Levítico 25
Kannada Bible (GL_KANNADA) vs ARA
ARA Almeida Revista e Atualizada 1993
1 ತರುವಾಯ ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇ ನಂದರೆ--
1 Disse o Senhor a Moisés, no monte Sinai:
2 ಇಸ್ರಾಯೇಲ್ ಮಕ್ಕಳೊಂದಿಗೆ ನೀನು ಮಾತನಾಡಿ ಅವರಿಗೆ ಹೀಗೆ ಹೇಳು--ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದಾಗ ದೇಶವು ಕರ್ತನಿ ಗಾಗಿ ಸಬ್ಬತ್ತನ್ನು ಕೈಕೊಳ್ಳಬೇಕು.
2 Fala aos filhos de Israel e dize-lhes: Quando entrardes na terra, que vos dou, então, a terra guardará um sábado ao Senhor .
3 ಆರು ವರುಷ ನೀವು ನಿಮ್ಮ ಹೊಲವನ್ನು ಬಿತ್ತಬೇಕು, ಆರು ವರುಷ ನೀವು ನಿಮ್ಮ ದ್ರಾಕ್ಷೇತೋಟವನ್ನು ಕತ್ತರಿಸಬೇಕು, ಅವು ಗಳಿಂದ ಫಲವನ್ನು ಕೂಡಿಸಬೇಕು.
3 Seis anos semearás o teu campo, e seis anos podarás a tua vinha, e colherás os seus frutos.
4 ಆದರೆ ಏಳನೆಯ ವರುಷವು ದೇಶಕ್ಕೆ ವಿಶ್ರಾಂತಿಗಾಗಿ ಸಬ್ಬತ್ತಾಗಿರುವದು, ಕರ್ತನಿಗಾಗಿ ಒಂದು ಸಬ್ಬತ್ತಾಗಿರುವದು. ನೀವು ನಿಮ್ಮ ಹೊಲವನ್ನು ಬಿತ್ತಬಾರದು ಇಲ್ಲವೆ ದ್ರಾಕ್ಷೇತೋಟ ವನ್ನು ಕತ್ತರಿಸಬಾರದು.
4 Porém, no sétimo ano, haverá sábado de descanso solene para a terra, um sábado ao Senhor ; não semearás o teu campo, nem podarás a tua vinha.
5 ತನ್ನಷ್ಟಕ್ಕೆ ತಾನೇ ಬೆಳೆದಿ ರುವ ಪೈರನ್ನು ನೀವು ಕೊಯ್ಯಬಾರದು ಇಲ್ಲವೆ ಕತ್ತರಿಸದಿರುವ ದ್ರಾಕ್ಷೇ ಬಳ್ಳಿಯ ದ್ರಾಕ್ಷೇ ಹಣ್ಣುಗಳನ್ನು ಕೂಡಿಸಬಾರದು; ಅದು ದೇಶಕ್ಕೆ ವಿಶ್ರಾಂತಿಯ ವರುಷವಾಗಿರುವದು.
5 O que nascer de si mesmo na tua seara não segarás e as uvas da tua vinha não podada não colherás; ano de descanso solene será para a terra.
6 ದೇಶದ ಆ ಸಬ್ಬತ್ತು ನಿಮ್ಮ ಆಹಾರಕ್ಕಾಗಿ ಇರುವದು; ನಿನಗೂ ನಿನ್ನ ದಾಸನಿಗೂ ದಾಸಿಗೂ ಕೂಲಿ ಆಳಿಗೂ ನಿನ್ನೊಂದಿಗೆ ಪ್ರವಾಸಿ ಯಾಗಿರುವ ಪರಕೀಯನಿಗೂ
6 Mas os frutos da terra em descanso vos serão por alimento, a ti, e ao teu servo, e à tua serva, e ao teu jornaleiro, e ao estrangeiro que peregrina contigo;
7 ನಿನ್ನ ದನಗಳಿಗೂ ದೇಶದಲ್ಲಿರುವ ಮೃಗಗಳಿಗೂ ಅದರ ಹುಟ್ಟುವಳಿಯೆಲ್ಲಾ ಆಹಾರಕ್ಕಾಗಿ ಇರಬೇಕು.
7 e ao teu gado, e aos animais que estão na tua terra, todo o seu produto será por mantimento.
8 ಹೀಗೆ ಏಳು ವರುಷಗಳನ್ನು ಏಳು ಸಾರಿ ಏಳು ಸಬ್ಬತ್ತಿನ ವರುಷಗಳನ್ನು ನಿನಗಾಗಿ ಎಣಿಸಿಕೊಳ್ಳಬೇಕು. ಏಳು ಸಬ್ಬತ್ತಿನ ವರುಷಗಳ ಕಾಲಾವಧಿಯು ನಿನಗೆ ನಾಲ್ವತ್ತೊಂಭತ್ತು ವರುಷಗಳಾಗಿರುವವು.
