Marcos 12

Kannada Bible (GL_KANNADA) vs NAA

Sair da comparação
NAA Nova Almeida Atualizada 2017
1 ಇದಾದ ಮೇಲೆ ಆತನು ಸಾಮ್ಯಗಳಿಂದ ಮಾತನಾಡಲು ಪ್ರಾರಂಭಿಸಿದನು. ಒಬ್ಬಾ ನೊಬ್ಬ ಮನುಷ್ಯನು ಒಂದು ದ್ರಾಕ್ಷೇತೋಟವನ್ನು ಮಾಡಿ ಸುತ್ತಲೂ ಬೇಲಿಹಾಕಿ ದ್ರಾಕ್ಷೆಯ ಅಲೆಗಾಗಿ ಅಗೆದು ಗೋಪುರ ಕಟ್ಟಿ ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ದೂರದೇಶಕ್ಕೆ ಹೊರಟುಹೋದನು.
1 Depois Jesus começou a falar-lhes por parábola:
2 ಫಲದ ಕಾಲ ದಲ್ಲಿ ಅವನು ದ್ರಾಕ್ಷೇ ತೋಟದ ಫಲವನ್ನು ಒಕ್ಕಲಿಗ ರಿಂದ ಪಡೆಯುವದಕ್ಕಾಗಿ ಅವರ ಬಳಿಗೆ ಒಬ್ಬ ಸೇವಕ ನನ್ನು ಕಳುಹಿಸಿದನು.
2 No tempo da colheita, mandou um servo para que recebesse dos lavradores a sua parte dos frutos da vinha.
3 ಆದರೆ ಅವರು ಅವನನ್ನು ಹಿಡಿದು ಹೊಡೆದು ಬರಿದಾಗಿ ಕಳುಹಿಸಿಬಿಟ್ಟರು.
3 Mas os lavradores o agarraram, espancaram e o despacharam de mãos vazias.
4 ತಿರಿಗಿ ಅವನು ಮತ್ತೊಬ್ಬ ಸೇವಕನನ್ನು ಅವರ ಬಳಿಗೆ ಕಳುಹಿಸಿದಾಗ ಅವರು ಅವನ ಮೇಲೆ ಕಲ್ಲುಗಳನ್ನು ಎಸೆದು ತಲೆಯನ್ನು ಗಾಯಪಡಿಸಿ ಅವಮಾನದಿಂದ ವರ್ತಿಸಿ ಅವನನ್ನು ಕಳುಹಿಸಿಬಿಟ್ಟರು.
4 De novo, enviou-lhes outro servo, e eles bateram na cabeça dele e o insultaram.
5 ಅವನು ಮತ್ತೆ ಇನ್ನೊಬ್ಬನನ್ನು ಕಳುಹಿಸಿದಾಗ ಅವನನ್ನೂ ಕೊಂದರು. ಇನ್ನೂ ಆನೇಕರನ್ನು ಕಳುಹಿಸಿದನು. ಅವರಲ್ಲಿ ಕೆಲವ ರನ್ನು ಹೊಡೆದರು; ಕೆಲವರನ್ನು ಕೊಂದು ಹಾಕಿದರು.
5 Mandou ainda outro servo, e a este mataram. Muitos outros lhes enviou, dos quais espancaram uns e mataram outros.
6 ಕಡೆಯದಾಗಿ ತನಗೆ ಇನ್ನು ಅತಿ ಪ್ರಿಯನಾಗಿದ್ದ ಒಬ್ಬನೇ ಮಗನಿರಲಾಗಿ--ಅವರು ನನ್ನ ಮಗನಿಗಾದರೂ ಗೌರವ ಸಲ್ಲಿಸಾರು ಎಂದು ಅಂದುಕೊಂಡು ಅವನನ್ನು ಸಹ ಅವರ ಬಳಿಗೆ ಕಳುಹಿಸಿದನು.
6 — Restava-lhe ainda um: o seu filho amado. Por fim, mandou o filho, pensando: “O meu filho eles respeitarão.”
