Ezequiel 41

ಪವಿತ್ರ ಬೈಬಲ್, ಈಸಿ ಓದುವಿಕೆ ಆವೃತ್ತಿ (KAN2010) vs ACF

Sair da comparação
ACF Almeida Corrigida Fiel
1 ಆಮೇಲೆ ಅವನು ನನ್ನನ್ನು ಪವಿತ್ರಸ್ಥಳಕ್ಕೆ ಕರೆದುಕೊಂಡು ಹೋದನು. ಅದರ ಇಕ್ಕೆಡೆಗಳಲ್ಲಿರುವ ಗೋಡೆಯನ್ನು ಅವನು ಅಳತೆ ಮಾಡಿದನು. ಆ ಗೋಡೆಗಳು ಆರು ಮೊಳ ದಪ್ಪವಾಗಿದ್ದವು.
1 Então me levou ao templo, e mediu os pilares, seis côvados de largura de um lado, e seis côvados de largura do outro, que era a largura da tenda.
2 ಅದರ ಬಾಗಿಲು ಹತ್ತು ಮೊಳ ಅಗಲವಾಗಿದ್ದು ಅದರ ಎರಡು ಬದಿಯೂ ಐದೈದು ಮೊಳವಿದ್ದವು. ಅವನು ಆ ಕೋಣೆಯ ಅಳತೆ ತೆಗೆದನು. ಅದು ನಲವತ್ತು ಮೊಳ ಉದ್ದ, ಇಪ್ಪತ್ತು ಮೊಳ ಅಗಲವಿತ್ತು.
2 E a largura da entrada, dez côvados; e os lados da entrada, cinco côvados de um lado e cinco côvados do outro; também mediu o seu comprimento, de quarenta côvados, e a largura, de vinte côvados.
3 ಆಮೇಲೆ ಅವನು ಕೊನೆಯ ಕೋಣೆಗೆ ಪ್ರವೇಶಿಸಿದನು. ಅದರ ಬಾಗಿಲಿನ ಇಕ್ಕೆಡೆಗಳಲ್ಲಿರುವ ಗೋಡೆಗಳನ್ನು ಅವನು ಅಳತೆ ಮಾಡಿದನು. ಆ ಗೋಡೆಗಳು ಎರಡು ಮೊಳ ದಪ್ಪವಾಗಿದ್ದು ಏಳು ಮೊಳ ಅಗಲವಾಗಿದ್ದವು. ದ್ವಾರವು ಆರು ಮೊಳ ಅಗಲವಾಗಿತ್ತು.
3 E entrou no interior, e mediu o pilar da entrada, dois côvados, e a entrada, seis côvados, e a largura da entrada, sete côvados.
4 ಆಮೇಲೆ ಆ ಪುರುಷನು ಕೋಣೆಯ ಉದ್ದವನ್ನು ಅಳತೆ ಮಾಡಿದನು. ಅದು ಇಪ್ಪತ್ತು ಮೊಳ ಉದ್ದ, ಇಪ್ಪತ್ತು ಮೊಳ ಅಗಲವಾಗಿತ್ತು. “ಇದು ಮಹಾ ಪವಿತ್ರಸ್ಥಳ” ಎಂದು ಅವನು ನನಗೆ ತಿಳಿಸಿದನು.
4 Também mediu o seu comprimento, vinte côvados, e a largura, vinte côvados, diante do templo, e disse-me: Este é o Santo dos Santos.
5 ಆಮೇಲೆ ಆ ಮನುಷ್ಯನು ಆಲಯದ ಗೋಡೆಯನ್ನು ಅಳತೆ ಮಾಡಿದನು. ಅದು ಆರು ಮೊಳ ದಪ್ಪವಾಗಿತ್ತು. ಆಲಯದ ಸುತ್ತಲೂ ಕೋಣೆಗಳಿದ್ದವು. ಅವು ನಾಲ್ಕು ಮೊಳ ಅಗಲವಾಗಿದ್ದವು.
