Juízes 5

Kannada Bible (GL_KANNADA) vs VC

Sair da comparação
VC Versão Católica
1 ಆ ದಿನದಲ್ಲಿ ದೆಬೋರಳೂ ಅಬೀನೋ ವಮನ ಮಗನಾದ ಬಾರಾಕನೂ ಹಾಡಿ ದ್ದೇನಂದರೆ--
1 Naquele dia, Débora cantou este cântico, com Barac, filho de Abinoem:
2 ಜನರು ಸ್ವೇಚ್ಛೆಯಿಂದ ತಮ್ಮನ್ನು ಸಮ ರ್ಪಿಸಿಕೊಂಡಾಗ ಕರ್ತನು ಇಸ್ರಾಯೇಲಿಗೋಸ್ಕರ ಮುಯ್ಯಿಗೆ ಮುಯ್ಯಿ ಮಾಡಿದ್ದರಿಂದ ನೀವು ಆತನನ್ನು ಕೊಂಡಾಡಿರಿ.
2 Desatou-se a cabeleira em Israel, o povo ofereceu-se para o combate: bendizei o Senhor!
3 ಓ ಅರಸರೇ, ಕೇಳಿರಿ; ಓ ಪ್ರಭುಗಳೇ, ಕಿವಿಗೊಡಿರಿ; ನಾನು, ನಾನೇ ಕರ್ತನಿಗೆ ಹಾಡುವೆನು; ಇಸ್ರಾಯೇಲಿನ ದೇವರಾದ ಕರ್ತನನ್ನು ಕೀರ್ತಿಸುವೆನು.
3 Reis, ouvi! Estai atentos, ó príncipes! Sou eu, eu que vou cantar ao Senhor. Vou proferir um salmo ao Senhor, Deus de Israel!
4 ಕರ್ತನೇ, ನೀನು ಸೇಯಾರಿನಿಂದ ಹೊರಟು ಎದೋ ಮಿನ ಹೊಲದಿಂದ ಮುನ್ನಡೆಯುವಾಗ ಭೂಮಿ ನಡುಗಿತು, ಆಕಾಶವು ಸುರಿಯಿತು; ಮೇಘಗಳು ಸಹ ನೀರು ಸುರಿದವು.
4 Senhor, quando saístes de Seir, quando surgistes dos campos de Edom, a terra tremeu, os céus se entornaram, as nuvens desfizeram-se em água,
5 ಕರ್ತನ ಮುಂದೆ ಬೆಟ್ಟಗಳು ಕರಗಿದವು; ಇಸ್ರಾಯೇಲಿನ ದೇವರಾದ ಕರ್ತನ ಮುಂದೆ ಸೀನಾಯಿ ಪರ್ವತವು ಸಹ ಕರಗಿತು.
5 abalaram-se as montanhas diante do Senhor, nada menos que o Sinai, diante do Senhor, Deus de Israel!
6 ಅನಾತನ ಮಗನಾದ ಶಮ್ಗರನ ದಿವಸಗಳಲ್ಲಿಯೂ ಯಾಯೇಲಳ ದಿವಸಗಳಲ್ಲಿಯೂ ದಾರಿಗಳು ನಿಂತು ಹೋದವು; ಮಾರ್ಗಸ್ಥರು ಡೊಂಕು ದಾರಿಗಳಲ್ಲಿ ನಡೆಯುತ್ತಿದ್ದರು.
6 Nos dias de Samgar, filho de Anat, nos dias de Jael, estavam desertos os caminhos, e os viajantes seguiam veredas tortuosas.
7 ದೆಬೋರಳಾದ ನಾನು ಏಳುವ ಮಟ್ಟಿಗೂ ಇಸ್ರಾಯೇಲಿನಲ್ಲಿ ತಾಯಾಗಿ ನಾನು ಏಳುವ ಮಟ್ಟಿಗೂ ಹಳ್ಳಿಗಳ ನಿವಾಸಿಗಳು ನಿಂತುಹೋದರು; ಇಸ್ರಾಯೇಲಿನಲ್ಲಿ ನಿಂತುಹೋದರು.
7 Desertos se achavam os campos em Israel, desertos, senão quando eu, Débora, me levantei, me levantei como uma mãe em Israel.
