Levítico 15

Kannada Bible (GL_KANNADA) vs BKJ

Sair da comparação
1 ಕರ್ತನು ಮೋಶೆ ಆರೋನರೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
1 E o SENHOR falou a Moisés e a Arão, dizendo:
2 ಇಸ್ರಾ ಯೇಲಿನ ಮಕ್ಕಳೊಂದಿಗೆ ಹೇಳಬೇಕಾದದ್ದೇನಂದರೆಯಾವ ಮನುಷ್ಯನಿಗಾದರೂ ಅವರ ಶರೀರದಲ್ಲಿ ಮೇಹಸ್ರಾವ ಇರುವದಾಗಿದ್ದರೆ ಆ ಸ್ರಾವದ ನಿಮಿತ್ತ ವಾಗಿ ಅವನು ಅಶುದ್ಧನಾಗಿರುವನು.
2 Falai aos filhos de Israel, e dizei-lhes: Quando algum homem tem um corrimento do seu membro viril, por causa do seu problema, ele é impuro.
3 ಅವನ ಸ್ರಾವ ದಲ್ಲಿ ಅದು ಅವನ ಅಶುದ್ಧತೆಯಾಗಿರುವದು; ಅವನ ಶರೀರವು ತನ್ನ ಸ್ರಾವದಿಂದ ಹರಿಯುವದಾಗಿದ್ದರೂ ತನ್ನ ಸ್ರಾವವು ಅವನ ಶರೀರದಲ್ಲಿ ನಿಂತುಹೋಗಿದ್ದರೂ ಅದು ಅವನ ಅಶುದ್ಧತೆಯಾಗಿರುವದು.
3 E esta será a norma sobre a impureza pelo seu corrimento: seja o seu membro viril emitir um corrimento, ou que esteja obstruído pelo seu corrimento, será impuro.
4 ಸ್ರಾವವಿರು ವವನು ಮಲಗುವ ಪ್ರತಿಯೊಂದು ಹಾಸಿಗೆಯು ಅಶುದ್ಧವಾದದ್ದು; ಅವನು ಕೂತುಕೊಳ್ಳುವ ಪ್ರತಿ ಯೊಂದು ವಸ್ತುವು ಅಶುದ್ಧವಾಗಿರುವದು.
4 Toda cama em que se deitar o que tiver corrimento será impuro; e toda coisa sobre o que se assentar será impura.
5 ಅವನ ಹಾಸಿಗೆಯನ್ನು ಮುಟ್ಟುವವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
5 E qualquer que tocar a sua cama lavará as suas vestes, e se banhará em água, e será impuro até a tarde.
6 ಇದಲ್ಲದೆ ಸ್ರಾವವಿರುವವನು ಕೂತುಕೊಂಡ ಯಾವುದೇ ವಸ್ತು ವಿನ ಮೇಲೆ ಕೂತುಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರುವನು.
6 E aquele que se assentar sobre alguma coisa em que se assentou o que tem o corrimento lavará as suas vestes, e se banhará em água, e será impuro até a tarde.
7 ಸ್ರಾವವಿರುವವನ ಶರೀರವನ್ನು ಮುಟ್ಟುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡ ಬೇಕು ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರ ಬೇಕು.
7 E aquele que tocar a carne do que tem o corrimento lavará as suas vestes, e se banhará em água, e será impuro até a tarde.
8 ಶುದ್ಧನಾಗಿರುವನ ಮೇಲೆ ಸ್ರಾವವಿರುವವನು ಉಗುಳಿದರೆ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
8 E se aquele que tem o corrimento cuspir sobre aquele que é limpo, então ele lavará as suas vestes, e se banhará em água, e será impuro até a tarde.
9 ಸ್ರಾವವುಳ್ಳವನು ಏರಿಕೂತುಕೊಂಡಿದ್ದ ತಡಿಯು ಅಶುದ್ಧವಾಗಿರುವದು.
9 E toda sela em que cavalgar o que tem o corrimento será impura.
10 ಇದಲ್ಲದೆ ಅವನ ಕೆಳಗಿರುವ ಯಾವದಾದರೂ ವಸ್ತುವನ್ನು ಮುಟ್ಟಿದವನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು; ಅವುಗಳಲ್ಲಿ ಯಾವದನ್ನಾದರೂ ಹೊತ್ತುಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ನೀರಿನಲ್ಲಿ ಸ್ನಾನಮಾಡಬೇಕು ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರುವನು.
10 E qualquer que tocar em alguma coisa que estava debaixo dele será impuro até a tarde; e aquele que levar qualquer destas coisas lavará as suas vestes, e se banhará em água, e será impuro até a tarde.