8 Contarás sete semanas de anos, sete vezes sete anos, de maneira que os dias das sete semanas de anos te serão quarenta e nove anos.
9 ಇದಾದ ಮೇಲೆ ಏಳನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ಐವತ್ತನೇ ವಾರ್ಷಿಕೋತ್ಸವಕ್ಕೆ ತುತೂರಿಯನ್ನು ಊದಿಸ ಬೇಕು; ಪ್ರಾಯಶ್ಚಿತ್ತದ ದಿನದಲ್ಲಿ ನಿಮ್ಮ ದೇಶದ ಎಲ್ಲಾ ಕಡೆಗಳಲ್ಲಿ ತುತೂರಿಯನ್ನು ಊದಿಸಬೇಕು.
9 Então, no mês sétimo, aos dez do mês, farás passar a trombeta vibrante; no Dia da Expiação, fareis passar a trombeta por toda a vossa terra.
10 ಐವತ್ತ ನೆಯ ವರುಷವನ್ನು ಪರಿಶುದ್ಧಮಾಡಿ ದೇಶದಲ್ಲಿ ಎಲ್ಲಾ ನಿವಾಸಿಗಳಿಗೆ ಬಿಡುಗಡೆಯನ್ನು ಪ್ರಕಟಿಸಬೇಕು. ಅದು ನಿಮಗೆ ಐವತ್ತನೇ ವರುಷದ ವಾರ್ಷಿಕೋತ್ಸವವಾ ಗಿರಬೇಕು; ನಿಮ್ಮಲ್ಲಿ ಪ್ರತಿಯೊಬ್ಬನು ಅವನವನ ಸ್ವಾಸ್ತ್ಯಕ್ಕೂ ಕುಟುಂಬಕ್ಕೂ ಹಿಂದಿರುಗಿ ಹೋಗಬೇಕು.
10 Santificareis o ano quinquagésimo e proclamareis liberdade na terra a todos os seus moradores; ano de jubileu vos será, e tornareis, cada um à sua possessão, e cada um à sua família.
11 ಐವತ್ತನೆಯ ಆ ವರುಷವು ನಿಮಗೆ ಸಂಭ್ರಮವಾಗಿ ರುವದು; ನೀವು ಬಿತ್ತಲೂಬಾರದು ಮತ್ತು ತನ್ನಷ್ಟಕ್ಕೆ ತಾನೇ ಬೆಳೆಯುವದನ್ನು ಕೊಯ್ಯಲೂಬಾರದು ಇಲ್ಲವೆ ಕತ್ತರಿಸದಿದ್ದ ದ್ರಾಕ್ಷೇ ಬಳ್ಳಿಗಳಲ್ಲಿ ದ್ರಾಕ್ಷೇ ಹಣ್ಣುಗಳನ್ನು ಕೂಡಿಸಲೂಬಾರದು.
11 O ano quinquagésimo vos será jubileu; não semeareis, nem segareis o que nele nascer de si mesmo, nem nele colhereis as uvas das vinhas não podadas.
12 ಅದು ಸಂಭ್ರಮವೇ; ಅದು ನಿಮಗೆ ಪರಿಶುದ್ಧವಾಗಿರುವದು; ಹೊಲದೊಳಗಿಂದ ಅದರ ಹುಟ್ಟುವಳಿಯನ್ನು ನೀವು ತಿನ್ನಬೇಕು.
12 Porque é jubileu, santo será para vós outros; o produto do campo comereis.
13 ಸಂಭ್ರಮದ ಈ ವರುಷದಲ್ಲಿ ಪ್ರತಿಯೊಬ್ಬನು ತನ್ನ ಸ್ವಾಸ್ತ್ಯಕ್ಕೆ ಹಿಂದಿರುಗಬೇಕು.
13 Neste Ano do Jubileu, tornareis cada um à sua possessão.
14 ನೆರೆಯವನಿಗೆ ಏನಾದರೂ ಮಾರಾಟಮಾಡಿದ್ದರೆ ಇಲ್ಲವೆ ನೆರೆಯವ ನಿಂದ ಕೊಂಡು ಕೊಂಡಿದ್ದರೆ ಒಬ್ಬರಿಗೊಬ್ಬರು ಉಪದ್ರ ಪಡಿಸಿಕೊಳ್ಳಬಾರದು.