7 ಆದರೆ ಆ ಒಕ್ಕಲಿಗರು--ಇವನೇ ಬಾದ್ಯಸ್ಥನು; ಬನ್ನಿರಿ, ಇವನನ್ನು ನಾವು ಕೊಂದುಹಾಕೋಣ; ಆಗ ಸ್ವಾಸ್ಥ್ಯವು ನಮ್ಮದಾ ಗುವದು ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು.
7 Mas os tais lavradores disseram entre si: “Este é o herdeiro; venham, vamos matá-lo, e a herança será nossa.”
8 ಅವರು ಅವನನ್ನು ಹಿಡಿದು ಕೊಂದು ಹಾಕಿ ದ್ರಾಕ್ಷೇತೋಟದ ಹೊರಗೆ ಬಿಸಾಡಿದರು.
8 E, agarrando o filho, mataram-no e o lançaram fora da vinha.
9 ಹಾಗಾದರೆ ದ್ರಾಕ್ಷೇತೋಟದ ದಣಿಯು ಏನು ಮಾಡಿಯಾನು? ಅವನು ಬಂದು ಆ ಒಕ್ಕಲಿಗರನ್ನು ಸಂಹಾರಮಾಡಿ ದ್ರಾಕ್ಷೇತೋಟವನ್ನು ಬೇರೆಯವರಿಗೆ ಕೊಡುವನು.
9 — Que fará, pois, o dono da vinha? Virá, exterminará aqueles lavradores e entregará a vinha a outros.
10 ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
10 Vocês ainda não leram este trecho da Escritura:
11 ಇದು ಕರ್ತನ ಕೆಲಸವೇ ಆಗಿತ್ತು. ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿದೆಯಲ್ಲಾ ಎಂಬ ಈ ಬರಹವನ್ನು ನೀವು ಓದಲಿಲ್ಲವೋ ಎಂದು ಹೇಳಿದನು.
11 Isto procede do Senhor
12 ಆಗ ಆತನು ತಮಗೆ ವಿರೋಧವಾಗಿ ಈ ಸಾಮ್ಯವನ್ನು ಹೇಳಿದನೆಂದು ಅವರು ತಿಳಿದು ಆತನನ್ನು ಹಿಡಿಯುವದಕ್ಕೆ ಸಂದರ್ಭ ನೋಡಿದರು. ಆದರೆ ಅವರು ಜನರಿಗೆ ಹೆದರಿದರು. ಅವರು ಆತನನ್ನು ಬಿಟ್ಟು ಹೊರಟು ಹೋದರು.
12 E procuravam prender Jesus, porque entenderam que ele havia contado essa parábola contra eles; mas temiam o povo. Então eles o deixaram e foram embora.
13 ಅವರು ಆತನನ್ನು ಆತನ ಮಾತುಗಳಲ್ಲಿ ಹಿಡಿಯಬೇಕೆಂದು ಫರಿಸಾಯರಲ್ಲಿಯೂ ಹೆರೋದ್ಯ ರಲ್ಲಿಯೂ ಕೆಲವರನ್ನು ಆತನ ಬಳಿಗೆ ಕಳುಹಿಸಿದರು.
13 E enviaram a Jesus alguns dos fariseus e dos herodianos, para que o apanhassem em alguma palavra.
14 ಅವರು ಬಂದು ಆತನಿಗೆ--ಬೋಧಕನೇ, ನೀನು ಸತ್ಯವಂತನೂ ಯಾವ ಮನುಷ್ಯನನ್ನು ಲಕ್ಷಿಸದವನೂ ಎಂದು ನಮಗೆ ತಿಳಿದದೆ; ಯಾಕಂದರೆ ನೀನು ಮನುಷ್ಯರ ಮುಖದಾಕ್ಷಿಣ್ಯ ಮಾಡದೆ ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುತ್ತೀ; ಕೈಸರನಿಗೆ ಕಪ್ಪಕೊಡುವದು ನ್ಯಾಯವೋ, ನ್ಯಾಯವಲ್ಲವೋ?
14 Chegando, disseram-lhe: — Mestre, sabemos que o senhor é verdadeiro e não se importa com a opinião dos outros, porque não olha a aparência das pessoas, mas, segundo a verdade, ensina o caminho de Deus; é lícito pagar imposto a César ou não? Devemos ou não devemos pagar?
