Mateus 25
Kannada Bible (GL_KANNADA) vs ARIB
ARIB Almeida Revisada Imprensa Bíblica
1 ಇದಲ್ಲದೆ ಪರಲೋಕ ರಾಜ್ಯವು ತಮ್ಮ ದೀಪಗಳನ್ನು ತಕ್ಕೊಂಡು ಮದಲಿಂಗ ನನ್ನು ಎದುರುಗೊಳ್ಳುವದಕ್ಕಾಗಿ ಹೊರಟುಹೋದ ಹತ್ತುಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವದು.
1 Então o reino dos céus será semelhante a dez virgens que, tomando as suas lâmpadas, saíram ao encontro do noivo.
2 ಅವರಲ್ಲಿ ಐದುಮಂದಿ ಬುದ್ಧಿವಂತೆಯರೂ ಐದು ಮಂದಿ ಬುದ್ಧಿಹೀನರೂ ಇದ್ದರು.
2 Cinco delas eram insensatas, e cinco prudentes.
3 ಬುದ್ಧಿಹೀನರು ತಮ್ಮ ದೀಪಗಳನ್ನು ತಕ್ಕೊಂಡು ತಮ್ಮೊಂದಿಗೆ ಎಣ್ಣೆಯನ್ನು ತಕ್ಕೊಳ್ಳಲಿಲ್ಲ,
3 Ora, as insensatas, tomando as lâmpadas, não levaram azeite consigo.
4 ಬುದ್ದಿವಂತೆಯರು ತಮ್ಮ ದೀಪಗಳೊ ಂದಿಗೆ ಪಾತ್ರೆಯಲ್ಲಿ ಎಣ್ಣೆಯನ್ನೂ ತಕ್ಕೊಂಡರು.
4 As prudentes, porém, levaram azeite em suas vasilhas, juntamente com as lâmpadas.
5 ಮದಲಿಂಗನು ತಡಮಾಡಿದಾಗ ಅವರೆಲ್ಲರೂ ತೂಕಡಿಸಿ ನಿದ್ರಿಸಿದರು.
5 E tardando o noivo, cochilaram todas, e dormiram.
6 ಮಧ್ಯರಾತ್ರಿಯಲ್ಲಿ--ಇಗೋ, ಮದಲಿಂಗನು ಬರುತ್ತಾನೆ; ಅವನನ್ನು ಎದುರುಗೊಳ್ಳುವದಕ್ಕಾಗಿ ಹೊರಡಿರಿ ಎಂಬ ಕೂಗಾ ಯಿತು.
6 Mas à meia-noite ouviu-se um grito: Eis o noivo! saí-lhe ao encontro!
7 ಆಗ ಆ ಕನ್ಯೆಯರೆಲ್ಲರೂ ಎದ್ದು ತಮ್ಮ ದೀಪಗಳನ್ನು ಸರಿಪಡಿಸಿಕೊಂಡರು;
7 Então todas aquelas virgens se levantaram, e prepararam as suas lâmpadas.
8 ಬುದ್ಧಿಹೀನರು ಬುದ್ಧಿವಂತೆಯರಿಗೆ-- ನಿಮ್ಮ ಎಣ್ಣೆಯಲ್ಲಿ ನಮಗೆ ಕೊಡಿರಿ; ಯಾಕಂದರೆ ನಮ್ಮ ದೀಪಗಳು ಆರಿಹೋಗಿವೆ ಅಂದರು.
8 E as insensatas disseram às prudentes: Dai-nos do vosso azeite, porque as nossas lâmpadas estão se apagando.
9 ಆದರೆ ಬುದ್ಧಿವಂತೆಯರು ಪ್ರತ್ಯುತ್ತರ ವಾಗಿ--ಹಾಗಲ್ಲ, ಅದು ನಮಗೂ ನಿಮಗೂ ಸಾಲದೆ ಹೋದೀತು; ಆದದರಿಂದ ನೀವು ಮಾರು ವವರ ಬಳಿಗೆ ಹೋಗಿ ನಿಮಗೋಸ್ಕರ ಕೊಂಡು ಕೊಳ್ಳಿರಿ ಅಂದರು.
