Juízes 19
Kannada Bible (GL_KANNADA) vs VC
VC Versão Católica
1 ಇಸ್ರಾಯೇಲಿನಲ್ಲಿ ಅರಸನಿಲ್ಲದ ಆ ದಿವಸಗಳಲ್ಲಿ ಆದದ್ದೇನಂದರೆ, ಎಫ್ರಾಯಾಮ್ ಬೆಟ್ಟದ ಪಾರ್ಶ್ವದಲ್ಲಿ ಒಬ್ಬ ಲೇವಿಯನು ಪ್ರವಾ ಸಿಯಾಗಿದ್ದನು.
1 Naquele tempo, como não havia rei em Israel, aconteceu que um levita, vindo fixar-se no fundo das montanhas de Efraim, tomou ali por concubina uma jovem. de Belém de Judá.
2 ಅವನು ಯೆಹೂದದ ಬೇತ್ಲೆ ಹೇಮಿನವಳಾದಂಥ ಸ್ತ್ರೀಯನ್ನು ಉಪಪತ್ನಿಯಾಗಿ ತೆಗೆದುಕೊಂಡಿದ್ದನು. ಅವನ ಉಪಪತ್ನಿ ಅವನಿಗೆ ವಿರೋಧವಾಗಿ ಜಾರತ್ವಮಾಡಿ ಅವನನ್ನು ಬಿಟ್ಟು ಯೆಹೂದದ ಬೇತ್ಲೆಹೇಮಿನಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ ಅಲ್ಲಿ ನಾಲ್ಕು ತಿಂಗಳಿದ್ದಳು.
2 Esta foi-lhe infiel, deixou-o e foi para junto de seu pai em Belém de Judá, onde ficou quatro meses.
3 ಆಗ ಅವಳ ಗಂಡನು ಎದ್ದು ಅವಳ ಸಂಗಡ ಪ್ರೀತಿಯಲ್ಲಿ ಮಾತನಾಡಿ ಅವಳನ್ನು ತಿರಿಗಿ ಕರತರುವದಕ್ಕೆ ತನ್ನ ಊಳಿಗದವನನ್ನೂ ಎರಡು ಕತ್ತೆಗಳನ್ನೂ ತಕ್ಕೊಂಡು ಅವಳ ಬಳಿಗೆ ಹೋದನು. ಅವಳು ಅವನನ್ನು ತನ್ನ ತಂದೆಯ ಮನೆಗೆ ಕರಕೊಂಡು ಹೋದಳು. ಹೆಂಗಸಿನ ತಂದೆ ಅವನನ್ನು ಕಂಡಾಗ ಅವನನ್ನು ಕಂಡುಕೊಂಡ ದ್ದರಿಂದ ಸಂತೋಷಪಟ್ಟನು.
3 Seu marido foi ter com ela para falar-lhe ao coração e reconduzi-la à sua casa, levando consigo um servo e dois jumentos. Ela o introduziu em casa de seu pai. Quando o pai da mulher o viu, saiu a recebê-lo alegremente.
4 ಆ ಸ್ತ್ರೀಯ ತಂದೆಯಾದ ಅವನ ಮಾವನು ಅವನನ್ನು ಇರಿಸಿಕೊಂಡದ್ದರಿಂದ ಅವನು ಮೂರು ದಿನ ಅವನ ಸಂಗಡ ಇದ್ದನು. ಅವರು ತಿಂದು ಕುಡಿದು ಅಲ್ಲಿ ಇಳುಕೊಂಡಿದ್ದರು.
4 Retido pelo sogro, pai da jovem, ficou o levita com ele durante três dias; comeram, beberam e passaram a noite.
5 ಆದರೆ ನಾಲ್ಕನೇ ದಿನ ಉದಯದಲ್ಲಿ ಅವರು ಎದ್ದ ತರುವಾಯ ಅವನು ಹೋಗುವದಕ್ಕೆ ಎದ್ದಾಗ ಆ ಸ್ತ್ರೀಯ ತಂದೆ ತನ್ನ ಅಳಿಯನಿಗೆ--ನೀನು ಸ್ವಲ್ಪ ರೊಟ್ಟಿ ಯಿಂದ ನಿನ್ನ ಹೃದಯವನ್ನು ಆದರಿಸಿಕೋ; ತರುವಾಯ ನೀವು ಹೋಗಬಹುದು ಅಂದನು.
5 Na manhã do quarto dia, quando se levantaram e se dispunham a partir, o pai da jovem disse ao genro: Restaura primeiro as tuas forças com um pouco de pão, e depois disto partireis.
6 ಅವರಿಬ್ಬರು ಕುಳಿತು ಕೂಡಿ ತಿಂದು ಕುಡಿದರು. ಆ ಸ್ತ್ರೀಯ ತಂದೆ ಆ ಮನುಷ್ಯನಿಗೆ--ನೀನು ದಯಮಾಡಿ ನಿನ್ನ ಹೃದಯ ವನ್ನು ಸಂತೋಷಪಡಿಸುವದಕ್ಕೆ ಈ ರಾತ್ರಿ ಇರು ಅಂದನು.
6 Sentaram-se ambos, comeram e beberam. em seguida o pai da jovem disse ao genro: Peço-te que passes aqui ainda esta noite, e alegre-se o teu coração.
7 ಹೋಗುವದಕ್ಕೆ ಆ ಮನುಷ್ಯನು ಎದ್ದಾಗ ಅವನ ಮಾವನು ಅವನನ್ನು ಬಲವಂತ ಮಾಡಿದ್ದರಿಂದ ಅವನು ಆ ರಾತ್ರಿ ಅಲ್ಲಿದ್ದನು.
