Juízes 8

Kannada Bible (GL_KANNADA) vs VC

Sair da comparação
VC Versão Católica
1 ಆಗ ಎಫ್ರಾಯಾಮನ ಮನುಷ್ಯರು ಅವನಿಗೆ--ನೀನು ಮಿದ್ಯಾನ್ಯರ ಮೇಲೆ ಯುದ್ಧ ಮಾಡುವದಕ್ಕೆ ಹೋಗುವಾಗ ನಮ್ಮನ್ನು ಕರೆ ಯದೆ ಹೋದದ್ದೇನೆಂದು ಹೇಳಿ ಅವನ ಸಂಗಡ ತೀಕ್ಷ್ಣವಾಗಿ ವಿವಾದ ಮಾಡಿದರು.
1 Os homens de Efraim disseram a Gedeão: Por que nos trataste assim, não nos chamando a pelejar contigo contra Madiã? E houve entre eles uma violenta discussão.
2 ಅವನು ಅವರಿಗೆನೀವು ಮಾಡಿದ್ದಕ್ಕೆ ಸಮಾನವಾಗಿ ನಾನೇನು ಮಾಡಿ ದೆನು? ಅಬೀಯೆಜೆರನ ದ್ರಾಕ್ಷೇ ಫಲ ಕೂಡಿಸುವ ದಕ್ಕಿಂತ ಎಫ್ರಾಯಾಮನ ದ್ರಾಕ್ಷೇ ಹಕ್ಕಲು ಉತ್ತಮ ವಲ್ಲವೇ?
2 Gedeão respondeu-lhes: Que fiz eu, ao lado do que vós fizestes? Porventura não valem mais os cachos de Efraim que as vindimas de Abieser?
3 ದೇವರು ನಿಮ್ಮ ಕೈಯಲ್ಲಿ ಮಿದ್ಯಾನ್ಯರ ಪ್ರಧಾನರಾದ ಓರೇಬನ್ನೂ ಜೇಬನ್ನೂ ಒಪ್ಪಿಸಿ ಕೊಡ ಲಿಲ್ಲವೇ? ನೀವು ಮಾಡಿದ್ದಕ್ಕೆ ನಾನು ಮಾಡಿದ್ದು ಎಷ್ಟು ಅಂದನು. ಅವನು ಈ ಮಾತು ಹೇಳಿದಾಗ ಅವನ ವಿಷಯವಾಗಿ ಅವರ ಕೋಪವು ಶಾಂತವಾಯಿತು.
3 Foi nas vossas mãos que o Senhor entregou os príncipes de Madiã, Oreb e Zeb. Que pude eu, pois, fazer em comparação do que vós fizestes? E com estas palavras aquietaram-se.
4 ಗಿದ್ಯೋನನು ಯೊರ್ದನಿಗೆ ಬಂದು ಅದನ್ನು ದಾಟಿ ಅವನೂ ಅವನ ಸಂಗಡ ಇದ್ದ ಮುನ್ನೂರು ಜನರೂ ದಣಿದವರಾಗಿಯೂ ಹಿಂದಟ್ಟುವವರಾಗಿಯೂ ಇದ್ದರು.
4 Gedeão chegou ao Jordão e passou-o com seus trezentos homens, continuando a perseguir o inimigo, apesar de sua fadiga.
5 ಅವನು ಸುಖೋತಿನ ಮನುಷ್ಯರಿಗೆ--ದಯಮಾಡಿ ನನ್ನ ಕೂಡ ಇರುವ ಜನರಿಗೆ ಕೆಲವು ರೊಟ್ಟಿಗಳನ್ನು ಕೊಡಿರಿ. ಅವರು ದಣಿದಿದ್ದಾರೆ; ನಾನು ಮಿದ್ಯಾನ್ಯರ ಅರಸುಗಳಾದ ಜೆಬಹನನ್ನೂ ಚಲ್ಮುನ್ನನನ್ನೂ ಹಿಂದಟ್ಟು ತ್ತೇನೆ ಅಂದನು.
5 Chegando a Socot, disse aos seus moradores: Dai, peço-vos, pão aos homens que me acompanham, porque estão muito cansados; estou perseguindo Zebéia e Salmana, reis de Madiã.
