Salmos 69
Kannada Bible (GL_KANNADA) vs ARA
ARA Almeida Revista e Atualizada 1993
1 ಓ ದೇವರೇ ನನ್ನನ್ನು ರಕ್ಷಿಸು; ನೀರು ನನ್ನ ಪ್ರಾಣದ ವರೆಗೂ ಬಂದಿದೆ.
1 Salva-me, ó Deus, porque as águas me sobem até à alma.
2 ನೆಲೆ ಸಿಕ್ಕದ ಆಳವಾದ ಕೆಸರಿನಲ್ಲಿ ನಾನು ಮುಳುಗುತ್ತೇನೆ; ನನ್ನ ಮೇಲೆ ಹಾದುಹೋಗುವ ನೀರಿನ ಪ್ರವಾಹಗಳ ಅಗಾಧದಲ್ಲಿ ನಾನು ಸಿಕ್ಕಿಕೊಂಡಿದ್ದೇನೆ.
2 Estou atolado em profundo lamaçal, que não dá pé; estou nas profundezas das águas, e a corrente me submerge.
3 ನಾನು ಕೂಗಿ ದಣಿದಿದ್ದೇನೆ; ನನ್ನ ಗಂಟಲು ಒಣಗಿದೆ; ನಾನು ದೇವ ರನ್ನು ಎದುರು ನೋಡುವದರಿಂದ ನನ್ನ ಕಣ್ಣುಗಳು ಕ್ಷೀಣಿಸುತ್ತವೆ.
3 Estou cansado de clamar, secou-se-me a garganta; os meus olhos desfalecem de tanto esperar por meu Deus.
4 ಕಾರಣವಿಲ್ಲದೆ ನನ್ನನ್ನು ಹಗೆ ಮಾಡು ವವರು ನನ್ನ ತಲೆಯ ಕೂದಲುಗಳಿಗಿಂತ ಹೆಚ್ಚಾಗಿ ದ್ದಾರೆ; ನನ್ನನ್ನು ಅನ್ಯಾಯವಾಗಿ ಸಂಹರಿಸುವ ನನ್ನ ಶತ್ರುಗಳೂ ಪ್ರಬಲವಾಗಿದ್ದಾರೆ; ನಾನು ತೆಗೆದು ಕೊಳ್ಳದ್ದನ್ನು ನನ್ನಿಂದ ದೋಚಿಕೊಂಡರು.
4 São mais que os cabelos de minha cabeça os que, sem razão, me odeiam; são poderosos os meus destruidores, os que com falsos motivos são meus inimigos; por isso, tenho de restituir o que não furtei.
5 ಓ ದೇವರೇ, ನೀನು ನನ್ನ ಮೂಢತನವನ್ನು ತಿಳಿದಿದ್ದೀ; ನನ್ನ ಪಾಪಗಳು ನಿನಗೆ ಮರೆಯಾಗಿಲ್ಲ.
5 Tu, ó Deus, bem conheces a minha estultice, e as minhas culpas não te são ocultas.
6 ಸೈನ್ಯಗಳ ಕರ್ತನಾದ ದೇವರೇ, ನಿನ್ನನ್ನು ನಿರೀಕ್ಷಿಸು ವವರು ನನ್ನ ದೆಸೆಯಿಂದ ನಾಚಿಕೆಪಡದಿರಲಿ; ಓ ಇಸ್ರಾಯೇಲಿನ ದೇವರೇ, ನಿನ್ನನ್ನು ಹುಡುಕುವವರು ನನ್ನಿಂದ ಅವಮಾನಪಡದಿರಲಿ.
6 Não sejam envergonhados por minha causa os que esperam em ti, ó nem por minha causa sofram vexame os que te buscam, ó Deus de Israel.
7 ನಿನ್ನ ನಿಮಿತ್ತ ನಿಂದೆ ಯನ್ನು ತಾಳಿದ್ದೇನೆ; ಅವಮಾನವು ನನ್ನ ಮುಖವನ್ನು ಮುಚ್ಚಿಯದೆ.
7 Pois tenho suportado afrontas por amor de ti, e o rosto se me encobre de vexame.
8 ನನ್ನ ಸಹೋದರರಿಗೆ ಅನ್ಯನಾಗಿದ್ದೇನೆ; ನನ್ನ ಒಡಹುಟ್ಟಿದವರಿಗೆ ಪರಕೀಯನಾಗಿದ್ದೇನೆ.
