1 Crônicas 20

ಪವಿತ್ರ ಬೈಬಲ್, ಈಸಿ ಓದುವಿಕೆ ಆವೃತ್ತಿ (KAN2010) vs VC

Sair da comparação
VC Versão Católica
1 ವಸಂತಕಾಲದಲ್ಲಿ ರಾಜರುಗಳು ಯುದ್ಧಕ್ಕೆ ಹೊರಡುವ ಸಮಯ. ಯೋವಾಬನೂ ತನ್ನ ಸೈನ್ಯದೊಂದಿಗೆ ಯುದ್ಧಕ್ಕೆ ಹೊರಟನು. ಆದರೆ ದಾವೀದನು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. ಇಸ್ರೇಲಿನ ಸೈನ್ಯವು ಅಮ್ಮೋನ್ ದೇಶದೊಳಗೆ ನುಗ್ಗಿ ಅದನ್ನು ನಾಶಮಾಡಿದರು. ಆಮೇಲೆ ರಬ್ಬ ಪಟ್ಟಣಕ್ಕೆ ಮುತ್ತಿಗೆಹಾಕಿ ಸಂಪೂರ್ಣವಾಗಿ ನಾಶಮಾಡಿದರು.
1 No ano seguinte, no tempo em que os reis costumavam ir para a guerra, Joab, à frente de um poderoso exército, devastou a terra dos amonitas e veio sitiar Raba. Joab conquistou Raba e a destruiu.
2 ಅದರ ಅರಸನ ಕಿರೀಟವನ್ನು ದಾವೀದನು ತೆಗೆದುಕೊಂಡನು. ಅದು ಎಪ್ಪತ್ತೈದು ಪೌಂಡು ಭಾರವುಳ್ಳದ್ದಾಗಿತ್ತು ಮತ್ತು ಅಮೂಲ್ಯವಾದ ರತ್ನಗಳಿಂದ ಮಾಡಿದ್ದಾಗಿತ್ತು. ಆ ಕಿರೀಟವನ್ನು ದಾವೀದನು ತನ್ನ ತಲೆಯ ಮೇಲೆ ಇಟ್ಟು ಕೊಂಡನು. ಆ ಪಟ್ಟಣದಿಂದ ಇನ್ನೂ ಅನೇಕ ಬೆಲೆಬಾಳುವ ವಸ್ತುಗಳನ್ನು ಸೂರೆ ಮಾಡಿದರು.
2 Davi tomou a coroa da cabeça de seu rei, a qual pesava um talento de ouro. Estava ornada com uma pedra preciosa; e ela foi colocada na cabeça de Davi. Levou também da cidade muitos despojos.
3 ದಾವೀದನು ರಬ್ಬದ ಜನರನ್ನು ಸೆರೆಹಿಡಿದುಕೊಂಡು ಬಂದು ಅವರನ್ನು ಮರಕಡಿಯುವುದಕ್ಕೂ ಕೊಡಲಿ ಮತ್ತು ಹಾರೆಗಳಿಂದ ಕೆಲಸ ಮಾಡುವದಕ್ಕೂ ನೇಮಿಸಿದನು. ಇದೇ ಪ್ರಕಾರ ದಾವೀದನು ಅಮ್ಮೋನಿಯರ ಎಲ್ಲಾ ಪಟ್ಟಣಗಳಲ್ಲಿಯೂ ಮಾಡಿದನು. ನಂತರ ದಾವೀದನು ತನ್ನ ಸೈನ್ಯದೊಂದಿಗೆ ಜೆರುಸಲೇಮಿಗೆ ಹಿಂತಿರುಗಿ ಬಂದನು.
3 Quanto ao povo que lá se encontrava, fê-lo sair, e colocou-o em trabalhos de serra, de picaretas de ferro e de machados. Fez o mesmo com todas as cidades dos amonitas. Em seguida, Davi voltou para Jerusalém com todo o seu exército.
4 ಇದಾದ ಬಳಿಕ ಇಸ್ರೇಲರು ಗೆಜೆರಿನಲ್ಲಿ ಫಿಲಿಷ್ಟಿಯರ ಜೊತೆಯಲ್ಲಿ ಯುದ್ಧಮಾಡಿದರು. ಹುಷಯದವನಾದ ಸಿಬ್ಬೆಕೈ ಎಂಬವನು, ದೈತ್ಯನ ಮಗನಾದ ಸಿಪ್ಪೈ ಎಂಬವನನ್ನು ಕೊಂದನು. ಇದರಿಂದಾಗಿ ಫಿಲಿಷ್ಟಿಯರು ಇಸ್ರೇಲರಿಗೆ ಸೇವೆಮಾಡುವವರಾದರು.
4 Depois disso, houve um combate em Gazer contra os filisteus. Então Sobocai, o husatita, matou Safai, um dos descendentes de Rafa, e os filisteus foram submetidos.
5 ಇನ್ನೊಂದು ಸಾರಿ, ಇಸ್ರೇಲರು ಫಿಲಿಷ್ಟಿಯರೊಂದಿಗೆ ತಿರುಗಿ ಯುದ್ಧಮಾಡುವಾಗ ಯಾಯೀರನ ಮಗನಾದ ಎಲ್ಹಾನಾನನು ಗೊಲ್ಯಾತನ ತಮ್ಮನಾದ ಲಹ್ಮೀಯನ್ನು ಕೊಂದನು. ಗೊಲ್ಯಾತನು ಗತ್ ಪಟ್ಟಣದವನಾಗಿದ್ದನು. ಲಹ್ಮೀಯ ಈಟಿಯು ಬಹು ಭಾರವಾಗಿತ್ತು. ಕೈಮಗ್ಗದ ದೊಡ್ಡ ಕುಂಟೆಯಂತಿತ್ತು.
5 Houve ainda uma batalha com os filisteus; e Elcanã, filho de Jair, matou Lacmi, irmão de Golias, de Get, que tinha uma lança cujo cabo parecia um cilindro de tecelões.
6 ಇದಾದನಂತರ ಇನ್ನೊಂದು ಯುದ್ಧವನ್ನು ಇಸ್ರೇಲರು ಫಿಲಿಷ್ಟಿಯರೊಂದಿಗೆ ಗತ್ ಊರಿನಲ್ಲಿ ಮಾಡಿದರು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನೂ ರೆಫಾಯನಾಗಿದ್ದನು.
6 Houve ainda um combate em Get. Lá havia um homem de alta estatura que tinha seis dedos em cada mão e em cada pé, ao todo vinte e quatro; também ele era da descendência de Rafa.
7 ಇವನು ಇಸ್ರೇಲರನ್ನು ಪರಿಹಾಸ್ಯ ಮಾಡಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.
7 Desafiou Israel, e Jônatas, filho de Sama, irmão de Davi, o matou.
8 ಗತ್ ಊರಿನ ರೆಫಾಯರನ್ನು ದಾವೀದನೂ ಅವನ ಜನರೂ ಕೊಂದುಹಾಕಿದರು.
8 Esses homens eram filhos de Rafa, em Get; pereceram pela mão de Davi e de seus servos.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 1 Crônicas 20, comparar traduções ou montar um estudo — tudo direto pelo WhatsApp.