Ezequiel 37

ಪವಿತ್ರ ಬೈಬಲ್, ಈಸಿ ಓದುವಿಕೆ ಆವೃತ್ತಿ (KAN2010) vs NAA

Sair da comparação
NAA Nova Almeida Atualizada 2017
1 ಯೆಹೋವನ ಶಕ್ತಿಯು ನನ್ನ ಮೇಲೆ ಬಂದಿತು. ಯೆಹೋವನ ಆತ್ಮವು ನನ್ನನ್ನು ನಗರದೊಳಗಿಂದ ಎತ್ತಿಕೊಂಡು ತಗ್ಗಿನ ಮಧ್ಯಕ್ಕೆ ಕೊಂಡೊಯ್ದನು. ಆ ಬಯಲಿನ ತುಂಬಾ ಒಣಗಿದ ಎಲುಬುಗಳು ತುಂಬಿದ್ದವು.
1 Veio sobre mim a mão do Senhor , e ele me levou pelo Espírito do Senhor e me deixou no meio de um vale que estava cheio de ossos.
2 ಆ ಬಯಲಿನ ನೆಲದ ಮೇಲೆ ಅನೇಕಾನೇಕ ಒಣ ಎಲುಬುಗಳು ಬಿದ್ದುಕೊಂಡಿದ್ದವು. ಯೆಹೋವನು ನನ್ನನ್ನು ಆ ಎಲುಬುಗಳ ನಡುವೆ ನಡೆಯುವಂತೆ ಮಾಡಿದನು. ಆ ಎಲುಬುಗಳು ತೀರಾ ಒಣಗಿಹೋಗಿರುವುದನ್ನು ನಾನು ನೋಡಿದೆನು.
2 Ele me fez andar ao redor deles, e eu pude ver que eram muito numerosos na superfície do vale e estavam sequíssimos.
3 ಆಗ ನನ್ನ ಒಡೆಯನಾದ ಯೆಹೋವನು ನನ್ನೊಡನೆ ಹೀಗೆ ಹೇಳಿದನು, “ನರಪುತ್ರನೇ, ಈ ಎಲುಬುಗಳಿಗೆ ತಿರುಗಿ ಜೀವ ಬಂದೀತೋ?”
3 Então me perguntou: — Filho do homem, será que estes ossos podem reviver? Respondi: —
4 ಆಗ ಯೆಹೋವನು, “ನನ್ನ ಪರವಾಗಿ ಆ ಎಲುಬುಗಳೊಂದಿಗೆ ಮಾತನಾಡು. ಅವುಗಳಿಗೆ ಹೀಗೆ ಹೇಳು: ‘ಒಣಗಿದ ಎಲುಬುಗಳೇ, ಯೆಹೋವನ ಮಾತನ್ನು ಕೇಳಿರಿ.
4 Então ele me disse: — Profetize para estes ossos e diga-lhes: “Ossos secos, ouçam a palavra do
5 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದ್ದಾನೆ, ನಾನು ನಿಮಗೆ ಉಸಿರನ್ನು ಬರುವಂತೆ ಮಾಡುವೆನು. ಆಗ ನೀವು ಜೀವಂತರಾಗುವಿರಿ.
5 — Assim diz o Senhor Deus a estes ossos: “Eis que farei entrar em vocês o espírito, e vocês viverão.
6 ನಾನು ನಿಮ್ಮಲ್ಲಿ ಸಾಐಯುಗಳನ್ನೂ ನರಗಳನ್ನೂ ಬರಮಾಡುವೆನು. ಆಮೇಲೆ ನಿಮ್ಮನ್ನು ಚರ್ಮದಿಂದ ಹೊದಿಸುವೆನು. ಆಮೇಲೆ ನಿಮ್ಮಲ್ಲಿ ಶ್ವಾಸವನ್ನಿಟ್ಟು ನಿಮಗೆ ಜೀವ ಬರುವಂತೆ ಮಾಡುವೆನು. ಆಗ ನಾನು ಒಡೆಯನಾದ ಯೆಹೋವನು ಎಂದು ನೀವು ತಿಳಿದುಕೊಳ್ಳುವಿರಿ.’”
6 Porei tendões sobre vocês, farei crescer carne sobre vocês e os cobrirei de pele. Porei em vocês o espírito, e vocês viverão. Então vocês saberão que eu sou o Senhor .”
