Juízes 1

Kannada Bible (GL_KANNADA) vs ARA

Sair da comparação
ARA Almeida Revista e Atualizada 1993
1 ಯೆಹೋಶುವನು ಸತ್ತ ತರುವಾಯ ಆದದ್ದೇನಂದರೆ, ಇಸ್ರಾಯೇಲ್‌ ಮಕ್ಕಳು ಕರ್ತನಿಗೆ--ಕಾನಾನ್ಯರ ಮೇಲೆ ಮೊದಲು ನಮಗಾಗಿ ಯುದ್ಧಕ್ಕೆ ಹೋಗುವವರು ಯಾರು ಎಂದು ಕೇಳಿದರು.
1 Depois da morte de Josué, os filhos de Israel consultaram o Senhor , dizendo: Quem dentre nós, primeiro, subirá aos cananeus para pelejar contra eles?
2 ಅದಕ್ಕೆ ಕರ್ತನು--ಯೂದನು ಹೋಗಲಿ; ಇಗೋ, ನಾನು ಆ ದೇಶವನ್ನು ಅವನ ಕೈಯಲ್ಲಿ ಒಪ್ಪಿಸಿಕೊಟ್ಟಿ ದ್ದೇನೆ ಅಂದನು.
2 Respondeu o Senhor : Judá subirá; eis que nas suas mãos entreguei a terra.
3 ಯೂದನು ತನ್ನ ಸಹೋದರನಾದ ಸಿಮೆಯೋನನಿಗೆ--ನೀನು ನನ್ನ ಸಂಗಡ ನನ್ನ ಭಾಗಕ್ಕೆ ಬಾ, ಕಾನಾನ್ಯರ ಮೇಲೆ ಯುದ್ಧಮಾಡೋಣ; ನಾನು ಹಾಗೆಯೇ ನಿನ್ನ ಸಂಗಡ ನಿನ್ನ ಭಾಗಕ್ಕೆ ಬರುವೆನು ಅಂದನು. ಹೀಗೆ ಸಿಮೆಯೋನನು ಅವನ ಸಂಗಡ ಹೋದನು.
3 Disse, pois, Judá a Simeão, seu irmão: Sobe comigo à herança que me caiu por sorte, e pelejemos contra os cananeus, e também eu subirei contigo à tua, que te caiu por sorte. E Simeão partiu com ele.
4 ಯೂದನು ಹೋದಾಗ ಕರ್ತನು ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟನು. ಬೆಜೆಕಿನಲ್ಲಿ ಇವರು ಅವರಲ್ಲಿ ಹತ್ತು ಸಾವಿರ ಜನರನ್ನು ಕೊಂದರು.
4 Subiu Judá, e o Senhor lhe entregou nas mãos os cananeus e os ferezeus; e feriram deles, em Bezeque, dez mil homens.
5 ಅವರು ಬೆಜೆಕಿನಲ್ಲಿ ಅದೋನೀಬೆಜೆಕನನ್ನು ಕಂಡು ಅವನಿಗೆ ವಿರೋಧವಾಗಿ ಯುದ್ಧಮಾಡಿ ಅಲ್ಲಿ ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಕೊಂದುಹಾಕಿದರು.
5 Em Bezeque, encontraram Adoni-Bezeque e pelejaram contra ele; e feriram aos cananeus e aos ferezeus.
6 ಆದರೆ ಅದೋನೀಬೆಜೆಕನು ಓಡಿಹೋದದರಿಂದ ಅವನನ್ನು ಹಿಂದಟ್ಟಿ ಹಿಡಿದು ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿ ಹಾಕಿ ದರು.
