Provérbios 28

Kannada Bible (GL_KANNADA) vs ARA

Sair da comparação
ARA Almeida Revista e Atualizada 1993
1 ಹಿಂದಟ್ಟುವವನು ಇಲ್ಲದಿದ್ದರೂ ದುಷ್ಟರು ಓಡಿಹೋಗುತ್ತಾರೆ; ಸಿಂಹದ ಹಾಗೆ ನೀತಿವಂತರು ಧೈರ್ಯದಿಂದ ಇರುತ್ತಾರೆ.
1 Fogem os perversos, sem que ninguém os persiga; mas o justo é intrépido como o leão.
2 ದೇಶದ ದೋಷಕ್ಕಾಗಿ ಅನೇಕ ಪ್ರಭುಗಳು ಇರುತ್ತಾರೆ; ಆದರೆ ಮನುಷ್ಯನ ವಿವೇಕದಿಂದಲೂ ತಿಳುವಳಿಕೆಯಿಂದಲೂ ಅದರ ಸ್ಥಿತಿಯು ವಿಸ್ತರಿಸುತ್ತದೆ.
2 Por causa da transgressão da terra, mudam-se frequentemente os príncipes, mas por um, sábio e prudente, se faz estável a sua ordem.
3 ಬಡವರನ್ನು ಹಿಂಸಿಸುವ ದರಿದ್ರನು ಆಹಾರವನ್ನು ಉಳಿಸದಂತೆ ಸುರಿಯುವ ಮಳೆಯಂತಿದ್ದಾನೆ.
3 O homem pobre que oprime os pobres é como chuva que a tudo arrasta e não deixa trigo.
4 ಕಟ್ಟಳೆಯನ್ನು ತ್ಯಜಿಸುವವನು ದುಷ್ಟರನ್ನು ಹೊಗಳುತ್ತಾನೆ; ಕಟ್ಟಳೆಯನ್ನು ಕೈಕೊಳ್ಳು ವವರು ಅವರೊಂದಿಗೆ ಹೋರಾಡುತ್ತಾರೆ.
4 Os que desamparam a lei louvam o perverso, mas os que guardam a lei se indignam contra ele.
5 ನ್ಯಾಯ ತೀರ್ಪನ್ನು ದುಷ್ಟರು ಗ್ರಹಿಸುವದಿಲ್ಲ; ಕರ್ತನನ್ನು ಹುಡುಕುವವರು ಎಲ್ಲವುಗಳನ್ನು ಗ್ರಹಿಸುತ್ತಾರೆ.
5 Os homens maus não entendem o que é justo, mas os que buscam o
6 ಐಶ್ವರ್ಯವಂತನಾಗಿದ್ದರೂ ತನ್ನ ಮಾರ್ಗದಲ್ಲಿ ವಕ್ರ ವಾಗಿರುವವನಿಗಿಂತ ತನ್ನ ಯಥಾರ್ಥತೆಯಲ್ಲಿ ನಡೆ ಯುವ ದರಿದ್ರನು ಶ್ರೇಷ್ಠನು.
6 Melhor é o pobre que anda na sua integridade do que o perverso, nos seus caminhos, ainda que seja rico.
7 ಕಟ್ಟಳೆಯನ್ನು ಕೈಕೊಳ್ಳು ವವನು ಜ್ಞಾನಿಯಾದ ಮಗನು; ದುಂದುಗಾರ ಸಂಗ ಡಿಗನು ತನ್ನ ತಂದೆಯನ್ನು ಅವಮಾನಪಡಿಸುತ್ತಾನೆ.
7 O que guarda a lei é filho prudente, mas o companheiro de libertinos envergonha a seu pai.
8 ಬಡ್ಡಿಯಿಂದಲೂ ಅನ್ಯಾಯದ ಲಾಭದಿಂದಲೂ ತನ್ನ ಆಸ್ತಿಯನ್ನು ವೃದ್ಧಿಗೊಳಿಸುವವನು ಬಡವರ ಮೇಲೆ ದಯೆತೋರಿಸುವವನಿಗೆ ಅದನ್ನು ಕೂಡಿಸುವನು.
8 O que aumenta os seus bens com juros e ganância ajunta-os para o que se compadece do pobre.
9 ನ್ಯಾಯಪ್ರಮಾಣವನ್ನು ಕೇಳದೆ ತನ್ನ ಕಿವಿಯನ್ನು ತಿರುಗಿಸಿಕೊಳ್ಳುವವನ ಪ್ರಾರ್ಥನೆಯು ಅಸಹ್ಯ.
