Levítico 20
Kannada Bible (GL_KANNADA) vs NTLH
NTLH Nova Tradução na Linguagem de Hoje 2000
1 ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
1 O Senhor Deus mandou Moisés
2 ನೀನು ತಿರಿಗಿ ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳಬೇಕು--ಇಸ್ರಾಯೇಲ್ ಮಕ್ಕಳಲ್ಲಾಗಲಿ ಇಸ್ರಾಯೇಲಿ ನಲ್ಲಿ ಪ್ರವಾಸಿಯಾದ ಪರಕೀಯರಲ್ಲಾಗಲಿ ಯಾವನಾ ದರೂ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟರೆ ನಿಶ್ಚಯವಾಗಿ ಅವನಿಗೆ ಮರಣವನ್ನು ವಿಧಿಸಬೇಕು; ದೇಶದ ಜನರು ಅವನಿಗೆ ಕಲ್ಲೆಸೆಯಬೇಕು.
2 dizer ao povo de Israel o seguinte: — Se um israelita ou um estrangeiro que vive no meio do povo de Israel separar um dos seus filhos para servir o deus
3 ನಾನು ಆ ಮನುಷ್ಯನಿಗೆ ವಿಮುಖನಾಗಿರುವೆನು; ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು; ಅವನು ನನ್ನ ಹೆಸರನ್ನು ಅಪವಿತ್ರಗೊಳಿಸುವಂತೆ ಮತ್ತು ನನ್ನ ಪವಿತ್ರ ಸ್ಥಳವನ್ನು ಹೊಲೆಮಾಡುವಂತೆ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟಿದ್ದಾನೆ.
3 Eu ficarei contra esse homem e o expulsarei do meio do povo. Por haver dado um dos seus filhos para o serviço de Moloque, ele tornou impura a Tenda Sagrada , o lugar onde moro, e profanou o meu santo nome.
4 ಆ ಮನು ಷ್ಯನು ತನ್ನ ಸಂತತಿಯನ್ನು ಮೋಲೆಕನಿಗೆ ಕೊಡುವಾಗ ಹೇಗಾದರೂ ಜನರು ತಮ್ಮ ಕಣ್ಣುಗಳನ್ನು ಮರೆಮಾಡಿ ಅವನನ್ನು ಕೊಲ್ಲದೆ ಹೋದರೆ
4 E, se o povo não reclamar contra o que esse homem fez e não o matar,
5 ಆಗ ನಾನು ಆ ಮನುಷ್ಯನಿಗೂ ಅವನ ಕುಟುಂಬಕ್ಕೂ ವಿರೋಧವಾ ಗಿಯೂ ವಿಮುಖನಾಗಿಯೂ ಇರುವೆನು. ಮೋಲೆಕ ನೊಂದಿಗೆ ವ್ಯಭಿಚಾರಮಾಡಿದ್ದಕ್ಕಾಗಿ ಅವನನೂ ವ್ಯಭಿಚಾರಮಾಡುವದಕ್ಕೆ ಹಿಂಬಾಲಿಸುವವರೆಲ್ಲರನ್ನೂ ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
5 eu mesmo ficarei contra ele e contra a sua família. Eu o expulsarei do meio do povo, junto com todos os que seguirem o exemplo dele e adorarem o deus Moloque.
6 ಮಂತ್ರವಾದಿಗಳ ಕಡೆಗೆ ತಿರುಗಿ ಕೊಳ್ಳುವವನಿಗೂ ವ್ಯಭಿಚಾರಮಾಡುವಂತೆ ಮಾಟಗಾರರನ್ನು ಹಿಂಬಾಲಿಸುವವನಿಗೂ ನಾನು ವಿಮುಖನಾಗಿರುವೆನು, ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
6 — Se alguém procurar a ajuda dos que invocam os espíritos dos mortos e dos que adivinham o futuro, eu ficarei contra essa pessoa por causa desse pecado e a expulsarei do meio do povo.
7 ಆದದರಿಂದ ನೀವು ನಿಮ್ಮನ್ನು ಶುದ್ಧಪಡಿಸಿಕೊಂಡು ಪರಿಶುದ್ಧರಾಗಿರಿ; ನಿಮ್ಮ ದೇವರಾಗಿರುವ ಕರ್ತನು ನಾನೇ.
