Malaquias 2

Kannada Bible (GL_KANNADA) vs NAA

Sair da comparação
NAA Nova Almeida Atualizada 2017
1 ಈಗ ಓ ಯಾಜಕರೇ, ಈ ಆಜ್ಞೆ ನಿಮಗಾಗಿ ಅದೆ.
1 — E agora, sacerdotes, este mandamento é para vocês.
2 ಸೈನ್ಯಗಳ ಕರ್ತನು ಹೇಳುವದೇ ನಂದರೆ ನೀವು ಕೇಳದೆ, ಹೃದಯದಲ್ಲಿ ಇಟ್ಟುಕೊಳ್ಳದೆ, ನನ್ನ ಹೆಸರಿಗೆ ಮಹಿಮೆಯನ್ನು ಕೊಡದೆ ಹೋದರೆ ನಿಮ್ಮ ಮೇಲೆ ಶಾಪವನ್ನು ಕಳುಹಿಸುವೆನು, ನಿಮ್ಮ ಆಶೀರ್ವಾದಗಳನ್ನು ಶಪಿಸುವೆನು; ಹೌದು, ಅವು ಗಳನ್ನು ಆಗಲೇ ಶಪಿಸಿದ್ದಾಯಿತು; ನೀವು ಅವುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳುವದಿಲ್ಲ.
2 Se não ouvirem e não se importarem com a necessidade de honrar o meu nome, diz o Senhor dos Exércitos, enviarei sobre vocês a maldição e amaldiçoarei as suas bênçãos. Aliás, já as amaldiçoei, porque vocês não se importaram com a honra devida ao meu nome.
3 ಇಗೋ, ನಾನು ನಿಮ್ಮ ಸಂತತಿಯನ್ನು ಕೆಡಿಸಿ, ನಿಮ್ಮ ಮುಖಗಳ ಮೇಲೆ ಕಸವನ್ನು ಚೆಲ್ಲುತ್ತೇನೆ; ನಿಮ್ಮ ಪವಿತ್ರ ಹಬ್ಬಗಳನ್ನು ಸಹ ಕಸವೆಂದು ಚೆಲ್ಲುತ್ತೇನೆ. ಆಗ ಒಬ್ಬನು ನಿಮ್ಮನ್ನು ಅದರೊಂದಿಗೆ ತೆಗೆದುಬಿಡುವನು.
3 Eis que reprovarei a sua descendência, passarei no rosto de vocês o esterco dos animais sacrificados nas suas festas, e vocês serão levados embora com esse esterco.
4 ಸೈನ್ಯಗಳ ಕರ್ತನು ಹೇಳುವದೇನಂದರೆ--ನನ್ನ ಒಡಂಬಡಿಕೆ ಲೇವಿಯ ಸಂಗಡ ಇರುವ ಹಾಗೆ ಈ ಆಜ್ಞೆಯನ್ನು ನಿಮಗೆ ಕಳುಹಿಸಿದ್ದೇನೆಂದು ತಿಳುಕೊಳ್ಳುವಿರಿ.
4 Então vocês saberão que eu lhes enviei este mandamento, para que se mantenha a minha aliança com Levi, diz o Senhor dos Exércitos.
5 ನನ್ನ ಜೀವದ ಮತ್ತು ಸಮಾಧಾನದ ನನ್ನ ಒಡಂಬಡಿಕೆಯು ಅವನ ಸಂಗಡ ಇತ್ತು; ಅವುಗಳನ್ನು ಅವನಿಗೆ ಕೊಟ್ಟೆನು; ಅವನು ನನಗೆ ಭಯಪಟ್ಟು ನನ್ನ ಹೆಸರಿಗೆ ಅಂಜಿ ಕೊಂಡನು.
5 — Minha aliança com ele foi de vida e de paz, e foi isso que eu lhe dei, para que me temesse; e, de fato, ele me temeu e tremeu por causa do meu nome.
