Salmos 107
Kannada Bible (GL_KANNADA) vs NVI
NVI Nova Versão Internacional
1 ಕರ್ತನನ್ನು ಕೊಂಡಾಡಿರಿ; ಆತನು ಒಳ್ಳೆಯವನು; ಆತನ ಕರುಣೆಯು ಯುಗಯುಗಕ್ಕೂ ಇರುವದು.
1 Dêem graças ao Senhor porque ele é bom; o seu amor dura para sempre.
2 ಕರ್ತನು ವಿಮೋಚಿಸಿ ದವರು ಹಾಗೆಯೇ ಹೇಳಲಿ; ಆತನು ವೈರಿಯ ಕೈಯಿಂದ ಬಿಡುಗಡೆ ಮಾಡಿ,
2 Assim o digam os que o Senhor resgatou, os que livrou das mãos do adversário,
3 ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದೇಶಗಳಿಂದ ಕೂಡಿಸಿದವರು ಹಾಗೆ ಹೇಳಲಿ.
3 e reuniu de outras terras, do Oriente e do Ocidente, do Norte e do Sul.
4 ಅರಣ್ಯದಲ್ಲಿಯೂ ಹಾದಿ ಇಲ್ಲದ ಕಾಡಿನಲ್ಲಿಯೂ ಅಲೆದು ವಾಸಿಸುವದಕ್ಕೆ ಪಟ್ಟಣವನ್ನು ಕಂಡುಕೊಳ್ಳದೆ,
4 Perambularam pelo deserto e por terras áridas sem encontrar cidade habitada.
5 ಹಸಿದು, ದಾಹಗೊಂಡು ಅವರ ಪ್ರಾಣವು ಅವರಲ್ಲಿ ಕುಗ್ಗಿಹೋಯಿತು.
5 Estavam famintos e sedentos; suas vidas iam-se esvaindo.
6 ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಬಿಡಿಸಿ,
6 Na sua aflição, clamaram ao Senhor, e ele os livrou da tribulação em que se encontravam
7 ವಾಸಿಸುವ ಪಟ್ಟಣಕ್ಕೆ ಹೋಗುವ ಹಾಗೆ ಅವರನ್ನು ಸರಿಯಾದ ಹಾದಿಯಲ್ಲಿ ನಡಿಸಿದನು.
7 e os conduziu por caminho seguro a uma cidade habitada.
8 ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಮನುಷ್ಯನ ಮಕ್ಕಳಿಗೆ ಆತನು ಮಾಡುವ ಅದ್ಭುತ ಗಳಿಗೋಸ್ಕರವೂ ಕೊಂಡಾಡಲಿ.
8 Que eles dêem graças ao Senhor por seu amor leal e por suas maravilhas em favor dos homens,
9 ದಾಹಪಟ್ಟ ಪ್ರಾಣ ವನ್ನು ತೃಪ್ತಿಪಡಿಸಿ ಹಸಿದ ಪ್ರಾಣವನ್ನು ಒಳ್ಳೇದರಿಂದ ತುಂಬಿಸಿದ್ದಾನೆ.
9 porque ele sacia o sedento e satisfaz plenamente o faminto.
10 ಕತ್ತಲಲ್ಲಿ ಮತ್ತು ಮರಣದ ನೆರಳಿ ನಲ್ಲಿ ಕೂತವರೂ ದೀನತೆಯಲ್ಲಿಯೂ ಕಬ್ಬಿಣದ ಬೇಡಿ ಯಲ್ಲಿ ಬಂಧಿತರೂ ಸೆರೆಬಿದ್ದವರೂ ಆದ ಇವರು
10 Assentaram-se nas trevas e na sombra mortal, aflitos, acorrentados,
11 ದೇವರ ಮಾತುಗಳನ್ನು ಎದುರಿಸಿ, ಮಹೋನ್ನತನ ಆಲೋಚನೆಯನ್ನು ಅಸಹ್ಯಿಸಿದ್ದರಿಂದ
11 pois se rebelaram contra as palavras de Deus e desprezaram os desígnios do Altíssimo.
