Mateus 9
Kannada Bible (GL_KANNADA) vs ARA
ARA Almeida Revista e Atualizada 1993
1 ಆಗ ಆತನು ದೋಣಿಯನ್ನು ಹತ್ತಿ ಅಲ್ಲಿಂದ ಹೊರಟು ತನ್ನ ಸ್ವಂತ ಪಟ್ಟಣಕ್ಕೆ ಬಂದನು.
1 Entrando Jesus num barco, passou para o outro lado e foi para a sua própria cidade.
2 ಇಗೋ, ಹಾಸಿಗೆಯ ಮೇಲೆ ಮಲಗಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಜನರು ಆತನ ಬಳಿಗೆ ತಂದರು; ಮತ್ತು ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ--ಮಗನೇ, ಧೈರ್ಯವಾಗಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅಂದನು.
2 E eis que lhe trouxeram um paralítico deitado num leito. Vendo-lhes a fé, Jesus disse ao paralítico: Tem bom ânimo, filho; estão perdoados os teus pecados.
3 ಆಗ ಇಗೋ, ಶಾಸ್ತ್ರಿಗಳಲ್ಲಿ ಕೆಲವರು-- ಈ ಮನುಷ್ಯನು ದೇವದೂಷಣೆ ಮಾಡುತ್ತಾನೆ ಎಂದು ತಮ್ಮತಮ್ಮಲ್ಲಿ ಅಂದುಕೊಂಡರು.
3 Mas alguns escribas diziam consigo: Este blasfema.
4 ಯೇಸು ಅವರ ಆಲೋಚನೆಗಳನ್ನು ತಿಳಿದು--ನೀವು ಯಾಕೆ ನಿಮ್ಮ ಹೃದಯಗಳಲ್ಲಿ ಕೆಟ್ಟದ್ದನ್ನು ಯೋಚಿಸುತ್ತೀರಿ?
4 Jesus, porém, conhecendo-lhes os pensamentos, disse: Por que cogitais o mal no vosso coração?
5 ಯಾವದು ಸುಲಭ--ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಅನ್ನುವದೋ? ಇಲ್ಲವೆ--ಎದ್ದು ನಡೆ ಅನ್ನುವದೋ?
5 Pois qual é mais fácil? Dizer: Estão perdoados os teus pecados, ou dizer: Levanta-te e anda?
6 ಆದರೆ ಮನುಷ್ಯಕುಮಾರನಿಗೆ ಪಾಪ ಗಳನ್ನು ಕ್ಷಮಿಸಿಬಿಡುವದಕ್ಕೆ ಭೂಮಿಯ ಮೇಲೆ ಅಧಿಕಾರ ಉಂಟೆಂದು ನೀವು ತಿಳಿಯಬೇಕು ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ--ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗು ಎಂದು ಹೇಳಿದನು.
6 Ora, para que saibais que o Filho do Homem tem sobre a terra autoridade para perdoar pecados — disse, então, ao paralítico: Levanta-te, toma o teu leito e vai para tua casa.
7 ಆಗ ಅವನು ಎದ್ದು ತನ್ನ ಮನೆಗೆ ಹೊರಟುಹೋದನು.
7 E, levantando-se, partiu para sua casa.
8 ಆದರೆ ಜನರ ಸಮೂಹಗಳು ಅದನ್ನು ನೋಡಿ ಆಶ್ಚರ್ಯಪಟ್ಟು ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟ ದೇವರನ್ನು ಮಹಿಮೆಪಡಿಸಿದರು.
8 Vendo isto, as multidões, possuídas de temor, glorificaram a Deus, que dera tal autoridade aos homens.
9 ತರುವಾಯ ಯೇಸು ಅಲ್ಲಿಂದ ಹಾದು ಹೋಗು ತ್ತಿದ್ದಾಗ ಮತ್ತಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಸುಂಕದ ಕಟ್ಟೆಯಲ್ಲಿ ಕೂತಿರುವದನ್ನು ನೋಡಿ ಅವ ನಿಗೆ--ನನ್ನನ್ನು ಹಿಂಬಾಲಿಸು ಅನ್ನಲು ಅವನು ಎದ್ದು ಆತನನ್ನು ಹಿಂಬಾಲಿಸಿದನು.
