Provérbios 16
Kannada Bible (GL_KANNADA) vs ACF
ACF Almeida Corrigida Fiel
1 ಮನುಷ್ಯನಲ್ಲಿ ಹೃದಯದ ಸಿದ್ಧತೆಗಳೂ ಬಾಯಿಯ ಪ್ರತ್ಯುತ್ತರವೂ ಕರ್ತನಿಂದಲೇ ಆಗುವವು.
1 Do homem são as preparações do coração, mas do SENHOR a resposta da língua.
2 ಮನುಷ್ಯನ ಮಾರ್ಗಗಳೆಲ್ಲಾ ತನ್ನ ಕಣ್ಣುಗಳ ಮುಂದೆ ಶುದ್ಧವಾಗಿವೆ; ಕರ್ತನು ಆತ್ಮಗಳನ್ನು ತೂಗಿಸುತ್ತಾನೆ.
2 Todos os caminhos do homem são puros aos seus olhos, mas o Senhor pesa o espírito.
3 ನಿನ್ನ ಕಾರ್ಯಗಳನ್ನು ಕರ್ತನಿಗೆ ಒಪ್ಪಿಸಿದರೆ ನಿನ್ನ ಆಲೋಚನೆಗಳು ಸ್ಥಿರವಾಗುವವು.
3 Confia ao Senhor as tuas obras, e teus pensamentos serão estabelecidos.
4 ಎಲ್ಲವುಗಳನ್ನು ಕರ್ತನು ತನಗಾಗಿ ಮಾಡಿದ್ದಾನೆ; ಹೌದು, ಕೇಡಿನ ದಿನಕ್ಕಾಗಿಯೂ ಕೆಡುಕರನ್ನು ಮಾಡಿ ದ್ದಾನೆ.
4 O Senhor fez todas as coisas para atender aos seus próprios desígnios, até o ímpio para o dia do mal.
5 ಹೃದಯದಲ್ಲಿ ಗರ್ವಿಷ್ಠನಾದ ಪ್ರತಿಯೊಬ್ಬನೂ ಕರ್ತನಿಗೆ ಅಸಹ್ಯ. ಕೈಗೆ ಕೈ ಕೊಟ್ಟರೂ ದುಷ್ಟನು ಶಿಕ್ಷಿಸಲ್ಪಡದೆ ಇರುವದಿಲ್ಲ.
5 Abominação é ao Senhor todo o altivo de coração; não ficará impune mesmo de mãos postas.
6 ಕನಿಕರ ಮತ್ತು ಸತ್ಯದಿಂದ ಅಕ್ರಮವು ಶುದ್ಧೀಕರಿಸಲ್ಪಡುತ್ತದೆ; ಕರ್ತನ ಭಯದ ಮೂಲಕ ಮನುಷ್ಯರು ಕೆಟ್ಟದ್ದರಿಂದ ತೊಲಗುತ್ತಾರೆ.
6 Pela misericórdia e verdade a iniqüidade é perdoada, e pelo temor do Senhor os homens se desviam do pecado.
7 ಮನುಷ್ಯನ ಮಾರ್ಗಗಳು ಕರ್ತನನ್ನು ಮೆಚ್ಚಿಸಿದಾಗ ಅವನ ಶತ್ರುಗಳನ್ನು ಸಹ ಅವನೊಂದಿಗೆ ಸಮಾಧಾನ ದಲ್ಲಿರುವಂತೆ ಆತನು ಮಾಡುತ್ತಾನೆ.
7 Sendo os caminhos do homem agradáveis ao Senhor, até a seus inimigos faz que tenham paz com ele.
8 ಅನ್ಯಾಯದ ಬಹು ಆದಾಯಕ್ಕಿಂತಲೂ ನೀತಿಯೊಂದಿಗಿರುವ ಸ್ವಲ್ಪವೇ ಉತ್ತಮ.
8 Melhor é o pouco com justiça, do que a abundância de bens com injustiça.
9 ಒಬ್ಬ ಮನುಷ್ಯನ ಹೃದಯವು ಅವನ ಮಾರ್ಗವನ್ನು ಕಲ್ಪಿಸುತ್ತದೆ; ಆದರೆ ಕರ್ತನು ಅವನ ಹೆಜ್ಜೆಗಳನ್ನು ನಡಿಸುತ್ತಾನೆ.
9 O coração do homem planeja o seu caminho, mas o Senhor lhe dirige os passos.
10 ಅರಸನ ತುಟಿ ಗಳಲ್ಲಿ ದೈವೋಕ್ತಿ; ನ್ಯಾಯತೀರ್ಪಿನಲ್ಲಿ ಅವನ ಬಾಯಿ ಯು ದೋಷಮಾಡುವದಿಲ್ಲ.
