Marcos 2

Kannada Bible (GL_KANNADA) vs ARIB

Sair da comparação
ARIB Almeida Revisada Imprensa Bíblica
1 1 ಕೆಲವು ದಿವಸಗಳಾದ ಮೇಲೆ ಆತನು ತಿರಿಗಿ ಕಪೆರ್ನೌಮಿಗೆ ಬಂದನು; ಆಗ ಆತನು ಮನೆಯಲ್ಲಿದ್ದ ಸುದ್ದಿಯು ಹರಡಿತು.
1 Alguns dias depois entrou Jesus outra vez em Cafarnaum, e soube-se que ele estava em casa.
2 ಕೂಡಲೆ ಅನೇಕರು ಕೂಡಿಬಂದದ್ದರಿಂದ ಅವರನ್ನು ಸೇರಿಸಿಕೊಳ್ಳುವದಕ್ಕೆ ಬಾಗಲಿನ ಬಳಿಯಲ್ಲಾದರೂ ಸ್ಥಳವಿರಲಿಲ್ಲ; ಆತನು ಅವರಿಗೆ ವಾಕ್ಯವನ್ನು ಸಾರು ತ್ತಿದ್ದನು;
2 Ajuntaram-se, pois, muitos, a ponta de não caberem nem mesmo diante da porta; e ele lhes anunciava a palavra.
3 ಆಗ ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ವರು ಹೊತ್ತುಕೊಂಡು ಆತನ ಬಳಿಗೆ ಬಂದರು.
3 Nisso vieram alguns a trazer-lhe um paralítico, carregado por quatro;
4 ಜನಸಂದಣಿಯ ನಿಮಿತ್ತ ಅವರು ಆತನ ಹತ್ತಿರಕ್ಕೆ ಬರಲಾರದೆ ಆತನಿದ್ದ ಮನೆಯ ಮೇಲ್ಚಾವಣಿಯನ್ನು ಬಿಚ್ಚಿ ಅದನ್ನು ಮುರಿದು ಪಾರ್ಶ್ವವಾಯು ರೋಗಿಯು ಮಲಗಿದ್ದ ಹಾಸಿಗೆಯನ್ನು ಕೆಳಗೆ ಇಳಿಸಿದರು.
4 e não podendo aproximar-se dele, por causa da multidão, descobriram o telhado onde estava e, fazendo uma abertura, baixaram o leito em que jazia o paralítico.
5 ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ--ಮಗನೇ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು.
5 E Jesus, vendo-lhes a fé, disse ao paralítico: Filho, perdoados são os teus pecados.
6 ಆದರೆ ಅಲ್ಲಿ ಕೂತುಕೊಂಡಿದ್ದ ಶಾಸ್ತ್ರಿಗಳಲ್ಲಿ ಕೆಲವರು--
6 Ora, estavam ali sentados alguns dos escribas, que arrazoavam em seus corações, dizendo:
7 ಈ ಮನುಷ್ಯನು ಯಾಕೆ ಹೀಗೆ ದೇವದೂಷಣೆಗಳನ್ನು ಮಾಡುತ್ತಾನೆ? ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು ಎಂದು ತಮ್ಮ ಹೃದಯ ಗಳಲ್ಲಿ ಅಂದುಕೊಂಡರು.
7 Por que fala assim este homem? Ele blasfema. Quem pode perdoar pecados senão um só, que é Deus?
8 ಹೀಗೆ ಅವರು ತಮ್ಮೊಳಗೆ ಅಂದುಕೊಂಡದ್ದನ್ನು ಯೇಸು ಕೂಡಲೆ ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ--ನೀವು ನಿಮ್ಮ ಹೃದಯ ಗಳಲ್ಲಿ ಯಾಕೆ ಇವುಗಳನ್ನು ಆಲೋಚಿಸುತ್ತೀರಿ ಎಂದು ಹೇಳಿ
8 Mas Jesus logo percebeu em seu espírito que eles assim arrazoavam dentro de si, e perguntou-lhes: Por que arrazoais desse modo em vossos corações?
