Marcos 14

Kannada Bible (GL_KANNADA) vs ARA

Sair da comparação
ARA Almeida Revista e Atualizada 1993
1 ಪಸ್ಕದ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬ ಬರುವದಕ್ಕೆ ಇನ್ನೂ ಎರಡು ದಿವಸ ಗಳಿದ್ದಾಗ ಪ್ರಧಾನಯಾಜಕರೂ ಶಾಸ್ತ್ರಿಗಳೂ ಉಪಾಯ ದಿಂದ ಆತನನ್ನು ಹೇಗೆ ಹಿಡಿದು ಕೊಲ್ಲಬೇಕೆಂದು ಹವಣಿಸುತ್ತಿದ್ದರು.
1 Dali a dois dias, era a Páscoa e a Festa dos Pães Asmos; e os principais sacerdotes e os escribas procuravam como o prenderiam, à traição, e o matariam.
2 ಆದರೆ ಅವರು--ಜನರು ದಂಗೆ ಏಳದಂತೆ ಹಬ್ಬದಲ್ಲಿ ಬೇಡ ಎಂದು ಅಂದುಕೊಂಡರು.
2 Pois diziam: Não durante a festa, para que não haja tumulto entre o povo.
3 ಬೇಥಾನ್ಯದಲ್ಲಿದ್ದ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಆತನು ಊಟಕ್ಕೆ ಕೂತಿದ್ದಾಗ ಒಬ್ಬ ಸ್ತ್ರೀಯು ಅತಿ ಶ್ರೇಷ್ಠವಾದ ಸುಗಂಧ ತೈಲದ ಭರಣಿ ಯನ್ನು ತೆಗೆದುಕೊಂಡು ಬಂದು ಅದನ್ನು ಒಡೆದು ಆತನ ತಲೆಯ ಮೇಲೆ ಹೊಯಿದಳು.
3 Estando ele em Betânia, reclinado à mesa, em casa de Simão, o leproso, veio uma mulher trazendo um vaso de alabastro com preciosíssimo perfume de nardo puro; e, quebrando o alabastro, derramou o bálsamo sobre a cabeça de Jesus.
4 ಆದರೆ ಅಲ್ಲಿದ್ದ ಕೆಲವರು ತಮ್ಮೊಳಗೆ ಕೋಪಗೊಂಡು--ಈ ತೈಲವನ್ನು ನಷ್ಟ ಮಾಡಿದ್ದೇಕೆ?
4 Indignaram-se alguns entre si e diziam: Para que este desperdício de bálsamo?
5 ಇದನ್ನು ಮುನ್ನೂರು (ಪೆನ್ಸ್‌) ಹಣಕ್ಕಿಂತ ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡ ಬಹುದಾಗಿತ್ತಲ್ಲಾ ಎಂದು ಅಂದುಕೊಂಡು ಆಕೆಗೆ ವಿರೋಧವಾಗಿ ಗುಣುಗುಟ್ಟಿದರು.
5 Porque este perfume poderia ser vendido por mais de trezentos denários e dar-se aos pobres. E murmuravam contra ela.
6 ಆದರೆ ಯೇಸು --ಈಕೆಯನ್ನು ಬಿಟ್ಟುಬಿಡಿರಿ; ಈಕೆಗೆ ನೀವು ಯಾಕೆ ತೊಂದರೆ ಕೊಡುತ್ತೀರಿ? ಈಕೆಯು ನನಗೆ ಒಳ್ಳೇ ಕಾರ್ಯವನ್ನು ಮಾಡಿದ್ದಾಳೆ.
6 Mas Jesus disse: Deixai-a; por que a molestais? Ela praticou boa ação para comigo.
7 ಯಾಕಂದರೆ ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ; ನಿಮಗೆ ಮನಸ್ಸಿದ್ದರೆ ನೀವು ಅವರಿಗೆ ಯಾವಾಗಲಾದರೂ ಉಪಕಾರ ಮಾಡಬಹುದು; ಆದರೆ ನಾನು ಯಾವಾ ಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ.
7 Porque os pobres, sempre os tendes convosco e, quando quiserdes, podeis fazer-lhes bem, mas a mim nem sempre me tendes.
8 ಈಕೆಯು ತನ್ನಿಂದಾದಷ್ಟು ಮಾಡಿದ್ದಾಳೆ; ನನ್ನ ಶರೀರವನ್ನು ಹೂಣಿಡುವದಕ್ಕೆ ಅದನ್ನು ಅಭಿಷೇಕಿಸುವದಕ್ಕಾಗಿ ಈಕೆಯು ಮುಂದಾಗಿ ಮಾಡಿದ್ದಾಳೆ.
8 Ela fez o que pôde: antecipou-se a ungir-me para a sepultura.
9 ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಈ ಸುವಾರ್ತೆಯು ಸರ್ವ ಲೋಕದಲ್ಲಿ ಎಲ್ಲೆಲ್ಲಿ ಸಾರಲ್ಪಡುವದೋ ಅಲ್ಲೆಲ್ಲಾ ಈಕೆಯು ಮಾಡಿದ್ದು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳುವರು ಅಂದನು.