7 Dediquem-se completamente a mim e sejam santos, pois eu sou o Senhor , o Deus de vocês.
8 ನೀವು ನನ್ನ ನಿಯಮಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ನಿಮ್ಮನ್ನು ಶುದ್ಧಪಡಿಸುವ ಕರ್ತನು ನಾನೇ.
8 Obedeçam às minhas leis . Eu sou o Senhor , e eu os separei dos outros povos para que vocês sejam somente meus.
9 ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವ ವನಿಗೆ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು; ಯಾವನು ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವನೋ ಅವನ ರಕ್ತವು ಅವನ ಮೇಲೆಯೇ ಇರುವದು.
9 — A pessoa que amaldiçoar o pai ou a mãe será morta; e ela será responsável pela sua própria morte, pois amaldiçoou o pai ou a mãe.
10 ಒಬ್ಬನು ಮತ್ತೊಬ್ಬನ ಹೆಂಡತಿಯೊಡನೆ ವ್ಯಭಿ ಚಾರಮಾಡಿದರೆ, ಅಂದರೆ ತನ್ನ ನೆರೆಯವನ ಹೆಂಡ ತಿಯೊಡನೆ ವ್ಯಭಿಚಾರಮಾಡಿದರೆ ವ್ಯಭಿಚಾರ ಮಾಡುವವನಿಗೂ ವ್ಯಭಿಚಾರಮಾಡುವವಳಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು.
10 — Se um homem cometer adultério com a mulher de outro, ele e a mulher deverão ser mortos.
11 ತನ್ನ ತಂದೆಯ ಹೆಂಡತಿಯೊಡನೆ ಸಂಗಮಿಸುವವನು ತನ್ನ ತಂದೆಯ ಬೆತ್ತಲೆತನವನ್ನು ಕಾಣುವಂತೆ ಮಾಡಿದ್ದಾನೆ; ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸ ಬೇಕು; ಅವರ ರಕ್ತವು ಅವರ ಮೇಲೆ ಇರುವದು;
11 Se um homem tiver relações com uma das mulheres do pai, ele estará desonrando o pai, e ele e a mulher deverão ser mortos; eles serão responsáveis pela sua própria morte.
12 ಒಬ್ಬನು ತನ್ನ ಸೊಸೆಯೊಂದಿಗೆ ಸಂಗಮಿಸಿದರೆ ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸ ಬೇಕು; ಅವರು ಗಲಿಬಿಲಿಯನ್ನುಂಟುಮಾಡಿದ್ದಾರೆ; ಅವರ ರಕ್ತವು ಅವರ ಮೇಲೆ ಇರುವದು.
12 Se um homem tiver relações com a nora, os dois deverão ser mortos por causa desse ato imoral; eles serão responsáveis pela sua própria morte.
13 ಒಬ್ಬ ಮನುಷ್ಯನು ಸ್ತ್ರೀಯೊಂದಿಗೆ ಮಲಗುವಂತೆ ಮತ್ತೊಬ್ಬ ಮನುಷ್ಯನೊಂದಿಗೆ ಮಲಗಿದರೆ ಅವರಿಬ್ಬರೂ ಅಸಹ್ಯ ವಾದದ್ದನ್ನು ಮಾಡಿದವರಾಗಿದ್ದಾರೆ; ಅವರಿಗೆ ನಿಶ್ಚಯ ವಾಗಿಯೂ ಮರಣದಂಡನೆ ವಿಧಿಸಬೇಕು; ಅವರ ರಕ್ತವು ಅವರ ಮೇಲೆ ಇರುವದು.
13 Se um homem tiver relações com outro homem, os dois deverão ser mortos por causa desse ato nojento; eles serão responsáveis pela sua própria morte.
