Marcos 16

Kannada Bible (GL_KANNADA) vs NVT

Sair da comparação
NVT Nova Versão Transformadora
1 ಸಬ್ಬತ್ತು ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಯಾದ ಮರಿಯಳೂ ಮತ್ತು ಸಲೋಮೆಯೂ ಆತನಿಗೆ ಹಚ್ಚುವದಕ್ಕಾಗಿ ಸುಗಂಧದ್ರವ್ಯಗಳನ್ನು ಕೊಂಡು ಕೊಂಡು ಬಂದರು.
1 Ao entardecer do dia seguinte, terminado o sábado, Maria Madalena, Maria, mãe de Tiago, e Salomé foram comprar especiarias para ungir o corpo de Jesus.
2 ವಾರದ ಮೊದಲನೆಯ ದಿನ ನಸುಕಿನಲ್ಲಿ ಸೂರ್ಯನು ಉದಯಿಸುವಾಗ ಅವರು ಸಮಾಧಿಯ ಬಳಿಗೆ ಬಂದರು,
2 No domingo de manhã, bem cedo, ao nascer do sol, elas foram ao túmulo.
3 ಅವರು--ಸಮಾಧಿಯ ಬಾಗಲಿನಿಂದ ಆ ಕಲ್ಲನ್ನು ನಮಗೋಸ್ಕರ ಯಾರು ಉರುಳಿಸುವರು ಎಂದು ತಮ್ಮತಮ್ಮೊಳಗೆ ಮಾತನಾಡಿ ಕೊಂಡರು.
3 No caminho, perguntavam umas às outras: “Quem removerá para nós a pedra da entrada do túmulo?”.
4 ಯಾಕಂದರೆ ಅದು ಬಹಳ ದೊಡ್ಡದಾ ಗಿತ್ತು. ಆದರೆ ಅವರು ನೋಡಿ ಆ ಕಲ್ಲು ಉರುಳಿಸ ಲ್ಪಟ್ಟದ್ದನ್ನು ಕಂಡರು.
4 Mas, quando chegaram, foram verificar e viram que a pedra, que era muito grande, já havia sido removida.
5 ಅವರು ಸಮಾಧಿಯೊಳಕ್ಕೆ ಪ್ರವೇಶಿಸಿದವರಾಗಿ ಉದ್ದವಾದ ಬಿಳಿ ಉಡುಪನ್ನು ತೊಟ್ಟುಕೊಂಡಿದ್ದ ಒಬ್ಬ ಯೌವನಸ್ಥನು ಬಲಗಡೆಯಲ್ಲಿ ಕೂತಿರುವದನ್ನು ಕಂಡು ಭಯಭ್ರಾಂತರಾದರು.
5 Ao entrarem no túmulo, viram um jovem vestido de branco sentado do lado direito. Ficaram assustadas,
6 ಆದರೆ ಅವನು ಅವರಿಗೆ--ಭಯಪಡಬೇಡಿರಿ, ಶಿಲುಬೆಗೆ ಹಾಕಲ್ಪಟ್ಟ ನಜರೇತಿನ ಯೇಸುವನ್ನು ಹುಡುಕುತ್ತಿದ್ದೀರಿ; ಆತನು ಎದ್ದಿದ್ದಾನೆ; ಇಲ್ಲಿ ಇಲ್ಲ, ಆತನನ್ನು ಇಟ್ಟಿದ್ದ ಸ್ಥಳವನ್ನು ನೋಡಿರಿ;
6 mas ele disse: “Não tenham medo. Vocês procuram Jesus de Nazaré, que foi crucificado. Ele não está aqui. Ressuscitou! Vejam, este é o lugar onde haviam colocado seu corpo.
7 ಆದರೆ ನೀವು ಹೊರಟುಹೋಗಿ ಆತನು ನಿಮಗೆ ಹೇಳಿದಂತೆ ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುತ್ತಾನೆ; ಅಲ್ಲಿ ನೀವು ಆತನನ್ನು ಕಾಣುವಿರಿ ಎಂದು ಆತನ ಶಿಷ್ಯರಿಗೆ ಮತ್ತು ಪೇತ್ರನಿಗೆ ಹೇಳಿರಿ ಅಂದನು.
7 Agora vão e digam aos discípulos, incluindo Pedro, que Jesus vai adiante deles à Galileia. Vocês o verão lá, como ele lhes disse”.
8 ಆಗ ಅವರು ಬೇಗನೆ ಹೊರಟು ಸಮಾಧಿಯ ಬಳಿಯಿಂದ ಓಡಿಹೋದರು; ಯಾಕಂದರೆ ಅವರು ಆಶ್ಚರ್ಯದಿಂದ ನಡುಗುತ್ತಿದ್ದರು; ಇದಲ್ಲದೆ ಅವರು ಹೆದರಿದವರಾದದರಿಂದ ಯಾರಿಗೂ ಏನೂ ಹೇಳಲಿಲ್ಲ.
8 Trêmulas e desnorteadas, as mulheres fugiram do túmulo e não disseram coisa alguma a ninguém, pois estavam assustadas demais.
9 ಹೀಗಿರಲಾಗಿ ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಎದ್ದಮೇಲೆ ಆತನು ಮೊದಲು ತಾನು ಏಳು ದೆವ್ವಗಳನ್ನು ಬಿಡಿಸಿದ್ದ ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು.
9 Quando Jesus ressuscitou dos mortos, no domingo de manhã, bem cedo, a primeira pessoa que o viu foi Maria Madalena, a mulher de quem ele havia expulsado sete demônios.