9 Mas as prudentes responderam: não; pois de certo não chegaria para nós e para vós; ide antes aos que o vendem, e comprai-o para vós.
10 ಅವರು ಕೊಂಡುಕೊಳ್ಳುವದಕ್ಕೆ ಹೋದಾಗ ಮದಲಿಂಗನು ಬಂದನು. ಆಗ ಸಿದ್ಧವಾಗಿ ದ್ದವರು ಮದುವೆಗೆ ಆತನೊಂದಿಗೆ ಒಳಕ್ಕೆ ಹೊದರು; ತರುವಾಯ ಬಾಗಲು ಮುಚ್ಚಲಾಯಿತು.
10 E, tendo elas ido comprá-lo, chegou o noivo; e as que estavam preparadas entraram com ele para as bodas, e fechou-se a porta.
11 ಇದಾದ ಮೇಲೆ ಆ ಬೇರೆ ಕನ್ಯೆಯರು ಸಹ ಬಂದು--ಕರ್ತನೇ, ಕರ್ತನೇ, ನಮಗೆ ಬಾಗಲನ್ನು ತೆರೆ ಅಂದರು.
11 Depois vieram também as outras virgens, e disseram: Senhor, Senhor, abre-nos a porta.
12 ಆದರೆ ಅವನು ಪ್ರತ್ಯುತ್ತರವಾಗಿ--ನಿಮ್ಮನ್ನು ಅರಿ ಯೆನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
12 Ele, porém, respondeu: Em verdade vos digo, não vos conheço.
13 ಆದದರಿಂದ ಎಚ್ಚರವಾಗಿರ್ರಿ; ಯಾಕಂದರೆ ಮನುಷ್ಯಕುಮಾರನು ಬರುವ ದಿನ ವನ್ನಾಗಲೀ ಗಳಿಗೆಯನ್ನಾಗಲೀ ನೀವು ಅರಿಯದವರಾ ಗಿದ್ದೀರಿ ಅಂದನು.
13 Vigiai pois, porque não sabeis nem o dia nem a hora.
14 ಯಾಕಂದರೆ ಪರಲೋಕರಾಜ್ಯವು ದೂರ ದೇಶಕ್ಕೆ ಪ್ರಯಾಣಮಾಡುವ ಒಬ್ಬ ಮನುಷ್ಯನು ತನ್ನ ಸ್ವಂತ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿದಂತೆ ಇದೆ.
14 Porque é assim como um homem que, ausentando-se do país, chamou os seus servos e lhes entregou os seus bens:
15 ಅವನು ಒಬ್ಬನಿಗೆ ಐದು ತಲಾಂತುಗಳನ್ನು ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ತಕ್ಷಣವೇ ಪ್ರಯಾಣ ಮಾಡಿದನು.
15 a um deu cinco talentos, a outro dois, e a outro um, a cada um segundo a sua capacidade; e seguiu viagem.
16 ತರುವಾಯ ಐದು ತಲಾಂತುಗಳನ್ನು ಹೊಂದಿದ ವನು ಹೋಗಿ ಅವುಗಳಿಂದ ವ್ಯಾಪಾರಮಾಡಿ ಬೇರೆ ಐದು ತಲಾಂತುಗಳನ್ನು ಸಂಪಾದಿಸಿದನು.
16 O que recebera cinco talentos foi imediatamente negociar com eles, e ganhou outros cinco;
17 ಅದೇ ಪ್ರಕಾರ ಎರಡು ಹೊಂದಿದವನು ಸಹ ಬೇರೆ ಎರಡನ್ನು ಸಂಪಾದಿಸಿದನು.
17 da mesma sorte, o que recebera dois ganhou outros dois;
18 ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂಮಿಯನ್ನು ಅಗೆದು ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು.
