Ezequiel 12
ಪವಿತ್ರ ಬೈಬಲ್, ಈಸಿ ಓದುವಿಕೆ ಆವೃತ್ತಿ (KAN2010) vs ACF
1 ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ:
1 E veio a mim a palavra do SENHOR, dizendo:
2 “ನರಪುತ್ರನೇ, ನೀನು ದಂಗೆಕೋರರ ಮಧ್ಯೆ ವಾಸಿಸುತ್ತೀ. ಅವರಿಗೆ ಕಣ್ಣಿದ್ದರೂ ನೋಡುವದಿಲ್ಲ; ಅವರಿಗೆ ಕಿವಿಗಳಿದ್ದರೂ ಕೇಳುವದಿಲ್ಲ; ಯಾಕೆಂದರೆ ಅವರು ದಂಗೆಕೋರರಾಗಿದ್ದಾರೆ.
2 Filho do homem, tu habitas no meio da casa rebelde, que tem olhos para ver e não vê, e tem ouvidos para ouvir e não ouve; porque eles são casa rebelde.
3 ಆದ್ದರಿಂದ ನರಪುತ್ರನೇ, ನಿನ್ನ ಚೀಲಗಳನ್ನು ತುಂಬಿಸಿ ಸೆರೆಯಾಳಾಗಿ ಹೋಗುವವನಂತೆ ನಟಿಸು. ನೀನು ಹಗಲಲ್ಲಿ ಹೋಗುವುದನ್ನು ಜನರು ನೋಡಲಿ. ಸೆರೆಯಾಳಿನಂತೆ ಅವರ ಕಣ್ಣೆದುರಿನಲ್ಲೆ ನಿನ್ನ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗು. ಒಂದುವೇಳೆ ಅವರು ತಾವು ದಂಗೆಕೋರರೆಂದು ತಿಳಿದುಕೊಳ್ಳಬಹುದು.
3 Tu, pois, ó filho do homem, prepara mobílias para mudares, e de dia muda aos olhos deles; e do teu lugar mudarás para outro lugar aos olhos deles; bem pode ser que reparem nisso, ainda que eles são casa rebelde.
4 “ಸೆರೆಯಾಳಾಗಿ ಹೋಗುವವನಂತೆ ಹಗಲಲ್ಲಿ ನಿನ್ನ ಚೀಲಗಳನ್ನು ಹೊರಗೆ ತೆಗೆದುಕೊಂಡು ಬಾ. ಸಾಯಂಕಾಲವಾದಾಗ ಅವರ ಕಣ್ಣೆದುರಿನಲ್ಲಿಯೇ ನೀನು ದೂರದೇಶಕ್ಕೆ ಸೆರೆಯವನಾಗಿ ಹೋಗುವವನಂತೆ ನಟನೆ ಮಾಡು.
4 Aos olhos deles, pois, tirarás para fora, de dia, as tuas mobílias, como quem vai mudar; então tu sairás de tarde aos olhos deles, como quem sai mudando para o cativeiro.
5 ಜನರು ನಿನ್ನನ್ನು ನೋಡುತ್ತಿರುವಾಗ ಗೋಡೆಯಲ್ಲಿ ರಂಧ್ರ ಮಾಡಿ ಅದರಿಂದ ನುಸುಳಿ ಹೊರಗೆ ಹೋಗು.
5 Faze para ti, à vista deles, uma abertura na parede, e tira-as para fora, por ali.
6 ರಾತ್ರಿಕಾಲದಲ್ಲಿ ಚೀಲವನ್ನು ಹೆಗಲಿಗೇರಿಸಿ ಹೊರಗೆ ನಡಿ. ನೀನು ನೆಲವನ್ನು ನೋಡಲಾಗದಂತೆ ನಿನ್ನ ಮುಖವನ್ನು ಮುಚ್ಚಿಕೋ. ಇದೆಲ್ಲಾ ಮಾಡುವಾಗ ಜನರು ನಿನ್ನನ್ನು ನೋಡುತ್ತಿರಬೇಕು. ಯಾಕೆಂದರೆ ನಿನ್ನನ್ನು ನಾನು ಇಸ್ರೇಲರಿಗೆ ಒಂದು ನಿದರ್ಶನವಾಗಿ ಉಪಯೋಗಿಸುತ್ತಿದ್ದೇನೆ.”
