Marcos 3

Kannada Bible (GL_KANNADA) vs ACF

Sair da comparação
ACF Almeida Corrigida Fiel
1 ಆತನು ತಿರಿಗಿ ಸಭಾಮಂದಿರದಲ್ಲಿ ಪ್ರವೇಶಿಸಿದಾಗ ಅಲ್ಲಿ ಕೈ ಬತ್ತಿದವನಾದ ಒಬ್ಬ ಮನುಷ್ಯನಿದ್ದನು.
1 E outra vez entrou na sinagoga, e estava ali um homem que tinha uma das mãos mirrada.
2 ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಸಬ್ಬತ್‌ ದಿನದಲ್ಲಿ ಆತನು ಅವನನ್ನು ಸ್ವಸ್ಥ ಮಾಡುವನೇನೋ ಎಂದು ಕಾಯು ತ್ತಿದ್ದರು.
2 E estavam observando-o securaria no sábado, para o acusarem.
3 ಆತನು ಕೈಬತ್ತಿದ ಮನುಷ್ಯನಿಗೆ--ಎದ್ದು ನಿಂತುಕೋ ಎಂದು ಹೇಳಿದನು.
3 E disse ao homem que tinha a mão mirrada: Levanta-te e vem para o meio.
4 ಆತನು ಅವರಿಗೆ --ಸಬ್ಬತ್‌ ದಿವಸಗಳಲ್ಲಿ ಒಳ್ಳೇದನ್ನು ಮಾಡುವದು ನ್ಯಾಯವೋ ಇಲ್ಲವೆ ಕೆಟ್ಟದ್ದನ್ನು ಮಾಡುವದು ನ್ಯಾಯವೋ? ಪ್ರಾಣವನ್ನು ಉಳಿಸುವದೋ ಇಲ್ಲವೆ ಕೊಲ್ಲುವದೋ ಎಂದು ಕೇಳಿದನು; ಆದರೆ ಅವರು ಸುಮ್ಮನಿದ್ದರು.
4 E perguntou-lhes: É lícito no sábado fazer bem, ou fazer mal? salvar a vida, ou matar? E eles calaram-se.
5 ಆಗ ಆತನು ಅವರ ಹೃದಯಗಳ ಕಾಠಿಣ್ಯತೆಗಾಗಿ ದುಃಖಪಟ್ಟು ಸುತ್ತಲೂ ಕೋಪದಿಂದ ಅವರನ್ನು ನೋಡಿ ಆ ಮನುಷ್ಯನಿಗೆ--ನಿನ್ನ ಕೈಚಾಚು ಎಂದು ಹೇಳಿದನು. ಅವನು ಚಾಚಿದಾಗ ಅವನ ಕೈಗುಣವಾಗಿ ಮತ್ತೊಂದರ ಹಾಗಾಯಿತು.
5 E, olhando para eles em redor com indignação, condoendo-se da dureza do seu coração, disse ao homem: Estende a tua mão. E ele a estendeu, e foi-lhe restituída a sua mão, sã como a outra.
6 ಫರಿಸಾ ಯರು ಹೊರಟುಹೋಗಿ ಕೂಡಲೆ ತಾವು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧ ವಾಗಿ ಹೆರೋದ್ಯರೊಂದಿಗೆ ಆಲೋಚನೆ ಮಾಡಿಕೊಂಡರು.
6 E, tendo saído os fariseus, tomaram logo conselho com os herodianos contra ele, procurando ver como o matariam.
7 ಆದರೆ ಯೇಸು ತನ್ನ ಶಿಷ್ಯರೊಂದಿಗೆ ಸಮುದ್ರದ ಕಡೆಗೆ ಹಿಂದಿರುಗಿದನು; ಆಗ ಗಲಿಲಾಯದಿಂದಲೂ ಯೂದಾಯದಿಂದಲೂ
7 E retirou-se Jesus com os seus discípulos para o mar, e seguia-o uma grande multidão da Galiléia e da Judéia,
8 ಯೆರೂಸಲೇಮಿನಿಂದಲೂ ಇದೂಮಾಯದಿಂದಲೂ ಯೊರ್ದನಿನ ಆಚೆಯಿಂ ದಲೂ ಜನರು ದೊಡ್ಡ ಸಮೂಹವಾಗಿ ಆತನನ್ನು ಹಿಂಬಾಲಿಸಿದರು. ಆತನು ಮಾಡಿದ ಮಹತ್ಕಾರ್ಯ ಗಳನ್ನು ಕೇಳಿ ತೂರ್‌ ಸೀದೋನ್‌ ಸುತ್ತಲಿನ ಜನರು ದೊಡ್ಡ ಸಮೂಹವಾಗಿ ಆತನ ಬಳಿಗೆ ಬಂದರು.
