Ezequiel 36

ಪವಿತ್ರ ಬೈಬಲ್, ಈಸಿ ಓದುವಿಕೆ ಆವೃತ್ತಿ (KAN2010) vs ARC

Sair da comparação
ARC Almeida Revista e Corrigida 2009
1 “ನರಪುತ್ರನೇ, ನನ್ನ ಪರವಾಗಿ ಇಸ್ರೇಲಿನ ಪರ್ವತದೊಂದಿಗೆ ಮಾತನಾಡು. ಅವುಗಳಿಗೆ ಯೆಹೋವನ ಮಾತುಗಳನ್ನು ಕೇಳಲು ಹೇಳು.
1 E tu, ó filho do homem, profetiza aos montes de Israel e dize: Montes de Israel, ouvi a palavra do Senhor .
2 ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ ಎಂದು ಅವುಗಳಿಗೆ ಹೇಳು. ‘ವೈರಿಗಳು ನಿನಗೆ ವಿರುದ್ಧವಾಗಿ ಕೆಟ್ಟಮಾತುಗಳನ್ನಾಡಿದ್ದಾರೆ. ಒಳ್ಳೆಯದಾಯಿತು. ಈಗ ಪುರಾತನ ಪರ್ವತಗಳು ನಮ್ಮದಾದವು ಎಂದು ಹೇಳುತ್ತಾರೆ.’
2 Assim diz o Senhor Jeová : Pois que diz o inimigo sobre vós: Ah! Ah! Até as eternas alturas serão nossa herança;
3 “ಆದ್ದರಿಂದ ಹೋಗಿ ಇಸ್ರೇಲಿನ ಪರ್ವತಗಳಿಗೆ ನನ್ನ ಪರವಾಗಿ ಹೇಳು. ಇದು ಒಡೆಯನಾದ ಯೆಹೋವನ ನುಡಿ ಎಂದು ಹೇಳು. ‘ವೈರಿಗಳು ನಿನ್ನ ಪಟ್ಟಣಗಳನ್ನೆಲ್ಲಾ ನಾಶಮಾಡಿ ಎಲ್ಲಾ ದಿಕ್ಕುಗಳಿಂದ ನುಗ್ಗಿ ನಿನ್ನ ಮೇಲೆ ಧಾಳಿ ಮಾಡಿರುತ್ತಾರೆ. ನೀನು ಬೇರೆಯವರ ವಶವಾಗಬೇಕೆಂಬದಾಗಿ ಹೀಗೆ ಮಾಡಿದರು. ಜನರು ನಿನ್ನ ವಿಷಯವಾಗಿ ಗುಜುಗುಜು ಮಾತನಾಡಿದರು.’”
3 portanto, profetiza e dize: Assim diz o Senhor Jeová : Visto que vos assolaram e devoraram em redor, para que ficásseis feitos herança do resto das nações, e andais em lábios paroleiros e na infâmia do povo,
4 ಆದ್ದರಿಂದ ಇಸ್ರೇಲಿನ ಪರ್ವತಗಳೇ, ನನ್ನ ಒಡೆಯನಾದ ಯೆಹೋವನ ಮಾತುಗಳಿಗೆ ಕಿವಿಗೊಡಿರಿ! ನನ್ನ ಒಡೆಯನಾದ ಯೆಹೋವನು ಬೆಟ್ಟಗುಡ್ಡಗಳಿಗೂ ತೊರೆಗಳಿಗೂ ಕಣಿವೆಗಳಿಗೂ ಪಾಳುಬಿದ್ದ ಸ್ಥಳಗಳಿಗೂ ಮತ್ತು ಅನ್ಯಜನರಿಂದ ಕೊಳ್ಳೆಹೊಡೆಯಲ್ಪಟ್ಟು ಅಪಹ್ಯಾಸಕ್ಕೆ ಒಳಗಾಗಿ ನಿರ್ಜನವಾಗಿರುವ ಪಟ್ಟಣಗಳಿಗೂ ಹೀಗೆನ್ನುತ್ತಾನೆ:
4 portanto, ouvi, ó montes de Israel, a palavra do Senhor Jeová : Assim diz o Senhor Jeová aos montes e aos outeiros, às correntes e aos vales, aos lugares assolados e solitários e às cidades desamparadas, que se tornaram rapina e escárnio para o resto das nações que estão ao redor delas.