12 ಆತನು ಅವರ ಹೃದಯವನ್ನು ಕಷ್ಟದಿಂದ ತಗ್ಗಿಸಿದಾಗ ಸಹಾಯಕ ನಿಲ್ಲದೆ ಕೆಳಗೆ ಬಿದ್ದರು.
12 Por isso ele os sujeitou a trabalhos pesados; eles tropeçaram, e não houve quem os ajudasse.
13 ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳ ಗಿಂದ ಅವರನ್ನು ರಕ್ಷಿಸಿ
13 Na sua aflição, clamaram ao Senhor, e eles os salvou da tribulação em que se encontravam.
14 ಕತ್ತಲೆಯೊಳಗಿಂದಲೂ ಮರಣದ ನೆರಳಿನಿಂದಲೂ ಅವರನ್ನು ಹೊರಗೆ ತಂದು ಅವರ ಬಂಧನಗಳನ್ನು ಮುರಿದುಬಿಟ್ಟನು.
14 Ele os tirou das trevas e da sombra mortal, e quebrou as correntes que os prendiam.
15 ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿಗೋ ಸ್ಕರವೂ ಕೊಂಡಾಡಲಿ.
15 Que eles dêem graças ao Senhor, por seu amor leal e por suas maravilhas em favor dos homens,
16 ಆತನು ಹಿತ್ತಾಳೆಯ ಕದ ಗಳನ್ನು ಮುರಿದು ಕಬ್ಬಿಣದ ಅಗುಳಿಗಳನ್ನು ಕಡಿದು ಬಿಟ್ಟಿದ್ದಾನೆ.
16 porque despedaçou as portas de bronze e rompeu as trancas de ferro.
17 ಮೂಢರು ತಮ್ಮ ದ್ರೋಹದಿಂದಲೂ ಅಕ್ರಮಗಳಿಂದಲೂ ಶ್ರಮೆಪಡುತ್ತಾರೆ.
17 Tornaram-se tolos por causa dos seus caminhos rebeldes, e sofreram por causa das suas maldades.
18 ಅವರ ಪ್ರಾಣವು ಎಲ್ಲಾ ಆಹಾರವನ್ನು ಅಸಹ್ಯಿಸುತ್ತದೆ; ಅವರು ಮರಣದ ಬಾಗಲುಗಳಿಗೆ ಸವಿಾಪಿಸುತ್ತಾರೆ.
18 Sentiram repugnância por toda comida e chegaram perto das portas da morte.
19 ಆಗ ಅವರು ತಮ್ಮ ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಲು ಆತನು ಅವರನ್ನು ಅವರ ಸಂಕಟಗಳೊಳಗಿಂದ ರಕ್ಷಿಸುತ್ತಾನೆ.
19 Na sua aflição, clamaram ao Senhor, e ele os salvou da tribulação em que se encontravam.
20 ಆತನು ತನ್ನ ವಾಕ್ಯವನ್ನು ಕಳುಹಿಸಿ ಅವರನ್ನು ಸ್ವಸ್ಥಮಾಡಿ ಅವರ ನಾಶನಗಳಿಂದ ಅವರನ್ನು ತಪ್ಪಿಸಿ ದನು.
20 Ele enviou a sua palavra e os curou, e os livrou da morte.
21 ಅವರು ಕರ್ತನನ್ನು ಆತನ ಒಳ್ಳೆಯತನ ಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
21 Que eles dêem graças ao Senhor, por seu amor leal e por suas maravilhas em favor dos homens.
22 ಸ್ತೋತ್ರದ ಬಲಿಗಳನ್ನು ಅರ್ಪಿಸಿ ಆತನ ಕೆಲಸಗಳನ್ನು ಉತ್ಸಾಹ ದಿಂದ ಸಾರಲಿ.