14 ಒಬ್ಬ ಮನುಷ್ಯನು ತನಗೆ ಒಬ್ಬ ಹೆಂಡತಿಯನ್ನೂ ಅವಳ ತಾಯಿಯನ್ನೂ ತೆಗೆದುಕೊಂಡರೆ ಅದು ದುಷ್ಟತನವಾಗಿದೆ; ನಿಮ್ಮಲ್ಲಿ ದುಷ್ಟತನವು ಇರದಂತೆ ಅವನೂ ಅವರೂ ಬೆಂಕಿ ಯಿಂದ ಸುಡಲ್ಪಡಬೇಕು.
14 Se um homem casar com uma mulher e também com a mãe dela, isso é uma imoralidade grave, e os três deverão ser queimados vivos; essa imoralidade precisa ser eliminada do meio do povo.
15 ಒಬ್ಬನು ಪಶುವಿನೊಂದಿಗೆ ಸಂಗಮಿಸಿದರೆ ಅವನಿಗೆ ನಿಶ್ಚಯವಾಗಿ ಮರಣದಂಡನೆ ಯಾಗಬೇಕು, ನೀವು ಆ ಪಶುವನ್ನು ವಧಿಸಬೇಕು.
15 Se um homem tiver relações com um animal, os dois deverão ser mortos.
16 ಇದಲ್ಲದೆ ಒಬ್ಬ ಸ್ತ್ರೀಯು ಒಂದು ಪಶುವಿನೊಂದಿಗೆ ಸಂಗಮಿಸುವದಕ್ಕಾಗಿ ಮಲಗಿಕೊಂಡರೆ ನೀವು ಆ ಸ್ತ್ರೀಯನ್ನೂ ಪಶುವನ್ನೂ ಕೊಲ್ಲಬೇಕು; ಅವರಿಗೆ ನಿಶ್ಚಯವಾಗಿ ಮರಣದಂಡನೆಯಾಗಬೇಕು; ಅವರ ರಕ್ತವು ಅವರ ಮೇಲೆ ಇರುವದು.
16 Se uma mulher tiver relações com um animal, os dois deverão ser mortos; eles serão responsáveis pela sua própria morte.
17 ಒಬ್ಬನು ತನ್ನ ತಂದೆಯ ಇಲ್ಲವೆ ತನ್ನ ತಾಯಿಯ ಮಗಳಾದ ತನ್ನ ಸಹೋದರಿಯನ್ನು ತೆಗೆದುಕೊಂಡು ಅವಳ ಬೆತ್ತಲೆ ತನವನ್ನು ನೋಡಿದರೆ ಇಲ್ಲವೆ ಅವಳು ಅವನ ಬೆತ್ತಲೆತನವನ್ನು ನೋಡಿದರೆ ಅದು ದುಷ್ಟತನವೇ; ಅವರು ತಮ್ಮ ಜನರ ದೃಷ್ಟಿಯಲ್ಲಿಯೇ ತೆಗೆದು ಹಾಕಲ್ಪಡಬೇಕು; ಅವರ ರಕ್ತವು ಅವರ ಮೇಲೆ ಇರುವದು. ಅವನು ತನ್ನ ಸಹೋದರಿಯ ಬೆತ್ತಲೆತನ ವನ್ನು ಕಾಣುವಂತೆ ಮಾಡಿದ್ದರಿಂದ ತನ್ನ ಅಪರಾಧ ವನ್ನು ತಾನೇ ಹೊತ್ತುಕೊಳ್ಳುವನು.
17 — Se um homem casar com a irmã, seja por parte só de pai ou por parte de pai e mãe, os dois deverão ser expulsos publicamente do meio do povo. É uma vergonha um homem casar com a irmã; ele merece castigo.
18 ಒಬ್ಬನು ರೋಗದಲ್ಲಿರುವ ಒಬ್ಬ ಸ್ತ್ರೀಯೊಂದಿಗೆ ಮಲಗಿ ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಿದರೆ ಅವನು ಅವಳ ಬುಗ್ಗೆಯನ್ನು ಬಯಲುಪಡಿಸಿದ್ದಾನೆ; ಅವಳು ತನ್ನ ರಕ್ತದ ಬುಗ್ಗೆಯನ್ನು ಬಯಲುಪಡಿಸಿದ್ದಾಳೆ; ಆದದರಿಂದ ಅವರಿಬ್ಬರೂ ಅವರ ಜನರ ಮಧ್ಯದಿಂದ ತೆಗೆದುಹಾಕಲ್ಪಡಬೇಕು.