8 E de Jerusalém, e da Iduméia, e de além do Jordão, e de perto de Tiro e de Sidom; uma grande multidão que, ouvindo quão grandes coisas fazia, vinha ter com ele.
9 ಸಮೂಹವು ತನ್ನನ್ನು ನೂಕದಂತೆ ತನಗೋಸ್ಕರ ಒಂದು ಚಿಕ್ಕ ದೋಣಿಯು ಸಿದ್ಧವಿರ ಬೇಕೆಂದು ಆತನು ತನ್ನ ಶಿಷ್ಯರಿಗೆ ಹೇಳಿದನು.
9 E ele disse aos seus discípulos que lhe tivessem sempre pronto um barquinho junto dele, por causa da multidão, para que o não oprimisse,
10 ಯಾಕಂದರೆ ಆತನು ಅನೇಕರನ್ನು ಸ್ವಸ್ಥಮಾಡಿದ್ದರಿಂದ ರೋಗಪೀಡಿತರಾಗಿದ್ದವರೆಲ್ಲರು ಆತನನ್ನು ಮುಟ್ಟಬೇ ಕೆಂದು ಆತನ ಮೇಲೆ ಬೀಳುತ್ತಿದ್ದರು.
10 Porque tinha curado a muitos, de tal maneira que todos quantos tinham algum mal se arrojavam sobre ele, para lhe tocarem.
11 ಅಶುದ್ಧಾತ್ಮಗಳು ಆತನನ್ನು ಕಂಡಾಗ ಆತನ ಮುಂದೆ ಬಿದ್ದು--ನೀನು ದೇವಕುಮಾರನು ಎಂದು ಕೂಗಿ ಹೇಳಿದವು.
11 E os espíritos imundos vendo-o, prostravam-se diante dele, e clamavam, dizendo: Tu és o Filho de Deus.
12 ಆದರೆ ಆತನು ತನ್ನನ್ನು ಯಾರಿಗೂ ತಿಳಿಯಪಡಿಸಬಾರದೆಂದು ಅವರಿಗೆ ನೇರವಾಗಿ ಆಜ್ಞಾಪಿಸಿದನು.
12 E ele os ameaçava muito, para que não o manifestassem.
13 ತರುವಾಯ ಆತನು ಬೆಟ್ಟದ ಮೇಲೆ ಹೋಗಿ ತನಗೆ ಬೇಕಾದವರನ್ನು ಕರೆಯಲು ಅವರು ಆತನ ಬಳಿಗೆ ಬಂದರು.
13 E subiu ao monte, e chamou para si os que ele quis; e vieram a ele.
14 ಆತನು ಹನ್ನೆರಡು ಮಂದಿಯನ್ನು ತನ್ನೊಂದಿಗೆ ಇರುವದಕ್ಕೂ (ಸುವಾರ್ತೆ) ಸಾರುವದ ಕ್ಕಾಗಿ ತಾನು ಅವರನ್ನು ಕಳುಹಿಸುವದಕ್ಕೂ
14 E nomeou doze para que estivessem com ele e os mandasse a pregar,
15 ವ್ಯಾಧಿ ಗಳನ್ನು ಸ್ವಸ್ಥಮಾಡುವದಕ್ಕೂ ದೆವ್ವಗಳನ್ನು ಬಿಡಿಸು ವದಕ್ಕೂ ನೇಮಿಸಿ ಅವರಿಗೆ ಅಧಿಕಾರ ಕೊಟ್ಟನು.
15 E para que tivessem o poderde curar as enfermidades e expulsar os demônios:
16 ಆತನು ಸೀಮೋನನಿಗೆ ಪೇತ್ರನೆಂದು ಹೆಸರಿಟ್ಟನು.
16 A Simão, a quem pôs o nome de Pedro,
17 ಮತ್ತು ಜೆಬೆದಾಯನ ಮಗನಾದ ಯಾಕೋಬ ನಿಗೂ ಯಾಕೋಬನ ಸಹೋದರನಾದ ಯೋಹಾನ ನಿಗೂ ಬೊವನೆರ್ಗೆಸ್‌ ಎಂದು ಹೆಸರಿಟ್ಟನು ಅಂದರೆ ಗುಡುಗಿನ ಪುತ್ರರು ಎಂದರ್ಥ.
