Salmos 44

Kannada Bible (GL_KANNADA) vs BKJ

Sair da comparação
1 ಓ ದೇವರೇ, ನೀನು ಹಿಂದಿನ ಕಾಲದಲ್ಲಿ, ಅಂದರೆ ನಮ್ಮ ತಂದೆಗಳ ದಿವಸದಲ್ಲಿ ಮಾಡಿದ ಕಾರ್ಯವನ್ನು ಅವರು ನಮಗೆ ವಿವರಿಸಿದ್ದಾರೆ; ಅದನ್ನು ನಾವು ನಮ್ಮ ಕಿವಿಗಳಿಂದ ಕೇಳಿದ್ದೇವೆ.
1 Ao Músico-chefe, para os filhos de Corá, Masquil. Nós ouvimos com nossos ouvidos, ó Deus, nossos pais nos contaram que obra tu fizeste nos dias deles, nos tempos antigos.
2 ನೀನು ನಿನ್ನ ಕೈಯಿಂದ ಜನಾಂಗಗಳನ್ನು ಹೊರಡಿಸಿ (ನಮ್ಮ ತಂದೆಗಳನ್ನು) ನೆಟ್ಟಿದ್ದೀ; ಜನರನ್ನು ಬಾಧೆಪಡಿಸಿ ಅವರನ್ನು ಹೊರಗೆ ಹಾಕಿದಿ.
2 Como tu expulsaste os pagãos com tua mão, e os plantaste; como tu afligiste os povos e os expulsaste.
3 ಅವರು ತಮ್ಮ ಕತ್ತಿಯಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರನ್ನು ರಕ್ಷಿಸಲಿಲ್ಲ; ಆದರೆ ನಿನ್ನ ಬಲಗೈಯೂ ತೋಳೂ ನಿನ್ನ ಮುಖದ ಪ್ರಕಾಶವೂ ಇವುಗಳೇ ಅವರನ್ನು ರಕ್ಷಿಸಿದವು; ನಿನ್ನ ಒಲುಮೆ ಅವರಿಗಿತ್ತಲ್ಲಾ.
3 Pois eles não conseguiram a posse da terra por sua própria espada, nem seu próprio braço os salvou, mas a tua mão direita, o teu braço e a luz de teu semblante, porque tu os favoreceste.
4 ಓ ದೇವರೇ, ನೀನೇ ನನ್ನ ಅರಸನು; ಯಾಕೋಬ ನಿಗೆ ಬಿಡುಗಡೆಗಳನ್ನು ಆಜ್ಞಾಪಿಸು.
4 Tu és meu rei, ó Deus; comanda livramentos a Jacó.
5 ನಿನ್ನಿಂದ ನಮ್ಮ ವೈರಿಗಳನ್ನು ದೊಬ್ಬುವೆವು; ನಿನ್ನ ಹೆಸರಿನಲ್ಲಿ ನಮ್ಮ ಎದುರಾಳಿಗಳನ್ನು ತುಳಿಯುವೆವು.
5 Através de ti empurraremos para baixo nossos inimigos; através de teu nome pisaremos nos que se levantam contra nós.
6 ನಾನು ನನ್ನ ಬಿಲ್ಲಿ ನಲ್ಲಿ ಭರವಸವಿಡುವದಿಲ್ಲ. ನನ್ನ ಕತ್ತಿಯು ನನ್ನನ್ನು ರಕ್ಷಿಸುವದಿಲ್ಲ.
6 Pois eu não confiarei no meu arco, nem a minha espada me salvará.
7 ನೀನು ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿದಿ; ನಮ್ಮನ್ನು ಹಗೆಮಾಡಿದವರನ್ನು ನಾಚಿಕೆ ಪಡಿಸಿದಿ.
7 Mas tu nos salvaste de nossos inimigos, e envergonhaste aqueles que nos odiavam.
8 ನಾವು ದಿನವೆಲ್ಲಾ ದೇವರಲ್ಲಿ ಹೆಚ್ಚಳ ಪಡುವೆವು; ನಿನ್ನ ಹೆಸರನ್ನು ಯುಗಯುಗಕ್ಕೂ ಕೊಂಡಾ ಡುವೆವು. ಸೆಲಾ.