6 ಆದರೆ ಸುಖೋತಿನ ಪ್ರಧಾನರು ಅವನಿಗೆ--ನಿನ್ನ ಸೈನ್ಯಕ್ಕೆ ನಾವು ರೊಟ್ಟಿ ಕೊಡುವಂತೆ ಜೆಬಹ ಚಲ್ಮುನ್ನರ ಕೈ ನಿನ್ನ ಕೈ ವಶವಾಗಿದೆಯೋ ಅಂದರು.
6 Os chefes de Socot responderam-lhe: Tens já talvez em teu poder o punho de Zebéia e de Salmana para que possamos dar pão à tua tropa?
7 ಆಗ ಗಿದ್ಯೋನನು--ಹಾಗಾದರೆ ಕರ್ತನು ಜೆಬಹನನ್ನೂ ಚಲ್ಮುನ್ನನನ್ನೂ ನನ್ನ ಕೈಯಲ್ಲಿ ಒಪ್ಪಿಸಿ ಕೊಟ್ಟ ತರುವಾಯ ನಿಮ್ಮ ಮಾಂಸವನ್ನು ಅರಣ್ಯದ ಮುಳ್ಳುಗಳಿಂದಲೂ ನೆಗ್ಗಿಲು ಮುಳ್ಳುಗಳಿಂದಲೂ ಹರಿದುಬಿಡುವೆನು ಅಂದನು.
7 Pois bem, replicou Gedeão, quando o Senhor me houver entregue nas mãos Zebéia e Salmana, eu vos rasgarei a pele com espinhos e abrolhos do deserto!
8 ಅಲ್ಲಿಂದ ಪೆನೂವೇ ಲಿಗೆ ಹೋಗಿ ಆ ಊರಿನವರ ಸಂಗಡ ಆ ಪ್ರಕಾರವೇ ಮಾತನಾಡಿದನು. ಅವರು ಸುಖೋತಿನ ಮನುಷ್ಯರು ಪ್ರತ್ಯುತ್ತರಕೊಟ್ಟ ಹಾಗೆಯೇ ಪ್ರತ್ಯುತ್ತರಕೊಟ್ಟರು.
8 Dali subiu a Fanuel, onde fez o mesmo pedido, mas obteve a mesma resposta que em Socot.
9 ಆಗ ಅವನು ಪೆನೂವೇಲಿನ ಮನುಷ್ಯರಿಗೆ ಸಹ--ನಾನು ಸಮಾಧಾನವಾಗಿ ತಿರಿಗಿ ಬರುವಾಗ ಈ ಗೋಪು ರವನ್ನು ಕೆಡವಿಬಿಡುವೆನು ಅಂದನು.
9 Gedeão disse-lhes: Quando eu voltar vitorioso, destruirei esta torre.
10 ಆದರೆ ಜೆಬಹನೂ ಚಲ್ಮುನ್ನನೂ ತಮ್ಮ ಸೈನ್ಯವಾದ ಹೆಚ್ಚುಕಡಿಮೆ ಹದಿನೈದು ಸಾವಿರ ಜನರ ಸಂಗಡ ಕರ್ಕೋರಿನಲ್ಲಿ ಇದ್ದರು. ಇವರೆಲ್ಲಾ ಕತ್ತಿ ಹಿಡಿಯತಕ್ಕ ಲಕ್ಷದ ಇಪ್ಪತ್ತು ಸಾವಿರ ಜನ ಬಿದ್ದುಹೋದಾಗ ಮೂಡಣದ ಸಮಸ್ತ ಮಕ್ಕಳು ಅಲ್ಲಿ ಉಳಿದರು.
10 Zebéia e Salmana estavam então em Carcor com o seu forte exército, cerca de quinze mil homens, que eram o restante de todo o exército dos filhos do oriente, pois haviam já perecido cento e vinte mil combatentes que manejavam a espada.
11 ಗಿದ್ಯೋನನು ನೋಬಹ, ಯೊಗ್ಬೆಹಾ ಇವುಗಳ ಮೂಡಣದಲ್ಲಿದ್ದ ಡೇರೆಗಳಲ್ಲಿ ವಾಸಿಸಿರುವವರ ಮಾರ್ಗವಾಗಿ ಹೋಗಿ ಆ ದಂಡನ್ನು ಹೊಡೆದು ಬಿಟ್ಟನು. ಯಾಕಂದರೆ ಆ ದಂಡು ಭದ್ರವಾಗಿತ್ತು.