14 Quando venderes alguma coisa ao teu próximo ou a comprares da mão do teu próximo, não oprimas teu irmão.
15 ಸಂಭ್ರಮದ ತರುವಾಯ ವರುಷಗಳ ಲೆಕ್ಕದ ಪ್ರಕಾರ ನಿನ್ನ ನೆರೆಯವನಿಂದ ಕೊಂಡುಕೊಳ್ಳಬೇಕು. ಫಲದ ವರುಷಗಳ ಪ್ರಕಾರ ಅವನು ನಿನಗೆ ಮಾರಾಟಮಾಡಬೇಕು.
15 Segundo o número dos anos desde o Jubileu, comprarás de teu próximo; e, segundo o número dos anos das messes, ele venderá a ti.
16 ವರುಷಗಳು ಹೆಚ್ಚಿದಂತೆಯೇ ಫಲದ ಬೆಲೆಯನ್ನು ಹೆಚ್ಚಿಸಬೇಕು; ವರುಷಗಳು ಕಡಿಮೆಯಿರುವಂತೆಯೇ ಫಲದ ಬೆಲೆ ಯನ್ನು ಕಡಿಮೆಮಾಡಬೇಕು. ಫಲದ ವರುಷಗಳ ಸಂಖ್ಯೆಗನುಸಾರವಾಗಿಯೇ ಅವನು ನಿನಗೆ ಮಾರಾಟ ಮಾಡಬೇಕು.
16 Sendo muitos os anos, aumentarás o preço e, sendo poucos, abaixarás o preço; porque ele te vende o número das messes.
17 ಆದದರಿಂದ ನೀವು ಒಬ್ಬರಿಗೊಬ್ಬರು ಉಪದ್ರಪಡಿಸಿಕೊಳ್ಳಬಾರದು; ದೇವರಿಗೆ ನೀನು ಭಯ ಪಡಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ.
17 Não oprimais ao vosso próximo; cada um, porém, tema a seu Deus; porque eu sou o Senhor , vosso Deus.
18 ಹೀಗೆ ನೀವು ನನ್ನ ನಿಯಮ ನಿರ್ಣಯಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ಆಗ ನೀವು ದೇಶದಲ್ಲಿ ಸುರಕ್ಷಿತರಾಗಿ ವಾಸಿಸುವಿರಿ.
18 Observai os meus estatutos, guardai os meus juízos e cumpri-os; assim, habitareis seguros na terra.
19 ಭೂಮಿಯು ತನ್ನ ಫಲವನ್ನು ಕೊಡುವದು; ನೀವು ತಿಂದು ತೃಪ್ತ ರಾಗುವಿರಿ, ಅದರಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
19 A terra dará o seu fruto, e comereis a fartar e nela habitareis seguros.
20 ನೀವು--ಇಗೋ, ನಾವು ಬಿತ್ತುವದಿಲ್ಲ ಇಲ್ಲವೆ ನಮ್ಮ ಹುಟ್ಟುವಳಿಯಲ್ಲಿ ಕೂಡಿಸಿಕೊಳ್ಳುವದಿಲ್ಲ, ಏಳ ನೆಯ ವರುಷದಲ್ಲಿ ನಾವು ಏನು ತಿನ್ನೋಣ ಎಂದು ಅನ್ನುವಿರಿ.
20 Se disserdes: Que comeremos no ano sétimo, visto que não havemos de semear, nem colher a nossa messe?
21 ಆಗ ನಾನು ಆರನೆಯ ವರುಷದಲ್ಲಿ ಮೂರು ವರುಷಗಳಿಗೆ ಫಲಫಲಿಸುವಂತೆ ನಿಮ್ಮ ಮೇಲೆ ನನ್ನ ಆಶೀರ್ವಾದವನ್ನು ಆಜ್ಞಾಪಿಸುವೆನು.
21 Então, eu vos darei a minha bênção no sexto ano, para que dê fruto por três anos.
22 ನೀವು ಎಂಟನೆಯ ವರುಷದಲ್ಲಿ ಬಿತ್ತಿ ಅದರ ಫಲವನ್ನು ಒಂಭತ್ತನೆಯ ವರುಷದ ವರೆಗೆ ತಿನ್ನುವಿರಿ; ಅದರ ಫಲ ಬರುವ ವರೆಗೆ ನೀವು ಸಂಗ್ರಹಿಸಿದ ಹಳೇದನ್ನೇ ತಿನ್ನುವಿರಿ.
22 No oitavo ano, semeareis e comereis da colheita anterior até ao ano nono; até que venha a sua messe, comereis da antiga.