6 Adoni-Bezeque, porém, fugiu; mas o perseguiram e, prendendo-o, lhe cortaram os polegares das mãos e dos pés.
7 ಆಗ ಅದೋನೀಬೆಜೆಕನು--ನಾನು ಕೈಕಾಲು ಗಳ ಹೆಬ್ಬೆರಳುಗಳನ್ನು ಕತ್ತರಿಸಿದ ಎಪ್ಪತ್ತು ಮಂದಿ ಅರಸುಗಳು ನನ್ನ ಮೇಜಿನ ಕೆಳಗೆ ತಮ್ಮ ಆಹಾರ ವನ್ನು ಕೂಡಿಸಿದರು; ನಾನು ಹೇಗೆ ಮಾಡಿದೆನೋ ಹಾಗಾಯೇ ದೇವರು ನನಗೆ ಮುಯ್ಯಿಗೆ ಮುಯ್ಯಿಮಾಡಿದ್ದಾನೆ ಅಂದನು. ಅವನನ್ನು ಯೆರೂಸಲೇಮಿಗೆ ತಕ್ಕೊಂಡು ಬಂದರು; ಅವನು ಅಲ್ಲಿ ಸತ್ತನು.
7 Então, disse Adoni-Bezeque: Setenta reis, a quem haviam sido cortados os polegares das mãos e dos pés, apanhavam migalhas debaixo da minha mesa; assim como eu fiz, assim Deus me pagou. E o levaram a Jerusalém, e morreu ali.
8 ಯೂದನ ಮಕ್ಕಳು ಯೆರೂಸಲೇಮಿನ ಮೇಲೆ ಯುದ್ಧಮಾಡಿ ಅದನ್ನು ಹಿಡಿದು ಕತ್ತಿಯಿಂದ ಹೊಡೆದು ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
8 Os filhos de Judá pelejaram contra Jerusalém e, tomando-a, passaram-na a fio de espada, pondo fogo à cidade.
9 ತರುವಾಯ ಯೂದನ ಮಕ್ಕಳು ಬೆಟ್ಟದಲ್ಲಿಯೂ ದಕ್ಷಿಣದಲ್ಲಿಯೂ ತಗ್ಗಿನ ಲ್ಲಿಯೂ ವಾಸಿಸಿದ ಕಾನಾನ್ಯರಿಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಹೋದರು.
9 Depois, os filhos de Judá desceram a pelejar contra os cananeus que habitavam nas montanhas, no Neguebe e nas planícies.
10 ಯೂದನು ಪೂರ್ವದಲ್ಲಿ ಕಿರ್ಯತರ್ಬ ಎಂಬ ಹೆಸರಿದ್ದ ಹೆಬ್ರೋನಿನಲ್ಲಿ ವಾಸವಾಗಿದ್ದ ಕಾನಾನ್ಯರ ಮೇಲೆ ಹೋಗಿ ಶೇಷೈ, ಅಹೀಮನ್‌, ತಲ್ಮೈರನ್ನು ಕೊಂದುಹಾಕಿದನು.
10 Partiu Judá contra os cananeus que habitavam em Hebrom, cujo nome, outrora, era Quiriate-Arba, e Judá feriu a Sesai, a Aimã e a Talmai.
11 ಅಲ್ಲಿಂದ ದೆಬೀರಿನಲ್ಲಿ ವಾಸ ವಾಗಿರುವವರಿಗೆ ವಿರೋಧವಾಗಿ ಹೋದರು; ದೆಬೀ ರಿಗೆ ಪೂರ್ವದಲ್ಲಿ ಕಿರ್ಯತ್‌ಸೇಫೆರ್‌ ಎಂಬ ಹೆಸ ರಿತ್ತು.
11 Dali partiu contra os moradores de Debir; e era, dantes, o nome de Debir Quiriate-Sefer.
12 ಕಾಲೇಬನು--ಕಿರ್ಯತೆಸೇಫೆರನ್ನು ಹೊಡೆದು ತೆಗೆದುಕೊಳ್ಳುವವನಿಗೆ ನನ್ನ ಕುಮಾರ್ತೆಯಾದ ಅಕ್ಷಾ ಳನ್ನು ಹೆಂಡತಿಯಾಗಿ ಕೊಡುವೆನು ಎಂದು ಹೇಳಿದ್ದನು.