5 E mediu a parede da casa, seis côvados, e a largura das câmaras laterais, quatro côvados, por todo o redor da casa.
6 ಆ ಕೋಣೆಗಳು ಒಂದರ ಮೇಲೊಂದು ಮೂರು ಅಂತಸ್ತಿನಲ್ಲಿದ್ದವು. ಪ್ರತಿ ಅಂತಸ್ತಿನಲ್ಲಿ ಮೂವತ್ತು ಕೊಠಡಿಗಳಿದ್ದವು. ಆಲಯದ ಗೋಡೆಯು ಮೆಟ್ಟಿಲು ಮೆಟ್ಟಿಲುಗಳಾಗಿ ಕಟ್ಟಲ್ಪಟ್ಟಿತ್ತು. ಪಕ್ಕದ ಕೋಣೆಗಳು ಈ ಮೆಟ್ಟಿಲುಗಳ ಮೇಲೆ ಆಧಾರಗೊಂಡಿದ್ದವು. ಅವು ಆಲಯದ ಗೋಡೆಯನ್ನು ಆಧಾರ ಮಾಡಿಕೊಂಡಿರಲಿಲ್ಲ.
6 E as câmaras laterais, estavam em três andares, câmara sobre câmara, trinta em cada andar, e elas entravam na parede que tocava na casa pelas câmaras laterais em redor, para prenderem nela, e não travavam na parede da casa.
7 ಪ್ರತಿ ಅಂತಸ್ತು ಅದರ ಕೆಳಗಿನ ಅಂತಸ್ತಿಗಿಂತ ಅಗಲವಾಗಿದ್ದವು. ಆಲಯದ ಸುತ್ತ ಇದ್ದ ಕೋಣೆಗಳ ಗೋಡೆಗಳು ಮೇಲಕ್ಕೆ ಹೋದಂತೆ ಕಿರಿದಾಗಿದ್ದವು. ಹೀಗೆ ಕೊನೆ ಅಂತಸ್ತಿನ ಕೋಣೆಗಳು ಕೆಳಗಣ ಕೋಣೆಗಳಿಗಿಂತ ಹೆಚ್ಚು ಅಗಲವಾಗಿದ್ದವು. ಮಧ್ಯ ಅಂತಸ್ತಿನ ಮೂಲಕ ಒಂದು ನಿಚ್ಚಣಿಕೆಯು ಕೆಳಗಿನ ಅಂತಸ್ತಿನಿಂದ ಕೊನೆಯ ಅಂತಸ್ತಿನವರೆಗೆ ಹೋಗಿತ್ತು.
7 E havia maior largura nas câmaras laterais superiores, porque o caracol da casa ia subindo muito alto por todo o redor da casa, por isso que a casa tinha mais largura para cima; e assim da câmara baixa se subia à mais alta pelo meio.
8 ಆಲಯದ ಸುತ್ತಲೂ ಒಂದು ಜಗಲಿ ಇರುವದನ್ನು ನಾನು ಕಂಡೆನು. ಇದು ಪಕ್ಕದ ಕೋಣೆಗಳಿಗೆ ಅಸ್ತಿವಾರವಾಗಿತ್ತು. ಇದು ಒಂದು ಅಳತೆ ಕೋಲಿನಷ್ಟು ಎತ್ತರವಾಗಿತ್ತು.
8 E olhei para a altura da casa ao redor; e eram os fundamentos das câmaras laterais da medida de uma cana inteira, seis côvados grandes.
9 ಆ ಕೋಣೆಗಳ ಹೊರಗಿನ ಗೋಡೆಯು ಐದು ಮೊಳ ದಪ್ಪವಾಗಿತ್ತು. ಆಲಯದ ಉದ್ದಕ್ಕೂ ಇದ್ದ ಆ ಕೋಣೆಗಳಿಗೂ
9 A grossura da parede das câmaras laterais de fora era de cinco côvados; e o que foi deixado vazio era o lugar das câmaras laterais, que estavam por dentro.