23 ಇದಲ್ಲದೆ ಭೂಮಿಯನ್ನು ಎಂದಿಗೂ ಮಾರಬಾರದು, ಯಾಕಂದರೆ ಭೂಮಿಯು ನನ್ನದು; ನನ್ನೊಂದಿಗೆ ನೀವು ಪರಕೀಯರೂ ಪ್ರವಾಸಿಗಳೂ ಆಗಿದ್ದೀರಿ.
23 Também a terra não se venderá em perpetuidade, porque a terra é minha; pois vós sois para mim estrangeiros e peregrinos.
24 ನಿಮ್ಮ ಸ್ವಾಧೀನದಲ್ಲಿರುವ ಎಲ್ಲಾ ಭೂಮಿಗೆ ಬಿಡುಗಡೆಯನ್ನು ಕೊಡಬೇಕು.
24 Portanto, em toda a terra da vossa possessão dareis resgate à terra.
25 ನಿನ್ನ ಸಹೋದರನು ಬಡತನದ ನಿಮಿತ್ತವಾಗಿ ತನ್ನ ಸ್ವಾಸ್ತ್ಯದಲ್ಲಿ ಸ್ವಲ್ಪವನ್ನು ಮಾರಿದ ಮೇಲೆ ಅವನ ಬಂಧುವಿನಲ್ಲಿ ಯಾರಾದರೂ ಅದನ್ನು ಬಿಡಿಸಿಕೊಳ್ಳು ವದಕ್ಕೆ ಬಂದರೆ ಅವನ ಸಹೋದರನು ಮಾರಿರುವದನ್ನು ಅವನಿಗೆ ಬಿಡುಗಡೆ ಮಾಡಬೇಕು.
25 Se teu irmão empobrecer e vender alguma parte das suas possessões, então, virá o seu resgatador, seu parente, e resgatará o que seu irmão vendeu.
26 ಅವನಿಗೆ ಅದನ್ನು ಬಿಡಿಸಿಕೊಳ್ಳುವದಕ್ಕೆ ಯಾರಾದರೂ ಇಲ್ಲದೆ ತಾನೇ ಅದನ್ನು ಬಿಡಿಸಿಕೊಳ್ಳುವ ಸ್ಥಿತಿ ಉಂಟಾದರೆ
26 Se alguém não tiver resgatador, porém vier a tornar-se próspero e achar o bastante com que a remir,
27 ಅವನು ಅದನ್ನು ಮಾರಿದ ವರುಷಗಳನ್ನು ಲೆಕ್ಕಿಸಿ ಅದನ್ನು ಮಾರಿದವನಿಗೆ ಮಿಗಿಲಾದದ್ದನ್ನು ಪೂರ್ತಿಮಾಡಿ ತನ್ನ ಸ್ವಾಸ್ತ್ಯಕ್ಕೆ ಹಿಂದಿರುಗಬಹುದು.
27 então, contará os anos desde a sua venda, e o que ficar restituirá ao homem a quem vendeu, e tornará à sua possessão.
28 ತಿರಿಗಿ ಸಲ್ಲಿಸುವದಕ್ಕೆ ಅವನಿಗೆ ಆಗದಿದ್ದರೆ ಅವನು ಮಾರಿದ್ದು ಸಂಭ್ರಮದ ವರುಷದ ವರೆಗೆ ಕೊಂಡುಕೊಂಡವನ ಕೈಯಲ್ಲಿ ಇರಬೇಕು; ಸಂಭ್ರಮದ ವರುಷದಲ್ಲಿ ಅದು ಬಿಡುಗಡೆ ಯಾಗಬೇಕು, ಅವನು ತನ್ನ ಸ್ವಾಸ್ತ್ಯಕ್ಕೆ ಹಿಂದಿರುಗಬೇಕು.
28 Mas, se as suas posses não lhe permitirem reavê-la, então, a que for vendida ficará na mão do comprador até ao Ano do Jubileu; porém, no Ano do Jubileu, sairá do poder deste, e aquele tornará à sua possessão.
29 ಇದಲ್ಲದೆ ಒಬ್ಬನು ಗೋಡೆಯುಳ್ಳ ಪಟ್ಟಣದ ಲ್ಲಿರುವ ನಿವಾಸದ ಮನೆಯನ್ನು ಮಾರಿದರೆ ಅದನ್ನು ಮಾರಿದ ಒಂದು ಪೂರ್ಣ ವರುಷದೊಳಗಾಗಿ ಅದನ್ನು ಬಿಡುಗಡೆ ಮಾಡಬೇಕು; ಒಂದು ಪೂರ್ಣ ವರುಷ
29 Quando alguém vender uma casa de moradia em cidade murada, poderá resgatá-la dentro de um ano a contar de sua venda; durante um ano, será lícito o seu resgate.
