Números 11

Kannada Bible (GL_KANNADA) vs BKJ

Sair da comparação
1 ಜನರು ಗುಣುಗುಟ್ಟಿದಾಗ ಅದು ಕರ್ತನಿಗೆ ಮೆಚ್ಚಿಗೆಯಾಗಲಿಲ್ಲ. ಕರ್ತನು ಅದನ್ನು ಕೇಳಿ ಕೋಪಿಸಿಗೊಂಡನು. ಕರ್ತನ ಬೆಂಕಿಯು ಅವರಲ್ಲಿ ಹತ್ತಿ ಪಾಳೆಯದ ಕಟ್ಟಕಡೆಯ ಭಾಗದಲ್ಲಿ ದಹಿಸಿತು.
1 E quando o povo se queixou, isso desagradou ao SENHOR, e o SENHOR ouviu isto; e a sua ira se acendeu, e o fogo do SENHOR ardeu entre eles, e consumiu os que estavam nas partes mais distantes do acampamento.
2 ಆಗ ಜನರು ಮೋಶೆಗೆ ಕೂಗಿಕೊಂಡದ್ದರಿಂದ ಮೋಶೆಯು ಕರ್ತನಿಗೆ ಪ್ರಾರ್ಥನೆ ಮಾಡಿದನು. ಆಗ ಬೆಂಕಿಯು ಆರಿಹೋಯಿತು.
2 E o povo clamou a Moisés, e quando Moisés orou ao SENHOR, o fogo se apagou.
3 ಕರ್ತನ ಬೆಂಕಿಯು ಅವರಲ್ಲಿ ದಹಿಸಿದ್ದರಿಂದ ಆ ಸ್ಥಳಕ್ಕೆ ತಬೇರ ಎಂದು ಹೆಸರಿಟ್ಟರು.
3 E ele chamou aquele lugar de Taberá, porque o fogo do SENHOR acendera entre eles.
4 ಆಗ ಅವರೊಳಗಿದ್ದ ಮಿಶ್ರವಾದ ಗುಂಪಿನ ಜನರು ದುರಾಶೆಪಟ್ಟರು. ಇಸ್ರಾಯೇಲ್‌ ಮಕ್ಕಳು ಸಹ ತಿರಿಗಿ ಅತ್ತು--ನಮಗೆ ತಿನ್ನುವದಕ್ಕೆ ಮಾಂಸವನ್ನು ಕೊಡು ವವರು ಯಾರು?
4 E no meio deles havia alguns estrangeiros que sentiram um anseio, e os filhos de Israel também choraram outra vez, e perguntaram: Quem nos dará carne para comer?
5 ನಾವು ಐಗುಪ್ತದೇಶದಲ್ಲಿ ಉಚಿತ ವಾಗಿ ತಿಂದ ವಿಾನು ಸವತೆಕಾಯಿ ಕರ್ಬೂಜ ಕಾಡುಳ್ಳಿ ನೀರುಳ್ಳಿ ಬೆಳ್ಳುಳ್ಳಿ ಇವುಗಳನ್ನು ಜ್ಞಾಪಿಸಿಕೊಳ್ಳುತ್ತೇವೆ.
5 Nós nos lembramos dos peixes que comíamos livremente no Egito; e os pepinos, e os melões, e os alhos-porros, e as cebolas, e os alhos.
6 ಆದರೆ ಈಗ ನಮ್ಮ ಪ್ರಾಣವು ಬತ್ತಿಹೋಯಿತು; ಈ ಮನ್ನವಲ್ಲದೆ ಮತ್ತೆ ಬೇರೆ ಯಾವದೂ ನಮ್ಮ ಕಣ್ಣುಗಳ ಮುಂದೆ ಇರುವದಿಲ್ಲ ಅಂದರು.
6 Mas agora a nossa alma está seca; não há nada além deste maná, diante dos nossos olhos.
7 ಆ ಮನ್ನವು ಕೊತ್ತುಂಬರಿ ಬೀಜದ ಹಾಗೆ ಇತ್ತು. ಅದರ ಬಣ್ಣವು ಬದೋಲಖ ಬಣ್ಣದ ಹಾಗಿತ್ತು.