6 Aos olhos deles, nos seus ombros, às escuras as tirarás, e cobrirás o teu rosto, para que não vejas a terra; porque te dei por sinal à casa de Israel.
7 ಹೀಗೆ ನನಗೆ ಆಜ್ಞಾಪಿಸಿದ ಪ್ರಕಾರ ಮಾಡಿದೆನು. ನಾನು ಸೆರೆಯಾಳಿನಂತೆ ಹಗಲಲ್ಲಿ ಚೀಲಗಳನ್ನು ತಂದು ಹೊರಗಿಟ್ಟೆನು. ಸಾಯಂಕಾಲ ನನ್ನ ಕೈಗಳಿಂದ ಗೋಡೆಯಲ್ಲಿ ರಂಧ್ರ ಮಾಡಿ, ರಾತ್ರಿಕಾಲದಲ್ಲಿ ಆ ಚೀಲಗಳನ್ನು ಹೆಗಲ ಮೇಲೆ ಹೊತ್ತು ಹೊರಟೆನು. ಜನರು ನನ್ನನ್ನು ಗಮನಿಸುತ್ತಿರುವಾಗಲೇ ನಾನೆಲ್ಲಾ ಮಾಡಿದೆನು.
7 E fiz assim, como se me deu ordem; as minhas mobílias tirei para fora de dia, como mobílias do cativeiro; então à tarde fiz, com a mão, uma abertura na parede; às escuras as tirei para fora, e nos meus ombros as levei, aos olhos deles.
8 ಮರುದಿನ ಬೆಳಿಗ್ಗೆ ಯೆಹೋವನ ಸಂದೇಶವು ನನಗೆ ಬಂತು. ಆತನು ಹೀಗೆ ಅಂದನು:
8 E, pela manhã, veio a mim a palavra do Senhor, dizendo:
9 “ನರಪುತ್ರನೇ, ನೀನು ಏನು ಮಾಡುತ್ತಿರುವೆ ಎಂದು ಇಸ್ರೇಲಿನ ಈ ದಂಗೆಕೋರರು ನಿನ್ನನ್ನು ಕೇಳಲಿಲ್ಲವೇ?
9 Filho do homem, porventura não te disse a casa de Israel, aquela casa rebelde: Que fazes tu?
10 ಅವರ ಒಡೆಯನಾದ ಯೆಹೋವನು ಇದನ್ನೆಲ್ಲಾ ಹೇಳಿದನು ಎಂದು ಅವರಿಗೆ ತಿಳಿಸು. ಈ ಸಂದೇಶವು ಜೆರುಸಲೇಮಿನ ನಾಯಕರ ಮತ್ತು ಅಲ್ಲಿ ವಾಸಿಸುವ ಇಸ್ರೇಲ್ ಜನರೆಲ್ಲರ ಕುರಿತಾಗಿದೆ.
10 Dize-lhes: Assim diz o Senhor DEUS: Esta carga refere-se ao príncipe em Jerusalém, e a toda a casa de Israel, que está no meio dela.
11 ‘ನೀನು ಅವರಿಗೆ ಹೀಗೆ ಹೇಳು: ನಾನು ನಿಮಗೆ ಒಂದು ಸೂಚನೆಯಾಗಿದ್ದೇನೆ. ನಾನು ಮಾಡಿದ ಸೂಚಕಕಾರ್ಯ ಖಂಡಿತವಾಗಿ ನಿಮಗೆ ಸಂಭವಿಸುವುದು. ನೀವು ದೂರದೇಶಕ್ಕೆ ಸೆರೆಯಾಳುಗಳಾಗಿ ಹೋಗುವಿರಿ.’
