Números 15

Kannada Bible (GL_KANNADA) vs ARA

Sair da comparação
ARA Almeida Revista e Atualizada 1993
1 ಕರ್ತನು ಮೋಶೆಗೆ--
1 Disse o Senhor a Moisés:
2 ಇಸ್ರಾಯೇಲ್‌ಮಕ್ಕಳ ಸಂಗಡ ಮಾತನಾಡಿ ಅವರಿಗೆನಾನು ನಿಮಗೆ ಕೊಡುವ ನಿಮ್ಮ ನಿವಾಸಗಳ ದೇಶಕ್ಕೆ ಬಂದಾಗ
2 Fala aos filhos de Israel e dize-lhes: Quando entrardes na terra das vossas habitações, que eu vos hei de dar,
3 ಪಶುಗಳಿಂದಲಾದರೂ ಕುರಿಗಳಿಂದಲಾ ದರೂ ಕರ್ತನಿಗೆ ಸುವಾಸನೆಯನ್ನುಂಟುಮಾಡುವ ದಹನಬಲಿಯಾಗಲಿ ಪ್ರಮಾಣವನ್ನು ಈಡೇರಿಸುವ ಬಲಿಯಾಗಲಿ ಉಚಿತವಾದ ಅರ್ಪಣೆಯಾಗಲಿ ನಿಮ್ಮ ಪವಿತ್ರ ಹಬ್ಬಗಳಲ್ಲಾಗಲಿ ಕರ್ತನಿಗೆ ಬೆಂಕಿಯಿಂದ ಅರ್ಪಿಸಲಿ ಅಂದನು.
3 e ao Senhor fizerdes oferta queimada, holocausto ou sacrifício, em cumprimento de um voto ou em oferta voluntária, ou, nas vossas festas fixas, apresentardes ao Senhor aroma agradável com o sacrifício de gado e ovelhas,
4 ತರುವಾಯ ಕರ್ತನಿಗೆ ತನ್ನ ಅರ್ಪಣೆಯನ್ನು ತರುವವನು ತರಬೇಕಾದದ್ದೇನಂದರೆಆಹಾರದ ಅರ್ಪಣೆಗಾಗಿ ಹಿಟ್ಟಿನ ನಾಲ್ಕನೆಯ ಪಾಲಷ್ಟು ಎಣ್ಣೇ ಬೆರೆಸಿದ ಹಿಟ್ಟಿನ ದಶಮ ಭಾಗವನ್ನು
4 então, aquele que apresentar a sua oferta ao Senhor , por oferta de manjares, trará a décima parte de um efa de flor de farinha, misturada com a quarta parte de um him de azeite.
5 ಪಾನದ ಅರ್ಪಣೆಗಾಗಿ ದಹನಬಲಿಯ ಸಂಗಡವೂ ಇಲ್ಲವೆ ಬಲಿಯ ಸಂಗಡವೂ ಒಂದು ಕುರಿಗೋಸ್ಕರ ಹಿನ್ನಿನ ನಾಲ್ಕನೇ ಭಾಗದ ದ್ರಾಕ್ಷಾರಸವನ್ನು ಅರ್ಪಿಸಬೇಕು.
5 E de vinho para libação prepararás a quarta parte de um him para cada cordeiro, além do holocausto ou do sacrifício.
6 ಇಲ್ಲವೆ ಟಗರಿಗೋಸ್ಕರ ಆಹಾರದ ಅರ್ಪಣೆಯಾಗಿ ಹಿನ್ನಿನ ಮೂರನೇ ಪಾಲು ಎಣ್ಣೇ ಬೆರೆಸಿದ ಹಿಟ್ಟಿನ ಎರಡು ದಶಮಾಂಶಗಳನ್ನು ನೀನು ಸಿದ್ಧಮಾಡಬೇಕು.
6 Para cada carneiro prepararás uma oferta de manjares de duas décimas de um efa de flor de farinha, misturada com a terça parte de um him de azeite;
7 ಪಾನದ ಅರ್ಪಣೆಯನ್ನು ಕರ್ತನಿಗೆ ಸುವಾಸನೆಗಾಗಿ ಹಿನ್ನಿನ ಮೂರನೇ ಪಾಲು ದ್ರಾಕ್ಷಾರಸವನ್ನು ಅರ್ಪಿಸ ಬೇಕು.