11 Gedeão subiu pelo caminho dos nômades, a oriente de Nobe e de Jegba, e feriu o acampamento dos inimigos que se julgavam perfeitamente seguros.
12 ಜೆಬಹನೂ ಚಲ್ಮುನ್ನನೂ ಓಡಿಹೋದದರಿಂದ ಅವನು ಮಿದ್ಯಾನ್ಯರ ಇಬ್ಬರು ಅರಸುಗಳಾದ ಜೆಬಹ ನನ್ನೂ ಚಲ್ಮುನ್ನನನ್ನೂ ಹಿಂದಟ್ಟಿ ಹಿಡಿದು ದಂಡನ್ನೆಲ್ಲಾ ಚದರಿಸಿಬಿಟ್ಟರು.
12 Zebéia e Salmana, reis de Madiã, fugiram, mas foram perseguidos e presos por Gedeão, depois de ter derrotado toda a sua guarnição.
13 ಯೋವಾಷನ ಮಗನಾದ ಗಿದ್ಯೋನನು ಸೂರ್ಯೋದಯಕ್ಕೆ ಮುಂಚೆ ಯುದ್ಧ ತೀರಿಸಿಕೊಂಡು ತಿರಿಗಿಬಂದು
13 Gedeão, filho de Joás, voltou da batalha pela subida de Hares.
14 ಸುಖೋತಿನ ಮನುಷ್ಯರಲ್ಲಿ ಒಬ್ಬ ಯೌವನಸ್ಥನನ್ನು ಹಿಡಿದು ಅವನನ್ನು ಕೇಳಿದಾಗ ಅವನು--ಸುಖೋತಿನ ಪ್ರಧಾನರೂ ಹಿರಿಯರೂ ಆದ ಎಪ್ಪತ್ತೇಳು ಜನರನ್ನು ಅವನಿಗೆ ವಿವರಿಸಿದನು.
14 Deteve um jovem entre os habitantes de Socot e fez-lhe perguntas. Este escreveu-lhe uma lista com setenta e sete nomes dos chefes de Socot e dos anciãos.
15 ಗಿದ್ಯೋನನು ಸುಖೋತಿನ ಮನುಷ್ಯರ ಬಳಿಗೆ ಬಂದು--ಇಗೋ, ದಣಿದಿರುವ ನಿನ್ನ ಮನುಷ್ಯರಿಗೆ ನಾವು ರೊಟ್ಟಿಯನ್ನು ಕೊಡುವ ಹಾಗೆ ಜೆಬಹ ಚಲ್ಮು ನ್ನರ ಕೈ ಈಗಲೇ ನಿನ್ನ ಕೈವಶವಾಗಿದೆಯೋ ಎಂದು ನೀವು ನನ್ನನ್ನು ನಿಂದಿಸಿದ ಜೆಬಹನನ್ನೂ ಚಲ್ಮುನ್ನನನ್ನೂ ನೋಡಿರಿ ಎಂದು ಹೇಳಿ
15 Gedeão veio ter com os habitantes de Socot e disse-lhes: Eis aqui Zebéia e Salmana a respeito dos quais me insultastes, dizendo: tens já talvez em teu poder o punho de Zebéia e de Salmana, para que possamos dar pão aos teus homens fatigados?
16 ಪಟ್ಟಣದ ಹಿರಿಯರನ್ನು ಹಿಡಿದು ಅರಣ್ಯದ ಮುಳ್ಳುಗಳನ್ನೂ ನೆಗ್ಗಿಲು ಮುಳ್ಳು ಗಳನ್ನೂ ತಕ್ಕೊಂಡು ಅವುಗಳಿಂದ ಸುಖೋತಿನ ಮನು ಷ್ಯರಿಗೆ ಬುದ್ದಿಕಲಿಸಿದನು.
16 Tomou então os anciãos da cidade e açoitou-os com espinhos e abrolhos do deserto.
17 ಪೆನೂವೇಲಿನ ಗೋಪುರ ವನ್ನು ಕೆಡವಿ ಆ ಪಟ್ಟಣದ ಮನುಷ್ಯರನ್ನು ಕೊಂದು ಹಾಕಿದನು.