11 ಸ್ರಾವವುಳ್ಳ ವನು ತನ್ನ ಕೈಗಳನ್ನು ನೀರಿನಿಂದ ತೊಳೆದುಕೊಳ್ಳದೆ ಯಾರನ್ನಾದರೂ ಮುಟ್ಟಿದರೆ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು; ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
11 E todo aquele a quem tocar o que tem o corrimento, sem ter lavado as suas mãos com água, ele lavará as suas vestes, e se banhará em água, e será impuro até a tarde.
12 ಸ್ರಾವವುಳ್ಳವನು ಮುಟ್ಟಿದ ಮಣ್ಣಿನ ಪಾತ್ರೆಯನ್ನು ಒಡೆಯಬೇಕು, ಮರದ ಪ್ರತಿಯೊಂದು ಪಾತ್ರೆಯನ್ನು ನೀರಿನಲ್ಲಿ ಜಾಲಿಸಿ ತೊಳೆಯಬೇಕು.
12 E o vaso de barro em que tocar o que tem o corrimento será quebrado; e todo vaso de madeira será lavado com água.
13 ಸ್ರಾವವುಳ್ಳವನು ತನ್ನ ಸ್ರಾವದಿಂದ ಶುದ್ಧನಾದರೆ ತನ್ನ ಶುದ್ಧತೆಗಾಗಿ ಏಳು ದಿನಗಳನ್ನು ಲೆಕ್ಕಮಾಡಿ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಇದಲ್ಲದೆ ಹರಿಯುವ ನೀರಿನಲ್ಲಿ ತನ್ನ ಶರೀರವನ್ನು ತೊಳೆದುಕೊಳ್ಳಬೇಕು; ಆಗ ಅವನು ಶುದ್ಧನಾಗಿರುವನು.
13 E quando o que tem o corrimento estiver limpo do seu corrimento, então ele contará sete dias para a sua purificação; e lavará as suas vestes, e banhará a sua carne em água corrente, e será limpo.
14 ಎಂಟನೆಯ ದಿನದಲ್ಲಿ ಅವನು ತನಗಾಗಿ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತೆಗೆದು ಕೊಂಡು ಸಭೆಯ ಗುಡಾರದ ಬಾಗಿಲ ಬಳಿ ಕರ್ತನ ಎದುರಿನಲ್ಲಿ ಬಂದು ಅವುಗಳನ್ನು ಯಾಜಕನಿಗೆ ಕೊಡಬೇಕು.
14 E no oitavo dia, ele tomará duas rolas, ou dois pombinhos, e virá perante o SENHOR, à porta do tabernáculo da congregação, e os dará ao sacerdote;
15 ಆಗ ಯಾಜಕನು ಒಂದನ್ನು ಪಾಪಬಲಿ ಗಾಗಿ ಇನ್ನೊಂದನ್ನು ದಹನಬಲಿಗಾಗಿ ಅವುಗಳನ್ನು ಸಮರ್ಪಿಸಬೇಕು; ಯಾಜಕನು ಅವನ ಸ್ರಾವಕ್ಕೋಸ್ಕರ ಕರ್ತನ ಎದುರಿನಲ್ಲಿ ಪ್ರಾಯಶ್ಚಿತ್ತವನ್ನು ಮಾಡಬೇಕು.
15 e o sacerdote os oferecerá, um para a oferta pelo pecado e o outro para oferta queimada; e o sacerdote fará expiação para ele, diante do SENHOR, por causa do seu corrimento.
16 ಒಬ್ಬನಿಗೆ ವೀರ್ಯವು ಹೊರಟುಹೋದರೆ ಅವನು ತನ್ನ ಶರೀರವನ್ನೆಲ್ಲಾ ನೀರಿನಲ್ಲಿ ತೊಳೆದು ಸಾಯಂಕಾ ಲದ ವರೆಗೆ ಅಶುದ್ಧನಾಗಿರಬೇಕು.
16 E se a semente de cópula de algum homem sair dele, então banhará toda a sua carne com água e será impuro até a tarde.
17 ವೀರ್ಯವು ಬಿದ್ದ ಪ್ರತಿಯೊಂದು ಬಟ್ಟೆ ಮತ್ತು ಪ್ರತಿಯೊಂದು ಚರ್ಮ ನೀರಿನಿಂದ ತೊಳೆಯಲ್ಪಟ್ಟು ಸಾಯಂಕಾಲದ ವರೆಗೆ ಅಶುದ್ಧವಾಗಿರಬೇಕು.
17 E toda veste, e toda pele em que houver semente da cópula será lavada com água, e serão impuras até a tarde.
18 ಇದಲ್ಲದೆ ಸ್ತ್ರೀಯೊಂದಿಗೆ ಒಬ್ಬನು ಮಲಗಿ ವೀರ್ಯವನ್ನು ಬಿಟ್ಟಿದ್ದರೆ ಅವರಿಬ್ಬರೂ ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅಶುದ್ಧರಾಗಿರಬೇಕು.