9 ಪಾರ್ಶ್ವವಾಯು ರೋಗಿಗೆ--ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಅನ್ನುವದೋ? ಇಲ್ಲವೆ--ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಅನ್ನುವದೋ? ಯಾವದು ಸುಲಭ?
9 Qual é mais fácil? dizer ao paralítico: Perdoados são os teus pecados; ou dizer: Levanta-te, toma o teu leito, e anda?
10 ಆದರೆ ಪಾಪಗಳನ್ನು ಕ್ಷಮಿಸಿಬಿಡುವದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬದು ನಿಮಗೆ ತಿಳಿಯಬೇಕು ಎಂದು ಹೇಳಿ (ಪಾರ್ಶ್ವವಾಯು ರೋಗಿಗೆ)--
10 Ora, para que saibais que o Filho do homem tem sobre a terra autoridade para perdoar pecados { disse ao paralítico },
11 ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ ಅಂದನು.
11 a ti te digo, levanta-te, toma o teu leito, e vai para tua casa.
12 ಕೂಡಲೆ ಅವನು ಎದ್ದು ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಅದಕ್ಕೆ ಎಲ್ಲರೂ ಬೆರಗಾಗಿ--ನಾವು ಇಂಥದನ್ನು ಎಂದಿಗೂ ನೋಡಲಿಲ್ಲ ಎಂದು ಹೇಳುತ್ತಾ ದೇವರನ್ನು ಮಹಿಮೆಪಡಿಸಿದರು.
12 Então ele se levantou e, tomando logo o leito, saiu à vista de todos; de modo que todos pasmavam e glorificavam a Deus, dizendo: Nunca vimos coisa semelhante.
13 ಆತನು ತಿರಿಗಿ ಸಮುದ್ರದ ಕಡೆಗೆ ಹೊರಟು ಹೋದನು; ಆಗ ಜನಸಮೂಹವೆಲ್ಲಾ ಆತನ ಬಳಿಗೆ ಬಂದಾಗ ಆತನು ಅವರಿಗೆ ಬೋಧಿಸಿದನು.
13 Outra vez saiu Jesus para a beira do mar; e toda a multidão ia ter com ele, e ele os ensinava.
14 ಆತನು ಹಾದುಹೋಗುತ್ತಿದ್ದಾಗ ಸುಂಕದ ಕಟ್ಟೆಯಲ್ಲಿ ಕೂತಿದ್ದ ಅಲ್ಫಾಯನ ಮಗನಾದ ಲೇವಿಯನ್ನು ಕಂಡು ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು. ಆಗ ಅವನು ಎದ್ದು ಆತನನ್ನು ಹಿಂಬಾಲಿಸಿದನು.
14 Quando ia passando, viu a Levi, filho de Alfeu, sentado na coletoria, e disse-lhe: Segue-me. E ele, levantando-se, o seguiu.
15 ಇದಾದ ಮೇಲೆ ಯೇಸು ಅವನ ಮನೆಯಲ್ಲಿ ಊಟಕ್ಕೆ ಕೂತಿದ್ದಾಗ ಅನೇಕ ಸುಂಕದವರೂ ಪಾಪಿಗಳೂ ಯೇಸುವಿನ ಮತ್ತು ಆತನ ಶಿಷ್ಯರ ಸಂಗಡ ಕೂತುಕೊಂಡರು; ಯಾಕಂದರೆ ಅಲ್ಲಿದ್ದ ಅನೇಕರು ಆತನನ್ನು ಹಿಂಬಾಲಿಸುತ್ತಿದ್ದರು.
15 Ora, estando Jesus à mesa em casa de Levi, estavam também ali reclinados com ele e seus discípulos muitos publicanos e pecadores; pois eram em grande número e o seguiam.
16 ಆತನು ಸುಂಕದವರ ಮತ್ತು ಪಾಪಿಗಳ ಜೊತೆಯಲ್ಲಿ ಊಟ ಮಾಡುತ್ತಿರು ವದನ್ನು ಶಾಸ್ತ್ರಿಗಳು ಮತ್ತು ಫರಿಸಾಯರು ನೋಡಿ ಆತನ ಶಿಷ್ಯರಿಗೆ--ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ತಿನ್ನುವದು ಮತ್ತು ಕುಡಿಯುವದು ಹೇಗೆ ಅಂದರು.