7 e de vinho para a libação oferecerás a terça parte de um him ao Senhor , em aroma agradável.
8 ನೀನು ಕರ್ತನಿಗೆ ದಹನಬಲಿಗಾಗಿ ಇಲ್ಲವೆ ಪ್ರಮಾಣವನ್ನು ಈಡೇರಿಸುವ ಬಲಿಗಾಗಿ ಇಲ್ಲವೆ ಸಮಾ ಧಾನದ ಅರ್ಪಣೆಗಳಿಗಾಗಿ ಕರ್ತನಿಗೆ ಹೋರಿಯನ್ನು ನೀನು ಸಿದ್ಧಮಾಡುವಾಗ
8 Quando preparares novilho para holocausto ou sacrifício, em cumprimento de um voto ou um sacrifício pacífico ao Senhor ,
9 ಅವನು ಆಹಾರದ ಅರ್ಪಣೆಗಾಗಿ ಅರ್ಧ ಹಿನ್ನಿನ ಎಣ್ಣೇ ಬೆರೆಸಿದ ಮೂರು ದಶಮಾಂಶದ ಹಿಟ್ಟನ್ನು ಒಂದು ಹೋರಿಯೊಂದಿಗೆ ತರಬೇಕು.
9 com o novilho, trarás uma oferta de manjares de três décimas de um efa de flor de farinha, misturada com a metade de um him de azeite,
10 ಪಾನದ ಅರ್ಪಣೆಗಾಗಿ ಅರ್ಧ ಹಿನ್ನಿನ ದ್ರಾಕ್ಷಾರಸವನ್ನು ಬೆಂಕಿಯಿಂದ ಮಾಡಿದ ಅರ್ಪಣೆ ಗಾಗಿ ಕರ್ತನಿಗೆ ಸುವಾಸನೆಯಾದ ದಹನಬಲಿಗಾಗಿ ತರಬೇಕು.
10 e de vinho para a libação trarás a metade de um him, oferta queimada de aroma agradável ao Senhor .
11 ಹೀಗೆ ಅದು ಒಂದು ಹೋರಿಗೂ ಇಲ್ಲವೆ ಒಂದು ಟಗರಿಗೂ ಒಂದು ಕುರಿಮರಿಗೂ ಒಂದು ಮೇಕೆಗೂ ಮಾಡತಕ್ಕದ್ದು.
11 Assim se fará com todos os novilhos, carneiros, cordeiros e bodes.
12 ನೀವು ಸಿದ್ಧಪಡಿಸಿದ ಬಲಿಗಳ ಲೆಕ್ಕದ ಪ್ರಕಾರ ನೀವು ಒಂದೊಂದನ್ನು ಅದರ ಲೆಕ್ಕದ ಪ್ರಕಾರ ಮಾಡಬೇಕು.
12 Segundo o número que oferecerdes, assim o fareis para cada um.
13 ಕರ್ತನಿಗೆ ಸುವಾಸನೆ ಬೆಂಕಿಯ ಅರ್ಪ ಣೆಯ ವಿಷಯ ದೇಶದಲ್ಲಿ ಹುಟ್ಟಿದವರೆಲ್ಲರೂ ಇವುಗ ಳನ್ನು ಹಾಗೆಯೇ ಅರ್ಪಿಸಬೇಕು.
13 Todos os naturais assim farão estas coisas, trazendo oferta queimada de aroma agradável ao Senhor .
14 ನಿಮ್ಮ ಸಂಗಡ ಪ್ರಯಾಣಮಾಡುವ ಪರದೇಶಿಯಾಗಲಿ ಇಲ್ಲವೆ ನಿಮ್ಮ ಮುಂದಿನ ಸಂತತಿಯವರ ಸಂಗಡ ಇರುವವನಾಗಲಿ ಕರ್ತನಿಗೆ ಸುವಾಸನೆಯನ್ನುಂಟುಮಾಡುವ ಬೆಂಕಿಯ ಅರ್ಪಣೆಯನ್ನು ಅರ್ಪಿಸುವಾಗ ನೀವು ಹೇಗೆ ಮಾಡು ತ್ತೀರೋ ಹಾಗೆಯೇ ಅವನು ಮಾಡಲಿ.
