Juízes 9
Kannada Bible (GL_KANNADA) vs NVI
NVI Nova Versão Internacional
1 ಯೆರುಬ್ಬಾಳನ ಮಗನಾದ ಅಬೀಮೆಲೆಕನು ಶೆಕೆಮಿನಲ್ಲಿರುವ ತನ್ನ ತಾಯಿಯ ಸಹೋದರರ ಬಳಿಗೆ ಹೋಗಿ ಅವರ ಸಂಗಡವೂ ತನ್ನ ತಾಯಿಯ ತಂದೆ ಮನೆಯ ಕುಟುಂಬದವರೆ ಲ್ಲರ ಸಂಗಡವೂ ಮಾತನಾಡಿ--
1 Abimeleque, filho de Jerubaal, foi aos irmãos de sua mãe em Siquém e disse a eles e a todo o clã da família de sua mãe:
2 ನೀವು ದಯಮಾಡಿ ಶೆಕೆಮಿನ ಜನರೆಲ್ಲರು ಕೇಳುವ ಹಾಗೆ ಮಾತನಾಡ ಬೇಕಾದದ್ದೇನಂದರೆ -- ಯೆರುಬ್ಬಾಳನ ಮಕ್ಕಳಾದ ಎಪ್ಪತ್ತು ಮಂದಿಯು ನಿಮ್ಮನ್ನು ಆಳುವದು ಒಳ್ಳೇದೋ? ಒಬ್ಬನು ಆಳುವದು ಒಳ್ಳೇದೋ? ನಾನು ನಿಮ್ಮ ಎಲುಬೂ ನಿಮ್ಮ ಮಾಂಸವೂ ಆಗಿದ್ದೇನೆಂದು ಜ್ಞಾಪಕ ಮಾಡಿಕೊಳ್ಳಿರಿ ಅಂದನು.
2 "Perguntem a todos os cidadãos de Siquém: O que é melhor para vocês: ter todos os setenta filhos de Jerubaal governando sobre vocês, ou somente um homem? Lembrem-se de que eu sou sua própria carne".
3 ಹಾಗೆಯೇ ಅವನ ತಾಯಿಯ ಸಹೋದರರು ಅವನನ್ನು ಕುರಿತು ಶೆಕೆಮಿನ ಜನರೆಲ್ಲರ ಕಿವಿಗಳಲ್ಲಿ ಈ ಮಾತುಗಳನ್ನೆಲ್ಲಾ ಆಡಿದರು. ಅವರು ಇವನನ್ನು ತಮ್ಮ ಸಹೋದರನೆಂದು ಹೇಳಿ ದ್ದರಿಂದ ಆ ಜನರ ಹೃದಯವು ಅಬೀಮೆಲೆಕನ ಕಡೆಗೆ ತಿರುಗಿತು.
3 Os irmãos de sua mãe repetiram tudo aos cidadãos de Siquém, e estes se mostraram propensos a seguir Abimeleque, pois disseram: "Ele é nosso irmão".
4 ಅವರು ಬಾಳ್‌ಬೆರೀತಿನ ಮನೆಯೊಳ ಗಿಂದ ಎಪ್ಪತ್ತು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು ಅವನಿಗೆ ಕೊಟ್ಟರು. ಅವುಗಳಿಂದ ಅಬೀಮೆಲೆಕನು ನಿಷ್ಪ್ರಯೋಜಕರನ್ನೂ ಬೆಲೆಯಿಲ್ಲದವರನ್ನೂ ಸಂಬಳಕ್ಕೆ ಇಟ್ಟುಕೊಂಡನು. ಅವರು ಅವನ ಹಿಂದೆ ಹೋದರು.
4 Deram-lhe setenta peças de prata tiradas do templo de Baal-Berite, as quais Abimeleque usou para contratar alguns desocupados e vadios, que se tornaram seus seguidores.
5 ಅವನು ಒಫ್ರದಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ ತನ್ನ ಸಹೋದರರಾದ ಯೆರುಬ್ಬಾಳನ ಎಪ್ಪತ್ತು ಮಂದಿ ಕುಮಾರರನ್ನು ಒಂದು ಕಲ್ಲಿನ ಮೇಲೆ ಕೊಂದು ಹಾಕಿದನು. ಆದರೆ ಯೆರುಬ್ಬಾಳನ ಚಿಕ್ಕ ಮಗನಾದ ಯೋತಾಮನು ಒಬ್ಬನೇ ಉಳಿದನು; ಯಾಕಂದರೆ ಅವನು ಅಡಗಿಕೊಂಡನು.
5 Foi à casa de seu pai em Ofra e matou seus setenta irmãos, filhos de Jerubaal, sobre uma rocha. Mas Jotão, o filho mais novo de Jerubaal, escondeu-se e escapou.
6 ಶೆಕೆಮಿನ ಜನರೆಲ್ಲರೂ ಮಿಲ್ಲೋನಿನ ಮನೆಯವರೆಲ್ಲರೂ ಕೂಡಿಕೊಂಡು ಹೋಗಿ ಶೆಕೆಮಿನ ಬೈಲಲ್ಲಿ ಇರುವ ಸ್ತಂಭದ ಬಳಿಯಲ್ಲಿ ಅಬೀಮೆಲೆಕನನ್ನು ಅರಸನನ್ನಾಗಿ ನೇಮಿಸಿದರು.