10 Nos lábios do rei se acha a sentença divina; a sua boca não transgride quando julga.
11 ನ್ಯಾಯದ ತೂಕವೂ ತಕ್ಕಡಿಯೂ ಕರ್ತನವು; ಚೀಲದ ತೂಕಗಳು ಆತನ ಕೈಕೆಲಸವೇ.
11 O peso e a balança justos são do Senhor; obra sua são os pesos da bolsa.
12 ಕೆಟ್ಟದ್ದನ್ನು ಮಾಡುವವರು ರಾಜರಿಗೆ ಅಸಹ್ಯರು; ನೀತಿಯಿಂದ ಸಿಂಹಾಸನವು ಸ್ಥಾಪಿಸಲ್ಪಡು ತ್ತದೆ.
12 Abominação é aos reis praticarem impiedade, porque com justiça é que se estabelece o trono.
13 ನೀತಿಯ ತುಟಿಗಳು ಅರಸರ ಆನಂದ. ನ್ಯಾಯ ವಾದದ್ದನ್ನು ಮಾತನಾಡುವವನನ್ನು ಅವರು ಪ್ರೀತಿಸು ತ್ತಾರೆ.
13 Os lábios de justiça são o contentamento dos reis; eles amarão o que fala coisas retas.
14 ಅರಸನ ಕೋಪವು ಮೃತ್ಯುವಿನ ದೂತರಂತೆ ಇರುತ್ತದೆ; ಜ್ಞಾನಿಯು ಅದನ್ನು ಶಮನಪಡಿಸುವನು.
14 O furor do rei é mensageiro da morte, mas o homem sábio o apaziguará.
15 ಅರಸನ ಮುಖದ ಬೆಳಕಿನಲ್ಲಿ ಜೀವ; ಅವನ ದಯೆಯು ಹಿಂಗಾರು ಮಳೆಯ ಮೇಘದಂತಿದೆ.
15 No semblante iluminado do rei está a vida, e a sua benevolência é como a nuvem da chuva serôdia.
16 ಬಂಗಾರಕ್ಕಿಂತ ಜ್ಞಾನವನ್ನು ಪಡೆಯುವದು ಎಷ್ಟೋ ಮೇಲು! ಬೆಳ್ಳಿಗಿಂತ ವಿವೇಕವನ್ನು ಆರಿಸಿಕೊಳ್ಳುವದು ಎಷ್ಟೋ ಉತ್ತಮ.
16 Quão melhor é adquirir a sabedoria do que o ouro! e quão mais excelente é adquirir a prudência do que a prata!
17 ಯಥಾರ್ಥವಂತರ ಹೆದ್ದಾರಿಯು ಕೆಟ್ಟತನದಿಂದ ತೊಲಗುವಂಥದ್ದಾಗಿದೆ. ತನ್ನ ಮಾರ್ಗ ವನ್ನು ಕಾಯುವವನು ತನ್ನ ಪ್ರಾಣವನ್ನು ಕಾಪಾಡಿ ಕೊಳ್ಳುತ್ತಾನೆ.
17 Os retos fazem o seu caminho desviar-se do mal; o que guarda o seu caminho preserva a sua alma.
18 ನಾಶನಕ್ಕೆ ಮುಂದಾಗಿ ಗರ್ವ ಹೋಗು ತ್ತದೆ; ಬೀಳುವಿಕೆಯ ಮುಂಚೆ ಜಂಬದ ಮನಸ್ಸು.
18 A soberba precede a ruína, e a altivez do espírito precede a queda.
19 ಅಹಂಕಾರಿಗಳೊಂದಿಗೆ ಕೊಳ್ಳೆಯನ್ನು ಹಂಚಿಕೊಳ್ಳು ವದಕ್ಕಿಂತ ದೀನರೊಂದಿಗೆ ವಿನಯ ಮನಸ್ಸುಳ್ಳವರಾಗಿ ಇರುವದು ಉತ್ತಮ.
19 Melhor é ser humilde de espírito com os mansos, do que repartir o despojo com os soberbos.
20 ಕಾರ್ಯವನ್ನು ಜ್ಞಾನದಿಂದ ನಡಿಸುವವನು ಒಳ್ಳೇದನ್ನು ಪಡೆಯುವನು; ಕರ್ತನಲ್ಲಿ ಭರವಸವಿಡುವವನು ಧನ್ಯನು.
20 O que atenta prudentemente para o assunto achará o bem, e o que confia no Senhor será bem-aventurado.
21 ಹೃದಯದಲ್ಲಿ ಜ್ಞಾನ ವಂತರು ಜಾಣರೆಂದು ಕರೆಯಲ್ಪಡುವರು; ತುಟಿಗಳ ಮಧುರವು ಜ್ಞಾನವನ್ನು ಹೆಚ್ಚಿಸುತ್ತದೆ.
