Lucas 5

Kannada Bible (GL_KANNADA) vs ARA

Sair da comparação
ARA Almeida Revista e Atualizada 1993
1 ಇದಾದ ಮೇಲೆ ಆತನು ಗೆನೇಜರೆತ್‌ ಕೆರೆಯ ಬಳಿಯಲ್ಲಿ ನಿಂತುಕೊಂಡಿದ್ದಾಗ ಜನರು ದೇವರ ವಾಕ್ಯವನ್ನು ಕೇಳುವದಕ್ಕಾಗಿ ಆತನ ಮೇಲೆ ನೂಕಾಡುತ್ತಿದ್ದರು.
1 Aconteceu que, ao apertá-lo a multidão para ouvir a palavra de Deus, estava ele junto ao lago de Genesaré;
2 ಆಗ ಆತನು ಕೆರೆಯ ಬಳಿಯಲ್ಲಿ ಎರಡು ದೋಣಿಗಳನ್ನು ಕಂಡನು; ಅಲ್ಲಿ ಬೆಸ್ತರು ಅವುಗಳಿಂದ ಹೊರಗೆ ಹೋಗಿ ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.
2 e viu dois barcos junto à praia do lago; mas os pescadores, havendo desembarcado, lavavam as redes.
3 ಆಗ ಅವುಗಳಲ್ಲಿ ಸೀಮೋನನದಾಗಿದ್ದ ದೋಣಿಯನ್ನು ಆತನು ಹತ್ತಿದ ಮೇಲೆ ಅದನ್ನು ಭೂಮಿಯಿಂದ ಸ್ವಲ್ಪ ನೂಕ ಬೇಕೆಂದು ಅವನನ್ನು ಕೇಳಿಕೊಂಡನು. ಆತನು ಕೂತುಕೊಂಡು ದೋಣಿಯೊಳಗಿಂದ ಜನರಿಗೆ ಬೋಧಿಸಿದನು.
3 Entrando em um dos barcos, que era o de Simão, pediu-lhe que o afastasse um pouco da praia; e, assentando-se, ensinava do barco as multidões.
4 ಆತನು ಮಾತನಾಡುವದನ್ನು ಮುಗಿಸಿದ ಮೇಲೆ ಸೀಮೋನನಿಗೆ--(ದೋಣಿಯನ್ನು) ಆಳವಾದ ಸ್ಥಳಕ್ಕೆ ನಡಿಸಿ ವಿಾನು ಹಿಡಿಯುವದಕ್ಕೆ ನಿಮ್ಮ ಬಲೆಗಳನ್ನು ಬೀಸಿರಿ ಎಂದು ಹೇಳಿದನು.
4 Quando acabou de falar, disse a Simão: Faze-te ao largo, e lançai as vossas redes para pescar.
5 ಅದಕ್ಕೆ ಪ್ರತ್ಯುತ್ತರವಾಗಿ ಸೀಮೋನನು ಆತನಿಗೆ--ಗುರುವೇ, ನಾವು ರಾತ್ರಿ ಯೆಲ್ಲಾ ಪ್ರಯಾಸಪಟ್ಟೆವು. ಆದರೆ ಏನೂ ಸಿಕ್ಕಲಿಲ್ಲ; ಆದಾಗ್ಯೂ ನಿನ್ನ ಮಾತಿನಂತೆ ನಾನು ಬಲೆಯನ್ನು ಬೀಸುತ್ತೇನೆ ಎಂದು ಹೇಳಿದನು.
5 Respondeu-lhe Simão: Mestre, havendo trabalhado toda a noite, nada apanhamos, mas sob a tua palavra lançarei as redes.
6 ಅವರು ಅದರಂತೆ ಮಾಡಿ ವಿಾನಿನ ದೊಡ್ಡ ರಾಶಿಯನ್ನು ಹಿಡಿದರು. ಅವರ ಬಲೆಯು ಹರಿಯಿತು.