7 E o maná era como semente de coentro, e a sua cor como a cor do bdélio.
8 ಜನರು ಹೊರಗೆಹೋಗಿ ಅದನ್ನು ಕೂಡಿಸಿ ಬೀಸುವ ಕಲ್ಲುಗಳಲ್ಲಿ ಬೀಸಿ ಇಲ್ಲವೆ ಒರಳಿನಲ್ಲಿ ಕುಟ್ಟಿ ತವೆಗಳಲ್ಲಿ ಸುಟ್ಟು ಅದರಿಂದ ರೊಟ್ಟಿಗಳನ್ನು ಮಾಡುತ್ತಿದ್ದರು. ಅದು ಶುದ್ಧ ಎಣ್ಣೇ ರೊಟ್ಟಿಯ ರುಚಿಯ ಹಾಗೆ ಇತ್ತು.
8 E o povo ia e o colhia, e o moía em moinhos ou esmagava em pilões, e o cozinhava em panelas, e fazia bolos deles; e o seu sabor era como o do azeite fresco.
9 ರಾತ್ರಿಯಲ್ಲಿ ಮಂಜು ಪಾಳೆಯದ ಮೇಲೆ ಬೀಳುತ್ತಿ ದ್ದಾಗ ಮನ್ನವು ಅದರ ಮೇಲೆ ಬೀಳುತ್ತಿತ್ತು.
9 E quando caía o orvalho sobre o acampamento, à noite, o maná descia sobre ele.
10 ಆಗ ಜನರು ತಮ್ಮ ಕುಟುಂಬಗಳ ಪ್ರಕಾರವಾಗಿ ಪ್ರತಿಯೊಬ್ಬನು ತನ್ನ ಗುಡಾರದ ಬಾಗಲಿನಲ್ಲಿ ಅಳುವ ದನ್ನು ಮೋಶೆ ಕೇಳಿದನು; ಆದಕಾರಣ ಕರ್ತನ ಕೋಪವು ಬಹಳವಾಗಿ ಉರಿಯಿತು; ಮೋಶೆಗೂ ಅದು ಮೆಚ್ಚಿಗೆಯಾಗಲಿಲ್ಲ.
10 Então, Moisés ouviu o povo chorar, as suas famílias, cada homem à porta da sua tenda; e a ira do SENHOR se acendeu grandemente. Moisés também estava descontente.
11 ಆದದರಿಂದ ಮೋಶೆಯು ಕರ್ತನಿಗೆ ಹೇಳಿದ್ದೇ ನಂದರೆ--ಈ ಸಮಸ್ತ ಜನರ ಭಾರವನ್ನು ನನ್ನ ಮೇಲೆ ಹಾಕುವದಕ್ಕೆ ನೀನು ನಿನ್ನ ಸೇವಕನಿಗೆ ಯಾಕೆ ಉಪದ್ರ ಮಾಡಿದ್ದೀ? ನಿನ್ನ ದೃಷ್ಟಿಯಲ್ಲಿ ನನಗೆ ಯಾಕೆ ದಯೆ ದೊರಕಲಿಲ್ಲ?
11 E Moisés disse ao SENHOR: Por que afligiste a teu servo, e por que não encontrei favor aos teus olhos, por qual razão colocaste os cuidados de todo este povo sobre mim?
12 ತನ್ನ ಮೊಲೆಯ ಕೂಸನ್ನು ಎತ್ತುವಂತೆ ನೀನು ಈ ಜನರನ್ನು ಎದೆಯಲ್ಲಿ ಹೊತ್ತು ಕೊಂಡು ಅವರ ತಂದೆಗಳಿಗೆ ಪ್ರಮಾಣಮಾಡಿದ ದೇಶಕ್ಕೆ ತಕ್ಕೊಂಡು ಹೋಗು ಎಂದು ನೀನು ನನಗೆ ಹೇಳುತ್ತೀ. ಹೀಗೆ ನಾನು ಮಾಡುವದಕ್ಕೆ ಈ ಸಮಸ್ತ ಜನರನ್ನು ಗರ್ಭಧರಿಸಿಕೊಂಡೆನೋ? ನಾನೇ ಅವರನ್ನು ಹೆತ್ತೆನೋ?
12 Eu concebi todo este povo? Fui eu que o gerei, para que me dissesses: Leva-os no teu seio, como a ama leva a criança que ainda é amamentada à terra que juraste aos seus pais?