7 ನಾನು ಎಲುಬುಗಳೊಂದಿಗೆ ಯೆಹೋವನ ಪರವಾಗಿ ಮಾತನಾಡಿದೆನು. ನಾನು ಮಾತನಾಡುತ್ತಾ ಇರುವಾಗಲೇ ಒಂದು ದೊಡ್ಡ ಶಬ್ದವನ್ನು ಕೇಳಿದೆನು. ಎಲುಬುಗಳು ಅಲ್ಲಾಡತೊಡಗಿದವು ಮತ್ತು ಒಂದಕ್ಕೊಂದು ಜೋಡಿಸಲ್ಪಟ್ಟವು.
7 Então profetizei como me havia sido ordenado. Enquanto eu profetizava, houve um ruído, um barulho de ossos que batiam contra ossos e se ajuntavam, cada osso ao seu osso.
8 ನನ್ನ ಕಣ್ಣೆದುರಿನಲ್ಲೇ ಅವುಗಳಿಗೆ ಸ್ನಾಯುಗಳು, ನರಗಳು ಬಂದವು; ಮತ್ತು ಚರ್ವವು ಅವುಗಳನ್ನು ಮುಚ್ಚಿತು. ಆದರೆ ಆ ಶರೀರ ಚಲಿಸಲಿಲ್ಲ. ಯಾಕೆಂದರೆ ಅದರಲ್ಲಿ ಶ್ವಾಸವಿರಲಿಲ್ಲ.
8 Olhei, e eis que apareceram tendões sobre os ossos, cresceram as carnes, e eles se cobriram de pele. Mas não havia neles o espírito.
9 ಆಗ ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ನನ್ನ ಪರವಾಗಿ ಗಾಳಿಯೊಂದಿಗೆ ಮಾತನಾಡು. ನರಪುತ್ರನೇ, ಗಾಳಿಯೊಂದಿಗೆ ಮಾತನಾಡು. ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, ‘ಗಾಳಿಯೇ, ಎಲ್ಲಾ ದಿಕ್ಕುಗಳಿಂದ ಬಂದು ಈ ಸತ್ತ ಶರೀರಗಳ ಮೇಲೆ ಧಿದು. ಅವರ ಮೇಲೆ ಗಾಳಿ ಧಿದು. ಆಗ ಅವುಗಳಿಗೆ ಜೀವ ಬರುವದು.’”
9 Então ele me disse: — Profetize ao espírito. Profetize, filho do homem, e diga ao espírito: Assim diz o
10 ನಾನು ಯೆಹೋವನ ಪರವಾಗಿ ಗಾಳಿಗೆ ಆತನು ಹೇಳಿದಂತೆಯೇ ಹೇಳಿದೆನು. ಆಗ ನಿರ್ಜೀವ ದೇಹಗಳೊಳಗೆ ಶ್ವಾಸವು ಹೊಕ್ಕಿತು. ಅವುಗಳಿಗೆ ಜೀವಬಂದು ನಿಂತುಕೊಂಡವು. ಅಲ್ಲಿ ಅನೇಕ ಜನರಿದ್ದರು. ಒಂದು ದೊಡ್ಡ ಸೈನ್ಯದ ತರಹ ಜನಸಮೂಹವು ಅಲ್ಲಿತ್ತು.
10 Profetizei como ele me havia ordenado. O espírito entrou neles, eles viveram e se puseram em pé. Formavam um exército, um enorme exército.
11 ಆಗ ಒಡೆಯನಾದ ಯೆಹೋವನು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಈ ಎಲುಬುಗಳು ಇಸ್ರೇಲ್ ಜನಾಂಗ. ‘ನಮ್ಮ ಎಲುಬುಗಳು ಒಣಗಿಹೋಗಿವೆ. ನಮ್ಮ ನಿರೀಕ್ಷೆಯು ಮುಗಿದುಹೋಯಿತು. ನಾವು ಸಂಪೂರ್ಣವಾಗಿ ನಾಶವಾಗಿ ಹೋಗಿದ್ದೇವೆ’ ಎಂದು ಇಸ್ರೇಲರು ಹೇಳುತ್ತಾರೆ.
11 Então ele me disse: — Filho do homem, esses ossos são toda a casa de Israel. Eis que dizem: “Os nossos ossos estão secos, perdemos a nossa esperança, fomos exterminados.”