10 ಯಾಜಕರ ಕೋಣೆಗಳಿಗೂ ನಡುವೆ ಆಲಯದ ಸುತ್ತಲೂ ಇಪ್ಪತ್ತು ಮೊಳ ಅಂತರವಿತ್ತು.
10 E entre as câmaras havia a largura de vinte côvados por todo o redor da casa.
11 ಆ ಕೋಣೆಗಳ ಬಾಗಿಲುಗಳು ಜಗಲಿಯ ಕಡೆಗೆ ಮುಖಮಾಡಿದ್ದವು. ಅವಕ್ಕೆ ಒಂದು ಬಾಗಿಲು ಉತ್ತರದ ಕಡೆಯಿಂದಲೂ ಇನ್ನೊಂದು ಬಾಗಿಲು ದಕ್ಷಿಣದ ಕಡೆಯಿಂದಲೂ ಇದ್ದವು. ಆ ಎತ್ತರದ ಜಗಲಿಯು ಸುತ್ತಲೂ ಐದು ಮೊಳ ಅಗಲವಿತ್ತು.
11 E as entradas das câmaras laterais estavam voltadas para o lugar vazio; uma entrada para o caminho do norte, e outra entrada para o do sul; e a largura do lugar vazio era de cinco côvados em redor.
12 ಆಲಯದ ಪಶ್ಚಿಮ ಭಾಗದ ಕಿರಿದಾದ ಸ್ಥಳದಲ್ಲಿ ಒಂದು ಕಟ್ಟಡವಿತ್ತು. ಇದು ಎಪ್ಪತ್ತು ಮೊಳ ಅಗಲವಾಗಿದ್ದು ತೊಂಭತ್ತು ಮೊಳ ಉದ್ದವಾಗಿತ್ತು. ಅದರ ಸುತ್ತಲಿನ ಗೋಡೆಯು ಐದು ಮೊಳ ದಪ್ಪವಾಗಿತ್ತು.
12 Era também o edifício que estava diante do lugar separado, do lado do ocidente, da largura de setenta côvados; e a parede do edifício de cinco côvados de largura em redor, e o seu comprimento era de noventa côvados.
13 ನಂತರ ಅವನು ಆಲಯದ ಅಳತೆ ತೆಗೆದನು. ಆಲಯವು ನೂರು ಮೊಳ ಉದ್ದವಾಗಿತ್ತು. ನಿಯಮಿತದ ಸ್ಥಳ, ಅದರ ಕಟ್ಟಡ ಮತ್ತು ಗೋಡೆಯ ಸಹಿತ ನೂರು ಮೊಳ ಉದ್ದವಾಗಿತ್ತು.
13 Assim mediu a casa, do comprimento de cem côvados, como também o lugar separado, e o edifício, e as suas paredes, cem côvados de comprimento.
14 ಪೂರ್ವದಿಕ್ಕಿನಲ್ಲಿದ್ದ ನಿಯಮಿತದ ಸ್ಥಳವೂ ನೂರು ಮೊಳ ಉದ್ದವಿತ್ತು.
14 E a largura da frente da casa, e do lugar separado para o oriente, de uma e de outra parte, de cem côvados.
15 ಆಲಯದ ಹಿಂಭಾಗದಲ್ಲಿದ್ದ ನಿಯಮಿತದ ಸ್ಥಳದಲ್ಲಿ ಕಟ್ಟಿದ್ದ ಕಟ್ಟಡದ ಉದ್ದವನ್ನು ಅವನು ಲೆಕ್ಕ ಮಾಡಿದನು. ಅದು ಗೋಡೆಯಿಂದ ಗೋಡೆಗೆ ನೂರು ಮೊಳವಿತ್ತು.
15 Também mediu o comprimento do edifício, diante do lugar separado, que estava por detrás, e as suas galerias de uma e de outra parte, cem côvados, com o templo de dentro e os vestíbulos do átrio.