18 Se um homem tiver relações com uma mulher durante a menstruação, os dois deverão ser expulsos do meio do povo. Os dois ficaram impuros , pois quebraram as leis da pureza a respeito da menstruação.
19 ಇದಲ್ಲದೆ ನೀನು ನಿನ್ನ ತಾಯಿಯ ಸಹೋದರಿಯ ಇಲ್ಲವೆ ತಂದೆಯ ಸಹೋದರಿಯ ಬೆತ್ತಲೆತನವನ್ನು ಕಾಣುವಂತೆ ಮಾಡ ಬಾರದು, ಕಾಣುವಂತೆ ಮಾಡಿದವನು ತನ್ನ ಹತ್ತಿರದ ಸಂಬಂಧಿಯ ಬೆತ್ತಲೆತನವನ್ನು ಬಯಲು ಮಾಡಿದ್ದಾನೆ; ಅವರು ತಮ್ಮ ಅಪರಾಧವನ್ನು ಹೊತ್ತುಕೊಳ್ಳಬೇಕು.
19 Se um homem tiver relações com a tia, os dois merecem castigo, pois são parentes.
20 ಒಬ್ಬನು ತನ್ನ ಚಿಕ್ಕಪ್ಪನ ಹೆಂಡತಿಯೊಂದಿಗೆ ಸಂಗಮಿಸಿದರೆ ಅವನು ತನ್ನ ಚಿಕ್ಕಪ್ಪನ ಬೆತ್ತಲೆತನವನ್ನು ಕಾಣುವಂತೆ ಮಾಡಿದ್ದಾನೆ; ಅವರು ತಮ್ಮ ಪಾಪವನ್ನು ಹೊತ್ತುಕೊಳ್ಳಬೇಕು; ಅವರು ಮಕ್ಕಳಿಲ್ಲದೆ ಸಾಯು ವರು.
20 E o homem que tiver relações com a tia envergonha o tio. O homem e a tia merecem castigo; eles nunca terão filhos.
21 ಇದಲ್ಲದೆ ಒಬ್ಬನು ತನ್ನ ಸಹೋದರನ ಹೆಂಡತಿಯನ್ನು ತೆಗೆದುಕೊಂಡರೆ ಅದು ಅಶುದ್ಧ ವಾದದ್ದು; ಅವನು ತನ್ನ ಸಹೋದರನ ಬೆತ್ತಲೆ ತನವನ್ನು ಕಾಣುವಂತೆ ಮಾಡಿದ್ದಾನೆ; ಅವರು ಮಕ್ಕಳಿ ಲ್ಲದವರಾಗುವರು.
21 Se um homem tiver relações com a cunhada, ele envergonha o irmão. É uma imoralidade, e os dois morrerão sem terem filhos.
22 ಆದದರಿಂದ ನೀವು ನನ್ನ ಎಲ್ಲಾ ನಿಯಮಗಳನ್ನೂ ನ್ಯಾಯಗಳನ್ನೂ ಕೈಕೊಂಡು ಅವುಗಳನ್ನು ಮಾಡಬೇಕು; ಹೀಗಿದ್ದರೆ ನೀವು ವಾಸಿಸುವದಕ್ಕೆ ನಾನು ನಿಮ್ಮನ್ನು ತರುವ ಆ ದೇಶವು ನಿಮ್ಮನ್ನು ಕಾರಿಬಿಡುವದಿಲ್ಲ.
22 — Obedeçam às minhas leis e aos meus mandamentos a fim de que a terra para onde eu os estou levando, a terra que vai ser de vocês, não os expulse.
23 ನಾನು ನಿಮ್ಮೆದುರಿನಲ್ಲಿಯೇ ಹೊರಗೆ ಹಾಕಿದ ಜನಾಂಗಗಳಂತೆ ನೀವು ನಡೆಯಬಾರದು; ಅವರು ಇಂಥವುಗಳನ್ನೆಲ್ಲಾ ಮಾಡಿದ್ದಾರೆ; ಆದಕಾರಣ ನಾನು ಅವರನ್ನು ಅಸಹ್ಯಿಸಿಕೊಂಡಿದ್ದೇನೆ.