11 Dize: Eu sou o vosso sinal. Assim como eu fiz, assim se lhes fará a eles; irão para o exílio em cativeiro.
12 ನಿಮ್ಮ ನಾಯಕನು ಗೋಡೆಯಲ್ಲಿ ರಂಧ್ರ ಮಾಡಿ ರಾತ್ರಿ ಕಾಲದಲ್ಲಿ ಅದರಲ್ಲಿ ನುಸುಳಿ ಪಾರಾಗುವನು. ಜನರು ತನ್ನನ್ನು ಗುರುತಿಸದಂತೆ ತನ್ನ ಮುಖವನ್ನು ಮುಚ್ಚಿಕೊಳ್ಳುವನು. ಅವನು ಯಾವ ಕಡೆಗೆ ಹೋಗುತ್ತಿದ್ದಾನೆಂದು ಅವನ ಕಣ್ಣುಗಳಿಗೆ ಕಾಣಿಸದು.
12 E o príncipe que está no meio deles levará aos ombros as mobílias, e às escuras sairá; farão uma abertura na parede para as tirarem por ela; o seu rosto cobrirá, para que com os seus olhos não veja a terra.
13 ಅವನು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುವನು. ಆದರೆ, ನಾನು (ಯೆಹೋವನು) ಅವನನ್ನು ಹಿಡಿಯುವೆನು. ಅವನು ನನ್ನ ಬಲೆಯೊಳಗೆ ಬೀಳುವನು. ನಾನು ಅವನನ್ನು ಕಸ್ದೀಯರ ದೇಶವಾದ ಬಾಬಿಲೋನಿಗೆ ತರುವೆನು. ಅವನು ಆ ದೇಶವನ್ನು ನೋಡುವುದಿಲ್ಲ; ಅಲ್ಲದೆ ಅವನು ಅಲ್ಲಿ ಸಾಯುವನು.
13 Também estenderei a minha rede sobre ele, e será apanhado no meu laço; e o levarei à babilônia, à terra dos caldeus, e contudo não a verá, ainda que ali morrerá.
14 ಅವನ ಸುತ್ತಲೂ ಇರುವವರನ್ನೆಲ್ಲ ನಾನು ಸುತ್ತಮುತ್ತಲಿನ ದೇಶಗಳಿಗೆ ಓಡಿಸಿಬಿಡುವೆನು. ಅವನ ಕೆಲಸಗಾರರನ್ನು ಮತ್ತು ಅವನ ಸೈನ್ಯವನ್ನು ಗಾಳಿಗೆ ತೂರಿಬಿಡುವೆನು. ಮತ್ತು ಅವರನ್ನು ಖಡ್ಗದೊಡನೆ ಬೆನ್ನಟ್ಟುವೆನು.
14 E a todos os ventos espalharei os que estiverem ao redor dele para seu socorro, e a todas as suas tropas; e desembainharei a espada atrás deles.
15 ನಾನೇ ಯೆಹೋವನೆಂದು ಆಗ ಜನರು ತಿಳಿದುಕೊಳ್ಳುವರು; ಯಾಕೆಂದರೆ ನಾನು ಅವರನ್ನು ಜನಾಂಗಗಳ ಮಧ್ಯದಲ್ಲಿ ಚದರಿಸಿದ್ದೇನೆ ಮತ್ತು ಬೇರೆ ದೇಶಗಳಿಗೆ ಓಡಿಸಿದ್ದೇನೆ.