14 Se também morar convosco algum estrangeiro ou quem quer que estiver entre vós durante as vossas gerações, e trouxer uma oferta queimada de aroma agradável ao Senhor , como vós fizerdes, assim fará ele.
15 ಸಭೆಗೂ ನಿಮಗೂ ನಿಮ್ಮ ಕೂಡ ಪ್ರಯಾಣಮಾಡುವ ಪರಕೀಯ ನಿಗೂ ಒಂದೇ ಕಟ್ಟಳೆ; ಇದು ನಿಮ್ಮ ಸಂತಾನಗಳಿಗೆ ನಿತ್ಯವಾದ ಕಟ್ಟಳೆ; ಕರ್ತನ ಎದುರಿನಲ್ಲಿ ನೀವು ಇರುವ ಪ್ರಕಾರ ಪರಕೀಯನೂ ಇರಬೇಕು.
15 Quanto à congregação, haja apenas um estatuto, tanto para vós outros como para o estrangeiro que morar entre vós, por estatuto perpétuo nas vossas gerações; como vós sois, assim será o estrangeiro perante o Senhor .
16 ನಿಮಗೂ ನಿಮ್ಮ ಕೂಡ ಪ್ರಯಾಣಮಾಡುವ ಪರಕೀಯನಿಗೂ ಒಂದೇ ಪ್ರಮಾಣವೂ ಒಂದೇ ನ್ಯಾಯವೂ ಇರಬೇಕು ಎಂದು ಹೇಳಿದನು.
16 A mesma lei e o mesmo rito haverá para vós outros e para o estrangeiro que mora convosco.
17 ಕರ್ತನು ಮೋಶೆಗೆ ಹೇಳಿದ್ದೇನಂದರೆ--
17 Disse mais o Senhor a Moisés:
18 ಇಸ್ರಾಯೇಲ್‌ ಮಕ್ಕಳ ಸಂಗಡ ಮಾತನಾಡಿ ಅವ ರಿಗೆ--ನಾನು ನಿಮ್ಮನ್ನು ತರುವ ದೇಶಕ್ಕೆ ಬಂದು
18 Fala aos filhos de Israel e dize-lhes: Quando chegardes à terra em que vos farei entrar,
19 ಆ ದೇಶದ ರೊಟ್ಟಿಯನ್ನು ತಿನ್ನುವಾಗ ನೀವು ಕರ್ತನಿಗೆ ಎತ್ತುವ ಅರ್ಪಣೆಯನ್ನು ಅರ್ಪಿಸಬೇಕು.
19 ao comerdes do pão da terra, apresentareis oferta ao Senhor .
20 ನಿಮ್ಮ ಪ್ರಥಮ ಹಿಟ್ಟಿನ ರೊಟ್ಟಿಯನ್ನೂ ಎತ್ತುವ ಅರ್ಪಣೆ ಯನ್ನೂ ಅರ್ಪಿಸಬೇಕು. ನಿಮ್ಮ ಕಣದಿಂದ ಎತ್ತುವ ಅರ್ಪಣೆಯಂತೆ ಅದನ್ನು ಎತ್ತಬೇಕು.
20 Das primícias da vossa farinha grossa apresentareis um bolo como oferta; como oferta da eira, assim o apresentareis.
21 ನಿಮ್ಮ ಸಂತತಿಗಳ ವರೆಗೂ ನಿಮ್ಮ ಹಿಟ್ಟಿನ ಪ್ರಥಮವಾದದ್ದನ್ನು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು.