6 Então todos os cidadãos de Siquém e de Bete-Milo reuniram-se ao lado do Carvalho, junto à coluna de Siquém, para coroar Abimeleque rei.
7 ಯೋತಾಮನಿಗೆ ಇದನ್ನು ತಿಳಿಸಿದಾಗ ಅವನು ಹೋಗಿ ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ಏರಿ ನಿಂತು ಗಟ್ಟಿಯಾಗಿ ಕೂಗಿ ಅವರಿಗೆ--ಶೆಕೆಮಿನ ಜನರೇ, ದೇವರು ನಿಮ್ಮ ಮೊರೆ ಕೇಳುವ ಹಾಗೆ ನನ್ನ ಮಾತನ್ನು ಕೇಳಿರಿ.
7 Quando Jotão soube disso, subiu ao topo do monte Gerizim e gritou para eles: "Ouçam-me, cidadãos de Siquém, para que Deus os ouça.
8 ಮರಗಳು ತಮ್ಮ ಮೇಲೆ ಒಬ್ಬ ಅರಸನನ್ನು ಅಭಿಷೇ ಕಿಸಿಕೊಳ್ಳುವದಕ್ಕಾಗಿ ಹೊರಟು ಹೋಗಿ ಇಪ್ಪೆಯ ಮರಕ್ಕೆ--ನೀನು ನಮ್ಮನ್ನು ಆಳು ಅಂದವು.
8 Certo dia as árvores saíram para ungir um rei para si. Disseram à oliveira: ‘Seja o nosso rei! ’
9 ಇಪ್ಪೆಯ ಮರ ಅವುಗಳಿಗೆ--ಯಾವದರಿಂದ ದೇವರನ್ನೂ ಮನು ಷ್ಯರನ್ನೂ ಘನಪಡಿಸುತ್ತಾರೋ ಆ ನನ್ನ ಪುಷ್ಟಿಯನ್ನು ಬಿಟ್ಟು ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ ಅಂದಿತು.
9 "A oliveira, porém, respondeu: ‘Deveria eu renunciar ao meu azeite, com o qual se presta honra aos deuses e aos homens, para dominar sobre as árvores? ’
10 ಮರಗಳು ಅಂಜೂರದ ಗಿಡಕ್ಕೆ--ನೀನು ಬಂದು ನಮ್ಮ ಮೇಲೆ ಆಳಬೇಕು ಅಂದವು.
10 "Então as árvores disseram à figueira: ‘Venha ser o nosso rei! ’
11 ಆದರೆ ಅಂಜೂರದ ಗಿಡವು ಅವುಗ ಳಿಗೆ--ನಾನು ನನ್ನ ಮಧುರವನ್ನೂ ನನ್ನ ಒಳ್ಳೇ ಫಲ ವನ್ನೂ ಬಿಟ್ಟು ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ ಅಂದಿತು.
11 "A figueira, porém, respondeu: ‘Deveria eu renunciar ao meu fruto saboroso e doce, para dominar sobre as árvores? ’
12 ಮರಗಳು ದ್ರಾಕ್ಷೇ ಗಿಡಕ್ಕೆ--ನೀನು ಬಂದು ನಮ್ಮನ್ನು ಆಳು ಅಂದವು.
12 "Depois as árvores disseram à videira: ‘Venha ser o nosso rei! ’
13 ಆದರೆ ದ್ರಾಕ್ಷೇ ಗಿಡವು ಅವುಗಳಿಗೆ--ದೇವರನ್ನೂ ಮನುಷ್ಯನನ್ನೂ ಸಂತೋಷಪಡಿಸುವ ನನ್ನ ರಸವನ್ನು ನಾನು ಬಿಟ್ಟು ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ ಅಂದಿತು.
13 "A videira, porém, respondeu: ‘Deveria eu renunciar ao meu vinho, que alegra os deuses e os homens, para ter domínio sobre as árvores? ’
14 ಆಗ ಎಲ್ಲಾ ಮರಗಳು ಮುಳ್ಳಿನ ಗಿಡಕ್ಕೆ--ನೀನು ಬಂದು ನಮ್ಮನ್ನು ಆಳು ಅಂದವು.
14 "Finalmente todas as árvores disseram ao espinheiro: ‘Venha ser o nosso rei! ’
15 ಮುಳ್ಳಿನ ಗಿಡವು ಮರಗಳಿಗೆ--ನೀವು ನನ್ನನ್ನು ಅರಸನನ್ನಾಗಿ ಅಭಿಷೇಕ ಮಾಡುವದು ಸತ್ಯ ವಾದರೆ ನನ್ನ ನೆರಳಲ್ಲಿ ಬಂದು ಆಶ್ರಯಿಸಿಕೊಳ್ಳಿರಿ; ಇಲ್ಲದಿದ್ದರೆ ಮುಳ್ಳಿನ ಗಿಡದಿಂದ ಬೆಂಕಿ ಹೊರಟು ಲೆಬನೋನಿನ ದೇವದಾರುಗಳನ್ನು ದಹಿಸಿಬಿಡಲಿ ಅಂದಿತು.