9 O que desvia os ouvidos de ouvir a lei, até a sua oração será abominável.
10 ದುರ್ಮಾರ್ಗದಲ್ಲಿ ನೀತಿವಂತರನ್ನು ದಾರಿತಪ್ಪಿಸು ವವನು ತಾನೇ ತನ್ನ ಸ್ವಂತ ಕುಣಿಯೊಳಕ್ಕೆ ಬೀಳುವನು; ಯಥಾರ್ಥವಂತರಿಗಾದರೋ ಒಳ್ಳೆಯವುಗಳು ಸೊತ್ತಾ ಗುವವು.
10 O que desvia os retos para o mau caminho, ele mesmo cairá na cova que fez, mas os íntegros herdarão o bem.
11 ತನ್ನ ಸ್ವಂತ ಅಭಿಪ್ರಾಯದಲ್ಲಿ ಐಶ್ವರ್ಯ ವಂತನು ಜ್ಞಾನಿಯಾಗಿದ್ದಾನೆ; ವಿವೇಕಿಯಾದ ಬಡವನು ಅವನನ್ನು ಪರೀಕ್ಷಿಸುತ್ತಾನೆ.
11 O homem rico é sábio aos seus próprios olhos; mas o pobre que é sábio sabe sondá-lo.
12 ನೀತಿವಂತರು ಉಲ್ಲಾಸಿಸಿ ದರೆ ದೊಡ್ಡ ಘನತೆ ಇರುವದು; ದುಷ್ಟರಿಗೆ ಏಳಿಗೆ ಯಾದರೆ ಮನುಷ್ಯನು ಅಡಗಿಕೊಳ್ಳುತ್ತಾನೆ.
12 Quando triunfam os justos, há grande festividade; quando, porém, sobem os perversos, os homens se escondem.
13 ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನು ವೃದ್ಧಿಯಾಗನು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನು ಕರುಣೆ ಹೊಂದುವನು.
13 O que encobre as suas transgressões jamais prosperará; mas o que as confessa e deixa alcançará misericórdia.
14 ಯಾವಾಗಲೂ ಭಯದಿಂದ ಇರು ವವನು ಧನ್ಯನು; ತನ್ನ ಹೃದಯವನ್ನು ಕಠಿಣಪಡಿಸಿ ಕೊಳ್ಳುವವನು ಕೇಡಿಗೆ ಸಿಕ್ಕಿಬೀಳುವನು.
14 Feliz o homem constante no temor de Deus; mas o que endurece o coração cairá no mal.
15 ಗರ್ಜಿಸುವ ಸಿಂಹದಂತೆಯೂ ಅಲೆದಾಡುವ ಕರಡಿಯಂತೆಯೂ ಬಡವರಾದ ಜನರನ್ನು ಆಳುವ ದುಷ್ಟನು ಇರುತ್ತಾನೆ.
15 Como leão que ruge e urso que ataca, assim é o perverso que domina sobre um povo pobre.
16 ವಿವೇಕ ಶೂನ್ಯನಾದ ಒಡೆಯನು ಮಹಾಹಿಂಸಕನು; ಲೋಭತನವನ್ನು ಹಗೆಮಾಡುವವನು ತನ್ನ ದಿನಗಳನ್ನು ದೀರ್ಘಮಾಡುತ್ತಾನೆ.
16 O príncipe falto de inteligência multiplica as opressões, mas o que aborrece a avareza viverá muitos anos.
17 ಒಬ್ಬ ಮನುಷ್ಯನ ರಕ್ತಕ್ಕೆ ಬಲಾತ್ಕಾರ ಮಾಡುವವನು ಕುಣಿಗೆ ಹಾರುವನು; ಅವನನ್ನು ಯಾವನೂ ತಡೆಯದಿರಲಿ.
17 O homem carregado do sangue de outrem fugirá até à cova; ninguém o detenha.
18 ಯಥಾರ್ಥ ವಾಗಿ ನಡೆಯುವವನು ರಕ್ಷಿಸಲ್ಪಡುವನು; ತನ್ನ ಮಾರ್ಗ ಗಳಲ್ಲಿ ವಕ್ರವಾಗಿ ನಡೆದುಕೊಳ್ಳುವವನು ತಟ್ಟನೆ ಬೀಳು ವನು.