21 O sábio de coração será chamado prudente, e a doçura dos lábios aumentará o ensino.
22 ವಿವೇಕಿಗೆ ವಿವೇಕವೇ ಜೀವದ ಬುಗ್ಗೆ. ಬುದ್ಧಿಹೀನರ ಬೋಧ ನೆಯು ಮೂರ್ಖತನ.
22 O entendimento para aqueles que o possuem, é uma fonte de vida, mas a instrução dos tolos é a sua estultícia.
23 ಜ್ಞಾನಿಯ ಹೃದಯವು ಬಾಯಿಗೆ ಬೋಧಿಸಿ ತನ್ನ ತುಟಿಗಳಿಗೆ ಜ್ಞಾನವನ್ನು ಹೆಚ್ಚಿಸುತ್ತದೆ.
23 O coração do sábio instrui a sua boca, e aumenta o ensino dos seus lábios.
24 ಮನೋಹರವಾದ ಮಾತುಗಳು ಜೇನು ತುಪ್ಪದಂತೆ ಪ್ರಾಣಕ್ಕೆ ಮಧುರವೂ ಎಲುಬು ಗಳಿಗೆ ಕ್ಷೇಮವೂ ಆಗಿವೆ.
24 As palavras suaves são favos de mel, doces para a alma, e saúde para os ossos.
25 ಮನುಷ್ಯರಿಗೆ ಸರಿಯಾಗಿ ತೋರುವ ಒಂದು ಮಾರ್ಗ ಉಂಟು; ಅದರ ಅಂತ್ಯವು ಮರಣದ ಮಾರ್ಗವೇ.
25 Há um caminho que parece direito ao homem, mas o seu fim são os caminhos da morte.
26 ದುಡಿಯುವವನು ತನ ಗಾಗಿಯೇ ದುಡಿಯುತ್ತಾನೆ; ಅವನ ಬಾಯಿಯು ಅದ ಕ್ಕಾಗಿ ಹಂಬಲಿಸುತ್ತದೆ.
26 O trabalhador trabalha para si mesmo, porque a sua boca o incita.
27 ಭಕ್ತಿಹೀನನು ದುಷ್ಟತ್ವವನ್ನು ಅಗೆಯುತ್ತಾನೆ; ಅವನ ತುಟಿಗಳು ಉರಿಯುವ ಬೆಂಕಿ ಯಂತಿವೆ.
27 O homem ímpio cava o mal, e nos seus lábios há como que uma fogueira.
28 ಮೂರ್ಖನು ಜಗಳವನ್ನು ಬಿತ್ತುತ್ತಾನೆ; ಪಿಸುಗುಟ್ಟುವವನು ಪ್ರಮುಖ ಸ್ನೇಹಿತರನ್ನು ಅಗಲಿಸು ತ್ತಾನೆ.
28 O homem perverso instiga a contenda, e o intrigante separa os maiores amigos.
29 ಬಲಾತ್ಕಾರಿಯು ನೆರೆಯವನನ್ನು ಮರುಳು ಗೊಳಿಸಿ ದುರ್ಮಾರ್ಗಕ್ಕೆ ನಡಿಸುತ್ತಾನೆ.
29 O homem violento coage o seu próximo, e o faz deslizar por caminhos nada bons.
30 ವಕ್ರ ಬುದ್ಧಿಯ ಒಳಸಂಚುಗಳಿಗೆ ಅವನು ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾನೆ; ತನ್ನ ತುಟಿಗಳನ್ನು ಕದಲಿಸುತ್ತಾ ಕೆಟ್ಟದ್ದು ಸಂಭವಿಸುವಂತೆ ಮಾಡುತ್ತಾನೆ.
30 O que fecha os olhos para imaginar coisas ruins, ao cerrar os lábios pratica o mal.
31 ನೀತಿಯ ಮಾರ್ಗದಲ್ಲಿ ಕಾಣಿಸಲ್ಪಟ್ಟರೆ ನರೆತಲೆಯು ಸುಂದರ ಕಿರೀಟವಾಗಿವೆ.
31 Coroa de honra são as cãs, quando elas estão no caminho da justiça.
32 ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠನು, ತನ್ನ ಮನಸ್ಸನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಉತ್ತಮನು.
32 Melhor é o que tarda em irar-se do que o poderoso, e o que controla o seu ânimo do que aquele que toma uma cidade.
33 ಉಡಿಲಲ್ಲಿ ಚೀಟು ಹಾಕಬಹುದು; ಅದನ್ನು ಸ್ಥಿತಿಗೆ ತರುವಂತದ್ದು ಕರ್ತನದೇ.
33 A sorte se lança no regaço, mas do Senhor procede toda a determinação.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Provérbios 16, comparar traduções ou montar um estudo — tudo direto pelo WhatsApp.