15 "O espinheiro disse às árvores: ‘Se querem realmente ungir-me rei sobre vocês, venham abrigar-se à minha sombra; do contrário, sairá fogo do espinheiro e consumirá até os cedros do Líbano! ’
16 ನೀವು ಈಗ ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ್ದು ಸತ್ಯದಿಂದಲೂ ಯಥಾರ್ಥದಿಂದಲೂ ಮಾಡಿದ್ದಾದರೆ, ಯೆರುಬ್ಬಾಳನಿಗೂ ಅವನ ಮನೆಗೂ ಒಳ್ಳೇದನ್ನು ಮಾಡಿದ್ದರೆ
16 "Será que vocês agiram de fato com sinceridade quando fizeram Abimeleque rei? Foram justos com Jerubaal e sua família, como ele merecia?
17 ನನ್ನ ತಂದೆಯಾದ ಅವನು ನಿಮಗೋಸ್ಕರ ಯುದ್ಧಮಾಡಿದವನಾಗಿಯೂ ತನ್ನ ಪ್ರಾಣವನ್ನು ಲೆಕ್ಕಿಸದೆ ಮಿದ್ಯಾನಿನ ಕೈಯಿಂದ ನಿಮ್ಮನ್ನು ತಪ್ಪಿಸಿದವನಾಗಿಯೂ ಇರಲಾಗಿ ನೀವು ಈಹೊತ್ತು ನನ್ನ ತಂದೆಯ ಮನೆಗೆ ವಿರೋಧವಾಗಿ ಎದ್ದು
17 Meu pai lutou por vocês e arriscou a vida para livrá-los das mãos de Midiã,
18 ಅವನ ಎಪ್ಪತ್ತು ಮಕ್ಕಳನ್ನು ಒಂದೇ ಕಲ್ಲಿನ ಮೇಲೆ ಕೊಂದು ಅವನ ದಾಸಿಯ ಮಗನಾದ ಅಬೀಮೆಲೆಕನನ್ನು ಅವನು ನಿಮ್ಮ ಸಹೋದರನಾಗಿರುವದರಿಂದ ಶೆಕೆಮಿನ ಜನರ ಮೇಲೆ ಅರಸನಾಗಿ ಇಟ್ಟದ್ದು,
18 hoje, porém, vocês se revoltaram contra a família de meu pai, mataram seus setenta filhos sobre a mesma rocha, e proclamaram Abimeleque, o filho de sua escrava, rei sobre os cidadãos de Siquém pelo fato de ser irmão de vocês.
19 ಯೆರುಬ್ಬಾಳನ ಯೋಗ್ಯ ತೆಗೆ ತಕ್ಕದ್ದಾಗಿದ್ದರೆ ಮತ್ತು ಈಹೊತ್ತು ಅವನಿಗೂ ಅವನ ಮಗನಿಗೂ ನೀವು ಸತ್ಯದಲ್ಲಿಯೂ ಯಥಾರ್ಥ ತೆಯಲ್ಲಿಯೂ ಕಾರ್ಯಮಾಡಿದ್ದರೆ, ಅಬೀಮೆಲೆಕನಲ್ಲಿ ನೀವು ಸಂತೋಷಪಡಿರಿ, ಅವನು ಸಹ ನಿಮ್ಮಲ್ಲಿ ಸಂತೋಷಪಡಲಿ.
19 Se hoje vocês de fato agiram com sinceridade para com Jerubaal e sua família, alegrem-se com Abimeleque, e alegre-se ele com vocês!
20 ಇಲ್ಲದಿದ್ದರೆ ಅಬೀಮೆಲೆಕನಿಂದ ಬೆಂಕಿಹೊರಟು ಶೆಕೆಮಿನ ಜನರನ್ನೂ ಮಿಲ್ಲೋನಿನ ಮನೆಯವರನ್ನೂ ದಹಿಸಿಬಿಡಲಿ. ಶೆಕೆಮಿನ ಜನ ರಿಂದಲೂ ಮಿಲ್ಲೋನಿನ ಮನೆಯವರಿಂದಲೂ ಬೆಂಕಿ ಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ ಅಂದನು.
20 Entretanto, se não foi assim, que saia fogo de Abimeleque e consuma os cidadãos de Siquém e de Bete-Milo, e que saia fogo dos cidadãos de Siquém e de Bete-Milo, e consuma Abimeleque! "
21 ಆಗ ಯೋತಾಮನು ತಪ್ಪಿಸಿಕೊಂಡು ಓಡಿ ಬೇರಕ್ಕೆ ಹೋಗಿ ಅಲ್ಲಿ ತನ್ನ ಸಹೋದರನಾದ ಅಬೀಮೆಲೆಕನ ಭಯದ ನಿಮಿತ್ತವಾಗಿ ವಾಸವಾಗಿದ್ದನು.
