Mateus 14
Kannada Bible (GL_KANNADA) vs ACF
ACF Almeida Corrigida Fiel
1 ಆ ಕಾಲದಲ್ಲಿ ಚತುರಾಧಿಪತಿಯಾದ ಹೆರೋದನು ಯೇಸುವಿನ ಕೀರ್ತಿಯನ್ನು ಕೇಳಿ ತನ್ನ ಸೇವಕರಿಗೆ --
1 Naquele tempo ouviu Herodes, o tetrarca, a fama de Jesus,
2 ಇವನು ಬಾಪ್ತಿಸ್ಮ ಮಾಡಿಸುವ ಯೋಹಾನನೇ; ಈಗ ಇವನು ಸತ್ತವರೊಳಗಿಂದ ಎದ್ದಿದ್ದಾನೆ; ಆದದರಿಂದಲೇ ಮಹತ್ಕಾರ್ಯಗಳು ಇವನಲ್ಲಿ ತೋರಿಬರುತ್ತವೆ ಎಂದು ಹೇಳಿದನು.
2 E disse aos seus criados: Este é João o Batista; ressuscitou dos mortos, e por isso estas maravilhas operam nele.
3 ಯಾಕಂದರೆ ಹೆರೋದನು ತನ್ನ ಸಹೋದರನಾದ ಫಿಲಿಪ್ಪನ ಹೆಂಡತಿಯಾಗಿದ್ದ ಹೆರೋದ್ಯಳ ನಿಮಿತ್ತವಾಗಿ ಯೋಹಾನನನ್ನು ಹಿಡಿದು ಕಟ್ಟಿ ಸೆರೆಯಲ್ಲಿ ಹಾಕಿದ್ದನು.
3 Porque Herodes tinha prendido João, e tinha-o maniatado e encerrado no cárcere, por causa de Herodias, mulher de seu irmão Filipe;
4 ಯಾಕಂದರೆ ಯೋಹಾನನು--ನೀನು ಅವಳನ್ನು ಇಟ್ಟುಕೊಂಡಿರುವದು ನಿನಗೆ ನ್ಯಾಯವಲ್ಲ ಎಂದು ಅವನಿಗೆ ಹೇಳಿದ್ದನು.
4 Porque João lhe dissera: Não te é lícito possuí-la.
5 ಆದದರಿಂದ ಅವನು ಯೋಹಾನನನ್ನು ಕೊಲ್ಲಬೇಕೆಂದಿದ್ದಾಗ ಜನ ಸಮೂಹಕ್ಕೆ ಭಯಪಟ್ಟನು; ಯಾಕಂದರೆ ಅವರು ಅವನನ್ನು ಪ್ರವಾದಿಯೆಂದು ಎಣಿಸಿದ್ದರು.
5 E, querendo matá-lo, temia o povo; porque o tinham como profeta.
6 ಆದರೆ ಹೆರೋದನ ಹುಟ್ಟಿದ ದಿನವು ಆಚರಿಸಲ್ಪಟ್ಟಾಗ ಹೆರೋದ್ಯಳ ಮಗಳು ಅವರ ಮುಂದೆ ನಾಟ್ಯವಾಡಿ ಹೆರೋದನನ್ನು ಮೆಚ್ಚಿಸಿದಳು.
6 Festejando-se, porém, o dia natalício de Herodes, dançou a filha de Herodias diante dele, e agradou a Herodes.
7 ಆದದರಿಂದ ಅವಳು ಏನು ಕೇಳಿಕೊಂಡರೂ ಅವಳಿಗೆ ಕೊಡುವೆನೆಂದು ಅವನು ಆಣೆಯಿಟ್ಟು ವಾಗ್ದಾನಮಾಡಿದನು.
7 Por isso prometeu, com juramento, dar-lhe tudo o que pedisse;
8 ಅವಳು ತನ್ನ ತಾಯಿಯಿಂದ ಮೊದಲೇ ಕಲಿಸಲ್ಪಟ್ಟವಳಾಗಿ-- ಬಾಪ್ತಿಸ್ಮ ಮಾಡಿಸುವ ಯೋಹಾನನ ತಲೆಯನ್ನು ಪರಾ ತಿನಲ್ಲಿ ಇಲ್ಲಿಯೇ ನನಗೆ ಕೊಡು ಎಂದು ಹೇಳಿದಳು.
