Gênesis 11

ಪವಿತ್ರ ಬೈಬಲ್, ಈಸಿ ಓದುವಿಕೆ ಆವೃತ್ತಿ (KAN2010) vs NAA

Sair da comparação
NAA Nova Almeida Atualizada 2017
1 ಜಲಪ್ರಳಯದ ನಂತರ ಇಡೀ ಪ್ರಪಂಚದ ಜನರು ಒಂದೇ ಭಾಷೆಯನ್ನು ಮಾತಾಡುತ್ತಿದ್ದರು. ಎಲ್ಲಾ ಜನರು ಒಂದೇ ಭಾಷೆಯ ಪದಗಳನ್ನು ಬಳಸುತ್ತಿದ್ದರು.
1 Em toda a terra havia apenas uma língua e uma só maneira de falar.
2 ಜನರು ಪೂರ್ವದಿಕ್ಕಿನಿಂದ ಪ್ರಯಾಣಮಾಡಿ ಶಿನಾರ್ ಪ್ರದೇಶದಲ್ಲಿ ಬಯಲು ಸೀಮೆಯನ್ನು ಕಂಡು ಅಲ್ಲೇ ಉಳಿದುಕೊಂಡರು.
2 Os homens partiram do Oriente, encontraram uma planície na terra de Sinar e habitaram ali.
3 ಅವರು ಒಬ್ಬರಿಗೊಬ್ಬರು ಮಾತಾಡುತ್ತಾ, “ಬನ್ನಿ, ಒಳ್ಳೆಯ ಸುಟ್ಟ ಇಟ್ಟಿಗೆಗಳನ್ನು ಮಾಡೋಣ” ಎಂದು ನಿರ್ಧರಿಸಿದರು. ಅವರು ತಮ್ಮ ಮನೆಗಳನ್ನು ಕಟ್ಟಲು ಕಲ್ಲುಗಳ ಬದಲಾಗಿ ಇಟ್ಟಿಗೆಗಳನ್ನೂ ಗಾರೆಗೆ ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು.
3 E disseram uns aos outros: — Venham, vamos fazer tijolos e queimá-los bem. Os tijolos lhes serviram de pedra, e o betume, de argamassa.
4 ಬಳಿಕ ಅವರು, “ನಾವು ನಮಗಾಗಿ ಒಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವಂಥ ಗೋಪುರವನ್ನೂ ಕಟ್ಟಿದರೆ ನಾವು ಪ್ರಸಿದ್ಧರಾಗುತ್ತೇವೆ. ಆಗ ನಾವು ಭೂಮಿಯಲ್ಲೆಲ್ಲಾ ಚದರಿಹೋಗದೆ ಒಂದೇ ಸ್ಥಳದಲ್ಲಿ ವಾಸಿಸಲು ಸಾಧ್ಯವಾಗುತ್ತದೆ” ಎಂದು ಮಾತಾಡಿಕೊಂಡರು.
4 Disseram: — Venham, vamos construir uma cidade e uma torre cujo topo chegue até os céus e tornemos célebre o nosso nome, para que não sejamos espalhados por toda a terra.
5 ಯೆಹೋವನು ಪಟ್ಟಣವನ್ನೂ ಗೋಪುರವನ್ನೂ ನೋಡಲು ಇಳಿದುಬಂದನು. ಜನರು ಅವುಗಳನ್ನು ಕಟ್ಟುತ್ತಿರುವುದನ್ನು ಕಂಡು
5 Então o Senhor desceu para ver a cidade e a torre, que os filhos dos homens estavam construindo.
6 ಯೆಹೋವನು, “ಈ ಜನರೆಲ್ಲರು ಒಂದೇ ಭಾಷೆಯನ್ನು ಮಾತಾಡುವುದರಿಂದ ಒಟ್ಟಾಗಿ ಸೇರಿಕೊಂಡಿದ್ದಾರೆ. ಪ್ರಾರಂಭದಲ್ಲೇ ಇಂಥ ಕಾರ್ಯವನ್ನು ಮಾಡುತ್ತಿರುವ ಇವರು ಮುಂದೆ ಏನು ಬೇಕಾದರೂ ಮಾಡಲು ಶಕ್ತರಾಗುವರು.
6 E o Senhor disse: — Eis que o povo é um, e todos têm a mesma língua. Isto é apenas o começo; agora não haverá restrição para tudo o que planejam fazer.
7 ಆದ್ದರಿಂದ ನಾವು ಕೆಳಗೆ ಹೋಗಿ ಅವರ ಭಾಷೆಯನ್ನು ತಾರುಮಾರು ಮಾಡೋಣ; ಆಗ ಅವರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದಿಲ್ಲ” ಎಂದು ಹೇಳಿದನು.
7 Venham, vamos descer e confundir a língua que eles falam, para que um não entenda o que o outro está dizendo.
8 ಅಂತೆಯೇ ಯೆಹೋವನು ಜನರನ್ನು ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು. ಆದ್ದರಿಂದ ಆ ಪಟ್ಟಣವನ್ನು ಕಟ್ಟಿ ಪೂರೈಸಲು ಅವರಿಗೆ ಸಾಧ್ಯವಾಗಲಿಲ್ಲ.