10 ಆತನ ಸಂಗಡ ಇದ್ದವರು ಶೋಕಿಸಿ ಅಳುತ್ತಿರುವಾಗ ಆಕೆಯು ಹೋಗಿ ಅವರಿಗೆ ಹೇಳಿದಳು.
10 Ela foi aos discípulos, que lamentavam e choravam, e contou o que havia acontecido.
11 ಆದರೆ ಆತನು ಬದುಕಿದ್ದಾನೆಂದೂ ಆಕೆಯು ಆತನನ್ನು ನೋಡಿದ್ದಾಳೆಂದೂ ಅವರು ಕೇಳಿದರು; ಆದರೂ ನಂಬಲಿಲ್ಲ.
11 Quando ela disse que Jesus estava vivo e que o tinha visto, eles não acreditaram.
12 ಇದಾದ ಮೇಲೆ ಅವರಲ್ಲಿ ಇಬ್ಬರು ಒಂದು ಗ್ರಾಮಕ್ಕೆ ನಡೆದು ಹೋಗುತ್ತಿದ್ದಾಗ ಆತನು ಅವರಿಗೆ ಬೇರೊಂದು ರೂಪದಲ್ಲಿ ಕಾಣಿಸಿಕೊಂಡನು.
12 Depois, Jesus apareceu em outra forma a dois de seus seguidores, enquanto iam de Jerusalém para o campo.
13 ಅವರು ಹೋಗಿ ಉಳಿದವರಿಗೆ ತಿಳಿಸಿದರು; ಆದರೆ ಅವರನ್ನೂ ಅವರು ನಂಬಲಿಲ್ಲ.
13 Voltaram correndo para contar aos outros, mas eles não acreditaram.
14 ತರುವಾಯ ಊಟಕ್ಕೆ ಕೂತಿದ್ದ ಹನ್ನೊಂದು ಮಂದಿಗೆ ಆತನು ಕಾಣಿಸಿಕೊಂಡು ತಾನು ಎದ್ದು ಬಂದಮೇಲೆ ತನ್ನನ್ನು ನೋಡಿದವರನ್ನು ನಂಬಲಿಲ್ಲ ವಾದ ಕಾರಣ ಅವರ ಅಪನಂಬಿಕೆಗೂ ಹೃದಯದ ಕಾಠಿಣ್ಯಕ್ಕೂ ಆತನು ಅವರನ್ನು ಗದರಿಸಿದನು.
14 Mais tarde, enquanto os onze discípulos comiam, Jesus lhes apareceu. Ele os repreendeu por sua incredulidade obstinada, pois se recusaram a crer naqueles que o tinham visto depois de sua ressurreição.
15 ಆತನು ಅವರಿಗೆ--ನೀವು ಸಮಸ್ತ ಲೋಕಕ್ಕೆ ಹೋಗಿ ಎಲ್ಲಾ ಸೃಷ್ಟಿಗೆ ಸುವಾರ್ತೆಯನ್ನು ಸಾರಿರಿ.
15 Jesus lhes disse: “Vão ao mundo inteiro e anunciem as boas-novas a todos.
16 ನಂಬಿ ಬಾಪ್ತಿಸ್ಮ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು. ಆದರೆ ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು.
16 Quem crer e for batizado será salvo, mas quem se recusar a crer será condenado.
17 ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಅವರು ಹೊಸ ಭಾಷೆಗಳಲ್ಲಿ ಮಾತನಾಡುವರು;
17 Os seguintes sinais acompanharão aqueles que crerem: em meu nome expulsarão demônios, falarão em novas línguas,
18 ಅವರು ಸರ್ಪಗಳನ್ನು ಎತ್ತುವರು; ಮರಣಕರವಾದದ್ದೇ ನಾದರೂ ಕುಡಿದರೆ ಅದು ಅವರಿಗೆ ಯಾವ ಕೇಡನ್ನೂ ಮಾಡುವದಿಲ್ಲ; ಅವರು ರೋಗಿಗಳ ಮೇಲೆ ಕೈಗಳನ್ನಿಡು ವಾಗ ಅವರು ಸ್ವಸ್ಥರಾಗುವರು ಎಂದು ಹೇಳಿದನು.
18 pegarão em serpentes sem correr perigo, se beberem algo venenoso, não lhes fará mal, e colocarão as mãos sobre os enfermos e eles serão curados”.
19 ಹೀಗೆ ಕರ್ತನು ಅವರೊಂದಿಗೆ ಮಾತನಾಡಿದ ನಂತರ ಆತನು ಮೇಲಕ್ಕೆ ಪರಲೋಕದಲ್ಲಿ ಸ್ವೀಕರಿ ಸಲ್ಪಟ್ಟು ದೇವರ ಬಲಪಾರ್ಶ್ವದಲ್ಲಿ ಕೂತುಕೊಂಡನು.
19 Quando o Senhor Jesus acabou de falar com eles, foi levado para o céu e sentou-se à direita de Deus.
20 ಮತ್ತು ಅವರು ಹೊರಟುಹೋಗಿ ಎಲ್ಲಾ ಕಡೆಯಲ್ಲಿ ಸಾರಿದರು. ಇದಲ್ಲದೆ ಕರ್ತನು ಅವರ ಜೊತೆಯಲ್ಲಿ ಕೆಲಸಮಾಡುತ್ತಾ ನಡೆದ ಸೂಚಕ ಕಾರ್ಯಗಳಿಂದ ವಾಕ್ಯವನ್ನು ಸ್ಥಿರಪಡಿಸುತ್ತಾ ಇದ್ದನು. ಆಮೆನ್‌.
20 Os discípulos foram a toda parte e anunciavam a mensagem, e o Senhor cooperava com eles, confirmando-a com muitos sinais.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Marcos 16, comparar traduções ou montar um estudo — tudo direto pelo WhatsApp.