9 Em verdade vos digo: onde for pregado em todo o mundo o evangelho, será também contado o que ela fez, para memória sua.
10 ಆಗ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದ ಇಸ್ಕರಿಯೋತನು ಯೇಸುವನ್ನು ಪ್ರಧಾನ ಯಾಜಕರಿಗೆ ಹಿಡುಕೊಡುವಂತೆ ಅವರ ಬಳಿಗೆ ಹೋದನು.
10 E Judas Iscariotes, um dos doze, foi ter com os principais sacerdotes, para lhes entregar Jesus.
11 ಅವರು ಅದನ್ನು ಕೇಳಿ ಸಂತೋಷಪಟ್ಟು ಅವನಿಗೆ ಹಣ ಕೊಡುತ್ತೇವೆಂದು ಮಾತುಕೊಟ್ಟರು. ಅವನು ಆತನನ್ನು ಅನುಕೂಲವಾಗಿ ಹಿಡುಕೊಡುವದು ಹೇಗೆಂದು ಹುಡುಕುತ್ತಿದ್ದನು.
11 Eles, ouvindo-o, alegraram-se e lhe prometeram dinheiro; nesse meio tempo, buscava ele uma boa ocasião para o entregar.
12 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿವಸ ಪಸ್ಕದ ಕುರಿಯನ್ನು ಅವರು ಕೊಯ್ದಾಗ ಆತನ ಶಿಷ್ಯರು ಆತನಿಗೆ--ನೀನು ಪಸ್ಕದ ಊಟಮಾಡು ವಂತೆ ನಾವು ಎಲ್ಲಿಗೆ ಹೋಗಿ ಸಿದ್ಧಮಾಡಬೇಕನ್ನುತ್ತೀ ಎಂದು ಕೇಳಿದರು.
12 E, no primeiro dia da Festa dos Pães Asmos, quando se fazia o sacrifício do cordeiro pascal, disseram-lhe seus discípulos: Onde queres que vamos fazer os preparativos para comeres a Páscoa?
13 ಆಗ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ--ನೀವು ಪಟ್ಟಣದೊಳಕ್ಕೆ ಹೋಗಿರಿ; ಅಲ್ಲಿ ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನು ನಿಮ್ಮನ್ನು ಸಂಧಿಸುವನು; ಅವನನ್ನು ಹಿಂಬಾಲಿಸಿರಿ.
13 Então, enviou dois dos seus discípulos, dizendo-lhes: Ide à cidade, e vos sairá ao encontro um homem trazendo um cântaro de água;
14 ಅವನು ಯಾವ ಮನೆ ಯೊಳಗೆ ಹೋಗುತ್ತಾನೋ ಆ ಮನೆಯ ಯಜಮಾನ ನಿಗೆ--ನಾನು ನನ್ನ ಶಿಷ್ಯರೊಂದಿಗೆ ಪಸ್ಕದ ಊಟ ಮಾಡಲು ಅತಿಥಿಯ ಕೊಠಡಿ ಎಲ್ಲಿದೆ ಎಂದು ಬೋಧ ಕನು ಕೇಳುತ್ತಾನೆ ಎಂದು ಹೇಳಿರಿ.
14 segui-o e dizei ao dono da casa onde ele entrar que o Mestre pergunta: Onde é o meu aposento no qual hei de comer a Páscoa com os meus discípulos?
15 ಅವನು ಸಜ್ಜು ಗೊಳಿಸಿ ಸಿದ್ಧಮಾಡಿದ ಮೇಲಂತಸ್ತಿನ ವಿಶಾಲವಾದ ಕೊಠಡಿಯನ್ನು ನಿಮಗೆ ತೋರಿಸುವನು; ಅಲ್ಲಿ ನಮಗೆ ಸಿದ್ಧಮಾಡಿರಿ ಅಂದನು.
15 E ele vos mostrará um espaçoso cenáculo mobilado e pronto; ali fazei os preparativos.
16 ಆಗ ಆತನ ಶಿಷ್ಯರು ಹೊರಟುಹೋಗಿ ಪಟ್ಟಣದೊಳಕ್ಕೆ ಬಂದು ಆತನು ತಮಗೆ ಹೇಳಿದಂತೆ ಕಂಡುಕೊಂಡು ಪಸ್ಕವನ್ನು ಸಿದ್ಧಮಾಡಿದರು.
16 Saíram, pois, os discípulos, foram à cidade e, achando tudo como Jesus lhes tinha dito, prepararam a Páscoa.
17 ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಬಂದನು.