5 “ಎದೋಮಿನ ಬಗ್ಗೆಯೂ ಉಳಿದ ಆ ವಿದೇಶಗಳ ಬಗ್ಗೆಯೂ ನಾನು ರೋಷದಿಂದ ಮಾತಾಡುತ್ತಿದ್ದೇನೆಂದು ಪ್ರಮಾಣ ಮಾಡುತ್ತೇನೆ. ಆ ಜನಾಂಗಗಳು ನನ್ನ ದೇಶವನ್ನು ತಮ್ಮ ಸಾಬಸ್ತ್ಯವನ್ನಾಗಿ ಸಂತೋಷದಿಂದ ತೆಗೆದುಕೊಂಡರು. ಅವರು ಅದನ್ನು ವಶಪಡಿಸಿಕೊಂಡು ಸೂರೆ ಮಾಡಿದಾಗ ಮತ್ತು ನನ್ನ ಜನರಿಗೆ ಅವಮಾನ ಮಾಡಿದಾಗ ನನ್ನ ಜನರನ್ನು ಅವರು ಎಷ್ಟೊಂದು ದೆಬಷೀಸುತ್ತಾರೆಂದು ತೋರಿಸುತ್ತಾ ಉಲ್ಲಾಸಪಟ್ಟರು.
5 Portanto, assim diz o Senhor Jeová : Certamente, no fogo do meu zelo, falei contra o resto das nações e contra todo o Edom. Eles se apropriaram da minha terra, com alegria de todo o coração e com menosprezo de alma, para ser lançada à rapina.
6 “ಇಸ್ರೇಲ್ ದೇಶದ ವಿಷಯವಾಗಿ ಅವರಿಗೆ ಹೇಳು. ಪರ್ವತ, ಬೆಟ್ಟ, ತಗ್ಗು, ಹೊಳೆಗಳಿಗೆ ಹೇಳು. ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ ಎಂದು ತಿಳಿಸು. ‘ನೀನು ಆ ದೇಶಗಳವರ ನಿಂದನೆಯ ಮಾತುಗಳನ್ನು ಕೇಳಬೇಕಾಯಿತಲ್ಲಾ ಎಂದು ನನ್ನ ಹೃದಯವು ಸಿಟ್ಟಿನಲ್ಲಿ ಕುದಿಯುತ್ತದೆ.’”
6 Portanto, profetiza sobre a terra de Israel e dize aos montes, e aos outeiros, e às correntes, e aos vales: Assim diz o Senhor Jeová : Eis que falei no meu zelo e no meu furor, porque levastes sobre vós o opróbrio dos gentios.
7 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನಿನ್ನ ಸುತ್ತಲೂ ಇರುವ ದೇಶಗಳು ನಿನ್ನ ವಿರುದ್ಧವಾಗಿ ಅವಮಾನಕರವಾದ ಮಾತುಗಳನ್ನು ಆಡಿದ್ದರಿಂದ ಅವುಗಳನ್ನು ನಾನು ದಂಡಿಸುವುದಾಗಿ ಪರಲೋಕದ ಕಡೆಗೆ ನನ್ನ ಕೈಯೆತ್ತಿ ಪ್ರಮಾಣ ಮಾಡುತ್ತೇನೆ.
7 Portanto, assim diz o Senhor Jeová : Eu levantei a mão, para que os gentios que estão ao redor de vós levem o seu opróbrio sobre si mesmos.
8 “ಆದರೆ ಇಸ್ರೇಲಿನ ಪರ್ವತಗಳೇ, ನೀವು ಹೊಸ ಮರಗಳನ್ನು ಬೆಳೆಯಿಸಿ ನನ್ನ ಜನರಾದ ಇಸ್ರೇಲರಿಗೆ ಹಣ್ಣುಗಳನ್ನು ಒದಗಿಸುತ್ತೀರಿ.