18 mas o que recebera um foi e cavou na terra e escondeu o dinheiro do seu senhor.
19 ಬಹುಕಾಲವಾದ ಮೇಲೆ ಆ ಸೇವಕರ ಯಜ ಮಾನನು ಬಂದು ಅವರಿಂದ ಲೆಕ್ಕಾ ತೆಗೆದುಕೊಂಡನು.
19 Ora, depois de muito tempo veio o senhor daqueles servos, e fez contas com eles.
20 ಆಗ ಐದು ತಲಾಂತುಗಳನ್ನು ಹೊಂದಿದ್ದವನು ಬಂದು ಬೇರೆ ಐದು ತಲಾಂತುಗಳನ್ನು ತಂದು--ಒಡೆಯನೇ, ನೀನು ನನಗೆ ಐದು ತಲಾಂತುಗಳನ್ನು ಒಪ್ಪಿಸಿದಿ; ಇಗೋ, ಅವುಗಳಲ್ಲದೆ ಬೇರೆ ಐದು ತಲಾಂತುಗಳನ್ನು ನಾನು ಸಂಪಾದಿಸಿದ್ದೇನೆ ಅಂದನು.
20 Então chegando o que recebera cinco talentos, apresentou-lhe outros cinco talentos, dizendo: Senhor, entregaste-me cinco talentos; eis aqui outros cinco que ganhei.
21 ಆಗ ಅವನ ಯಜಮಾನನು ಅವನಿಗೆ--ನಂಬಿಗಸ್ತನಾದ ಒಳ್ಳೇ ಸೇವಕನೇ, ಒಳ್ಳೇದನ್ನು ಮಾಡಿದ್ದೀ. ಸ್ವಲ್ಪವಾದವುಗಳಲ್ಲಿ ನೀನು ನಂಬಿಗಸ್ತ ನಾದದ್ದರಿಂದ ನಾನು ನಿನ್ನನ್ನು ಬಹಳವಾದವುಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು; ನೀನು ನಿನ್ನ ಯಜಮಾನನ ಸಂತೋಷದಲ್ಲಿ ಪ್ರವೇಶಿಸು ಅಂದನು.
21 Disse-lhe o seu senhor: Muito bem, servo bom e fiel; sobre o pouco foste fiel, sobre muito te colocarei; entra no gozo do teu senhor.
22 ಎರಡು ತಲಾಂತುಗಳನ್ನು ಹೊಂದಿದ್ದವನು ಸಹ ಬಂದು--ಒಡೆಯನೇ, ನೀನು ನನಗೆ ಎರಡು ತಲಾಂತುಗಳನ್ನು ಒಪ್ಪಿಸಿದಿ; ಇಗೋ, ಅವುಗಳಲ್ಲದೆ ಇನ್ನೂ ಎರಡು ತಲಾಂತುಗಳನ್ನು ನಾನು ಸಂಪಾದಿಸಿ ದ್ದೇನೆ ಅಂದನು.
22 Chegando também o que recebera dois talentos, disse: Senhor, entregaste-me dois talentos; eis aqui outros dois que ganhei.
23 ಆಗ ಅವನ ಯಜಮಾನನು ಅವನಿಗೆ--ನಂಬಿಗಸ್ತನಾದ ಒಳ್ಳೇ ಸೇವಕನೇ, ಒಳ್ಳೇ ದನ್ನು ಮಾಡಿದ್ದೀ; ಸ್ವಲ್ಪವಾದವುಗಳಲ್ಲಿ ನೀನು ನಂಬಿಗ ಸ್ತನಾದದ್ದರಿಂದ ನಾನು ನಿನ್ನನ್ನು ಬಹಳವಾದವುಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು; ನೀನು ನಿನ್ನ ಯಜಮಾನನ ಸಂತೋಷದಲ್ಲಿ ಪ್ರವೇಶಿಸು ಅಂದನು.
23 Disse-lhe o seu senhor: Muito bem, servo bom e fiel; sobre o pouco foste fiel, sobre muito te colocarei; entra no gozo do teu senhor.