21 Das primícias da vossa farinha grossa apresentareis ao Senhor oferta nas vossas gerações.
22 ನೀವು ತಪ್ಪಿ ಕರ್ತನು ಮೋಶೆಗೆ ಹೇಳಿದ ಈ ಸಕಲ ಆಜ್ಞೆಗಳ ಪ್ರಕಾರ ಮಾಡದಿದ್ದರೆ
22 Quando errardes e não cumprirdes todos estes mandamentos que o Senhor falou a Moisés,
23 ಆತನು ನಿಮಗೆ ಆಜ್ಞೆಗಳನ್ನು ಕೊಟ್ಟ ದಿವಸ ಮೊದಲುಗೊಂಡು ನಿಮ್ಮ ಸಂತತಿಗಳವರೆಗೂ ಕರ್ತನು ಮೋಶೆಯ ಕೈಯಿಂದ ನಿಮಗೆ ಆಜ್ಞಾಪಿಸಿದ ಪ್ರಕಾರ ನೀವು ಮಾಡದೆ ಹೋದರೆ
23 sim, tudo quanto o Senhor vos tem mandado por Moisés, desde o dia em que o Senhor ordenou e daí em diante, nas vossas gerações,
24 ಅದು ಸಭೆಗೆ ತಿಳಿಯದೆ ತಪ್ಪು ಆಗಿರುವ ಪಕ್ಷದಲ್ಲಿ ಸಭೆಯು ಕರ್ತನಿಗೆ ಸುವಾಸನೆಯಾದ ದಹನ ಬಲಿಗಾಗಿ ಒಂದು ಎಳೇ ಹೋರಿಯನ್ನೂ ಕ್ರಮದ ಪ್ರಕಾರ ಅದರ ಆಹಾರದ ಅರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಪಾಪ ಬಲಿಯಾಗಿ ಮೇಕೆಗಳಿಂದ ಒಂದು ಹೋತವನ್ನೂ ಅರ್ಪಿಸಬೇಕು.
24 será que, quando se fizer alguma coisa por ignorância e for encoberta aos olhos da congregação, toda a congregação oferecerá um novilho, para holocausto de aroma agradável ao Senhor , com a sua oferta de manjares e libação, segundo o rito, e um bode, para oferta pelo pecado.
25 ಯಾಜಕನು ಇಸ್ರಾಯೇಲ್‌ ಮಕ್ಕಳ ಸಮಸ್ತ ಸಭೆಗೋಸ್ಕರ ಅವರಿಗೆ ಕ್ಷಮೆಯಾಗುವ ಹಾಗೆ ಪ್ರಾಯಶ್ಚಿತ್ತಮಾಡಬೇಕು; ಅದು ತಿಳಿಯದೆ ಮಾಡಲಾಗಿತ್ತು. ಆದಾಗ್ಯೂ ಅವರು ಕರ್ತ ನಿಗೆ ದಹನ ಬಲಿಯಾಗಿ ತಮ್ಮ ಅರ್ಪಣೆಯನ್ನೂ ತಮ್ಮ ತಪ್ಪಿಗೋಸ್ಕರ ಪಾಪ ಬಲಿಯನ್ನೂ ಕರ್ತನ ಮುಂದೆ ತರಬೇಕು.
25 O sacerdote fará expiação por toda a congregação dos filhos de Israel, e lhes será perdoado, porquanto foi erro, e trouxeram a sua oferta, oferta queimada ao Senhor , e a sua oferta pelo pecado perante o Senhor , por causa do seu erro.
26 ಆಗ ಇಸ್ರಾಯೇಲ್‌ ಮಕ್ಕಳ ಸಮಸ್ತ ಸಭೆಗೂ ಅವರೊಳಗೆ ಪರಕೀಯನಾಗಿ ಪ್ರವಾಸಿ ಯಾಗಿರುವವನಿಗೂ ಅದು ಪರಿಹಾರವಾಗುವದು. ಯಾಕಂದರೆ ಎಲ್ಲರೂ ತಿಳುವಳಿಕೆ ಇಲ್ಲದವರಾಗಿದ್ದರು.
26 Será, pois, perdoado a toda a congregação dos filhos de Israel e mais ao estrangeiro que habita no meio deles, pois no erro foi envolvido todo o povo.
27 ಆದರೆ ಯಾವನಾದರೂ ತಿಳಿಯದೆ ಪಾಪ ಮಾಡಿದರೆ ಪಾಪದ ಬಲಿಗಾಗಿ ಒಂದು ವರುಷದ ಮೇಕೆಯನ್ನು ತರಬೇಕು.
27 Se alguma pessoa pecar por ignorância, apresentará uma cabra de um ano como oferta pelo pecado.
28 ತಿಳಿಯದೆ ಪಾಪಮಾಡಿ ದಂಥ ಆ ಪಾಪಮಾಡಿದವನಿಗೋಸ್ಕರ ಯಾಜಕನು ಕರ್ತನ ಮುಂದೆ ಪ್ರಾಯಶ್ಚಿತ್ತಮಾಡಬೇಕು. ಅದು ಪರಿಹಾರವಾಗುವ ಹಾಗೆ ಅದಕ್ಕೋಸ್ಕರ ಪ್ರಾಯಶ್ಚಿತ್ತ ಮಾಡಬೇಕು.