8 Tornei-me estranho a meus irmãos e desconhecido aos filhos de minha mãe.
9 ನಿನ್ನ ಆಲಯದ ಆಸಕ್ತಿಯು ನನ್ನನ್ನು ತಿಂದುಬಿಟ್ಟಿದೆ; ನಿನ್ನನ್ನು ನಿಂದಿಸುವವರ ನಿಂದೆಗಳು ನನ್ನ ಮೇಲೆ ಬಿದ್ದಿವೆ.
9 Pois o zelo da tua casa me consumiu, e as injúrias dos que te ultrajam caem sobre mim.
10 ನನ್ನ ಪ್ರಾಣವು ಉಪವಾಸದಲ್ಲಿ ಶಿಕ್ಷಿಸಲ್ಪಟ್ಟು ಅತ್ತಾಗ ಅದು ನನಗೆ ನಿಂದೆ ಆಯಿತು.
10 Chorei, em jejum está a minha alma, e isso mesmo se me tornou em afrontas.
11 ಗೋಣಿತಟ್ಟನ್ನು ಸಹ ನನ್ನ ಉಡುಪಾಗಿ ಮಾಡಿಕೊಂಡಿದ್ದೇನೆ; ಹೀಗೆ ನಾನು ಅವರಿಗೆ ಗಾದೆ ಆದೆನು.
11 Pus um pano de saco por veste e me tornei objeto de escárnio para eles.
12 ಬಾಗಲಲ್ಲಿ ಕೂತು ಕೊಳ್ಳುವವರು ನನಗೆ ವಿರೋಧವಾಗಿ ಮಾತನಾಡು ತ್ತಾರೆ; ನಾನು ಮದ್ಯಪಾನಿಗಳಿಗೆ ಸಂಗೀತವಾದೆನು.
12 Tagarelam sobre mim os que à porta se assentam, e sou motivo para cantigas de beberrões.
13 ಓ ಕರ್ತನೇ, ನಾನಾದರೋ ಅಂಗೀಕಾರದ ಸಮ ಯದಲ್ಲಿ ನಿನಗೆ ನನ್ನ ಪ್ರಾರ್ಥನೆಯನ್ನು ಮಾಡುವೆನು. ಓ ದೇವರೇ, ನಿನ್ನ ಅತಿಶಯವಾದ ಕರುಣೆಯಿಂದಲೂ ನಿನ್ನ ರಕ್ಷಣೆಯ ಸತ್ಯದಲ್ಲಿಯೂ ನನಗೆ ಉತ್ತರಕೊಡು.
13 Quanto a mim, porém, Senhor , faço a ti, em tempo favorável, a minha oração. Responde-me, ó Deus, pela riqueza da tua graça; pela tua fidelidade em socorrer,
14 ನಾನು ಮುಳುಗದಂತೆ ನನ್ನನ್ನು ಕೆಸರಿನೊಳಗಿಂದ ಬಿಡಿಸು; ಹಗೆಮಾಡುವವರಿಂದ ನನ್ನನ್ನು ತಪ್ಪಿಸು, ನೀರಿನ ಅಗಾಧಗಳೊಳಗಿಂದಲೂ ನನಗೆ ಬಿಡುಗಡೆ ಯಾಗಲಿ
14 livra-me do tremedal, para que não me afunde; seja eu salvo dos que me odeiam e das profundezas das águas.
15 ನೀರಿನ ಪ್ರವಾಹವು ನನ್ನ ಮೇಲೆ ಹಾದು ಹೋಗದೇ ಇರಲಿ; ಅಗಾಧವು ನನ್ನನ್ನು ನುಂಗದೆ ಇರಲಿ; ಕುಣಿಯು ನನಗಾಗಿ ತನ್ನ ಬಾಯನ್ನು ಮುಟ್ಟ ದಿರಲಿ.
15 Não me arraste a corrente das águas, nem me trague a voragem, nem se feche sobre mim a boca do poço.
16 ಓ ಕರ್ತನೇ, ನನಗೆ ಉತ್ತರಕೊಡು;ನಿನ್ನ ಪ್ರೀತಿ ಕರುಣೆಯು ಒಳ್ಳೇದಾಗಿದೆ; ನಿನ್ನ ಅತಿ ಶಯವಾದ ಅಂತಃಕರುಣೆಗಳ ಪ್ರಕಾರ ನನ್ನ ಕಡೆಗೆ ತಿರುಗು.