17 Destruiu também a torre de Fanuel e matou os habitantes da cidade.
18 ಅವನು ಜೆಬಹನಿಗೂ ಚಲ್ಮುನ್ನನಿಗೂ--ನೀವು ತಾಬೋರದಲ್ಲಿ ಕೊಂದುಹಾಕಿದ ಆ ಮನುಷ್ಯರು ಹೇಗಿದ್ದರು ಅಂದನು. ಅದಕ್ಕವರು--ನಿನ್ನ ಹಾಗೆಯೇ; ಅವರು ಒಬ್ಬೊಬ್ಬರು ರೂಪದಲ್ಲಿ ಅರಸನ ಮಕ್ಕಳಾ ಗಿದ್ದರು ಅಂದರು.
18 E disse a Zebéia e a Salmana: Como eram aqueles homens que matastes no Tabor? Eram, responderam-lhe, semelhantes a ti; cada um deles parecia um filho de rei
19 ಅದಕ್ಕವನು--ಅವರು ನನ್ನ ತಾಯಿಯ ಮಕ್ಕಳು, ನನ್ನ ಸಹೋದರರು; ಕರ್ತನ ಜೀವದ ಆಣೆ ನೀವು ಅವರನ್ನು ಬದುಕಿಸಿದ್ದರೆ ನಿಮ್ಮನ್ನು ಕೊಲ್ಲುವದಿಲ್ಲ ಅಂದನು.
19 Eram meus irmãos, filhos de minha mãe! Juro pelo Senhor, se os tivésseis deixado com vida, eu não vos mataria.
20 ತನ್ನ ಚೊಚ್ಚಲ ಮಗನಾದ ಎತೆರನಿಗೆ--ನೀನೆದ್ದು ಅವರನ್ನು ಕೊಂದುಹಾಕು ಅಂದನು. ಆದರೆ ಆ ಯುವಕನು ತನ್ನ ಕತ್ತಿಯನ್ನು ಬಿಚ್ಚದೆ ಹೋದನು; ಯಾಕಂದರೆ ಅವನು ಇನ್ನೂ ಹುಡುಗನಾದದರಿಂದ ಭಯಪಟ್ಟನು.
20 E disse a Jeter, seu filho primogênito: Levanta-te e mata-os! Mas o jovem não ousou tirar a espada, porque, sendo ainda muito novo, tinha medo.
21 ಆಗ ಜೆಬ ಹನೂ ಚಲ್ಮುನ್ನನೂ--ನೀನು ಎದ್ದು ನಮ್ಮ ಮೇಲೆ ಬೀಳು; ಮನುಷ್ಯನು ಹೇಗೋ ಹಾಗೆಯೇ ಅವನ ಬಲವು ಇರುವದು ಅಂದರು.
21 Vem tu mesmo, disseram-lhe Zebéia e Salmana, e mata-nos; porque, tal o homem, tal a sua força. Gedeão matou Zebéia e Salmana, e tomou os colares que os camelos traziam ao pescoço.
22 ಗಿದ್ಯೋನನು ಎದ್ದು ಜೆಬಹನನ್ನೂ ಚಲ್ಮುನ್ನನನ್ನೂ ಕೊಂದುಹಾಕಿ ಅವರ ಒಂಟೆಗಳ ಕುತ್ತಿಗೆಗಳಲ್ಲಿ ಇದ್ದ ಆಭರಣಗಳನ್ನು ತೆಗೆದು ಕೊಂಡನು.
22 Os israelitas disseram a Gedeão: Sê o nosso rei, tu e teu filho, e o filho de teu filho, porque tu nos livraste das mãos dos madianitas.
23 ಆಗ ಇಸ್ರಾಯೇಲ್‌ ಜನರು ಗಿದ್ಯೋನನಿಗೆನೀನು ನಮ್ಮನ್ನು ಮಿದ್ಯಾನ್ಯರ ಕೈಯಿಂದ ತಪ್ಪಿಸಿ ರಕ್ಷಿಸಿದ್ದರಿಂದ ನೀನೂ ನಿನ್ನ ಕುಮಾರನೂ ಕುಮಾರನ ಕುಮಾರನೂ ನಮ್ಮನ್ನು ಆಳಬೇಕು ಅಂದರು. ಗಿದ್ಯೋ ನನು ಅವರಿಗೆ ನಾನು ನಿಮ್ಮನ್ನು ಆಳುವದಿಲ್ಲ, ನನ್ನ ಮಗನೂ ನಿಮ್ಮನ್ನು ಆಳುವದಿಲ್ಲ, ಕರ್ತನೇ ನಿಮ್ಮನ್ನು ಆಳುವನು ಅಂದನು.