8 Mas vós, ó montes de Israel, vós produzireis os vossos ramos e dareis o vosso fruto para o meu povo de Israel; porque estão prestes a vir.
9 ನಾನು ನಿನ್ನೊಂದಿಗಿದ್ದು ಸಹಾಯಮಾಡುತ್ತೇನೆ. ಜನರು ನಿನ್ನ ನೆಲವನ್ನು ಉಳುವರು; ಬೀಜವನ್ನು ಬಿತ್ತುವರು.
9 Porque eis que eu estou convosco; e eu me voltarei para vós, e sereis lavrados e semeados.
10 ನಿನ್ನಲ್ಲಿ ಅನೇಕಾನೇಕ ಮಂದಿ ವಾಸಿಸುವರು. ಇಡೀ ಇಸ್ರೇಲ್ ಜನಾಂಗದವರು ಅಲ್ಲಿ ವಾಸಮಾಡುವರು. ಪಟ್ಟಣಗಳು ಜನಭರಿತವಾಗುವವು. ಹಾಳಾದ ಸ್ಥಳಗಳೆಲ್ಲಾ ತಿರುಗಿ ಕಟ್ಟಲ್ಪಡುವವು.
10 E multiplicarei homens sobre vós, a toda a casa de Israel, sim, a toda ela; e as cidades serão habitadas, e os lugares devastados serão edificados.
11 ನಾನು ನಿನಗೆ ಅನೇಕ ಜನರನ್ನೂ ಪ್ರಾಣಿಗಳನ್ನೂ ಕೊಡುವೆನು. ಪ್ರಾಣಿಗಳು ವೃದ್ಧಿಯಾಗುವವು ಮತ್ತು ಜನರು ಹೆಚ್ಚು ಮಕ್ಕಳನ್ನು ಪಡೆಯುವರು. ಹಿಂದಿನ ಕಾಲದಲ್ಲಿ ನಿನ್ನ ದೇಶ ಜನಭರಿತವಾಗಿದ್ದಂತೆ ಈಗಲೂ ಆಗುವ ಹಾಗೆ ನಾನು ಜನರನ್ನು ತರಿಸುವೆನು. ನಿನ್ನ ದೇಶವು ಹಿಂದೆ ಇದ್ದುದಕ್ಕಿಂತಲೂ ಉತ್ತಮ ದೇಶವನ್ನಾಗಿ ಮಾಡುವೆನು. ಆಗ ನಾನು ಯೆಹೋವನೆಂದು ನೀನು ತಿಳಿದುಕೊಳ್ಳುವಿ.
11 E multiplicarei homens e animais sobre vós; e eles se multiplicarão e frutificarão; e vos farei habitar como dantes e farei vosso estado melhor que nos vossos princípios; e sabereis que eu sou o Senhor .
12 ಹೌದು, ನಾನು ಅನೇಕಾನೇಕ ಇಸ್ರೇಲ್ ಜನರನ್ನು ನಿನ್ನ ದೇಶಕ್ಕೆ ನಡೆಸುವೆನು. ನೀನು ಅವರ ಸೊತ್ತಾಗುವಿ. ಅವರ ಮಕ್ಕಳನ್ನು ನೀನು ಮತ್ತೆಂದಿಗೂ ತೆಗೆದುಹಾಕುವುದಿಲ್ಲ.”
12 E farei andar sobre vós os homens, o meu povo de Israel; eles te possuirão, e serás a sua herança e nunca mais os desfilharás.
13 ನನ್ನ ಒಡೆಯನಾದ ಯೆಹೋವನು ಹೇಳಿದ ಮಾತುಗಳಿವು, “ಇಸ್ರೇಲ್ ದೇಶವೇ, ಜನರು ನಿನ್ನ ವಿಷಯದಲ್ಲಿ ಕೆಟ್ಟ ಮಾತುಗಳನ್ನು ಆಡುತ್ತಾರೆ. ನೀನು ನಿನ್ನ ಜನರನ್ನು ನಾಶ ಮಾಡಿದಿ ಎಂದು ಹೇಳುತ್ತಾರೆ. ನಿನ್ನ ಮಕ್ಕಳನ್ನು ನೀನೇ ತೆಗೆದುಹಾಕಿದಿ ಎಂದು ಹೇಳುತ್ತಾರೆ.