6 ಸತ್ಯದ ನ್ಯಾಯಪ್ರಮಾಣವು ಅವನ ಬಾಯಲ್ಲಿ ಇತ್ತು; ಅಕ್ರಮವು ಅವನ ತುಟಿಗಳಲ್ಲಿ ಸಿಕ್ಕಲಿಲ್ಲ. ಅವನು ಸಮಾಧಾನದಿಂದಲೂ ನ್ಯಾಯ ದಿಂದಲೂ ನನ್ನ ಸಂಗಡ ನಡೆದುಕೊಂಡು ಅನೇಕರನ್ನು ಅಕ್ರಮದಿಂದ ತಿರುಗಿಸಿದನು.
6 A verdadeira instrução esteve na sua boca, e nenhuma injustiça se achou em seus lábios. Ele andou comigo em paz e em retidão, e afastou muitos da iniquidade.
7 ಯಾಜಕನ ತುಟಿಗಳು ತಿಳುವಳಿಕೆಯನ್ನು ಕಾಪಾಡತಕ್ಕದ್ದು, ನ್ಯಾಯಪ್ರಮಾಣ ವನ್ನು ಅವನ ಬಾಯಲ್ಲಿ ಹುಡುಕತಕ್ಕದ್ದು; ಯಾಕಂದರೆ ಅವನು ಸೈನ್ಯಗಳ ಕರ್ತನ ಸೇವಕನೇ.
7 Porque os lábios do sacerdote devem guardar o conhecimento, e da sua boca todos devem buscar a instrução, porque ele é mensageiro do Senhor dos Exércitos.
8 ಆದರೆ ನೀವು ಮಾರ್ಗವನ್ನು ಬಿಟ್ಟುಹೋಗಿದ್ದೀರಿ; ಅನೇಕರನ್ನು ನ್ಯಾಯಪ್ರಮಾಣಕ್ಕೆ ಎಡವುವಂತೆ ಮಾಡಿದ್ದೀರಿ; ಲೇವಿಯ ಒಡಂಬಡಿಕೆಯನ್ನು ಕೆಡಿಸಿದ್ದೀರೆಂದು ಸೈನ್ಯ ಗಳ ಕರ್ತನು ಹೇಳುತ್ತಾನೆ.
8 — Mas vocês se desviaram do caminho e, por meio de sua instrução, levaram muitos a tropeçar; vocês violaram a aliança de Levi, diz o Senhor dos Exércitos.
9 ಆದದರಿಂದ ನೀವು ನನ್ನ ಮಾರ್ಗಗಳನ್ನು ಕೈಕೊಳ್ಳದೆ, ನನ್ನ ನ್ಯಾಯ ಪ್ರಮಾಣದ ವಿಷಯವಾಗಿ ಮುಖದಾಕ್ಷಿಣ್ಯ ತೋರಿಸಿದ ಪ್ರಕಾರವೇ ನಾನು ನಿಮ್ಮನ್ನು ಜನರೆಲ್ಲರ ಮುಂದೆ ಅಸಡ್ಡೆ ಮಾಡಲ್ಪಟ್ಟ ವರನ್ನಾಗಿಯೂ ನೀಚರನ್ನಾಗಿಯೂ ಮಾಡಿದ್ದೇನೆ.
9 Por isso, também eu os fiz desprezíveis e indignos diante de todo o povo, na medida em que vocês não guardaram os meus caminhos e se mostraram parciais na aplicação da lei.
10 ನಮ್ಮೆಲ್ಲರಿಗೆ ಒಬ್ಬನೇ ತಂದೆಯಲ್ಲವೋ? ನಮ್ಮನ್ನು ಒಬ್ಬನೇ ದೇವರು ಸೃಷ್ಟಿಸಿದನಲ್ಲವೋ? ಯಾಕೆ ಪ್ರತಿ ಯೊಬ್ಬನು ತನ್ನ ಸಹೋದರನಿಗೆ ವಿರೋಧವಾಗಿ ವಂಚನೆಯಿಂದ ನಡೆದು ನಮ್ಮ ತಂದೆಗಳ ಒಡಂಬಡಿಕೆ ಯನ್ನು ಅಪವಿತ್ರ ಮಾಡುತ್ತೇವೆ?