21 Depois Jotão fugiu para Beer, e foi morar ali, longe de seu irmão Abimeleque.
22 ಆದರೆ ಅಬೀಮೆಲೆಕನು ಇಸ್ರಾಯೇಲನ್ನು ಮೂರು ವರುಷ ಆಳಿದ ತರುವಾಯ
22 Fazia três anos que Abimeleque governava Israel,
23 ದೇವರು ಅಬೀಮೆಲೆಕನಿಗೂ ಶೆಕೆಮಿನ ಜನರಿಗೂ ನಡುವೆ ದುರಾತ್ಮನನ್ನು ಕಳುಹಿಸಿದನು.
23 quando Deus enviou um espírito maligno entre Abimeleque e os cidadãos de Siquém, e estes agiram traiçoeiramente contra Abimeleque.
24 ಆಗ ಎಪ್ಪತ್ತು ಮಂದಿ ಮಕ್ಕಳಿಗೆ ಮಾಡಿದ್ದ ಕ್ರೂರತ್ವವು ಬಂದು ಪ್ರಾಪ್ತಿಸುವ ಹಾಗೆಯೂ ಅವರ ರಕ್ತವು ಅವರನ್ನು ಕೊಂದ ಅವರ ಸಹೋದರನಾದ ಅಬೀಮೆಲೆಕನ ಮೇಲೆಯೂ ಅವನ ಸಹೋದರರನ್ನು ಕೊಲ್ಲುವದಕ್ಕೆ ಅವನ ಕೈಗಳನ್ನು ಬಲ ಪಡಿಸಿದ ಶೆಕೆಮಿನ ಮನುಷ್ಯರ ಮೇಲೆಯೂ ಬರುವ ಹಾಗೆ ಶೆಕೆಮಿನ ಜನರು ಅಬೀಮೆಲೆಕನಿಗೆ ದ್ರೋಹ ಮಾಡಿದರು.
24 Isso aconteceu para que o crime contra os setenta filhos de Jerubaal, o derramamento do sangue deles, fosse vingado em seu irmão Abimeleque e nos cidadãos de Siquém que o ajudaram a assassinar os seus irmãos.
25 ಶೆಕೆಮಿನ ಮನುಷ್ಯರು ಪರ್ವತ ಶಿಖರಗಳ ಮೇಲೆ ಅವನಿಗೋಸ್ಕರ ಹೊಂಚಿಕೊಳ್ಳು ವವರನ್ನು ಇಟ್ಟು ತಮ್ಮ ಸವಿಾಪವಾಗಿ ಮಾರ್ಗದಲ್ಲಿ ಹಾದುಹೋಗುವ ಎಲ್ಲರನ್ನು ಸುಲುಕೊಂಡರು. ಅದು ಅಬೀಮೆಲೆಕನಿಗೆ ತಿಳಿಸಲ್ಪಟ್ಟಿತು.
25 Os cidadãos de Siquém enviaram homens para o alto das colinas para emboscarem os que passassem por ali, e Abimeleque foi informado disso.
26 ಆಗ ಎಬೆದನ ಮಗನಾದ ಗಾಳನೂ ಅವನ ಸಹೋದರರೂ ಶೆಕೆಮಿಗೆ ದಾಟಿ ಬಂದರು; ಆದರೆ ಶೆಕೆಮಿನ ಜನರು ಅವನಲ್ಲಿ ಭರವಸವಿಟ್ಟು
26 Nesse meio tempo Gaal, filho de Ebede, mudou-se com seus parentes para Siquém, cujos cidadãos confiavam nele.
27 ಹೊರಗೆ ಹೋಗಿ ತಮ್ಮ ದ್ರಾಕ್ಷೇ ಫಲಗಳನ್ನು ಕೊಯಿದು ಅವು ಗಳನ್ನು ತುಳಿದು ಸಂತೋಷಪಟ್ಟು ತಮ್ಮ ದೇವರ ಮನೆಯೊಳಗೆ ಹೋಗಿ ತಿಂದು ಕುಡಿದು ಅಬೀಮೆಲೆಕ ನನ್ನು ಶಪಿಸಿದರು.
27 Sucedeu que foram ao campo, colheram uvas, pisaram-nas, e fizeram uma festa no templo do seu deus. Comendo e bebendo, amaldiçoaram Abimeleque.
28 ಆಗ ಎಬೆದನ ಮಗನಾದ ಗಾಳನು--ನಾವು ಅವನನ್ನು ಸೇವಿಸುವ ಹಾಗೆ ಅಬೀ ಮೆಲೆಕನು ಯಾರು? ಶೆಕೆಮನು ಯಾರು? ಅವನು ಯೆರುಬ್ಬಾಳನ ಮಗನಲ್ಲವೋ? ಅವನ ಪ್ರಧಾನನು ಜೆಬುಲನಲ್ಲವೋ? ಶೆಕೆಮಿನ ತಂದೆಯಾದ ಹಮೋರನ ಮನುಷ್ಯರನ್ನೇ ಸೇವಿಸಿರಿ; ಇವನನ್ನು ನಾವು ಯಾಕೆ ಸೇವಿಸಬೇಕು?
28 Então Gaal, filho de Ebede, disse: "Quem é Abimeleque para que o sirvamos? E quem é Siquém? Não é ele o filho de Jerubaal, e não é Zebul o seu representante? Sirvam aos homens de Hamor, o pai de Siquém! Por que servir a Abimeleque?
