Provérbios 17

Kannada Bible (GL_KANNADA) vs ARC

Sair da comparação
ARC Almeida Revista e Corrigida 2009
1 1 ವಿವಾದದೊಂದಿಗೆ ಬಲಿಗಳಿಂದ ತುಂಬಿದ ಮನೆಗಿಂತ ಸಮಾಧಾನದ ಒಣತುತ್ತೇ ಮೇಲು.
1 Melhor é um bocado seco e com ele a tranquilidade do que a casa cheia de vítimas, com contenda.
2 ನಾಚಿಕೆಪಡಿಸುವ ಮಗನ ಮೇಲೆ ಜ್ಞಾನಿ ಯಾದ ಸೇವಕನು ಆಳುವವನಾಗಿ ಸಹೋದರರಲ್ಲಿ ಬಾಧ್ಯತೆಗೆ ಪಾಲುಗಾರನಾಗುವನು.
2 O servo prudente dominará sobre o filho que procede indignamente; e entre os irmãos repartirá a herança.
3 ಬೆಳ್ಳಿ ಬಂಗಾರ ಗಳನ್ನು ಪುಟ ಕುಲುಮೆಗಳು ಶೋಧಿಸುವವು, ಕರ್ತನು ಹೃದಯಗಳನ್ನು ಶೋಧಿಸುತ್ತಾನೆ.
3 O crisol é para a prata, e o forno, para o ouro; mas o Senhor prova os corações.
4 ಕೇಡು ಮಾಡುವ ವನು ಕೆಟ್ಟ ತುಟಿಗಳಿಗೆ ಕಿವಿಗೊಡುತ್ತಾನೆ; ಸುಳ್ಳುಗಾರನು ನೀಚವಾದ ನಾಲಿಗೆಗೆ ಕಿವಿಗೊಡುವನು;
4 O malfazejo atenta para o lábio iníquo; o mentiroso inclina os ouvidos para a língua maligna.
5 ಬಡವರನ್ನು ಹಾಸ್ಯಮಾಡುವವನು ತನ್ನ ಸೃಷ್ಟಿ ಕರ್ತ ನನ್ನೇ ನಿಂದಿಸುತ್ತಾನೆ; ವಿಪತ್ತುಗಳಿಗೆ ಸಂತೋಷಿಸು ವವನು ಶಿಕ್ಷೆಯನ್ನು ಹೊಂದಲೇಬೇಕು.
5 O que escarnece do pobre insulta ao que o criou; o que se alegra da calamidade não ficará impune.
6 ಮಕ್ಕಳ ಮಕ್ಕಳು ವೃದ್ಧರಿಗೆ ಕಿರೀಟ; ಮಕ್ಕಳ ಭೂಷಣವು ಅವರ ತಂದೆ ಗಳೇ.
6 Coroa dos velhos são os filhos dos filhos; e a glória dos filhos são seus pais.
7 ಬುದ್ಧಿಹೀನನಿಗೆ ಉತ್ತಮವಾದ ನುಡಿಯುಕ್ತ ವಲ್ಲ; ರಾಜಪುತ್ರನಿಗೆ ಸುಳ್ಳಾಡುವ ತುಟಿಗಳು ಇನ್ನೂ ಎಷ್ಟೋ ಹೆಚ್ಚಾಗಿ ಯುಕ್ತವಲ್ಲ.
7 Não convém ao tolo a fala excelente; quanto menos ao príncipe, o lábio mentiroso!
8 ತಕ್ಕೊಳ್ಳುವವನ ಕಣ್ಣುಗಳಿಗೆ ಲಂಚವು ಬೆಲೆಯುಳ್ಳ ಕಲ್ಲಿನಂತಿದೆ; ಅದನ್ನು ಹೇಗೆ ತಿರುಗಿಸಿದರೂ ಅಭಿವೃದ್ಧಿಯಾಗುತ್ತದೆ.
8 Pedra preciosa é o presente aos olhos dos que o recebem; para onde quer que se volte, servirá de proveito.
9 ದೋಷ ವನ್ನು ಮುಚ್ಚುವವನು ಪ್ರೀತಿಯನ್ನು ಹುಡುಕುತ್ತಾನೆ, ಸಂಗತಿಯನ್ನು ಎತ್ತಿ ಆಡುವವನು ಸ್ನೇಹಿತರನ್ನು ಪ್ರತ್ಯೇ ಕಿಸುತ್ತಾನೆ.