12 Disse Calebe: A quem derrotar Quiriate-Sefer e a tomar, darei minha filha Acsa por mulher.
13 ಆಗ ಕಾಲೇಬನ ತಮ್ಮನು ಕೆನಜನ ಮಗನಾದ ಒತ್ನೀಯೇಲನು ಅದನ್ನು ಹಿಡಿದನು. ಆಗ ಅವನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.
13 Tomou-a, pois, Otniel, filho de Quenaz, o irmão de Calebe, mais novo do que ele; e Calebe lhe deu sua filha Acsa por mulher.
14 ಅವಳು ಅವನ ಬಳಿಗೆ ಹೋಗುವಾಗ ತನ್ನ ತಂದೆಯಿಂದ ಒಂದು ಹೊಲವನ್ನು ಕೇಳುವದಕ್ಕೆ ಅವನನ್ನು ಪ್ರೇರೇಪಿಸಿದವಳಾಗಿ ಕತ್ತೆಯಿಂದ ಇಳಿದಳು; ಕಾಲೇಬನು ಅವಳಿಗೆ--ನಿನಗೆ ಏನು ಬೇಕು ಅಂದನು.
14 Esta, quando se foi a ele, insistiu com ele para que pedisse um campo ao pai dela; e ela apeou do jumento; então, Calebe lhe perguntou: Que desejas?
15 ಅವಳು ಅವನಿಗೆ--ನನಗೆ ಆಶೀರ್ವಾದಕೊಡು; ನೀನು ದಕ್ಷಿಣ ಭೂಮಿಯನ್ನು ನನಗೆ ಕೊಟ್ಟುಬಿಟ್ಟೆ ಯಲ್ಲಾ, ನೀರು ಬುಗ್ಗೆಗಳನ್ನು ಸಹ ಕೊಡು ಅಂದಳು. ಕಾಲೇಬನು ಮೇಲಿನ ಬುಗ್ಗೆಗಳನ್ನೂ ಕೆಳಗಿನ ಬುಗ್ಗೆಗಳನ್ನೂ ಅವಳಿಗೆ ಕೊಟ್ಟನು.
15 Respondeu ela: Dá-me um presente; deste-me terra seca, dá-me também fontes de água. Então, Calebe lhe deu as fontes superiores e as fontes inferiores.
16 ಮೋಶೆಯ ಮಾವನಾದ ಕೇನ್ಯನ ಮಕ್ಕಳು ಖರ್ಜೂರ ಗಿಡಗಳ ಪಟ್ಟಣದಿಂದ ಹೊರಟು ಯೂದನ ಮಕ್ಕಳ ಸಂಗಡ ಅರಾದಿಗೆ ದಕ್ಷಿಣಕ್ಕಿರುವ ಯೂದದ ಅರಣ್ಯಕ್ಕೆ ಬಂದು ಜನರ ಸಂಗಡ ವಾಸವಾಗಿದ್ದರು.
16 Os filhos do queneu, sogro de Moisés, subiram, com os filhos de Judá, da cidade das Palmeiras ao deserto de Judá, que está ao sul de Arade; foram e habitaram com este povo.
17 ಯೆಹೂದ್ಯರು ತಮ್ಮ ಸಹೋದರರಾದ ಸಿಮೆ ಯೋನ್ಯರ ಸಂಗಡ ಹೊರಟು ಚೆಫತ್‌ನಲ್ಲಿ ವಾಸವಾಗಿ ರುವ ಕಾನಾನ್ಯರನ್ನು ಕೊಂದು ಆ ಪಟ್ಟಣವನ್ನು ನಿರ್ಮೂಲ ಮಾಡಿದರು. ಆ ಪಟ್ಟಣವು ಹೋರ್ಮಾ ಎಂದು ಕರೆಯಲ್ಪಟ್ಟಿತು.