17 Ao cair da tarde, foi com os doze.
18 ಅವರು ಕೂತುಕೊಂಡು ಊಟಮಾಡುತ್ತಿದ್ದಾಗ ಯೇಸು ಅವರಿಗೆ--ನನ್ನೊಂದಿಗೆ ಊಟ ಮಾಡುತ್ತಿರುವ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
18 Quando estavam à mesa e comiam, disse Jesus: Em verdade vos digo que um dentre vós, o que come comigo, me trairá.
19 ಆಗ ಅವರು ದುಃಖಿಸ ಲಾರಂಭಿಸಿ ಒಬ್ಬೊಬ್ಬರಾಗಿ ಆತನಿಗೆ--ಅದು ನಾನೋ? ಮತ್ತು ಇನ್ನೊಬ್ಬನು--ಅದು ನಾನೋ? ಎಂದು ಆತನನ್ನು ಕೇಳಿದರು.
19 E eles começaram a entristecer-se e a dizer-lhe, um após outro: Porventura, sou eu?
20 ಅದಕ್ಕಾತನು ಪ್ರತ್ಯುತ್ತರವಾಗಿ ಅವರಿಗೆ--ಅವನು ಹನ್ನೆರಡು ಮಂದಿಯಲ್ಲಿ ಒಬ್ಬನು, ಅಂದರೆ ನನ್ನ ಸಂಗಡ ಪಾತ್ರೆಯಲ್ಲಿ ಅದ್ದುವವನೇ.
20 Respondeu-lhes: É um dos doze, o que mete comigo a mão no prato.
21 ತನ್ನ ವಿಷಯವಾಗಿ ಬರೆದಿರುವ ಪ್ರಕಾರ ಮನುಷ್ಯ ಕುಮಾರನು ನಿಜವಾಗಿಯೂ ಹೋಗುತ್ತಾನೆ; ಆದರೆ ಯಾವನಿಂದ ಮನುಷ್ಯಕುಮಾರನು ಹಿಡುಕೊಡಲ್ಪಡು ತ್ತಾನೋ ಆ ಮನುಷ್ಯನಿಗೆ ಅಯ್ಯೋ! ಆ ಮನುಷ್ಯನು ಹುಟ್ಟದೆಹೋಗಿದ್ದರೆ ಅವನಿಗೆ ಒಳ್ಳೇದಾಗುತ್ತಿತ್ತು ಎಂದು ಹೇಳಿದನು.
21 Pois o Filho do Homem vai, como está escrito a seu respeito; mas ai daquele por intermédio de quem o Filho do Homem está sendo traído! Melhor lhe fora não haver nascido!
22 ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ಆಶೀರ್ವದಿಸಿ ಮುರಿದು ಅವರಿಗೆ ಕೊಟ್ಟು--ತಕ್ಕೊಳ್ಳಿರಿ, ತಿನ್ನಿರಿ; ಇದು ನನ್ನ ದೇಹ ಅಂದನು.
22 E, enquanto comiam, tomou Jesus um pão e, abençoando-o, o partiu e lhes deu, dizendo: Tomai, isto é o meu corpo.
23 ತರುವಾಯ ಆತನು ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟನು; ಅವರೆಲ್ಲರೂ ಅದರಲ್ಲಿ ಕುಡಿದರು.
23 A seguir, tomou Jesus um cálice e, tendo dado graças, o deu aos seus discípulos; e todos beberam dele.
24 ಆಗ ಆತನು ಅವರಿಗೆ--ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ಹೊಸಒಡಂಬಡಿಕೆಯ ನನ್ನ ರಕ್ತ.
24 Então, lhes disse: Isto é o meu sangue, o sangue da [nova] aliança, derramado em favor de muitos.
25 ಇದಲ್ಲದೆ ನಾನು ದೇವರ ರಾಜ್ಯದಲ್ಲಿ ಇದನ್ನು ಹೊಸದಾಗಿ ಕುಡಿಯುವ ಆ ದಿನದ ವರೆಗೆ ಇನ್ನು ಮೇಲೆ ದ್ರಾಕ್ಷಾರಸವನ್ನು ನಾನು ಕುಡಿಯುವದೇ ಇಲ್ಲವೆಂದು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
25 Em verdade vos digo que jamais beberei do fruto da videira, até àquele dia em que o hei de beber, novo, no reino de Deus.
26 ಬಳಿಕ ಅವರು ಒಂದು ಸಂಗೀತ ಹಾಡಿ ಎಣ್ಣೇ ಮರಗಳ ಗುಡ್ಡಕ್ಕೆ ಹೊರಟುಹೋದರು.
26 Tendo cantado um hino, saíram para o monte das Oliveiras.
27 ಆಗ ಯೇಸು ಅವರಿಗೆ--ಈ ರಾತ್ರಿ ನೀವೆಲ್ಲರೂ ನನ್ನ ದೆಸೆಯಿಂದ ಅಭ್ಯಂತರಪಡುವಿರಿ; ಯಾಕಂದರೆನಾನು ಕುರುಬನನ್ನು ಹೊಡೆಯುವೆನು, ಕುರಿಗಳು ಚದರಿಸಲ್ಪ ಡುವವು ಎಂದು ಬರೆದದೆ.