12 ಆದ್ದರಿಂದ ನನ್ನ ಪರವಾಗಿ ಅವರೊಂದಿಗೆ ಮಾತನಾಡು. ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆಂದು ಹೇಳು: ‘ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನು ತೆರೆದು ನಿಮ್ಮನ್ನು ಹೊರತಂದು ನಿಮ್ಮ ಸಬದೇಶವಾದ ಇಸ್ರೇಲಿಗೆ ನಿಮ್ಮನ್ನು ಬರಮಾಡುವೆನು.
12 Portanto, profetize e diga-lhes: Assim diz o Senhor Deus: “Eis que abrirei as sepulturas de vocês e os farei sair delas, ó povo meu, e os levarei de volta à terra de Israel.
13 ನನ್ನ ಜನರೇ, ನಿಮ್ಮನ್ನು ಸಮಾಧಿಯೊಳಗಿಂದ ಎಬ್ಬಿಸಿ ತರುವೆನು. ಆಗ ನಾನೇ ಯೆಹೋವನೆಂದು ನೀವು ತಿಳಿಯುವಿರಿ.
13 Vocês saberão que eu sou o Senhor , quando eu abrir as sepulturas de vocês e os fizer sair delas, ó povo meu.
14 ನಾನು ನನ್ನ ಆತ್ಮವನ್ನು ನಿಮ್ಮಲ್ಲಿ ಇಡುವೆನು, ಆಗ ನೀವು ತಿರುಗಿ ಜೀವ ಹೊಂದುವಿರಿ. ಅನಂತರ ನಿಮ್ಮನ್ನು ನಿಮ್ಮ ಸಬದೇಶಕ್ಕೆ ಬರಮಾಡುವೆನು. ಆಗ ನಾನೇ ಯೆಹೋವನೆಂದು ನೀವು ತಿಳಿಯುವಿರಿ. ನಾನು ಹೇಳಿದ್ದೆಲ್ಲ ಸಂಭವಿಸುತ್ತದೆ ಎಂದು ಆಗ ನಿಮಗೆ ತಿಳಿದು ಬರುವದು.’” ಇದು ಯೆಹೋವನ ನುಡಿ.
14 Porei em vocês o meu Espírito, e vocês viverão. Eu os estabelecerei na sua própria terra, e vocês saberão que eu sou o Senhor . Eu falei e eu o cumprirei, diz o Senhor .”
15 ಯೆಹೋವನ ಸಂದೇಶವು ನನಗೆ ತಿರುಗಿ ಬಂತು. ಆತನು ಹೇಳಿದ್ದೇನೆಂದರೆ:
15 A palavra do Senhor veio a mim, dizendo:
16 “ನರಪುತ್ರನೇ, ಒಂದು ದಂಡವನ್ನು ತೆಗೆದುಕೊಂಡು ಅದರ ಮೇಲೆ, ‘ಈ ದಂಡವು ಯೆಹೂದನಿಗೂ ಅವನ ಸ್ನೇಹಿತರಾದ ಇಸ್ರೇಲರಿಗೂ ಸೇರಿದ್ದು’ ಎಂದು ಬರೆ. ಆಮೇಲೆ ಇನ್ನೊಂದು ದಂಡವನ್ನು ತೆಗೆದುಕೊಂಡು ಅದರ ಮೇಲೆ, ‘ಎಫ್ರಾಯಿಮನ ಈ ದಂಡವು ಯೋಸೇಫನಿಗೂ ಅವನ ಸ್ನೇಹಿತರಾದ ಇಸ್ರೇಲರಿಗೂ ಸೇರಿದ್ದು’ ಎಂದು ಬರೆ.
16 — Filho do homem, pegue um pedaço de madeira e escreva nele o seguinte: “De Judá e dos filhos de Israel, seus companheiros.” Depois, pegue outro pedaço de madeira e escreva nele: “De José, pedaço de madeira de Efraim, e de toda a casa de Israel, seus companheiros.”
17 ಆಮೇಲೆ ಆ ಎರಡೂ ದಂಡಗಳನ್ನು ನಿನ್ನ ಕೈಯಲ್ಲಿ ಕೂಡಿಸು. ಆಗ ಅದು ಒಂದೇ ದಂಡವಾಗುವದು.