6 Isto fazendo, apanharam grande quantidade de peixes; e rompiam-se-lhes as redes.
7 ಆಗ ಬೇರೆ ದೋಣಿ ಯಲ್ಲಿದ್ದ ತಮ್ಮ ಪಾಲುಗಾರರು ಬಂದು ತಮಗೆ ಸಹಾಯ ಮಾಡಬೇಕೆಂದು ಅವರು ಸನ್ನೆ ಮಾಡಿದರು; ಮತ್ತು ಅವರು ಬಂದು ಎರಡು ದೋಣಿಗಳನ್ನು ತುಂಬಿ ಸಲಾಗಿ ಅವು ಮುಳುಗಲಾರಂಭಿಸಿದವು.
7 Então, fizeram sinais aos companheiros do outro barco, para que fossem ajudá-los. E foram e encheram ambos os barcos, a ponto de quase irem a pique.
8 ಸೀಮೋನ್‌ ಪೇತ್ರನು ಅದನ್ನು ಕಂಡಾಗ ಯೇಸುವಿನ ಮೊಣಕಾಲಿಗೆ ಬಿದ್ದು--ನನ್ನನ್ನು ಬಿಟ್ಟು ಹೋಗು; ಓ ಕರ್ತನೇ, ನಾನು ಪಾಪಾತ್ಮನು ಅಂದನು.
8 Vendo isto, Simão Pedro prostrou-se aos pés de Jesus, dizendo: Senhor, retira-te de mim, porque sou pecador.
9 ಯಾಕಂದರೆ ಅವರು ಹಿಡಿದ ವಿಾನುಗಳ ರಾಶಿಗಾಗಿ ಅವನೂ ಅವನ ಸಂಗಡ ಇದ್ದವರೂ ವಿಸ್ಮಯಗೊಂಡಿದ್ದರು.
9 Pois, à vista da pesca que fizeram, a admiração se apoderou dele e de todos os seus companheiros,
10 ಸೀಮೋನನ ಕೂಡ ಪಾಲುಗಾರರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರೂ ಹಾಗೆಯೇ ವಿಸ್ಮಯ ಪಟ್ಟರು. ಆಗ ಯೇಸು ಸೀಮೋನನಿಗೆ--ಹೆದರಬೇಡ. ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವಿ ಅಂದನು.
10 bem como de Tiago e João, filhos de Zebedeu, que eram seus sócios. Disse Jesus a Simão: Não temas; doravante serás pescador de homens.
11 ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದಾಗ ಎಲ್ಲವನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
11 E, arrastando eles os barcos sobre a praia, deixando tudo, o seguiram.
12 ತರುವಾಯ ಆತನು ಒಂದಾನೊಂದು ಪಟ್ಟಣ ದಲ್ಲಿದ್ದಾಗ ಇಗೋ, ತುಂಬಾ ಕುಷ್ಠವಿದ್ದ ಒಬ್ಬ ಮನುಷ್ಯನು ಯೇಸುವನ್ನು ನೋಡಿ ಬೋರಲ ಬಿದ್ದು ಆತನಿಗೆ--ಕರ್ತನೇ, ನಿನಗೆ ಮನಸ್ಸಿದ್ದರೆ ನೀನು ನನ್ನನ್ನು ಶುದ್ಧ ಮಾಡಬಲ್ಲೆ ಎಂದು ಆತನನ್ನು ಬೇಡಿಕೊಂಡನು.
12 Aconteceu que, estando ele numa das cidades, veio à sua presença um homem coberto de lepra; ao ver a Jesus, prostrando-se com o rosto em terra, suplicou-lhe: Senhor, se quiseres, podes purificar-me.
13 ಆತನು ತನ್ನ ಕೈಚಾಚಿ ಅವನನ್ನು ಮುಟ್ಟಿ ಅವ ನಿಗೆ--ನನಗೆ ಮನಸ್ಸುಂಟು; ನೀನು ಶುದ್ಧನಾಗು ಎಂದು ಹೇಳಿದನು. ಕೂಡಲೆ ಆ ಕುಷ್ಠವು ಅವನಿಂದ ಹೊರಟುಹೋಯಿತು.