10 Não temos nós todos o mesmo Pai? Não nos criou o mesmo Deus? Por que, então, seremos desleais uns para com os outros, profanando a aliança de nossos pais?
11 ಯೆಹೂದವು ವಂಚನೆಯಾಗಿ ನಡೆದುಕೊಂಡಿದೆ; ಇಸ್ರಾಯೇಲಿನ ಲ್ಲಿಯೂ ಯೆರೂಸಲೇಮಿನಲ್ಲಿಯೂ ಅಸಹ್ಯವಾದದ್ದನ್ನು ಮಾಡಿದೆ. ಕರ್ತನು ಪ್ರೀತಿ ಮಾಡಿದ ಪರಿಶುದ್ಧವಾ ದದ್ದನ್ನು ಯೆಹೂದವು ಅಪವಿತ್ರಮಾಡಿ ಅನ್ಯ ದೇವರ ಮಗಳನ್ನು ಮದುವೆ ಮಾಡಿಕೊಂಡಿದೆ.
11 Judá tem sido infiel, e abominação foi cometida em Israel e em Jerusalém. Porque Judá profanou o santuário do Senhor , o qual ele ama, e se casou com a adoradora de deus estranho.
12 ಇದನ್ನು ಮಾಡುವ ಮನುಷ್ಯನನ್ನು ಅಂದರೆ, ಯಜಮಾನನನ್ನು ಜ್ಞಾನಿಯನ್ನು ಸೈನ್ಯಗಳ ಕರ್ತನಿಗೆ ಕಾಣಿಕೆ ಅರ್ಪಿಸುವ ವನನ್ನು ಕರ್ತನು ಯಾಕೋಬಿನ ಗುಡಾರಗಳೊಳಗಿಂದ ತೆಗೆದುಬಿಡುವನು.
12 O Senhor eliminará das tendas de Jacó aquele que fizer isso, seja ele quem for, mesmo que apresente ofertas ao Senhor dos Exércitos.
13 ನೀವು ತಿರಿಗಿ ಇದನ್ನು ಮಾಡಿ ದ್ದೀರಿ, ಕರ್ತನ ಬಲಿಪೀಠಗಳನ್ನು ಕಣ್ಣೀರುಗಳಿಂದಲೂ ಅಳುವಿಕೆಯಿಂದಲೂ ಕೂಗುವಿಕೆಯಿಂದಲೂ ಮುಚ್ಚಿ ದ್ದೀರಿ; ಆದದರಿಂದ ಆತನು ಕಾಣಿಕೆಯನ್ನು ಇನ್ನು ಮೇಲೆ ಲಕ್ಷ್ಯ ಮಾಡದೆ ಅದನ್ನು ಮೆಚ್ಚಿಕೆಯಾದದ್ದೆಂದು ನಿಮ್ಮ ಕೈಯಿಂದ ಅಂಗೀಕರಿಸುವದಿಲ್ಲ.
13 Há outra coisa que vocês fazem: cobrem de lágrimas o altar do Senhor , com choro e gemidos, porque ele já não olha para a oferta nem a aceita com prazer.
14 ಆದಾಗ್ಯೂ ನೀವು--ಯಾತಕ್ಕೆ ಅನ್ನುತ್ತೀರಿ? ಕರ್ತನು ನಿನಗೂ ನೀನು ವಂಚಿಸಿದ ನಿನ್ನ ಯೌವನದ ಹೆಂಡತಿಗೂ ಸಾಕ್ಷಿಯಾಗಿ ದ್ದನು; ಆದಾಗ್ಯೂ ಅವಳು ನಿನ್ನ ಜತೆಯವಳೂ ನಿನ್ನ ಒಡಂಬಡಿಕೆಯ ಹೆಂಡತಿಯೂ ಆಗಿದ್ದಾಳೆ.