17 Foi-se, pois, Judá com Simeão, seu irmão, e feriram aos cananeus que habitavam em Zefate e totalmente a destruíram; por isso, lhe chamaram Horma.
18 ಇದಲ್ಲದೆ ಯೂದನು ಗಾಜಾವನ್ನೂ ಅದರ ಮೇರೆಯನ್ನೂ ಅಷ್ಕೆಲೋನನ್ನ್ನೂ ಅದರ ಮೇರೆಯನ್ನೂ ಎಕ್ರೋನನ್ನ್ನೂ ಅದರ ಮೇರೆ ಯನ್ನೂ ತೆಗೆದುಕೊಂಡನು.
18 Tomou ainda Judá a Gaza, a Asquelom e a Ecrom com os seus respectivos territórios.
19 ಕರ್ತನು ಯೂದನ ಸಂಗಡ ಇದ್ದದರಿಂದ ಅವನು ಬೆಟ್ಟದ ನಿವಾಸಿಗಳನ್ನು ಹೊರಡಿಸಿಬಿಟ್ಟನು; ಆದರೆ ತಗ್ಗಿನ ನಿವಾಸಿಗಳಿಗೆ ಕಬ್ಬಿ ಣದ ರಥಗಳಿದ್ದದರಿಂದ ಅವನು ಅವರನ್ನು ಹೊರ ಡಿಸಲಾರದೆ ಹೋದನು.
19 Esteve o Senhor com Judá, e este despovoou as montanhas; porém não expulsou os moradores do vale, porquanto tinham carros de ferro.
20 ಮೋಶೆಯು ಹೇಳಿದ ಪ್ರಕಾರ ಅವರು ಹೆಬ್ರೋನನ್ನ್ನು ಕಾಲೇಬನಿಗೆ ಕೊಟ್ಟರು. ಅವನು ಅನಾಕನ ಮೂವರು ಮಕ್ಕಳನ್ನು ಅಲ್ಲಿಂದ ಹೊರಡಿಸಿಬಿಟ್ಟನು.
20 E, como Moisés o dissera, deram Hebrom a Calebe, e este expulsou dali os três filhos de Anaque.
21 ಬೆನ್ಯಾವಿಾನನ ಮಕ್ಕಳು ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲಿಲ್ಲ. ಆದರೆ ಯೆಬೂಸಿಯರು ಈ ದಿನದ ವರೆಗೆ ಬೆನ್ಯಾವಿಾ ನನ ಮಕ್ಕಳ ಸಂಗಡ ವಾಸವಾಗಿದ್ದಾರೆ.
21 Porém os filhos de Benjamim não expulsaram os jebuseus que habitavam em Jerusalém; antes, os jebuseus habitam com os filhos de Benjamim em Jerusalém, até ao dia de hoje.
22 ಇದಲ್ಲದೆ ಯೋಸೇಫನ ಮನೆಯವರು ಬೇತೇಲಿಗೆ ಹೋದರು. ಕರ್ತನು ಅವರ ಸಂಗಡ ಇದ್ದನು.
22 Subiu também a casa de José contra Betel, e o Senhor era com eles.
23 ಆದರೆ ಮೊದಲು ಲೂಜ್‌ ಎಂದು ಹೆಸರಿದ್ದ ಬೇತೇಲೆಂಬ ಪಟ್ಟಣವನ್ನು ಪಾಳತಿ ನೋಡಲು ಯೋಸೇಫನ ಮನೆಯವರು ಕಳುಹಿಸಿದರು.
23 A casa de José enviou homens a espiar Betel, cujo nome, dantes, era Luz.
24 ಪಾಳತಿಯವರು ಪಟ್ಟಣದೊಳಗಿಂದ ಬರುವ ಒಬ್ಬ ಮನುಷ್ಯನನ್ನು ಕಂಡು ಅವನಿಗೆ--ದಯಮಾಡಿ ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ನಮಗೆ ತೋರಿಸು; ನಾವು ನಿನಗೆ ಕರುಣೆ ತೋರಿಸುವೆವು ಅಂದರು.