13 E ele, estendendo a mão, tocou-lhe, dizendo: Quero, fica limpo! E, no mesmo instante, lhe desapareceu a lepra.
14 ಆತನು ಅವನಿಗೆ--ನೀನು ಯಾರಿಗೂ ಹೇಳಬಾರದು; ಆದರೆ ಹೋಗಿ ಜನರಿಗೆ ಸಾಕ್ಷಿಯಾಗಿರುವಂತೆ ಯಾಜಕನಿಗೆ ನಿನ್ನನ್ನು ತೋರಿಸಿ ಕೊಂಡು ನಿನ್ನ ಶುದ್ಧಾಚಾರಕ್ಕಾಗಿ ಮೋಶೆಯು ಅಪ್ಪಣೆ ಕೊಟ್ಟಂತೆ ಅರ್ಪಿಸು ಎಂದು ಆಜ್ಞಾಪಿಸಿದನು.
14 Ordenou-lhe Jesus que a ninguém o dissesse, mas vai, disse, mostra-te ao sacerdote e oferece, pela tua purificação, o sacrifício que Moisés determinou, para servir de testemunho ao povo.
15 ಆದರೂ ಆತನ ಕೀರ್ತಿಯು ಇನ್ನೂ ಹೆಚ್ಚಾಗಿ ದೂರದವರೆಗೂ ಹರಡಿತು; ದೊಡ್ಡ ಸಮೂಹಗಳು ಆತನ ಉಪದೇಶವನ್ನು ಕೇಳುವದಕ್ಕೂ ತಮ್ಮ ರೋಗಗಳನ್ನು ಆತನಿಂದ ವಾಸಿಮಾಡಿಸಿಕೊಳ್ಳು ವದಕ್ಕೂ ಕೂಡಿ ಬಂದರು.
15 Porém o que se dizia a seu respeito cada vez mais se divulgava, e grandes multidões afluíam para o ouvirem e serem curadas de suas enfermidades.
16 ಆತನಾದರೋ ತನ್ನನ್ನು ಪ್ರತ್ಯೇಕಿಸಿಕೊಂಡು ಅರಣ್ಯಕ್ಕೆ ಹೋಗಿ ಪ್ರಾರ್ಥಿಸಿದನು.
16 Ele, porém, se retirava para lugares solitários e orava.
17 ಇದಾದ ಮೇಲೆ ಒಂದಾನೊಂದು ದಿನ ಆತನು ಬೋಧಿಸುತ್ತಿದ್ದಾಗ ಗಲಿಲಾಯ ಯೂದಾಯ ಮತ್ತು ಯೆರೂಸಲೇಮಿನ ಪ್ರತಿಯೊಂದು ಊರಿನಿಂದ ಬಂದಿದ್ದ ಫರಿಸಾಯರೂ ನ್ಯಾಯಪ್ರಮಾಣದ ಪಂಡಿತರೂ ಅಲ್ಲಿ ಕೂತುಕೊಂಡಿದ್ದರು. ಕರ್ತನ ಶಕ್ತಿಯು ಅವರನ್ನು ಸ್ವಸ್ಥ ಮಾಡುವದಕ್ಕೆ ಸಿದ್ಧವಿತ್ತು.
17 Ora, aconteceu que, num daqueles dias, estava ele ensinando, e achavam-se ali assentados fariseus e mestres da Lei, vindos de todas as aldeias da Galileia, da Judeia e de Jerusalém. E o poder do Senhor estava com ele para curar.
18 ಆಗ ಇಗೋ, ಪಾರ್ಶ್ವವಾಯು ರೋಗವಿದ್ದ ಒಬ್ಬ ಮನುಷ್ಯನನ್ನು ಕೆಲವರು ಹಾಸಿಗೆಯಲ್ಲಿ ಹೊತ್ತು ಕೊಂಡು ಬಂದು ಅವನನ್ನು ಒಳಗೆ ಆತನ ಎದುರಿಗೆ ತರುವ ವಿಧಾನವನ್ನು ಹುಡುಕಿದರು.
