Zacarias 9
Kannada Bible (GL_KANNADA) vs ARA
ARA Almeida Revista e Atualizada 1993
1 ಹದ್ರಾಕಿನ ದೇಶದ ವಿಷಯವಾದ ಕರ್ತನ ವಾಕ್ಯದ ಭಾರವು; ಅದು ದಮಸ್ಕದಲ್ಲಿ ತಂಗುವದು; ಮನುಷ್ಯನ ಕಣ್ಣುಗಳು ಇಸ್ರಾಯೇಲಿನ ಎಲ್ಲಾ ಗೋತ್ರಗಳಂತೆ ಕರ್ತನ ಕಡೆಗೆ ಇರುವವು.
1 A sentença pronunciada pelo Senhor é contra a terra de Hadraque e repousa sobre Damasco, porque o Senhor põe os olhos sobre os homens e sobre todas as tribos de Israel;
2 ಹಮಾತು ಬಹಳ ಜ್ಞಾನವಿರುವ ತೂರ್ ಚೀದೋನ್ ಸಹ ಅದರ ಮೇರೆಯಾಗಿದೆ.
2 também repousa sobre Hamate, que confina com ele, sobre Tiro e Sidom, cuja sabedoria é grande.
3 ತೂರ್ ತನಗಾಗಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ಧೂಳಿನಂತೆಯೂ ಚೊಕ್ಕ ಬಂಗಾರವನ್ನು ಬೀದಿಗಳ ಕೆಸರಿನಂತೆಯೂ ಕೂಡಿಸಿಕೊಂಡಿತು.
3 Tiro edificou para si fortalezas e amontoou prata como o pó e ouro, como a lama das ruas.
4 ಇಗೋ, ಕರ್ತನು ಅದನ್ನು ಹೊರಗೆ ಹಾಕುವನು; ಸಮುದ್ರದಲ್ಲಿ ಅದರ ಬಲವನ್ನು ಹೊಡೆಯುವನು; ಅದು ಬೆಂಕಿ ಯಿಂದ ದಹಿಸಲ್ಪಡುವದು.
4 Eis que o Senhor a despojará e precipitará no mar a sua força; e ela será consumida pelo fogo.
5 ಅಷ್ಕಲೋನು ನೋಡಿ ಭಯಪಡುವದು; ಗಾಜ ಸಹ ಅದನ್ನು ನೋಡಿ ಬಹಳವಾಗಿ ವೇದನೆಪಡುವದು, ಎಕ್ರೋನು ಸಹ; ಅದರ ನಿರೀಕ್ಷೆಯು ಅದನ್ನು ನಾಚಿಕೆ ಪಡಿಸಿತು; ಗಾಜ ದೊಳಗಿಂದ ಅರಸನು ನಾಶವಾಗುವನು; ಅಷ್ಕೆಲೋನು ನಿವಾಸವಿಲ್ಲದೆ ಇರುವದು.
5 Asquelom o verá e temerá; também Gaza e terá grande dor; igualmente Ecrom, porque a sua esperança será iludida; o rei de Gaza perecerá, e Asquelom não será habitada.
6 ಅಷ್ಡೋದಿನಲ್ಲಿ ಜಾರತ್ವ ದಿಂದ ಹುಟ್ಟಿದವನು ವಾಸವಾಗುತ್ತಾನೆ; ಫಿಲಿಷ್ಟಿಯರ ಗರ್ವವನ್ನು ನಾನು ತೆಗೆದುಬಿಡುವೆನು.
6 Povo bastardo habitará em Asdode, e exterminarei a soberba dos filisteus.
7 ಅವನ ರಕ್ತ ವನ್ನು ಅವನ ಬಾಯೊಳಗಿಂದಲೂ ಅವನ ಅಸಹ್ಯ ಗಳನ್ನು ಅವನ ಹಲ್ಲುಗಳ ನಡುವೆಯಿಂದಲೂ ನಾನು ತೆಗೆದುಹಾಕುವೆನು; ಅವನು ಸಹ ನಮ್ಮ ದೇವರಿಗಾಗಿ ಉಳಿಯುವನು; ಯೆಹೂದದಲ್ಲಿ ಪ್ರಭುವಿನ ಹಾಗೆ ಇರುವನು; ಎಕ್ರೋನು ಯೆಬೂಸಿಯನ ಹಾಗೆ ಇರು ವನು.