23 Não, respondeu ele, não reinarei sobre vós, nem meu filho tampouco; é o Senhor quem será o vosso rei.
24 ಗಿದ್ಯೋನನು--ಒಂದು ಬಿನ್ನಹವನ್ನು ನಾನು ನಿಮಗೆ ಮಾಡುತ್ತೇನೆ. ಪ್ರತಿ ಯೊಬ್ಬನು ಕೊಳ್ಳೆ ಹೊಡೆದ ವಾಲೆಗಳನ್ನು ನನಗೆ ಕೊಡಿರಿ ಅಂದನು. (ಯಾಕಂದರೆ ಅವರು ಇಷ್ಮಾಯೇ ಲ್ಯರಾಗಿದ್ದದರಿಂದ ಅವರಿಗೆ ಬಂಗಾರದ ಮುರುವು ಗಳಿದ್ದವು).
24 E ajuntou: Tenho um pedido a vos fazer: que cada um de vós me dê as argolas de vosso despojo. Os inimigos, que eram os ismaelitas, usavam argolas de ouro.
25 ಅವರು--ನಾವು ಇಷ್ಟಪೂರ್ವಕವಾಗಿ ಕೊಡುವೆವು ಎಂದು ಹೇಳಿ ಒಂದು ವಸ್ತ್ರವನ್ನು ಹಾಸಿ ಅಲ್ಲಿ ಅವರವರು ಕೊಳ್ಳೆ ಹೊಡೆದ ವಾಲೆಗಳನ್ನು ಹಾಕಿದರು.
25 Eles responderam: Nós tas daremos de muito boa vontade. E, estendendo no chão um manto, lançaram nele as argolas de sua presa.
26 ಆದರೆ ಆಭರಣಗಳೂ ಕಂಠಮಾಲೆ ಗಳೂ ಮಿದ್ಯಾನ್ಯರ ಅರಸುಗಳು ಹೊದ್ದುಕೊಂಡಿದ್ದ ರಕ್ತಾಂಬರ ವಸ್ತ್ರಗಳೂ ಅವರ ಒಂಟೆಗಳ ಕೊರಳಿಗೆ ಇದ್ದ ಸರಪಣಿಗಳೂ ಹೊರತು ಅವನು ಕೇಳಿ ತೆಗೆದು ಕೊಂಡ ಬಂಗಾರದ ವಾಲೆಗಳ ತೂಕವು ಸಾವಿರದ ಏಳು ನೂರು ಶೆಕೆಲ್‌ ತೂಕವಾಗಿತ್ತು.
26 O peso das argolas de ouro que ele tinha pedido era de mil e setecentos siclos de ouro, sem contar os colares, brincos e ornamentos de púrpura que costumavam usar os reis de Madiã, afora ainda os colares que traziam seus camelos no pescoço.
27 ಆ ಬಂಗಾರ ದಿಂದ ಗಿದ್ಯೋನನು ಒಂದು ಏಫೋದನ್ನು ಮಾಡಿಸಿ ಅದನ್ನು ತನ್ನ ಊರಾದ ಒಫ್ರದಲ್ಲಿ ಇಟ್ಟನು. ಆದರೆ ಇಸ್ರಾಯೇಲ್ಯರೆಲ್ಲಾ ಅದರ ಹಿಂದೆ ಜಾರರಾಗಿ ಹೋದರು. ಅದು ಗಿದ್ಯೋನನಿಗೂ ಅವನ ಮನೆಗೂ ಉರುಲಾಯಿತು.
27 Gedeão fez de tudo isso um efod e o expôs em sua cidade de Efra. Mas todos os israelitas se prostituíram ante esse efod que se tornou, assim, um laço para Gedeão e sua casa.
28 ಮಿದ್ಯಾನ್ಯರು ತಮ್ಮ ತಲೆಯನ್ನು ತಿರಿಗಿ ಎತ್ತಕೂಡದ ಹಾಗೆ ಇಸ್ರಾಯೇಲ್ಯರ ಮಕ್ಕಳ ಮುಂದೆ ತಗ್ಗಿಸಲ್ಪಟ್ಟರು. ದೇಶವು ಗಿದ್ಯೋನನ ದಿವಸ ಗಳಲ್ಲಿ ನಾಲ್ವತ್ತು ವರುಷ ವಿಶ್ರಾಂತಿಯಲ್ಲಿತ್ತು.