8 ಅವರು ಹೊಸ ದೇವರುಗಳನ್ನು ಆದುಕೊಂಡರು; ಆಗ ಯುದ್ಧವು ಬಾಗಲುಗಳಲ್ಲಿ ಆಯಿತು. ಇಸ್ರಾಯೇಲಿನಲ್ಲಿ ನಾಲ್ವತ್ತು ಸಾವಿರ ಜನರೊಳಗೆ ಗುರಾಣಿಯೂ ಕಠಾರಿಯೂ ಕಾಣಲ್ಪಟ್ಟವೋ?
8 Israel escolhera deuses novos, e logo a guerra lhe bateu às portas, e não havia um escudo nem uma lança entre os quarenta mil de Israel.
9 ಜನರಲ್ಲಿ ಉಚಿತವಾಗಿ ಬಂದ ನ್ಯಾಯಾಧಿಪತಿಗಳ ಮೇಲೆ ನನ್ನ ಹೃದಯ ಅದೆ. ಕರ್ತನನ್ನು ಸ್ತುತಿಸಿರಿ.
9 Meu coração bate pelos chefes de Israel, pelos que se ofereceram voluntariamente entre o povo: bendizei o Senhor!
10 ಬಿಳೀ ಕತ್ತೆಗಳ ಮೇಲೆ ಸವಾರಿ ಮಾಡುವವರೇ, ನ್ಯಾಯದ ನ್ಯಾಯಾಸನದಲ್ಲಿ ಕುಳಿತಿರು ವವರೇ, ಮಾರ್ಗದಲ್ಲಿ ನಡೆಯುವವರೇ, ಮಾತ ನಾಡಿರಿ.
10 Vós que cavalgais jumentas brancas, sentados sobre tapetes, a galopar pelas estradas, cantai!
11 ನೀರು ಸೇದುವ ಸ್ಥಳಗಳ ಹತ್ತಿರ ಬಿಲ್ಲುಗಾರರ ಶಬ್ದದಿಂದ ತಪ್ಪಿಸಲ್ಪಟ್ಟವರು ಅಲ್ಲಿ ಕರ್ತನ ನೀತಿಯುಳ್ಳ ಕ್ರಿಯೆಗಳನ್ನು ಇಸ್ರಾಯೇಲಿನಲ್ಲಿ ಆತನ ಹಳ್ಳಿಗಳ ನಿವಾಸಿಗಳಿಗೆ ಮಾಡಿದ ನೀತಿಯುಳ್ಳ ಕ್ರಿಯೆಗಳನ್ನು ತಿರುತಿರುಗಿ ಪ್ರಕಟಿಸುವರು; ಕರ್ತನ ಜನರು ಬಾಗಲು ಗಳಿಗೆ ಇಳಿದು ಬರುವರು.
11 A voz dos arqueiros, junto dos bebedouros, celebre as vitórias do Senhor, as vitórias dos seus chefes em Israel! Então o povo do Senhor desceu às portas.
12 ಎಚ್ಚರವಾಗು, ಎಚ್ಚರ ವಾಗು, ದೆಬೋರಳೇ, ಎಚ್ಚರವಾಗು, ಎಚ್ಚರವಾಗು, ಹಾಡನ್ನು ಹಾಡು; ಬಾರಾಕನೇ; ಏಳು; ಅಬೀನೋವ ಮನ ಮಗನೇ, ನಿನ್ನನ್ನು ಸೆರೆಹಿಡಿದವರನ್ನು ಸೆರೆಯಾಗಿ ನಡಿಸು.
12 Desperta, desperta, Débora! Desperta, desperta, canta um hino! Levanta-te, Barac! Toma os teus prisioneiros, filho de Abinoem!
13 ಆಗ ಉಳಿದವನನ್ನು ಆತನು ಜನರಲ್ಲಿ ಶ್ರೇಷ್ಠರಾದವರ ಮೇಲೆ ಆಳುವಂತೆ ಮಾಡಿದನು; ಕರ್ತನು ನನ್ನನ್ನು ಪರಾಕ್ರಮಶಾಲಿಗಳ ಮೇಲೆ ಆಳು ವಂತೆ ಮಾಡಿದನು.
