Lucas 19

Kannada Bible (GL_KANNADA) vs NVT

Sair da comparação
NVT Nova Versão Transformadora
1 ಯೇಸು ಯೆರಿಕೋವನ್ನು ಪ್ರವೇಶಿಸಿ ಹಾದು ಹೋದನು.
1 Jesus entrou em Jericó e atravessava a cidade.
2 ಆಗ ಇಗೋ, ಅಲ್ಲಿ ಜಕ್ಕಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯ ನಿದ್ದನು. ಇವನು ಸುಂಕದವರಲ್ಲಿ ಮುಖ್ಯಸ್ಥನೂ ಐಶ್ವರ್ಯವಂತನೂ ಆಗಿದ್ದನು.
2 Havia ali um homem rico chamado Zaqueu, chefe dos cobradores de impostos.
3 ಯೇಸು ಯಾರೆಂದು ಅವನು ನೋಡುವದಕ್ಕೆ ಅಪೇಕ್ಷಿಸಿದರೂ ತಾನು ಗಿಡ್ಡನಾಗಿದ್ದದರಿಂದ ಜನದಟ್ಟನೆಯ ನಿಮಿತ್ತವಾಗಿ ಆತನನ್ನು ನೋಡಲಾರದೆ ಇದ್ದನು.
3 Tentava ver Jesus, mas era baixo demais e não conseguia olhar por cima da multidão.
4 ಆಗ ಆತನನ್ನು ನೋಡುವ ಹಾಗೆ ಅವನು ಮುಂದಾಗಿ ಓಡಿಹೋಗಿ ಒಂದು ಆಲದ ಮರವನ್ನು ಹತ್ತಿದನು; ಯಾಕಂದರೆ ಆತನು ಆ ಮಾರ್ಗವಾಗಿಯೇ ಹೋಗುವವನಾಗಿ ದ್ದನು.
4 Por isso, correu adiante e subiu numa figueira-brava, no caminho por onde Jesus passaria.
5 ಯೇಸು ಆ ಸ್ಥಳಕ್ಕೆ ಬಂದು ಮೇಲಕ್ಕೆ ನೋಡಿ ಅವನನ್ನು ಕಂಡು ಅವನಿಗೆ--ಜಕ್ಕಾಯನೇ, ತ್ವರೆಯಾಗಿ ಇಳಿದು ಬಾ; ಯಾಕಂದರೆ ಈ ದಿನ ನಾನು ನಿನ್ನ ಮನೆಯಲ್ಲಿ ಇರತಕ್ಕದ್ದಾಗಿದೆ ಅಂದನು.
5 Quando Jesus chegou ali, olhou para cima e disse: “Zaqueu, desça depressa! Hoje devo hospedar-me em sua casa”.
6 ಆಗ ಅವನು ತ್ವರೆಯಾಗಿ ಇಳಿದು ಬಂದು ಅತನನ್ನು ಸಂತೋಷದಿಂದ ಸೇರಿಸಿಕೊಂಡನು.
6 Sem demora, Zaqueu desceu e, com alegria, recebeu Jesus em sua casa.
7 ಇದನ್ನು ಅವರು ನೋಡಿ ದಾಗ--ಇವನು ಪಾಪಿಯಾದವನೊಂದಿಗೆ ಅತಿಥಿ ಯಾಗಿರಲು ಹೋಗಿದ್ದಾನೆ ಎಂದು ಹೇಳಿ ಅವರೆಲ್ಲರೂ ಗುಣುಗುಟ್ಟಿದರು.
7 Ao ver isso, o povo começou a se queixar: “Ele foi se hospedar na casa de um pecador!”.
8 ಆಗ ಜಕ್ಕಾಯನು ನಿಂತುಕೊಂಡು ಕರ್ತನಿಗೆ--ಕರ್ತನೇ, ಇಗೋ, ನನ್ನ ಸೊತ್ತಿನಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ; ನಾನು ಯಾರಿಂದಲಾದರೂ ಸುಳ್ಳಾಗಿ ದೂರು ಹೇಳಿ ಏನಾದರೂ ತಕ್ಕೊಂಡಿದ್ದರೆ ಅವನಿಗೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ ಅಂದನು.
