedo, o aspergirá sobre a frente do propiciatório; e, diante do propiciatório, aspergirá sete vezes do sangue, com o dedo.
15 “ಬಳಿಕ ಆರೋನನು ಜನರಿಗೋಸ್ಕರವಾಗಿರುವ ಪಾಪಪರಿಹಾರಕ ಪಶುವಾದ ಹೋತವನ್ನು ವಧಿಸಬೇಕು. ಆರೋನನು ಈ ಹೋತದ ರಕ್ತವನ್ನು ತೆರೆಯ ಹಿಂಭಾಗದಲ್ಲಿರುವ ಕೋಣೆಗೆ ತೆಗೆದುಕೊಂಡು ಬರಬೇಕು. ಆರೋನನು ಹೋರಿಯ ರಕ್ತದಿಂದ ಮಾಡಿದಂತೆ ಹೋತದ ರಕ್ತದಿಂದಲೂ ಮಾಡಬೇಕು. ಆರೋನನು ಹೋತದ ರಕ್ತವನ್ನು ಕೃಪಾಸನದ ಮೇಲೂ ಮತ್ತು ಕೃಪಾಸನದ ಮುಂಭಾಗದಲ್ಲಿಯೂ ಚಿಮಿಕಿಸಬೇಕು.
15 — Depois, matará o bode da oferta pelo pecado, que será para o povo. Trará o sangue do bode para dentro do véu e fará com esse sangue como fez com o sangue do novilho; ele o aspergirá no propiciatório e também diante dele.
16 ಆರೋನನು ಮಹಾ ಪವಿತ್ರಸ್ಥಳವನ್ನು ಪರಿಶುದ್ಧ ಮಾಡಲು ಅನುಸರಿಸಬೇಕಾದ ನಿಯಮಗಳು: ಇಸ್ರೇಲರ ಅಶುದ್ಧತ್ವ, ದಂಗೆಕೋರತನ ಮತ್ತು ಅವರ ಯಾವುದೇ ಪಾಪಗಳ ಪರಿಹಾರಕ್ಕಾಗಿ ಆರೋನನು ಇದನ್ನು ಮಾಡಬೇಕು. ಅವರ ಅಶುದ್ಧತ್ವದ ನಡುವೆ ಇರುವ ದೇವದರ್ಶನಗುಡಾರಕ್ಕೂ ಅವನು ಇದನ್ನೇ ಮಾಡಬೇಕು.
16 Assim, fará expiação pelo santuário por causa das impurezas dos filhos de Israel e por causa das suas transgressões e de todos os seus pecados. Fará o mesmo pela tenda do encontro, que está com eles no meio das suas impurezas.
17 “ಆರೋನನು ಮಹಾ ಪವಿತ್ರಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡಲು ದೇವದರ್ಶನಗುಡಾರದೊಳಗೆ ಹೋದ ಸಮಯದಿಂದ ಅವನು ಬರುವ ತನಕ ಗುಡಾರದೊಳಗೆ ಯಾರೂ ಇರಕೂಡದು. ಆರೋನನು ಬರುವ ತನಕ ಯಾರೂ ಒಳಗೆ ಹೋಗಕೂಡದು. ಹೀಗೆ ಆರೋನನು ತನಗಾಗಿಯೂ ತನ್ನ ಕುಟುಂಬಕ್ಕಾಗಿಯೂ ಇಡೀ ಇಸ್ರೇಲ್ ಸಮೂಹಕ್ಕಾಗಿಯೂ ಪ್ರಾಯಶ್ಚಿತ್ತ ಮಾಡುವನು.
17 Ninguém poderá estar na tenda do encontro quando Arão entrar para fazer propiciação no santuário, até que ele saia depois de feita a expiação por si mesmo, pela sua casa e por toda a congregação de Israel.
18 ತರುವಾಯ ಆರೋನನು ಹೊರಗೆ ಬಂದು ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಕೆಯ ಬಳಿಗೆ ಹೋಗುವನು. ಆರೋನನು ಯಜ್ಞವೇದಿಕೆಯನ್ನು ಶುದ್ಧೀಕರಿಸುವನು. ಆರೋನನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ಮತ್ತು ಹೋತದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಯಜ್ಞವೇದಿಕೆಯ ಎಲ್ಲಾ ಮೂಲೆಗಳಿಗೆ ಹಚ್ಚುವನು.