16 ಗೋಡೆಗಳಿಗೆ ಮರದ ಹಲಗೆಗಳು ಹೊದಿಸಲ್ಪಟ್ಟಿದ್ದವು. ಎಲ್ಲಾ ಕಿಟಕಿ ಬಾಗಿಲುಗಳಿಗೆ ಮರದ ಹೊದಿಕೆಯಿತ್ತು. ದ್ವಾರದ ಪಕ್ಕದಲ್ಲಿ ಆಲಯದ ಗೋಡೆಗೆ ನೆಲದಿಂದ ಹಿಡಿದು ಕಿಟಕಿಯ ತನಕ ಮರದ ಹಲಗೆಯ ಹೊದಿಕೆ ಇತ್ತು.
16 Os umbrais e as janelas estreitas, e as galerias em redor nos três andares, defronte do umbral, estavam cobertas de madeira em redor; e isto desde o chão até às janelas; e as janelas estavam cobertas.
17 ಬಾಗಿಲಿನ ಮೇಲೆಯೂ ಒಳಗಿನ ಮತ್ತು ಹೊರಗಿನ ಕೋಣೆಗಳ ಗೋಡೆಗಳಲ್ಲಿ
17 No espaço em cima da porta, e até na casa, no seu interior e na parte de fora, e até toda a parede em redor, por dentro e por fora, tudo por medida.
18 ಕೆರೂಬಿದೂತರ ಮತ್ತು ಖರ್ಜೂರ ವೃಕ್ಷಗಳ ಚಿತ್ರ ಬಿಡಿಸಲ್ಪಟ್ಟಿತ್ತು. ಎರಡು ಕೆರೂಬಿದೂತರ ನಡುವೆ ಒಂದು ಖರ್ಜೂರ ವೃಕ್ಷವಿತ್ತು. ಪ್ರತಿ ಕೆರೂಬಿದೂತರಿಗೆ ಎರಡು ಮುಖಗಳಿದ್ದವು.
18 E foi feito com querubins e palmeiras, de maneira que cada palmeira estava entre querubim e querubim, e cada querubim tinha dois rostos,
19 ಒಂದು ಮುಖ ಮನುಷ್ಯನ ಮುಖದಂತಿದ್ದು ಖರ್ಜೂರ ವೃಕ್ಷವನ್ನು ದಿಟ್ಟಿಸುತ್ತಿತ್ತು. ಇನ್ನೊಂದು ಮುಖವು ಸಿಂಹದ ಮುಖದಂತಿದ್ದು ಆಚೆ ಪಕ್ಕದ ಖರ್ಜೂರ ವೃಕ್ಷವನ್ನು ನೋಡುವಂತಿತ್ತು. ಆಲಯದ ಸುತ್ತಲೂ ಈ ರೀತಿಯ ಕೆತ್ತನೆ ಕೆಲಸವಿತ್ತು.
19 A saber: um rosto de homem olhava para a palmeira de um lado, e um rosto de leãozinho para a palmeira do outro lado; assim foi feito por toda a casa em redor.
20 ಪವಿತ್ರಸ್ಥಳದ ಗೋಡೆಗಳಲ್ಲಿ ನೆಲದಿಂದ ಬಾಗಿಲವರೆಗೆ ಕೆರೂಬಿದೂತರ ಮತ್ತು ಖರ್ಜೂರ ವೃಕ್ಷದ ಕೆತ್ತನೆ ಕೆಲಸವನ್ನು ಮಾಡಿದ್ದರು.