29 ಈ ಜನರನ್ನು ದೇವರು ನನ್ನ ಕೈಗೆ ಒಪ್ಪಿಸಿದರೆ ಚೆನ್ನಾಗಿತ್ತು, ಆಗ ನಾನು ಅಬೀಮೆಲೆಕನನ್ನು ತೆಗೆದುಹಾಕುವೆನು. ಅವನು ಅಬೀಮೆಲೆಕನಿಗೆ--ನೀನು ನಿನ್ನ ಸೈನ್ಯವನ್ನು ಹೆಚ್ಚಿಸಿಕೊಂಡು ಹೊರಟು ಬಾ ಅಂದನು.
29 Ah! Se eu tivesse esse povo sob o meu comando! Eu me livraria dele. E diria a Abimeleque: ‘Mobilize o seu exército e venha! ’"
30 ಆ ಪಟ್ಟಣದ ಅಧಿಪತಿಯಾದ ಜೆಬುಲನು ಎಬೆದನ ಮಗನಾದ ಗಾಳನು ಹೇಳಿದ ಮಾತುಗಳನ್ನು ಕೇಳಿದಾಗ ಕೋಪಗೊಂಡು
30 Quando Zebul, o governante da cidade, ouviu o que dizia Gaal, filho de Ebede, ficou indignado.
31 ಅಬೀಮೆಲೆಕನ ಬಳಿಗೆ ರಹಸ್ಯವಾಗಿ ದೂತರನ್ನು ಕಳುಹಿಸಿ--ಇಗೋ, ಎಬೆದನ ಮಗನಾದ ಗಾಳನೂ ಅವನ ಸಹೋದರರೂ ಶೆಕೆಮಿಗೆ ಬಂದಿದ್ದಾರೆ ಮತ್ತು ಇಗೋ, ಅವರು ಪಟ್ಟಣವನ್ನು ನಿನಗೆ ವಿರೋಧವಾಗಿ ಬಲಪಡಿಸುತ್ತಾರೆ.
31 Secretamente enviou mensageiros a Abimeleque dizendo: "Gaal, filho de Ebede, e seus parentes vieram a Siquém e estão agitando a cidade contra você.
32 ಆದದ ರಿಂದ ಈಗ ನೀನೂ ನಿನ್ನ ಸಂಗಡ ಇರುವ ಜನರೂ ಕೂಡಿ ರಾತ್ರಿಯಲ್ಲಿ ಎದ್ದು ಹೊಲದಲ್ಲಿ ಹೊಂಚಿಕೊಳ್ಳ ಬೇಕು.
32 Venha de noite, você e seus homens, e fiquem à espera no campo.
33 ಹೊತ್ತಾರೆ ಸೂರ್ಯನು ಉದಯಿಸುವಾಗ ನೀನು ಎದ್ದು ಪಟ್ಟಣದ ಮೇಲೆ ಬೀಳಬೇಕು; ಇಗೋ, ಅವನೂ ಅವನ ಸಂಗಡ ಇರುವ ಜನರೂ ನಿಮಗೆದು ರಾಗಿ ಹೊರಟು ಬರುವಾಗ ನಿನಗೆ ಅನುಕೂಲ ತೋರಿದ ಹಾಗೆ ಅವನಿಗೆ ಮಾಡಬಹುದು ಎಂದು ಹೇಳಿದನು.
33 De manhã, ao nascer do sol, avance contra a cidade. Quando Gaal e sua tropa atacarem, faça com eles o que achar melhor".
34 ಹಾಗೆಯೇ ಅಬೀಮೆಲೆಕನೂ ಅವನ ಸಂಗಡ ಇದ್ದ ಸಮಸ್ತ ಜನರೂ ರಾತ್ರಿಯಲ್ಲಿ ಎದ್ದು ಶೆಕೆಮಿಗೆ ವಿರೋಧವಾಗಿ ನಾಲ್ಕು ಗುಂಪಾಗಿ ಹೊಂಚಿ ಕೊಂಡಿದ್ದರು.
34 E assim Abimeleque e todas as suas tropas partiram de noite e prepararam emboscadas perto de Siquém, em quatro companhias.
35 ಎಬೆದನ ಮಗನಾದ ಗಾಳನು ಹೊರಟು ಬಂದು ಪಟ್ಟಣದ ಬಾಗಲಿನ ದ್ವಾರದಲ್ಲಿ ನಿಂತನು. ಆಗ ಹೊಂಚಿಕೊಂಡಿದ್ದ ಅಬೀಮೆಲೆಕನೂ ಅವನ ಸಂಗಡ ಇದ್ದ ಜನರೂ ಎದ್ದುಬಂದರು.
35 Ora, Gaal, filho de Ebede, tinha saído e estava à porta da cidade quando Abimeleque e seus homens saíram da sua emboscada.
36 ಗಾಳನು ಆ ಜನರನ್ನು ಕಂಡಾಗ--ಇಗೋ, ಬೆಟ್ಟದ ಶಿಖರಗಳಿಂದ ಜನರು ಇಳಿದು ಬರುತ್ತಾರೆ ಎಂದು ಜೆಬುಲನಿಗೆ ಹೇಳಿದನು. ಜೆಬುಲನು ಅವನಿಗೆ--ನೀನು ಬೆಟ್ಟಗಳ ನೆರಳನ್ನು ಮನುಷ್ಯರಂತೆ ನೋಡುತ್ತೀ ಅಂದನು.