17 E a Tiago, filho de Zebedeu, e a João, irmão de Tiago, aos quais pôs o nome de Boanerges, que significa: Filhos do trovão;
18 ಮತ್ತು ಅಂದ್ರೆಯ, ಫಿಲಿಪ್ಪ, ಬಾರ್ತೂಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, ಕಾನಾನ್ಯನಾದ ಸೀಮೋನ,
18 E a André, e a Filipe, e a Bartolomeu, e a Mateus, e a Tomé, e a Tiago, filho de Alfeu, e a Tadeu, e a Simão, o Cananita,
19 ಆತನನ್ನು ಹಿಡು ಕೊಡಲಿಕ್ಕಿದ್ದ ಯೂದ ಇಸ್ಕರಿ ಯೋತ್‌ ಎಂಬವರೇ. ಮತ್ತು ಅವರು ಒಂದು ಮನೆಯೊಳಕ್ಕೆ ಹೋದರು.
19 E a Judas Iscariotes, o que o entregou.
20 ಜನಸಮೂಹವು ಅಲ್ಲಿ ತಿರಿಗಿ ಕೂಡಿಬಂದದ್ದ ರಿಂದ ಅವರು ರೊಟ್ಟಿ ತಿನ್ನುವದಕ್ಕೂ ಆಗದೆ ಹೋಯಿತು.
20 E foram para uma casa. E afluiu outra vez a multidão, de tal maneira que nem sequer podiam comer pão.
21 ಆತನ ಸ್ನೇಹಿತರು ಇದನ್ನು ಕೇಳಿ ದಾಗ ಆತನನ್ನು ಹಿಡಿಯುವದಕ್ಕಾಗಿ ಹೊರಟರು. ಯಾಕಂದರೆ ಅವರು--ಈತನಿಗೆ ಹುಚ್ಚು ಹಿಡಿದದೆ ಎಂದು ಅಂದರು.
21 E, quando os seus ouviram isto, saíram para o prender; porque diziam: Está fora de si.
22 ಇದಲ್ಲದೆ ಯೆರೂಸಲೇಮಿ ನಿಂದ ಬಂದ ಶಾಸ್ತ್ರಿಗಳು--ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ ಮತ್ತು ಇವನು ದೆವ್ವಗಳ ಅಧಿಪತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ ಅಂದರು.
22 E os escribas, que tinham descido de Jerusalém, diziam: Tem Belzebu, e pelo príncipe dos demônios expulsa os demônios.
23 ಆತನು ಅವರನ್ನು ತನ್ನ ಹತ್ತಿರಕ್ಕೆ ಕರೆದು ಸಾಮ್ಯಗಳಲ್ಲಿ ಅವರಿಗೆ--ಸೈತಾನನು ಸೈತಾನನನ್ನು ಹೊರಗೆ ಹಾಕು ವದು ಹೇಗೆ?
23 E, chamando-os a si, disse-lhes por parábolas: Como pode Satanás expulsar Satanás?
24 ಒಂದು ರಾಜ್ಯವು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ರಾಜ್ಯವು ನಿಲ್ಲಲಾರದು.
24 E, se um reino se dividir contra si mesmo, tal reino não pode subsistir;
25 ಇದ ಲ್ಲದೆ ಒಂದು ಮನೆಯು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ಮನೆಯು ನಿಲ್ಲಲಾರದು.
25 E, se uma casa se dividir contra si mesma, tal casa não pode subsistir.
26 ಸೈತಾನನು ತನಗೆ ತಾನೇ ವಿರೋಧವಾಗಿ ಎದ್ದು ವಿಭಾಗಿಸಲ್ಪಟ್ಟರೆ ಅವನು ನಿಲ್ಲಲಾರದೆ ಅಂತ್ಯಗೊಳ್ಳುವನು.
26 E, se Satanás se levantar contra si mesmo, e for dividido, não pode subsistir; antes tem fim.
27 ಇದಲ್ಲದೆ ಒಬ್ಬ ಮನುಷ್ಯನು ಮೊದಲು ಬಲಿಷ್ಠನನ್ನು ಕಟ್ಟದ ಹೊರತು ಅವನ ಮನೆಯೊಳಕ್ಕೆ ಪ್ರವೇಶಿಸಿ ಅವನ ಸೊತ್ತನ್ನು ಸುಲುಕೊಳ್ಳಲಾರನು; ಕಟ್ಟಿದ ಮೇಲೆ ಅವನ ಮನೆಯನ್ನು ಸುಲುಕೊಳ್ಳುವನು ಅಂದನು.