15 ನಾವು ಕೊಡಬೇಕೋ ಇಲ್ಲವೆ ಕೊಡಬಾರದೋ ಎಂದು ಕೇಳಿದರು. ಆದರೆ ಆತನು ಅವರ ಕಪಟವನ್ನು ತಿಳಿದು ಅವರಿಗೆ--ನೀವು ನನ್ನನ್ನು ಯಾಕೆ ಶೋಧಿ ಸುತ್ತೀರಿ? ಒಂದು ನಾಣ್ಯವನ್ನು ತಂದು ನನಗೆ ತೋರಿಸಿರಿ ಎಂದು ಹೇಳಿದನು.
15 Mas Jesus, percebendo a hipocrisia deles, respondeu:
16 ಅವರು ಅದನ್ನು ತಂದಾಗ ಆತನು ಅವರಿಗೆ--ಇದರ ರೂಪವು ಮತ್ತು ಮೇಲ್ಬರಹವು ಯಾರದು ಎಂದು ಕೇಳಿದ್ದಕ್ಕೆ ಅವರು ಆತನಿಗೆ--ಕೈಸರನದು ಎಂದು ಉತ್ತರ ಕೊಟ್ಟರು.
16 Eles trouxeram. E Jesus lhes perguntou: Eles responderam: — De César.
17 ಆಗ ಯೇಸು ಪ್ರತ್ಯುತ್ತರವಾಗಿ ಅವ ರಿಗೆ--ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ ಎಂದು ಹೇಳಿದನು. ಇದಕ್ಕೆ ಅವರು ಆತನ ವಿಷಯದಲ್ಲಿ ಆಶ್ಚರ್ಯಪಟ್ಟರು.
17 Então Jesus disse: E muito se admiraram dele.
18 ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಆತನ ಬಳಿಗೆ ಬಂದು ಆತನನ್ನು ಕೇಳಿದ್ದೇನಂದರೆ--
18 Então alguns saduceus, que dizem não haver ressurreição, aproximaram-se de Jesus e lhe perguntaram:
19 ಬೋಧಕನೇ, ಒಬ್ಬ ಮನುಷ್ಯನ ಸಹೋದರನು ಮಕ್ಕಳಿಲ್ಲದೆ ಹೆಂಡತಿಯನ್ನು ಬಿಟ್ಟು ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ತಕ್ಕೊಂಡು ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕು ಎಂದು ಮೋಶೆಯು ನಮಗೆ ಬರೆದಿರು ತ್ತಾನಷ್ಟೆ.
19 — Mestre, Moisés nos deixou escrito que, se um homem morrer e deixar mulher sem filhos, o irmão desse homem deve casar com a viúva e gerar descendentes para o falecido.
20 ಈಗ ಏಳು ಮಂದಿ ಸಹೋದರರಿದ್ದರು; ಮೊದಲನೆಯವನು ಮದುವೆಯಾಗಿ ಸಂತಾನವಿಲ್ಲದೆ ಸತ್ತನು.
20 Havia sete irmãos. O primeiro casou e morreu sem deixar filhos;
21 ಮತ್ತು ಎರಡನೆಯವನೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಸತ್ತನು; ಅದರಂತೆಯೇ ಮೂರನೆಯವನೂ ಆದನು.
21 o segundo casou com a viúva e morreu, também sem deixar descendência; e o terceiro, da mesma forma.
22 ಹೀಗೆ ಏಳು ಮಂದಿಯೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದವ ರಾದರು; ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು.
22 E, assim, os sete não deixaram descendência. Por fim, depois de todos, morreu também a mulher.
23 ಆದದ ರಿಂದ ಪುನರುತ್ಥಾನದಲ್ಲಿ ಅವರು ಎದ್ದಾಗ ಅವರಲ್ಲಿ ಆಕೆಯು ಯಾರ ಹೆಂಡತಿಯಾಗಿರುವಳು? ಆ ಏಳು ಮಂದಿಗೂ ಆಕೆಯು ಹೆಂಡತಿಯಾಗಿದ್ದಳಲ್ಲಾ ಅಂದರು.