16 Vendo os escribas dos fariseus que comia com os publicanos e pecadores, perguntavam aos discípulos: Por que é que ele como com os publicanos e pecadores?
17 ಯೇಸು ಅದನ್ನು ಕೇಳಿ--ಕ್ಷೇಮದಿಂದಿರುವವರಿಗೆ ಅಲ್ಲ, ಕ್ಷೇಮವಿಲ್ಲದವರಿಗೆ ವೈದ್ಯನುಬೇಕು; ನಾನು ನೀತಿವಂತರನ್ನಲ್ಲ, ಆದರೆ ಪಾಪಿಗಳನ್ನು ಮಾನಸಾಂತರಕ್ಕಾಗಿ ಕರೆಯುವದಕ್ಕೆ ಬಂದೆನು ಎಂದು ಅವರಿಗೆ ಹೇಳಿದನು.
17 Jesus, porém, ouvindo isso, disse-lhes: Não necessitam de médico os sãos, mas sim os enfermos; eu não vim chamar justos, mas pecadores.
18 ಪದ್ಧತಿಯ ಪ್ರಕಾರ ಉಪವಾಸ ಮಾಡುತ್ತಿದ್ದ ಯೋಹಾನನ ಮತ್ತು ಫರಿಸಾಯರ ಶಿಷ್ಯರು ಆತನ ಬಳಿಗೆ ಬಂದು ಆತನಿಗೆ--ಯೋಹಾನನ ಮತ್ತು ಫರಿಸಾಯರ ಶಿಷ್ಯರು ಉಪವಾಸಮಾಡುತ್ತಾರೆ; ಆದರೆ ನಿನ್ನ ಶಿಷ್ಯರು ಯಾಕೆ ಉಪವಾಸ ಮಾಡುವದಿಲ್ಲ ಎಂದು ಕೇಳಿದರು.
18 Ora, os discípulos de João e os fariseus estavam jejuando; e foram perguntar-lhe: Por que jejuam os discípulos de João e os dos fariseus, mas os teus discípulos não jejuam?
19 ಅದಕ್ಕೆ ಯೇಸು ಅವರಿಗೆ--ಮದಲಿಂಗನು ಅವರ ಸಂಗಡ ಇರುವಾಗ ಮದಲಗಿ ತ್ತಿಯ ಮನೇಮಕ್ಕಳು ಉಪವಾಸ ಮಾಡುವರೋ? ಮದಲಿಂಗನು ಅವರ ಸಂಗಡ ಇರುವ ತನಕ ಅವರು ಉಪವಾಸ ಮಾಡುವದಿಲ್ಲ.
19 Respondeu-lhes Jesus: Podem, porventura, jejuar os convidados às núpcias, enquanto está com eles o noivo? Enquanto têm consigo o noivo não podem jejuar;
20 ಆದರೆ ಮದಲಿಂಗನು ಅವರ ಬಳಿಯಿಂದ ತೆಗೆಯಲ್ಪಡುವ ದಿವಸಗಳು ಬರುತ್ತವೆ; ಆಗ ಅವರು ಆ ದಿವಸಗಳಲ್ಲಿ ಉಪವಾಸ ಮಾಡುವರು.
20 dias virão, porém, em que lhes será tirado o noivo; nesses dias, sim hão de jejuar.
21 ಇದಲ್ಲದೆ ಹೊಸಬಟ್ಟೆಯ ತುಂಡನ್ನು ಹಳೆಯ ಉಡುಪಿಗೆ ಯಾರೂ ಹಚ್ಚುವದಿಲ್ಲ;ಹಚ್ಚಿದರೆ ಹೊಸ ತುಂಡು ಹಳೆಯ ಉಡುಪನ್ನು ಹಿಂಜುವದರಿಂದ ಹರಕು ಹೆಚ್ಚಾಗುವದು.
21 Ninguém cose remendo de pano novo em vestido velho; do contrário o remendo novo tira parte do velho, e torna-se maior a rotura.
