Números 20
Kannada Bible (GL_KANNADA) vs NVI
NVI Nova Versão Internacional
1 ಇಸ್ರಾಯೇಲ್ ಮಕ್ಕಳ ಸಭೆಯೆಲ್ಲಾ ಜಿನ್ ಎಂಬ ಅರಣ್ಯಕ್ಕೆ ಮೊದಲನೇ ತಿಂಗಳಿನಲ್ಲಿ ಬಂದರು; ಜನರು ಕಾದೇಶಿನಲ್ಲಿ ವಾಸಿಸುವಾಗ ಅಲ್ಲಿ ಮಿರ್ಯಾಮಳು ಸತ್ತು ಅಲ್ಲೇ ಹೂಣಲ್ಪಟ್ಟಳು.
1 No primeiro mês toda a comunidade de Israel chegou ao deserto de Zim e ficou em Cades. Ali Miriã morreu e foi sepultada.
2 ಆಗ ಸಭೆಗೆ ನೀರಿಲ್ಲದೆ ಇರಲಾಗಿ ಅವರು ಮೋಶೆಗೂ ಆರೋನನಿಗೂ ವಿರೋಧವಾಗಿ ಕೂಡಿ ಕೊಂಡರು.
2 Não havia água para a comunidade, e o povo se juntou contra Moisés e contra Arão.
3 ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ ಹೇಳಿದ್ದೇನಂದರೆ--ನಮ್ಮ ಸಹೋದರರು ಕರ್ತನ ಮುಂದೆ ಸತ್ತುಹೋದಾಗಲೇ ನಾವು ಸಹ ಸತ್ತು ಹೋಗಿದ್ದರೆ ಚೆನ್ನಾಗಿತ್ತು.
3 Discutiram com Moisés e disseram: "Quem dera tivéssemos morrido quando os nossos irmãos caíram mortos perante o Senhor!
4 ನಾವೂ ನಮ್ಮ ಪಶುಗಳೂ ಸಾಯುವ ಹಾಗೆ ನೀವು ಯಾಕೆ ಕರ್ತನ ಸಭೆಯನ್ನು ಈ ಅರಣ್ಯಕ್ಕೆ ತಂದಿರಿ?
4 Por que vocês trouxeram a assembléia do Senhor a este deserto, para que nós e os nossos rebanhos morrêssemos aqui?
5 ಈ ಕೆಟ್ಟ ಸ್ಥಳಕ್ಕೆ ನಮ್ಮನ್ನು ತರುವದಕ್ಕೆ ಯಾಕೆ ನಮ್ಮನ್ನು ಐಗುಪ್ತ ದೇಶದೊಳ ಗಿಂದ ಕರಕೊಂಡು ಬಂದಿರಿ? ಈ ಸ್ಥಳದಲ್ಲಿ ಬೀಜ ವಾದರೂ ಅಂಜೂರವಾದರೂ ದ್ರಾಕ್ಷೇತೋಟವಾ ದರೂ ದಾಳಿಂಬರ ಹಣ್ಣಾದರೂ ಇಲ್ಲ; ಕುಡಿಯುವದಕ್ಕೆ ನೀರು ಸಹ ಇಲ್ಲ ಅಂದರು.
5 Por que vocês nos tiraram do Egito e nos trouxeram para este lugar terrível? Aqui não há cereal, nem figos, nem uvas, nem romãs, nem água para beber! "
6 ಆಗ ಮೋಶೆಯೂ ಆರೋನನೂ ಸಭೆಯ ಎದುರಿ ನಿಂದ ಸಭೆಯ ಗುಡಾರದ ಬಾಗಲಿನೊಳಗೆ ಹೋಗಿ ಬೋರಲು ಬಿದ್ದರು; ಕರ್ತನ ಮಹಿಮೆಯು ಅವರಿಗೆ ಕಾಣಬಂತು.