18 E a mulher com quem um homem se deitar com semente da cópula, ambos se banharão com água, e serão impuros até a tarde.
19 ಒಬ್ಬ ಸ್ತ್ರೀಗೆ ತನ್ನ ಶರೀರದಲ್ಲಿ ರಕ್ತಸ್ರಾವವಿದ್ದರೆ ಅವಳು ಏಳು ದಿವಸಗಳ ವರೆಗೆ ಪ್ರತ್ಯೇಕಿಸಲ್ಪಡಬೇಕು. ಅವಳನ್ನು ಯಾವನಾದರೂ ಮುಟ್ಟಿದರೆ ಅವನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು;
19 E se a mulher tiver um corrimento, e o seu corrimento na sua carne for sangue, ela será separada por sete dias, e qualquer que a tocar será impuro até a tarde.
20 ಅವಳು ಮುಟ್ಟಾದಾಗ ಅವಳು ಮಲಗುವ ಪ್ರತಿಯೊಂದು ವಸ್ತುವು ಅಶುದ್ಧವಾಗಿರಬೇಕು. ಅವಳು ಕೂತುಕೊ ಳ್ಳುವ ಪ್ರತಿಯೊಂದು ವಸ್ತುವು ಅಶುದ್ಧವಾಗಿರಬೇಕು.
20 E toda coisa sobre o que ela se deitar durante a sua separação será impuro; e tudo sobre o que ela se assentar será impuro.
21 ಅವಳ ಹಾಸಿಗೆಯನ್ನು ಮುಟ್ಟುವವನು ತನ್ನ ಬಟ್ಟೆ ಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು; ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
21 E qualquer que tocar a sua cama lavará as suas vestes, e se banhará com água, e será impuro até a tarde.
22 ಅವಳು ಕೂತುಕೊಂಡಿರುವ ಯಾವದನ್ನಾದರೂ ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಅವನು ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು.
22 E qualquer que tocar alguma coisa sobre o que ela se tiver assentado lavará as suas vestes, e se banhará com água, e será impuro até a tarde.
23 ಇದಲ್ಲದೆ ಅವಳ ಹಾಸಿಗೆಯ ಮೇಲಾಗಲಿ ಇಲ್ಲವೆ ಅವಳು ಕೂತುಕೊಂಡ ಯಾವದರ ಮೇಲಾಗಲಿ ಇರುವದನ್ನು ಮುಟ್ಟಿ ದವನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು.
23 E se alguma coisa estiver sobre sua cama ou sobre alguma coisa em que ela se assentou, se alguém a tocar, será impuro até a tarde.
24 ಯಾವನಾದರೂ ಅವಳೊಂದಿಗೆ ಮಲಗಿದರೆ ಅವಳ ಸಾರವು (ಹೊಲೆ) ಅವನಿಗೆ ತಗಲಿದರೆ ಅವನು ಏಳು ದಿವಸ ಅಶುದ್ಧನಾಗಿರಬೇಕು; ಅವನು ಮಲಗಿ ಕೊಳ್ಳುವ ಹಾಸಿಗೆಯೆಲ್ಲಾ ಅಶುದ್ಧವಾಗಿರುವದು.
24 E se algum homem se deitar com ela, e a sua menstruação verter sobre ele, impuro será por sete dias; também toda cama sobre a qual se deitar será impura.
25 ಇದಲ್ಲದೆ ಹೆಂಗಸಿಗೆ ಅವಳ ಮುಟ್ಟಿನ ಕಾಲಕ್ಕಿಂತಲೂ ಹೆಚ್ಚು ದಿನ ರಕ್ತಸ್ರಾವವು ಇದ್ದರೆ ಇಲ್ಲವೆ ಮುಟ್ಟಾಗಿದ್ದ ಕಾಲದಲ್ಲಾಗುವ ರಕ್ತಸ್ರಾವಕ್ಕಿಂತ ಹೆಚ್ಚಾಗಿ ಹರಿ ಯುತ್ತಿದ್ದರೆ ಅವಳ ಸ್ರಾವದ ಅಶುದ್ಧತ್ವದ ಎಲ್ಲಾ ದಿನ ಗಳು ಅವಳ ಮುಟ್ಟಿನ ದಿನಗಳಂತೆ ಇರಬೇಕು; ಅವಳು ಅಶುದ್ಧಳಾಗಿರುವಳು.
25 E se uma mulher tiver um corrimento do seu sangue por muitos dias fora do tempo da sua separação, ou quando tiver fluxo de sangue por mais tempo do que a sua separação; todos os dias do corrimento da sua impureza será como nos dias da sua separação; ela será impura.