27 Ninguém pode roubar os bens do valente, entrando-lhe em sua casa, se primeiro não maniatar o valente; e então roubará a sua casa.
28 ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಎಲ್ಲಾ ಪಾಪಗಳೂ ದೇವದೂಷಣೆಗಳೂ ಮನುಷ್ಯ ಪುತ್ರರಿಗೆ ಕ್ಷಮಿಸಲ್ಪ ಡುವವು;
28 Na verdade vos digo que todos os pecados serão perdoados aos filhos dos homens, e toda a sorte de blasfêmias, com que blasfemarem;
29 ಆದರೆ ಯಾವನು ಪವಿತ್ರಾತ್ಮನಿಗೆ ವಿರೋಧವಾಗಿ ದೂಷಣೆ ಮಾಡುವನೋ ಅವನಿಗೆ ಎಂದಿಗೂ ಕ್ಷಮಾಪಣೆ ಇಲ್ಲ; ಆದರೆ ಅವನು ನಿತ್ಯವಾದ ದಂಡನೆಯ ಅಪಾಯಕ್ಕೆ ಒಳಗಾಗುವನು ಅಂದನು.
29 Qualquer, porém, que blasfemar contra o Espírito Santo, nunca obterá perdão, mas será réu do eterno juízo
30 ಯಾಕಂದರೆ ಅವರು--ಇವನಿಗೆ ಅಶುದ್ಧಾತ್ಮವಿದೆ ಎಂದು ಹೇಳಿದರು.
30 (Porque diziam: Tem espírito imundo).
31 ತರುವಾಯ ಆತನ ಸಹೋದರರೂ ತಾಯಿಯೂ ಅಲ್ಲಿಗೆ ಬಂದು ಹೊರಗೆ ನಿಂತುಕೊಂಡು ಆತನನ್ನು ಕರೇಕಳುಹಿಸಿದರು.
31 Chegaram, então, seus irmãos e sua mãe; e, estando fora, mandaram-no chamar.
32 ಜನಸಮೂಹವು ಆತನ ಸುತ್ತಲೂ ಕೂತುಕೊಂಡು ಆತನಿಗೆ--ಇಗೋ, ಹೊರಗೆ ನಿನ್ನ ತಾಯಿಯೂ ನಿನ್ನ ಸಹೋದರರೂ ನಿನ್ನನ್ನು ಹುಡುಕುತ್ತಿದ್ದಾರೆ ಎಂದು ಹೇಳಿದರು.
32 E a multidão estava assentada ao redor dele, e disseram-lhe: Eis que tua mãe e teus irmãos te procuram, e estão lá fora.
33 ಆತನು ಪ್ರತ್ಯುತ್ತರವಾಗಿ ಅವರಿಗೆ--ನನ್ನ ತಾಯಿ ಇಲ್ಲವೆ ನನ್ನ ಸಹೋದರರು ಯಾರು ಎಂದು ಹೇಳಿ
33 E ele lhes respondeu, dizendo: Quem é minha mãe e meus irmãos?
34 ತನ್ನ ಸುತ್ತಲೂ ಕೂತಿದ್ದವರನ್ನು ನೋಡಿ--ಇಗೋ, ನನ್ನ ತಾಯಿ ಮತ್ತು ನನ್ನ ಸಹೋದರರು!
34 E, olhando em redor para os que estavam assentados junto dele, disse: Eis aqui minha mãe e meus irmãos.
35 ಯಾಕಂದರೆ ಯಾವನು ದೇವರ ಚಿತ್ತದಂತೆ ಮಾಡುವನೋ ಅವನೇ ನನ್ನ ಸಹೋದರನೂ ನನ್ನ ಸಹೋದರಿಯೂ ನನ್ನ ತಾಯಿಯೂ ಆಗಿದ್ದಾರೆ ಅಂದನು.
35 Porquanto, qualquer que fizer a vontade de Deus, esse é meu irmão, e minha irmã, e minha mãe.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Marcos 3, comparar traduções ou montar um estudo — tudo direto pelo WhatsApp.