18 Vieram, então, uns homens trazendo em um leito um paralítico; e procuravam introduzi-lo e pô-lo diante de Jesus.
19 ಆದರೆ ಅಲ್ಲಿದ್ದ ಜನಸಮೂಹದವರ ನಿಮಿತ್ತ ಅವರು ಅವನನ್ನು ಒಳಗೆ ತರುವ ಯಾವ ವಿಧಾನವನ್ನೂ ಕಾಣದೆ ಮನೆಯಮೇಲೆ ಹೋಗಿ ಹಂಚುಗಳನ್ನು ತೆಗೆದು ಅವನನ್ನು ಹಾಸಿಗೆಯೊಂದಿಗೆ ನಡುವೆ ಯೇಸುವಿನ ಮುಂದೆ ಇಳಿಸಿದರು.
19 E, não achando por onde introduzi-lo por causa da multidão, subindo ao eirado, o desceram no leito, por entre os ladrilhos, para o meio, diante de Jesus.
20 ಆಗ ಆತನು ಅವರ ನಂಬಿಕೆಯನ್ನು ನೋಡಿ ಅವನಿಗೆ-- ಮನುಷ್ಯನೇ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು.
20 Vendo-lhes a fé, Jesus disse ao paralítico: Homem, estão perdoados os teus pecados.
21 ಆಗ ಶಾಸ್ತ್ರಿಗಳೂ ಫರಿ ಸಾಯರೂ--ದೇವದೂಷಣೆಗಳನ್ನು ಮಾಡುವದಕ್ಕೆ ಇವನು ಯಾರು? ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು ಎಂದು ತಮ್ಮಲ್ಲಿ ಮಾತನಾಡಿಕೊಂಡರು.
21 E os escribas e fariseus arrazoavam, dizendo: Quem é este que diz blasfêmias? Quem pode perdoar pecados, senão Deus?
22 ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದು ಪ್ರತ್ಯುತ್ತರವಾಗಿ ಅವರಿಗೆ--ನೀವು ನಿಮ್ಮ ಹೃದಯಗಳಲ್ಲಿ ಅಂದು ಕೊಳ್ಳುತ್ತಿರುವದೇನು?
22 Jesus, porém, conhecendo-lhes os pensamentos, disse-lhes: Que arrazoais em vosso coração?
23 ಯಾವದು ಸುಲಭ-- ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಅನ್ನುವದೋ? ಇಲ್ಲವೆ--ಎದ್ದು ನಡೆ ಅನ್ನುವದೋ?
23 Qual é mais fácil, dizer: Estão perdoados os teus pecados ou: Levanta-te e anda?
24 ಆದರೆ ಮನುಷ್ಯಕುಮಾರನಿಗೆ ಪಾಪಗಳನ್ನು ಕ್ಷಮಿಸುವದಕ್ಕೆ ಭೂಮಿಯ ಮೇಲೆ ಅಧಿಕಾರವುಂಟೆಂದು ನೀವು ತಿಳಿಯಬೇಕು (ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ)--ಎದ್ದು ನಿನ್ನ ಹಾಸಿಗೆಯನ್ನು ತಕ್ಕೊಂಡು ನಿನ್ನ ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ ಅಂದನು.
24 Mas, para que saibais que o Filho do Homem tem sobre a terra autoridade para perdoar pecados — disse ao paralítico: Eu te ordeno: Levanta-te, toma o teu leito e vai para casa.
25 ಕೂಡಲೆ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ ತನ್ನ ಸ್ವಂತ ಮನೆಗೆ ಹೊರಟುಹೋದನು.
25 Imediatamente, se levantou diante deles e, tomando o leito em que permanecera deitado, voltou para casa, glorificando a Deus.