8 E ela, instruída previamente por sua mãe, disse: Dá-me aqui, num prato, a cabeça de João o Batista.
9 ಆಗ ಅರಸನು ದುಃಖಪಟ್ಟಾಗ್ಯೂ ತನ್ನ ಆಣೆಯ ನಿಮಿತ್ತದಿಂದಲೂ ತನ್ನೊಂದಿಗೆ ಊಟಕ್ಕೆ ಕೂತಿದ್ದವರ ನಿಮಿತ್ತದಿಂದಲೂ ಅದನ್ನು ಅವಳಿಗೆ ಕೊಡುವಂತೆ ಅಪ್ಪಣೆಕೊಟ್ಟನು.
9 E o rei afligiu-se, mas, por causa do juramento, e dos que estavam à mesa com ele, ordenou que se lhe desse.
10 ಮತ್ತು ಅವನು (ಆಳುಗಳನ್ನು) ಕಳುಹಿಸಿ ಸೆರೆಯಲ್ಲಿ ಯೋಹಾನನ ತಲೆಯನ್ನು ಹೊಯಿಸಿದನು.
10 E mandou degolar João no cárcere.
11 ಇದಲ್ಲದೆ ಅವನ ತಲೆಯನ್ನು ಪರಾತಿನಲ್ಲಿ ತಂದು ಆ ಹುಡುಗಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತಂದಳು.
11 E a sua cabeça foi trazida num prato, e dada à jovem, e ela a levou a sua mãe.
12 ಆಗ ಅವನ ಶಿಷ್ಯರು ಬಂದು ದೇಹವನ್ನೆತ್ತಿಕೊಂಡು ಹೂಣಿಟ್ಟು ಹೋಗಿ ಯೇಸುವಿಗೆ ತಿಳಿಸಿದರು.
12 E chegaram os seus discípulos, e levaram o corpo, e o sepultaram; e foram anunciá-lo a Jesus.
13 ಯೇಸು ಆ ವಿಷಯವನ್ನು ಕೇಳಿದಾಗ ದೋಣಿ ಯನ್ನು ಹತ್ತಿ ಅಲ್ಲಿಂದ ವಿಂಗಡವಾಗಿ ಅರಣ್ಯ ಸ್ಥಳಕ್ಕೆ ಹೊರಟುಹೋದನು. ಇದನ್ನು ಕೇಳಿ ಜನರು ಪಟ್ಟಣ ಗಳಿಂದ ಕಾಲು ನಡಿಗೆಯಾಗಿ ಆತನನ್ನು ಹಿಂಬಾಲಿ ಸಿದರು.
13 E Jesus, ouvindo isto, retirou-se dali num barco, para um lugar deserto, apartado; e, sabendo-o o povo, seguiu-o a pé desde as cidades.
14 ಆಗ ಯೇಸು ಹೊರಟುಹೋಗಿ ಜನರ ಮಹಾಸಮೂಹವನ್ನು ಕಂಡು ಅವರ ಮೇಲೆ ಕನಿಕರ ಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು.
14 E, Jesus, saindo, viu uma grande multidão, e possuído de íntima compaixão para com ela, curou os seus enfermos.
15 ಸಾಯಂಕಾಲವಾದಾಗ ಆತನ ಶಿಷ್ಯರು ಆತನ ಬಳಿಗೆ ಬಂದು--ಇದು ಅಡವಿಯ ಸ್ಥಳ, ಸಮಯವು ದಾಟಿತು; ಜನರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರವನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡು ಅಂದರು.
15 E, sendo chegada a tarde, os seus discípulos aproximaram-se dele, dizendo: O lugar é deserto, e a hora é já avançada; despede a multidão, para que vão pelas aldeias, e comprem comida para si.
16 ಆದರೆ ಯೇಸು ಅವ ರಿಗೆ--ಅವರು ಹೋಗುವದು ಅವಶ್ಯವಿಲ್ಲ; ಅವರು ಊಟಮಾಡುವದಕ್ಕೆ ನೀವೇ ಕೊಡಿರಿ ಎಂದು ಹೇಳಿದನು.
16 Jesus, porém, lhes disse: Não é mister que vão; dai-lhes vós de comer.
17 ಅವರು ಆತನಿಗೆ--ನಮ್ಮ ಹತ್ತಿರ ಐದು ರೊಟ್ಟಿ ಎರಡು ಮಾನುಗಳು ಮಾತ್ರ ಇವೆ ಎಂದು ಹೇಳಿದರು.
17 Então eles lhe disseram: Não temos aqui senão cinco pães e dois peixes.
18 ಆತನು--ಅವುಗಳನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಅಂದನು.