8 Assim o Senhor os dispersou dali pela superfície da terra; e pararam de edificar a cidade.
9 ಯೆಹೋವನು ಇಡೀ ಲೋಕದ ಭಾಷೆಯನ್ನು ತಾರುಮಾರು ಮಾಡಿದ್ದು ಆ ಸ್ಥಳದಲ್ಲೇ. ಆದ್ದರಿಂದ ಆ ಸ್ಥಳಕ್ಕೆ ಬಾಬಿಲೋನ್ ಎಂದು ಹೆಸರಾಯಿತು. ಹೀಗೆ ಯೆಹೋವನು ಜನರನ್ನು ಆ ಸ್ಥಳದಿಂದ ಭೂಮಿಯಲ್ಲೆಲ್ಲಾ ಚದರಿಸಿಬಿಟ್ಟನು.
9 Por isso a cidade foi chamada de Babel, porque ali o Senhor confundiu a língua de toda a terra e dali o Senhor os dispersou por toda a superfície dela.
10 ಇದು ಶೇಮನ ಕುಟುಂಬ ಚರಿತ್ರೆ. ಜಲಪ್ರಳಯದ ಎರಡು ವರ್ಷಗಳ ನಂತರ ಶೇಮನು 100 ವರ್ಷದವನಾಗಿದ್ದಾಗ ಅರ್ಪಕ್ಷದ್ ಎಂಬ ಮಗನನ್ನು ಪಡೆದನು.
10 São estas as gerações de Sem. Ele tinha cem anos de idade quando gerou Arfaxade, dois anos depois do dilúvio.
11 ಆ ಬಳಿಕ ಶೇಮನು 500 ವರ್ಷ ಬದುಕಿದ್ದನು. ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
11 E, depois que gerou Arfaxade, Sem viveu quinhentos anos; e gerou filhos e filhas.
12 ಅರ್ಪಕ್ಷದನು 35 ವರ್ಷದವನಾಗಿದ್ದಾಗ ಶೆಲಹ ಎಂಬ ಮಗನನ್ನು ಪಡೆದನು.
12 Arfaxade viveu trinta e cinco anos e gerou Salá.
13 ಶೆಲಹನು ಜನಿಸಿದ ಮೇಲೆ ಅರ್ಪಕ್ಷದನು 403 ವರ್ಷ ಬದುಕಿದ್ದನು. ಆ ಅವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
13 E, depois que gerou Salá, Arfaxade viveu quatrocentos e três anos; e gerou filhos e filhas.
14 ಶೆಲಹನು 30 ವರ್ಷದವನಾಗಿದ್ದಾಗ ಎಬರ ಎಂಬ ಮಗನನ್ನು ಪಡೆದನು.
14 Salá viveu trinta anos e gerou Héber;
15 ಎಬರನು ಹುಟ್ಟಿದ ಮೇಲೆ ಶೆಲಹನು 403 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
15 e, depois que gerou Héber, Salá viveu quatrocentos e três anos; e gerou filhos e filhas.
16 ಎಬರನು 34 ವರ್ಷದವನಾಗಿದ್ದಾಗ ಪೆಲೆಗ ಎಂಬ ಮಗನನ್ನು ಪಡೆದನು.
16 Héber viveu trinta e quatro anos e gerou Pelegue;
17 ಪೆಲೆಗನು ಹುಟ್ಟಿದ ಮೇಲೆ ಎಬರನು 430 ವರ್ಷಕ್ಕಿಂತಲೂ ಹೆಚ್ಚು ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
17 e, depois que gerou Pelegue, Héber viveu quatrocentos e trinta anos; e gerou filhos e filhas.
18 ಪೆಲೆಗನು 30 ವರ್ಷದವನಾಗಿದ್ದಾಗ ರೆಗೂವ ಎಂಬ ಮಗನನ್ನು ಪಡೆದನು.
18 Pelegue viveu trinta anos e gerou Reú;
19 ರೆಗೂವನು ಹುಟ್ಟಿದ ಮೇಲೆ ಪೆಲೆಗನು 209 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
19 e, depois que gerou Reú, Pelegue viveu duzentos e nove anos; e gerou filhos e filhas.
20 ರೆಗೂವನು 32 ವರ್ಷದವನಾಗಿದ್ದಾಗ ಸೆರೂಗ ಎಂಬ ಮಗನನ್ನು ಪಡೆದನು.
20 Reú viveu trinta e dois anos e gerou Serugue;
21 ಸೆರೂಗನು ಹುಟ್ಟಿದ ಮೇಲೆ ರೆಗೂವನು 207 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
21 e, depois que gerou Serugue, Reú viveu duzentos e sete anos; e gerou filhos e filhas.
22 ಸೆರೂಗನು 30 ವರ್ಷದವನಾಗಿದ್ದಾಗ ನಾಹೋರ ಎಂಬ ಮಗನನ್ನು ಪಡೆದನು.