9 O que encobre a transgressão busca a amizade, mas o que renova a questão separa os maiores amigos.
10 ಬುದ್ಧಿಹೀನನಿಗೆ ನೂರು ಪೆಟ್ಟುಗಳಿಗಿಂತ ಜ್ಞಾನಿಗೆ ಒಂದು ಗದರಿಕೆಯ ಮಾತು ಹೆಚ್ಚಾಗಿ ನಾಟು ತ್ತದೆ.
10 Mais profundamente entra a repreensão no prudente do que cem açoites no tolo.
11 ಕೆಟ್ಟವನು ದಂಗೆಯನ್ನೇ ಹುಡುಕುತ್ತಾನೆ; ಆದ ಕಾರಣ ಕ್ರೂರ ಸೇವಕನು ಅವನಿಗೆ ವಿರೋಧವಾಗಿ ಕಳುಹಿಸಲ್ಪಡುವನು.
11 Na verdade, o rebelde não busca senão o mal, mas mensageiro cruel se enviará contra ele.
12 ಮೂರ್ಖತನದಲ್ಲಿ ಮುಳುಗಿ ರುವ ಮೂಢನಿಗೆ ಎದುರಾಗುವದಕ್ಕಿಂತಲೂ ಮರಿಗ ಳನ್ನು ಕಳೆದುಕೊಂಡ ಕರಡಿಗೆ ಎದುರಾಗುವದು ಲೇಸು.
12 Encontre-se com o homem a ursa à qual roubaram os filhos, mas não o louco na sua estultícia.
13 ಉಪಕಾರಕ್ಕೆ ಅಪಕಾರವನ್ನು ಮಾಡುವವನ ಮನೆ ಯಿಂದ ಕೇಡು ತೊಲಗುವದೇ ಇಲ್ಲ.
13 Quanto àquele que torna mal por bem, não se apartará o mal da sua casa.
14 ಒಬ್ಬನು ನೀರನ್ನು ಹೊರಬಿಡುವಂತೆ ಕಲಹದ ಪ್ರಾರಂಭವು ಇರುವದು. ಆದಕಾರಣ ಆ ಕಲಹಕ್ಕೆ ಕೈ ಹಾಕುವದಕ್ಕಿಂತ ಮುಂಚೆ ಅದನ್ನು ಬಿಟ್ಟುಬಿಡು.
14 Como o soltar as águas, é o princípio da contenda; deixa por isso a porfia, antes que sejas envolvido.
15 ದುಷ್ಟರನ್ನು ನೀತಿ ವಂತರೆಂದು ನಿರ್ಣಯಿಸುವವನೂ ನೀತಿವಂತನನ್ನು ದಂಡನೆಗೆ ಗುರಿಮಾಡುವವನೂ ಇವರಿಬ್ಬರೂ ಕರ್ತ ನಿಗೆ ಅಸಹ್ಯರು.
15 O que justifica o ímpio e o que condena o justo abomináveis são para o Senhor , tanto um como o outro.
16 ಬುದ್ಧಿಹೀನನಿಗೆ ಮನಸ್ಸಿಲ್ಲದೆ ಇರು ವದರಿಂದ ಜ್ಞಾನವನ್ನು ಸಂಪಾದಿಸುವದಕ್ಕೆ ಅವನ ಕೈಯಲ್ಲಿ ಕ್ರಯ ಯಾಕೆ?
16 De que serviria o preço na mão do tolo para comprar a sabedoria, visto que não tem entendimento?
17 ಸ್ನೇಹಿತನು ಎಲ್ಲಾ ಸಮ ಯಗಳಲ್ಲಿ ಪ್ರೀತಿಸುತ್ತಾನೆ; ಇಕ್ಕಟ್ಟಿಗೋಸ್ಕರ ಸಹೋ ದರನು ಹುಟ್ಟಿದ್ದಾನೆ.
17 Em todo o tempo ama o amigo; e na angústia nasce o irmão.
18 ವಿವೇಕವಿಲ್ಲದವನು ಕೈ ಮೇಲೆ ಹೊಡೆದು ತನ್ನ ಸ್ನೇಹಿತನ ಎದುರಿನಲ್ಲಿ ಹೊಣೆ ಯಾಗುತ್ತಾನೆ.