8 Enquanto isso, Zaqueu se levantou e disse: “Senhor, darei metade das minhas riquezas aos pobres. E, se explorei alguém na cobrança de impostos, devolverei quatro vezes mais!”.
9 ಆಗ ಯೇಸು ಅವನಿಗೆ--ಈ ದಿನ ಈ ಮನೆಗೆ ರಕ್ಷಣೆ ಆಯಿತು. ಯಾಕಂದರೆ ಇವನು ಸಹ ಅಬ್ರಹಾಮನ ಮಗ ನಲ್ಲವೇ.
9 Jesus respondeu: “Hoje chegou a salvação a esta casa, pois este homem também é filho de Abraão.
10 ಯಾಕಂದರೆ ಮನುಷ್ಯಕುಮಾರನು ತಪ್ಪಿ ಹೋದದ್ದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು ಎಂದು ಹೇಳಿದನು.
10 Porque o Filho do Homem veio buscar e salvar os perdidos”.
11 ಅವರು ಈ ಮಾತುಗಳನ್ನು ಕೇಳುತ್ತಿರಲಾಗಿ ಯೇಸು ತಾನು ಯೆರೂಸಲೇಮಿಗೆ ಸವಿಾಪವಾಗಿದ್ದದ ರಿಂದಲೂ ದೇವರ ರಾಜ್ಯವು ಕೂಡಲೆ ಪ್ರತ್ಯಕ್ಷವಾಗು ವದೆಂದು ಅವರು ಭಾವಿಸಿದ್ದದರಿಂದಲೂ ಆತನು ಇನ್ನೂ ಒಂದು ಸಾಮ್ಯವನ್ನು ಹೇಳಿದನು.
11 A multidão estava atenta ao que Jesus dizia. Então, como ele se aproximava de Jerusalém, contou-lhes uma parábola, pois o povo achava que o reino de Deus começaria de imediato.
12 ಅದೇ ನಂದರೆ--ಕೀರ್ತಿವಂತನಾದ ಒಬ್ಬಾನೊಬ್ಬ ಮನುಷ್ಯನು ತನಗೋಸ್ಕರ ರಾಜ್ಯವನ್ನು ಪಡೆದುಕೊಂಡು ತಿರಿಗಿ ಬರುವದಕ್ಕಾಗಿ ದೂರ ದೇಶಕ್ಕೆ ಹೊರಟುಹೋದನು.
12 Disse ele: “Um nobre foi chamado a um país distante para ser coroado rei e depois voltar.
13 ಅವನು ತನ್ನ ಹತ್ತು ಆಳುಗಳನ್ನು ಕರೆದು ಅವರಿಗೆ ಹತ್ತು ಮೊಹರಿಗಳನ್ನು ಒಪ್ಪಿಸಿ--ನಾನು ಬರುವವರೆಗೆ ವ್ಯಾಪಾರ ಮಾಡಿಕೊಂಡಿರ್ರಿ ಎಂದು ಹೇಳಿದನು.
13 Antes de partir, reuniu dez de seus servos e deu a cada um deles dez moedas de prata, dizendo: ‘Invistam esse dinheiro enquanto eu estiver fora’.
14 ಆದರೆ ಅವರ ಪಟ್ಟಣದವರು ಅವನನ್ನು ದ್ವೇಷಿಸಿ--ಇವನು ನಮ್ಮ ಮೇಲೆ ಆಡಳಿತ ಮಾಡುವದು ನಮಗೆ ಮನಸ್ಸಿಲ್ಲ ಎಂದು ಹೇಳಿ ಅವನ ಹಿಂದೆ ಸಂದೇಶವನ್ನು ಕಳುಹಿಸಿದರು.