27 Então, lhes disse Jesus: Todos vós vos escandalizareis, porque está escrito:
28 ಆದರೆ ನಾನು ಎದ್ದ ಮೇಲೆ ನಿಮಗಿಂತ ಮುಂದಾಗಿ ಗಲಿಲಾಯಕ್ಕೆ ಹೋಗು ವೆನು ಎಂದು ಹೇಳಿದನು.
28 Mas, depois da minha ressurreição, irei adiante de vós para a Galileia.
29 ಆದರೆ ಪೇತ್ರನು ಆತ ನಿಗೆ ಎಲ್ಲರೂ ಅಭ್ಯಂತರಪಟ್ಟಾಗ್ಯೂ ನಾನು ಅಭ್ಯಂತರ ಪಡುವದಿಲ್ಲ ಎಂದು ಹೇಳಿದನು.
29 Disse-lhe Pedro: Ainda que todos se escandalizem, eu, jamais!
30 ಆದರೆ ಯೇಸು ಅವನಿಗೆ--ಈ ದಿವಸ ಈ ರಾತ್ರಿಯೇ ಎರಡು ಸಾರಿ ಹುಂಜ ಕೂಗುವದಕ್ಕಿಂತ ಮೊದಲು ಮೂರು ಸಾರಿ ನೀನು ನನ್ನನ್ನು ಅಲ್ಲಗಳೆಯುವಿ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ ಅಂದನು.
30 Respondeu-lhe Jesus: Em verdade te digo que hoje, nesta noite, antes que duas vezes cante o galo, tu me negarás três vezes.
31 ಆದರೆ ಅವನು--ನಾನು ನಿನ್ನ ಸಂಗಡ ಸಾಯಬೇಕಾದರೂ ನಿನ್ನನ್ನು ಅಲ್ಲಗಳೆಯುವದಿಲ್ಲ ಎಂದು ಬಹು ಆವೇಶದಿಂದ ಹೇಳಿದನು. ಅದರಂತೆಯೇ ಅವರೆಲ್ಲರೂ ಹೇಳಿದರು.
31 Mas ele insistia com mais veemência: Ainda que me seja necessário morrer contigo, de nenhum modo te negarei. Assim disseram todos.
32 ಆಗ ಅವರು ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದಾಗ ಆತನು ತನ್ನ ಶಿಷ್ಯರಿಗೆ--ನಾನು ಪ್ರಾರ್ಥನೆ ಮಾಡು ವಾಗ ನೀವು ಇಲ್ಲಿ ಕೂತುಕೊಂಡಿರ್ರಿ ಅಂದನು.
32 Então, foram a um lugar chamado Getsêmani; ali chegados, disse Jesus a seus discípulos: Assentai-vos aqui, enquanto eu vou orar.
33 ಆತನು ಪೇತ್ರ ಯಾಕೋಬ ಯೋಹಾನರನ್ನು ತನ್ನೊಂದಿಗೆ ಕರಕೊಂಡು ಹೋಗಿ ಅತಿವಿಸ್ಮಯಗೊಂಡು ಬಹಳ ಮನಗುಂದಿದವನಾಗಿ--
33 E, levando consigo a Pedro, Tiago e João, começou a sentir-se tomado de pavor e de angústia.
34 ನನ್ನ ಪ್ರಾಣವು ಸಾಯುವಷ್ಟು ಅತ್ಯಧಿಕವಾದ ದುಃಖಕ್ಕೆ ಒಳಗಾಗಿದೆ; ನೀವು ಇಲ್ಲಿಯೇ ಕಾದುಕೊಂಡಿದ್ದು ಎಚ್ಚರವಾಗಿರ್ರಿ ಅಂದನು.
34 E lhes disse: A minha alma está profundamente triste até à morte; ficai aqui e vigiai.
35 ಆತನು ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಬಿದ್ದು ಸಾಧ್ಯವಾದರೆ ಆ ಗಳಿಗೆಯು ತನ್ನಿಂದ ದಾಟಿ ಹೋಗುವಂತೆ ಪ್ರಾರ್ಥಿಸಿದನು.
35 E, adiantando-se um pouco, prostrou-se em terra; e orava para que, se possível, lhe fosse poupada aquela hora.
36 ಆತನು --ಅಪ್ಪಾ, ತಂದೆಯೇ, ಎಲ್ಲವುಗಳು ನಿನಗೆ ಸಾಧ್ಯವಾಗಿವೆ; ಈ ಪಾತ್ರೆಯನ್ನು ನನ್ನಿಂದ ತೆಗೆದುಬಿಡು; ಆದರೂ ನನ್ನ ಚಿತ್ತದಂತಲ್ಲ, ನಿನ್ನ ಚಿತ್ತದಂತೆಯೇ ಆಗಲಿ ಎಂದು ಹೇಳಿದನು.