13 ಈ ಸಮಸ್ತ ಜನರಿಗೆ ಕೊಡಲು ಮಾಂಸವು ನನಗೆ ಎಲ್ಲಿಂದ ದೊರಕುವದು? ಯಾಕಂದರೆ--ತಿನ್ನುವ ಹಾಗೆ ನಮಗೆ ಮಾಂಸವನ್ನು ಕೊಡು ಎಂದು ನನ್ನ ಬಳಿಯಲ್ಲಿ ಅಳುತ್ತಾರೆ.
13 De onde eu poderia obter carne para dar a todo este povo? Porque choram a mim, e dizem: Dá-nos carne para que possamos comer.
14 ಒಬ್ಬಂಟಿ ಗನಾಗಿ ಈ ಸಮಸ್ತ ಜನರನ್ನು ಹೊತ್ತುಕೊಳ್ಳುವದಕ್ಕೆ ನಾನು ಶಕ್ತನಲ್ಲ, ಅದು ನನಗೆ ಅತಿ ದೊಡ್ಡ ಭಾರ ವಾಗಿದೆ.
14 Eu sozinho não sou capaz de suportar com todo este povo, porque isto é pesado demais para mim.
15 ನೀನು ಈ ಪ್ರಕಾರ ನನಗೆ ಮಾಡುವದಾ ಗಿದ್ದು ನಾನು ನಿನ್ನ ದೃಷ್ಟಿಯಲ್ಲಿ ದಯೆ ಹೊಂದಿದವ ನಾದರೆ ನನ್ನ ಕೇಡನ್ನು ನೋಡದಂತೆ ನನ್ನನ್ನು ಕೊಂದುಬಿಡು ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
15 E, se ages assim comigo, eu te peço, mata-me se encontrei favor aos teus olhos; e não me deixes ver a minha desgraça.
16 ಕರ್ತನು ಮೋಶೆಗೆ ಹೇಳಿದ್ದೇನಂದರೆ--ಜನರ ಹಿರಿಯರೆಂದೂ ಅವರ ಮೇಲಿನ ಉದ್ಯೋಗಸ್ಥರೆಂದೂ ನೀನು ತಿಳಿದುಕೊಂಡಂಥ ಇಸ್ರಾಯೇಲ್ಯರ ಹಿರಿಯರೊ ಳಗೆ ಎಪ್ಪತ್ತು ಮಂದಿಯನ್ನು ನನ್ನ ಬಳಿಗೆ ಕೂಡಿಸಿ ಸಭೆಯ ಗುಡಾರದ ಕಡೆಗೆ ಕರಕೊಂಡು ಬಾ. ಅವರು ಅಲ್ಲಿ ನಿನ್ನ ಸಂಗಡ ನಿಂತಿರಲಿ.
16 E o SENHOR disse a Moisés: Reúne para mim setenta homens dos anciãos de Israel, a quem conheces como anciãos do povo e seus oficiais; e traze-os ao tabernáculo da congregação, para que possam ficar ali contigo.
17 ನಾನು ಇಳಿದು ಬಂದು ನಿನ್ನ ಸಂಗಡ ಮಾತನಾಡಿ ನಿನ್ನ ಮೇಲಿರುವ ಆತ್ಮದಲ್ಲಿ ಪಾಲನ್ನು ತೆಗೆದು ಅವರ ಮೇಲೆ ಇಡುವೆನು; ಆಗ ನೀನು ಜನರ ಭಾರವನ್ನು ಒಬ್ಬನೇ ಹೊತ್ತುಕೊಳ್ಳದ ಹಾಗೆ ಅವರು ನಿನ್ನ ಸಂಗಡ ಅದನ್ನು ಹೊರುವರು.
17 E eu descerei, e ali falarei contigo, e tirarei do espírito que está sobre ti, e o colocarei sobre eles; e eles levarão contigo a carga do povo, para que não a leves sozinho.
18 ಜನರಿಗೆ ನೀನು ಹೇಳಬೇಕಾದದ್ದೇನಂದರೆ--ನಾಳೆಗೆ ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ. ಆಗ ಮಾಂಸವನ್ನು ತಿನ್ನುವಿರಿ; ಯಾಕಂದರೆ--ನಮಗೆ ಯಾವನು ಮಾಂಸವನ್ನು ತಿನ್ನುವದಕ್ಕೆ ಕೊಡುವನು? ಐಗುಪ್ತ ದೇಶದಲ್ಲಿ ನಮಗೆ ಒಳ್ಳೇದು ಇತ್ತೆಂದು ಕರ್ತನು ಕೇಳುವಂತೆ ಅಳುತ್ತಾ ಹೇಳಿದ್ದೀರಿ. ಆದಕಾರಣ ತಿನ್ನು ವದಕ್ಕೆ ಕರ್ತನು ನಿಮಗೆ ಮಾಂಸವನ್ನು ಕೊಡುವನು ನೀವು ತಿನ್ನುವಿರಿ.