22 Serugue viveu trinta anos e gerou Naor;
23 ನಾಹೋರನು ಹುಟ್ಟಿದ ಮೇಲೆ, ಸೆರೂಗನು 200 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
23 e, depois que gerou Naor, Serugue viveu duzentos anos; e gerou filhos e filhas.
24 ನಾಹೋರನು 29 ವರ್ಷದವನಾಗಿದ್ದಾಗ ತೆರಹ ಎಂಬ ಮಗನನ್ನು ಪಡೆದನು.
24 Naor viveu vinte e nove anos e gerou Tera;
25 ತೆರಹನು ಹುಟ್ಟಿದ ಮೇಲೆ ನಾಹೋರನು 119 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
25 e, depois que gerou Tera, Naor viveu cento e dezenove anos; e gerou filhos e filhas.
26 ತೆರಹನು 70 ವರ್ಷದವನಾಗಿದ್ದಾಗ ಅಬ್ರಾಮ, ನಾಹೋರ, ಹಾರಾನ ಎಂಬ ಗಂಡುಮಕ್ಕಳನ್ನು ಪಡೆದನು.
26 Tera viveu setenta anos e gerou Abrão, Naor e Harã.
27 ಇದು ತೆರಹನ ಕುಟುಂಬ ಚರಿತ್ರೆ. ತೆರಹನು ಅಬ್ರಾಮ, ನಾಹೋರ ಮತ್ತು ಹಾರಾನ ಎಂಬವರ ತಂದೆ. ಹಾರಾನನು ಲೋಟನ ತಂದೆ.
27 São estas as gerações de Tera. Tera gerou Abrão, Naor e Harã; e Harã gerou Ló.
28 ಹಾರಾನನು ಬಾಬಿಲೋನಿನ ತನ್ನ ಸ್ವಂತ ಸ್ಥಳವಾದ ಊರ್ ಎಂಬಲ್ಲಿ ಸತ್ತುಹೋದನು. ಹಾರಾನನು ಸತ್ತಾಗ ಅವನ ತಂದೆ ಇನ್ನೂ ಜೀವಂತವಾಗಿದ್ದನು.
28 Harã morreu na terra de seu nascimento, em Ur dos caldeus, estando Tera, seu pai, ainda vivo.
29 ಅಬ್ರಾಮ ಮತ್ತು ನಾಹೋರ ಮದುವೆ ಮಾಡಿಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು. ನಾಹೋರನ ಹೆಂಡತಿಯ ಹೆಸರು ಮಿಲ್ಕಾ. ಈಕೆಯು ಹಾರಾನನ ಮಗಳು. ಹಾರಾನನು ಮಿಲ್ಕಾ ಮತ್ತು ಇಸ್ಕ ಎಂಬವರ ತಂದೆ.
29 Abrão e Naor tomaram para si mulheres. A mulher de Abrão se chamava Sarai, e a mulher de Naor era Milca, filha de Harã, que foi pai de Milca e de Iscá.
30 ಸಾರಯಳಿಗೆ ಮಕ್ಕಳಿರಲಿಲ್ಲ, ಯಾಕೆಂದರೆ, ಆಕೆ ಬಂಜೆಯಾಗಿದ್ದಳು.
30 Sarai era estéril, não tinha filhos.
31 ತೆರಹನು ತನ್ನ ಕುಟುಂಬವನ್ನು ಕರೆದುಕೊಂಡು ಬಾಬಿಲೋನಿನ ಊರ್ ಎಂಬ ಸ್ವಂತ ಸ್ಥಳದಿಂದ ಹೊರಟು ಕಾನಾನಿಗೆ ಪ್ರಯಾಣ ಮಾಡಿದನು. ತೆರಹನು ತನ್ನ ಮಗನಾದ ಅಬ್ರಾಮನನ್ನೂ ತನ್ನ ಮೊಮ್ಮಗನೂ ಹಾರಾನನಿಗೆ ಮಗನೂ ಆಗಿರುವ ಲೋಟನನ್ನೂ ಮತ್ತು ತನಗೆ ಸೊಸೆಯೂ ಅಬ್ರಾಮನ ಹೆಂಡತಿಯೂ ಆಗಿರುವ ಸಾರಯಳನ್ನೂ ಕರೆದುಕೊಂಡು ಹಾರಾನ್ ಪಟ್ಟಣಕ್ಕೆ ಹೋಗಿ ಅಲ್ಲೇ ವಾಸಿಸಲು ತೀರ್ಮಾನಿಸಿದನು.
31 Tera tomou Abrão, seu filho, e Ló, filho de Harã, filho de seu filho, e Sarai, sua nora, mulher de seu filho Abrão, e saiu com eles de Ur dos caldeus, para ir à terra de Canaã. Foram até Harã, onde ficaram.
32 ತೆರಹನು ಇನ್ನೂರೈದು ವರ್ಷ ಬದುಕಿ ಹಾರಾನಿನಲ್ಲಿ ಸತ್ತುಹೋದನು.
32 E, havendo Tera vivido duzentos e cinco anos ao todo, morreu em Harã.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Gênesis 11, comparar traduções ou montar um estudo — tudo direto pelo WhatsApp.