36 E dizia: Aba, Pai, tudo te é possível; passa de mim este cálice; contudo, não seja o que eu quero, e sim o que tu queres.
37 ತರುವಾಯ ಆತನು ಬಂದು ಅವರು ನಿದ್ರೆಮಾಡುವದನ್ನು ಕಂಡು ಪೇತ್ರನಿಗೆ--ಸೀಮೋನನೇ, ನೀನು ನಿದ್ರೆಮಾಡು ತ್ತೀಯಾ? ಒಂದು ಗಳಿಗೆಯಾದರೂ ಎಚ್ಚರವಾಗಿ ರಲಾರೆಯಾ?
37 Voltando, achou-os dormindo; e disse a Pedro: Simão, tu dormes? Não pudeste vigiar nem uma hora?
38 ನೀವು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವು ನಿಜವಾಗಿಯೂ ಸಿದ್ಧವಾಗಿದೆ; ಆದರೆ ಶರೀರವು ಬಲಹೀನವಾಗಿದೆ ಎಂದು ಹೇಳಿದನು.
38 Vigiai e orai, para que não entreis em tentação; o espírito, na verdade, está pronto, mas a carne é fraca.
39 ಆತನು ತಿರಿಗಿ ಹೊರಟು ಹೋಗಿ ಅದೇ ಮಾತುಗಳನ್ನು ಹೇಳುತ್ತಾ ಪ್ರಾರ್ಥಿಸಿ ದನು.
39 Retirando-se de novo, orou repetindo as mesmas palavras.
40 ಆತನು ಹಿಂತಿರುಗಿದಾಗ ಅವರು ತಿರಿಗಿ ನಿದ್ರೆ ಮಾಡುವದನ್ನು ಕಂಡನು; (ಯಾಕಂದರೆ ಅವರ ಕಣ್ಣುಗಳು ಭಾರವಾಗಿದ್ದವು;) ಆತನಿಗೆ ಅವರು ಏನು ಉತ್ತರ ಕೊಡಬೇಕೋ ತಿಳಿಯಲಿಲ್ಲ.
40 Voltando, achou-os outra vez dormindo, porque os seus olhos estavam pesados; e não sabiam o que lhe responder.
41 ಆತನು ಮೂರನೆಯ ಸಾರಿ ಬಂದು ಅವರಿಗೆ-- ಈಗ ನಿದ್ರೆ ಮಾಡಿ ನಿಮ್ಮ ವಿಶ್ರಾಂತಿಯನ್ನು ತೆಗೆದುಕೊಳ್ಳಿರಿ; ಇನ್ನು ಸಾಕು; ಗಳಿಗೆ ಬಂದಿದೆ; ಇಗೋ, ಮನುಷ್ಯ ಕುಮಾರನು ಪಾಪಿಗಳ ಕೈಗಳಿಗೆ ಹಿಡುಕೊಡಲ್ಪಡುತ್ತಾನೆ;
41 E veio pela terceira vez e disse-lhes: Ainda dormis e repousais! Basta! Chegou a hora; o Filho do Homem está sendo entregue nas mãos dos pecadores.
42 ಏಳಿರಿ, ನಾವು ಹೋಗೋಣ; ಇಗೋ ನನ್ನನ್ನು ಹಿಡುಕೊಡುವವನು ಸವಿಾಪದಲ್ಲಿದ್ದಾನೆ ಎಂದು ಹೇಳಿದನು.
42 Levantai-vos, vamos! Eis que o traidor se aproxima.
43 ಆತನು ಇನ್ನೂ ಮಾತನಾಡುತ್ತಿರುವಾಗಲೇ ಹನ್ನೆ ರಡು ಮಂದಿಯಲ್ಲಿ ಒಬ್ಬನಾದ ಯೂದನು ಬಂದನು; ಪ್ರಧಾನ ಯಾಜಕರ ಶಾಸ್ತ್ರಿಗಳ ಮತ್ತು ಹಿರಿಯರ ಕಡೆ ಯಿಂದ ಬಂದಿದ್ದ ಜನರ ದೊಡ್ಡ ಸಮೂಹವು ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡು ಅವನ ಕೂಡ ಬಂದರು.
43 E logo, falava ele ainda, quando chegou Judas, um dos doze, e com ele, vinda da parte dos principais sacerdotes, escribas e anciãos, uma turba com espadas e porretes.
44 ಇದಲ್ಲದೆ ಆತನನ್ನು ಹಿಡುಕೊಡುವವನು ಅವರಿಗೆ--ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಆತನನ್ನು ಹಿಡಿದು ಭದ್ರವಾಗಿ ತೆಗೆದುಕೊಂಡು ಹೋಗಿರಿ ಎಂದು ಗುರುತು ಹೇಳಿಕೊಟ್ಟಿದ್ದನು.