30 ಆದರೆ ವರುಷವು ಪೂರ್ಣವಾಗುವದರೊಳಗಾಗಿ ಅದು ಬಿಡುಗಡೆಯಾಗದಿದ್ದರೆ ಗೋಡೆಯ ಪಟ್ಟಣದೊಳಗಿರುವ ಆ ಮನೆಯು ಅದನ್ನು ಕೊಂಡುಕೊಂಡವನಿಗೆ ಅವನ ತಲತಲಾಂತರಕ್ಕೂ ಸ್ಥಿರವಾಗಿಡಲ್ಪಡಬೇಕು; ಸಂಭ್ರಮದ ವರುಷದಲ್ಲಿ ಅದು ಬಿಡುಗಡೆಯಾಗ ಬಾರದು.
30 Se, passando-se-lhe um ano, não for resgatada, então, a casa que estiver na cidade que tem muro ficará em perpetuidade ao que a comprou, pelas suas gerações; não sairá do poder dele no Jubileu.
31 ಆದರೆ ಸುತ್ತಲೂ ಗೋಡೆಗಳಿಲ್ಲದ ಹಳ್ಳಿಗಳಲ್ಲಿಯ ಮನೆಗಳು ದೇಶದ ಭೂಮಿಯೊಂದಿಗೆ ಲೆಕ್ಕಿಸಲ್ಪಡಬೇಕು. ಅವುಗಳಿಗೆ ಬಿಡುಗಡೆ ಇರಬೇಕು; ಸಂಭ್ರಮ ವರುಷದಲ್ಲಿ ಅವು ಬಿಡುಗಡೆಯಾಗಬೇಕು.
31 Mas as casas das aldeias que não têm muro em roda serão estimadas como os campos da terra; para elas haverá resgate, e sairão do poder do comprador no Jubileu.
32 ಇದಲ್ಲದೆ ಲೇವಿಯರ ಪಟ್ಟಣಗಳ ವಿಷಯವಾ ಗಿಯೂ ಅವರ ಸ್ವಾಸ್ತ್ಯವಾಗಿರುವ ಪಟ್ಟಣಗಳಲ್ಲಿನ ಮನೆಗಳ ವಿಷಯವಾಗಿಯೂ ಲೇವಿಯರು ಯಾವ ಸಮಯದಲ್ಲಿಯಾದರೂ ಬಿಡಿಸಿಕೊಳ್ಳಬಹುದು.
32 Mas, com respeito às cidades dos levitas, às casas das cidades da sua possessão, terão direito perpétuo de resgate os levitas.
33 ಲೇವಿಯರಿಂದ ಏನಾದರೂ ಕೊಂಡುಕೊಂಡರೆ ಕೊಂಡುಕೊಂಡ ಮನೆಯೂ ಅವನ ಸ್ವಾಸ್ತ್ಯದ ಪಟ್ಟಣವೂ ಸಂಭ್ರಮದ ವರುಷದಲ್ಲಿ ಬಿಡುಗಡೆಯಾಗ ಬೇಕು; ಲೇವಿಯರ ಪಟ್ಟಣಗಳ ಮನೆಗಳು ಇಸ್ರಾ ಯೇಲ್ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವಾಗಿವೆ.
33 Se o levita não resgatar a casa que vendeu, então, a casa comprada na cidade da sua possessão sairá do poder do comprador, no Jubileu; porque as casas das cidades dos levitas são a sua possessão no meio dos filhos de Israel.
34 ಆದರೆ ಅವರ ಪಟ್ಟಣಗಳಿಗೆ ಸೇರಿರುವ ಉಪ ನಗರಗಳ ಹೊಲವನ್ನು ಮಾರಬಾರದು. ಅದು ಅವರಿಗೆ ನಿತ್ಯವಾದ ಸ್ವಾಸ್ತ್ಯವೇ.
34 Mas o campo no arrabalde das suas cidades não se venderá, porque lhes é possessão perpétua.
35 ನಿನ್ನ ಸಹೋದರನು ಬಡವನಾಗಿ ನಿನ್ನ ಬಳಿಯಲ್ಲಿ ಕ್ಷೀಣನಾಗಿ ಬಿದ್ದುಕೊಂಡಿದ್ದರೆ ಅವನು ಪರಕೀಯ ನಾಗಿದ್ದರೂ ಪ್ರವಾಸಿಯಾಗಿದ್ದರೂ ಅವನು ನಿನ್ನ ಬಳಿ ಯಲ್ಲಿ ಬದುಕುವ ಹಾಗೆ ಅವನಿಗೆ ಸಹಾಯಮಾಡ ಬೇಕು.