6 Moisés e Arão saíram de diante da assembléia para a entrada da Tenda do Encontro e se prostraram, rosto em terra, e a glória do Senhor lhes apareceu.
7 ಆಗ ಕರ್ತನು ಮೋಶೆಯ ಸಂಗಡ ಮಾತನಾಡಿ--
7 E o Senhor disse a Moisés:
8 ಕೋಲನ್ನು ತಕ್ಕೊಂಡು ನೀನು ನಿನ್ನ ಸಹೋದರನಾದ ಆರೋನನು ಸಭೆಯನ್ನು ಕೂಡಿಸಿ ಕೊಂಡು ಅವರ ಕಣ್ಣುಗಳ ಮುಂದೆ ಬಂಡೆಯ ಸಂಗಡ ಮಾತನಾಡಿರಿ; ಅದು ತನ್ನ ನೀರನ್ನು ಕೊಡುವದು; ನೀನು ಅವರಿಗೋಸ್ಕರ ಬಂಡೆಯೊಳಗಿಂದ ನೀರನ್ನು ಹೊರಗೆ ತರುವಿ; ಸಭೆಗೂ ಅವರ ಪಶುಗಳಿಗೂ ನೀನು ಕುಡಿಯಲು ಕೊಡುವಿ ಎಂದು ಹೇಳಿದನು.
8 "Pegue a vara, e com o seu irmão Arão reúna a comunidade e diante desta fale àquela rocha, e ela verterá água. Vocês tirarão água da rocha para a comunidade e os rebanhos beberem".
9 ಆಗ ಕರ್ತನು ಆಜ್ಞಾಪಿಸಿದ ಹಾಗೆ ಮೋಶೆಯು ಆತನ ಸನ್ನಿಧಿಯಿಂದ ಕೋಲನ್ನು ತಕ್ಕೊಂಡನು.
9 Então Moisés pegou a vara que estava diante do Senhor, como este lhe havia ordenado.
10 ಮೋಶೆಯೂ ಆರೋನನೂ ಸಭೆಯನ್ನು ಬಂಡೆಯ ಮುಂದೆ ಕೂಡಿಸಿ ಅವರಿಗೆ--ತಿರುಗಿಬಿದ್ದವರೇ, ಕೇಳಿರಿ; ನಾವು ನಿಮಗೋಸ್ಕರ ಈ ಬಂಡೆಯೊಳಗಿಂದ ನೀರನ್ನು ಹೊರಡಿಸಬೇಕೋ ಎಂದು ಹೇಳಿದರು.
10 Moisés e Arão reuniram a assembléia em frente da rocha, e Moisés disse: "Escutem, rebeldes, será que teremos que tirar água desta rocha para lhes dar? "
11 ಮೋಶೆಯು ತನ್ನ ಕೈಯನ್ನು ಎತ್ತಿ ತನ್ನ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು; ಆಗ ಬಹಳ ನೀರು ಹೊರಗೆ ಬಂತು; ಸಭೆಯೂ ಅವರ ಪಶುಗಳೂ ಕುಡಿದವು.
11 Então Moisés ergueu o braço e bateu na rocha duas vezes com a vara. Jorrou água, e a comunidade e os rebanhos beberam.
12 ಆಗ ಕರ್ತನು ಮೋಶೆ ಆರೋನನ ಸಂಗಡ ಮಾತನಾಡಿ--ನೀವು ಇಸ್ರಾಯೇಲ್ ಮಕ್ಕಳ ಕಣ್ಣುಗಳ ಮುಂದೆ ನನ್ನನ್ನು ಪರಿಶುದ್ಧಮಾಡುವದಕ್ಕೆ ನನ್ನಲ್ಲಿ ವಿಶ್ವಾಸಿ ಸದೆ ಇದ್ದ ಕಾರಣ ನಾನು ಅವರಿಗೆ ಕೊಟ್ಟ ದೇಶದಲ್ಲಿ ನೀವು ಸಮೂಹವನ್ನು ಸೇರಿಸುವದಿಲ್ಲ ಅಂದನು.