14 Seu povo, porém, o odiava, e enviou uma delegação atrás dele para dizer: ‘Não queremos que ele seja nosso rei’.
15 ಇದಾದ ಮೇಲೆ ಅವನು ರಾಜ್ಯವನ್ನು ಪಡೆದು ಹಿಂದಿರುಗಿದಾಗ ವ್ಯಾಪಾ ರದಿಂದ ಪ್ರತಿಯೊಬ್ಬ ಮನುಷ್ಯನು ಎಷ್ಟು ಲಾಭವನ್ನು ಪಡೆದನೆಂದು ತಿಳುಕೊಳ್ಳುವಂತೆ ತಾನು ಹಣಕೊಟ್ಟ ಆ ಆಳುಗಳನ್ನು ತನ್ನ ಬಳಿಗೆ ಕರೆಯಬೇಕೆಂದು ಆಜ್ಞಾಪಿ ಸಿದನು.
15 “Depois de ser coroado, ele voltou e chamou os servos aos quais tinha confiado o dinheiro, pois queria saber quanto haviam lucrado.
16 ಆಗ ಮೊದಲನೆಯವನು ಬಂದು--ಒಡೆಯನೇ, ನಿನ್ನ ಮೊಹರಿನಿಂದ ಹತ್ತು ಮೊಹರಿಗಳನ್ನು ಸಂಪಾದಿಸಿದ್ದೇನೆ ಅಂದನು.
16 O primeiro servo informou: ‘Senhor, investi seu dinheiro, e ele rendeu dez vezes a quantia recebida.
17 ಅದಕ್ಕೆ ಅವನು ಅವ ನಿಗೆ--ಒಳ್ಳೇದು. ನೀನು ಉತ್ತಮ ಆಳು; ಯಾಕಂದರೆ ನೀನು ಅತಿ ಸ್ವಲ್ಪದರಲ್ಲಿ ನಂಬಿಗಸ್ತನಾಗಿದ್ದೀ ಹತ್ತು ಪಟ್ಟಣಗಳ ಮೇಲೆ ನೀನು ಅಧಿಕಾರಿಯಾಗಿರು ಅಂದನು.
17 “‘Muito bem!’, disse o rei. ‘Você é um bom servo. Foi fiel no pouco que lhe confiei e, como recompensa, governará dez cidades.’
18 ಎರಡನೆಯವನು ಬಂದು--ಒಡೆಯನೇ, ನಿನ್ನ ಮೊಹರಿಯಿಂದ ಐದು ಮೊಹರಿಗಳನ್ನು ಸಂಪಾ ದಿಸಿದ್ದೇನೆ ಅಂದನು.
18 “O servo seguinte informou: ‘Senhor, investi seu dinheiro, e ele rendeu cinco vezes a quantia recebida’.
19 ಅದಕ್ಕೆ ಅವನು ಅದೇ ಪ್ರಕಾರ--ನೀನು ಸಹ ಐದು ಪಟ್ಟಣಗಳ ಮೇಲಿರು ಎಂದು ಅವನಿಗೆ ಹೇಳಿದನು.
19 “‘Muito bem!’, disse o rei. ‘Você governará cinco cidades.’
20 ಆಗ ಮತ್ತೊಬ್ಬನು ಬಂದು--ಒಡೆಯನೇ, ಇಗೋ, ನಾನು ಕರವಸ್ತ್ರದಲ್ಲಿ ಕಟ್ಟಿ ಇಟ್ಟಿದ್ದ ನಿನ್ನ ಮೊಹರಿ ಇದೇ.
20 “O terceiro servo, porém, trouxe de volta apenas a quantia recebida e disse: ‘Senhor, escondi seu dinheiro para mantê-lo seguro.
