Mateus 11
Kannada Bible (GL_KANNADA) vs BKJ
BKJ BKJ
1 ಮತ್ತು ಆದದ್ದೇನಂದರೆ, ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಅಪ್ಪಣೆ ಕೊಡು ವದನ್ನು ಮುಗಿಸಿದ ಮೇಲೆ ಅವರ ಪಟ್ಟಣಗಳಲ್ಲಿ ಬೋಧಿಸುವದಕ್ಕೂ ಸಾರುವದಕ್ಕೂ ಅಲ್ಲಿಂದ ಹೊರಟು ಹೋದನು.
1 E aconteceu que, tendo Jesus terminado de dar instruções aos seus doze discípulos, ele partiu dali para ensinar e pregar nas cidades deles.
2 ಆಗ ಯೋಹಾನನು ಸೆರೆಮನೆಯಲ್ಲಿ ಕ್ರಿಸ್ತನ ಕಾರ್ಯಗಳನ್ನು ಕೇಳಿದ್ದರಿಂದ ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಆತನಿಗೆ--
2 Ora, quando João ouviu na prisão sobre as obras de Cristo, ele enviou dois dos seus discípulos,
3 ಬರಬೇಕಾದಾತನು ನೀನೋ ಇಲ್ಲವೆ ನಾವು ಬೇರೊಬ್ಬನಿಗಾಗಿ ನೋಡಬೇಕೋ ಅಂದನು.
3 a dizer-lhe: És tu aquele que havia de vir, ou aguardamos outro?
4 ಯೇಸು ಪ್ರತ್ಯುತ್ತರವಾಗಿ ಅವರಿಗೆ-- ನೀವು ಹೋಗಿ ಕೇಳುವವುಗಳನ್ನೂ ನೋಡುವವು ಗಳನ್ನೂ ಯೋಹಾನನಿಗೆ ತಿಳಿಸಿರಿ;
4 Jesus lhes respondeu: Ide, e mostrai a João novamente as coisas que ouvis e vedes:
5 ಕುರುಡರು ದೃಷ್ಟಿ ಹೊಂದುತ್ತಾರೆ, ಕುಂಟರು ನಡೆಯುತ್ತಾರೆ,ಕುಷ್ಟರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಎಬ್ಬಿಸಲ್ಪಡುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ.
5 Os cegos recebem a sua visão, e os coxos andam; os leprosos são purificados, e os surdos ouvem; os mortos são ressuscitados, e aos pobres é pregado o evangelho.
6 ನನ್ನ ವಿಷಯವಾಗಿ ಸಂಶಯಪಡದವನೇ ಧನ್ಯನು ಅಂದನು.
6 E abençoado é aquele que não se ofender em mim.
7 ಅವರು ಹೊರಟುಹೋಗುತ್ತಿದ್ದಾಗ ಯೇಸು ಯೋಹಾನನ ಕುರಿತಾಗಿ ಜನಸಮೂಹಗಳೊಂ ದಿಗೆ -- ಏನು ನೋಡುವದಕ್ಕಾಗಿ ನೀವು ಅಡವಿಗೆ ಹೋದಿರಿ? ಗಾಳಿಯಿಂದ ಅಲ್ಲಾಡುವದಂಟನ್ನೋ?
7 E, partindo eles, começou Jesus a dizer às multidões a respeito de João: O que fostes ver no deserto? Um caniço agitado pelo vento?
8 ಆದರೆ ನೀವು ಏನು ನೊಡುವದಕ್ಕಾಗಿ ಹೋದಿರಿ? ನಯವಾದ ವಸ್ತ್ರಗಳನ್ನು ಧರಿಸಿಕೊಂಡ ಮನುಷ್ಯ ನನ್ನೋ? ಇಗೋ, ನಯವಾದ ಬಟ್ಟೆಗಳನ್ನು ಧರಿಸಿಕೊ ಳ್ಳುವವರು ಅರಮನೆಗಳಲ್ಲಿ ಇರುತ್ತಾರೆ.
8 Mas o que fostes ver? Um homem trajado de roupas finas? Eis que os que se vestem de roupas finas estão nas casas dos reis.
9 ಆದರೆ ನೀವು ಏನು ನೋಡುವದಕ್ಕಾಗಿ ಹೋದಿರಿ? ಪ್ರವಾದಿ ಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ.
9 Mas o que fostes ver? Um profeta? Sim, eu vos digo, e muito mais do que profeta.
10 ಯಾಕಂ ದರೆ--ಇಗೋ, ನಿನ್ನ ಮಾರ್ಗವನ್ನು ನಿನ್ನ ಮುಂದೆ ಸಿದ್ಧಪಡಿಸುವ ನನ್ನ ದೂತನನ್ನು ನಾನು ನಿನ್ನ ಮುಂದೆ ಕಳುಹಿಸುತ್ತೇನೆಂದು ಯಾವನ ವಿಷಯವಾಗಿ ಬರೆದಿ ದೆಯೋ ಅವನೇ ಇವನು.