13 Assim diz o Senhor Jeová : Visto como vos dizem: Tu és uma terra que devora os homens e és uma terra que desfilha os seus povos;
14 ಆದರೆ ಇನ್ನು ಮುಂದೆ ನೀನು ಜನರನ್ನು ನಾಶಮಾಡುವುದಿಲ್ಲ. ಅವರ ಮಕ್ಕಳನ್ನು ನೀನು ತೆಗೆದುಬಿಡುವುದಿಲ್ಲ.” ಇದು ಒಡೆಯನಾದ ಯೆಹೋವನ ನುಡಿ.
14 por isso, tu não devorarás mais os homens, nem desfilharás mais os teus povos, diz o Senhor Jeová .
15 “ನಾನು ಆ ಜನಾಂಗಗಳು ಇನ್ನು ಮೇಲೆ ನಿನ್ನನ್ನು ತುಚ್ಛೀಕರಿಸಲು ಬಿಡುವದಿಲ್ಲ. ಅವರ ಮಾತುಗಳಿಂದ ಇನ್ನು ನೀನು ಬೇಸರಪಟ್ಟುಕೊಳ್ಳಲಾರೆ. ನಿನ್ನ ಜನರಿಂದ ಮಕ್ಕಳನ್ನು ಕಿತ್ತುಕೊಳ್ಳಲಾರೆ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
15 E farei que nunca mais se ouça em ti a afronta dos gentios; e não levarás mais sobre ti o opróbrio das nações, nem mais desfilharás a tua nação, diz o Senhor Jeová .
16 ಯೆಹೋವನ ಸಂದೇಶ ನನಗೆ ಬಂತು. ಆತನು ಹೇಳಿದ್ದೇನೆಂದರೆ,
16 E veio a mim a palavra do Senhor , dizendo:
17 “ನರಪುತ್ರನೇ, ಇಸ್ರೇಲ್ ಜನಾಂಗವು ತನ್ನ ಸಬದೇಶದಲ್ಲಿ ವಾಸಿಸಿತು. ಆದರೆ ಅವರು ನಡೆಸಿದ ದುಷ್ಟತನದಿಂದ ದೇಶವನ್ನು ಮುಟ್ಟಾದ ಸ್ತ್ರೀಯಂತೆ ಅಶುದ್ಧಗೊಳಿಸಿದರು.
17 Filho do homem, quando a casa de Israel habitava na sua terra, então, a contaminaram com os seus caminhos e com as suas ações; como a imundícia de uma mulher em sua separação, tal era o seu caminho perante o meu rosto.
18 ಆ ದೇಶದಲ್ಲಿ ಜನರನ್ನು ಕೊಲೆಮಾಡಿ ಅವರ ರಕ್ತವನ್ನು ನೆಲದ ಮೇಲೆ ಸುರಿದರು. ತಮ್ಮ ವಿಗ್ರಹಗಳಿಂದ ದೇಶವನ್ನು ಹೊಲಸು ಮಾಡಿದರು. ಆದ್ದರಿಂದ ನಾನು ಎಷ್ಟು ಸಿಟ್ಟುಗೊಂಡಿದ್ದೇನೆ ಎಂಬುದನ್ನು ನಾನು ತೋರಿಸಿದೆನು.
18 Derramei, pois, o meu furor sobre eles, por causa do sangue que derramaram sobre a terra e dos seus ídolos com que a contaminaram.
19 ದೇಶಾಂತರಕ್ಕೆ ಅವರನ್ನು ಚದರಿಸಿ, ಎಲ್ಲಾ ದೇಶಗಳಲ್ಲಿ ಅವರನ್ನು ಹರಡಿಸಿಬಿಟ್ಟೆನು. ಅವರು ಮಾಡಿದ ದುಷ್ಟತನಕ್ಕೆ ನಾನು ಶಿಕ್ಷಿಸಿದೆನು.