18 E dize ao povo: Santificai-vos para amanhã e comereis carne, porque chorastes aos ouvidos do SENHOR, dizendo: Quem nos dará carne para comer? Porque tudo ia bem conosco no Egito; e por isso o SENHOR vos dará carne, e comereis.
19 ನೀವು ತಿನ್ನುವದು ಒಂದು ದಿನವಲ್ಲ, ಎರಡು ದಿನವೂ ಅಲ್ಲ, ಐದು ದಿನವೂ ಅಲ್ಲ, ಹತ್ತು ದಿನವೂ ಅಲ್ಲ, ಇಪ್ಪತ್ತು ದಿನವೂ ಅಲ್ಲ.
19 E não comereis um dia, nem dois dias, nem cinco dias, nem dez dias, nem vinte dias;
20 ಅದು ನಿಮ್ಮ ಮೂಗಿನಿಂದ ಬಂದು ನಿಮಗೆ ಅಸಹ್ಯವಾಗುವ ತನಕ ಪೂರ್ತಿ ಒಂದು ತಿಂಗಳ ವರೆಗೆ ಮಾಂಸವನ್ನು ತಿನ್ನುವಿರಿ. ನಿಮ್ಮ ಮಧ್ಯದಲ್ಲಿರುವ ಕರ್ತನನ್ನು ನೀವು ಅಲಕ್ಷ್ಯಮಾಡಿ ಆತನ ಎದುರಿನಲ್ಲಿ ಅತ್ತು--ನಾವು ಯಾಕೆ ಐಗುಪ್ತದಿಂದ ಬಂದೆವು ಎಂದು ಹೇಳುತ್ತೀರಲ್ಲಾ ಅಂದನು.
20 mas durante um mês inteiro, até que vos saia pelas narinas, até que vos seja repugnante, porque desprezastes o SENHOR, que está no vosso meio, e chorastes diante dele, dizendo: Por que saímos do Egito?
21 ಅದಕ್ಕೆ ಮೋಶೆಯು ಹೇಳಿದ್ದೇನಂದರೆ--ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು. ಪೂರ್ತಿ ಒಂದು ತಿಂಗಳು ತಿನ್ನುವ ಹಾಗೆ ಅವರಿಗೆ ನಾನು ಮಾಂಸವನ್ನು ಕೊಡುವೆನೆಂದು ನೀನು ಹೇಳಿದ್ದೀ.
21 E disse Moisés: O povo no meio do qual estou, são seiscentos mil homens de pé, e disseste: Eu lhes darei carne para que possam comer um mês inteiro.
22 ಅವರಿಗೆ ಸಾಕಾಗುವ ಹಾಗೆ ಕುರಿ ದನಗಳನ್ನು ಅವರಿಗೋಸ್ಕರ ಕೊಯ್ಯಬೇಕೋ? ಅವರಿಗೆ ಸಾಕಾಗುವ ಹಾಗೆ ಸಮುದ್ರದ ವಿಾನುಗಳನ್ನೆಲ್ಲಾ ಕೂಡಿಸಿ ತರಬೇಕೋ ಅಂದನು.
22 Deveremos matar os rebanhos e o gado, para satisfazê-los? Ou todos os peixes do mar serão reunidos para eles, para satisfazê-los?
23 ಆಗ ಕರ್ತನು ಮೋಶೆಗೆ ಹೇಳಿದ್ದೇನಂದರೆ--ಕರ್ತನ ಕೈ ಮೋಟು ಗೈಯೋ? ನನ್ನ ಮಾತು ನೆರವೇರುತ್ತದೋ ಇಲ್ಲವೋ ನೀನು ನೋಡುವಿ ಅಂದನು.
23 E o SENHOR disse a Moisés: Terá a mão do SENHOR ficado mais curta? Verás, agora, se a minha palavra acontecerá a ti ou não.
24 ಆಗ ಮೋಶೆ ಹೊರಟು ಕರ್ತನ ಮಾತುಗಳನ್ನು ಜನರಿಗೆ ಹೇಳಿ ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ ಗುಡಾರದ ಸುತ್ತಲೂ ನಿಲ್ಲಿಸಿದನು.