35 Se teu irmão empobrecer, e as suas forças decaírem, então, sustentá-lo-ás. Como estrangeiro e peregrino ele viverá contigo.
36 ನೀನು ಅವನಿಂದ ಬಡ್ಡಿಯನ್ನಾಗಲಿ ಇಲ್ಲವೆ ಲಾಭವನ್ನಾಗಲಿ ತೆಗೆದುಕೊಳ್ಳಬಾರದು. ಆದರೆ ನಿನ್ನ ಸಹೋದರನು ನಿನ್ನೊಂದಿಗೆ ಬದುಕುವಂತೆ ನಿನ್ನ ದೇವ ರಿಗೆ ಭಯಪಡು.
36 Não receberás dele juros nem ganho; teme, porém, ao teu Deus, para que teu irmão viva contigo.
37 ನೀನು ಅವನಿಗೆ ನಿನ್ನ ಹಣವನ್ನು ಬಡ್ಡಿಗೆ ಕೊಡಬಾರದು ಇಲ್ಲವೆ ಲಾಭಕ್ಕಾಗಿ ನಿನ್ನ ಆಹಾರ ವನ್ನು ಸಾಲವಾಗಿ ಕೊಡಬೇಡ.
37 Não lhe darás teu dinheiro com juros, nem lhe darás o teu mantimento por causa de lucro.
38 ನಿನಗೆ ಕಾನಾನ್ ದೇಶವನ್ನು ಕೊಡುವಂತೆಯೂ ನಿನಗೆ ದೇವರಾಗಿರು ವಂತೆಯೂ ನಿನ್ನನ್ನು ಐಗುಪ್ತದೇಶದೊಳಗಿಂದ ಹೊರಗೆ ಕರತಂದ ನಿನ್ನ ದೇವರಾಗಿರುವ ಕರ್ತನು ನಾನೇ.
38 Eu sou o Senhor , vosso Deus, que vos tirei da terra do Egito, para vos dar a terra de Canaã e para ser o vosso Deus.
39 ಇದಲ್ಲದೆ ನಿನ್ನೊಂದಿಗೆ ವಾಸಿಸುವ ನಿನ್ನ ಸಹೋದರನು ಬಡವನಾಗಿದ್ದು ನಿನಗೆ ಮಾರಲ್ಪಟ್ಟಿದ್ದರೆ ಅವನು ದಾಸನಂತೆ ನಿನಗೆ ಸೇವೆಮಾಡಲು ನೀನು ಅವನನ್ನು ಒತ್ತಾಯ ಮಾಡಬಾರದು.
39 Também se teu irmão empobrecer, estando ele contigo, e vender-se a ti, não o farás servir como escravo.
40 ಆದರೆ ಕೂಲಿ ಯಾಳಂತೆಯೂ ಪ್ರವಾಸಿಯಂತೆಯೂ ಅವನು ನಿನ್ನ ಬಳಿಯಲ್ಲಿ ಇರಲಿ. ಜೂಬಿಲಿ ಸಂವತ್ಸರದ ವರೆಗೆ ನಿನಗೆ ಸೇವೆಮಾಡಲಿ.
40 Como jornaleiro e peregrino estará contigo; até ao Ano do Jubileu te servirá;
41 ತರುವಾಯ ಅವನು ನಿನ್ನ ಬಳಿಯಿಂದ ತಾನು ತನ್ನ ಮಕ್ಕಳೊಂದಿಗೆ ಹೊರಟು ತನ್ನ ಕುಟುಂಬಕ್ಕೂ ತನ್ನ ಪಿತೃಗಳ ಸ್ವಾಸ್ತ್ಯಕ್ಕೂ ಅವನು ಹಿಂದಿರುಗಬೇಕು.
41 então, sairá de tua casa, ele e seus filhos com ele, e tornará à sua família e à possessão de seus pais.
42 ಐಗುಪ್ತದೇಶದೊಳಗಿಂದ ನಾನು ಹೊರಗೆ ಕರತಂದ ಅವರು ನನ್ನ ಸೇವಕರಾಗಿದ್ದಾರೆ; ಅವರು ದಾಸರಾಗಿ ಮಾರಲ್ಪಡಬಾರದು.
42 Porque são meus servos, que tirei da terra do Egito; não serão vendidos como escravos.
43 ನೀನು ಕಠಿಣವಾಗಿ ಅವನ ಮೇಲೆ ದೊರೆತನ ಮಾಡಬಾರದು; ಆದರೆ ನಿನ್ನ ದೇವರಿಗೆ ಭಯಪಡಬೇಕು.