9 Partindo Jesus dali, viu um homem chamado Mateus sentado na coletoria e disse-lhe: Segue-me! Ele se levantou e o seguiu.
10 ಇದಾದ ಮೇಲೆ ಯೇಸು ಅವನ ಮನೆಯಲ್ಲಿ ಊಟಕ್ಕೆ ಕೂತಿದ್ದಾಗ ಇಗೋ, ಬಹುಮಂದಿ ಸುಂಕ ದವರೂ ಪಾಪಿಗಳೂ ಬಂದು ಆತನೊಂದಿಗೂ ಆತನ ಶಿಷ್ಯರೊಂದಿಗೂ ಕೂತುಕೊಂಡರು.
10 E sucedeu que, estando ele em casa, à mesa, muitos publicanos e pecadores vieram e tomaram lugares com Jesus e seus discípulos.
11 ಫರಿಸಾ ಯರು ಅದನ್ನು ನೋಡಿ ಆತನ ಶಿಷ್ಯರಿಗೆ--ನಿಮ್ಮ ಬೋಧಕನು ಸುಂಕದವರ ಮತ್ತು ಪಾಪಿಗಳ ಸಂಗಡ ಯಾಕೆ ಊಟ ಮಾಡುತ್ತಾನೆ ಎಂದು ಕೇಳಿದರು.
11 Ora, vendo isto, os fariseus perguntavam aos discípulos: Por que come o vosso Mestre com os publicanos e pecadores?
12 ಆದರೆ ಯೇಸು ಅದನ್ನು ಕೇಳಿ ಅವರಿಗೆ--ಕ್ಷೇಮದಿಂದಿರುವವರಿಗೆ ಅಲ್ಲ, ಆದರೆ ಕ್ಷೇಮವಿಲ್ಲದವ ರಿಗೆ ವೈದ್ಯನು ಬೇಕು.
12 Mas Jesus, ouvindo, disse: Os sãos não precisam de médico, e sim os doentes.
13 ನೀವು ಹೋಗಿ--ನಾನು ಯಜ್ಞವನ್ನಲ್ಲ; ಕರುಣೆಯನ್ನೇ ಅಪೇಕ್ಷಿಸುತ್ತೇನೆ ಎಂಬದರ ಅರ್ಥವನ್ನು ಕಲಿಯಿರಿ; ಯಾಕಂದರೆ ನಾನು ನೀತಿ ವಂತರನ್ನಲ್ಲ, ಪಾಪಿಗಳನ್ನು ಮಾನಸಾಂತರಪಡು ವದಕ್ಕಾಗಿ ಕರೆಯಲು ಬಂದೆನು ಎಂದು ಹೇಳಿದನು.
13 Ide, porém, e aprendei o que significa:
14 ತರುವಾಯ ಯೋಹಾನನ ಶಿಷ್ಯರು ಆತನ ಬಳಿಗೆ ಬಂದು--ನಾವು ಮತ್ತು ಫರಿಸಾಯರು ಬಹಳ ಸಾರಿ ಉಪವಾಸಮಾಡುತ್ತೇವೆ; ಆದರೆ ನಿನ್ನ ಶಿಷ್ಯರು ಯಾಕೆ ಉಪವಾಸಮಾಡುವದಿಲ್ಲ ಎಂದು ಕೇಳಿದರು.
14 Vieram, depois, os discípulos de João e lhe perguntaram: Por que jejuamos nós, e os fariseus [muitas vezes], e teus discípulos não jejuam?
15 ಅದಕ್ಕೆ ಯೇಸು ಅವರಿಗೆ--ಮದಲಿಂಗನು ತಮ್ಮ ಜೊತೆಯಲ್ಲಿರುವ ತನಕ ಮದಲಗಿತ್ತಿಯ ಮನೇ ಮಕ್ಕಳು ದುಃಖಪಡುವರೇ? ಆದರೆ ಮದಲಿಂಗನು ಅವರಿಂದ ತೆಗೆಯಲ್ಪಡುವ ದಿವಸಗಳು ಬರುವವು; ಆಗ ಅವರು ಉಪವಾಸ ಮಾಡುವರು.
15 Respondeu-lhes Jesus: Podem, acaso, estar tristes os convidados para o casamento, enquanto o noivo está com eles? Dias virão, contudo, em que lhes será tirado o noivo, e nesses dias hão de jejuar.