19 E os espalhei entre as nações, e foram espalhados pelas terras; conforme os seus caminhos e conforme os seus feitos, eu os julguei.
20 ಆ ದೇಶಗಳಲ್ಲಿರುವಾಗಲೂ ಅವರು ನನ್ನ ಹೆಸರಿಗೆ ಅಪಕೀರ್ತಿ ತಂದರು. ಹೇಗೆ? ‘ಇವರು ಯೆಹೋವನ ಜನರು. ಆತನು ಕೊಟ್ಟ ದೇಶವನ್ನು ಇವರು ತೊರೆದರು.’ ಎಂದು ಆ ದೇಶದ ಜನರು ಅನ್ನುವಂತೆ ಮಾಡಿದರು.
20 E, chegando às nações para onde foram, profanaram o meu santo nome, pois se dizia deles: Estes são o povo do Senhor e saíram da sua terra.
21 “ಇಸ್ರೇಲರು ತಾವು ಹೋದ ದೇಶಗಳಲ್ಲೆಲ್ಲಾ ನನ್ನ ಹೆಸರಿಗೆ ಅವಮಾನ ಮಾಡಿದರು. ಆದ್ದರಿಂದ ನನ್ನ ಹೆಸರನ್ನು ಕುರಿತಾಗಿ ದುಃಖಪಟ್ಟೆನು.
21 Mas eu os poupei por amor do meu santo nome, que a casa de Israel profanou entre as nações para onde foi.
22 ಆದ್ದರಿಂದ ಇಸ್ರೇಲರಿಗೆ ಹೀಗೆ ಹೇಳು: ‘ಇಸ್ರೇಲರೇ, ನೀವು ಹೋದ ಕಡೆಗಳಲ್ಲೆಲ್ಲಾ ನನ್ನ ಹೆಸರಿಗೆ ಅವಮಾನ ಮಾಡಿದ್ದೀರಿ. ನಾನು ಇದನ್ನು ನಿಲ್ಲಿಸುವುದಕ್ಕೆ ಎನುಬೇಕಾದರೂ ಮಾಡುತ್ತೇನೆ. ಇಸ್ರೇಲೇ, ನಾನು ಈ ಕಾರ್ಯವನ್ನು ನಿನ್ನ ಹೆಸರಿಗೋಸ್ಕರ ಮಾಡದೆ ನನ್ನ ಪರಿಶುದ್ಧ ಹೆಸರಿನ ನಿಮಿತ್ತ ನಾನು ಮಾಡುತ್ತೇನೆ.
22 Dize, portanto, à casa de Israel: Assim diz o Senhor Jeová : Não é por vosso respeito que eu faço isto, ó casa de Israel, mas pelo meu santo nome, que profanaste entre as nações para onde vós fostes.
23 ನನ್ನ ಹೆಸರು ಅತ್ಯಂತ ಪವಿತ್ರವಾದದ್ದು ಎಂದು ನಾನು ಅವರಿಗೆ ತೋರಿಸುವೆನು. ನನ್ನ ಪವಿತ್ರ ನಾಮವನ್ನು ಆ ದೇಶಗಳಲ್ಲಿ ಅವಮಾನಪಡಿಸಿದಿರಿ. ಆದರೆ ನಾನು ಪವಿತ್ರನೆಂದು ನಿಮಗೆ ತೋರಿಸುತ್ತೇನೆ. ನನ್ನ ನಾಮವನ್ನು ಗೌರವಿಸಲು ನಾನು ನಿಮಗೆ ಕಲಿಸುವೆನು. ಆಗ ಆ ದೇಶದವರಿಗೆ ನಾನು ಯೆಹೋವನು ಎಂದು ಗೊತ್ತಾಗುವದು.’” ನನ್ನ ಒಡೆಯನಾದ ಯೆಹೋವನ ನುಡಿಗಳಿವು.