21 ಯಾಕಂದರೆ ನೀನು ಕಠಿಣವಾದ ಮನುಷ್ಯನು ಎಂದು ನಾನು ನಿನಗೆ ಭಯಪಟ್ಟೆನು; ನೀನು ಇಡದೆ ಇರುವದನ್ನು ತಕ್ಕೊಳ್ಳು ವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆಗಿದ್ದೀ ಅಂದನು.
21 Tive medo, pois o senhor é um homem severo. Toma o que não lhe pertence e colhe o que não plantou’.
22 ಆಗ ಅವನು--ನೀನು ಕೆಟ್ಟ ಆಳು, ನಿನ್ನ ಮಾತಿನ ಮೇಲೆಯೇ ನಿನಗೆ ನ್ಯಾಯತೀರಿ ಸುವೆನು. ನಾನು ಇಡದೆ ಇರುವಲ್ಲಿ ತಕ್ಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆದ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತಲ್ಲಾ.
22 “‘Servo mau!’, exclamou o senhor. ‘Suas próprias palavras o condenam. Se você sabia que sou homem severo, que tomo o que não me pertence e colho o que não plantei,
23 ಹಾಗಿದ್ದರೆ ನನ್ನ ಹಣವನ್ನು ಧನ ವ್ಯವಹಾರದ ಸಂಸ್ಥೆಯಲ್ಲಿ ಯಾಕೆ ಹಾಕಲಿಲ್ಲ? ನಾನು ಬಂದಾಗ ಅದನ್ನು ಬಡ್ಡಿಯ ಸಹಿತ ತೆಗೆದುಕೊಳ್ಳುತ್ತಿದ್ದೆನು ಎಂದು ಅವನಿಗೆ ಹೇಳಿದನು.
23 por que não depositou meu dinheiro? Pelo menos eu teria recebido os juros.’
24 ಅವನು ಹತ್ತಿರ ನಿಂತಿದ್ದವರಿಗೆ--ಇವನ ಕಡೆಯಿಂದ ಆ ಮೊಹರಿಯನ್ನು ತಕ್ಕೊಂಡು ಹತ್ತು ಮೊಹರಿಗಳಿ ದ್ದವನಿಗೆ ಕೊಡಿರಿ ಅಂದನು.
24 “Então, voltando-se para os outros que estavam ali perto, o rei ordenou: ‘Tomem o dinheiro deste servo e deem ao que tem dez moedas.
25 (ಆಗ ಅವರು ಅವ ನಿಗೆ--ಒಡೆಯನೇ, ಅವನಿಗೆ ಹತ್ತು ಮೊಹರಿಗಳಿವೆ ಯಲ್ಲಾ ಅಂದರು.)
25 “‘Mas senhor!’, disseram eles. ‘Ele já tem dez!’
26 ಆದರೆ ನಾನು ನಿಮಗೆ ಹೇಳು ವದೇನಂದರೆ--ಇದ್ದ ಪ್ರತಿಯೊಬ್ಬನಿಗೆ ಕೊಡಲ್ಪಡು ವದು ಮತ್ತು ಇಲ್ಲದವನ ಕಡೆಯಿಂದ ಅವನಿಗೆ ಇದ್ದದ್ದೂ ಅವನಿಂದ ತೆಗೆಯಲ್ಪಡುವದು.
26 “Então o rei respondeu: ‘Sim, ao que tem, mais lhe será dado; mas do que nada tem, até o que tem lhe será tomado.
27 ಆದರೆ ತಮ್ಮ ಮೇಲೆ ನಾನು ಆಡಳಿತ ಮಾಡುವದಕ್ಕೆ ಮನಸ್ಸಿಲ್ಲದ ಆ ನನ್ನ ವಿರೋಧಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ ಅಂದನು.
27 E, quanto a esses meus inimigos que não queriam que eu fosse seu rei, tragam-nos aqui e executem-nos na minha presença’”.