18 Então sairá para junto do altar, que está diante do Senhor , e fará expiação pelo altar. Pegará um pouco do sangue do novilho e do sangue do bode e o porá sobre os chifres do altar, ao redor.
19 ಬಳಿಕ ಆರೋನನು ತನ್ನ ಬೆರಳಿನಿಂದ ಸ್ವಲ್ಪ ರಕ್ತವನ್ನು ಯಜ್ಞವೇದಿಕೆಯ ಮೇಲೆ ಏಳು ಸಲ ಚಿಮಿಕಿಸುವನು. ಹೀಗೆ ಆರೋನನು ಯಜ್ಞವೇದಿಕೆಯನ್ನು ಇಸ್ರೇಲರಿಂದ ಅದಕ್ಕುಂಟಾದ ಅಶುದ್ಧತ್ವದಿಂದ ದೂರಮಾಡಿ ಪರಿಶುದ್ಧಗೊಳಿಸುವನು.
19 Do sangue aspergirá, com o dedo, sete vezes sobre o altar, o purificará e o santificará das impurezas dos filhos de Israel.
20 “ಹೀಗೆ ಆರೋನನು ಮಹಾ ಪವಿತ್ರಸ್ಥಳವನ್ನೂ ದೇವದರ್ಶನಗುಡಾರವನ್ನೂ ಯಜ್ಞವೇದಿಕೆಯನ್ನೂ ಶುದ್ಧೀಕರಿಸುವನು. ಬಳಿಕ ಆರೋನನು ಜೀವಂತವಾಗಿರುವ ಹೋತವನ್ನು ಯೆಹೋವನ ಬಳಿಗೆ ತರುವನು.
20 — Depois de fazer expiação pelo santuário, pela tenda do encontro e pelo altar, Arão fará chegar o bode vivo.
21 ಆರೋನನು ಸಜೀವವಾದ ಹೋತದ ತಲೆಯ ಮೇಲೆ ತನ್ನ ಎರಡು ಕೈಗಳನ್ನಿಟ್ಟು ಇಸ್ರೇಲರು ಮಾಡಿದ ಪಾಪಗಳನ್ನು ಮತ್ತು ದ್ರೋಹಗಳನ್ನು ಅರಿಕೆಮಾಡುವನು. ಹೀಗೆ ಆರೋನನು ಜನರ ಪಾಪಗಳನ್ನು ಹೋತದ ತಲೆಯ ಮೇಲೆ ಹೊರಿಸುವನು. ಬಳಿಕ ಅವನು ಹೋತವನ್ನು ಮರುಭೂಮಿಗೆ ಕಳುಹಿಸಿಬಿಡುವನು. ಒಬ್ಬ ಮನುಷ್ಯನು ಹೋತವನ್ನು ನಡಿಸಿಕೊಂಡು ಹೋಗಲು ಸಿದ್ಧನಾಗಿ ನಿಂತಿರುವನು.
21 Porá as duas mãos sobre a cabeça do bode vivo e sobre ele confessará todas as iniquidades dos filhos de Israel, todas as suas transgressões e todos os seus pecados; e os porá sobre a cabeça do bode. Depois, enviará o bode ao deserto, pela mão de um homem à disposição para isso.
22 ಹೀಗೆ ಹೋತವು ಜನರ ಪಾಪಗಳನ್ನು ಹೊತ್ತುಕೊಂಡು ಬರಿದಾದ ಮರುಭೂಮಿಗೆ ಹೋಗುವುದು. ಹೋತವನ್ನು ನಡಿಸಿಕೊಂಡು ಹೋಗುವ ಮನುಷ್ಯನು ಮರುಭೂಮಿಯಲ್ಲಿ ಅದನ್ನು ಬಿಟ್ಟುಬಿಡುವನು.
22 Assim, aquele bode levará sobre si todas as iniquidades deles para terra solitária; e o homem soltará o bode no deserto.
23 “ಬಳಿಕ ಆರೋನನು ದೇವದರ್ಶನಗುಡಾರವನ್ನು ಪ್ರವೇಶಿಸುವನು. ಅವನು ಪವಿತ್ರಸ್ಥಳದೊಳಗೆ ಹೋಗಿದ್ದಾಗ ಧರಿಸಿಕೊಂಡಿದ್ದ ನಾರುಬಟ್ಟೆಯನ್ನು ತೆಗೆದುಹಾಕುವನು. ಅವನು ಈ ಬಟ್ಟೆಗಳನ್ನು ಅಲ್ಲಿಯೇ ಬಿಡಬೇಕು.