18 E ele disse: Trazei-mos aqui.
19 ಜನ ಸಮೂಹವು ಹುಲ್ಲಿನಮೇಲೆ ಕೂತುಕೊಳ್ಳಬೇಕೆಂದು ಆತನು ಅಪ್ಪಣೆಕೊಟ್ಟು ಆ ಐದು ರೊಟ್ಟಿ ಎರಡು ಮಾನುಗಳನ್ನು ತಕ್ಕೊಂಡು ಪರಲೋಕದ ಕಡೆಗೆ ನೋಡಿ ಆಶೀರ್ವದಿಸಿ ಮುರಿದು ಆ ರೊಟ್ಟಿಗಳನ್ನು ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಶಿಷ್ಯರು ಜನಸಮೂಹಕ್ಕೆ ಕೊಟ್ಟರು.
19 E, tendo mandado que a multidão se assentasse sobre a erva, tomou os cinco pães e os dois peixes, e, erguendo os olhos ao céu, os abençoou, e, partindo os pães, deu-os aos discípulos, e os discípulos à multidão.
20 ಅವರೆಲ್ಲರೂ ತಿಂದು ತೃಪ್ತರಾದರು; ಮತ್ತು ಅವರು ಉಳಿದ ತುಂಡುಗಳನ್ನು ಕೂಡಿಸಿ ಹನ್ನೆ ರಡು ಪುಟ್ಟಿಗಳಲ್ಲಿ ತುಂಬಿಸಿದರು.
20 E comeram todos, e saciaramse; e levantaram dos pedaços, que sobejaram, doze alcofas cheias.
21 ಊಟ ಮಾಡಿ ದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಇದ್ದರು.
21 E os que comeram foram quase cinco mil homens, além das mulheres e crianças.
22 ಕೂಡಲೆ ಯೇಸು ತಾನು ಜನಸಮೂಹಗಳನ್ನು ಕಳುಹಿಸಿ ಬಿಡುವಷ್ಟರೊಳಗಾಗಿ ತನ್ನ ಶಿಷ್ಯರು ದೋಣಿ ಯನ್ನು ಹತ್ತಿ ತನಗಿಂತ ಮುಂಚೆ ಆಚೇ ದಡಕ್ಕೆ ಹೋಗ ಬೇಕೆಂದು ಅವರನ್ನು ಒತ್ತಾಯ ಮಾಡಿದನು.
22 E logo ordenou Jesus que os seus discípulos entrassem no barco, e fossem adiante para o outro lado, enquanto despedia a multidão.
23 ಆತನು ಜನಸಮೂಹಗಳನ್ನು ಕಳುಹಿಸಿದ ಮೇಲೆ ಪ್ರಾರ್ಥನೆ ಮಾಡಲು ಏಕಾಂತವಾಗಿ ಗುಡ್ಡದ ಮೇಲೆ ಹೋದನು; ಸಾಯಂಕಾಲವಾದಾಗ ಆತನೊಬ್ಬನೇ ಅಲ್ಲಿ ಇದ್ದನು.
23 E, despedida a multidão, subiu ao monte para orar, à parte. E, chegada já a tarde, estava ali só.
24 ಆಗ ದೋಣಿಯು ಸಮುದ್ರದ ಮಧ್ಯದಲ್ಲಿದ್ದು ತೆರೆಗಳಿಂದ ಬಡಿಯಲ್ಪಡುತ್ತಿತ್ತು; ಯಾಕಂದರೆ ಗಾಳಿಯು ಎದುರಾಗಿತ್ತು.
24 E o barco estava já no meio do mar, açoitado pelas ondas; porque o vento era contrário;
25 ಮತ್ತು ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆಯುತ್ತಾ ಅವರ ಬಳಿಗೆ ಹೋದನು.
25 Mas, à quarta vigília da noite, dirigiu-se Jesus para eles, andan-do por cima do mar.
26 ಆತನು ಸಮುದ್ರದ ಮೇಲೆ ನಡೆಯುವದನ್ನು ಶಿಷ್ಯರು ನೋಡಿ ಕಳವಳಪಟ್ಟು--ಇದು ಭೂತ ಎಂದು ಭೀತಿಯಿಂದ ಕೂಗಿ ಕೊಂಡರು.
26 E os discípulos, vendo-o an-dando sobre o mar, assustaram-se, dizendo: É um fantasma. E gritaram com medo.
27 ಆದರೆ ಯೇಸು ತಕ್ಷಣವೇ ಮಾತನಾಡಿ ಅವರಿಗೆ--ಧೈರ್ಯವಾಗಿರ್ರಿ; ನಾನೇ, ಭಯಪಡಬೇಡಿರಿಅಂದನು.