28 ಆತನು ಹೀಗೆ ಹೇಳಿದ ತರುವಾಯ ಮುಂದಾಗಿ ಯೆರೂಸಲೇಮಿಗೆ ಏರಿಹೋದನು.
28 Depois de contar essa história, Jesus prosseguiu rumo a Jerusalém.
29 ಇದಾದ ಮೇಲೆ ಆತನು ಎಣ್ಣೇಮರಗಳ ಗುಡ್ಡವೆಂದು ಕರೆಯಲ್ಪಟ್ಟ ಗುಡ್ಡದ ಕಡೆಗೆ ಇರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸವಿಾಪಿಸಿದಾಗ ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ--
29 Quando chegou a Betfagé e Betânia, próximo ao monte das Oliveiras, enviou dois de seus discípulos.
30 ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ನೀವು ಅದ ರೊಳಗೆ ಪ್ರವೇಶಿಸುತ್ತಿರುವಾಗ ಅಲ್ಲಿ ಕಟ್ಟಿರುವ ಮತ್ತು ಯಾವ ಮನುಷ್ಯನೂ ಅದರ ಮೇಲೆ ಹತ್ತದಿರುವ ಒಂದು ಕತ್ತೇ ಮರಿಯನ್ನು ಕಾಣುವಿರಿ; ಅದನ್ನು ಬಿಚ್ಚಿ ಇಲ್ಲಿಗೆ ತಕ್ಕೊಂಡು ಬನ್ನಿರಿ;
30 “Vão àquele povoado adiante”, disse ele. “Assim que entrarem, verão amarrado ali um jumentinho no qual ninguém jamais montou. Desamarrem-no e tragam-no para cá.
31 ಯಾವನಾದರೂ ನಿಮಗೆ--ಯಾಕೆ ಅದನ್ನು ಬಿಚ್ಚುತ್ತೀರಿ ಎಂದು ಕೇಳಿದರೆ ನೀವು ಅವನಿಗೆ--ಇದು ಕರ್ತನಿಗೆ ಬೇಕಾಗಿದೆ ಎಂದು ಹೇಳಿರಿ ಅಂದನು.
31 Se alguém perguntar: ‘Por que estão soltando o jumentinho?’, respondam apenas: ‘O Senhor precisa dele’.”
32 ಕಳುಹಿಸಲ್ಪಟ್ಟವರು ತಮ್ಮ ಮಾರ್ಗವಾಗಿ ಹೊರಟು ಹೋಗಿ ಆತನು ತಮಗೆ ಹೇಳಿದಂತೆಯೇ ಕಂಡರು.
32 Eles foram e encontraram o jumentinho, exatamente como Jesus tinha dito.
33 ಅವರು ಆ ಕತ್ತೇ ಮರಿ ಯನ್ನು ಬಿಚ್ಚುತ್ತಿರುವಾಗ ಆದರ ಯಜಮಾನರು ಅವರಿಗೆ--ನೀವು ಕತ್ತೇಮರಿಯನ್ನು ಯಾಕೆ ಬಿಚ್ಚುತ್ತೀರಿ ಎಂದು ಕೇಳಿದ್ದಕ್ಕೆ
33 E, enquanto o desamarravam, seus donos perguntaram: “Por que estão soltando o jumentinho?”.
34 ಅವರು--ಅದು ಕರ್ತನಿಗೆ ಬೇಕಾಗಿದೆ ಅಂದರು.
34 Os discípulos responderam: “O Senhor precisa dele”.
35 ಅವರು ಅದನ್ನು ಯೇಸು ವಿನ ಬಳಿಗೆ ತಂದು ತಮ್ಮ ಬಟ್ಟೆಗಳನ್ನು ಕತ್ತೇಮರಿಯ ಮೇಲೆ ಹಾಕಿ ಅದರ ಮೇಲೆ ಯೇಸುವನ್ನು ಕೂಡ್ರಿಸಿ ದರು.
