Salmos 40

Kannada Bible (GL_KANNADA) vs NVI

Sair da comparação
NVI Nova Versão Internacional
1 ನಾನು ಕರ್ತನಿಗಾಗಿ ತಾಳ್ಮೆಯಿಂದ ಕಾದಿದ್ದೆನು; ಆತನು ಕಿವಿಗೊಟ್ಟು ನನ್ನ ಮೊರೆ ಯನ್ನು ಲಕ್ಷಿಸಿದನು.
1 Coloquei toda minha esperança no Senhor; ele se inclinou para mim e ouviu o meu grito de socorro.
2 ಆತನು ನನ್ನನ್ನು ನಾಶನದ ಕುಣಿಯಿಂದಲೂ ಮತ್ತು ಬುರುದೆಯ ಕೆಸರಿನಿಂದಲೂ ಎತ್ತಿ ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದನು.
2 Ele me tirou de um poço de destruição, de um atoleiro de lama; pôs os meus pés sobre uma rocha e firmou-me num local seguro.
3 ನನ್ನ ಬಾಯಲ್ಲಿ ನೂತನ ಹಾಡನ್ನು ಇಟ್ಟಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ; ಅನೇಕರು ಇದನ್ನು ನೋಡಿ ಭಯಪಟ್ಟು ಕರ್ತನಲ್ಲಿ ಭರವಸವಿಡುವರು.
3 Pôs um novo cântico na minha boca, um hino de louvor ao nosso Deus. Muitos verão isso e temerão, e confiarão no Senhor.
4 ಕರ್ತನನ್ನು ತನ್ನ ಭರವಸವಾಗಿ ಮಾಡಿಕೊಂಡು ಅಹಂಕಾರಿಗಳನ್ನು ಗೌರವಿಸದೆಯೂ ಇಲ್ಲವೆ ಸುಳ್ಳಿನ ಕಡೆಗೆ ತಿರುಗಿಕೊಳ್ಳ ದೆಯೂ ಇರುವ ಮನುಷ್ಯನು ಧನ್ಯನು.
4 Como é feliz o homem que põe no Senhor a sua confiança, e não vai atrás dos orgulhosos, dos que se afastam para seguir deuses falsos!
5 ಓ ನನ್ನ ದೇವರಾದ ಕರ್ತನೇ, ನೀನು ಮಾಡಿದ ನಿನ್ನ ಅದ್ಭುತ ಕಾರ್ಯಗಳೂ ನಮ್ಮ ಕಡೆಗಿರುವ ನಿನ್ನ ಯೋಚನೆಗಳೂ ಬಹಳ; ಅವುಗಳನ್ನು ಕ್ರಮವಾಗಿ ನಿನ್ನ ಮುಂದೆ ಎಣಿಸಲಾರೆನು; ಅವುಗಳನ್ನು ನಾನು ತಿಳಿಸಿ ಹೇಳಬೇಕಾದರೆ ಎಣಿಸುವದಕ್ಕಿಂತ ಹೆಚ್ಚಾಗಿವೆ.
5 Senhor meu Deus! Quantas maravilhas tens feito! Não se pode relatar os planos que preparaste para nós! Eu queria proclamá-los e anunciá-los, mas são por demais numerosos!
6 ಯಜ್ಞದಲ್ಲಿಯೂ ಅರ್ಪಣೆಯಲ್ಲಿಯೂ ನೀನು ಇಷ್ಟ ಪಡಲಿಲ್ಲ; ದಹನಬಲಿಯನ್ನೂ ಪಾಪದಬಲಿಯನ್ನೂ ನೀನು ಕೇಳಲಿಲ್ಲ. ನನ್ನ ಕಿವಿಗಳನ್ನು ನೀನು ತೆರೆದಿ;
6 Sacrifício e oferta não pediste, mas abriste os meus ouvidos; holocaustos e ofertas pelo pecado, não exigiste.
7 ಆಗ ನಾನು--ಇಗೋ, ನಾನು ಇದ್ದೇನೆ; ಪುಸ್ತಕದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ.
7 Então eu disse: Aqui estou! No livro está escrito a meu respeito.
8 ಓ ನನ್ನ ದೇವರೇ ನಿನಗೆ ಮೆಚ್ಚಿಕೆಯಾದದ್ದನ್ನು ಮಾಡಲು ಸಂತೋಷಿಸುತ್ತೇನೆ; ನಿನ್ನ ನ್ಯಾಯ ಪ್ರಮಾಣವು ನನ್ನ ಅಂತರಂಗದಲ್ಲಿ ಅದೆ.
8 Tenho grande alegria em fazer a tua vontade, ó meu Deus; a tua lei está no fundo do meu coração.
9 ನಾನು ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿಬಿಟ್ಟಿದ್ದೇನೆ; ಇಗೋ, ಓ ಕರ್ತನೇ, ನಾನು ನನ್ನ ತುಟಿಗಳಿಗೆ ಅಡ್ಡಿ ಮಾಡಲಿಲ್ಲವೆಂಬ ಸಂಗತಿ ನೀನು ತಿಳಿದವ ನಾಗಿದ್ದೀ.