10 Porque este é aquele, de quem está escrito: Eis que diante da tua face eu envio o meu mensageiro, que preparará diante de ti o teu caminho.
11 ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಸ್ತ್ರೀಯರಲ್ಲಿ ಹುಟ್ಟಿದವರೊ ಳಗೆ ಬಾಪ್ತಿಸ್ಮ ಮಾಡಿಸುವ ಯೋಹಾನನಿಗಿಂತ ದೊಡ್ಡವನು ಏಳಲಿಲ್ಲ; ಆದಾಗ್ಯೂ ಪರಲೋಕ ರಾಜ್ಯದಲ್ಲಿ ಅತ್ಯಲ್ಪನಾದವನು ಅವನಿಗಿಂತಲೂ ದೊಡ್ಡ ವನಾಗಿದ್ದಾನೆ.
11 Na verdade eu vos digo: Dentre os nascidos de mulheres, não apareceu um maior do que João, o Batista; contudo aquele que é o menor no reino do céu é maior do que ele.
12 ಇದಲ್ಲದೆ ಬಾಪ್ತಿಸ್ಮ ಮಾಡಿಸುವ ಯೋಹಾನನ ದಿನಗಳಿಂದ ಇದುವರೆಗೆ ಪರಲೋಕ ರಾಜ್ಯವು ಬಲಾತ್ಕಾರಕ್ಕೆ ಗುರಿಯಾಗಿದೆ; ಮತ್ತು ಬಲಾತ್ಕಾರಿಗಳು ಅದನ್ನು ಒತ್ತಾಯದಿಂದ ತೆಗೆದು ಕೊಳ್ಳುತ್ತಾರೆ.
12 E, desde os dias de João, o Batista, até agora, o reino do céu sofre violência, e os violentos o tomam pela força.
13 ಯಾಕಂದರೆ ಎಲ್ಲಾ ಪ್ರವಾದಿಗಳೂ ನ್ಯಾಯಪ್ರಮಾಣವೂ ಯೋಹಾನನ ವರೆಗೆ ಪ್ರವಾದಿ ಸಿದ್ದುಂಟು.
13 Pois todos os profetas e a lei profetizaram até João.
14 ನೀವು ಇದನ್ನು ಅಂಗೀಕರಿಸುವದಕ್ಕೆ ಮನಸ್ಸಿದ್ದರೆ ಬರಬೇಕಾಗಿದ್ದ ಎಲೀಯನು ಇವನೇ.
14 E se vós quiserdes aceitar, este é Elias, o que havia de vir.
15 ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ.
15 Quem tem ouvidos para ouvir, ouça.
16 ಆದರೆ ಈ ಸಂತತಿಯನ್ನು ನಾನು ಯಾವದಕ್ಕೆ ಹೋಲಿಸಲಿ? ಮಕ್ಕಳು ಪೇಟೆಗಳಲ್ಲಿ ಕೂತುಕೊಂಡು ತಮ್ಮ ಸಂಗಡಿ ಗರನ್ನು ಕರೆಯುತ್ತಾ--
16 Mas, a quem eu compararei esta geração? É semelhante às crianças que se assentam nos mercados, e chamam aos seus companheiros,
17 ನಾವು ನಿಮಗೋಸ್ಕರ ಕೊಳಲೂದಿದೆವು, ಆದರೆ ನೀವು ಕುಣಿಯಲಿಲ್ಲ; ನಾವು ನಿಮಗೋಸ್ಕರ ಶೋಕಿಸಿದೆವು, ಆದರೆ ನೀವು ಗೋಳಾಡಲಿಲ್ಲ ಎಂದು ಹೇಳುವವರಿಗೆ ಇದು ಹೋಲಿಕೆಯಾಗಿದೆ.
17 dizendo: Tocamo-vos flauta, e não dançastes; cantamo-vos murmurações, e não lamentastes.
18 ಯಾಕಂದರೆ ಯೋಹಾನನು ತಿನ್ನದೆಯೂ ಕುಡಿಯದೆಯೂ ಬಂದನು. ಅದಕ್ಕೆ ಅವರು--ಅವನಿಗೆ ದೆವ್ವ ಹಿಡಿದಿದೆ ಅನ್ನುತ್ತಾರೆ.
18 Portanto veio João, não comia nem bebia, e dizem: Ele tem um demônio.
19 ಮನುಷ್ಯಕುಮಾರನು ತಿನ್ನುವವನಾಗಿಯೂ ಕುಡಿಯುವವನಾಗಿಯೂ ಬಂದನು. ಅದಕ್ಕೆ ಅವರು--ಇಗೋ, ಈ ಮನುಷ್ಯನು ಹೊಟ್ಟೆ ಬಾಕನೂ ಮದ್ಯಪಾನ ಮಾಡುವವನೂ ಸುಂಕದವರ ಪಾಪಿಗಳ ಸ್ನೇಹಿತನೂ ಎಂದು ಅನ್ನುತ್ತಾರೆ. ಆದರೆ ಜ್ಞಾನವು ನೀತಿಯುಳ್ಳದ್ದೆಂದು ತನ್ನ ಮಕ್ಕಳಿಂದ ನಿರ್ಣಯಿ ಸಲ
19 Veio o Filho do homem, comendo e bebendo, e dizem: Eis aí um homem comilão e beberrão, amigo dos publicanos e pecadores. Mas a sabedoria é justificada por seus filhos.