24 ಆಗ ಒಂದು ತಲಾಂತು ಹೊಂದಿದ್ದ ವನು ಬಂದು--ಒಡೆಯನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನೂ ತೂರದಿರುವಲ್ಲಿ ಕೂಡಿಸುವವನೂ ಆಗಿರುವ ಕಠಿಣ ಮನುಷ್ಯನೆಂದು ನಾನು ಬಲ್ಲೆನು;
24 Chegando por fim o que recebera um talento, disse: Senhor, eu te conhecia, que és um homem duro, que ceifas onde não semeaste, e recolhes onde não joeiraste;
25 ಅದಕ್ಕೆ ನಾನು ಭಯಪಟ್ಟು ಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು. ಇಗೋ, ನಿನ್ನದು ನಿನಗೆ ಸಲ್ಲಿದೆ ಅಂದನು.
25 e, atemorizado, fui esconder na terra o teu talento; eis aqui tens o que é teu.
26 ಅದಕ್ಕೆ ಅವನ ಯಜ ಮಾನನು ಪ್ರತ್ಯುತ್ತರವಾಗಿ--ಮೈಗಳ್ಳನಾದ ಕೆಟ್ಟ ಸೇವಕನೇ, ನಾನು ಬಿತ್ತದಿರುವಲ್ಲಿ ಕೊಯ್ಯುವವನೆ ಂತಲೂ ತೂರದಿರುವಲ್ಲಿ ಕೂಡಿಸುವವನೆಂತಲೂ ನೀನು ತಿಳಿದಿದ್ದೀಯಲ್ಲಾ.
26 Ao que lhe respondeu o seu senhor: Servo mau e preguiçoso, sabias que ceifo onde não semeei, e recolho onde não joeirei?
27 ಹಾಗಾದರೆ ನೀನು ನನ್ನ ಹಣವನ್ನು ಬಡ್ಡಿಗಾಗಿ ಕೊಡತಕ್ಕದ್ದಾಗಿತ್ತು; ನಾನು ಬಂದಾಗ ನನ್ನ ಸ್ವಂತದ್ದನ್ನು ಬಡ್ಡಿ ಸಹಿತವಾಗಿ ಹೊಂದಿ ಕೊಳ್ಳುತ್ತಿದ್ದೆನು.
27 Devias então entregar o meu dinheiro aos banqueiros e, vindo eu, tê-lo-ia recebido com juros.
28 ಆ ತಲಾಂತನ್ನು ತೆಗೆದುಕೊಂಡು ಹತ್ತು ತಲಾಂತುಗಳುಳ್ಳವನಿಗೆ ಕೊಡಿರಿ.
28 Tirai-lhe, pois, o talento e dai ao que tem os dez talentos.
29 ಇದ್ದ ಪ್ರತಿ ಯೊಬ್ಬನಿಗೆ ಕೊಡಲ್ಪಡುವದು ಮತ್ತು ಅವನಿಗೆ ಸಮೃದ್ಧಿ ಯಾಗುವದು; ಇಲ್ಲದವನ ಕಡೆಯಿಂದ ಅವನಿಗೆ ಇದ್ದದ್ದೂ ತೆಗೆಯಲ್ಪಡುವದು.
29 Porque a todo o que tem, dar-se-lhe-á, e terá em abundância; mas ao que não tem, até aquilo que tem ser-lhe-á tirado.
30 ಮತ್ತು ನಿಷ್ಪ್ರಯೋ ಜಕನಾದ ಈ ಸೇವಕನನ್ನು ನೀವು ಹೊರಗೆ ಕತ್ತಲೆಯಲ್ಲಿ ಹಾಕಿರಿ; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು ಅಂದನು.