24 E Moisés saiu, e disse ao povo as palavras do SENHOR, e reuniu setenta homens dos anciãos do povo e os colocou ao redor do tabernáculo.
25 ಕರ್ತನು ಮೇಘದೊಳಗೆ ಇಳಿದು ಬಂದು ಅವನ ಸಂಗಡ ಮಾತನಾಡಿ ಅವನ ಮೇಲಿರುವ ಆತ್ಮದಲ್ಲಿ ಪಾಲನ್ನು ತೆಗೆದು ಹಿರಿಯರಾದ ಎಪ್ಪತ್ತು ಮಂದಿಯ ಮೇಲೆ ಇಟ್ಟನು. ಆತ್ಮವು ಅವರ ಮೇಲೆ ನೆಲೆಯಾಗಿ ದ್ದಾಗ ಅವರು ಪ್ರವಾದಿಸಿದರು. ಅದನ್ನು ನಿಲ್ಲಿಸಲಿಲ್ಲ.
25 E o SENHOR desceu em uma nuvem, e lhe falou; e tomou do Espírito que estava sobre ele, e deu aos setenta anciãos; e sucedeu que, quando repousava sobre eles o Espírito, eles profetizaram, e não cessou.
26 ಆದರೆ ಇಬ್ಬರು ಮನುಷ್ಯರು ಪಾಳೆಯದಲ್ಲಿ ಉಳಿದರು. ಅವರಲ್ಲಿ ಒಬ್ಬನ ಹೆಸರು ಎಲ್ದಾದ್‌, ಮತ್ತೊಬ್ಬನ ಹೆಸರು ಮೇದಾದ್‌; ಇವರ ಮೇಲೆ ಆತ್ಮವು ನೆಲೆಯಾಯಿತು. ಇವರು ಬರೆಯಲ್ಪಟ್ಟವರಾಗಿ ಗುಡಾರಕ್ಕೆ ಹೊರಟು ಹೋಗದೆ ಪಾಳೆಯದಲ್ಲಿ ಪ್ರವಾದಿಸುತ್ತಿದ್ದರು.
26 Mas ficaram dois dos homens no acampamento; um deles se chamava Eldade, e o outro Medade; e pousou sobre eles o Espírito, e eles estavam entre os inscritos, porém não foram ao tabernáculo, e eles profetizavam no acampamento.
27 ಆಗ ಒಬ್ಬ ಯೌವನಸ್ಥನು ಓಡಿಬಂದು ಮೋಶೆಗೆ ತಿಳಿಸಿ ಹೇಳಿದ್ದೇನಂದರೆಎಲ್ದಾದನೂ ಮೇದಾದನೂ ಪಾಳೆಯದಲ್ಲಿ ಪ್ರವಾದಿ ಸುತ್ತಾರೆ ಅಂದನು.
27 E um jovem correu, e contou a Moisés, dizendo: Eldade e Medade estão profetizando no acampamento.
28 ಅದಕ್ಕೆ ತನ್ನ ಯೌವನಸ್ಥರಲ್ಲಿ ಒಬ್ಬನೂ ಮೋಶೆಯ ಸೇವಕನೂ ಆಗಿದ್ದ ನೂನನ ಮಗನಾದ ಯೆಹೋಶುವನು ಹೇಳಿದ್ದೇನಂದರೆ--ನನ್ನ ಒಡೆಯನಾದ ಮೋಶೆಯೇ, ಅವರನ್ನು ತಡೆ ಅಂದನು.
28 E Josué, filho de Num, servo de Moisés, um dos seus jovens, respondeu e disse: Moisés, meu senhor, proíbe que façam isso.
29 ಮೋಶೆಯು ಅವನಿಗೆ ಹೇಳಿದ್ದೇ ನಂದರೆ--ನನ್ನ ನಿಮಿತ್ತವಾಗಿ ನೀನು ಹೊಟ್ಟೇಕಿಚ್ಚು ಪಡುತ್ತೀಯೋ? ಕರ್ತನ ಜನರೆಲ್ಲಾ ಪ್ರವಾದಿಗಳಾ ಗಿದ್ದು ಕರ್ತನು ತನ್ನ ಆತ್ಮವನ್ನು ಅವರ ಮೇಲೆ ಇಟ್ಟರೆ ಎಷ್ಟೋ ಒಳ್ಳೇದು ಅಂದನು!