17 Junte os pedaços de madeira um ao outro, faça deles um só pedaço, para que se tornem apenas um na sua mão.
18 “ನಿನ್ನ ಜನರು ಅದು ಏನು ಎಂದು ವಿವರಿಸಲು ಹೇಳುವರು.
18 Quando os filhos do seu povo perguntarem: “Você não vai nos explicar o que significa isso?”,
19 ಅವರಿಗೆ ಹೀಗೆ ಹೇಳು: ಒಡೆಯನಾದ ಯೆಹೋವನು ಹೇಳುವುದೇನೆಂದರೆ, ‘ನಾನು ಯೋಸೇಫನ ದಂಡವನ್ನು ಎಫ್ರಾಯೀಮ್ ಮತ್ತು ಅವನ ಸ್ನೇಹಿತರಾದ ಇಸ್ರೇಲರ ಕೈಯಿಂದ ತೆಗೆದುಕೊಂಡು ಅದನ್ನು ಯೆಹೂದದ ದಂಡದೊಂದಿಗೆ ಇಟ್ಟು ಒಂದೇ ದಂಡವಾಗುವಂತೆ ಮಾಡುವೆನು. ಅವು ನನ್ನ ಕೈಯಲ್ಲಿ ಒಂದೇ ದಂಡವಾಗುತ್ತವೆ.’
19 responda: Assim diz o Senhor Deus: “Eis que eu pegarei o pedaço de madeira de José, que está na mão de Efraim, e das tribos de Israel, suas companheiras, e o ajuntarei ao pedaço de Judá, e farei deles um só pedaço, e se tornarão apenas um na minha mão.”
20 “ಆ ದಂಡಗಳನ್ನು ಕೈಯಲ್ಲಿ ಹಿಡಿದುಕೊಂಡು ನಿನ್ನೆದುರಿಗೆ ಚಾಚು. ನೀನು ಅವುಗಳ ಮೇಲೆ ಹೆಸರು ಬರೆದಿರುವೆ.
20 — Os pedaços de madeira em que você escreveu devem ficar na sua mão, para que o povo os veja.
21 ಯೆಹೋವನು ಹೀಗೆ ಹೇಳುತ್ತಾನೆ ಎಂದು ಆ ಜನರಿಗೆ ಹೇಳು: ‘ನಾನು ಇಸ್ರೇಲ್ ಜನರನ್ನು ಅವರು ಚದರಿದ ದೇಶಗಳಿಂದಲೂ ಸುತ್ತಲಿರುವ ದೇಶಗಳಿಂದಲೂ ಅವರನ್ನು ಒಟ್ಟುಗೂಡಿಸಿ ಅವರ ಸಬದೇಶಕ್ಕೆ ತರುವೆನು.
21 Então diga-lhes: Assim diz o Senhor Deus: “Eis que eu tirarei os filhos de Israel do meio das nações para onde eles foram, e os congregarei de todos os lugares ao redor, e os levarei para a sua própria terra.
22 ಇಸ್ರೇಲಿನ ಪರ್ವತ ರಾಜ್ಯದಲ್ಲಿ ಅವರನ್ನು ಒಂದು ಜನಾಂಗವನ್ನಾಗಿ ಮಾಡುವೆನು. ಅವರೆಲ್ಲರಿಗೂ ಒಬ್ಬನೇ ರಾಜನಿರುವನು. ಅವರು ಇನ್ನು ಮುಂದೆ ಎರಡು ರಾಜ್ಯಗಳಾಗುವದಿಲ್ಲ.
22 Farei deles uma só nação na terra, nos montes de Israel, e um só rei será rei de todos eles. Nunca mais serão duas nações; nunca mais se dividirão em dois reinos.
23 ಅವರು ಇನ್ನು ಮೇಲೆ ವಿಗ್ರಹಗಳಿಂದ ತಮ್ಮನ್ನು ಹೊಲೆ ಮಾಡಿಕೊಳ್ಳುವದಿಲ್ಲ. ಅವರು ಪಾಪಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸುವೆನು. ನಾನು ಅವರನ್ನು ತೊಳೆದು ಶುದ್ಧಮಾಡುವೆನು. ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು.
23 Nunca mais se contaminarão com os seus ídolos, nem com as suas abominações, nem com qualquer das suas transgressões. Eu os livrarei de todas as suas apostasias em que pecaram e os purificarei. Assim, eles serão o meu povo, e eu serei o seu Deus.”