13 E agora descei, sobreviventes do meu povo. Senhor, descei para junto de mim entre estes heróis.
14 ಅಮಾಲೇಕ್ಯರಿಗೆ ವಿರೋಧ ಮಾಡಿದವರ ಬೇರು ಎಫ್ರಾಯಾಮಿನಿಂದ ಉಂಟಾ ಯಿತು. ನಿನ್ನ ಹಿಂದೆ ನಿನ್ನ ಜನರಲ್ಲಿ ಬೆನ್ಯಾವಿಾನನೂ; ಮಾಕೀರನಲ್ಲಿಂದ ಅಧಿಪತಿಗಳೂ ಜೆಬುಲೂನನಲ್ಲಿಂದ ಬರಹಗಾರನ ಲೇಖನಿಯನ್ನು ಉಪಯೋಗಿಸುವ ವರೂ ಬಂದರು.
14 De Efraim vêm os habitantes de Amalec; seguindo-te, marcha Benjamim com as tropas; de Maquir vêm os príncipes, e de Zabulon os guias com o bastão.
15 ಇಸ್ಸಾಕಾರನ ಪ್ರಧಾನರು ದೆಬೋ ರಳ ಸಂಗಡ ಇದ್ದರು; ಇಸ್ಸಾಕಾರನು, ಬಾರಾಕನು ಹಾಗೆಯೇ; ಕಾಲು ನಡೆಯಾಗಿ ತಗ್ಗಿನಲ್ಲಿ ಕಳುಹಿಸ ಲ್ಪಟ್ಟನು. ರೂಬೇನನ ಭಾಗಗಳಲ್ಲಿ ಹೃದಯದ ದೊಡ್ಡ ಆಲೋಚನೆಗಳು ಇದ್ದವು.
15 Os príncipes de Issacar estão com Débora; Issacar marcha com Barac e segue-lhe as pisadas na planície. Junto aos regatos de Rubem grandes foram as deliberações do coração.
16 ಮಂದೆಗಳ ಕೂಗನ್ನು ಕೇಳಿ ನೀನು ದೊಡ್ಡಿಗಳ ಬಳಿಯಲ್ಲಿ ಇದ್ದದ್ದೇನು? ರೂಬೇನನ ಭಾಗಗಳಲ್ಲಿ ಹೃದಯದ ದೊಡ್ಡ ಪರಿಶೋ ಧನೆಗಳು ಇದ್ದವು.
16 Por que ficaste junto ao aprisco, a ouvir a música dos pastores? Junto aos regatos de Rubem grandes foram as deliberações do coração.
17 ಗಿಲ್ಯಾದನು ಯೊರ್ದನಿಗೆ ಆಚೆ ವಾಸಿಸಿದನು. ದಾನನು ಹಡಗುಗಳಲ್ಲಿ ನಿಂತದ್ದೇನು? ಆಶೇರನು ಸಮುದ್ರದ ದಡದಲ್ಲಿದ್ದು ತನ್ನ ರೇವುಗಳ ಬಳಿಯಲ್ಲಿ ವಾಸಿಸಿದನು.
17 Galaad ficou em sua casa, além do Jordão; e Dã, por que habita junto dos navios? Aser assentou-se à beira do mar e ficou descansando nos seus portos.
18 ಜೆಬುಲೂನನೂ ನಫ್ತಾ ಲಿಯೂ ಹೊಲದ ಎತ್ತರವಾದ ಸ್ಥಳಗಳಲ್ಲಿ ಮರಣಕ್ಕೂ ತಮ್ಮ ಪ್ರಾಣಗಳನ್ನು ಧೈರ್ಯವಾಗಿ ಇಟ್ಟ ಜನರಾ ಗಿದ್ದರು.
18 Zabulon, porém, é um povo que desafia a morte, e da mesma forma Neftali, sobre os planaltos.
19 ಅರಸರು ಬಂದು ಯುದ್ಧಮಾಡಿದರು; ಆಗ ಕಾನಾನ್ಯರ ಅರಸರು ಮೆಗಿದ್ದೋನಿನ ಜಲ ಸವಿಾಪ ವಾದ ತಾನಾಕದಲ್ಲಿ ಯುದ್ಧಮಾಡಿದರು; ಅವರು ಹಣದ ಲಾಭ ತಕ್ಕೂಳ್ಳಲಿಲ್ಲ.
19 Vieram os reis e travaram combate; e travaram combate os reis de Canaã em Tanac, junto às águas de Magedo; mas não levaram espólio em dinheiro.