12 O Senhor, porém, disse a Moisés e a Arão: "Como vocês não confiaram em mim para honrar minha santidade à vista dos israelitas, vocês não conduzirão esta comunidade para a terra que lhes dou".
13 ಇಸ್ರಾಯೇಲ್ ಮಕ್ಕಳು ಕರ್ತನ ಸಂಗಡ ವ್ಯಾಜ್ಯ ವಾಡಿದಕ್ಕಾಗಿ ಆತನು ಅವರಲ್ಲಿ ತನ್ನನ್ನು ಪರಿಶುದ್ಧ ಮಾಡಿಕೊಂಡ ಮೆರೀಬಾದ ನೀರು ಇದೇ.
13 Essas foram as águas de Meribá, onde os israelitas discutiram com o Senhor e onde ele manifestou sua santidade entre eles.
14 ಇದಲ್ಲದೆ ಮೋಶೆಯು ಕಾದೇಶಿನಿಂದ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ--ನಿನ್ನ ಸಹೋದರನಾದ ಇಸ್ರಾಯೇ ಲನು ಹೇಳುವದೇನಂದರೆ--ನಮಗೆ ಉಂಟಾದ ಸಕಲ ಆಯಾಸವನ್ನು ನೀನು ಅರಿತಿದ್ದೀ.
14 De Cades, Moisés enviou mensageiros ao rei de Edom, dizendo: "Assim diz o teu irmão Israel: Tu sabes de todas as dificuldades que vieram sobre nós.
15 ನಮ್ಮ ಪಿತೃಗಳು ಐಗುಪ್ತಕ್ಕೆ ಇಳಿದು ಹೋದರು; ಐಗುಪ್ತದಲ್ಲಿ ನಾವು ಬಹಳ ದಿವಸ ವಾಸವಾಗಿದ್ದೆವು; ಐಗುಪ್ತದವರು ನಮಗೂ ನಮ್ಮ ಪಿತೃಗಳಿಗೂ ಕೇಡನ್ನು ಮಾಡಿದರು.
15 Os nossos antepassados desceram para o Egito, e ali vivemos durante muitos anos. Os egípcios, porém, nos maltrataram, como também a eles,
16 ಆದಕಾರಣ ನಾವು ಕರ್ತನಿಗೆ ಕೂಗಿದೆವು; ಆತನು ನಮ್ಮ ಧ್ವನಿಯನ್ನು ಕೇಳಿ ದೂತನನ್ನು ಕಳುಹಿಸಿ ನಮ್ಮನ್ನು ಐಗುಪ್ತದೊಳಗಿಂದ ಹೊರಗೆ ತಂದನು; ಇಗೋ, ನಾವು ನಿನ್ನ ಮೇರೆಯ ಕಡೇ ಊರಾದ ಕಾದೇಶಿನ ಲ್ಲಿದ್ದೇವೆ.
16 mas quando clamamos ao Senhor, ele ouviu o nosso clamor, enviou um anjo e nos tirou do Egito. "Agora estamos em Cades, cidade na fronteira do teu território.
17 ನಮ್ಮನ್ನು ನಿನ್ನ ದೇಶದಿಂದ ದಾಟಿ ಹೋಗ ಗೊಡಿಸು; ನಾವು ಹೊಲವನ್ನಾದರೂ ದ್ರಾಕ್ಷೇತೋಟ ವನ್ನಾದರೂ ದಾಟಿಹೋಗುವದಿಲ್ಲ, ಬಾವಿಗಳ ನೀರನ್ನೂ ಕುಡಿಯುವದಿಲ್ಲ, ರಾಜ ಮಾರ್ಗದಲ್ಲಿ ಮಾತ್ರ ಹೋಗುತ್ತೇವೆ. ನಾವು ನಿನ್ನ ಮೇರೆಯನ್ನು ದಾಟುವ ವರೆಗೆ ಬಲಗಡೆಗಾದರೂ ಎಡಗಡೆಗಾದರೂ ತಿರುಗುವದಿಲ್ಲ.