28 O sacerdote fará expiação pela pessoa que errou, quando pecar por ignorância perante o Senhor , fazendo expiação por ela, e lhe será perdoado.
29 ಇಸ್ರಾಯೇಲ್‌ ಮಕ್ಕಳಲ್ಲಿ ಹುಟ್ಟಿದವ ರಿಗೂ ಅವರಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ನಿಮ್ಮೆಲ್ಲರಿಗೂ ತಿಳಿಯದೆ ಪಾಪಮಾಡಿದವನಿಗೂ ಒಂದೇ ಆಜ್ಞೆ ಇರಬೇಕು.
29 Para o natural dos filhos de Israel e para o estrangeiro que no meio deles habita, tereis a mesma lei para aquele que isso fizer por ignorância.
30 ಆದರೆ ಯಾವನಾದರೂ ಅಂದರೆ ದೇಶದಲ್ಲಿ ಹುಟ್ಟಿದವನಾಗಲಿ ಪರಕೀಯನಾಗಲಿ ಹಟದಿಂದ ಪಾಪಮಾಡಿದರೆ ಅವನು ಕರ್ತನನ್ನು ನಿಂದಿಸುತ್ತಾನೆ. ಆ ಮನುಷ್ಯನು ತನ್ನ ಜನರ ಮಧ್ಯದಿಂದ ತೆಗೆದುಹಾಕ ಲ್ಪಡಬೇಕು.
30 Mas a pessoa que fizer alguma coisa atrevidamente, quer seja dos naturais quer dos estrangeiros, injuria ao Senhor ; tal pessoa será eliminada do meio do seu povo,
31 ಅವನು ಕರ್ತನ ವಾಕ್ಯವನ್ನು ಅವಮಾನ ಮಾಡಿ ಆತನ ಆಜ್ಞೆಗಳನ್ನು ವಿಾರಿದ್ದರಿಂದ ಆ ಮನು ಷ್ಯನು ನಿಶ್ಚಯವಾಗಿ ತೆಗೆದುಹಾಕಲ್ಪಡಬೇಕು. ಅವನ ಅಕ್ರಮವು ಅವನ ಮೇಲಿರುವದು ಎಂದು ಹೇಳಿದನು.
31 pois desprezou a palavra do Senhor e violou o seu mandamento; será eliminada essa pessoa, e a sua iniquidade será sobre ela.
32 ಇಸ್ರಾಯೇಲ್‌ ಮಕ್ಕಳು ಅರಣ್ಯದಲ್ಲಿದ್ದಾಗ ಸಬ್ಬತ್‌ ದಿನದಲ್ಲಿ ಕಟ್ಟಿಗೆಗಳನ್ನು ಕೂಡಿಸುವ ಮನುಷ್ಯನನ್ನು ಕಂಡರು.
32 Estando, pois, os filhos de Israel no deserto, acharam um homem apanhando lenha no dia de sábado.
33 ಆಗ ಕಟ್ಟಿಗೆಗಳನ್ನು ಕೂಡಿಸುವದರಲ್ಲಿ ಅವನನ್ನು ಕಂಡುಕೊಂಡವರು ಅವನನ್ನು ಮೋಶೆ ಆರೋನರ ಬಳಿಗೂ ಸಮಸ್ತಸಭೆಗೂ ತಂದು
33 Os que o acharam apanhando lenha o trouxeram a Moisés, e a Arão, e a toda a congregação.
34 ಅವ ನಿಗೆ ಏನು ಮಾಡಬೇಕೆಂದು ಸ್ಪಷ್ಟವಾಗಿ ತಿಳಿಯದ ಕಾರಣ ಅವನನ್ನು ಕಾವಲಲ್ಲಿ ಹಾಕಿದರು.
34 Meteram-no em guarda, porquanto ainda não estava declarado o que se lhe devia fazer.
35 ಆಗ ಕರ್ತನು ಮೋಶೆಗೆ--ಆ ಮನುಷ್ಯನು ಖಂಡಿತವಾ ಗಿಯೂ ಸಾಯಲೇಬೇಕು; ಸಭೆಯೆಲ್ಲಾ ಪಾಳೆಯದ ಹೊರಗೆ ಅವನನ್ನು ಕಲ್ಲೆಸೆಯಬೇಕು ಎಂದು ಹೇಳಿದನು.