20 Desde o chão até acima da entrada estavam feitos os querubins e as palmeiras, como também pela parede do templo.
21 ಪವಿತ್ರಸ್ಥಳದ ಇಕ್ಕೆಡೆಗಳಲ್ಲಿದ್ದ ಗೋಡೆಗಳು ಚೌಕವಾಗಿದ್ದವು. ಮಹಾ ಪವಿತ್ರಸ್ಥಳದೆದುರು ಮರದಿಂದ ತಯಾರಿಸಿದ ವೇದಿಕೆಯಂತೆ ಕಾಣುತ್ತಿದ್ದ
21 As ombreiras do templo eram quadradas e, no tocante à frente do santuário, a aparência de uma era como a aparência da outra,
22 ಒಂದು ವಸ್ತು ಇತ್ತು. ಅದು ಮೂರು ಮೊಳ ಎತ್ತರ, ಎರಡು ಮೊಳ ಉದ್ದವಿತ್ತು. ಅದರ ಮೂಲೆಗಳು, ಅದರ ಚೌಕಟ್ಟು ಮತ್ತು ಬದಿಗಳೆಲ್ಲಾ ಮರದಿಂದ ಮಾಡಿದ್ದವುಗಳಾಗಿದ್ದವು. “ಈ ಮೇಜು ಯೆಹೋವನ ಸನ್ನಿಧಾನದಲ್ಲಿದೆ” ಎಂದು ಆ ಮನುಷ್ಯನು ನನಗೆ ಹೇಳಿದನು.
22 O altar de madeira era de três côvados de altura, e o seu comprimento de dois côvados; os seus cantos, o seu comprimento e as suas paredes eram de madeira; e disse-me: Esta é a mesa que está perante a face do Senhor.
23 ಪವಿತ್ರಸ್ಥಳ ಮತ್ತು ಮಹಾ ಪವಿತ್ರಸ್ಥಳಗಳಿಗೆ ಎರಡೆರಡು ಬಾಗಿಲುಗಳಿದ್ದವು.
23 E o templo e o santuário, ambos tinham duas portas.
24 ಒಂದೊಂದು ಬಾಗಿಲಿಗೆ ಎರಡೆರಡು ಚಿಕ್ಕ ಬಾಗಿಲುಗಳು ಅಂದರೆ ಎರಡೆರಡು ಮಡಚುವ ಬಾಗಿಲುಗಳಿದ್ದವು.
24 E as portas tinham duas folhas; duas folhas que viravam; duas para uma porta e duas para a outra.
25 ಅವುಗಳ ಮೇಲೆ ಕೆರೂಬಿದೂತರ ಮತ್ತು ಖರ್ಜೂರ ವೃಕ್ಷದ ಚಿತ್ರಗಳನ್ನು ಕೆತ್ತಲಾಗಿತ್ತು. ಗೋಡೆಗಳಲ್ಲಿ ಹೇಗೆ ಕೆತ್ತಲ್ಪಟ್ಟಿತ್ತೋ ಅದೇ ರೀತಿಯಲ್ಲಿ, ಕೈಸಾಲೆಯ ಮುಂದೆ ಒಂದು ಮರದಿಂದ ಮಾಡಿದ ಸೂರು ಇತ್ತು.
25 E nelas, isto é, nas portas do templo, foram feitos querubins e palmeiras, como estavam feitos nas paredes, e havia uma trave grossa de madeira na frente do vestíbulo por fora.
26 ಇದಕ್ಕೆ ತೆರೆಯಲಾಗದ ಕಿಟಕಿಗಳಿದ್ದವು. ಇದರ ಗೋಡೆಗಳಲ್ಲಿಯೂ ಗೋಡೆಯ ಮೇಲಿದ್ದ ಸೂರು ಮತ್ತು ಆಲಯದ ಸುತ್ತಲಿದ್ದ ಕೋಣೆಯ ಗೋಡೆಗಳಲ್ಲಿಯೂ ಖರ್ಜೂರ ವೃಕ್ಷದ ಕೆತ್ತನೆ ಕೆಲಸವಿತ್ತು.
26 E havia janelas estreitas, e palmeiras, de um e de outro lado, pelos lados do vestíbulo, como também nas câmaras da casa e nas grossas traves.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Ezequiel 41, comparar traduções ou montar um estudo — tudo direto pelo WhatsApp.