23 — Depois, Arão virá à tenda do encontro, despirá as vestes de linho que havia usado quando tinha entrado no santuário e ali as deixará.
24 ಅವನು ತನ್ನ ಶರೀರವನ್ನು ಪವಿತ್ರಸ್ಥಳದಲ್ಲಿ ನೀರಿನಿಂದ ತೊಳೆದುಕೊಳ್ಳುವನು. ಬಳಿಕ ಅವನು ತನ್ನ ಇತರ ವಿಶೇಷ ಬಟ್ಟೆಗಳನ್ನು ಧರಿಸಿಕೊಳ್ಳುವನು. ಅವನು ಹೊರಗೆ ಬಂದು, ತನ್ನ ಸರ್ವಾಂಗಹೋಮವನ್ನು ಮತ್ತು ಜನರ ಸರ್ವಾಂಗಹೋಮವನ್ನು ಅರ್ಪಿಸುವನು. ಅವನು ತನಗಾಗಿಯೂ ಜನರಿಗಾಗಿಯೂ ಪ್ರಾಯಶ್ಚಿತ್ತ ಮಾಡುವನು.
24 Banhará o seu corpo em água no lugar santo e porá as suas roupas. Então sairá, e oferecerá o seu holocausto e o holocausto do povo, e fará expiação por si e pelo povo.
25 ಬಳಿಕ ಅವನು ಪಾಪಪರಿಹಾರಕ ಯಜ್ಞದ ಕೊಬ್ಬನ್ನು ವೇದಿಕೆಯ ಮೇಲೆ ಹೋಮಮಾಡುವನು.
25 Também queimará a gordura da oferta pelo pecado sobre o altar.
26 “ಅಜಾಜೇಲನಿಗೆ ಹೋತವನ್ನು ನಡೆಸಿಕೊಂಡು ಹೋದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಿಂದ ತನ್ನ ಪೂರ್ಣಶರೀರವನ್ನು ತೊಳೆದುಕೊಳ್ಳಬೇಕು. ಬಳಿಕ ಅವನು ಪಾಳೆಯದೊಳಗೆ ಬರಬಹುದು.
26 E aquele que tiver levado o bode emissário lavará as suas roupas, banhará o seu corpo em água e, depois, entrará no arraial.
27 “ಪಾಪಪರಿಹಾರಕ ಯಜ್ಞಕ್ಕಾಗಿ ಇರುವ ಹೋರಿಯನ್ನು ಮತ್ತು ಹೋತವನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಬೇಕು. (ಆ ಪಶುಗಳ ರಕ್ತವನ್ನು, ಪವಿತ್ರವಸ್ತುಗಳನ್ನು ಶುದ್ಧೀಕರಿಸುವುದಕ್ಕೆ ಪವಿತ್ರಸ್ಥಳಕ್ಕೆ ತರಲಾಯಿತು.) ಯಾಜಕರು ಆ ಪಶುಗಳ ಚರ್ಮ, ಮಾಂಸ ಮತ್ತು ದೇಹದ ಕಲ್ಮಶವನ್ನೆಲ್ಲಾ ಬೆಂಕಿಯಿಂದ ಸುಟ್ಟುಹಾಕಿಸಬೇಕು.
27 Mas o novilho e o bode da oferta pelo pecado, cujo sangue foi trazido para fazer expiação no santuário, serão levados para fora do arraial; o couro, a carne e o excremento deles serão queimados.
28 ಬಳಿಕ ಅವುಗಳನ್ನು ಸುಡುವ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ತನ್ನ ಪೂರ್ಣದೇಹವನ್ನು ನೀರಿನಿಂದ ತೊಳೆದುಕೊಳ್ಳಬೇಕು. ಬಳಿಕ ಅವನು ಪಾಳೆಯದೊಳಗೆ ಬರಬಹುದು.