23 Não imitem os costumes dos povos que eu vou expulsar dali, conforme vocês forem tomando posse da terra. Eu fiquei aborrecido com eles por causa das coisas imorais que faziam.
24 ನಾನು ನಿಮಗೆ ಹೇಳಿದ್ದೇನಂದರೆ--ನೀವು ಅವರ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುವಿರಿ. ಹಾಲೂ ಜೇನೂ ಹರಿಯುವ ಆ ದೇಶವನ್ನು ನೀವು ಸ್ವಾಧೀನಪಡಿಸಿಕೊಳ್ಳುವಂತೆ ನಾನು ಅದನ್ನು ನಿಮಗೆ ಕೊಡುತ್ತೇನೆ. ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಪಡಿಸಿದಂಥ ನಿಮ್ಮ ದೇವರಾಗಿರುವ ಕರ್ತನು ನಾನೇ.
24 Mas já prometi que vou dar aquela terra a vocês, e vocês possuirão uma terra boa e rica. Eu sou o Senhor , o Deus de vocês; eu os separei dos outros povos.
25 ಆದದರಿಂದ ನೀವು ಶುದ್ಧವಾದ ಮತ್ತು ಅಶುದ್ಧವಾದ ಪಶುಗಳ ಮಧ್ಯದಲ್ಲಿಯೂ ಅಶುದ್ಧವಾದ ಮತ್ತು ಶುದ್ಧವಾದ ಪಕ್ಷಿಗಳ ಮಧ್ಯದಲ್ಲಿಯೂ ವ್ಯತ್ಯಾಸ ಮಾಡಬೇಕು. ಇದಲ್ಲದೆ ನಾನು ನಿಮ್ಮಿಂದ ಪ್ರತ್ಯೇಕಿಸಿದ ಅಶುದ್ಧವಾದ ಪಶುಗಳಿಂದಲೂ ಪಕ್ಷಿಗಳಿಂದಲೂ ಭೂಮಿಯ ಮೇಲೆ ಚಲಿಸುವ ಯಾವ ತರವಾದ ಜೀವಿಯಿಂದಲೂ ನೀವು ನಿಮ್ಮನ್ನು ಅಶುದ್ಧಮಾಡಿ ಕೊಳ್ಳಬಾರದು.
25 Portanto, façam diferença entre animais e aves puros e impuros . Sou eu quem decide se um animal, ou uma ave, ou um animal que se arrasta pelo chão é impuro ou não; e eu proibi que vocês comessem qualquer coisa impura, para que também não ficassem impuros.
26 ನೀವು ನನ್ನವರಾಗಿರುವಂತೆ ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಿಸಿದ್ದ ಕರ್ತನಾದ ನಾನು ಪರಿಶುದ್ಧನಾಗಿರುವದರಿಂದ ನೀವು ನನಗೆ ಪರಿಶುದ್ಧ ರಾಗಿರಬೇಕು.
26 Sejam santos , pois eu, o Senhor , sou santo. E eu os separei dos outros povos para que vocês sejam somente meus.
27 ಮನುಷ್ಯನಾಗಲಿ ಸ್ತ್ರೀಯಾಗಲಿ ಮಂತ್ರವಾದಿ ಇಲ್ಲವೆ ಮಾಟಗಾರರಾಗಿರುವದಾಗಿದ್ದರೆ ಅವರನ್ನು ನಿಶ್ಚಯವಾಗಿ ಕಲ್ಲೆಸೆದು ಕೊಲ್ಲಬೇಕು; ಅವರ ರಕ್ತವು ಅವರ ಮೇಲೆ ಇರುವದು.
27 — Qualquer homem ou mulher que invocar os espíritos dos mortos ou praticar feitiçarias deverá ser morto a pedradas. Essa pessoa será responsável pela sua própria morte.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Levítico 20, comparar traduções ou montar um estudo — tudo direto pelo WhatsApp.