16 Responde-me, Senhor , pois compassiva é a tua graça; volta-te para mim segundo a riqueza das tuas misericórdias.
17 ನಿನ್ನ ಮುಖವನ್ನು ನಿನ್ನ ಸೇವಕನಿಗೆ ಮರೆಮಾಡಬೇಡ; ನಾನು ಇಕ್ಕಟ್ಟಿನಲ್ಲಿದ್ದೇನೆ; ಬೇಗ ನನಗೆ ಉತ್ತರಕೊಡು.
17 Não escondas o rosto ao teu servo, pois estou atribulado; responde-me depressa.
18 ಸವಿಾಪವಾಗಿದ್ದು ನನ್ನ ಪ್ರಾಣವನ್ನು ರಕ್ಷಿಸು ನನ್ನನ್ನು ನನ್ನ ಶತ್ರುಗಳ ನಿಮಿತ್ತ ವಾಗಿ ವಿಮೋಚಿಸು.
18 Aproxima-te de minha alma e redime-a; resgata-me por causa dos meus inimigos.
19 ನೀನು ನನ್ನ ನಿಂದೆಯನ್ನೂ ನಾಚಿಕೆಯನ್ನೂ ಅವಮಾನವನ್ನೂ ತಿಳಿದಿದ್ದೀ; ನನ್ನ ವೈರಿಗಳೆಲ್ಲರು ನಿನ್ನ ಮುಂದೆ ಇದ್ದಾರೆ.
19 Tu conheces a minha afronta, a minha vergonha e o meu vexame; todos os meus adversários estão à tua vista.
20 ನಿಂದೆಯು ನನ್ನ ಹೃದಯವನ್ನು ಮುರಿದದೆ; ಭಾರದಿಂದ ನಾನು ತುಂಬಿದವನಾಗಿದ್ದೇನೆ, ಕನಿಕರಕ್ಕೋಸ್ಕರ ಕೆಲವರನ್ನು ನಿರೀಕ್ಷಿಸಿದೆನು, ಆದರೆ ಒಬ್ಬರೂ ಕಾಣಲಿಲ್ಲ. ಆದರಿಸುವವರಿಗೋಸ್ಕರ ಸಹ ಎದುರು ನೋಡಿದೆನು: ಆದರೆ ಯಾರೂ ಸಿಕ್ಕಲಿಲ್ಲ.
20 O opróbrio partiu-me o coração, e desfaleci; esperei por piedade, mas debalde; por consoladores, e não os achei.
21 ನನ್ನ ಆಹಾರಕ್ಕಾಗಿ ಕಹಿಯಾದದನ್ನು ಕೊಟ್ಟರು; ನನಗೆ ದಾಹವಾದಾಗ ಹುಳಿರಸವನ್ನು ಕುಡಿಯ ಕೊಟ್ಟರು.
21 Por alimento me deram fel e na minha sede me deram a beber vinagre.
22 ಅವರ ಮೇಜು ಅವರ ಮುಂದೆ ಉರುಲಾ ಗಲಿ, ಸುಖವಾಗಿರುವವರಿಗೆ ಅದು ನೇಣೂ ಆಗಲಿ.
22 Sua mesa torne-se-lhes diante deles em laço, e a prosperidade, em armadilha.
23 ಅವರ ಕಣ್ಣಗಳು ಕಾಣದ ಹಾಗೆ ಕತ್ತಲಾಗಲಿ; ಅವರ ಸೊಂಟಗಳನ್ನು ಯಾವಾಗಲೂ ಕದಲಿಸು.
23 Obscureçam-se-lhes os olhos, para que não vejam; e faze que sempre lhes vacile o dorso.
24 ಅವರ ಮೇಲೆ ನಿನ್ನ ರೋಷವನ್ನು ಹೊಯ್ಯಿ; ನಿನ್ನ ಕೋಪದ ಉರಿಯು ಅವರನ್ನು ಹಿಡಿಯಲಿ.
24 Derrama sobre eles a tua indignação, e que o ardor da tua ira os alcance.
25 ಅವರ ವಾಸಸ್ಥಳವು ನಾಶವಾಗಲಿ; ಅವರ ಗುಡಾರಗಳಲ್ಲಿ ನಿವಾಸಿಯು ಇಲ್ಲದೆ ಹೋಗಲಿ.
25 Fique deserta a sua morada, e não haja quem habite as suas tendas.
26 ನೀನು ಹೊಡೆದ ವನನ್ನು ಅವರು ಹಿಂಸಿಸುತ್ತಾರೆ, ನೀನು ಗಾಯಮಾಡಿ ದವರ ವ್ಯಸನವನ್ನು ಮಾತನಾಡಿಕೊಳ್ಳುತ್ತಾರೆ.