44 Ora, o traidor tinha-lhes dado esta senha: Aquele a quem eu beijar, é esse; prendei-o e levai-o com segurança.
45 ಅವನು ಬಂದ ಕೂಡಲೆ ನೇರವಾಗಿ ಆತನ ಕಡೆಗೆ ಹೋಗಿ-- ಗುರುವೇ, ಗುರುವೇ ಎಂದು ಹೇಳಿ ಆತನಿಗೆ ಮುದ್ದಿಟ್ಟನು.
45 E, logo que chegou, aproximando-se, disse-lhe: Mestre! E o beijou.
46 ಆಗ ಅವರು ಆತನ ಮೇಲೆ ಕೈ ಹಾಕಿ ಆತನನ್ನು ಹಿಡಿದರು.
46 Então, lhe deitaram as mãos e o prenderam.
47 ಆದರೆ ಹತ್ತಿರ ನಿಂತಿದ್ದ ವರಲ್ಲಿ ಒಬ್ಬನು ಕತ್ತಿಯನ್ನು ಹಿರಿದು ಪ್ರಧಾನ ಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕಡಿದುಹಾಕಿ ದನು.
47 Nisto, um dos circunstantes, sacando da espada, feriu o servo do sumo sacerdote e cortou-lhe a orelha.
48 ಯೇಸು ಅವರಿಗೆ-- ಕತ್ತಿಗಳನ್ನು ಮತ್ತು ದೊಣ್ಣೆಗಳನ್ನು ತಕ್ಕೊಂಡು ಕಳ್ಳನಿಗೆ ವಿರೋಧವಾಗಿ ಬರುವಂತೆ ನನ್ನನ್ನು ಹಿಡಿಯುವದಕ್ಕಾಗಿ ಬಂದಿರಾ?
48 Disse-lhes Jesus: Saístes com espadas e porretes para prender-me, como a um salteador?
49 ನಾನು ಪ್ರತಿ ದಿನವೂ ದೇವಾಲಯದಲ್ಲಿ ಬೋಧಿ ಸುತ್ತಾ ನಿಮ್ಮ ಸಂಗಡ ಇದ್ದೆನು; ಆಗ ನೀವು ನನ್ನನು ಹಿಡಿಯಲಿಲ್ಲ; ಆದರೆ ಬರಹಗಳು ನೆರವೇರಲೇಬೇಕು ಅಂದನು.
49 Todos os dias eu estava convosco no templo, ensinando, e não me prendestes; contudo, é para que se cumpram as Escrituras.
50 ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.
50 Então, deixando-o, todos fugiram.
51 ಅಲ್ಲಿ ಒಬ್ಬಾನೊಬ್ಬ ಯೌವನಸ್ಥನು ಬರೀ ಮೈಮೇಲೆ ನಾರು ಬಟ್ಟೆಯನ್ನು ಹಾಕಿಕೊಂಡವನಾಗಿ ಆತನನ್ನು ಹಿಂಬಾಲಿಸುತ್ತಿರಲು ಯೌವನಸ್ಥರು ಅವನನ್ನು ಹಿಡಿದರು.
51 Seguia-o um jovem, coberto unicamente com um lençol, e lançaram-lhe a mão.
52 ಆಗ ಅವನು ಆ ನಾರುಮಡಿಯನ್ನು ಬಿಟ್ಟು ಬರೀ ಮೈಯಲ್ಲಿ ಓಡಿಹೋದನು.
52 Mas ele, largando o lençol, fugiu desnudo.
53 ಇದಾದ ಮೇಲೆ ಅವರು ಯೇಸುವನ್ನು ಮಹಾ ಯಾಜಕನ ಬಳಿಗೆ ತೆಗೆದುಕೊಂಡು ಹೋದರು; ಆತನ ಸಂಗಡ ಪ್ರಧಾನ ಯಾಜಕರೆಲ್ಲರೂ ಹಿರಿಯರೂ ಶಾಸ್ತ್ರಿಗಳೂ ಅವನ ಬಳಿಗೆ ಕೂಡಿ ಬಂದರು.
53 E levaram Jesus ao sumo sacerdote, e reuniram-se todos os principais sacerdotes, os anciãos e os escribas.
54 ಆದರೆ ಪೇತ್ರನು ಮಹಾಯಾಜಕನ ಭವನದವರೆಗೂ ದೂರ ದಿಂದ ಆತನನ್ನು ಹಿಂಬಾಲಿಸಿ ಆಳುಗಳ ಸಂಗಡ ಕೂತುಕೊಂಡು ಬೆಂಕಿಯ ಹತ್ತಿರ ಚಳಿ ಕಾಯಿಸಿಕೊಳ್ಳು ತ್ತಿದ್ದನು.
54 Pedro seguira-o de longe até ao interior do pátio do sumo sacerdote e estava assentado entre os serventuários, aquentando-se ao fogo.
55 ಪ್ರಧಾನಯಾಜಕರೂ ನ್ಯಾಯಸಭೆಯವ ರೆಲ್ಲರೂ ಯೇಸುವನ್ನು ಕೊಲ್ಲಿಸಬೇಕೆಂದು ಆತನಿಗೆ ವಿರೋಧವಾಗಿ ಸಾಕ್ಷಿಯನ್ನು ಹುಡುಕಿ ಏನೂ ಕಂಡು ಕೊಳ್ಳಲಿಲ್ಲ.