24 Vendo os espias um homem que saía da cidade, lhe disseram: Mostra-nos a entrada da cidade, e usaremos de misericórdia para contigo.
25 ಅವನು ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ಅವರಿಗೆ ತೋರಿಸಿದಾಗ ಅವರು ಬಂದು ಪಟ್ಟಣವನ್ನು ಕತ್ತಿಯಿಂದ ಹೊಡೆದು ಆ ಮನುಷ್ಯನನ್ನೂ ಅವನ ಸಮಸ್ತ ಕುಟುಂಬವನ್ನೂ ಕಳುಹಿಸಿಬಿಟ್ಟರು.
25 Mostrando-lhes ele a entrada da cidade, feriram a cidade a fio de espada; porém, àquele homem e a toda a sua família, deixaram ir.
26 ಆ ಮನುಷ್ಯನು ಹಿತ್ತಿಯರ ದೇಶಕ್ಕೆ ಹೋಗಿ ಅಲ್ಲಿ ಒಂದು ಪಟ್ಟಣವನ್ನು ಕಟ್ಟಿ ಅದಕ್ಕೆ ಲೂಜ್‌ ಎಂದು ಹೆಸರಿಟ್ಟನು. ಈ ವರೆಗೂ ಅದಕ್ಕೆ ಅದೇ ಹೆಸರು.
26 Então, se foi ele à terra dos heteus, e edificou uma cidade, e lhe chamou Luz; este é o seu nome até ao dia de hoje.
27 ಮನಸ್ಸೆಯವರು ಬೇತ್‌ಷೆಯಾನ್‌ ತಾನಾಕ್‌ ದೋರ್‌ ಇಬ್ಲೆಯಾಮ್‌ ಮೆಗಿದ್ದೋ ಎಂಬ ಪಟ್ಟಣ ಗಳನ್ನು ಅವುಗಳ ಗ್ರಾಮಗಳನ್ನು ಸ್ವಾಧೀನಮಾಡಿ ಕೊಳ್ಳಲಿಲ್ಲ. ಆದದರಿಂದ ಕಾನಾನ್ಯರು ಆ ಪ್ರಾಂತ ಗಳಲ್ಲೇ ವಾಸಿಸುವದಕ್ಕೆ ದೃಢಮಾಡಿದರು.
27 Manassés não expulsou os habitantes de Bete-Seã, nem os de Taanaque, nem os de Dor, nem os de Ibleão, nem os de Megido, todas com suas respectivas aldeias; pelo que os cananeus lograram permanecer na mesma terra.
28 ಇಸ್ರಾ ಯೇಲ್ಯರು ಬಲಗೊಂಡಾಗ ಅವರನ್ನು ಪೂರ್ಣವಾಗಿ ಹೊರಡಿಸಿಬಿಡದೆ ಕಪ್ಪಕೊಡಲು ಕಾನಾನ್ಯರಿಗೆ ನೇಮಕ ಮಾಡಿದರು.
28 Quando, porém, Israel se tornou mais forte, sujeitou os cananeus a trabalhos forçados e não os expulsou de todo.
29 ಇದಲ್ಲದೆ ಎಫ್ರಾಯಾಮ್‌ ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಕಾನಾ ನ್ಯರು ಗೆಜೆರಿನಲ್ಲಿ ಅವರ ಸಂಗಡ ವಾಸಿಸಿದ್ದರು.
29 Efraim não expulsou os cananeus, habitantes de Gezer; antes, continuaram com ele em Gezer.
30 ಜೆಬುಲೂನ್ಯರು ಕಿಟ್ರೋನಿನ ವಾಸಿಗಳನ್ನೂ ನಹಲೋಲಿನ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ. ಕಾನಾನ್ಯರಾದ ಇವರು ಅವರಲ್ಲಿ ವಾಸವಾಗಿದ್ದು ಕಪ್ಪ ವನ್ನು ಕೊಡುವವರಾದರು.
