Tiago 3
Kannada Bible (GL_KANNADA) vs ARIB
ARIB Almeida Revisada Imprensa Bíblica
1 ನನ್ನ ಸಹೋದರರೇ, ಬೋಧಕರಾದ ನಮಗೆ ದೊಡ್ಡ ದಂಡನೆಯಾಗುವದೆಂದು ತಿಳಿದುಕೊಂಡು ಬಹುಮಂದಿ ಬೋಧಕರಾಗಬೇಡಿರಿ.
1 Meus irmãos, não sejais muitos de vós mestres, sabendo que receberemos um juízo mais severo.
2 ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಪರಿ ಪೂರ್ಣನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.
2 Todos tropeçamos em muitas coisas. Se alguém não tropeça em palavra, esse é homem perfeito, e capaz de refrear também todo o corpo.
3 ಇಗೋ, ಕುದುರೆಗಳು ನಮಗೆ ವಿಧೇಯವಾಗುವ ಹಾಗೆ ಅವು ಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ತಿರುಗಿಸುವದಕ್ಕೆ ಆಗುತ್ತದೆ.
3 Ora, se pomos freios na boca dos cavalos, para que nos obedeçam, então conseguimos dirigir todo o seu corpo.
4 ಹಡಗುಗಳನ್ನು ಸಹ ನೋಡಿರಿ. ಅವು ಬಹು ದೊಡ್ಡವಾಗಿದ್ದರೂ ಬಲವಾದ ಗಾಳಿಯಿಂದ ಬಡಿಸಿ ಕೊಂಡು ಹೋಗುತ್ತವೆ. ಆದಾಗ್ಯೂ ಬಹು ಸಣ ಚುಕಾಣಿಯಿಂದ ಅವುಗಳನ್ನು ನಡಿಸುವವನು ತನ್ನ ಮನಸ್ಸಿಗೆ ಬಂದ ಕಡೆಗೆ ತಿರುಗಿಸುತ್ತಾನೆ.
4 Vede também os navios que, embora tão grandes e levados por impetuosos ventos, com um pequenino leme se voltam para onde quer o impulso do timoneiro.
5 ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಇಗೋ, ಎಷ್ಟು ಕೊಂಚ ಕಿಚ್ಚು ದೊಡ್ಡ ಕಾಡನ್ನು ಸುಡುತ್ತದೆ ನೋಡಿರಿ.
5 Assim também a língua é um pequeno membro, e se gaba de grandes coisas. Vede quão grande bosque um tão pequeno fogo incendeia.
6 ನಾಲಿಗೆಯು ಬೆಂಕಿಯೂ ದುಷ್ಟಲೋಕವೂ ಆಗಿದೆ. ಹೀಗೆ ಅದು ನಮ್ಮ ಅಂಗಗಳಲ್ಲಿ ಇದ್ದು ದೇಹವನ್ನೆಲ್ಲಾ ಹೊಲೆಮಾಡಿ ಪ್ರಕೃತಿಯ ಕ್ರಮಕ್ಕೆ ಬೆಂಕಿ ಹಚ್ಚುವ ಹಾಗೆಯೂ ನರಕದ ಬೆಂಕಿಯನ್ನು ಹಚ್ಚಿಕೊಳ್ಳುವ ದಾಗಿಯೂ ಇದೆ.
6 A língua também é um fogo; sim, a língua, qual mundo de iniqüidade, colocada entre os nossos membros, contamina todo o corpo, e inflama o curso da natureza, sendo por sua vez inflamada pelo inferno.
7 ಮನುಷ್ಯ ಜಾತಿಯು ಸಕಲ ವಿಧವಾದ ಮೃಗ, ಪಕ್ಷಿ, ಸರ್ಪ, ಜಲಚರಗಳನ್ನು ಹತೋಟಿಗೆ ತರುವದುಂಟು ಮತ್ತು ತಂದದ್ದುಂಟು.
7 Pois toda espécie tanto de feras, como de aves, tanto de répteis como de animais do mar, se doma, e tem sido domada pelo gênero humano,
8 ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋ ಟಿಗೆ ತರಲಾರನು. ಅದು ಸ್ವಾಧೀನವಾಗದ ಕೆಡುಕಾ ಗಿದೆ; ಮರಣಕರವಾದ ವಿಷದಿಂದ ತುಂಬಿ ಇದೆ.
8 mas a língua, nenhum homem a pode domar. É um mal irrefreável; está cheia de peçonha mortal.