8 Em Deus nos vangloriamos por todo o dia, e louvamos o teu nome para sempre. Selá.
9 ಆದರೆ ನೀನು ನಮ್ಮನ್ನು ತಳ್ಳಿಬಿಟ್ಟು ನಮ್ಮನ್ನು ಅವಮಾನಪಡಿಸುತ್ತೀ; ನಮ್ಮ ಸೈನ್ಯಗಳ ಸಂಗಡ ನೀನು ಹೊರಟುಹೋಗುವದಿಲ್ಲ.
9 Mas tu nos abandonaste, e nos envergonhaste; e não vai adiante dos nossos exércitos.
10 ವೈರಿಯ ಮುಂದೆ ನಾವು ಹಿಂದಿರುಗ ಮಾಡುತ್ತೀ; ನಮ್ಮ ಹಗೆಯವರು ತಮಗೋಸ್ಕರ ಕೊಳ್ಳೆ ಇಡುತ್ತಾರೆ.
10 Tu nos fazes dar a volta por causa dos inimigos, e aqueles que nos odeiam nos despojam para si.
11 ತಿನ್ನತಕ್ಕ ಕುರಿಗಳ ಹಾಗೆ ನಮ್ಮನ್ನು ಅವರಿಗೆ ಒಪ್ಪಿಸಿದ್ದೀ; ಅನ್ಯಜನಾಂಗ ಗಳಲ್ಲಿ ನಮ್ಮನ್ನು ಚದರಿಸಿದ್ದೀ.
11 Tu nos deste como ovelhas separadas para alimento, e nos espalhaste entre os pagãos.
12 ನಿನ್ನ ಜನರನ್ನು ಕ್ರಯವಿಲ್ಲದೆ ಮಾರಿಬಿಡುತ್ತೀ. ಅವರ ಬೆಲೆಯಿಂದ ನೀನು ನಿನ್ನ ಸಂಪತ್ತನ್ನು ಹೆಚ್ಚು ಮಾಡಲಿಲ್ಲ.
12 Tu vendes o teu povo por nada, e não aumenta a tua riqueza com o seu preço.
13 ನಮ್ಮ ನೆರೆಯವರಿಗೆ ನಮ್ಮನ್ನು ನಿಂದೆಗೂ ಸುತ್ತಲಿರುವವರಿಗೆ ಗೇಲಿಯಾಗಿಯೂ ಹಾಸ್ಯವಾಗಿಯೂ ನಮ್ಮನ್ನು ಇಡುತ್ತೀ.
13 Tu fazes de nós vergonha para os nossos vizinhos, desprezo e escárnio para aqueles que estão ao nosso redor.
14 ಅನ್ಯಜನಾಂಗಗಳಲ್ಲಿ ಗಾದೆಯಾಗಿಯೂ ಪ್ರಜೆಗಳಲ್ಲಿ ತಲೆಯಾಡಿಸುವಂತೆ ನಮ್ಮನ್ನು ಇಡುತ್ತೀ.
14 Tu fazes de nós o provérbio entre os pagãos, um balançar de cabeça entre os povos.
15 ನಿಂದಕನ ಮತ್ತು ದೂಷಕನ ಸ್ವರಕ್ಕೋಸ್ಕರವೂ ಶತ್ರುವಿನ ಮುಯ್ಯಿಗೆಮುಯ್ಯಿ ಕೊಡುವವನ ನಿಮಿ ತ್ತವೂ
15 Minha confusão está continuamente diante de mim, e a vergonha da minha face me encobriu;
16 ದಿನವೆಲ್ಲಾ ನನ್ನ ಗಲಿಬಿಲಿಯು ನನ್ನ ಮುಂದೆ ಇದೆ; ನನ್ನ ಮುಖದ ನಾಚಿಕೆಯು ನನ್ನನ್ನು ಮುಚ್ಚಿಯದೆ.
16 pela voz daquele que insulta e blasfema; por causa do inimigo e vingador.
17 ಇದೆಲ್ಲಾ ನಮ್ಮ ಮೇಲೆ ಬಂತು; ಆದರೆ ನಿನ್ನನ್ನು ಮರೆತುಬಿಡಲಿಲ್ಲ; ನಿನ್ನ ಒಡಂಬಡಿಕೆಯಲ್ಲಿ ಸುಳ್ಳಾ ಡಲಿಲ್ಲ.