24 “‘ನನ್ನ ಸೇವಕನಾದ ದಾವೀದನು ಅವರ ರಾಜನಾಗುವನು. ಅವರೆಲ್ಲರಿಗೆ ಒಬ್ಬನೇ ಕುರುಬನಿರುವನು. ನಾನು ಹೇಳಿದ ಮಾತುಗಳಿಗೆ ಅವರು ವಿಧೇಯರಾಗುವರು; ನನ್ನ ಕಟ್ಟಳೆ ನಿಯಮಗಳಲ್ಲಿ ಅವರು ಬಾಳುವರು.
24 — “O meu servo Davi reinará sobre eles, e todos eles terão um só pastor. Andarão nos meus juízos, guardarão os meus estatutos e os observarão.
25 ನಾನು ನನ್ನ ಸೇವಕನಾದ ಯಾಕೋಬನಿಗೆ ಕೊಟ್ಟಿರುವ ದೇಶದಲ್ಲಿ ಅವರು ವಾಸಿಸುವರು. ನಿಮ್ಮ ಪೂರ್ವಿಕರು ಆ ಪ್ರಾಂತ್ಯದಲ್ಲಿ ವಾಸವಾಗಿದ್ದರು. ನನ್ನ ಜನರು ಅಲ್ಲಿಯೇ ವಾಸಮಾಡುವರು. ಅವರೂ ಅವರ ಮಕ್ಕಳೂ ಮೊಮ್ಮಕ್ಕಳೂ ಅಲ್ಲಿ ನಿತ್ಯಕಾಲಕ್ಕೂ ಜೀವಿಸುವರು. ನನ್ನ ಸೇವಕನಾದ ದಾವೀದನು ಅವರ ನಿತ್ಯಕಾಲದ ರಾಜನು.
25 Habitarão na terra que dei ao meu servo Jacó, na qual os pais de vocês habitaram. Habitarão nela, eles e os seus filhos e os filhos dos seus filhos, para sempre. E Davi, meu servo, será o príncipe deles para sempre.
26 ನಾನು ಸಮಾಧಾನದ ಒಡಂಬಡಿಕೆಯನ್ನು ಅವರ ಜೊತೆ ಮಾಡುವೆನು. ಇದು ನಿರಂತರದ ಒಡಂಬಡಿಕೆಯಾಗಿರುವದು. ನಾನು ಅವರ ಸಬದೇಶವನ್ನು ಹಿಂತಿರುಗಿಸಿ ಕೊಡುವೆನು. ಅವರನ್ನು ಅಭಿವೃದ್ಧಿಪಡಿಸಿ ಹೆಚ್ಚಿಸುವೆನು ಮತ್ತು ಅವರ ಮಧ್ಯೆ ನನ್ನ ಪವಿತ್ರ ಸ್ಥಳವನ್ನು ಇರಿಸುವೆನು. ಇದು ನಿರಂತರವಾದ ಒಡಂಬಡಿಕೆ.
26 Farei com eles uma aliança de paz; será uma aliança eterna. Eu os estabelecerei, os multiplicarei, e porei o meu santuário no meio deles para sempre.
27 ನನ್ನ ಪವಿತ್ರಗುಡಾರ ಅವರೊಂದಿಗಿರುವದು. ಹೌದು, ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು.
27 O meu tabernáculo estará com eles; eu serei o seu Deus, e eles serão o meu povo.
28 ಇತರ ದೇಶಗಳವರು ನಾನು ಯೆಹೋವನೆಂದು ತಿಳಿಯುವರು. ಇಸ್ರೇಲರನ್ನು ನನ್ನ ವಿಶೇಷ ಜನರೆಂದು ಅವರಿಗೆ ತಿಳಿದುಬರುವದು. ಯಾಕೆಂದರೆ ಅವರ ಮಧ್ಯೆ ನನ್ನ ಪರಿಶುದ್ಧ ಸ್ಥಾನವನ್ನು ನಿರಂತರಕ್ಕೂ ಇರಿಸುವೆನು.’”
28 As nações saberão que eu sou o Senhor que santifico Israel, quando o meu santuário estiver no meio deles para sempre.”

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Ezequiel 37, comparar traduções ou montar um estudo — tudo direto pelo WhatsApp.