7 Da boca destes tirarei o sangue dos sacrifícios idólatras e, dentre os seus dentes, tais abominações; então, ficarão eles como um restante para o nosso Deus; e serão como chefes em Judá, e Ecrom, como jebuseu.
8 ಇದಲ್ಲದೆ ಹೋಗುತ್ತಾ ಬರುತ್ತಾ ಇರುವವನ ನಿಮಿತ್ತವೂ ಸೈನ್ಯದ ನಿಮಿತ್ತವೂ ನನ್ನ ಮನೆಯ ಹತ್ತಿರ ಪಾಳೆಯಮಾಡುತ್ತೇನೆ; ಇನ್ನು ಮೇಲೆ ಉಪದ್ರ ಕೊಡುವವನು ಅವರ ಮೇಲೆ ಹಾದು ಹೋಗುವದಿಲ್ಲ; ಯಾಕಂದರೆ ಈಗ ನನ್ನ ಕಣ್ಣುಗಳಿಂದ ನೋಡಿದ್ದೇನೆ.
8 Acampar-me-ei ao redor da minha casa para defendê-la contra forças militantes, para que ninguém passe, nem volte; que não passe mais sobre eles o opressor; porque, agora, vejo isso com os meus olhos.
9 ಚೀಯೋನ್ ಕುಮಾರ್ತೆಯೇ, ಬಹಳವಾಗಿ ಉಲ್ಲಾಸಪಡು; ಯೆರೂಸಲೇಮಿನ ಕುಮಾರ್ತೆಯೇ, ಆರ್ಭಟಿಸು; ಇಗೋ, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನೀತಿವಂತನಾಗಿಯೂ ರಕ್ಷಿಸುವಾತ ನಾಗಿಯೂ ದೀನನಾಗಿಯೂ ಕತ್ತೆಯ ಮೇಲೆ ಹೌದು, ಕತ್ತೆಯ ಮರಿಯ ಮೇಲೆ ಹತ್ತಿದವನಾಗಿಯೂ ಬರು ತ್ತಾನೆ.
9 Alegra-te muito, ó filha de Sião; exulta, ó filha de Jerusalém: eis aí te vem o teu Rei, justo e salvador, humilde, montado em jumento, num jumentinho, cria de jumenta.
10 ಇದಲ್ಲದೆ ಎಫ್ರಾಯಾಮಿನೊಳಗಿಂದ ರಥ ಗಳನ್ನೂ ಯೆರೂಸಲೇಮಿನೊಳಗಿಂದ ಕುದುರೆಗಳನ್ನೂ ತೆಗೆದುಬಿಡುವೆನು; ಯುದ್ಧದ ಬಿಲ್ಲು ಸಹ ತೆಗೆದು ಹಾಕಲ್ಪಡುವದು; ಆತನು ಅನ್ಯ ಜನಾಂಗಗಳಿಗೆ ಸಮಾ ಧಾನವನ್ನು ಹೇಳುವನು; ಆತನ ದೊರೆತನವು ಸಮುದ್ರ ದಿಂದ ಸಮುದ್ರಕ್ಕೂ ನದಿಯಿಂದ ಭೂಮಿಯ ಅಂತ್ಯಗಳ ವರೆಗೂ ಇರುವದು.
10 Destruirei os carros de Efraim e os cavalos de Jerusalém, e o arco de guerra será destruído. Ele anunciará paz às nações; o seu domínio se estenderá de mar a mar e desde o Eufrates até às extremidades da terra.
11 ನಿನ್ನ ವಿಷಯವಾಗಿ ಸಹ ನಿನ್ನ ಒಡಂಬಡಿಕೆಯ ರಕ್ತದಿಂದ, ನಿನ್ನ ಸೆರೆಯವರನ್ನು ನೀರಿಲ್ಲದ ಕುಣಿಯೊ ಳಗಿಂದ ಕಳುಹಿಸಿಬಿಡುತ್ತೇನೆ.
11 Quanto a ti, Sião, por causa do sangue da tua aliança, tirei os teus cativos da cova em que não havia água.
12 ನಿರೀಕ್ಷೆಯ ಸೆರೆಯವರೇ, ಬಲವಾದ ದುರ್ಗಸ್ಥಾನಕ್ಕೆ ತಿರಿಗಿರಿ, ಎರಡ ರಷ್ಟು ನಿಮಗೆ ಕೊಡುವೆನೆಂದು ಈ ಹೊತ್ತೇ ಪ್ರಕಟಿ ಸುತ್ತೇನೆ.