55 E os principais sacerdotes e todo o Sinédrio procuravam algum testemunho contra Jesus para o condenar à morte e não achavam.
56 ಅನೇಕರು ಆತನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳಿದರೂ ಅವರ ಸಾಕ್ಷಿಯು ಒಂದ ಕ್ಕೊಂದು ಒಪ್ಪಲಿಲ್ಲ.
56 Pois muitos testemunhavam falsamente contra Jesus, mas os depoimentos não eram coerentes.
57 ತರುವಾಯ ಕೆಲವರು ಎದ್ದು ಆತನಿಗೆ ವಿರೋಧವಾಗಿ ಸಾಕ್ಷಿ ಹೇಳುತ್ತಾ--
57 E, levantando-se alguns, testificavam falsamente, dizendo:
58 ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದನ್ನು ಮೂರು ದಿನಗಳಲ್ಲಿ ಕಟ್ಟುವೆನು ಎಂದು ಈತನು ಹೇಳಿದ್ದನ್ನು ನಾವು ಕೇಳಿಸಿಕೊಂಡಿದ್ದೇವೆ ಅಂದರು.
58 Nós o ouvimos declarar: Eu destruirei este santuário edificado por mãos humanas e, em três dias, construirei outro, não por mãos humanas.
59 ಹೀಗಿದ್ದರೂ ಅವರ ಸಾಕ್ಷಿ ಒಂದಕ್ಕೊಂದು ಒಪ್ಪಿಗೆಯಾಗಲಿಲ್ಲ.
59 Nem assim o testemunho deles era coerente.
60 ಆಗ ಮಹಾಯಾಜಕನು ಎದ್ದು ನಡುವೆ ನಿಂತು ಯೇಸುವಿಗೆ--ನೀನು ಏನೂ ಉತ್ತರಕೊಡುವದಿ ಲ್ಲವೋ? ಇವರು ನಿನಗೆ ವಿರೋಧವಾಗಿ ಹೇಳುವ ಈ ಸಾಕ್ಷಿ ಏನು ಎಂದು ಕೇಳಿದನು.
60 Levantando-se o sumo sacerdote, no meio, perguntou a Jesus: Nada respondes ao que estes depõem contra ti?
61 ಆದರೆ ಆತನು ಏನೂ ಉತ್ತರ ಕೊಡದೆ ಮೌನವಾಗಿದ್ದನು; ತಿರಿಗಿ ಮಹಾಯಾಜಕನು--ನೀನು ಆ ಕ್ರಿಸ್ತನೋ? ಸ್ತುತಿಹೊಂದುವಾತನ ಕುಮಾರನೋ ಎಂದು ಆತನನ್ನು ಕೇಳಿದನು.
61 Ele, porém, guardou silêncio e nada respondeu. Tornou a interrogá-lo o sumo sacerdote e lhe disse: És tu o Cristo, o Filho do Deus Bendito?
62 ಅದಕ್ಕೆ ಯೇಸು--ನಾನೇ, ಇದಲ್ಲದೆ ಮನುಷ್ಯಕುಮಾರನು ಸರ್ವಶಕ್ತನ ಬಲಪಾರ್ಶ್ವದಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳಲ್ಲಿ ಬರುವದನ್ನೂ ನೀವು ನೋಡುವಿರಿ ಅಂದನು.
62 Jesus respondeu: Eu sou, e vereis o Filho do Homem assentado à direita do Todo-Poderoso e vindo com as nuvens do céu.
63 ಅದಕ್ಕೆ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು--ನಮಗೆ ಇನ್ನು ಹೆಚ್ಚು ಸಾಕ್ಷಿಗಳ ಅವಶ್ಯಕತೆ ಏನಿದೆ?
63 Então, o sumo sacerdote rasgou as suas vestes e disse: Que mais necessidade temos de testemunhas?
64 ನೀವು ಈ ದೇವದೂಷಣೆಯನ್ನು ಕೇಳಿದ್ದೀರಲ್ಲಾ; ನಿಮಗೆ ಹೇಗೆ ತೋರುತ್ತದೆ ಎಂದು ಕೇಳಲು ಅವರೆಲ್ಲರೂ ಅವನು ಮರಣದಂಡನೆ ಹೊಂದತಕ್ಕವನು ಎಂದು ತೀರ್ಪುಮಾಡಿದರು
64 Ouvistes a blasfêmia; que vos parece? E todos o julgaram réu de morte.
65 ತರು ವಾಯ ಕೆಲವರು ಆತನ ಮೇಲೆ ಉಗುಳಿ ಆತನ ಮುಖವನ್ನು ಮುಚ್ಚಿ ಆತನನ್ನು ಗುದ್ದುವದಕ್ಕೆ ಆರಂಭಿಸಿ ಆತನಿಗೆ--ಪ್ರವಾದನೆ ಹೇಳು ಅಂದರು. ಆಳು ಗಳು ಆತನನ್ನು ಹೊಡೆದರು.