23 Na ressurreição, quando eles ressuscitarem, de qual deles ela será a esposa? Porque os sete casaram com ela.
24 ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನೀವು ಬರಹಗಳನ್ನಾದರೂ ದೇವರಶಕ್ತಿಯನ್ನಾದರೂ ತಿಳಿಯದೆ ಇರುವದರಿಂದ ತಪ್ಪು ಮಾಡುತ್ತೀರಲ್ಲವೋ?
24 Jesus respondeu:
25 ಯಾಕಂ ದರೆ ಅವರು ಸತ್ತವರೊಳಗಿಂದ ಎದ್ದ ಮೇಲೆ ಮದುವೆ ಮಾಡಿಕೊಳ್ಳುವದೂ ಇಲ್ಲ, ಮದುವೆ ಮಾಡಿಕೊಡು ವದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೂತರಂತೆ ಇರುತ್ತಾರೆ.
25 Pois, quando ressuscitarem dentre os mortos, nem casarão, nem se darão em casamento, mas serão como os anjos nos céus.
26 ಸತ್ತವರು ಎದ್ದು ಬರುವದರ ವಿಷಯವಾಗಿ--ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಹೇಗೆ ಮಾತನಾಡಿದನೆಂದು ಮೋಶೆಯ ಗ್ರಂಥದಲ್ಲಿ ನೀವು ಓದಲಿಲ್ಲವೋ?
26 Quanto aos mortos, que eles de fato ressuscitam, vocês nunca leram no Livro de Moisés, no trecho referente à sarça, como Deus lhe falou: “Eu sou o Deus de Abraão, o Deus de Isaque e o Deus de Jacó”?
27 ಯಾಕಂದರೆ ಆತನು ಸತ್ತವರಿಗಲ್ಲ, ಆದರೆ ಜೀವಿತರಿಗೆ ದೇವರಾಗಿದ್ದಾನೆ; ಆದದರಿಂದ ಈ ವಿಷಯದಲ್ಲಿ ನೀವು ಬಹಳವಾಗಿ ತಪ್ಪು ಮಾಡುತ್ತೀರಿ ಎಂದು ಹೇಳಿದನು.
27 Ele não é Deus de mortos, e sim de vivos. Vocês estão completamente enganados.
28 ಆಗ ಶಾಸ್ತ್ರಿಗಳಲ್ಲಿ ಒಬ್ಬನು ಬಂದು ಅವರು ಕೂಡಿ ಕೊಂಡು ತರ್ಕಿಸುತ್ತಿರುವದನ್ನು ಕೇಳಿ ಆತನು ಅವರಿಗೆ ಸರಿಯಾಗಿ ಉತ್ತರವನ್ನು ಕೊಟ್ಟನೆಂದು ತಿಳಿದು ಆತನಿಗೆ --ಎಲ್ಲಾ ದೈವಾಜ್ಞೆಗಳಲ್ಲಿ ಮೊದಲನೆಯದು ಯಾವದು ಎಂದು ಕೇಳಿದನು.
28 Chegando um dos escribas, que ouviu a discussão entre eles e viu que Jesus tinha dado uma boa resposta, perguntou-lhe: — Qual é o principal de todos os mandamentos?
29 ಯೇಸು ಪ್ರತ್ಯುತ್ತರವಾಗಿ ಅವನಿಗೆ--ಎಲ್ಲಾ ದೈವಾಜ್ಞೆಗಳಲ್ಲಿ ಮೊದಲನೆಯದು -- ಓ ಇಸ್ರಾಯೇಲೇ, ಕೇಳು; ನಮ್ಮ ದೇವರಾದ ಕರ್ತನು ಒಬ್ಬನೇ ಕರ್ತನಾಗಿದ್ದಾನೆ.
29 Jesus respondeu:
30 ನೀನು ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಮನಸ್ಸಿನಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು; ಇದು ಮೊದ ಲನೆಯ ದೈವಾಜ್ಞೆಯಾಗಿದೆ.