26 ಅಲ್ಲಿದ್ದವ ರೆಲ್ಲರೂ ವಿಸ್ಮಯಗೊಂಡು ದೇವರನ್ನು ಮಹಿಮೆ ಪಡಿಸಿದರು. ಮತ್ತು ಅವರು ಭಯದಿಂದ ಕೂಡಿದ ವರಾಗಿ--ನಾವು ಈ ದಿನ ಅಪೂರ್ವವಾದವುಗಳನ್ನು ನೋಡಿದ್ದೇವೆ ಅಂದರು.
26 Todos ficaram atônitos, davam glória a Deus e, possuídos de temor, diziam: Hoje, vimos prodígios.
27 ಇವುಗಳಾದ ಮೇಲೆ ಆತನು ಮುಂದೆ ಹೋಗಿ ತೆರಿಗೆಯ ಕಚೇರಿಯಲ್ಲಿ ಕೂತುಕೊಂಡಿದ್ದ ಲೇವಿಯ ನೆಂಬ ಹೆಸರುಳ್ಳ ಒಬ್ಬ ಸುಂಕದವನನ್ನು ನೋಡಿ ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು.
27 Passadas estas coisas, saindo, viu um publicano, chamado Levi, assentado na coletoria, e disse-lhe: Segue-me!
28 ಅವನು ಎಲ್ಲವನ್ನು ಬಿಟ್ಟು ಎದ್ದು ಆತನನ್ನು ಹಿಂಬಾಲಿಸಿದನು.
28 Ele se levantou e, deixando tudo, o seguiu.
29 ತರುವಾಯ ಲೇವಿಯು ತನ್ನ ಸ್ವಂತ ಮನೆಯಲ್ಲಿ ಆತನಿಗೆ ದೊಡ್ಡ ಔತಣವನ್ನು ಮಾಡಿಸಲು ಸುಂಕದವರು ಮತ್ತು ಬೇರೆ ಬಹಳ ಜನರು ಅವರೊಂದಿಗೆ ಕೂತುಕೊಂಡರು.
29 Então, lhe ofereceu Levi um grande banquete em sua casa; e numerosos publicanos e outros estavam com eles à mesa.
30 ಆದರೆ ಅವರ ಶಾಸ್ತ್ರಿಗಳೂ ಫರಿಸಾಯರೂ ಆತನ ಶಿಷ್ಯರಿಗೆ ವಿರೋಧವಾಗಿ ಗುಣುಗುಟ್ಟುತ್ತಾ--ನೀವು ಯಾಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ ಎಂದು ಕೇಳಿದರು.
30 Os fariseus e seus escribas murmuravam contra os discípulos de Jesus, perguntando: Por que comeis e bebeis com os publicanos e pecadores?
31 ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಕ್ಷೇಮದಲ್ಲಿ ಇರುವವರಿಗೆ ಅಲ್ಲ, ಆದರೆ ಕ್ಷೇಮವಿಲ್ಲದವರಿಗೆ ವೈದ್ಯನು ಬೇಕು.
31 Respondeu-lhes Jesus: Os sãos não precisam de médico, e sim os doentes.
32 ನಾನು ನೀತಿವಂತರನ್ನಲ್ಲ, ಆದರೆ ಪಾಪಿಗಳನ್ನು ಮಾನಸಾಂತರಕ್ಕೆ ಕರೆಯುವದಕ್ಕಾಗಿ ಬಂದೆನು ಎಂದು ಹೇಳಿದನು.
32 Não vim chamar justos, e sim pecadores, ao arrependimento.
33 ಅವರು ಆತನಿಗೆ--ಯೋಹಾನನ ಶಿಷ್ಯರು ಪದೇ ಪದೇ ಉಪವಾಸವಿದ್ದು ಪ್ರಾರ್ಥನೆಗಳನ್ನು ಮಾಡುತ್ತಾರೆ; ಅದರಂತೆಯೇ ಫರಿಸಾಯರ ಶಿಷ್ಯರೂ ಮಾಡುತ್ತಾರೆ; ಆದರೆ ನಿನ್ನವರು ಯಾಕೆ ತಿಂದು ಕುಡಿಯುತ್ತಾರೆ ಎಂದು ಹೇಳಿದರು.