30 E lançai o servo inútil nas trevas exteriores; ali haverá choro e ranger de dentes.
31 ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವನು;
31 Quando, pois vier o Filho do homem na sua glória, e todos os anjos com ele, então se assentará no trono da sua glória;
32 ಮತ್ತು ಆತನ ಮುಂದೆ ಎಲ್ಲಾ ಜನಾಂಗಗಳವರು ಕೂಡಿಸಲ್ಪ ಡುವರು; ಆಗ ಕುರುಬನು ತನ್ನ ಕುರಿಗಳನ್ನು ಆಡುಗ ಳಿಂದ ಪ್ರತ್ಯೇಕಿಸುವಂತೆಯೇ ಆತನು ಅವರನ್ನು ಪ್ರತ್ಯೇ ಕಿಸುವನು;
32 e diante dele serão reunidas todas as nações; e ele separará uns dos outros, como o pastor separa as ovelhas dos cabritos;
33 ಆತನು ಕುರಿಗಳನ್ನು ತನ್ನ ಬಲಗಡೆ ಯಲ್ಲಿಯೂ ಆಡುಗಳನ್ನು ತನ್ನ ಎಡಗಡೆಯಲ್ಲಿಯೂ ನಿಲ್ಲಿಸುವನು.
33 e porá as ovelhas à sua direita, mas os cabritos à esquerda.
34 ಆಗ ಅರಸನು ತನ್ನ ಬಲಗಡೆಯಲ್ಲಿ ರುವವರಿಗೆ--ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ನೀವು ಬನ್ನಿರಿ; ಭೂಲೋಕಕ್ಕೆ ಅಸ್ತಿ ವಾರ ಹಾಕಿದಂದಿನಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಬಾಧ್ಯವಾಗಿ ಹೊಂದಿರಿ;
34 Então dirá o Rei aos que estiverem à sua direita: Vinde, benditos de meu Pai. Possuí por herança o reino que vos está preparado desde a fundação do mundo;
35 ಯಾಕಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವದಕ್ಕೆ ಕೊಟ್ಟಿರಿ; ನಾನು ಪರದೇಶಿಯಾಗಿ ದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಂಡಿರಿ;
35 Pois tive fome, e destes-me de comer; tive sede, e destes-me de beber; era forasteiro, e recolhestes-me;
36 ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡಿಸಿ ದಿರಿ; ನಾನು ಅಸ್ವಸ್ಥನಾಗಿದ್ದೆನು; ನೀವು ನನ್ನನ್ನು ಸಂಧಿಸಿ ದಿರಿ; ನಾನು ಸೆರೆಯಲ್ಲಿದ್ದೆನು, ನೀವು ನನ್ನ ಬಳಿಗೆ ಬಂದಿರಿ ಎಂದು ಹೇಳುವನು.
36 estava nu, e vestistes-me; enfermo, e visitastes-me; preso, e viestes ver-me.
37 ಆಗ ಆ ನೀತಿವಂತರು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ಯಾವಾಗ ನೀನು ಹಸಿದದ್ದನ್ನು ನೋಡಿ ನಾವು ನಿನಗೆ ಉಣಿಸಿ ದೆವು? ಇಲ್ಲವೆ ಬಾಯಾರಿದ್ದಾಗ ನಿನಗೆ ಕುಡಿಯುವದಕ್ಕೆ ಕೊಟ್ಟೆವು? ಯಾವಾಗ
37 Então perguntarão os justos: Senhor, quando te vimos faminto, e te demos de comer; ou com sede, e te demos de beber?
38 ನೀನು ಪರದೇಶಿಯಾ ಗಿರುವದನ್ನು ನಾವು ನೋಡಿ ನಿನ್ನನ್ನು ಒಳಕ್ಕೆ ಸೇರಿಸಿ ಕೊಂಡೆವು? ಇಲ್ಲವೆ ಬಟ್ಟೆಯಿಲ್ಲದಿರುವಾಗ ನಿನಗೆ ಉಡಿಸಿದೆವು?