22 Que eles ofereçam sacrifícios de ação de graças e anunciem as suas obras com cânticos de alegria.
23 ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗಿ ಬಹಳ ನೀರುಗಳಲ್ಲಿ ವ್ಯಾಪಾರಮಾಡುವವರು
23 Fizeram-se ao mar em navios, para negócios na imensidão das águas,
24 ಕರ್ತನ ಕೆಲಸಗಳನ್ನೂ ಅಗಾಧಗಳಲ್ಲಿ ಆತನ ಅದ್ಭುತಗಳನ್ನೂ ನೋಡುತ್ತಾರೆ.
24 e viram as obras do Senhor, as suas maravilhas nas profundezas.
25 ಆತನು ಆಜ್ಞಾಪಿಸಿ ಬಿರುಗಾಳಿಯನ್ನು ಏಳಮಾಡುತ್ತಾನೆ; ಅದು ಅದರ ತೆರೆಗಳನ್ನು ಎಬ್ಬಿಸುತ್ತದೆ.
25 Deus falou e provocou um vendaval que levantava as ondas.
26 ಅವರು ಆಕಾಶಕ್ಕೆ ಏರು ತ್ತಾರೆ; ತಿರುಗಿ ಅಗಾಧಗಳಿಗೆ ಇಳಿಯುತ್ತಾರೆ; ಅವರ ಪ್ರಾಣವು ಕಳವಳದಿಂದ ಕರಗಿಹೋಗುತ್ತದೆ.
26 Subiam aos céus e desciam aos abismos; diante de tal perigo, perderam a coragem.
27 ಅವರು ಅತ್ತಿತ್ತ ತೂಗಾಡಿ ಮತ್ತನ ಹಾಗೆ ಓಲಾ ಡುತ್ತಾರೆ. ಅವರ ಜ್ಞಾನವೆಲ್ಲಾ ನುಂಗಿ ಹೋಯಿತು.
27 Cambaleavam, tontos como bêbados, e toda a sua habilidade foi inútil.
28 ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಹೊರಗೆ ಬರಮಾಡಿ
28 Na sua aflição, clamaram ao Senhor, e ele os tirou da tribulação em que se encontravam.
29 ಬಿರುಗಾಳಿಯನ್ನು ಶಾಂತಮಾಡುತ್ತಾನೆ; ಹೀಗೆ ಅದರ ತೆರೆಗಳು ನಿಂತು ಹೋಗುವವು.
29 Reduziu a tempestade a uma brisa e serenou as ondas.
30 ಅವು ಶಾಂತವಾದಾಗ ಅವರು ಸಂತೋಷಪಡುತ್ತಾರೆ; ಹೀಗೆ ಅವರು ಅಪೇಕ್ಷಿಸಿದ ರೇವಿಗೆ ಅವರನ್ನು ನಡೆಸುತ್ತಾನೆ.
30 As ondas sossegaram, ele se alegraram, e Deus os guiou ao porto almejado.
31 ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿ ಗೋಸ್ಕರವೂ ಕೊಂಡಾಡಲಿ.
31 Que eles dêem graças ao Senhor por seu amor leal e por suas maravilhas em favor dos homens,
32 ಜನರು ಸಭೆಯಲ್ಲಿ ಆತನನ್ನು ಘನಪಡಿಸಿ ಹಿರಿಯರ ಸಭೆಯಲ್ಲಿ ಆತನನ್ನು ಸ್ತುತಿಸಲಿ.
32 Que o exaltem na assembléia do povo e o louvem na reunião dos líderes.
33 ಆತನು ನದಿಗಳನ್ನು ಅರಣ್ಯವಾಗಿಯೂ ನೀರಿನ ಬುಗ್ಗೆಗಳನ್ನು ಒಣ ಭೂಮಿಯಾಗಿಯೂ
33 Ele transforma os rios em deserto e as fontes em terra seca,
34 ಫಲ ವುಳ್ಳ ಭೂಮಿಯನ್ನು ಬಂಜರಾಗಿಯೂ ಅದರ ನಿವಾಸಿ ಗಳ ಕೆಟ್ಟತನಕ್ಕೋಸ್ಕರ ಮಾರ್ಪಡಿಸುತ್ತಾನೆ.