20 ಆಕಾಶದಲ್ಲಿ ಇರುವ ವುಗಳು ಯುದ್ಧಮಾಡಿದವು; ನಕ್ಷತ್ರಗಳು ತಮ್ಮ ಓಟಗ ಳಲ್ಲಿ ಸೀಸೆರನಿಗೆ ವಿರೋಧವಾಗಿ ಯುದ್ಧಮಾಡಿದವು.
20 Desde o céu as estrelas combateram, de suas órbitas combateram contra Sísara,
21 ಕೀಷೋನ್‌ ನದಿಯು, ಆ ಹಳೇದಾದ ಕೀಷೋನ್‌ ನದಿಯು ಅವರನ್ನು ಬಡಕೊಂಡು ಹೋಯಿತು. ಓ ನನ್ನ ಪ್ರಾಣವೇ, ನೀನು ಬಲವನ್ನು ತುಳಿದು ಹಾಕಿದಿ.
21 e a torrente de Cison os arrastou, a velha torrente, a torrente de Cison. Marcha, ó minha alma, resolutamente!
22 ಆಗ ನೆಲವನ್ನು ಘಟ್ಟಿಸಿ ಓಡುವ ಅವರ ಬಲವಾದ ಕುದುರೆಗಳು ತಮ್ಮ ಘಟನೆಯಿಂದ ಗೊರಿಶೇಗಳನ್ನು ಒಡೆದುಬಿಟ್ಟವು.
22 Ouviu-se, então, o troar dos cascos dos cavalos, ao tropel, ao tropel dos cavaleiros.
23 ನೀವು ಮೇರೋಜನ್ನು ಶಪಿಸಿರಿ; ಅದರ ನಿವಾಸಿಗಳನ್ನು ಕಠಿಣವಾಗಿ ಶಪಿಸಿರಿ ಎಂದು ಕರ್ತನ ದೂತನು ಹೇಳುತ್ತಾನೆ; ಯಾಕಂದರೆ ಅವರು ಕರ್ತನ ಸಹಾಯಕ್ಕೂ ಪರಾಕ್ರಮಶಾಲಿಗಳಿಗೆ ವಿರೋ ಧವಾಗಿ ಕರ್ತನ ಸಹಾಯಕ್ಕೂ ಬಾರದೆ ಹೋದರು.
23 Amaldiçoai Meroz, disse o Anjo do Senhor, amaldiçoai, amaldiçoai seus habitantes! Porque não vieram em socorro do Senhor, em socorro do Senhor, com os guerreiros.
24 ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇ ಲಳು ಸ್ತ್ರೀಯರಲ್ಲಿ ಅಧಿಕವಾಗಿ ಆಶೀರ್ವದಿಸಲ್ಪಡು ವಳು; ಸ್ತ್ರೀಯರೊಳಗೆ ಅಧಿಕವಾಗಿ ಗುಡಾರದಲ್ಲಿ ಆಶೀರ್ವದಿಸಲ್ಪಡುವಳು.
24 Bendita seja entre as mulheres Jael, mulher de Heber, o quenita! Entre as mulheres da tenda seja bendita!
25 ಅವನು ನೀರನ್ನು ಕೇಳಿ ದನು; ಅವಳು ಹಾಲು ಕೊಟ್ಟಳು; ಅಮೂಲ್ಯವಾದ ಬಟ್ಟಲಿನಲ್ಲಿ ಬೆಣ್ಣೆಯನ್ನು ತಂದಿಟ್ಟಳು.
25 Ao que pediu água ofereceu leite; serviu nata em taça nobre.
26 ತನ್ನ ಕೈಯಲ್ಲಿ ಮೊಳೆಯನ್ನು ತನ್ನ ಬಲಗೈಯಲ್ಲಿ ಕೆಲಸಗಾರನ ಸುತ್ತಿಗೆ ಯನ್ನು ತೆಗೆದುಕೊಂಡಳು; ಅವಳು ಸೀಸೆರನನ್ನು ಸುತ್ತಿಗೆ ಯಿಂದ ಹೊಡೆದಳು; ಅವಳು ಅವನ ಕಣತಲೆಯನ್ನು ತಿವಿದು ಹೊಡೆದಳು. ಅವನ ತಲೆಯನ್ನು ಹೊಡೆದು ಬಿಟ್ಟಳು.
26 Com uma das mãos segurou o prego, e com a outra o martelo de operário, e malhou Sísara, espedaçando-lhe a cabeça, e esmagou-lhe a fonte e a transpassou.