26 ಅವಳ ಸ್ರಾವದ ಎಲ್ಲಾ ದಿನಗಳಲ್ಲಿ ಅವಳು ಮಲಗಿಕೊಳ್ಳುವ ಪ್ರತಿಯೊಂದು ಹಾಸಿಗೆಯೂ ಅವಳ ಮುಟ್ಟಿನ ಹಾಸಿಗೆಯಂತಿರಬೇಕು; ಅವಳು ಕೂತುಕೊಳ್ಳುವದೆಲ್ಲವೂ ಅವಳ ಪ್ರತ್ಯೇಕದ ಮುಟ್ಟಿನ ಅಶುದ್ಧತೆಯಂತೆಯೇ ಅಶುದ್ಧವಾಗಿರುವದು.
26 Toda cama sobre a qual ela se deitar todos os dias do seu corrimento lhe será como a cama da sua separação; e tudo sobre o qual ela se assentar será impura, conforme a impureza da sua separação.
27 ಯಾವನಾದರು ಆ ವಸ್ತುಗಳನ್ನು ಮುಟ್ಟಿದರೆ ಅಶುದ್ಧ ನಾಗಿರುವನು, ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
27 E aquele que tocar estas coisas será impuro, e lavará as suas vestes, e se banhará com água, e será impuro até a tarde.
28 ಅವಳು ತನ್ನ ಸ್ರಾವದಿಂದ ಶುದ್ಧಳಾದ ದಿನದಿಂದ ಏಳು ದಿನ ಲೆಕ್ಕಿಸಬೇಕು ತರು ವಾಯ ಅವಳು ಶುದ್ಧಳಾಗಿರುವಳು.
28 Mas se ela for limpa do seu corrimento, então ela contará para si sete dias, e depois ela será limpa.
29 ಎಂಟನೆಯ ದಿನದಲ್ಲಿ ಅವಳು ಎರಡು ಬೆಳವಕ್ಕಿಗಳನ್ನಾಗಿಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ಸಭೆಯ ಗುಡಾರದ ಬಾಗಿಲ ಬಳಿ ಯಾಜಕನ ಬಳಿಗೆ ತರ ಬೇಕು.
29 E no oitavo dia ela tomará consigo duas rolas ou dois pombinhos, e os trará ao sacerdote, à porta do tabernáculo da congregação.
30 ಯಾಜಕನು ಒಂದನ್ನು ಪಾಪಬಲಿಗಾ ಗಿಯೂ ಇನ್ನೊಂದನ್ನು ದಹನಬಲಿಗಾಗಿಯೂ ಸಮ ರ್ಪಿಸಬೇಕು; ಯಾಜಕನು ಅವಳಿಗಾಗಿ ಅವಳ ಅಶುದ್ಧ ತೆಯ ಸ್ರಾವದ ವಿಷಯದಲ್ಲಿ ಕರ್ತನ ಎದುರಿನಲ್ಲಿ ಪ್ರಾಯಶ್ಚಿತ್ತಮಾಡಬೇಕು.
30 Então o sacerdote oferecerá um por oferta pelo pecado, e o outro por oferta queimada; e o sacerdote fará expiação por ela perante o SENHOR, pelo corrimento da sua impureza.
31 ಹೀಗೆ ನೀವು ಇಸ್ರಾಯೇಲ್‌ ಮಕ್ಕಳನ್ನು ಅವರ ಅಶುದ್ಧತ್ವದಿಂದ ಪ್ರತ್ಯೇಕಿಸಬೇಕು; ಆಗ ಅವರು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಹೊಲೆಮಾಡದೆ ತಮ್ಮ ಅಶುದ್ಧತ್ವದಿಂದ ಸಾಯುವದಿಲ್ಲ.
31 Assim separareis os filhos de Israel das suas impurezas, para que eles não morram nas suas impurezas, quando corromperem o meu tabernáculo, que está no meio deles.
32 ಮೇಹಸ್ರಾವವುಳ್ಳವನಿಗೂ ವೀರ್ಯಸ್ರಾವವುಳ್ಳ ವನಿಗೂ ಅವುಗಳಿಂದ ಅಶುದ್ಧವಾಗುವವರಿಗೂ ಇರುವ ನಿಯಮವು ಇದೇ.
32 Esta é a lei daquele que tem o corrimento e daquele de quem sai a semente, e que assim fica impuro;
33 ಮುಟ್ಟು ಎಂಬ ರೋಗವಿರು ವವಳಿಗೂ ಮೇಹಸ್ರಾವವಿರುವ ಗಂಡಸಿಗೂ ಹೆಂಗಸಿಗೂ ಅಶುದ್ಧವಾದವಳ ಸಂಗಡ ಮಲಗಿದವನಿಗೂ ಇರುವ ನಿಯಮವು ಇದೇ.
33 e daquela que está enferma no seu período menstrual, e daquele que tem o corrimento, do homem, e da mulher, e daquele que se deitar com aquela que está impura.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Levítico 15, comparar traduções ou montar um estudo — tudo direto pelo WhatsApp.