16 ಯಾವನೂ ಹಳೇ ಬಟ್ಟೆಗೆ ಹೊಸ ಬಟ್ಟೆಯ ತುಂಡನ್ನು ಹಚ್ಚುವದಿಲ್ಲ; ಹಚ್ಚಿದರೆ ಅದು ಆ ವಸ್ತ್ರವನ್ನು ಹಿಂಜುವದರಿಂದ ಹರಕು ಹೆಚ್ಚಾಗು ವದು.
16 Ninguém põe remendo de pano novo em veste velha; porque o remendo tira parte da veste, e fica maior a rotura.
17 ಇಲ್ಲವೆ ಹೊಸ ದ್ರಾಕ್ಷಾರಸವನ್ನು ಹಳೇ ಬುದ್ದಲಿಗಳಲ್ಲಿ ಜನರು ಹಾಕುವದಿಲ್ಲ; ಹಾಕಿದರೆ ಅವು ಒಡೆದು ದ್ರಾಕ್ಷಾರಸವು ಚೆಲ್ಲಿಹೋಗಿ ಬುದ್ದಲಿಗಳು ನಾಶವಾಗುವವು; ಆದರೆ ಅವರು ಹೊಸ ದ್ರಾಕ್ಷಾ ರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕುವರು; ಆಗ ಅವೆರಡೂ ಭದ್ರವಾಗಿರುವವು ಅಂದನು.
17 Nem se põe vinho novo em odres velhos; do contrário, rompem-se os odres, derrama-se o vinho, e os odres se perdem. Mas põe-se vinho novo em odres novos, e ambos se conservam.
18 ಆತನು ಈ ವಿಷಯಗಳನ್ನು ಅವರೊಂದಿಗೆ ಮಾತನಾಡುತ್ತಿದ್ದಾಗ ಇಗೋ, ಒಬ್ಬ ಅಧಿಕಾರಿಯು ಬಂದು ಆತನನ್ನು ಆರಾಧಿಸಿ--ನನ್ನ ಮಗಳು ಇದೀಗಲೇ ಸತ್ತು ಹೋಗಿರುವಳು; ಆದರೆ ನೀನು ಬಂದು ಆಕೆಯ ಮೇಲೆ ನಿನ್ನ ಕೈಯನ್ನಿಡು; ಆಗ ಅವಳು ಬದುಕುವಳು ಎಂದು ಹೇಳಿದನು.
18 Enquanto estas coisas lhes dizia, eis que um chefe, aproximando-se, o adorou e disse: Minha filha faleceu agora mesmo; mas vem, impõe a mão sobre ela, e viverá.
19 ಆಗ ಯೇಸು ಎದ್ದು ತನ್ನ ಶಿಷ್ಯರೊಂದಿಗೆ ಅವನ ಹಿಂದೆ ಹೋದನು.
19 E Jesus, levantando-se, o seguia, e também os seus discípulos.
20 ಆಗ ಇಗೋ, ಹನ್ನೆರಡು ವರುಷಗಳಿಂದಲೂ ರಕ್ತಸ್ರಾವ ರೋಗವಿದ್ದ ಒಬ್ಬ ಸ್ತ್ರೀಯು ಹಿಂದೆ ಬಂದು ಆತನ ಉಡುಪಿನ ಅಂಚನ್ನು ಮುಟ್ಟಿದಳು.
20 E eis que uma mulher, que durante doze anos vinha padecendo de uma hemorragia, veio por trás dele e lhe tocou na orla da veste;
21 ಯಾಕಂದರೆ--ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಗುಣವಾಗುವೆನು ಎಂದು ಆಕೆಯು ತನ್ನೊಳಗೆ ಅಂದುಕೊಂಡಿದ್ದಳು.
21 porque dizia consigo mesma: Se eu apenas lhe tocar a veste, ficarei curada.
22 ಆದರೆ ಯೇಸು ಹಿಂತಿರುಗಿ ಆಕೆಯನ್ನು ನೋಡಿ--ಮಗಳೇ, ಸಮಾಧಾನದಿಂದಿರು; ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥ ಮಾಡಿಯದೆ ಅಂದನು. ಅದೇ ಗಳಿಗೆಯಲ್ಲಿ ಆ ಸ್ತ್ರೀಯು ಸ್ವಸ್ಥಳಾದಳು.