30 Zebulom não expulsou os habitantes de Quitrom, nem os de Naalol; porém os cananeus continuaram com ele, sujeitos a trabalhos forçados.
31 ಆಶೇರ್ಯರು ಅಕ್ಕೋವಿನ ವಾಸಿಗಳನ್ನೂ ಚೀದೋನಿನ ವಾಸಿಗಳನ್ನೂ ಅಹ್ಲಾಬ್‌, ಅಕ್ಜೀಬ್‌, ಹೆಲ್ಬಾ, ಅಫೀಕ್‌, ರೆಹೋಬ್‌ ಪಟ್ಟಣ ಗಳ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ.
31 Aser não expulsou os habitantes de Aco, nem os de Sidom, os de Alabe, os de Aczibe, os de Helba, os de Afeca e os de Reobe;
32 ಆದರೆ ಆಶೇರ್ಯರು ಅವರನ್ನು ಹೊರಡಿಸಿಬಿಡದೆ ಆ ದೇಶದ ವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸವಾಗಿದ್ದರು.
32 porém os aseritas continuaram no meio dos cananeus que habitavam na terra, porquanto os não expulsaram.
33 ನಫ್ತಾಲ್ಯರು ಬೇತ್‌ಷೆಮೆಷಿನ ವಾಸಿಗಳನ್ನೂ ಬೇತ ನಾತಿನ ವಾಸಿಗಳನ್ನೂ ಹೊರಡಿಸಿಬಿಡದೆ ಆ ದೇಶ ವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸಿಸಿದ್ದರು. ಆದರೆ ಬೇತ್‌ಷೆಮೆಷ್‌ ಬೇತನಾತನ ಪಟ್ಟಣವಾಸಿಗಳು ಅವರಿಗೆ ಕಪ್ಪಕೊಡುವವರಾದರು.
33 Naftali não expulsou os habitantes de Bete-Semes, nem os de Bete-Anate; mas continuou no meio dos cananeus que habitavam na terra; porém os de Bete-Semes e Bete-Anate lhe foram sujeitos a trabalhos forçados.
34 ಇದಲ್ಲದೆ ಅಮೋರಿಯರು ದಾನನ ಮಕ್ಕಳನ್ನು ತಗ್ಗಿನಲ್ಲಿ ಇಳಿಯಗೊಡದೆ ಬೆಟ್ಟಗಳಿಗೆ ಓಡಿಸಿಬಿಟ್ಟು
34 Os amorreus arredaram os filhos de Dã até às montanhas e não os deixavam descer ao vale.
35 ತಾವು ಹರ್‌ಹೆರೆಸ್‌ ಬೆಟ್ಟದಲ್ಲಿಯೂ ಅಯ್ಯಾಲೋನಿ ನಲ್ಲಿಯೂ ಶಾಲ್ಬೀಮಿನಲ್ಲಿಯೂ ವಾಸಿಸಬೇಕೆಂದಿದ್ದರು. ಆದರೆ ಯೋಸೇಫನ ಮನೆಯವರ ಕೈ ಭಾರವಾದದ್ದ ರಿಂದ ಅವರಿಗೆ ಕಪ್ಪಕೊಡುವವರಾದರು.
35 Porém os amorreus lograram habitar nas montanhas de Heres, em Aijalom e em Saalabim; contudo, a mão da casa de José prevaleceu, e foram sujeitos a trabalhos forçados.
36 ಹೀಗೆಯೇ ಅಮೋರಿಯರ ಮೇರೆಯು ಅಕ್ರಬ್ಬೀಮು ಹಿಡಿದು ಬಂಡೆಯಿಂದ ಮೇಲ್ಗಡೆಗೆ ಹಾದುಹೋಗುವದಾಗಿತ್ತು.
36 O limite dos amorreus foi desde a subida de Acrabim e desde Sela para cima.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Juízes 1, comparar traduções ou montar um estudo — tudo direto pelo WhatsApp.