38 Quando te vimos forasteiro, e te recolhemos; ou nu, e te vestimos?
39 ಯಾವಾಗ ನೀನು ಅಸ್ವಸ್ಥನಾಗಿ ಇಲ್ಲವೆ ಸೆರೆಯಲ್ಲಿದ್ದಾಗ ನಾವು ನಿನ್ನನ್ನು ನೋಡಿ ನಿನ್ನ ಬಳಿಗೆ ಬಂದೆವು ಎಂದು ಹೇಳುವರು.
39 Quando te vimos enfermo, ou preso, e fomos visitar-te?
40 ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.
40 O Rei responderá: Em verdade vos digo que quantas vezes o fizestes a um destes meus irmãos mais pequeninos, a mim o fizestes.
41 ಆತನು ಎಡಗಡೆ ಯಲ್ಲಿರುವವರಿಗೆ--ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧ ಮಾಡಲ್ಪಟ್ಟ ನಿತ್ಯ ಬೆಂಕಿಯೊಳಗೆ ಹೋಗಿರಿ.
41 Dirá também aos que estiverem à sua esquerda: Apartai-vos de mim, malditos, para o fogo eterno, destinado ao Diabo e seus anjos.
42 ನಾನು ಹಸಿದವನಾಗಿದ್ದೆನು, ನೀವು ನನಗೆ ಊಟಕ್ಕೆ ಕೊಡಲಿಲ್ಲ; ನಾನು ಬಾಯಾರಿದವನಾಗಿದ್ದೆನು, ನೀವು ನನಗೆ ಕುಡಿ ಯುವದಕ್ಕೆ ಕೊಡಲಿಲ್ಲ.
42 Pois tive fome, e não me destes de comer; tive sede e não me destes de beber;
43 ನಾನು ಪರದೇಶಿಯಾಗಿ ದ್ದೆನು, ನೀವು ನನ್ನನ್ನು ಒಳಗೆ ಸೇರಿಸಿಕೊಳ್ಳಲಿಲ್ಲ; ಬಟ್ಟೆಯಿಲ್ಲದವನಾಗಿದ್ದಾಗ ನೀವು ನನಗೆ ಉಡಿಸಲಿಲ್ಲ; ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಸಂಧಿಸಲಿಲ್ಲ ಎಂದು ಹೇಳುವನು.
43 era forasteiro, e não me recolhestes; estava nu, e não me vestistes; enfermo e preso, e não me visitastes.
44 ಆಗ ಅವರು ಸಹ ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ನೀನು ಯಾವಾಗ ಹಸಿದದ್ದನ್ನೂ ಬಾಯರಿದ್ದನ್ನೂ ಪರದೇಶಿ ಯಾದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ಅಸ್ವಸ್ಥ ನಾಗಿದ್ದದ್ದನ್ನೂ ಸೆರೆಯಲ್ಲಿದ್ದದ್ದನ್ನೂ ನಾವು ನೋಡಿ ನಿನಗೆ ಉಪಚಾರ ಮಾಡಲಿಲ್ಲ ಎಂದು ಹೇಳುವರು.
44 Também eles perguntarão: Senhor, quando te vimos faminto, com sede, forasteiro, nu, enfermo, ou preso, e não te servimos?
45 ಆಗ ಆತನು ಅವರಿಗೆ ಪ್ರತ್ಯುತ್ತರವಾಗಿ--ನಾನು ನಿಮಗೆ ನಿಜವಾಗಿ ಹೇಳುವದೇನಂದರೆ, ನೀವು ಇವ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡದೆ ಹೋದ ದರಿಂದ ನನಗೂ ಮಾಡಲಿಲ್ಲ ಎಂದು ಹೇಳುವನು.
45 Então lhes responderá: Em verdade vos digo que quantas vezes o deixastes de fazer a um destes mais pequeninos, a mim o deixastes de fazer.
46 ಇವರು ನಿತ್ಯವಾದ ಶಿಕ್ಷೆಗೆ ಹೋಗುವರು; ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು.
46 Irão estes para o suplício eterno, porém os justos para a vida eterna.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Mateus 25, comparar traduções ou montar um estudo — tudo direto pelo WhatsApp.