22 E Jesus, voltando-se e vendo-a, disse: Tem bom ânimo, filha, a tua fé te salvou. E, desde aquele instante, a mulher ficou sã.
23 ತರುವಾಯ ಯೇಸು ಆ ಅಧಿಕಾರಿಯ ಮನೆ ಯೊಳಗೆ ಬಂದು ಕೊಳಲೂದುವವರನ್ನೂ ಗೊಂದಲ ಮಾಡುವ ಜನರನ್ನೂ ನೋಡಿ
23 Tendo Jesus chegado à casa do chefe e vendo os tocadores de flauta e o povo em alvoroço, disse:
24 ಅವರಿಗೆ--ಸ್ಥಳ ಬಿಡಿರಿ; ಯಾಕಂದರೆ ಹುಡುಗಿಯು ಸತ್ತಿಲ್ಲ, ನಿದ್ರೆ ಮಾಡುತ್ತಾಳೆ ಅಂದನು. ಅದಕ್ಕವರು ಆತನನ್ನು ಹಾಸ್ಯ ಮಾಡಿ ನಕ್ಕರು.
24 Retirai-vos, porque não está morta a menina, mas dorme. E riam-se dele.
25 ಆದರೆ ಜನರು ಹೊರಗೆ ಹಾಕಲ್ಪಟ್ಟ ಮೇಲೆ ಆತನು ಒಳಗೆ ಹೋಗಿ ಆಕೆಯ ಕೈಯನ್ನು ಹಿಡಿದಾಗ ಆಕೆಯು ಎದ್ದಳು.
25 Mas, afastado o povo, entrou Jesus, tomou a menina pela mão, e ela se levantou.
26 ಇದರ ಕೀರ್ತಿಯು ಆ ದೇಶದಲ್ಲೆಲ್ಲಾ ಹರಡಿತು.
26 E a fama deste acontecimento correu por toda aquela terra.
27 ಯೇಸು ಅಲ್ಲಿಂದ ಹೊರಟಾಗ ಇಬ್ಬರು ಕುರುಡರು ಆತನನ್ನು ಹಿಂಬಾಲಿಸುತ್ತಾ--ದಾವೀದ ಕುಮಾರನೇ, ನಮ್ಮ ಮೇಲೆ ಕರುಣೆ ಇಡು ಎಂದು ಕೂಗಿ ಹೇಳುತ್ತಿದ್ದರು.
27 Partindo Jesus dali, seguiram-no dois cegos, clamando: Tem compaixão de nós, Filho de Davi!
28 ಆತನು ಮನೆಯೊಳಕ್ಕೆ ಬಂದಾಗ ಆ ಕುರುಡರು ಆತನ ಬಳಿಗೆ ಬಂದರು; ಆಗ ಯೇಸು ಅವರಿಗೆ--ನಾನು ಇದನ್ನು ಮಾಡಲು ಶಕ್ತನೆಂದು ನೀವು ನಂಬುತ್ತೀರೋ ಎಂದು ಕೇಳಿದಾಗ ಅವರು ಆತನಿಗೆ--ಕರ್ತನೇ, ಹೌದು ಎಂದು ಅಂದರು.
28 Tendo ele entrado em casa, aproximaram-se os cegos, e Jesus lhes perguntou: Credes que eu posso fazer isso? Responderam-lhe: Sim, Senhor!
29 ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ--ನಿಮ್ಮ ನಂಬಿಕೆಯಂತೆ ನಿಮಗಾಗಲಿ ಎಂದು ಹೇಳಿದನು.
29 Então, lhes tocou os olhos, dizendo: Faça-se-vos conforme a vossa fé.
30 ಆಗ ಅವರ ಕಣ್ಣುಗಳು ತೆರೆಯಲ್ಪಟ್ಟವು; ಮತ್ತು ಯೇಸು ಅವರಿಗೆ--ಇದು ಯಾರಿಗೂ ಗೊತ್ತಾಗಬಾರದು ನೋಡಿರಿ ಎಂದು ಅವರಿಗೆ ಖಂಡಿತವಾಗಿ ಅಪ್ಪಣೆಕೊಟ್ಟು ಹೇಳಿದನು.
