Salmos 86

Kannada Bible (GL_KANNADA) vs NVT

Sair da comparação
NVT Nova Versão Transformadora
1 ಓ ಕರ್ತನೇ, ನೀನು ಕಿವಿಗೊಟ್ಟು ನನಗೆ ಉತ್ತರಕೊಡು; ನಾನು ದೀನನೂ ಬಡ ವನೂ ಆಗಿದ್ದೇನೆ.
1 Inclina-te, S enhor , e ouve minha oração; responde-me, pois estou aflito e necessitado.
2 ನನ್ನ ಪ್ರಾಣವನ್ನು ಕಾಪಾಡು; ನಾನು ಪರಿಶುದ್ಧನು. ನನ್ನ ದೇವರಾದ ನೀನೇ, ನಿನ್ನಲ್ಲಿ ಭರವಸವಿಡುವ ನಿನ್ನ ಸೇವಕನನ್ನು ರಕ್ಷಿಸು.
2 Protege-me, pois sou fiel a ti; salva-me, pois sou teu servo e em ti confio. Tu és meu Deus!
3 ಓ ಕರ್ತನೇ, ನನ್ನನ್ನು ಕರುಣಿಸು; ದಿನವೆಲ್ಲಾ ನಿನಗೆ ಕೂಗು ತ್ತೇನೆ.
3 Tem misericórdia de mim, ó Senhor, pois clamo a ti sem parar.
4 ಓ ಕರ್ತನೇ, ನಿನ್ನ ಸೇವಕನ ಪ್ರಾಣವನ್ನು ಸಂತೋಷಪಡಿಸು; ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ.
4 Alegra-me, Senhor, pois a ti me entrego.
5 ಕರ್ತನೇ, ನೀನು ಒಳ್ಳೆಯವನೂ ಕ್ಷಮಿಸುವದಕ್ಕೆ ಸಿದ್ಧನೂ ಆಗಿದ್ದೀ; ನಿನಗೆ ಮೊರೆಯಿಡುವವರೆಲ್ಲರಿಗೆ ಬಹು ಕೃಪೆಯುಳ್ಳವನೂ ಆಗಿದ್ದೀ.
5 Ó Senhor, tu és tão bom, tão pronto a perdoar, tão cheio de amor por todos que te buscam.
6 ಓ ಕರ್ತನೇ, ನನ್ನ ಪ್ರಾರ್ಥನೆಗೆ ಕಿವಿಗೊಡು; ನನ್ನ ವಿಜ್ಞಾಪನೆಗಳ ಸ್ವರವನ್ನು ಆಲೈಸು.
6 Ouve minha oração, S enhor , e atende a meu clamor.
7 ನನ್ನ ಇಕ್ಕಟ್ಟಿನ ದಿವಸದಲ್ಲಿ ನಿನ್ನನ್ನು ಕರೆಯುವೆನು; ನೀನು ನನಗೆ ಉತ್ತರ ಕೊಡುವಿ.
7 Em tempos de aflição, clamarei a ti, e tu me responderás.
8 ಕರ್ತನೇ, ದೇವರುಗಳಲ್ಲಿ ನಿನ್ನ ಹಾಗೆ ಒಬ್ಬನೂ ಇಲ್ಲ; ನಿನ್ನ ಕೆಲಸಗಳ ಹಾಗೆ ಒಂದೂ ಇಲ್ಲ.
8 Nenhum dos deuses é semelhante a ti, Senhor, nenhum deles pode fazer o que tu fazes.
9 ಓ ಕರ್ತನೇ, ನೀನು ಉಂಟುಮಾಡಿದ ಜನಾಂಗಗಳೆಲ್ಲಾ ಬಂದು ನಿನ್ನನ್ನು ಆರಾಧಿಸಿ ನಿನ್ನ ಹೆಸರನ್ನು ಘನಪಡಿ ಸುವರು.
9 Todas as nações que criaste virão e se prostrarão diante de ti, Senhor, e glorificarão o teu nome.
10 ನೀನು ದೊಡ್ಡವನೂ ಅದ್ಭುತಗಳನ್ನು ಮಾಡುವಾತನೂ ಆಗಿದ್ದೀ; ನೀನೊಬ್ಬನೇ ದೇವರು.
10 Pois tu és grande e realizas maravilhas; só tu és Deus.