18 O que anda em integridade será salvo, mas o perverso em seus caminhos cairá logo.
19 ತನ್ನ ಭೂಮಿಯನ್ನು ವ್ಯವಸಾಯ ಮಾಡುವ ವನಿಗೆ ಸಮೃದ್ಧಿಯಾದ ರೊಟ್ಟಿ ಇರುವದು; ಆದರೆ ವ್ಯರ್ಥ ಜನರನ್ನು ಹಿಂಬಾಲಿಸುವವನಿಗೆ ಸಾಕಾದಷ್ಟು ಬಡತನವು ಇರುವದು.
19 O que lavra a sua terra virá a fartar-se de pão, mas o que se ajunta a vadios se fartará de pobreza.
20 ನಂಬಿಗಸ್ತನಾದ ಮನು ಷ್ಯನು ಆಶೀರ್ವಾದಗಳಲ್ಲಿ ತುಂಬಿತುಳುಕುವನು; ಆದರೆ ಧನವಂತನಾಗಲು ಆತುರಪಡುವವನು ನಿರ್ದೋಷಿ ಯಾಗಿರುವದಿಲ್ಲ.
20 O homem fiel será cumulado de bênçãos, mas o que se apressa a enriquecer não passará sem castigo.
21 ಪಕ್ಷಪಾತವು ಸರಿಯಲ್ಲ; ತುತ್ತು ರೊಟ್ಟಿಗಾಗಿ ಒಬ್ಬನು ದ್ರೋಹಮಾಡುವನು.
21 Parcialidade não é bom, porque até por um bocado de pão o homem prevaricará.
22 ಧನ ವಂತನಾಗಲು ಆತುರಪಡುವವನು ಕೆಟ್ಟ ಕಣ್ಣುಳ್ಳವ ನಾಗಿದ್ದಾನೆ; ತನಗೆ ಬಡತನವು ಬರುವದನ್ನು ಅವನು ಯೋಚಿಸುವದಿಲ್ಲ.
22 Aquele que tem olhos invejosos corre atrás das riquezas, mas não sabe que há de vir sobre ele a penúria.
23 ತನ್ನ ನಾಲಿಗೆಯಿಂದ ಮುಖಸ್ತುತಿ ಮಾಡುವವನಿಗಿಂತ ಒಬ್ಬನನ್ನು ಗದರಿಸುವವನು ತರುವಾಯ ಹೆಚ್ಚು ದಯಾಪಾತ್ರನಾಗುವನು.
23 O que repreende ao homem achará, depois, mais favor do que aquele que lisonjeia com a língua.
24 ತನ್ನ ತಂದೆ ತಾಯಿಯನ್ನಾಗಲಿ ದೋಚಿಕೊಂಡು--ಇದು ದೋಷವಲ್ಲ ಎಂದು ಹೇಳುವವನು ಕೆಡುಕನಿಗೆ ಜೊತೆಗಾರನು.
24 O que rouba a seu pai ou a sua mãe e diz: Não é pecado, companheiro é do destruidor.
25 ಗರ್ವದ ಹೃದಯವುಳ್ಳವನು ಕಲಹ ವನ್ನೆಬ್ಬಿಸುವನು; ಕರ್ತನಲ್ಲಿ ಭರವಸವಿಡುವವನು ಪುಷ್ಟ ನಾಗುವನು.
25 O cobiçoso levanta contendas, mas o que confia no
26 ತನ್ನ ಹೃದಯದಲ್ಲಿಯೇ ಭರವಸವಿ ಡುವವನು ಬುದ್ಧಿಹೀನನು; ಜ್ಞಾನದಿಂದ ನಡೆಯುವ ವನು ತಪ್ಪಿಸಿಕೊಳ್ಳುವನು.
26 O que confia no seu próprio coração é insensato, mas o que anda em sabedoria será salvo.
27 ಬಡವರಿಗೆ ದಾನಮಾಡು ವವರು ಕೊರತೆಪಡುವದಿಲ್ಲ; ತನ್ನ ಕಣ್ಣುಗಳನ್ನು ಮುಚ್ಚಿ ಕೊಳ್ಳುವವನಿಗೆ ಅನೇಕ ಶಾಪಗಳು.
27 O que dá ao pobre não terá falta, mas o que dele esconde os olhos será cumulado de maldições.
28 ದುಷ್ಟರು ಎದ್ದರೆ ಜನರು ಅಡಗಿಕೊಳ್ಳುತ್ತಾರೆ. ಅವರು ನಾಶ ವಾದರೆ ನೀತಿವಂತರು ವೃದ್ಧಿಯಾಗುತ್ತಾರೆ.
28 Quando sobem os perversos, os homens se escondem, mas, quando eles perecem, os justos se multiplicam.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Provérbios 28, comparar traduções ou montar um estudo — tudo direto pelo WhatsApp.