14 E vocês perguntam: “Por quê?” Porque o Senhor foi testemunha da aliança entre você e a mulher da sua mocidade, a quem você foi infiel, sendo ela a sua companheira e a mulher da sua aliança.
15 ಅವನಲ್ಲಿ ಆತ್ಮ ಉಳಿದಿದ್ದರೂ ಆತನು ಅವಳನ್ನು ಒಂಟಿಗಳಾಗಿ ಮಾಡಲಿಲ್ಲವೋ? ಮತ್ತು ಒಬ್ಬಳನ್ನು ಯಾಕೆ? ಅವನು ದೇವಭಕ್ತಿಯುಳ್ಳ ಸಂತಾನವನ್ನು ಹುಡುಕುವದಕ್ಕಾ ಗಿಯೇ; ಆದದರಿಂದ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ; ಒಬ್ಬನಾದರೂ ತನ್ನ ಯೌವನದ ಹೆಂಡತಿಯನ್ನು ವಂಚಿಸದೆ ಇರಲಿ,
15 Não fez o Senhor somente um, mesmo que lhe sobrasse o espírito? E por que somente um? Porque buscava uma descendência piedosa. Portanto, tenham cuidado para que ninguém seja infiel para com a mulher da sua mocidade.
16 ಇಸ್ರಾಯೇಲಿನ ದೇವರಾದ ಕರ್ತನು--ನಾನು ತಳ್ಳಿಬಿಡುವದನ್ನೂ ಒಬ್ಬನು ತನ್ನ ವಸ್ತ್ರವನ್ನು ಬಲಾತ್ಕಾರದಿಂದ ಮುಚ್ಚುವದನ್ನೂ ಹಗೆಮಾಡುತ್ತೇನೆಂದು ಸೈನ್ಯಗಳ ಕರ್ತನು ಹೇಳು ತ್ತಾನೆ; ಹೀಗಿರುವದರಿಂದ ನೀವು ವಂಚಿಸದ ಹಾಗೆ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ.
16 Porque o Senhor , o Deus de Israel, diz que odeia o divórcio e também aquele que cobre de violência as suas roupas, diz o Senhor dos Exércitos. Portanto, tenham cuidado e não sejam infiéis.
17 ನಿಮ್ಮ ಮಾತುಗಳಿಂದ ಕರ್ತನಿಗೆ ಬೇಸರಮಾಡಿ ದ್ದೀರಿ; ಆದಾಗ್ಯೂ--ನಾವು ಯಾವದರಲ್ಲಿ ಆತನಿಗೆ ಬೇಸರಮಾಡಿದ್ದೇವೆ ಎಂದು ಅನ್ನುತ್ತೀರಿ; ಕೆಟ್ಟದ್ದನ್ನು ಮಾಡುವವರೆಲ್ಲರೂ ಕರ್ತನ ದೃಷ್ಟಿಯಲ್ಲಿ ಒಳ್ಳೆಯವರು, ಅವರಲ್ಲಿ ಆತನು ಮೆಚ್ಚುತ್ತಾನೆಂದೂ ನ್ಯಾಯದ ದೇವರು ಎಲ್ಲಿ ಎಂದೂ ನೀವು ಹೇಳುವದರಿಂದಲೇ.
17 Vocês estão cansando o Senhor com as suas palavras, e ainda perguntam: “Em que nós o cansamos?” Nisso de dizerem: “Aqueles que fazem o mal passam por bons aos olhos do Senhor , e é desses que ele se agrada.” Ou: “Onde está o Deus da justiça?”

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Malaquias 2, comparar traduções ou montar um estudo — tudo direto pelo WhatsApp.