43 Não te assenhorearás dele com tirania; teme, porém, ao teu Deus.
44 ನಿನ್ನ ಸುತ್ತಲೂ ಇರುವ ಅನ್ಯಜನರು ನಿನಗೆ ದಾಸದಾಸಿಯ ರಾಗಿರುವಂತೆ ಅವರಿಂದ ದಾಸದಾಸಿಯರನ್ನು ನೀನು ಕೊಂಡುಕೊಳ್ಳಬೇಕು.
44 Quanto aos escravos ou escravas que tiverdes, virão das nações ao vosso derredor; delas comprareis escravos e escravas.
45 ಇದಲ್ಲದೆ ನಿನ್ನ ಮಧ್ಯದೊಳ ಗಿರುವ ಪರಕೀಯ ಮತ್ತು ಪ್ರವಾಸಿಗಳ ಮಕ್ಕಳಿಂದ ನಿನ್ನ ಬಳಿಯಲ್ಲಿರುವ ಅವರ ಕುಟುಂಬಗಳಲ್ಲಿ ನಿನ್ನ ದೇಶದೊಳಗೆ ಅವರು ಪಡೆದಿರುವವರಿಂದ ನೀನು ಕೊಂಡುಕೊಳ್ಳಬಹುದು; ಅವರು ನಿನ್ನ ಸ್ವಾಸ್ತ್ಯವಾಗಿ ರುವರು.
45 Também os comprareis dos filhos dos forasteiros que peregrinam entre vós, deles e das suas famílias que estiverem convosco, que nasceram na vossa terra; e vos serão por possessão.
46 ನಿಮ್ಮ ತರುವಾಯ ಅವರನ್ನು ನಿಮ್ಮ ಮಕ್ಕಳಿಗೆ ಸ್ವಾಸ್ತ್ಯವಾಗಿರುವ ಬಾಧ್ಯತೆಯಾಗಿ ತೆಗೆದು ಕೊಳ್ಳಬೇಕು; ಅವರು ನಿರಂತರಕ್ಕೂ ನಿಮ್ಮ ದಾಸ ರಾಗಿರುವರು. ಆದರೆ ಇಸ್ರಾಯೇಲ್ ಮಕ್ಕಳಾದ ನಿಮ್ಮ ಸಹೋದರರಲ್ಲಿ ಒಬ್ಬರ ಮೇಲೊಬ್ಬರು ಕಠಿಣವಾದ ದೊರೆತನವನ್ನು ಮಾಡಬೇಡಿರಿ.
46 Deixá-los-eis por herança para vossos filhos depois de vós, para os haverem como possessão; perpetuamente os fareis servir, mas sobre vossos irmãos, os filhos de Israel, não vos assenhoreareis com tirania, um sobre os outros.
47 ನಿನ್ನ ಬಳಿಯಲ್ಲಿರುವ ಪರಕೀಯ ಇಲ್ಲವೆ ಪ್ರವಾ ಸಿಯ ಸಂಪತ್ತು ಹೆಚ್ಚಾಗಲಾಗಿ ನಿನ್ನ ಸಹೋದರನು ಅವನ ಬಳಿಯಲ್ಲಿ ಬಡವನಾಗಿ ನಿನ್ನ ಬಳಿಯಲ್ಲಿರುವ ಪರಕೀಯನಾಗಲಿ ಪ್ರವಾಸಿಯಾಗಲಿ ಪರಕೀಯನ ಸಂತತಿಯಲ್ಲಿ ಹುಟ್ಟಿದವನಿಗೆ ತನ್ನನ್ನು ಮಾರಿಕೊಂಡರೆ
47 Quando o estrangeiro ou peregrino que está contigo se tornar rico, e teu irmão junto dele empobrecer e vender-se ao estrangeiro, ou peregrino que está contigo, ou a alguém da família do estrangeiro,
48 ಹೀಗೆ ಅವನು ತನ್ನನ್ನು ಮಾರಿಕೊಂಡ ಮೇಲೆ ಅವನು ತಿರಿಗಿ ವಿಮೋಚಿಸಲ್ಪಡಬಹುದು. ಅವನ ಸಹೋದರರಲ್ಲಿ ಒಬ್ಬನು ಅವನನ್ನು ವಿಮೋಚಿಸ ಬಹುದು.
48 depois de haver-se vendido, haverá ainda resgate para ele; um de seus irmãos poderá resgatá-lo:
49 ಅವನ ಚಿಕ್ಕಪ್ಪನಾಗಲಿ ಚಿಕ್ಕಪ್ಪನ ಮಗ ನಾಗಲಿ ಇಲ್ಲವೆ ಅವನ ಕುಟುಂಬದಲ್ಲಿ ಸವಿಾಪ ವಾಗಿರುವ ಸಂಬಂಧಿಕರಲ್ಲಿ ಯಾರಾಗಲಿ ಅವನನ್ನು ವಿಮೋಚಿಸಬಹುದು. ಇಲ್ಲವೆ ಅವನು ಶಕ್ತನಾಗಿದ್ದರೆ ತನ್ನನ್ನು ತಾನೇ ವಿಮೋಚಿಸಿಕೊಳ್ಳಬಹುದು.