15 Assim saberão que eu sou o Senhor, quando eu os dispersar entre as nações e os espalhar pelas terras.
16 “ಆದರೆ ನಾನು ಅವರಲ್ಲಿ ಕೆಲವರನ್ನು ಯುದ್ಧಗಳಿಂದ, ಬರಗಾಲಗಳಿಂದ ಮತ್ತು ರೋಗಗಳಿಂದ ಉಳಿಸುವೆನು. ಅವರು ತಾವು ಹೋಗುವ ದೇಶಗಳಲ್ಲಿನ ಜನರಿಗೆ ತಮ್ಮ ಅಸಹ್ಯವಾದ ಆಚರಣೆಗಳ ಕುರಿತು ಹೇಳಲಾಗುವಂತೆ ನಾನು ಇದನ್ನು ಮಾಡುತ್ತೇನೆ. ನಾನೇ ಯೆಹೋವನೆಂದು ಆಗ ಅವರು ತಿಳಿದುಕೊಳ್ಳುವರು.”
16 Mas deles deixarei ficar alguns poucos, escapos da espada, da fome, e da peste, para que contem todas as suas abominações entre as nações para onde forem; e saberão que eu sou o Senhor.
17 ಆಗ ಯೆಹೋವನ ವಾಕ್ಯವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ,
17 Então veio a mim a palavra do Senhor, dizendo:
18 “ನರಪುತ್ರನೇ, ನೀನು ಭೀತಿಯಲ್ಲಿರುವವನಂತೆ ನಟನೆ ಮಾಡಬೇಕು. ನೀನು ಆಹಾರ ತೆಗೆದುಕೊಳ್ಳುವಾಗ ನಡುಗಬೇಕು. ನೀರು ಕುಡಿಯುವಾಗ ಭಯಪಡಬೇಕು ಮತ್ತು ಚಿಂತಿಸಬೇಕು.
18 Filho do homem, o teu pão comerás com tremor, e a tua água beberás com estremecimento e com receio.
19 ಇದನ್ನು ನೀನು ಸಾಮಾನ್ಯ ಜನರಿಗೆ ತಿಳಿಸಬೇಕು. ನೀನು ಹೀಗೆ ಹೇಳಬೇಕು, ‘ಇನ್ನೂ ಇಸ್ರೇಲ್ ದೇಶದಲ್ಲಿರುವ ಜೆರುಸಲೇಮಿನ ನಿವಾಸಿಗಳ ಬಗ್ಗೆ ನಮ್ಮ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ಅವರು ಊಟಮಾಡುವಾಗ ಉದೆಬಗದಿಂದಿರುವರು; ಅವರು ಕುಡಿಯುವಾಗ ಭಯದಿಂದಿರುವರು. ಯಾಕೆಂದರೆ ಅವರ ದೇಶದಲ್ಲಿರುವ ಸಮಸ್ತವು ನಾಶವಾಗುತ್ತದೆ, ಯಾಕೆಂದರೆ ಅಲ್ಲಿ ವಾಸಿಸುವವರೆಲ್ಲರೂ ಹಿಂಸಕರಾಗಿದ್ದಾರೆ.
19 E dirás ao povo da terra: Assim diz o Senhor DEUS acerca dos habitantes de Jerusalém, na terra de Israel: O seu pão comerão com receio, e a sua água beberão com susto, pois a sua terra será despojada de sua abundância, por causa da violência de todos os que nela habitam.
20 ಜನರು ವಾಸವಾಗಿರುವ ಪಟ್ಟಣಗಳು ನಾಶವಾಗುತ್ತವೆ; ಇಡೀ ದೇಶವೇ ನಾಶವಾಗುತ್ತದೆ. ನಾನೇ ಯೆಹೋವನೆಂದು ಆಗ ನಿಮಗೆ ತಿಳಿಯುವುದು.’”
20 E as cidades habitadas serão devastadas, e a terra se tornará em desolação; e sabereis que eu sou o Senhor.
21 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ,
21 E veio ainda a mim a palavra do Senhor, dizendo:
22 “ನರಪುತ್ರನೇ,
22 Filho do homem, que provérbio é este que vós tendes na terra de Israel, dizendo: Prolongar-se-ão os dias, e perecerá toda a visão?