23 E eu santificarei o meu grande nome, que foi profanado entre as nações, o qual profanastes no meio delas; e as nações saberão que eu sou o Senhor , diz o Senhor Jeová , quando eu for santificado aos seus olhos.
24 ದೇವರು ಹೇಳಿದ್ದೇನೆಂದರೆ, “ನಾನು ಆ ದೇಶಗಳಿಂದ ನಿಮ್ಮನ್ನು ತೆಗೆದು, ನಿಮ್ಮನ್ನು ಒಟ್ಟುಗೂಡಿಸಿ ನಿಮ್ಮ ಸಬದೇಶಕ್ಕೆ ತಿರುಗಿ ಬರಮಾಡುವೆನು.
24 E vos tomarei dentre as nações, e vos congregarei de todos os países, e vos trarei para a vossa terra.
25 ಆಗ ನಾನು ಶುದ್ಧ ನೀರನ್ನು ನಿಮ್ಮ ಮೇಲೆ ಚಿಮುಕಿಸಿ ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡುವೆನು. ಆ ವಿಗ್ರಹಗಳ ಹೊಲಸನ್ನು ನಿಮ್ಮಿಂದ ನಾನು ತೊಳೆದುಹಾಕಿ ನಿಮ್ಮನ್ನು ಶುದ್ಧರನ್ನಾಗಿ ಮಾಡುವೆನು.”
25 Então, espalharei água pura sobre vós, e ficareis purificados; de todas as vossas imundícias e de todos os vossos ídolos vos purificarei.
26 ದೇವರು ಹೇಳಿದ್ದೇನೆಂದರೆ, “ನಾನು ನಿಮ್ಮಲ್ಲಿ ಒಂದು ಹೊಸ ಆತ್ಮವನ್ನಿಟ್ಟು ನಿಮ್ಮ ಯೋಚನೆಯ ರೀತಿಯನ್ನು ಬದಲಾಯಿಸುವೆನು. ನಿಮ್ಮ ಕಲ್ಲಿನ ಹೃದಯವನ್ನು ತೆಗೆದುಬಿಟ್ಟು ಮೃದುವಾದ ಮಾನವ ಹೃದಯವನ್ನು ಕೊಡುವೆನು.
26 E vos darei um coração novo e porei dentro de vós um espírito novo; e tirarei o coração de pedra da vossa carne e vos darei um coração de carne.
27 ನಾನು ನನ್ನ ಆತ್ಮವನ್ನು ನಿಮ್ಮಲ್ಲಿರಿಸುವೆನು. ನೀವು ನನ್ನ ನಿಯಮಗಳಿಗೆ ವಿಧೇಯರಾಗುವಷ್ಟು ನಿಮ್ಮ ಮನಸ್ಸನ್ನು ಬದಲಾಯಿಸುವೆನು. ಆಗ ನೀವು ನನ್ನ ಆಜ್ಞೆಗಳನ್ನು ಜಾಗ್ರತೆಯಿಂದ ಪಾಲಿಸುವಿರಿ.
27 E porei dentro de vós o meu espírito e farei que andeis nos meus estatutos, e guardeis os meus juízos, e os observeis.
28 ಆಗ ನಾನು ನಿಮ್ಮ ಪೂರ್ವಿಕರಿಗೆ ಕೊಟ್ಟ ದೇಶದಲ್ಲಿ ನೀವು ಬಾಳುವಿರಿ. ನೀನು ನನ್ನ ಜನರಾಗುವಿರಿ. ನಾನು ನಿಮ್ಮ ದೇವರಾಗಿರುವೆನು.”
28 E habitareis na terra que eu dei a vossos pais, e vós me sereis por povo, e eu vos serei por Deus.
29 ದೇವರು ಹೇಳಿದ್ದೇನೆಂದರೆ, “ಅದೇ ಸಮಯದಲ್ಲಿ ನೀನು ಅಶುದ್ಧರಾಗದ ಹಾಗೇ ನಾನು ನೋಡಿಕೊಳ್ಳುವೆನು. ಬೀಜ ಬೆಳೆಯಲು ನಾನು ಆಜ್ಞಾಪಿಸುವೆನು. ನಿಮಗೆ ಹಸಿವೆಯಾಗಲು ಬಿಡುವದಿಲ್ಲ.