29 E Moisés lhe disse: Tens tu ciúmes por mim? Quisera Deus que todo o povo do SENHOR fosse profeta, e que o SENHOR colocasse o seu Espírito sobre eles.
30 ಆಗ ಮೋಶೆಯೂ ಇಸ್ರಾಯೇಲ್‌ ಹಿರಿಯರೂ ಪಾಳೆಯದೊಳಗೆ ಬಂದು ಸೇರಿದರು.
30 E Moisés o levou ao acampamento, ele e os anciãos de Israel.
31 ಕರ್ತನ ಕಡೆಯಿಂದ ಗಾಳಿಯು ಹೊರಟು ಸಮುದ್ರದ ಕಡೆಯಿಂದ ಲಾವಕ್ಕಿಗಳನ್ನು ತಂದು ಪಾಳೆಯದ ಸುತ್ತಲೂ ಈ ಕಡೆ ಒಂದು ದಿನ ದೂರದ ಪ್ರಯಾಣದಷ್ಟು ಆ ಕಡೆ ಒಂದು ದಿನ ದೂರದ ಪ್ರಯಾಣದಷ್ಟು ಪಾಳೆಯದ ಬಳಿಯಲ್ಲಿ ಭೂಮಿಯ ಮೇಲೆ ಎರಡು ಮೊಳ ಎತ್ತರದಲ್ಲಿ ಅವುಗಳನ್ನು ಬೀಳುವಂತೆ ಮಾಡಿತು.
31 E então, veio um vento do SENHOR, e trouxe codornizes do mar, e as fez cair no acampamento, estavam um dia de viagem de um lado, e estavam um dia de viagem do outro lado, ao redor do acampamento, e era dois côvados de altura sobre a terra.
32 ಜನರು ಎದ್ದು ಆ ದಿನವೆಲ್ಲಾ ರಾತ್ರಿಯೆಲ್ಲಾ ಮರುದಿವಸವೆಲ್ಲಾ ಲಾವಕ್ಕಿಗಳನ್ನು ಕೂಡಿಸಿದರು. ಕಡಿಮೆ ಕೂಡಿಸಿದವನು ಹತ್ತು ಹೋಮೆ ರಗಳನ್ನು ಕೂಡಿಸಿದನು; ಅವರು ಪಾಳೆಯದ ಸುತ್ತಲೂ ಅವುಗಳನ್ನು ಹರಡಿಕೊಂಡರು.
32 E o povo se levantou todo aquele dia, e toda aquela noite, e todo o dia seguinte, e recolheu as codornizes; aquele que colhera menos, colhera dez ômeres; e as espalharam ao redor do acampamento.
33 ಆದರೆ ಮಾಂಸವು ಇನ್ನೂ ಅವರ ಹಲ್ಲುಗಳ ನಡುವೆ ಇದ್ದಾಗ ಅದನ್ನು ಅಗಿಯುವದಕ್ಕಿಂತ ಮುಂಚೆ ಕರ್ತನ ಕೋಪವು ಜನರಮೇಲೆ ಉರಿದದ್ದರಿಂದ ಆತನು ಜನರನ್ನು ಮಹಾ ದೊಡ್ಡ ವ್ಯಾಧಿಯಿಂದ ಹೊಡೆದನು.
33 E quando a carne estava entre os seus dentes, e antes que fosse mastigada, a ira do SENHOR se acendeu contra o povo, e o SENHOR feriu o povo com uma praga muito grande.
34 ಆಶೆಪಟ್ಟ ವರನ್ನು ಅಲ್ಲಿ ಹೂಣಿಟ್ಟದ್ದರಿಂದ ಆ ಸ್ಥಳಕ್ಕೆ ಕಿಬ್ರೋತ್‌ ಹತಾವಾ ಎಂದು ಹೆಸರಾಯಿತು.
34 E deu àquele lugar o nome de Quibrote-Hataavá, porque ali enterraram o povo que teve o desejo.
35 ತರುವಾಯ ಜನರು ಕಿಬ್ರೋತ್‌ ಹತಾವದಿಂದ ಹಚೇರೋತಿಗೆ ಪ್ರಯಾಣಮಾಡಿ ಅಲ್ಲಿ ಇಳು ಕೊಂಡರು.
35 E de Quibrote-Hataavá, o povo viajou para Hazerote e ficou em Hazerote.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Números 11, comparar traduções ou montar um estudo — tudo direto pelo WhatsApp.