17 Deixa-nos atravessar a tua terra. Não passaremos por nenhuma plantação ou vinha, nem beberemos água de poço algum. Passaremos pela estrada do rei e não nos desviaremos nem para a direita nem para a esquerda, até que tenhamos atravessado o teu território".
18 ಎದೋಮ್ಯನು ಅವನಿಗೆ ಹೇಳಿದ್ದೇನಂದರೆ--ನೀನು ನನ್ನ ಕಡೆಯಲ್ಲಿ ದಾಟಿ ಹೋಗಬೇಡ; ಹೋದರೆ ನಾನು ಕತ್ತಿಯಿಂದ ನಿನಗೆದುರಾಗಿ ಹೊರಡುವೆನು.
18 Mas Edom respondeu: "Vocês não poderão passar por aqui; se tentarem, nós os atacaremos com a espada".
19 ಆಗ ಇಸ್ರಾಯೇಲ್ ಮಕ್ಕಳು ಅವನಿಗೆ ಹೇಳಿದ್ದೇ ನಂದರೆ--ನಾವು ರಾಜ ಮಾರ್ಗದಲ್ಲಿ ಹೋಗುತ್ತೇವೆ; ನಾನಾಗಲಿ ನನ್ನ ಪಶುಗಳಾಗಲಿ ನಿನ್ನ ನೀರನ್ನು ಕುಡಿದರೆ ಅದರ ಕ್ರಯವನ್ನು ಕೊಡುತ್ತೇನೆ; ನನ್ನ ಕಾಲ್ನಡೆಯಾಗಿ ದಾಟಿಹೋಗುವದೇ ಹೊರತು ಮತ್ತೇನು ಮಾಡು ವದಿಲ್ಲ.
19 E os israelitas disseram: "Iremos pela estrada principal; se nós e os nossos rebanhos bebermos de tua água, pagaremos por ela. Queremos apenas atravessar a pé, e nada mais".
20 ಆದರೆ ಅವನು--ನೀನು ದಾಟಬೇಡ ಅಂದನು. ಎದೋಮ್ಯನು ಬಹು ಜನರಿಂದಲೂ ಬಲವುಳ್ಳ ಕೈಯಿಂದಲೂ ಅವರಿಗೆ ಎದುರಾಗಿ ಹೊರಟನು.
20 Mas Edom insistiu: "Vocês não poderão atravessar". Então Edom os atacou com um exército grande e poderoso.
21 ಈ ಪ್ರಕಾರ ಎದೋಮ್ಯನು ಇಸ್ರಾ ಯೇಲ್ಯರನ್ನು ತನ್ನ ಮೇರೆಯಲ್ಲಿ ದಾಟಗೊಡಿಸಲಿಲ್ಲ; ಆದಕಾರಣ ಇಸ್ರಾಯೇಲ್ಯರು ಅವನ ಕಡೆಯಿಂದ ತಿರುಗಿಕೊಂಡು ಹೊರಟುಹೋದರು.
21 Visto que Edom se recusou a deixá-los atravessar o seu território, Israel desviou-se dele.
22 ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯು ಕಾದೇಶಿನಿಂದ ಪ್ರಯಾಣಮಾಡಿ ಹೋರ್ ಎಂಬ ಬೆಟ್ಟದ ಬಳಿಗೆ ಬಂದರು.