29 E vos livrarei de todas as vossas imundícias; e chamarei o trigo, e o multiplicarei, e não trarei fome sobre vós.
30 ನಿಮ್ಮ ಮರಗಳಿಂದ ಯಥೇಚ್ಛವಾಗಿ ಹಣ್ಣು ದೊರಕುವಂತೆ ಮಾಡುವೆನು. ಹೊಲಗಳು ಒಳ್ಳೆಯ ಬೆಳೆಗಳನ್ನು ಕೊಡುವಂತೆ ಮಾಡಿ ನೀವು ಅನ್ಯದೇಶದಲ್ಲಿ ಹಸಿವಿನಿಂದ ನರಳುವ ದಿವಸಗಳು ತಿರುಗಿ ಬಾರದಂತೆ ಮಾಡುವೆನು.
30 E multiplicarei o fruto das árvores e a novidade do campo, para que nunca mais recebais o opróbrio da fome entre as nações.
31 ನೀವು ಮಾಡಿದ ದುಷ್ಟತನವನ್ನು ನೀವು ಜ್ಞಾಪಿಸಿಕೊಳ್ಳುವಿರಿ. ಅವುಗಳು ಒಳ್ಳೆಯದಲ್ಲ ಎಂಬುದನ್ನು ಅರಿತುಕೊಳ್ಳುವಿರಿ. ಆಗ ನೀವು ಮಾಡಿದ ಪಾಪಕೃತ್ಯಗಳಿಗಾಗಿ ನಿಮ್ಮನ್ನೆ ನೀವು ಅಸಹ್ಯಪಟ್ಟುಕೊಳ್ಳುವಿರಿ.”
31 Então, vos lembrareis dos vossos maus caminhos e dos vossos feitos, que não foram bons; e tereis nojo em vós mesmos das vossas maldades e das vossas abominações.
32 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನೀವು ಇದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ನಾನು ಈ ಕಾರ್ಯಗಳನ್ನು ನಿಮಗಾಗಿ ಮಾಡದೆ ನನ್ನ ನಾಮದ ಬನತೆಗಾಗಿ ಮಾಡುತ್ತಿದ್ದೇನೆ. ಇಸ್ರೇಲ್ ಜನರೇ, ನಿಮ್ಮ ಜೀವಿತದ ಕುರಿತಾಗಿ ನೀವು ನಾಚಿಕೆಯಿಂದ ವ್ಯಸನಪಡುವವರಾಗಿರಬೇಕು.”
32 Não é por amor de vós que eu faço isso, diz o Senhor Jeová ; notório vos seja: envergonhai-vos e confundi-vos pelos vossos caminhos, ó casa de Israel.
33 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನಾನು ನಿಮ್ಮನ್ನು ನಿಮ್ಮ ಪಾಪಗಳಿಂದ ಶುದ್ಧೀಕರಿಸುವ ದಿನದಲ್ಲಿ ನಿಮ್ಮ ಪಟ್ಟಣಗಳನ್ನು ಪುನರ್ ಸ್ಥಾಪಿಸುವೆನು. ನಾನು ಹಾಳುಬಿದ್ದ ಕಟ್ಟಡಗಳನ್ನು ಮತ್ತೆ ಕಟ್ಟುವೆನು.
33 Assim diz o Senhor Jeová : No dia em que eu vos purificar de todas as vossas maldades, então, farei com que sejam habitadas as cidades e sejam edificados os lugares devastados.
34 ಜನರು ಹೊಲದಲ್ಲಿ ತಿರುಗಿ ಕೆಲಸ ಮಾಡಲು ಪ್ರಾರಂಭಿಸುವರು. ದಾಟಿಹೋಗುವ ಜನರು ಇನ್ನು ಮೇಲೆ ಪಾಳುಬಿದ್ದ ಕುರುಹುಗಳನ್ನು ಕಾಣರು.