9 Eu proclamo as novas de justiça na grande assembléia; como sabes, Senhor, não fecho os meus lábios.
10 ನಿನ್ನ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ನಾನು ಪ್ರಕಟಿಸಿದ್ದೇನೆ; ನಿನ್ನ ಪ್ರೀತಿ ಕರುಣೆಗಳನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡಲಿಲ್ಲ.
10 Não oculto no coração a tua justiça; falo da tua fidelidade e da tua salvação. Não escondo da grande assembléia a tua fidelidade e a tua verdade.
11 ಕರ್ತನೇ, ನಿನ್ನ ಅಂತಃಕರುಣೆಗಳನ್ನು ನನ್ನಿಂದ ಹಿಂತೆಗೆಯಬೇಡ; ನಿನ್ನ ಪ್ರೀತಿ ಕರುಣೆಗಳೂ ನಿನ್ನ ಸತ್ಯವೂ ಯಾವಾಗಲೂ ನನ್ನನ್ನು ಕಾಯಲಿ.
11 Não me negues a tua misericórdia, Senhor; que o teu amor e a tua verdade sempre me protejam.
12 ಲೆಕ್ಕ ವಿಲ್ಲದಷ್ಟು ಕೇಡುಗಳು ನನ್ನ ಸುತ್ತಲು ಆವರಿಸಿಕೊಂಡಿವೆ; ನಾನು ಮೇಲಕ್ಕೆ ನೋಡಲಾರದಷ್ಟು ನನ್ನ ಅಕ್ರಮ ಗಳು ನನ್ನನ್ನು ಹಿಡಿದವೆ; ಅವು ನನ್ನ ತಲೆಯ ಕೂದಲು ಗಳಿಗಿಂತ ಹೆಚ್ಚಾಗಿವೆ; ಆದದರಿಂದ ನನ್ನ ಹೃದಯವು ನನ್ನನ್ನು ಕುಂದಿಸಿತು.
12 Pois incontáveis problemas me cercam e as minhas culpas me alcançaram, e já não consigo ver. Mais numerosos são que os cabelos da minha cabeça, e o meu coração perdeu o ânimo.
13 ಓ ಕರ್ತನೇ, ನನ್ನನ್ನು ಬಿಡಿಸು ವದಕ್ಕೆ ಇಷ್ಟವುಳ್ಳವನಾಗಿ, ಓ ಕರ್ತನೆ, ನನ್ನ ಸಹಾ ಯಕ್ಕೆ ತ್ವರೆಪಡು.
13 Agrada-te, Senhor, em libertar-me; Apressa-te, Senhor, a ajudar-me.
14 ನನ್ನ ಪ್ರಾಣವನ್ನು ತೆಗೆಯಲು ಅದನ್ನು ಹುಡುಕುವದಕ್ಕೆ ಕೂಡಿಕೊಳ್ಳುವವರೆಲ್ಲರೂ ಆಶಾಭಂಗಪಟ್ಟು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಪಡುವವರು ಹಿಂದಕ್ಕೆ ಅಟ್ಟಲ್ಪಟ್ಟು ಅವ ಮಾನ ಹೊಂದಲಿ.
14 Sejam humilhados e frustrados todos os que procuram tirar-me a vida; retrocedam desprezados os que desejam a minha ruína.
15 ಆಹಾ, ಆಹಾ ಎಂದು ನನಗೆ ಹೇಳುವವರು ತಮ್ಮ ನಾಚಿಕೆಯ ಫಲಕ್ಕಾಗಿ ಹಾಳಾಗಲಿ;
15 Fiquem chocados com a sua própria desgraça os que zombam de mim.
16 ನಿನ್ನನ್ನು ಹುಡುಕುವವರೆಲ್ಲರು ನಿನ್ನಲ್ಲಿ ಆನಂದಪಟ್ಟು ಸಂತೋಷಿಸಲಿ; ನಿನ್ನ ರಕ್ಷಣೆಯನ್ನು ಪ್ರೀತಿಮಾಡುವ ವರು--ಕರ್ತನು ಮಹಿಮೆಪಡಲಿ ಎಂದು ಯಾವಾ ಗಲೂ ಹೇಳಲಿ.
16 Mas regozijem-se e alegrem-se em ti todos os que te buscam; digam sempre aqueles que amam a tua salvação: "Grande é o Senhor! "
17 ಆದರೆ ನಾನು ದೀನನೂ ಬಡ ವನೂ ಆಗಿದ್ದೇನೆ; ಆದರೂ ಕರ್ತನು ನನಗೋಸ್ಕರ ಯೋಚಿಸುತ್ತಾನೆ; ನನ್ನ ಸಹಾಯವೂ ನನ್ನನ್ನು ತಪ್ಪಿಸುವಾ ತನೂ ನೀನೇ; ಓ ನನ್ನ ದೇವರೇ, ತಡ ಮಾಡಬೇಡ.
17 Quanto a mim, sou pobre e necessitado, mas o Senhor preocupa-se comigo. Tu és o meu socorro e o meu libertador; meu Deus, não te demores!

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Salmos 40, comparar traduções ou montar um estudo — tudo direto pelo WhatsApp.