33 Disseram-lhe eles: Os discípulos de João e bem assim os dos fariseus frequentemente jejuam e fazem orações; os teus, entretanto, comem e bebem.
34 ಆತನು ಅವರಿಗೆ--ಮದುಮಗನು ಮದುವೆ ಮನೆಯ ಮಕ್ಕಳ ಜೊತೆಯಲ್ಲಿ ಇರುವಾಗ ಅವರಿಗೆ ಉಪವಾಸ ಮಾಡಿಸುವಂತೆ ನಿಮ್ಮಿಂದಾದೀತೇ?
34 Jesus, porém, lhes disse: Podeis fazer jejuar os convidados para o casamento, enquanto está com eles o noivo?
35 ಆದರೆ ಮದುಮಗನು ಅವ ರಿಂದ ತೆಗೆಯಲ್ಪಡುವ ದಿವಸಗಳು ಬರುವವು; ಆಗ ಆ ದಿವಸಗಳಲ್ಲಿ ಅವರು ಉಪವಾಸ ಮಾಡುವರು ಎಂದು ಹೇಳಿದನು.
35 Dias virão, contudo, em que lhes será tirado o noivo; naqueles dias, sim, jejuarão.
36 ಆತನು ಅವರಿಗೆ ಒಂದು ಸಾಮ್ಯವನ್ನು ಸಹ ಹೇಳಿದ್ದೇನಂದರೆ--ಹಳೇ ವಸ್ತ್ರಕ್ಕೆ ಹೊಸ ಬಟ್ಟೆಯ ತುಂಡನ್ನು ಯಾರೂ ಹಚ್ಚುವದಿಲ್ಲ; ಹಚ್ಚಿದರೆ ಹೊಸದು ಹರಿದು ಹೋಗುವದು ಮತ್ತು ಹೊಸದರಿಂದ ತೆಗೆದ ತುಂಡು ಹಳೇದರೊಂದಿಗೆ ಸರಿಬೀಳುವದಿಲ್ಲ.
36 Também lhes disse uma parábola: Ninguém tira um pedaço de veste nova e o põe em veste velha; pois rasgará a nova, e o remendo da nova não se ajustará à velha.
37 ಯಾರೂ ಹಳೇಬುದ್ದಲಿಗಳಲ್ಲಿ ಹೊಸದ್ರಾಕ್ಷಾರಸವನ್ನು ಹಾಕುವದಿಲ್ಲ; ಹಾಕಿದರೆ ಹೊಸದ್ರಾಕ್ಷಾರಸವು ಬುದ್ದಲಿಗಳನ್ನು ಒಡೆಯುವದ ರಿಂದ ಅದು ಚೆಲ್ಲಿ ಹೋಗುವದು ಮತ್ತು ಬುದ್ದಲಿಗಳು ಹಾಳಾಗಿ ಹೋಗುವವು.
37 E ninguém põe vinho novo em odres velhos, pois o vinho novo romperá os odres; entornar-se-á o vinho, e os odres se estragarão.
38 ಆದರೆ ಹೊಸದ್ರಾಕ್ಷಾ ರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು; ಹೀಗೆ ಅವೆರಡೂ ಭದ್ರವಾಗಿರುವವು.
38 Pelo contrário, vinho novo deve ser posto em odres novos [e ambos se conservam].
39 ಯಾವನಾದರೂ ಹಳೇದ್ರಾಕ್ಷಾರಸವನ್ನು ಕುಡಿದ ಕೂಡಲೆ ಹೊಸದನ್ನು ಅಪೇಕ್ಷಿಸುವದಿಲ್ಲ; ಯಾಕಂದರೆ ಅವನು--ಹಳೇದೇ ಉತ್ತಮ ಅನ್ನುವನು.
39 E ninguém, tendo bebido o vinho velho, prefere o novo; porque diz: O velho é excelente.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Lucas 5, comparar traduções ou montar um estudo — tudo direto pelo WhatsApp.