26 Pois perseguem a quem tu feriste e acrescentam dores àquele a quem golpeaste.
27 ಅವರ ಅಕ್ರಮಕ್ಕೆ ಅಕ್ರಮವನ್ನು ಸೇರಿಸು; ಅವರು ನಿನ್ನ ನೀತಿಯಲ್ಲಿ ಸೇರದೆ ಇರಲಿ.
27 Soma-lhes iniquidade à iniquidade, e não gozem da tua absolvição.
28 ಜೀವದ ಪುಸ್ತಕದೊಳಗಿಂದ ಅವರು ಅಳಿಸಲ್ಪಡಲಿ; ನೀತಿವಂತರ ಸಂಗಡ ಅವರ ಹೆಸರು ಬರೆಯಲ್ಪಡದೆ ಇರಲಿ.
28 Sejam riscados do Livro dos Vivos e não tenham registro com os justos.
29 ಆದರೆ ನಾನು ದೀನನಾಗಿಯೂ ವ್ಯಸನವುಳ್ಳವನಾಗಿಯೂ ಇದ್ದೇನೆ; ಓ ದೇವರೇ, ನಿನ್ನ ರಕ್ಷಣೆಯು ನನ್ನನ್ನು ಉನ್ನತದಲ್ಲಿರಿಸಲಿ.
29 Quanto a mim, porém, amargurado e aflito, ponha-me o teu socorro, ó Deus, em alto refúgio.
30 ದೇವರ ಹೆಸರನ್ನು ಹಾಡುತ್ತಾ ಸ್ತುತಿಸುವೆನು; ಸ್ತೋತ್ರದಿಂದ ಆತನನ್ನು ಘನಪಡಿ ಸುವೆನು.
30 Louvarei com cânticos o nome de Deus, exaltá-lo-ei com ações de graças.
31 ಅದು ಕರ್ತನಿಗೆ ಕೊಂಬುಗಳೂ ಗೊರಸೆ ಗಳೂ ಉಳ್ಳ ಎಳೇ ಹೋರಿಗಳಿಗಿಂತ ಮೆಚ್ಚಿಕೆಯಾಗಿರು ವದು.
31 Será isso muito mais agradável ao Senhor do que um boi ou um novilho com chifres e unhas.
32 ಇದನ್ನು ದೀನರು ನೋಡಿ, ಸಂತೋಷಿಸು ವರು. ದೇವರನ್ನು ಹುಡುಕುವ ನಿಮ್ಮ ಹೃದಯವು ಜೀವಿಸುವದು.
32 Vejam isso os aflitos e se alegrem; quanto a vós outros que buscais a Deus, que o vosso coração reviva.
33 ಕರ್ತನು ಬಡವರನ್ನು ಲಾಲಿಸಿ ತನ್ನ ಸೆರೆಯವರನ್ನು ತಿರಸ್ಕರಿಸುವದಿಲ್ಲ.
33 Porque o Senhor responde aos necessitados e não despreza os seus prisioneiros.
34 ಆಕಾಶವೂ ಭೂಮಿಯೂ ಸಮುದ್ರಗಳೂ ಅವುಗಳಲ್ಲಿ ಸಂಚರಿಸುವುದೆಲ್ಲವೂ ಆತನನ್ನು ಸ್ತುತಿಸಲಿ.
34 Louvem-no os céus e a terra, os mares e tudo quanto neles se move.
35 ದೇವರು ಚೀಯೋನನ್ನು ರಕ್ಷಿಸಿ ಯೆಹೂದದ ಪಟ್ಟ ಣಗಳನ್ನು ಕಟ್ಟುವನು; ಹೀಗೆ ಅವರು ಅಲ್ಲಿ ವಾಸ ಮಾಡಿ ಅದನ್ನು ಸ್ವಾಧೀನಪಡಿಸಿಕೊಳ್ಳುವರು.
35 Porque Deus salvará Sião e edificará as cidades de Judá, e ali habitarão e hão de possuí-la.
36 ಅವನ ಸೇವಕರ ಸಂತತಿಯು ಸಹ ಅದನ್ನು ಬಾಧ್ಯವಾಗಿ ಹೊಂದುವದು; ಆತನ ಹೆಸರನ್ನು ಪ್ರೀತಿಮಾಡುವವರು ಅದರಲ್ಲಿ ವಾಸಮಾಡುವರು.
36 Também a descendência dos seus servos a herdará, e os que lhe amam o nome nela habitarão.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Salmos 69, comparar traduções ou montar um estudo — tudo direto pelo WhatsApp.