27 ಅವಳ ಕಾಲುಗಳ ಹತ್ತಿರ ಅವನು ಬೊಗ್ಗಿ ಬಿದ್ದು ಮಲಗಿದನು; ಅವಳ ಕಾಲುಗಳ ಹತ್ತಿರ ಬಾಗಿ ಬಿದ್ದನು; ಎಲ್ಲಿ ಬಾಗಿಬಿದ್ದನೋ ಅಲ್ಲಿಯೇ ಬಿದ್ದು ಸತ್ತನು.
27 Aos seus pés ele vergou, tombou, ficou; aos seus pés ele vergou, tombou. Onde vergou, ali tombou abatido!
28 ಸೀಸೆರನ ತಾಯಿ ಕಿಟಿಕಿಯಿಂದ ನೋಡಿದಳು, ಕಿಂಡಿ ಯಿಂದ ಕೂಗಿದಳು--ಅವನ ರಥವು ಬರುವದಕ್ಕೆ ಇಷ್ಟು ಆಲಸ್ಯವಾದದ್ದೇನು? ಅವನ ರಥಗಳ ಗಾಲಿ ಗಳು ಹಿಂದುಳಿದು ಇರುವದೇನು?
28 Da janela, através das persianas, a mãe de Sísara olha e clama: Por que tarda em chegar o seu carro?! Por que demoram tanto as suas carruagens?!
29 ಅದಕ್ಕೆ ಅವಳ ಜ್ಞಾನವುಳ್ಳ ಪ್ರಧಾನ ಸ್ತ್ರೀಯರು ಪ್ರತ್ಯುತ್ತರಕೊಟ್ಟರು. ಹೌದು, ಅವಳೇ ತನಗೆ ಬದಲು ಮಾತು ಕೇಳಿ ಕೊಂಡಳು.
29 As mais sábias das damas lhe respondem, e ela mesma o repete a si própria:
30 ಅವರು ಓಡಲಿಲ್ಲವೋ? ಕೊಳ್ಳೆಹಂಚಿ ಕೊಳ್ಳಲಿಲ್ಲವೋ? ಒಬ್ಬೊಬ್ಬ ಮನುಷ್ಯನಿಗೆ ಒಂದೆರಡು ಹೆಣ್ಣು, ಸೀಸೆರನಿಗೆ ನಾನಾ ವರ್ಣವುಳ್ಳ ಕೊಳ್ಳೆ, ನಾನಾ ವರ್ಣವುಳ್ಳಂಥ ವಿಚಿತ್ರವಾಗಿ, ಹೊಲಿದಂಥ, ಎರಡು ಪಕ್ಕೆಗಳಲ್ಲಿ ವಿಚಿತ್ರವಾಗಿ ಹೊಲಿದಂಥ, ಕೊಳ್ಳೆ ಹಿಡಿ ಯುವರ ಕಂಠಗಳಿಗೆ ತಕ್ಕಂಥ ನಾನಾ ವರ್ಣವುಳ್ಳ ಕೊಳ್ಳೆ, ಸಿಕ್ಕಲಿಲ್ಲವೋ?
30 Devem ter achado despojos, e os repartem: uma moça, duas moças para cada homem, despojos de tecidos multicores para Sísara, despojos de tecidos multicores, recamados; uma veste bordada, dois brocados, para os ombros do vencedor.
31 ಓ ಕರ್ತನೇ, ಹೀಗೆಯೇ ನಿನ್ನ ಶತ್ರುಗಳೆಲ್ಲರು ನಾಶವಾಗಲಿ, ಆದರೆ ಆತನನ್ನು ಪ್ರೀತಿಮಾಡುವವರು ತನ್ನ ಪರಾಕ್ರಮದಿಂದ ಹೊರ ಡುವ ಸೂರ್ಯನ ಹಾಗೆಯೇ ಇರಲಿ. ದೇಶವು ನಾಲ್ವತ್ತು ವರುಷ ವಿಶ್ರಾಂತಿಯಲ್ಲಿತ್ತು.
31 Assim pereçam, Senhor, todos os vossos inimigos! E os que vos amam sejam como o sol quando nasce resplendente.
32 — ausente —
32 E repousou a terra durante quarenta anos.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Juízes 5, comparar traduções ou montar um estudo — tudo direto pelo WhatsApp.