30 E abriram-se-lhes os olhos. Jesus, porém, os advertiu severamente, dizendo: Acautelai-vos de que ninguém o saiba.
31 ಆದರೆ ಅವರು ಹೊರಟುಹೋಗಿ ಆ ಸೀಮೆಯಲ್ಲೆಲ್ಲಾ ಆತನ ಕೀರ್ತಿಯನ್ನು ಹಬ್ಬಿಸಿದರು.
31 Saindo eles, porém, divulgaram-lhe a fama por toda aquela terra.
32 ಅವರು ಹೊರಟು ಹೋಗುತ್ತಿದ್ದಾಗ ಇಗೋ, ದೆವ್ವ ಹಿಡಿದಿದ್ದ ಮೂಕನಾದ ಒಬ್ಬ ಮನುಷ್ಯನನ್ನು ಅವರು ಆತನ ಬಳಿಗೆ ತಂದರು.
32 Ao retirarem-se eles, foi-lhe trazido um mudo endemoninhado.
33 ಮತ್ತು ದೆವ್ವವು ಹೊರಗೆ ಹಾಕಲ್ಪಟ್ಟ ಮೇಲೆ ಮೂಕನು ಮಾತಾಡಿದನು; ಆಗ ಜನಸಮೂಹಗಳವರು ಬೆರ ಗಾಗಿ--ಇಂಥದ್ದು ಎಂದೂ ಇಸ್ರಾಯೇಲಿನಲ್ಲಿ ಕಂಡಿಲ್ಲ ಎಂದು ಹೇಳಿದರು.
33 E, expelido o demônio, falou o mudo; e as multidões se admiravam, dizendo: Jamais se viu tal coisa em Israel!
34 ಆದರೆ ಪರಿಸಾಯರು-- ದೆವ್ವಗಳ ಅಧಿಪತಿಯಿಂದ ಇವನು ದೆವ್ವಗಳನ್ನು ಬಿಡಿಸುತ್ತಾನೆ ಅಂದರು.
34 Mas os fariseus murmuravam: Pelo maioral dos demônios é que expele os demônios.
35 ತರುವಾಯ ಯೇಸು ಎಲ್ಲಾ ಹಳ್ಳಿಗಳಲ್ಲಿಯೂ ಪಟ್ಟಣಗಳಲ್ಲಿಯೂ ಸಂಚರಿ ಸುತ್ತಾ ಅವರ ಸಭಾಮಂದಿರಗಳಲ್ಲಿ ಉಪದೇಶಿಸುತಾ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರಲ್ಲಿದ್ದ ಪ್ರತಿಯೊಂದು ಅಸ್ವಸ್ಥತೆಯನ್ನೂ ರೋಗವನ್ನೂ ವಾಸಿಮಾಡಿದರು.
35 E percorria Jesus todas as cidades e povoados, ensinando nas sinagogas, pregando o evangelho do reino e curando toda sorte de doenças e enfermidades.
36 ಆದರೆ ಆತನು ಜನರ ಸಮೂಹಗಳನ್ನು ಕಂಡು ಅವರ ಮೇಲೆ ಕನಿಕರಪಟ್ಟನು; ಯಾಕಂದರೆ ಅವರು ಕುರುಬನಿಲ್ಲದ ಕುರಿಗಳಂತೆ ಚದರಿಸಲ್ಪಟ್ಟು ಬಳಲಿದವರಾಗಿದ್ದರು.
36 Vendo ele as multidões, compadeceu-se delas, porque estavam aflitas e exaustas como ovelhas que não têm pastor.
37 ಆಗ ಆತನು ತನ್ನ ಶಿಷ್ಯ ರಿಗೆ--ಬೆಳೆಯು ನಿಜವಾಗಿಯೂ ಬಹಳ; ಆದರೆ ಕೆಲಸದವರು ಸ್ವಲ್ಪ.
37 E, então, se dirigiu a seus discípulos: A seara, na verdade, é grande, mas os trabalhadores são poucos.
38 ಆದದರಿಂದ ಬೆಳೆಯ ಯಜ ಮಾನನು ಕೆಲಸಗಾರರನ್ನು ತನ್ನ ಬೆಳೆಗೆ ಕಳುಹಿಸುವಂತೆ ಆತನನ್ನು ಪ್ರಾರ್ಥಿಸಿರಿ ಅಂದನು.
38 Rogai, pois, ao Senhor da seara que mande trabalhadores para a sua seara.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Mateus 9, comparar traduções ou montar um estudo — tudo direto pelo WhatsApp.