30 Ame o Senhor, seu Deus, de todo o seu coração, de toda a sua alma, de todo o seu entendimento e com toda a sua força.”
31 ನೀನು ನಿನ್ನ ನೆರೆಯ ವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದು ಅದರಂ ತೆಯೇ ಇರುವ ಎರಡನೆಯ ಆಜ್ಞೆಯಾಗಿದೆ. ಇವುಗಳಿ ಗಿಂತ ಹೆಚ್ಚಿನ ದೈವಾಜ್ಞೆಯು ಮತ್ತೊಂದಿಲ್ಲ ಎಂದು ಹೇಳಿದನು.
31 O segundo é: “Ame o seu próximo como você ama a si mesmo.” Não há outro mandamento maior do que estes.
32 ಅದಕ್ಕೆ ಆ ಶಾಸ್ತ್ರಿಯು ಆತನಿಗೆ --ಬೋಧಕನೇ, ಒಳ್ಳೇದು. ನೀನು ಸತ್ಯವನ್ನೇ ಹೇಳಿದ್ದೀ; ಯಾಕಂದರೆ ದೇವರು ಒಬ್ಬನೇ; ಆತನ ಹೊರತು ಬೇರೊಬ್ಬನು ಇಲ್ಲವೇ ಇಲ್ಲ.
32 Então o escriba disse: — Muito bem, Mestre! E com verdade o senhor disse que ele é o único, e não há outro além dele,
33 ಆತನನ್ನು ಪೂರ್ಣ ಹೃದಯದಿಂದಲೂ ಪೂರ್ಣಗ್ರಹಿಕೆಯಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಿ ತನ್ನ ನೆರೆಯವನನ್ನು ತನ್ನಂತೆಯೇ ಪ್ರೀತಿಸು ವದು ಸಕಲ ದಹನ ಬಲಿಗಳಿಗಿಂತಲೂ ಯಜ್ಞಗಳಿಗಿಂತ ಲೂ ಹೆಚ್ಚಿನದಾಗಿದೆ ಅಂದನು.
33 e que amar a Deus de todo o coração e de todo o entendimento e com todas as forças e amar o próximo como a si mesmo é mais do que todos os holocaustos e sacrifícios.
34 ಅವನು ಬುದ್ಧಿ ಯಿಂದ ಉತ್ತರಕೊಟ್ಟದ್ದನ್ನು ಯೇಸು ಕಂಡು ಅವನಿಗೆ --ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ ಅಂದನು. ಅಂದಿನಿಂದ ಆತನನ್ನು ಪ್ರಶ್ನೆ ಮಾಡುವದಕ್ಕೆ ಯಾವ ಮನುಷ್ಯನಿಗಾದರೂ ಧೈರ್ಯವಿರಲಿಲ್ಲ.
34 Vendo Jesus que o escriba havia respondido sabiamente, declarou-lhe: E ninguém mais ousava fazer perguntas a Jesus.
35 ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ-- ಕ್ರಿಸ್ತನು ದಾವೀದನಕುಮಾರನು ಎಂದು ಶಾಸ್ತ್ರಿಗಳು ಹೇಳುವದು ಹೇಗೆ?
35 Jesus, ensinando no templo, perguntou:
36 ಯಾಕಂದರೆ ದಾವೀದನು ತಾನೇ ಪರಿಶುದ್ಧಾತ್ಮನಿಂದ -- ನಾನು ನಿನ್ನ ವಿರೋಧಿ ಗಳನ್ನು ನಿನ್ನ ಪಾದಪೀಠವಾಗಿ ಮಾಡುವತನಕ ನೀನು ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ಕರ್ತನು ನನ್ನ ಕರ್ತನಿಗೆ ಹೇಳಿದನಲ್ಲಾ ಎಂದು ನುಡಿದಿದ್ದಾನೆ.