49 seu tio ou primo o resgatará; ou um dos seus, parente da sua família, o resgatará; ou, se lograr meios, se resgatará a si mesmo.
50 ಅವನು ತನ್ನನ್ನು ಕೊಂಡುಕೊಂಡವನಿಗೆ ಮಾರಲ್ಪಟ್ಟ ವರುಷ ಮೊದಲುಗೊಂಡು ಜೂಬಿಲಿ ಸಂವತ್ಸರದ ವರೆಗೆ ಅವನೊಂದಿಗೆ ಲೆಕ್ಕಮಾಡಬೇಕು. ಅವನ ಮಾರಾಟದ ಕ್ರಯವು ವರುಷಗಳ ಲೆಕ್ಕದ ಪ್ರಕಾರ ಕೂಲಿಯಾಳಿನ ಸಮಯಕ್ಕೆ ತಕ್ಕಂತೆ ಅವನೊಂದಿಗೆ ಅದು ಇರುವದು.
50 Com aquele que o comprou acertará contas desde o ano em que se vendeu a ele até ao Ano do Jubileu; o preço da sua venda será segundo o número dos anos, conforme se paga a um jornaleiro.
51 ಇನ್ನು ಬಹಳ ವರುಷವಿದ್ದರೆ ಅವುಗಳ ಪ್ರಕಾರ ತನ್ನ ಕ್ರಯದ ಹಣದಲ್ಲಿ ವಿಮೋಚಿಸಲ್ಪಡಬೇಕು.
51 Se ainda faltarem muitos anos, devolverá proporcionalmente a eles, do dinheiro pelo qual foi comprado, o preço do seu resgate.
52 ಜೂಬಿಲಿ ಸಂವತ್ಸರದ ವರೆಗೆ ಕೆಲವು ವರುಷಗಳು ಮಾತ್ರ ಉಳಿದಿದ್ದರೆ ಅವನೊಂದಿಗೆ ಎಣಿಸಬೇಕು. ಅವನ ವರುಷಗಳ ಮೇರೆಗೆ ತನ್ನ ವಿಮೋಚನೆಯ ಕ್ರಯವನ್ನು ತಿರುಗಿ ಅವನು ಅವನಿಗೆ ಸಲ್ಲಿಸಬೇಕು.
52 Se restarem poucos anos até ao Ano do Jubileu, então, fará contas com ele e pagará, em proporção aos anos restantes, o preço do seu resgate.
53 ವರುಷದ ಕೂಲಿಯಾಳಿನಂತೆ ಅವನ ಬಳಿಯಲ್ಲಿ ಇರಬೇಕು. ಆದರೆ ಮತ್ತೊಬ್ಬನು ನಿನ್ನ ದೃಷ್ಟಿಯಲ್ಲಿ ಅವನ ಮೇಲೆ ಕಠಿಣವಾದ ದೊರೆತನ ಮಾಡಬಾರದು.
53 Como jornaleiro, de ano em ano, estará com ele; não se assenhoreará dele com tirania à tua vista.
54 ಈ ವರುಷಗಳಲ್ಲಿ ಅವನು ವಿಮೋಚಿಸಲ್ಪಡದಿದ್ದರೆ ಜೂಬಿಲಿ ಸಂವತ್ಸರದಲ್ಲಿ ಅವನೊಂದಿಗೆ ಅವನ ಮಕ್ಕಳು ಬಿಡುಗಡೆಯಾಗಬೇಕು.
54 Se desta sorte se não resgatar, sairá no Ano do Jubileu, ele e seus filhos com ele.
55 ಯಾಕಂದರೆ ಇಸ್ರಾಯೇಲ್ ಮಕ್ಕಳು ನನ್ನ ದಾಸರು, ಐಗುಪ್ತದೇಶ ದೊಳಗಿಂದ ನಾನು ಹೊರಗೆ ಬರಮಾಡಿದ ಇವರು ನನ್ನ ದಾಸರೇ. ನಿಮ್ಮ ದೇವರಾದ ಕರ್ತನು ನಾನೇ.
55 Porque os filhos de Israel me são servos; meus servos são eles, os quais tirei da terra do Egito. Eu sou o Senhor , vosso Deus.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Levítico 25, comparar traduções ou montar um estudo — tudo direto pelo WhatsApp.