20 ತರುವಾಯ ತಾನು ಹೆಚ್ಚಾದ ಮಹತ್ಕಾರ್ಯ ಗಳನ್ನು ನಡಿಸಿದ ಪಟ್ಟಣಗಳು ಮಾನಸಾಂತರಪಡದೆ ಇದ್ದದರಿಂದ ಆತನು ಅವುಗಳನ್ನು ಗದರಿಸತೊ ಡಗಿ --
20 Então ele começou a repreender as cidades nas quais se havia feito a maioria das suas poderosas obras, porque eles não se arrependeram.
21 ಖೊರಾಜಿನೇ, ನಿನಗೆ ಅಯ್ಯೋ! ಬೆತ್ಸಾಯಿದವೇ, ನಿನಗೆ ಅಯ್ಯೋ! ಯಾಕಂದರೆ ನಿನ್ನೊಳಗೆ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್‌ಗಳಲ್ಲಿ ನಡೆಯುತ್ತಿದ್ದರೆ ಅವುಗಳು ಆಗಲೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರಪಡುತ್ತಿದ್ದವು.
21 Ai de ti, Corazim! Ai de ti, Betsaida! Porque, se em Tiro e em Sidom fossem feitas as poderosas obras que em vós se fizeram, há muito eles teriam se arrependido, em pano de saco e cinza.
22 ಆದರೆ ನಾನು ನಿಮಗೆ ಹೇಳುವದೇನಂದರೆ-- ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ತೂರ್ ಮತ್ತು ಸೀದೋನ್‌ಗಳ ಗತಿಯು ಹೆಚ್ಚು ತಾಳಬಹುದಾಗಿರುವದು.
22 Mas eu vos digo que haverá mais tolerância no dia do juízo para Tiro e Sidom do que para vós.
23 ಆಕಾಶದವರೆಗೂ ಹೆಚ್ಚಿಸಲ್ಪಟ್ಟ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬಲ್ಪಡುವಿ; ಯಾಕಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ ಅದು ಈ ದಿನದವರೆಗೂ ಇರುತ್ತಿತ್ತು.
23 E tu, Cafarnaum, exaltada até ao céu, serás derrubada para o inferno; porque, se em Sodoma tivessem sido feitas obras poderosas que em ti se fizeram, teria permanecido até hoje.
24 ಆದರೆ ನಾನು ನಿನಗೆ ಹೇಳುವದೇನಂದರೆ --ನ್ಯಾಯತೀರ್ಪಿನ ದಿನದಲ್ಲಿ ನಿನಗಿಂತಲೂ ಸೊದೋಮಿನ ಗತಿಯು ಹೆಚ್ಚು ತಾಳಬಹುದಾಗಿರುವದು.
24 Mas eu vos digo que haverá mais tolerância no dia do juízo para os de Sodoma do que para ti.
25 ಆ ಸಮಯದಲ್ಲಿ ಯೇಸು--ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಬುದ್ಧಿವಂತ ರಿಗೂ ಮರೆಮಾಡಿ ಶಿಶುಗಳಿಗೆ ಪ್ರಕಟಮಾಡಿ ರುವದಕ್ಕಾಗಿ ನಾನು ನಿನ್ನನ್ನು ಕೊಂಡಾಡುತ್ತೇನೆ.
25 Naquele momento, Jesus respondeu e disse: Graças te dou, ó Pai, Senhor do céu e da terra, porque tu ocultaste estas coisas aos sábios e prudentes, e as revelaste às criancinhas.
26 ಹೌದು, ತಂದೆಯೇ, ಇದು ನಿನ್ನ ದೃಷ್ಟಿಯಲ್ಲಿ ಒಳ್ಳೆಯದಾಗಿ ತೋಚಿತು.
26 Sim, Pai, pois assim foi agradável diante de ti.
27 ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ತಂದೆಯೇ ಹೊರತು ಇನ್ನಾವನೂ ಮಗನನ್ನು ತಿಳಿದವನಲ್ಲ; ಇಲ್ಲವೆ ಮಗನೇ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದ
27 Todas as coisas me foram entregues por meu Pai, e nenhum homem conhece o Filho, senão o Pai; e nenhum homem conhece o Pai, senão o Filho, e aquele a quem o Filho o quiser revelar.
28 ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು.
28 Vinde a mim, todos vós que estais cansados e sobrecarregados, e eu vos darei descanso.
29 ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.
29 Tomai sobre vós o meu jugo, e aprendei de mim, pois eu sou manso e humilde de coração; e encontrareis descanso para as vossas almas.
30 ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ ಎಂದು ಹೇಳಿದನು.
30 Porque o meu jugo é suave, e o meu fardo é leve.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Mateus 11, comparar traduções ou montar um estudo — tudo direto pelo WhatsApp.