28 Aquele que o queimar lavará as suas roupas, banhará o seu corpo em água e, depois, entrará no arraial.
29 “ಇದು ನಿಮಗೆ ಶಾಶ್ವತವಾದ ಕಟ್ಟಳೆ: ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನೀವು ಆಹಾರವನ್ನು ತೆಗೆದುಕೊಳ್ಳದೆ ಉಪವಾಸ ಮಾಡಬೇಕು. ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು. ನಿಮ್ಮ ದೇಶದಲ್ಲಿ ವಾಸಿಸುವ ಪ್ರವಾಸಿಗರಾಗಲಿ ಪರದೇಶಸ್ಥರಾಗಲಿ ಯಾವ ಕೆಲಸವನ್ನು ಮಾಡಬಾರದು.
29 — Isso lhes será por estatuto perpétuo: no sétimo mês, aos dez dias do mês, vocês se humilharão e não farão nenhum trabalho, nem o natural da terra nem o estrangeiro que peregrina entre vocês.
30 ಯಾಕೆಂದರೆ ಈ ದಿನದಲ್ಲಿ ಯಾಜಕನು ನಿಮ್ಮನ್ನು ಶುದ್ಧೀಕರಿಸಲು ನಿಮಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ನೀವು ಯೆಹೋವನಿಗಾಗಿ ನಿಮ್ಮ ಎಲ್ಲಾ ಪಾಪಗಳಿಂದ ಬಿಡುಗಡೆಯಾಗಿ ಪರಿಶುದ್ಧರಾಗುವಿರಿ.
30 Porque, naquele dia, se fará expiação por vocês, para purificá-los; e vocês serão purificados de todos os seus pecados, diante do Senhor .
31 ಈ ದಿನವು ನಿಮಗೆ ಬಹಳ ಪ್ರಾಮುಖ್ಯವಾದ ವಿಶ್ರಾಂತಿ ದಿನವಾಗಿದೆ. ನೀವು ಉಪವಾಸ ಮಾಡಬೇಕು. ಈ ನಿಯಮ ಶಾಶ್ವತವಾದದ್ದು.
31 É sábado de descanso solene para vocês, e vocês se humilharão; é estatuto perpétuo.
32 “ಆದ್ದರಿಂದ ಪ್ರಧಾನಯಾಜಕನಾಗಿ ಆರಿಸಲ್ಪಟ್ಟವನು ವಸ್ತುಗಳನ್ನು ಶುದ್ಧೀಕರಿಸಲು ಈ ಆಚರಣೆಯನ್ನು ಮಾಡಬೇಕು. ಈತನು ತನ್ನ ತಂದೆಯ ನಂತರ ಪ್ರಧಾನಯಾಜಕನಾಗಿ ಸೇವೆಮಾಡುವುದಕ್ಕೆ ನೇಮಿಸಲ್ಪಟ್ಟವನಾಗಿದ್ದಾನೆ. ಆ ಯಾಜಕನು ಪವಿತ್ರವೂ ಶ್ರೇಷ್ಠವೂ ಆಗಿರುವ ನಾರುಬಟ್ಟೆಯನ್ನು ಧರಿಸಿಕೊಳ್ಳಬೇಕು.
32 Aquele que for ungido e consagrado para oficiar como sacerdote no lugar de seu pai é que fará a expiação, havendo posto as vestes de linho, as vestes santas;
33 ಅವನು ಮಹಾ ಪವಿತ್ರಸ್ಥಳ, ದೇವದರ್ಶನಗುಡಾರ ಮತ್ತು ವೇದಿಕೆಯನ್ನು ಶುದ್ಧೀಕರಿಸಬೇಕು; ಅವನು ಯಾಜಕರನ್ನು ಇಸ್ರೇಲರನ್ನು ಶುದ್ಧೀಕರಿಸಬೇಕು.
33 fará expiação pelo santuário, pela tenda do encontro e pelo altar; também a fará pelos sacerdotes e por todo o povo da congregação.
34 ಇಸ್ರೇಲರನ್ನು ಶುದ್ಧೀಕರಿಸುವ ಕಟ್ಟಳೆ ಶಾಶ್ವತವಾದದ್ದು. ನೀವು ಆ ಕಾರ್ಯಗಳನ್ನು ವರ್ಷಕ್ಕೊಮ್ಮೆ ಇಸ್ರೇಲರ ಪಾಪಗಳ ದೆಸೆಯಿಂದ ಮಾಡಬೇಕು.”
34 Isto lhes será por estatuto perpétuo, para fazer expiação uma vez por ano pelos filhos de Israel, por causa dos seus pecados. E Arão fez como o

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Levítico 16, comparar traduções ou montar um estudo — tudo direto pelo WhatsApp.