34 faz da terra fértil um solo estéril, por causa da maldade dos seus moradores.
35 ಆತನು ಅರಣ್ಯವನ್ನು ನೀರಿನ ಕೆರೆಯಾಗಿಯೂ ಒಣ ಭೂಮಿ ಯನ್ನು ನೀರಿನ ಬುಗ್ಗೆಗಳಾಗಿಯೂ ಮಾರ್ಪಡಿಸುತ್ತಾನೆ.
35 Transforma o deserto em açudes e a terra ressecada, em fontes.
36 ಅಲ್ಲಿ ಹಸಿದವರನ್ನು ವಾಸಿಸಮಾಡುತ್ತಾನೆ; ಆಗ ಅವರು ವಾಸಿಸುವ ಪಟ್ಟಣವನ್ನು ಸ್ಥಾಪಿಸಿ,
36 Ali ele assenta os famintos, para fundar uma cidade habitável,
37 ಹೊಲ ಗಳನ್ನು ಬಿತ್ತಿ, ದ್ರಾಕ್ಷಾಲತೆಗಳನ್ನು ನೆಡುವರು; ಅವು ಹುಟ್ಟುವಳಿಯ ಫಲವನ್ನು ಕೊಡುವವು.
37 semear lavouras, plantar vinhas e colher uma grande safra.
38 ಆತನು ಅವರನ್ನು ಆಶೀರ್ವದಿಸಿದ್ದರಿಂದ ಅವರು ಬಹಳವಾಗಿ ಹೆಚ್ಚುತ್ತಾರೆ; ಅವರ ದನಗಳನ್ನು ಸಹ ಆತನು ಕಡಿಮೆ ಮಾಡುವದಿಲ್ಲ.
38 Ele os abençoa, e eles se multiplicam; e não deixa que diminuam os seus rebanhos.
39 ತಿರಿಗಿ ಅವರು ಕಡಿಮೆಯಾಗಿ ಕೇಡು ಚಿಂತೆಗಳ ಸಂಕಟದಿಂದ ಕುಗ್ಗುತ್ತಾರೆ.
39 Quando, porém, reduzidos, são humilhados com opressão, desgraça e tristeza.
40 ಆತನು ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯಿದು ಅವ ರನ್ನು ದಾರಿ ಇಲ್ಲದ ಕಾಡಿನಲ್ಲಿ ಅಲೆಯ ಮಾಡುತ್ತಾನೆ.
40 Deus derrama desprezo sobre os nobres e os faz vagar num deserto sem caminhos.
41 ಆದಾಗ್ಯೂ ಆತನು ಬಡವನನ್ನು ಸಂಕಟದಿಂದ ಉನ್ನತಕ್ಕೇರಿಸಿ ಅವನ ಕುಟುಂಬಗಳನ್ನು ಮಂದೆಯ ಹಾಗೆ ಇರಿಸುತ್ತಾನೆ.
41 Mas tira os pobres da miséria e aumenta as suas famílias como rebanhos.
42 ನೀತಿವಂತರು ನೋಡಿ ಸಂತೋ ಷಪಡುವರು; ಆದರೆ ಎಲ್ಲಾ ಅಕ್ರಮಗಾರರು ಬಾಯಿ ಮುಚ್ಚಿಕೊಳ್ಳುವರು.
42 Os justos vêem tudo isso e se alegram, mas todos os perversos se calam.
43 ಜ್ಞಾನಿಯು ಯಾವನೋ, ಅವನು ಇವುಗಳನ್ನು ಗಮನಿಸುವನು; ಅವರು ಕರ್ತನ ಪ್ರೀತಿ ಕರುಣೆಯನ್ನು ಗ್ರಹಿಸಿಕೊಳ್ಳುವರು.
43 Reflitam nisso os sábios e considerem a bondade do Senhor.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Salmos 107, comparar traduções ou montar um estudo — tudo direto pelo WhatsApp.