Salmos 143
Kannada Bible (GL_KANNADA) vs BKJ
BKJ BKJ
1 ಓ ಕರ್ತನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ವಿಜ್ಞಾಪನೆಗಳಿಗೆ ಕಿವಿ ಗೊಡು; ನಿನ್ನ ನಂಬಿಗಸ್ತಿಕೆಯಲ್ಲಿಯೂ ನೀತಿಯಲ್ಲಿಯೂ ನನಗೆ ಉತ್ತರಕೊಡು.
1 Salmo de Davi. Ouve a minha oração, ó SENHOR, dá ouvidos às minhas súplicas; responde-me em tua fidelidade, e na tua justiça.
2 ನಿನ್ನ ಸೇವಕನನ್ನು ನ್ಯಾಯವಿಚಾರಣೆಗೆ ಗುರಿಮಾಡಬೇಡ; ಜೀವಿತರಲ್ಲಿ ಒಬ್ಬನಾದರೂ ನಿನ್ನ ಮುಂದೆ ನೀತಿವಂತನಾಗುವದಿಲ್ಲ.
2 E não entres em juízo com o teu servo, pois à tua vista nenhum homem vivo se justificará.
3 ಶತ್ರುವು ನನ್ನ ಪ್ರಾಣವನ್ನು ಹಿಂಸಿಸಿ ನನ್ನ ಜೀವವನ್ನು ನೆಲಕ್ಕೆ ಜಜ್ಜಿ ಬಹುಕಾಲದ ಹಿಂದೆ ಸತ್ತವರ ಹಾಗೆ, ಕತ್ತಲೆಯಲ್ಲಿ ನಾನು ವಾಸಿಸುವಂತೆ ಮಾಡಿದ್ದಾನೆ.
3 Pois o inimigo perseguiu a minha alma; castigou a minha alma até ao chão; fez-me habitar nas trevas, como aqueles que há muito morreram.
4 ನನ್ನ ಆತ್ಮವು ನನ್ನಲ್ಲಿ ಕುಂದಿಹೋಗಿದೆ; ನನ್ನೊಳಗೆ ನನ್ನ ಹೃದಯವು ಹಾಳಾಗಿದೆ.
4 Portanto, meu espírito está sobrecarregado dentro de mim; meu coração dentro de mim está desolado.
5 ಪೂರ್ವಕಾಲದ ದಿವಸಗಳನ್ನು ಜ್ಞಾಪಕಮಾಡಿಕೊಂಡು ನಿನ್ನ ಎಲ್ಲಾ ಕ್ರಿಯೆಗಳಲ್ಲಿ ಧ್ಯಾನಮಾಡಿ, ನಿನ್ನ ಕೈಗಳ ಕೆಲಸವನ್ನು ಆಲೋಚಿಸುತ್ತೇನೆ.
5 Lembro-me dos velhos dias; medito em todas as tuas obras; eu medito sobre a obra das tuas mãos.
6 ನನ್ನ ಕೈಗಳನ್ನು ನಿನ್ನ ಕಡೆಗೆ ಚಾಚುತ್ತೇನೆ; ನನ್ನ ಪ್ರಾಣವು ದಾಹಗೊಂಡ ಭೂಮಿಯ ಹಾಗೆ ನಿನಗಾಗಿ ದಾಹಗೊಂಡಿದೆ.
6 Estendo as minhas mãos para ti; minha alma tem sede de ti, como terra sedenta. Selá.
7 ಓ ಕರ್ತನೇ, ನನಗೆ ಬೇಗನೆ ಉತ್ತರಕೊಡು; ನನ್ನ ಪ್ರಾಣವು ಕುಂದಿಹೋಗಿದೆ; ನಾನು ಕುಣಿಯಲ್ಲಿ ಇಳಿಯುವವರಿಗೆ ಸಮಾನವಾಗದ ಹಾಗೆ ನಿನ್ನ ಮುಖ ವನ್ನು ನನಗೆ ಮರೆಮಾಡಬೇಡ.
7 Ouve-me depressa, ó SENHOR; o meu espírito desfalece. Não escondas a tua face de mim, para que eu não seja como aqueles que descem à cova.
8 ಹೊತ್ತಾರೆಯಲ್ಲಿ ನಿನ್ನ ಪ್ರೀತಿಕರುಣೆಯನ್ನು ನಾನು ಕೇಳುವಂತೆ ಮಾಡು; ನಿನ್ನಲ್ಲಿ ಭರವಸವಿಟ್ಟಿದ್ದೇನೆ; ನಾನು ಹೋಗಬೇಕಾದ ಮಾರ್ಗವನ್ನು ನನಗೆ ತಿಳಿಯಪಡಿಸು; ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ.
8 Faze-me ouvir a tua benignidade pela manhã, pois em ti confio; faze-me conhecer o caminho pelo qual devo caminhar, pois elevo a minha alma a ti.
9 ಓ ಕರ್ತನೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸು; ನಾನು ಅಡಗಿಕೊಳ್ಳು ವಂತೆ ನಿನ್ನ ಬಳಿಗೆ ಓಡುತ್ತೇನೆ.
9 Livra-me, ó SENHOR, dos meus inimigos; fujo para ti, para me esconder.
10 ನಿನ್ನ ಚಿತ್ತದಂತೆ ಮಾಡುವದಕ್ಕೆ ನನಗೆ ಬೋಧಿಸು; ನೀನು ನನ್ನ ದೇವರು; ಒಳ್ಳೇದಾಗಿರುವ ನಿನ್ನ ಆತ್ಮವು ನನ್ನನ್ನು ನೆಟ್ಟನೆಯ ಭೂಮಿಯಲ್ಲಿ ನಡಿಸಲಿ.
10 Ensina-me a fazer a tua vontade, pois tu és o meu Deus. O teu Espírito é bom; guie-me para a terra da retidão.
11 ಓ ಕರ್ತನೇ, ನಿನ್ನ ಹೆಸ ರಿನ ನಿಮಿತ್ತ ನನ್ನನ್ನು ಬದುಕಿಸಿ ನಿನ್ನ ನೀತಿಗನುಸಾರ ವಾಗಿ ನನ್ನ ಪ್ರಾಣವನ್ನು ಇಕ್ಕಟ್ಟಿನೊಳಗಿಂದ ಹೊರಗೆ ಬರಮಾಡು.
11 Vivifica-me, ó SENHOR, por causa do teu nome; por causa da tua justiça, traz a minha alma para fora da tribulação.
12 ನಿನ್ನ ಕರುಣೆಯಿಂದ ನನ್ನ ಶತ್ರು ಗಳನ್ನು ಸಂಹರಿಸಿ ನನ್ನ ಪ್ರಾಣವನ್ನು ಸಂಕಟ ಪಡಿಸುವವರನ್ನೆಲ್ಲಾ ನಾಶಮಾಡು; ನಾನು ನಿನ್ನ ಸೇವಕನಾಗಿದ್ದೇನೆ.
12 E por tua misericórdia corta fora os meus inimigos, e destrói todos aqueles que afligem a minha alma; pois sou teu servo.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Salmos 143, comparar traduções ou montar um estudo — tudo direto pelo WhatsApp.