18 O homem falto de entendimento dá a mão, ficando por fiador do seu companheiro.
19 ಕಲಹವನ್ನು ಪ್ರೀತಿಮಾಡುವವನು ದೋಷವನ್ನು ಪ್ರೀತಿಮಾಡುತ್ತಾನೆ; ತನ್ನ ದ್ವಾರವನ್ನು ಹೆಚ್ಚಿಸಿಕೊಳ್ಳುವವನು ನಾಶನವನ್ನು ಹುಡುಕುತ್ತಾನೆ.
19 O que ama a contenda ama a transgressão; o que alça a sua porta busca a ruína.
20 ಮೂರ್ಖ ಹೃದಯವುಳ್ಳವನು ಒಳ್ಳೇದನ್ನು ಪಡೆ ಯನು; ಕೆಟ್ಟನಾಲಿಗೆಯುಳ್ಳವನು ಹಾನಿಗೆ ಬೀಳುವನು.
20 O perverso de coração nunca achará o bem; e o que tem a língua dobre virá a cair no mal.
21 ಬುದ್ಧಿಹೀನನನ್ನು ಹೆತ್ತವನಿಗೆ ವ್ಯಥೆ; ಬುದ್ಧಿಹೀನನ ತಂದೆಗೆ ಸಂತೋಷವಿರುವದಿಲ್ಲ.
21 O que gera um tolo, para sua tristeza o faz; e o pai do insensato não se alegrará.
22 ಹರ್ಷ ಹೃದಯನು ಔಷಧದಂತೆ ಒಳ್ಳೇದು ಮಾಡುತ್ತಾನೆ; ಕುಗ್ಗಿದ ಮನಸ್ಸು ಎಲುಬುಗಳನ್ನು ಒಣಗಿಸುತ್ತದೆ.
22 O coração alegre serve de bom remédio, mas o espírito abatido virá a secar os ossos.
23 ನ್ಯಾಯದ ಮಾರ್ಗ ಗಳನ್ನು ತಿರುಗಿಸಿಬಿಡುವದಕ್ಕೆ ದುಷ್ಟನು ಎದೆಯಿಂದ ಲಂಚವನ್ನು ತೆಗೆದುಕೊಳ್ಳುತ್ತಾನೆ.
23 O ímpio tira o presente do seio para perverter as veredas da justiça.
24 ವಿವೇಕಿಯ ಮುಂದೆ ಜ್ಞಾನವಿದೆ; ಬುದ್ಧಿಹೀನನ ಕಣ್ಣುಗಳು ಭೂಮಿಯ ಅಂತ್ಯಗಳಲ್ಲಿ ಇರುವವು.
24 No rosto do sábio se vê a sabedoria, mas os olhos do louco estão nas extremidades da terra.
25 ಬುದ್ಧಿಹೀನ ನಾದ ಮಗನು ತನ್ನ ತಂದೆಗೆ ದುಃಖವೂ ತನ್ನನ್ನು ಹೆತ್ತವಳಿಗೆ ಕಹಿಯೂ ಆಗಿದ್ದಾನೆ.
25 O filho insensato é tristeza para seu pai e amargura para quem o deu à luz.
26 ನೀತಿವಂತನನ್ನು ಶಿಕ್ಷಿಸುವದು ಇಲ್ಲವೆ ಅಕ್ರಮಕ್ಕಾಗಿ ರಾಜಪುತ್ರರನ್ನು ಹೊಡೆಯುವದು ಯುಕ್ತವಲ್ಲ.
26 Não é bom também punir o justo, nem ferirem os príncipes ao que age justamente.
27 ತಿಳುವಳಿಕೆಯುಳ್ಳ ವನು ಮಿತವಾಗಿ ಮಾತನಾಡುತ್ತಾನೆ; ವಿವೇಕಿಯು ಶ್ರೇಷ್ಠವಾದ ಆತ್ಮವುಳ್ಳವನಾಗಿದ್ದಾನೆ.
27 Retém as suas palavras o que possui o conhecimento, e o homem de entendimento é de precioso espírito.
28 ಬುದ್ಧಿಹೀನನು ಮೌನವಾಗಿದ್ದರೆ ಜ್ಞಾನಿಯೆಂದು ಎಣಿಸಲ್ಪಡುವನು; ತನ್ನ ತುಟಿಗಳನ್ನು ಬಿಗಿ ಹಿಡಿಯುವವನು ವಿವೇಕಿಯೆಂದು ಅನ್ನಿಸಿಕೊಳ್ಳುವನು.
28 Até o tolo, quando se cala, será reputado por sábio; e o que cerrar os seus lábios, por sábio.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Provérbios 17, comparar traduções ou montar um estudo — tudo direto pelo WhatsApp.