36 O próprio Davi falou, pelo Espírito Santo:
37 ಆದದರಿಂದ ದಾವೀದನು ತಾನೇ ಆತನನ್ನು ಕರ್ತ ನೆಂದು ಕರೆಯುವಾಗ ಆತನು ಅವನ ಮಗನಾಗುವದು ಹೇಗೆ ಎಂದು ಹೇಳಿದನು. ಸಾಮಾನ್ಯ ಜನರು ಸಂತೋ ಷದಿಂದ ಆತನ ಮಾತುಗಳನ್ನು ಕೇಳಿದರು.
37 — O próprio Davi chama o Cristo de Senhor; então como ele pode ser filho de Davi? E a grande multidão o ouvia com prazer.
38 ತರುವಾಯ ಆತನು ಬೋಧನೆಯಲ್ಲಿ ಅವರಿಗೆ --ಉದ್ದವಾದ ಅಂಗಿಯನ್ನು ತೊಟ್ಟುಕೊಂಡು ಸಂತೆಯ ಸ್ಥಳಗಳಲ್ಲಿ ವಂದನೆಗಳನ್ನೂ
38 E, ao ensinar, Jesus dizia:
39 ಸಭಾಮಂದಿರಗಳಲ್ಲಿ ಮುಖ್ಯಪೀಠಗಳನ್ನೂ ಔತಣಗಳಲ್ಲಿ ಅತ್ಯುನ್ನತವಾದ ಸ್ಥಳಗಳನ್ನೂ ಪ್ರೀತಿಸುವವರಾದ ಶಾಸ್ತ್ರಿಗಳ ವಿಷಯವಾಗಿ ಎಚ್ಚರವಾಗಿರ್ರಿ;
39 buscam as primeiras cadeiras nas sinagogas e os primeiros lugares nos banquetes;
40 ಇವರು ವಿಧವೆಯರ ಮನೆಗಳನ್ನು ನುಂಗಿ ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ; ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು ಅಂದನು.
40 devoram as casas das viúvas e, para o justificar, fazem longas orações. Estes sofrerão juízo muito mais severo.
41 ಯೇಸು ಬೊಕ್ಕಸದ ಎದುರಾಗಿ ಕೂತುಕೊಂಡು ಜನರು ಹೇಗೆ ಬೊಕ್ಕಸದಲ್ಲಿ ಹಣ ಹಾಕುತ್ತಿದ್ದಾ ರೆಂಬದನ್ನು ನೋಡುತ್ತಿದ್ದನು; ಅನೇಕ ಐಶ್ವರ್ಯವಂತರು ಹೆಚ್ಚೆಚ್ಚಾಗಿ ಹಾಕಿದರು.
41 Sentado diante da caixa de ofertas, Jesus observava como o povo lançava ali o dinheiro. Ora, muitos ricos depositavam grandes quantias.
42 ಆಗ ಅಲ್ಲಿ ಒಬ್ಬ ಬಡ ವಿಧವೆಯು ಬಂದು ಒಂದು ಫಾರ್ದಿಂಗದಷ್ಟು ಎರಡು ನಾಣ್ಯಗಳನ್ನು ಹಾಕಿದಳು.
42 Vindo, porém, uma viúva pobre, lançou duas pequenas moedas correspondentes a um quadrante.
43 ಆಗ ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ-- ಈ ಬೊಕ್ಕಸದಲ್ಲಿ ಹಾಕಿದವರೆಲ್ಲರಿಗಿಂತ ಈ ಬಡ ವಿಧವೆಯು ಹೆಚ್ಚಾಗಿ ಹಾಕಿದ್ದಾಳೆ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
43 E, chamando os seus discípulos, Jesus disse:
44 ಯಾಕಂದರೆ ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು; ಆದರೆ ಈಕೆಯು ತನ್ನ ಕೊರತೆಯಲ್ಲಿ ತನಗಿದ್ದದ್ದನ್ನೆಲ್ಲಾ ಅಂದರೆ ತನ್ನ ಜೀವನವನ್ನೆಲ್ಲಾ ಹಾಕಿದ್ದಾಳೆ ಅಂದನು.
44 Porque todos eles deram daquilo que lhes sobrava; ela, porém, da sua pobreza deu tudo o que possuía, todo o seu sustento.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Marcos 12, comparar traduções ou montar um estudo — tudo direto pelo WhatsApp.