35 Então trouxeram o jumentinho e lançaram seus mantos sobre o animal, para que Jesus montasse nele.
36 ಆತನು ಹೋಗುತ್ತಿರುವಾಗ ಅವರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು.
36 À medida que Jesus ia passando, as multidões espalhavam seus mantos ao longo do caminho diante dele.
37 ಇದಲ್ಲದೆ ಆತನು ಎಣ್ಣೇಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಸವಿಾಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ನೋಡಿದ್ದ ಎಲ್ಲಾ ಮಹತ್ಕಾರ್ಯಗಳಿಗಾಗಿ ಸಂತೋಷ ಪಡುತ್ತಾ ಮಹಾಧ್ವನಿಯಿಂದ ದೇವರನ್ನು ಕೊಂಡಾಡ ಲಾರಂಭಿಸಿ--
37 Quando ele chegou próximo à descida do monte das Oliveiras, seus seguidores começaram a gritar e a cantar enquanto o acompanhavam, louvando a Deus por todos os milagres maravilhosos que tinham visto.
38 ಕರ್ತನ ಹೆಸರಿನಲ್ಲಿ ಬರುವ ಅರ ಸನು ಸ್ತುತಿಹೊಂದಲಿ; ಪರಲೋಕದಲ್ಲಿ ಸಮಾಧಾನ, ಮತ್ತು ಅತ್ಯುನ್ನತದಲ್ಲಿ ಮಹಿಮೆ ಎಂದು ಹೇಳಿದರು.
38 “Bendito é o Rei que vem em nome do Senhor! Paz no céu e glória nas maiores alturas!”.
39 ಜನಸಮೂಹದೊಳಗಿಂದ ಕೆಲವು ಫರಿಸಾಯರು ಆತನಿಗೆ--ಬೋಧಕನೇ, ನಿನ್ನ ಶಿಷ್ಯರನ್ನು ಗದರಿಸು ಅಂದರು.
39 Alguns dos fariseus que estavam entre a multidão disseram: “Mestre, repreenda seus seguidores por dizerem estas coisas!”.
40 ಆಗ ಆತನು ಪ್ರತ್ಯುತ್ತರವಾಗಿ ಅವ ರಿಗೆ--ಇವರು ಸುಮ್ಮನಿರುವದಾದರೆ ಈ ಕಲ್ಲುಗಳು ಕೂಡಲೆ ಕೂಗುವವು ಎಂದು ನಾನು ನಿಮಗೆ ಹೇಳು ತ್ತೇನೆ ಅಂದನು.
40 Ele, porém, respondeu: “Se eles se calarem, as próprias pedras clamarão!”.
41 ತರುವಾಯ ಆತನು ಸವಿಾಪಿಸಿದಾಗ ಪಟ್ಟಣ ವನ್ನು ನೋಡಿ ಅದರ ವಿಷಯವಾಗಿ ಅತ್ತು--
41 Quando Jesus se aproximou de Jerusalém e viu a cidade, começou a chorar.
42 ನೀನು ಈ ನಿನ್ನ ದಿನದಲ್ಲಿಯಾದರೂ ನಿನ್ನ ಸಮಾ ಧಾನಕ್ಕೆ ಸಂಬಂಧಪಟ್ಟವುಗಳನ್ನು ತಿಳಿದುಕೊಳ್ಳಬೇಕಾ ಗಿತ್ತು; ಆದರೆ ಈಗ ಅವುಗಳು ನಿನ್ನ ಕಣ್ಣುಗಳಿಗೆ ಮರೆಯಾಗಿವೆ.
42 “Como eu gostaria que hoje você compreendesse o caminho para a paz!”, disse ele. “Agora, porém, isso está oculto a seus olhos.