36 Quando Gaal os viu, disse a Zebul: "Veja, vem gente descendo do alto das colinas! " Zebul, porém, respondeu: "Você está confundindo as sombras dos montes com homens".
37 ಗಾಳನು ತಿರಿಗಿ ಅವನ ಸಂಗಡ ಮಾತ ನಾಡಿ--ಇಗೋ, ಜನರು ಭೂಮಧ್ಯಸ್ಥಳದಿಂದ ಬರು ತ್ತಾರೆ; ಮಿಯೋನೀಮಿನ ಬೈಲುಮಾರ್ಗವಾಗಿ ಒಂದು ಗುಂಪು ಬರುತ್ತದೆ ಅಂದನು.
37 Mas Gaal tornou a falar: "Veja, vem gente descendo da parte central do território, e uma companhia está vindo pelo caminho do carvalho dos Adivinhadores".
38 ಆಗ ಜೆಬುಲನು ಅವನಿಗೆ--ನಾವು ಅವನನ್ನು ಸೇವಿಸುವ ಹಾಗೆ ಅಬೀ ಮೆಲೆಕನು ಯಾರು ಎಂದು ನೀನು ಹೇಳಿದ ನಿನ್ನ ಬಾಯಿ ಈಗ ಎಲ್ಲಿ? ಅದು ನೀನು ಅಲಕ್ಷ್ಯಮಾಡಿದ ಜನವಲ್ಲವೋ? ಈಗ ನೀನು ಹೊರಟು ಅವರ ಸಂಗಡ ಯುದ್ಧಮಾಡು ಅಂದನು.
38 Disse-lhe Zebul: "Onde está toda aquela sua conversa? Você dizia: ‘Quem é Abimeleque, para que o sirvamos? ’ Não são estes os homens que você ridicularizou? Saia e lute contra eles! "
39 ಗಾಳನು ಶೆಕೆಮಿನ ಮನು ಷ್ಯರ ಮುಂದೆ ಹೊರಟು ಅಬೀಮೆಲೆಕನ ಸಂಗಡ ಯುದ್ಧಮಾಡಿದನು.
39 Então Gaal conduziu para fora os cidadãos de Siquém e lutou contra Abimeleque.
40 ಆದರೆ ಅಬೀಮೆಲೆಕನು ಅವ ನನ್ನು ಹಿಂದಟ್ಟಿದಾಗ ಅವನು ಅವನ ಮುಂದೆ ಓಡಿ ಹೋದನು. ಪ್ರವೇಶ ದ್ವಾರದ ವರೆಗೆ ಅನೇಕರು ಸಂಹಾರವಾಗಿ ಅನೇಕರು ಗಾಯಗೊಂಡರು.
40 Abimeleque o perseguiu, e ele fugiu. Muitos dos homens de Siquém caíram mortos ao longo de todo o caminho, até à porta da cidade.
41 ಆಗ ಅಬೀಮೆಲೆಕನು ಅರೂಮದಲ್ಲಿ ವಾಸಮಾಡಿದನು; ಆದರೆ ಜೆಬುಲನು ಗಾಳನನ್ನೂ ಅವನ ಸಹೋದರ ರನ್ನೂ ಶೆಕೆಮಿನಲ್ಲಿ ಇರದ ಹಾಗೆ ಹೊರಡಿಸಿಬಿಟ್ಟನು.
41 Abimeleque permaneceu em Arumá. E Zebul expulsou Gaal e os seus parentes de Siquém.
42 ಮರು ದಿವಸದಲ್ಲಿ ಆದದ್ದೇನಂದರೆ, ಜನರು ಹೊಲಕ್ಕೆ ಹೊರಟರು: ಅವರು ಅಬೀಮೆಲೆಕನಿಗೆ ತಿಳಿಸಿದರು.
42 No dia seguinte o povo de Siquém saiu aos campos, e Abimeleque ficou sabendo disso.
43 ಅವನು ಜನರನ್ನು ತಕ್ಕೊಂಡು ಅವರನ್ನು ಮೂರು ಗುಂಪುಗಳಾಗಿ ಮಾಡಿ ಹೊಲದಲ್ಲಿ ಹೊಂಚಿ ಕೊಂಡನು. ಇಗೋ, ಜನರು ಪಟ್ಟಣದಿಂದ ಹೊರಗೆ ಬಂದರು. ಅವನು ಅವರ ಮೇಲೆ ಎದ್ದು ಬಂದು ಅವರನ್ನು ಹೊಡೆದನು.
43 Então dividiu os seus homens em três companhias e armou emboscadas no campo. Quando viu o povo saindo da cidade, levantou-se contra ele e atacou-o.