27 Jesus, porém, lhes falou logo, dizendo: Tende bom ânimo, sou eu, não temais.
28 ಆಗ ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ನೀನೇ ಆಗಿದ್ದರೆ ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರಲು ನನಗೆ ಅಪ್ಪಣೆಕೊಡು ಅಂದನು.
28 E respondeu-lhe Pedro, e disse: Senhor, se és tu, manda-me ir ter contigo por cima das águas.
29 ಅದಕ್ಕಾತನು--ಬಾ ಅಂದನು. ಆಗ ಪೇತ್ರನು ದೋಣಿಯಿಂದ ಇಳಿದು ಯೇಸುವಿನ ಬಳಿಗೆ ಹೋಗು ವದಕ್ಕಾಗಿ ನೀರಿನ ಮೇಲೆ ನಡೆದನು.
29 E ele disse: Vem. E Pedro, descendo do barco, andou sobre as águas para ir ter com Jesus.
30 ಆದರೆ ಬಲ ವಾದ ಗಾಳಿಯನ್ನು ನೋಡಿದಾಗ ಅವನು ಭಯಪಟ್ಟು ಮುಣುಗುತ್ತಾ--ಕರ್ತನೇ, ನನ್ನನ್ನು ರಕ್ಷಿಸು ಎಂದು ಕೂಗಿ ಹೇಳಿದನು.
30 Mas, sentindo o vento forte, teve medo; e, começando a ir para o fundo, clamou, dizendo: Senhor, salva-me!
31 ತಕ್ಷಣವೇ ಯೇಸು ತನ್ನ ಕೈಯನ್ನು ಚಾಚಿ ಅವನನ್ನು ಹಿಡಿದು--ಓ ಅಲ್ಪ ವಿಶ್ವಾಸಿಯೇ, ನೀನು ಯಾಕೆ ಸಂದೇಹಪಟ್ಟೆ ಎಂದು ಅವನಿಗೆ ಹೇಳಿದನು.
31 E logo Jesus, estendendo a mão, segurou-o, e disse-lhe: Homem de pouca fé, por que duvidaste?
32 ಅವರು ದೋಣಿಯೊಳಗೆ ಬಂದಾಗ ಗಾಳಿನಿಂತು ಹೋಯಿತು.
32 E, quando subiram para o barco, acalmou o vento.
33 ದೋಣಿಯಲ್ಲಿದ್ದವರು ಆತನ ಬಳಿಗೆ ಬಂದು ಆತನನ್ನು ಆರಾಧಿಸಿ--ನಿಜವಾಗಿಯೂ ನೀನು ದೇವಕುಮಾರನೇ ಎಂದು ಹೇಳಿದರು.
33 Então aproximaram-se os que estavam no barco, e adoraram-no, dizendo: És verdadeiramente o Filho de Deus.
34 ಅವರು ದಾಟಿ ಗೆನೆಜರೇತ್ ಸೀಮೆಗೆ ಬಂದರು.
34 E, tendo passado para o outro lado, chegaram à terra de Genesaré.
35 ಆಗ ಅಲ್ಲಿದ್ದ ಜನರು ಆತನ ಗುರುತು ಹಿಡಿದು ಸುತ್ತ ಮುತ್ತಲಿನ ಸೀಮೆಗೆಲ್ಲಾ ಹೇಳಿಕಳುಹಿಸಿ ರೋಗಿಗಳ ನ್ನೆಲ್ಲಾ ಆತನ ಬಳಿಗೆ ತಂದರು.
35 E, quando os homens daquele lugar o conheceram, mandaram por todas aquelas terras em redor e trouxeram-lhe todos os que estavam enfermos.
36 ಅವರು ಆತನ ಉಡು ಪಿನ ಅಂಚನ್ನಾದರೂ ಮುಟ್ಟುವಂತೆ ಆತನನ್ನು ಬೇಡಿ ಕೊಂಡರು; ಮತ್ತು ಯಾರಾರು ಮುಟ್ಟಿದರೋ ಅವರು ಸಂಪೂರ್ಣವಾಗಿ ಸ್ವಸ್ಥರಾದರು.
36 E rogavam-lhe que ao menos eles pudessem tocar a orla da sua roupa; e todos os que a tocavam ficavam sãos.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Mateus 14, comparar traduções ou montar um estudo — tudo direto pelo WhatsApp.