65 Puseram-se alguns a cuspir nele, a cobrir-lhe o rosto, a dar-lhe murros e a dizer-lhe: Profetiza! E os guardas o tomaram a bofetadas.
66 ಇದಲ್ಲದೆ ಪೇತ್ರನು ಭವನದ ಕೆಳಭಾಗದಲ್ಲಿದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಅಲ್ಲಿಗೆ ಬಂದಳು.
66 Estando Pedro embaixo no pátio, veio uma das criadas do sumo sacerdote
67 ಪೇತ್ರನು ಚಳಿಕಾಯಿಸಿಕೊಳ್ಳುತ್ತಿರು ವದನ್ನು ಆಕೆಯು ಕಂಡು ಅವನನ್ನು ದೃಷ್ಟಿಸಿ ನೋಡಿ--ನೀನು ಸಹ ಆ ನಜರೇತಿನ ಯೇಸುವಿ ನೊಂದಿಗೆ ಇದ್ದವನು ಅಂದಳು.
67 e, vendo a Pedro, que se aquentava, fixou-o e disse: Tu também estavas com Jesus, o Nazareno.
68 ಆದರೆ ಅವನು ಅಲ್ಲಗಳೆದು--ನನಗೆ ಗೊತ್ತಿಲ್ಲ, ನೀನು ಏನು ಹೇಳುತ್ತೀಯೋ ನನಗೆ ತಿಳಿಯುವದಿಲ್ಲ ಎಂದು ಹೇಳಿ ಅಲ್ಲಗಳೆದು ಹೊರಗೆ ದ್ವಾರಾಂಗಳದೊಳಗೆ ಹೋದನು; ಆಗ ಹುಂಜ ಕೂಗಿತು.
68 Mas ele o negou, dizendo: Não o conheço, nem compreendo o que dizes. E saiu para o alpendre. [E o galo cantou.]
69 ಆ ದಾಸಿಯು ಅವನನ್ನು ತಿರಿಗಿ ನೋಡಿ ಪಕ್ಕದಲ್ಲಿ ನಿಂತಿದ್ದವರಿಗೆ--ಇವನು ಅವರಲ್ಲಿ ಒಬ್ಬನು ಎಂದು ಹೇಳಲಾರಂಭಿಸಿದಳು.
69 E a criada, vendo-o, tornou a dizer aos circunstantes: Este é um deles.
70 ಆಗ ಅವನು ಮತ್ತೆ ಅಲ್ಲಗಳೆದನು. ತುಸು ಹೊತ್ತಾದ ಮೇಲೆ ಪಕ್ಕದಲ್ಲಿ ನಿಂತಿದ್ದವರು ತಿರಿಗಿ ಪೇತ್ರನಿಗೆ--ನಿಶ್ಚಯವಾಗಿಯೂ ನೀನು ಅವರಲ್ಲಿ ಒಬ್ಬನು; ಯಾಕಂದರೆ ನೀನು ಗಲಿಲಾಯದವನು ಮತ್ತು ನಿನ್ನ ಭಾಷೆ ಅದಕ್ಕೆ ಒಪ್ಪುತ್ತದೆ ಅಂದರು.
70 Mas ele outra vez o negou. E, pouco depois, os que ali estavam disseram a Pedro: Verdadeiramente, és um deles, porque também tu és galileu.
71 ಆದರೆ ಅವನು ಶಪಿಸಿ ಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಆರಂ ಭಿಸಿ--ನೀವು ಮಾತನಾಡುತ್ತಿರುವ ಈ ಮನುಷ್ಯನನ್ನು ನಾನರಿಯೆ ಅಂದನು.
71 Ele, porém, começou a praguejar e a jurar: Não conheço esse homem de quem falais!
72 ಆಗ ಎರಡನೇ ಸಾರಿ ಹುಂಜ ಕೂಗಿತು. ಹೀಗೆ--ಎರಡು ಸಾರಿ ಹುಂಜ ಕೂಗುವದಕ್ಕಿಂತ ಮುಂಚಿತವಾಗಿ ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವಿ ಎಂದು ಯೇಸು ತನಗೆ ಹೇಳಿದ ಮಾತನ್ನು ಪೇತ್ರನು ಜ್ಞಾಪಕಮಾಡಿಕೊಂಡು ಅದನ್ನು ಯೋಚಿಸಿ ಅತ್ತನು.
72 E logo cantou o galo pela segunda vez. Então, Pedro se lembrou da palavra que Jesus lhe dissera: Antes que duas vezes cante o galo, tu me negarás três vezes. E, caindo em si, desatou a chorar.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Marcos 14, comparar traduções ou montar um estudo — tudo direto pelo WhatsApp.