34 E a terra assolada se lavrará, em vez de estar assolada aos olhos de todos os que passam.
35 ‘ಹಿಂದಿನ ಕಾಲದಲ್ಲಿ ದೇಶವು ಹಾಳಾಗಿ ಹೋಗಿತ್ತು. ಈಗ ಇದು ಏದೆನ್ ತೋಟದಂತಿದೆ. ಪಟ್ಟಣಗಳು ನಾಶವಾಗಿದ್ದವು, ಬರಿದಾಗಿದ್ದವು. ಈಗಲಾದರೋ ಅವು ಸುರಕ್ಷಿತವಾಗಿದ್ದು ಜನಭರಿತವಾಗಿವೆ’” ಎಂದು ಜನರು ಅನ್ನುವರು.
35 E dirão: Esta terra assolada ficou como jardim do Éden; e as cidades solitárias, e assoladas, e destruídas estão fortalecidas e habitadas.
36 ದೇವರು ಹೇಳುವುದೇನೆಂದರೆ, “ಯೆಹೋವನಾದ ನಾನೇ ಹಾಳುಬಿದ್ದ ಆ ಕಟ್ಟಡಗಳನ್ನು ಮತ್ತೆ ಕಟ್ಟಿದೆನೆಂದೂ ಮತ್ತು ಬರಿದಾಗಿದ್ದ ಈ ದೇಶದಲ್ಲಿ ಬೆಳೆಯಿಸುವೆನೆಂದೂ ನಿನ್ನ ಸುತ್ತಲೂ ಇನ್ನೂ ಇರುವ ಜನಾಂಗಗಳು ತಿಳಿದುಕೊಳ್ಳುವವು. ನಾನೇ ಯೆಹೋವನು. ಇವುಗಳನ್ನು ನಾನೇ ಹೇಳಿದ್ದೇನೆ ಮತ್ತು ನಾನೇ ಇವುಗಳನ್ನು ನೆರವೇರಿಸುವೆನು.”
36 Então, saberão as nações que ficarem de resto em redor de vós que eu, o Senhor , tenho reedificado as cidades destruídas e plantado o que estava devastado; eu, o Senhor , o disse e o farei.
37 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಇಸ್ರೇಲ್ ಜನರು ನನ್ನ ಬಳಿಗೆ ಬಂದು ಹೀಗೆ ಮಾಡಬೇಕೆಂದು ನನ್ನನ್ನು ಕೇಳಿಕೊಳ್ಳಲು ಅವಕಾಶ ಕೊಡುವೆನು. ನಾನು ಅವರನ್ನು ಅಭಿವೃದ್ಧಿಪಡಿಸಿ ಅವರ ಸಂಖ್ಯೆಯನ್ನು ಕುರಿಹಿಂಡಿನೋಪಾದಿಯಲ್ಲಿ ಹೆಚ್ಚಿಸುವೆನು.
37 Assim diz o Senhor Jeová : Ainda por isso me pedirá a casa de Israel, que lho faça: multiplicar-lhes-ei os homens, como a um rebanho.
38 ಹಬ್ಬದ ದಿವಸಗಳಲ್ಲಿ ಜೆರುಸಲೇಮ್ ಪರಿಶುದ್ಧಮಾಡಲ್ಪಟ್ಟ ಮಂದೆಗಳಿಂದ ತುಂಬಿಹೋಗುವಂತೆ ಜನರು ಹಾಳುಬಿದ್ದಿದ್ದ ನಗರ ಪಟ್ಟಣಗಳಲ್ಲಿ ತುಂಬಿಕೊಳ್ಳುವರು. ಆಗ ನಾನೇ ದೇವರಾದ ಯೆಹೋವನು ಎಂದು ಅವರು ತಿಳಿದುಕೊಳ್ಳುವರು.”
38 Como o rebanho santificado, como o rebanho de Jerusalém nas suas solenidades, assim as cidades desertas se encherão de famílias; e saberão que eu sou o Senhor .

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Ezequiel 36, comparar traduções ou montar um estudo — tudo direto pelo WhatsApp.