28 Os madianitas foram humilhados diante dos israelitas e não puderam mais levantar a cabeça, de sorte que a terra pôde gozar um repouso de quarenta anos no tempo de Gedeão.
29 ಯೋವಾಷನ ಮಗನಾದ ಯೆರುಬ್ಬಾಳನು ಹೋಗಿ ತನ್ನ ಸ್ವಂತ ಮನೆಯಲ್ಲಿ ವಾಸವಾಗಿದ್ದನು.
29 Jerobaal, filho de Joás, retirou-se e foi habitar em sua casa.
30 ಗಿದ್ಯೋನ ನಿಗೆ ಅನೇಕ ಮಂದಿ ಹೆಂಡತಿಯರು ಇದ್ದದರಿಂದ ಅವನಿಗೆ ಎಪ್ಪತ್ತು ಮಂದಿ ಮಕ್ಕಳು ಹುಟ್ಟಿದರು.
30 Teve setenta filhos, saídos todos dele, porque tinha numerosas mulheres.
31 ಶೆಕೆ ಮಿನಲ್ಲಿದ್ದ ಅವನ ಉಪಪತ್ನಿಯು ಅವನಿಗೆ ಒಬ್ಬ ಮಗನನ್ನು ಹೆತ್ತಳು. ಅವನು ಆ ಮಗನಿಗೆ ಅಬೀಮೆಲೆಕ ನೆಂದು ಹೆಸರಿಟ್ಟನು.
31 Sua concubina, que estava em Siquém, deu-lhe também um filho, que foi chamado Abimelec.
32 ಯೋವಾಷನ ಮಗನಾದ ಗಿದ್ಯೋನನು ಒಳ್ಳೇ ವೃಧ್ಧಾಪ್ಯದಲ್ಲಿ ಸತ್ತು ಅಬೀಯೆಜೆರೀ ಯರಿಗೆ ಸೇರಿದ ಒಫ್ರದಲ್ಲಿ ತನ್ನ ತಂದೆಯಾದ ಯೋವಾಷನ ಸಮಾಧಿಯಲ್ಲಿ ಹೂಣಿಡಲ್ಪಟ್ಟನು.
32 Morreu Gedeão, filho de Joás, numa ditosa velhice, e foi sepultado no túmulo de Joás, seu pai, em Efra de Abieser.
33 ಗಿದ್ಯೋನನು ಸತ್ತತರುವಾಯ ಆದದ್ದೇನಂದರೆ, ಇಸ್ರಾಯೇಲ್‌ ಮಕ್ಕಳು ತಿರುಗಿಕೊಂಡು ಬಾಳನ ಹಿಂದೆ ಜಾರರಾಗಿ ಹೋಗಿ ಬಾಳ್‌ಬೆರೀತನನ್ನು ತಮಗೆ ದೇವರಾಗಿ ಮಾಡಿಕೊಂಡರು.
33 Depois de sua morte, os filhos de Israel prostituíram-se de novo com os baal, e tomaram Baal-Berit por seu deus.
34 ಸುತ್ತಲೂ ಇದ್ದ ತಮ್ಮ ಎಲ್ಲಾ ಶತ್ರುಗಳ ಕೈಯಿಂದ ತಮ್ಮನ್ನು ತಪ್ಪಿಸಿಬಿಟ್ಟ ತಮ್ಮ ದೇವರಾದ ಕರ್ತನನ್ನು ಜ್ಞಾಪಕಮಾಡಿಕೊಳ್ಳ ಲಿಲ್ಲ.
34 Não se lembraram os israelitas do Senhor, seu Deus, que os tinha livrado das mãos de todos os inimigos que os cercavam,
35 ಇಲ್ಲವೆ ಗಿದ್ಯೋನನೆಂಬ ಯೆರುಬ್ಬಾಳ್‌ ಇಸ್ರಾಯೇಲಿಗೆ ಮಾಡಿದ ಸಕಲ ಉಪಕಾರಗಳಿಗೆ ತಕ್ಕ ಹಾಗೆ ಅವರು ಅವನ ಮನೆಯವರಿಗೆ ದಯೆ ತೋರಿಸಲಿಲ್ಲ.
35 nem testemunharam gratidão alguma pela casa de Jerobaal-Gedeão por todos os benefícios que ele tinha feito a Israel.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Juízes 8, comparar traduções ou montar um estudo — tudo direto pelo WhatsApp.