17 Tudo isso nos sobreveio; contudo não nos temos esquecido de ti, nem lidamos falsamente ao teu pacto.
18 ನಮ್ಮ ಹೃದಯವು ಹಿಂದಿರುಗಲಿಲ್ಲ; ನಮ್ಮ ಹೆಜ್ಜೆಗಳು ನಿನ್ನ ಹಾದಿಯಿಂದ ತೊಲಗಲಿಲ್ಲ.
18 Nosso coração não se voltou, nem os nossos passos se desviaram do teu caminho.
19 ಆದಾ ಗ್ಯೂ ಮಹಾಘಟಸರ್ಪಗಳ ಸ್ಥಳದಲ್ಲಿ ನಮ್ಮನ್ನು ಜಜ್ಜಿ ಮರಣದ ನೆರಳಿನಿಂದ ನಮ್ಮನ್ನು ಮುಚ್ಚಿಬಿಟ್ಟಿದ್ದೀ.
19 Embora tu tenhas dolorosamente nos quebrado no lugar dos dragões, e nos coberto com a sombra da morte.
20 ನಾವು ನಮ್ಮ ದೇವರ ಹೆಸರನ್ನು ಮರೆತು ಅನ್ಯ ದೇವರಿಗೆ ನಮ್ಮ ಕೈಗಳನ್ನು ಚಾಚಿದರೆ
20 Se nos esquecemos do nome de nosso Deus, ou esticamos as nossas mãos para um deus estranho,
21 ದೇವರು ಅದನ್ನು ವಿಚಾರಿಸನೋ? ಆತನು ಹೃದಯದ ಮರ್ಮ ಗಳನ್ನು ತಿಳಿದಿದ್ದಾನೆ.
21 Deus não esquadrinhará isso? Pois ele conhece os segredos do coração.
22 ಹೌದು, ನಿನ್ನ ನಿಮಿತ್ತ ದಿನ ವೆಲ್ಲಾ ಕೊಲ್ಲಲ್ಪಡುತ್ತೇವೆ; ಕೊಯ್ಗುರಿಗಳ ಹಾಗೆ ಎಣಿಸಲ್ಪಡುತ್ತೇವೆ.
22 Sim, por tua causa somos mortos todo o dia; somos contados como ovelhas para a matança.
23 ಓ ಕರ್ತನೇ, ಎಚ್ಚರವಾಗು, ಯಾಕೆ ನಿದ್ರೆ ಮಾಡುತ್ತೀ? ಎದ್ದೇಳು; ಸದಾಕಾಲಕ್ಕೂ ನಮ್ಮನ್ನು ತಳ್ಳಿಬಿಡಬೇಡ.
23 Desperta, por que dormes, ó Senhor? Levanta-te, não nos rejeites para sempre.
24 ಯಾಕೆ ನಿನ್ನ ಮುಖವನ್ನು ಮರೆ ಮಾಡಿ ನಮ್ಮ ಸಂಕಟವನ್ನೂ ಬಾಧೆಯನ್ನೂ ಮರೆತು ಬಿಡುತ್ತೀ.
24 Por que escondes a tua face, e esqueces a nossa aflição e a nossa opressão?
25 ನಮ್ಮ ಪ್ರಾಣವು ಧೂಳಿನ ವರೆಗೂ ಬೊಗ್ಗಿಯದೆ; ನಮ್ಮ ಹೊಟ್ಟೆಯು ಭೂಮಿಗೆ ಅಂಟಿ ಕೊಂಡಿದೆ.
25 Pois nossa alma está prostrada sobre o pó, nossa barriga está encostada sobre a terra.
26 ನಮಗೆ ಸಹಾಯವಾಗಿ ಏಳು; ನಿನ್ನ ಕೃಪೆಯ ನಿಮಿತ್ತ ನಮ್ಮನ್ನು ವಿಮೋಚಿಸು.
26 Levanta-te por nosso socorro, e redime-nos por causa de tua misericórdia.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Salmos 44, comparar traduções ou montar um estudo — tudo direto pelo WhatsApp.