44 ಅಬೀಮೆಲೆಕನೂ ಅವನ ಸಂಗಡ ಇದ್ದ ಜನರ ಗುಂಪೂ ಮುಂದಕ್ಕೆ ಓಡಿ ಪಟ್ಟಣದ ಪ್ರವೇಶ ದ್ವಾರದಲ್ಲಿ ನಿಂತರು. ಮಿಕ್ಕಾದ ಎರಡು ಗುಂಪು ಜನರು ಹೊಲದಲ್ಲಿರುವವರೆ ಲ್ಲರ ಮೇಲೆ ಬಿದ್ದು ಅವರನ್ನು ಹತಮಾಡಿಬಿಟ್ಟರು.
44 Abimeleque e as tropas que estavam com ele avançaram até à porta da cidade. Então duas companhias avançaram sobre os que estavam nos campos e os mataram.
45 ಅಬೀಮೆಲೆಕನು ಆ ದಿನವೆಲ್ಲಾ ಪಟ್ಟಣದ ಮೇಲೆ ಯುದ್ಧಮಾಡಿ ಪಟ್ಟಣವನ್ನು ಹಿಡಿದು ಅದರಲ್ಲಿದ್ದ ಜನ ವನ್ನು ಕೊಂದು ಪಟ್ಟಣವನ್ನು ಕೆಡವಿಬಿಟ್ಟು ಅದರಲ್ಲಿ ಉಪ್ಪು ಎರಚಿಬಿಟ್ಟನು.
45 E Abimeleque atacou a cidade o dia todo, até conquistá-la e matar o seu povo. Depois destruiu a cidade e espalhou sal sobre ela.
46 ಅದನ್ನು ಶೆಕೆಮಿನ ಗೋಪುರ ದಲ್ಲಿದ್ದ ಜನರೆಲ್ಲರೂ ಕೇಳಿದಾಗ ಅವರು ಬೆರೀತೆಂಬ ದೇವರ ಮನೆಯ ಭದ್ರವಾದ ಸ್ಥಳದಲ್ಲಿ ಪ್ರವೇಶಿಸಿದರು.
46 Ao saberem disso, os cidadãos que estavam na torre de Siquém entraram na fortaleza do templo de El-Berite.
47 ಆದರೆ ಶೆಕೆಮಿನ ಗೋಪುರದಲ್ಲಿದ್ದ ಜನರೆಲ್ಲರೂ ಅಲ್ಲಿ ಕೂಡಿದ್ದಾರೆಂದು ಅಬೀಮೆಲೆಕನಿಗೆ ತಿಳಿಸಲ್ಪಟ್ಟಾಗ
47 Quando Abimeleque soube que se haviam reunido lá,
48 ಅಬೀಮೆಲೆಕನು ತನ್ನ ಸಂಗಡ ಇದ್ದ ಜನರೆಲ್ಲರ ಸಹಿತವಾಗಿ ಚಲ್ಮೊನ್ ಬೆಟ್ಟವನ್ನೇರಿ ತನ್ನ ಕೈಯಲ್ಲಿ ಕೊಡಲಿಯನ್ನು ಹಿಡಿದು ಒಂದು ಮರದ ಕೊಂಬೆಯನ್ನು ಕಡಿದು ಅದನ್ನು ತನ್ನ ಹೆಗಲಿನ ಮೇಲೆ ಹೊತ್ತುಕೊಂಡು ತನ್ನ ಕೂಡ ಇದ್ದ ಜನರಿಗೆ--ನಾನು ಮಾಡಿದ್ದನ್ನು ನೋಡಿ ಹಾಗೆಯೇ ತೀವ್ರವಾಗಿ ಮಾಡಿರಿ ಅಂದನು.
48 ele e todos os seus homens subiram o monte Zalmom. Ele apanhou um machado e cortou um galho de árvore e o pôs nos ombros. Então deu esta ordem aos homens que estavam com ele: "Rápido! Façam o que eu fizer! "
49 ಜನರಲ್ಲಿ ಪ್ರತಿಯೊಬ್ಬನು ಒಂದೊಂದು ಕೊಂಬೆ ಯನ್ನು ಕಡಿದು ಅಬೀಮೆಲೆಕನ ಹಿಂದೆ ಹೋಗಿ ಅವುಗಳನ್ನು ಆ ಭದ್ರವಾದ ಸ್ಥಳಕ್ಕೆ ಹಾಕಿ ಅದಕ್ಕೆ ಬೆಂಕಿಯನ್ನು ಹಚ್ಚಿದರು. ಆಗ ಶೆಕೆಮಿನ ಗೋಪುರ ದಲ್ಲಿರುವವರೆಲ್ಲರೂ ಹೆಚ್ಚು ಕಡಿಮೆ ಸಾವಿರ ಸ್ತ್ರೀ ಪುರುಷರು ಸತ್ತರು.
49 Todos os homens cortaram galhos e seguiram Abimeleque. Empilharam os galhos junto à fortaleza e a incendiaram. Assim morreu também o povo que estava na torre de Siquém, cerca de mil homens e mulheres.
50 ಆಗ ಅಬೀಮೆಲೆಕನು ತೇಬೇಚಿಗೆ ಹೋಗಿ ಅದಕ್ಕೆ ವಿರೋಧವಾಗಿ ದಂಡಿಳಿಸಿ ಅದನ್ನು ಹಿಡಿದನು.