22 ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕುವದಿಲ್ಲ; ಹಾಕಿದರೆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಹಾಕುವದರಿಂದ ದ್ರಾಕ್ಷಾರಸವು ಚೆಲ್ಲಿಹೋಗುವದು ಮತ್ತು ಬುದ್ದಲಿಗಳು ಕೆಟ್ಟುಹೋಗು ವವು. ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿಯೇ ಹಾಕಿಡತಕ್ಕದ
22 E ninguém deita vinho novo em odres velhos; do contrário, o vinho novo romperá os odres, e perder-se-á o vinho e também os odres; mas deita-se vinho novo em odres novos.
23 ಇದಾದ ಮೇಲೆ ಆತನು ಸಬ್ಬತ್‌ ದಿನದಲ್ಲಿ ಪೈರಿನ ಹೊಲಗಳನ್ನು ಹಾದುಹೋಗುತ್ತಿದ್ದಾಗ ಆತನ ಶಿಷ್ಯರು ಕಾಳಿನ ತೆನೆಗಳನ್ನು ಕೀಳಲಾರಂಭಿಸಿದರು.
23 E sucedeu passar ele num dia de sábado pelas searas; e os seus discípulos, caminhando, começaram a colher espigas.
24 ಅದಕ್ಕೆ ಫರಿಸಾಯರು ಆತನಿಗೆ--ಇಗೋ, ಅವರು ಸಬ್ಬತ್‌ ದಿನದಲ್ಲಿ ಮಾಡಬಾರದ್ದನ್ನು ಯಾಕೆ ಮಾಡು ತ್ತಾರೆ ಎಂದು ಕೇಳಿದರು.
24 E os fariseus lhe perguntaram: Olha, por que estão fazendo no sábado o que não é lícito?
25 ಆತನು ಅವರಿಗೆ--ದಾವೀದನು ಕೊರತೆಯುಳ್ಳವನಾಗಿ ಹಸಿದಾಗ ಅವನೂ ಅವನ ಸಂಗಡ ಇದ್ದವರೂ ಏನು ಮಾಡಿ ದರು?
25 Respondeu-lhes ele: Acaso nunca lestes o que fez Davi quando se viu em necessidade e teve fome, ele e seus companheiros?
26 ಮಹಾಯಾಜಕನಾದ ಅಬಿಯಾತರನ ದಿವಸಗಳಲ್ಲಿ ಅವನು ದೇವರ ಮನೆಯೊಳಕ್ಕೆ ಹೋಗಿ ಯಾಜಕರ ಹೊರತು ಬೇರೆಯವರು ತಿನ್ನುವದು ನ್ಯಾಯವಲ್ಲದ ಸಮ್ಮುಖದ ರೊಟ್ಟಿಯನ್ನು ಹೇಗೆ ತಿಂದು ತನ್ನ ಜೊತೆಯಲ್ಲಿ ಇದ್ದವರಿಗೂ ಕೊಟ್ಟನೆಂಬದನ್ನು ನೀವು ಎಂದಾದರೂ ಓದಲಿಲ್ಲವೋ ಎಂದು ಹೇಳಿ ದನು.
26 Como entrou na casa de Deus, no tempo do sumo sacerdote Abiatar, e comeu dos pães da proposição, dos quais não era lícito comer senão aos sacerdotes, e deu também aos companheiros?
27 ಆತನು ಅವರಿಗೆ--ಸಬ್ಬತ್ತು ಮನುಷ್ಯರಿ ಗೋಸ್ಕರ ಮಾಡಲ್ಪಟ್ಟಿತು; ಆದರೆ ಮನುಷ್ಯನು ಸಬ್ಬತ್ತಿಗೋಸ್ಕರ ಅಲ್ಲ;
27 E prosseguiu: O sábado foi feito por causa do homem, e não o homem por causa do sábado.
28 ಆದದರಿಂದ ಮನುಷ್ಯಕುಮಾ ರನು ಸಬ್ಬತ್ತಿಗೆ ಸಹ ಒಡೆಯನಾಗಿದ್ದಾನೆ ಅಂದನು.
28 Pelo que o Filho do homem até do sábado é Senhor.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Marcos 2, comparar traduções ou montar um estudo — tudo direto pelo WhatsApp.