12 Voltai à fortaleza, ó presos de esperança; também, hoje, vos anuncio que tudo vos restituirei em dobro.
13 ಯೆಹೂದವನ್ನು ನನಗಾಗಿ ಬೊಗ್ಗಿಸಿದಾಗ ಎಫ್ರಾಯಾಮನ್ನು ಬಿಲ್ಲುಗಳಿಂದ ತುಂಬಿಸಿದ್ದೇನೆ; ಚೀಯೋನೇ, ನಿನ್ನ ಕುಮಾರರನ್ನು ಗ್ರೀಕ್ ಕುಮಾರರಿಗೆ ವಿರೋಧವಾಗಿ ಎಬ್ಬಿಸಿ ನಿನ್ನನ್ನು ಶೂರನ ಕತ್ತಿಯಂತೆ ಮಾಡಿದ್ದೇನೆ.
13 Porque para mim curvei Judá como um arco e o enchi de Efraim; suscitarei a teus filhos, ó Sião, contra os teus filhos, ó Grécia! E te porei, ó Sião, como a espada de um valente.
14 ಇದಲ್ಲದೆ ಕರ್ತನು ಅವರ ಮೇಲೆ ಕಾಣಿಸಿಕೊಳ್ಳುವನು; ಆತನ ಬಾಣಗಳು ಮಿಂಚಿನ ಹಾಗೆ ಹೊರಡುವವು; ಕರ್ತನಾದ ದೇವರು ತುತೂರಿ ಯನ್ನು ಊದಿ, ದಕ್ಷಿಣದ ಸುಳಿಗಾಳಿಯಲ್ಲಿ ಹೋಗು ವನು.
14 O Senhor será visto sobre os filhos de Sião, e as suas flechas sairão como o relâmpago; o Senhor Deus fará soar a trombeta e irá com os redemoinhos do Sul.
15 ಸೈನ್ಯಗಳ ಕರ್ತನು ಅವರನ್ನು ಕಾಪಾಡುವನು; ಅವರು ನುಂಗಿ ಕವಣೆ ಕಲ್ಲುಗಳನ್ನು ಸ್ವಾಧೀನಮಾಡಿ ಕೊಳ್ಳುವರು; ಕುಡಿದು ದ್ರಾಕ್ಷಾರಸದಿಂದಾದ ಹಾಗೆ ಓಲಾಡುವರು, ಪಾತ್ರೆಯ ಹಾಗೆಯೂ ಬಲಿಪೀಠದ ಮೂಲೆಗಳ ಹಾಗೆಯೂ ತುಂಬಿರುವರು.
15 O Senhor dos Exércitos os protegerá; eles devorarão os fundibulários e os pisarão; também beberão deles o sangue como vinho; encher-se-ão como bacias do sacrifício e ficarão ensopados como os cantos do altar.
16 ಇದಲ್ಲದೆ ಅವರ ದೇವರಾದ ಕರ್ತನು ಆ ದಿವಸದಲ್ಲಿ ಅವರನ್ನು ತನ್ನ ಜನರ ಮಂದೆಯ ಹಾಗೆ ರಕ್ಷಿಸುವನು; ಅವರು ಕಿರೀಟದ ಕಲ್ಲುಗಳಂತೆ ಆತನ ದೇಶದ ಮೇಲೆ ಧ್ವಜವಾಗಿ ಎತ್ತಲ್ಪಡುವರು.
16 O Senhor , seu Deus, naquele dia, os salvará, como ao rebanho do seu povo; porque eles são pedras de uma coroa e resplandecem na terra dele.
17 ಆತನ ಒಳ್ಳೇತನವು ಎಷ್ಟೋ ದೊಡ್ಡದು; ಆತನ ಸೌಂದರ್ಯವು ಎಷ್ಟು ಮಹತ್ತಾ ದದ್ದು! ಧಾನ್ಯವು ಯೌವನಸ್ಥರನ್ನೂ ದ್ರಾಕ್ಷಾರಸವು ಯುವತಿಯರನ್ನೂ ಹರ್ಷಗೊಳಿಸುವವು.
17 Pois quão grande é a sua bondade! E quão grande, a sua formosura! O cereal fará florescer os jovens, e o vinho, as donzelas.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Zacarias 9, comparar traduções ou montar um estudo — tudo direto pelo WhatsApp.