9 ಅದೇ ನಾಲಿಗೆಯಿಂದ ತಂದೆಯಾದ ದೇವರನ್ನು ಕೊಂಡಾಡುತ್ತೇವೆ; ಆದರಿಂದಲೇ ದೇವರ ಹೋಲಿಕೆಗೆ ಸರಿಯಾಗಿ ಉಂಟುಮಾಡಲ್ಪಟ್ಟ ಮನುಷ್ಯರನ್ನು ನಾವು ಶಪಿಸುತ್ತೇವೆ.
9 Com ela bendizemos ao Senhor e Pai, e com ela amaldiçoamos os homens, feitos à semelhança de Deus.
10 ಅದೇ ಬಾಯಿಂದ ಆಶೀರ್ವಾದ ಮತ್ತು ಶಾಪ ಬರುತ್ತವೆ; ನನ್ನ ಸಹೋದರರೇ, ಇವುಗಳು ಹೀಗಿರಬಾರದು.
10 Da mesma boca procede bênção e maldição. Não convém, meus irmãos, que se faça assim.
11 ಒಂದೇ ಊಟೆಯು ಸಿಹಿನೀರನ್ನೂ ಕಹಿನೀರನ್ನೂ ಒಂದೇ ಸ್ಥಳದಿಂದ ಹೊರಡುವದುಂಟೇ?
11 Porventura a fonte deita da mesma abertura água doce e água amargosa?
12 ನನ್ನ ಸಹೋದರರೇ, ಅಂಜೂರದ ಮರವು ಎಣ್ಣೇಮರದ ಕಾಯಿ ಬಿಡುವದೋ? ದ್ರಾಕ್ಷೇ ಬಳ್ಳಿಯಲ್ಲಿ ಅಂಜೂರದ ಹಣ್ಣಾಗುವದೋ? ಹಾಗೆಯೇ ಯಾವ ಊಟೆಯೂ ಉಪ್ಪು ನೀರನ್ನೂ ಸಿಹಿ ನೀರನ್ನೂ ಕೊಡಲಾರದು.
12 Meus irmãos, pode acaso uma figueira produzir azeitonas, ou uma videira figos? Nem tampouco pode uma fonte de água salgada dar água doce.
13 ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಯೋಗ್ಯವಾಗಿ ನಡೆದುಕೊಂಡು ಜ್ಞಾನದ ಸಾತ್ವಿಕತ್ವದಲ್ಲಿ ತನ್ನ ಕ್ರಿಯೆಗಳನ್ನು ತೋರಿಸಲಿ.
13 Quem dentre vós é sábio e entendido? Mostre pelo seu bom procedimento as suas obras em mansidão de sabedoria.
14 ಆದರೆ ಕಹಿಯಾದ ಹಗೆತನ ಮತ್ತು ಜಗಳ ನಿಮ್ಮ ಹೃದಯ ಗಳೊಳಗೆ ಇರುವಲ್ಲಿ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ.
14 Mas, se tendes amargo ciúme e sentimento faccioso em vosso coração, não vos glorieis, nem mintais contra a verdade.
15 ಅದು ಮೇಲಣಿಂದ ಬಂದ ಜ್ಞಾನವಲ್ಲ; ಅದು ಭೂಸಂಬಂಧ ವಾದದ್ದು, ಪ್ರಾಕೃತಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು.
15 Essa não é a sabedoria que vem do alto, mas é terrena, animal e diabólica.
16 ಹೊಟ್ಟೇಕಿಚ್ಚೂ ಜಗಳವೂ ಇರುವ ಕಡೆ ಗಲಿಬಿಲಿಯೂ ಸಕಲವಿಧವಾದ ಕೆಟ್ಟ ಕೃತ್ಯವೂ ಇರುವವು.
16 Porque onde há ciúme e sentimento faccioso, aí há confusão e toda obra má.
17 ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸುಲಭವಾಗಿ ಒಪ್ಪಿಕೊಳ್ಳುವಂಥದು, ಕರುಣೆಯಿಂದಲೂ ಒಳ್ಳೇ ಫಲಗಳಿಂದಲೂ ತುಂಬಿರುವಂಥದ್ದು ಆಗಿದೆ; ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.
17 Mas a sabedoria que vem do alto é, primeiramente, pura, depois pacífica, moderada, tratável, cheia de misericórdia e de bons frutos, sem parcialidade, e sem hipocrisia.
18 ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ.
18 Ora, o fruto da justiça semeia-se em paz para aqueles que promovem a paz.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Tiago 3, comparar traduções ou montar um estudo — tudo direto pelo WhatsApp.