35 Então, disse o Senhor a Moisés: Tal homem será morto; toda a congregação o apedrejará fora do arraial.
36 ಆಗ ಸಭೆಯೆಲ್ಲಾ ಅವನನ್ನು ಪಾಳೆಯದ ಹೊರಗೆ ತಕ್ಕೊಂಡು ಹೋಗಿ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನು ಸಾಯುವ ಹಾಗೆ ಅವನಿಗೆ ಕಲ್ಲೆಸೆದರು.
36 Levou-o, pois, toda a congregação para fora do arraial, e o apedrejaram; e ele morreu, como o Senhor ordenara a Moisés.
37 ಕರ್ತನು ಮೋಶೆಗೆ--ಹೇಳಿದ್ದೇನಂದರೆ
37 Disse o Senhor a Moisés:
38 ನೀನು ಇಸ್ರಾಯೇಲ್‌ ಮಕ್ಕಳಿಗೆ ಮಾತನಾಡಿ ಅವರಿಗೆ ಹೇಳ ಬೇಕಾದದ್ದೇನಂದರೆ--ಅವರು ತಮ್ಮ ತಲತಲಾಂತರ ಗಳಲ್ಲಿ ತಮ್ಮ ವಸ್ತ್ರಗಳ ಸೆರಗುಗಳ ಮೇಲೆ ಗೊಂಡೆ ಗಳನ್ನು ಕಟ್ಟಿಕೊಳ್ಳಬೇಕು; ಸೆರಗಿನ ಗೊಂಡೆಗಳ ಮೇಲೆ ನೀಲಿದಾರವನ್ನು ಸೇರಿಸಬೇಕು.
38 Fala aos filhos de Israel e dize-lhes que nos cantos das suas vestes façam borlas pelas suas gerações; e as borlas em cada canto, presas por um cordão azul.
39 ಅದನ್ನು ನೀವು ಗೊಂಡೆಯಾಗಿ ಇಟ್ಟುಕೊಂಡು ಅದನ್ನು ನೋಡುವಾಗ ಕರ್ತನ ಸಕಲ ಆಜ್ಞೆಗಳನ್ನು ನೆನಸಿ ಅವುಗಳ ಪ್ರಕಾರ ಮಾಡಿ ನಿಮ್ಮ ಹೃದಯವನ್ನೂ ಕಣ್ಣುಗಳನ್ನೂ ಅವು ಗಳಿಗನುಸಾರವಾಗಿ ಜಾರತ್ವಮಾಡುವಂತೆ ಹಿಂಬಾ ಲಿಸದೆ
39 E as borlas estarão ali para que, vendo-as, vos lembreis de todos os mandamentos do Senhor e os cumprais; não seguireis os desejos do vosso coração, nem os dos vossos olhos, após os quais andais adulterando,
40 ನನ್ನ ಆಜ್ಞೆಗಳನ್ನೆಲ್ಲಾ ನೆನಸಿ ಅವುಗಳ ಪ್ರಕಾರ ಮಾಡಿ ನಿಮ್ಮ ದೇವರಿಗೆ ಪರಿಶುದ್ಧರಾಗಿರುವಿರಿ.
40 para que vos lembreis de todos os meus mandamentos, e os cumprais, e santos sereis a vosso Deus.
41 ನಾನು ನಿಮ್ಮ ದೇವರಾಗಿರುವ ಹಾಗೆ ನಿಮ್ಮನ್ನು ಐಗುಪ್ತ ದೇಶ ದೊಳಗಿಂದ ಹೊರಗೆ ತಂದ ನಿಮ್ಮ ಕರ್ತನಾಗಿರುವ ದೇವರು ನಾನೇ. ನಿಮ್ಮ ದೇವರಾಗಿರುವ ಕರ್ತನು ನಾನೇ.
41 Eu sou o Senhor , vosso Deus, que vos tirei da terra do Egito, para vos ser por Deus. Eu sou o Senhor , vosso Deus.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Números 15, comparar traduções ou montar um estudo — tudo direto pelo WhatsApp.