50 A seguir Abimeleque foi a Tebes, sitiou-a e conquistou-a.
51 ಆದರೆ ಪಟ್ಟಣದ ಒಳಗೆ ಬಲವಾದ ಗೋಪುರ ಇತ್ತು; ಆ ಪಟ್ಟಣದಲ್ಲಿರುವ ಸಮಸ್ತ ಸ್ತ್ರೀ ಪುರುಷರು ಅಲ್ಲಿಗೆ ಓಡಿಹೋಗಿ ಅದರಲ್ಲಿ ಹೊಕ್ಕು ತಮ್ಮ ಹಿಂದಿನಿಂದ ಬಾಗಲನ್ನು ಮುಚ್ಚಿ ಗೋಪುರದ ಮೇಲೆ ಏರಿದರು.
51 Mas dentro da cidade havia uma torre bastante forte, para a qual fugiram todos os homens e mulheres, todo o povo da cidade. Trancaram-se por dentro e subiram para o telhado da torre.
52 ಆಗ ಅಬೀಮೆಲೆಕನು ಆ ಗೋಪುರಕ್ಕೆ ಬಂದು ಅದರ ವಿರುದ್ಧ ಯುದ್ಧಮಾಡಿ ಗೋಪುರದ ಬಾಗಲನ್ನು ಸುಟ್ಟು ಬಿಡುವದಕ್ಕೆ ಅದರ ಬಳಿಗೆ ಬಂದನು.
52 Abimeleque foi para a torre e atacou-a. E, quando se aproximava da entrada da torre para incendiá-la,
53 ಆದರೆ ಒಬ್ಬ ಸ್ತ್ರೀಯು ಒಂದು ಬೀಸುವ ಕಲ್ಲಿನ ತುಂಡನ್ನು ಅಬೀಮೆಲೆಕನ ತಲೆಯ ಮೇಲೆ ಹಾಕಿ; ಅದರಿಂದ ಅವನ ತಲೆಯನ್ನು ಒಡೆದುಹಾಕಿದಳು.
53 uma mulher jogou-lhe uma pedra de moinho na cabeça, que lhe rachou o crânio.
54 ಆಗ ಅವನು ಶೀಘ್ರವಾಗಿ ತನ್ನ ಆಯುಧಗಳನ್ನು ಹೊರುವ ಸೇವಕ ನನ್ನು ಕರೆದು ಅವನಿಗೆ--ಒಬ್ಬ ಸ್ತ್ರೀಯು ಕೊಂದಳೆಂದು ಮನುಷ್ಯರು ನನ್ನನ್ನು ಕುರಿತು ಹೇಳದ ಹಾಗೆ ನೀನು ನಿನ್ನ ಕತ್ತಿಯನ್ನು ಇರಿದು ನನ್ನನ್ನು ಕೊಲ್ಲು ಎಂದು ಅವನಿಗೆ ಹೇಳಿದನು. ಹಾಗೆಯೇ ಅವನ ಸೇವಕನು ಅವನನ್ನು ತಿವಿದು ಹಾಕಿದನು; ಅವನು ಸತ್ತನು.
54 Imediatamente ele chamou seu escudeiro e lhe ordenou: "Tire a espada e mate-me, para que não digam que uma mulher me matou". Então o jovem o atravessou, e ele morreu.
55 ಅಬೀಮೆಲೆಕನು ಸತ್ತುಹೋದದ್ದನ್ನು ಇಸ್ರಾಯೇಲ್ ಮನುಷ್ಯರು ನೋಡಿದಾಗ ಅವರವರು ತಮ್ಮ ಸ್ಥಳಗಳಿಗೆ ಹೋದರು.
55 Quando os israelitas viram que Abimeleque estava morto, voltaram para casa.
56 ಈ ಪ್ರಕಾರ ಅಬೀಮೆಲೆಕನು ತನ್ನ ಎಪ್ಪತ್ತು ಮಂದಿ ಸಹೋದರರನ್ನು ಕೊಂದುಹಾಕಿದ್ದರಿಂದ ತನ್ನ ತಂದೆಗೆ ಮಾಡಿದ ಕೇಡನ್ನು ದೇವರು ಅವನ ಮೇಲೆ ತಿರಿಗಿ ಬರಮಾಡಿದನು.
56 Assim Deus retribuiu a maldade que Abimeleque praticara contra o seu pai, matando os seus setenta irmãos.
57 ಇದಲ್ಲದೆ ಶೆಕೆಮಿನ ಮನುಷ್ಯರು ಮಾಡಿದ ಸಮಸ್ತ ಕೆಟ್ಟತನವನ್ನು ಅವರ ತಲೆಗಳ ಮೇಲೆ ದೇವರು ಬರಮಾಡಿದನು. ಯೆರುಬ್ಬಾಳನ ಮಗನಾದ ಯೋತಾಮನ ಶಾಪವು ಅವರ ಮೇಲೆ ಬಂತು.
57 Deus fez também os homens de Siquém pagarem por toda a sua maldade. A maldição de Jotão, filho de Jerubaal, caiu sobre eles.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Juízes 9, comparar traduções ou montar um estudo — tudo direto pelo WhatsApp.