11 ಓ ಕರ್ತನೆ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯದಲ್ಲಿ ನಡೆದುಕೊಳ್ಳುವೆನು; ನಿನ್ನ ಹೆಸರಿಗೆ ಭಯಪಡುವ ಹಾಗೆ ನನ್ನ ಹೃದಯವನ್ನು ಐಕ್ಯಪಡಿಸು.
11 Ensina-me os teus caminhos, S enhor , para que eu viva segundo a tua verdade. Concede-me pureza de coração, para que eu honre o teu nome.
12 ನನ್ನ ದೇವರಾದ ಓ ಕರ್ತನೇ, ನನ್ನ ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುವೆನು; ನಿನ್ನ ಹೆಸರನ್ನು ಯುಗಯುಗಕ್ಕೂ ಘನಪಡಿಸುವೆನು.
12 Ó Senhor, meu Deus, de todo o meu coração te louvarei; glorificarei o teu nome para sempre.
13 ನಿನ್ನ ಕರುಣೆಯು ನನ್ನ ಮೇಲೆ ದೊಡ್ಡದಾಗಿದೆ; ಪಾತಾಳ ದೊಳಗಿಂದ ನನ್ನ ಪ್ರಾಣವನ್ನು ಬಿಡಿಸಿದ್ದೀ.
13 Pois grande é o teu amor por mim; tu me livraste das profundezas da morte.
14 ಓ ದೇವರೇ, ಅಹಂಕಾರಿಗಳು ನನಗೆ ವಿರೋಧ ವಾಗಿ ಎದ್ದಿದ್ದಾರೆ; ಬಲಿಷ್ಠರ ಕೂಟವು ನನ್ನ ಪ್ರಾಣ ವನ್ನು ಹುಡುಕುತ್ತದೆ; ಅವರು ನಿನ್ನನ್ನು ಲಕ್ಷಿಸಲಿಲ್ಲ.
14 Ó Deus, os arrogantes se levantam contra mim, pessoas violentas tentam me matar; não se importam contigo.
15 ಆದರೆ ನೀನು ಓ ಕರ್ತನೇ, ಅಂತಃಕರುಣೆಯೂ ದಯೆಯೂ ಉಳ್ಳ ದೇವರು ದೀರ್ಘಶಾಂತನೂ ಬಹಳ ಕೃಪೆಯೂ ಸತ್ಯವೂ ಉಳ್ಳವನೂ ಆಗಿದ್ದೀ.
15 Mas tu, Senhor, és Deus de compaixão e misericórdia, lento para se irar e cheio de amor e fidelidade.
16 ನನ್ನ ಕಡೆಗೆ ತಿರಿಗಿಕೊಂಡು ನನ್ನನ್ನು ಕರುಣಿಸು; ನಿನ್ನ ಸೇವಕನಿಗೆ ನಿನ್ನ ಬಲವನ್ನು ಕೊಡು; ನಿನ್ನ ದಾಸಿಯ ಮಗನನ್ನು ರಕ್ಷಿಸು.
16 Olha para cá e tem compaixão de mim! Dá tua força a teu servo; sim, salva teu humilde servo.
17 ಒಳ್ಳೇದಕ್ಕಾಗಿ ನನಗೆ ಒಂದು ಗುರುತು ಕೊಡು; ಆಗ ನನ್ನ ಹಗೆಮಾಡುವವರು ನೋಡಿ, ನಾಚಿಕೆಪಡುವರು; ಕರ್ತನೇ, ನೀನು ನನಗೆ ಸಹಾಯ ಮಾಡಿ ನನ್ನನ್ನು ಆದರಿಸಿದ್ದೀ.
17 Mostra-me um sinal do teu favor; então serão envergonhados os que me odeiam, pois tu, S

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Salmos 86, comparar traduções ou montar um estudo — tudo direto pelo WhatsApp.