23 “ಆ ಜನರಿಗೆ ಹೀಗೆ ಹೇಳು: ಅವರ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ಈ ಗಾದೆಗೆ ಅಂತ್ಯವನ್ನು ಬರಮಾಡುವೆನು. ಇಸ್ರೇಲಿನಲ್ಲಿ ಆ ಗಾದೆಯನ್ನು ಅವರು ಇನ್ನೆಂದಿಗೂ ಬಳಸುವುದಿಲ್ಲ. ಅದರ ಬದಲಾಗಿ ಅವರಿಗೆ ಹೀಗೆ ಹೇಳು:
23 Portanto, dize-lhes: Assim diz o Senhor DEUS: Farei cessar este provérbio, e já não se servirão mais dele em Israel; mas dize-lhes: Os dias estão próximos e o cumprimento de toda a visão.
24 “ಇಸ್ರೇಲಿನಲ್ಲಿ ಇನ್ನು ಮೇಲೆ ಸುಳ್ಳುದರ್ಶನಗಳಿರುವುದಿಲ್ಲ; ಮುಖಸ್ತುತಿಯ ಕಣಿಯೂ ಇರುವುದಿಲ್ಲ.
24 Porque não haverá mais alguma visão vã, nem adivinhação lisonjeira, no meio da casa de Israel.
25 ಯಾಕೆಂದರೆ ನಾನೇ ಯೆಹೋವನು. ನನಗೆ ಇಷ್ಟಬಂದದ್ದನ್ನು ನಾನು ಹೇಳುವೆನು ಮತ್ತು ಆ ಸಂಗತಿಯು ನೆರವೇರುವುದು. ಅದಕ್ಕೆ ಹೆಚ್ಚು ಸಮಯಬೇಕಾಗದು. ಆ ಸಂಕಟಗಳು ಬೇಗನೇ ಬರುವವು; ನಿಮ್ಮ ಜೀವಮಾನ ಕಾಲದಲ್ಲಿಯೇ ಬರುವವು. ಓ ದಂಗೆಕೋರರಾದ ಜನರೇ, ನಾನು ಒಂದು ವಿಷಯದಲ್ಲಿ ಏನಾದರೂ ಹೇಳಿದರೆ ಆ ವಿಷಯವು ಸಂಭವಿಸುವಂತೆ ಮಾಡುವೆನು.” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು.
25 Porque eu, o SENHOR, falarei, e a palavra que eu falar se cumprirá; não será mais adiada; porque em vossos dias, ó casa rebelde, falarei uma palavra e a cumprirei, diz o Senhor DEUS.
26 ಆಗ ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ,
26 Veio mais a mim a palavra do Senhor, dizendo:
27 “ನರಪುತ್ರನೇ, ನಿನಗೆ ನಾನು ಕೊಟ್ಟ ದರ್ಶನಗಳ ಕುರಿತು ಬಹಳ ಕಾಲದ ನಂತರ ಅದು ನೆರವೇರುವುದು ಎಂದು ಇಸ್ರೇಲರ ಜನರು ನೆನೆಸುತ್ತಿದ್ದಾರೆ.
27 Filho do homem, eis que os da casa de Israel dizem: A visão que este tem é para muitos dias, e ele profetiza de tempos que estão longe.
28 ಆದ್ದರಿಂದ ಅವರಿಗೆ ನೀನು ಈ ವಿಷಯವನ್ನು ತಿಳಿಸು, ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ: ಏನೆಂದರೆ ನಾನು ಇನ್ನು ಹೆಚ್ಚು ತಡಮಾಡುವುದಿಲ್ಲ. ನಾನೊಂದು ವಿಷಯವು ನೆರವೇರುವುದು ಎಂದು ಹೇಳಿದರೆ ಅದು ಖಂಡಿತ ನೆರವೇರುವುದು.’” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.
28 Portanto dize-lhes: Assim diz o Senhor DEUS: Não será mais adiada nenhuma das minhas palavras; e a palavra que falei se cumprirá, diz o Senhor DEUS.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Ezequiel 12, comparar traduções ou montar um estudo — tudo direto pelo WhatsApp.