22 Toda a comunidade israelita partiu de Cades e chegou ao monte Hor.
23 ಆಗ ಕರ್ತನು ಎದೋಮ್ಯ ದೇಶದ ಮೇರೆಯ ಮೇಲಿರುವ ಹೋರ್ ಎಂಬ ಬೆಟ್ಟದಲ್ಲಿ ಮೋಶೆ ಆರೋನನ ಸಂಗಡ ಮಾತನಾಡಿ--
23 Naquele monte, perto da fronteira de Edom, o Senhor disse a Moisés e a Arão:
24 ಆರೋನನು ತನ್ನ ಜನರ ಸಂಗಡ ಕೂಡಿಸಲ್ಪಡುವನು; ನೀವು ಮೆರೀಬಾದ ನೀರಿನ ಹತ್ತಿರ ನನ್ನ ಮಾತಿಗೆ ತಿರುಗಿ ಬಿದ್ದದರಿಂದ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಟ್ಟ ದೇಶಕ್ಕೆ ಅವನು ಪ್ರವೇಶಿಸುವದಿಲ್ಲ.
24 "Arão será reunido aos seus antepassados. Não entrará na terra que dou aos israelitas, porque vocês dois se rebelaram contra a minha ordem junto às águas de Meribá.
25 ಆರೋನ ನನ್ನೂ ಅವನ ಮಗನಾದ ಎಲ್ಲಾಜಾರನನ್ನೂ ಹೋರ್ ಬೆಟ್ಟಕ್ಕೆ ಕರಕೊಂಡು ಬಂದು.
25 Leve Arão e seu filho Eleazar para o alto do monte Hor.
26 ಆರೋನನ ವಸ್ತ್ರಗಳನ್ನು ತೆಗೆದು ಅವುಗಳನ್ನು ಅವನ ಮಗನಾದ ಎಲ್ಲಾಜಾರ ನಿಗೆ ತೊಡಿಸು; ಆರೋನನು ಅಲ್ಲಿಯೇ ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಡುವನು ಎಂದು ಹೇಳಿದನು.
26 Tire as vestes de Arão e coloque-as em seu filho Eleazar, pois Arão será reunido aos seus antepassados; ele morrerá ali".
27 ಕರ್ತನು ಆಜ್ಞಾಪಿಸಿದ ಪ್ರಕಾರ ಮೋಶೆಯು ಮಾಡಿದನು. ಅವರು ಸಮಸ್ತ ಸಭೆಯ ಕಣ್ಣು ಗಳಿಗೆದುರಾಗಿ ಹೋರ್ ಬೆಟ್ಟವನ್ನೇರಿದರು.
27 Moisés fez conforme o Senhor ordenou; subiram o monte Hor à vista de toda a comunidade.
28 ಆಗ ಮೋಶೆಯು ಆರೋನನ ವಸ್ತ್ರಗಳನ್ನು ತೆಗೆದು ಅವನ ಮಗನಾದ ಎಲ್ಲಾಜಾರನಿಗೆ ತೊಡಿಸಿದನು; ಆಗ ಆರೋನನು ಅಲ್ಲೆ ಬೆಟ್ಟದ ತುದಿಯಲ್ಲಿ ಸತ್ತನು. ಮೋಶೆಯೂ ಎಲ್ಲಾಜಾರನೂ ಬೆಟ್ಟದಿಂದ ಇಳಿದು ಬಂದರು.
28 Moisés tirou as vestes de Arão e as colocou em seu filho Eleazar. E Arão morreu no alto do monte. Depois disso, Moisés e Eleazar desceram do monte,
29 ಆರೋನನು ತೀರಿಹೋದನೆಂದು ಸಭೆಯಲ್ಲಾ ನೋಡಿದಾಗ ಇಸ್ರಾಯೇಲ್ಯರ ಮನೆಯ ವರೆಲ್ಲರು ಆರೋನನಿಗೋಸ್ಕರ ಮೂವತ್ತು ದಿವಸದ ವರೆಗೂ ದುಃಖಿಸಿದರು.
29 e, quando toda a comunidade soube que Arão tinha morrido, toda a nação de Israel pranteou por ele durante trinta dias.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Números 20, comparar traduções ou montar um estudo — tudo direto pelo WhatsApp.