43 ಯಾಕಂದರೆ ನಿನ್ನ ಶತೃಗಳು ನಿನ್ನ ಸುತ್ತಲೂ ಕಂದಕವನ್ನು ತೋಡಿ ಎಲ್ಲಾ ಕಡೆಯಲ್ಲಿಯೂ ನಿನ್ನನ್ನು ಮುತ್ತಿಗೆ ಹಾಕಿ ಪ್ರತಿಯೊಂದು ಕಡೆಯಿಂದಲೂ ನಿನ್ನನ್ನು ಒಳಗೆ ಇರಿಸುವ ದಿನಗಳು ನಿನ್ನ ಮೇಲೆ ಬರುವವು.
43 Chegará o tempo em que seus inimigos construirão rampas para atacar seus muros e a rodearão e apertarão o cerco por todos os lados.
44 ಇದಲ್ಲದೆ ಅವರು ನಿನ್ನನ್ನೂ ನಿನ್ನೊಳ ಗಿರುವ ನಿನ್ನ ಮಕ್ಕಳನ್ನೂ ನೆಲಸಮ ಮಾಡುವರು; ಮತ್ತು ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಇರದಂತೆ ಮಾಡುವರು; ಯಾಕಂದರೆ ನಿನ್ನನ್ನು ಸಂಧಿಸಿದ ಸಮಯವನ್ನು ನೀನು ತಿಳುಕೊಳ್ಳಲಿಲ್ಲ ಅಂದನು.
44 Esmagarão você e seus filhos e não deixarão pedra sobre pedra, pois você não reconheceu que Deus a visitou.”
45 ಆತನು ದೇವಾಲಯದೊಳಕ್ಕೆ ಹೋಗಿ ಅದರಲ್ಲಿ ಮಾರುವವರನ್ನೂ ಕೊಂಡುಕೊಳ್ಳುವವರನ್ನೂ ಹೊರಗೆ ಹಾಕುವದಕ್ಕೆ ಪ್ರಾರಂಭಿಸಿ
45 Então Jesus entrou no templo e começou a expulsar os que ali vendiam,
46 ಅವರಿಗೆ--ನನ್ನ ಮನೆಯು ಪ್ರಾರ್ಥನೆಯ ಮನೆ ಎಂದು ಬರೆಯಲ್ಪಟ್ಟಿದೆ; ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ ಅಂದನು.
46 dizendo: “As Escrituras declaram: ‘Meu templo será casa de oração’, mas vocês o transformaram num esconderijo de ladrões!”.
47 ಇದಲ್ಲದೆ ಆತನು ಪ್ರತಿದಿನವೂ ದೇವಾಲಯ ದಲ್ಲಿ ಬೋಧಿಸುತ್ತಿದ್ದನು. ಆದರೆ ಪ್ರಧಾನಯಾಜಕರೂ ಶಾಸ್ತ್ರಿಗಳೂ ಜನರ ಪ್ರಮುಖರೂ ಆತನನ್ನು ಕೊಲ್ಲು ವದಕ್ಕೆ ಹವಣಿಸುತ್ತಿದ್ದರು.
47 Jesus ensinava todos os dias no templo, mas os principais sacerdotes, os mestres da lei e outros líderes do povo planejavam matá-lo.
48 ಆದರೆ ಅವರು ಏನು ಮಾಡಬೇಕೆಂಬದನ್ನು ಕಂಡುಕೊಳ್ಳದೆ ಹೋದರು; ಯಾಕಂದರೆ ಜನರೆಲ್ಲರೂ ಆತನು ಹೇಳುವದನು ಬಹಳ ಲಕ್ಷ್ಯಕೊಟ್ಟು ಆತನ ಉಪದೇಶ ವನ್ನು ಕೇಳುತ್ತಿದ್ದರು.
48 Contudo, não conseguiam pensar num modo de fazê-lo, pois o povo ouvia atentamente tudo que ele dizia.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Lucas 19, comparar traduções ou montar um estudo — tudo direto pelo WhatsApp.