7 A instâncias do sogro, o homem que já se tinha levantado para partir, tornou a recostar-se e passou ali ainda aquela noite.
8 ಐದನೇ ದಿನ ಉದಯ ದಲ್ಲಿ ಅವನು ಹೋಗುವದಕ್ಕೆ ಎದ್ದಾಗ ಆ ಸ್ತ್ರೀಯ ತಂದೆ--ನೀನು ದಯಮಾಡಿ ನಿನ್ನ ಹೃದಯವನ್ನು ಆದರಿಸಿಕೋ ಅಂದನು. ಹಾಗೆಯೇ ಅವನು ಇಳಿ ಹೊತ್ತಿನ ವರೆಗೆ ಆಲಸ್ಯವಾಗಿದ್ದು ಇಬ್ಬರೂ ತಿಂದರು.
8 Chegada a manhã, preparando-se ele para se pôr a caminho, disse-lhe o pai da jovem: Peço-te que restaures as tuas forças. Deixai a vossa partida para o declinar do dia. E comeram ambos juntos.
9 ಅವನೂ ಅವನ ಉಪಪತ್ನಿಯೂ ಅವನ ಊಳಿಗದ ವನೂ ಹೋಗುವದಕ್ಕೆ ಎದ್ದಾಗ ಹೆಂಗಸಿನ ತಂದೆ ಯಾದ ಅವನ ಮಾವನು ಅವನಿಗೆ--ಇಗೋ, ಹೊತ್ತು ಹೋಗಿ ಸಂಜೆಯಾಯಿತು; ಈ ರಾತ್ರಿ ನೀನು ದಯ ಮಾಡಿ ಇಲ್ಲಿ ಇರು; ಹೊತ್ತು ಮುಣುಗುತ್ತಾ ಬಂತು; ನಿನ್ನ ಹೃದಯವನ್ನು ಸಂತೋಷಪಡಿಸುವ ಹಾಗೆ ಈ ರಾತ್ರಿ ಇಲ್ಲಿದ್ದು ನಿನ್ನ ಗುಡಾರಕ್ಕೆ ಹೋಗುವ ಹಾಗೆ ನಾಳೆ ಬೆಳಿಗ್ಗೆ ಎದ್ದು ನಿಮ್ಮ ಮಾರ್ಗ ಹಿಡಿದು ಹೋಗ ಬಹುದು ಅಂದನು.
9 Levantou-ser então o homem e dispunha-se a partir com a sua concubina e o seu servo. O sogro, porém, pai da jovem, disse-lhe de novo: Olha que o dia declina e a noite se aproxima. Passai a noite aqui. Sim, o dia se vai acabando, passa aqui a noite tranqüilamente. Amanhã vos levantareis cedo e partireis, a fim de voltardes para a vossa casa.
10 ಆದರೆ ಆ ಮನುಷ್ಯನು ಆ ರಾತ್ರಿ ಅಲ್ಲಿರುವದಕ್ಕೆ ಮನಸ್ಸಿಲ್ಲದೆ ಎದ್ದು ತಡಿ ಕಟ್ಟಿದ ಎರಡು ಕತ್ತೆಗಳ ಸಂಗಡಲೂ ತನ್ನ ಉಪಪತ್ನಿಯ ಸಂಗಡಲೂ ಹೊರಟುಹೋಗಿ ಯೆರೂಸಲೇಮೆಂಬ ಯೆಬೂಸಿಗೆ ಸರಿಯಾಗಿ ಬಂದನು.
10 O levita, porém, não consentiu. Partiu e chegou a Jebus, que é Jerusalém, com a sua concubina e seus dois jumentos selados.
11 ಅವರು ಯೆಬೂ ಸಿಗೆ ಸವಿಾಪಿಸಿದಾಗ ಹೊತ್ತು ಬಹಳ ಹೋಗಿತ್ತು; ಆಗ ಊಳಿಗದವನು ತನ್ನ ಯಾಜಮಾನನಿಗೆ--ನೀನು ದಯಮಾಡಿ ಬಾ; ಈ ಯೆಬೂಸ್ಯರ ಪಟ್ಟಣಕ್ಕೆ ತಿರುಗಿ ಕೊಂಡು ಅದರಲ್ಲಿ ಇಳುಕೊಳ್ಳೋಣ ಅಂದನು.
11 Quando chegaram, o dia ia declinando, e o criado disse a seu amo: Vem tomemos o caminho da cidade dos jebuseus para ali passarmos a noite.
12 ಆದರೆ ಅವನ ಯಜಮಾನನು ಅವನಿಗೆ--ನಾವು ಇಲ್ಲಿ ಇಸ್ರಾಯೇಲ್ ಮಕ್ಕಳಲ್ಲದ ಅನ್ಯರ ಪಟ್ಟಣದಲ್ಲಿ ಇಳಿಯದೆ ಗಿಬೆಯದ ಮಟ್ಟಿಗೂ ಹಾದು ಹೋಗೋಣ ಅಂದನು.
12 Não, respondeu-lhe o amo, não entraremos numa cidade estrangeira, onde não há israelitas. Iremos até Gabaa.
13 ಅವನು ಊಳಿಗದವನಿಗೆ--ಗಿಬೆಯದಲ್ಲಾದರೂ ರಾಮದಲ್ಲಾದರೂ ಇಳುಕೊಳ್ಳುವದಕ್ಕೆ ಆ ಸ್ಥಳಗಳಲ್ಲಿ ಒಂದಕ್ಕೆ ಸೇರೋಣ ಬಾ ಅಂದನು.
13 Vamos, ajuntou ele, procuremos atingir um desses lugares, e nos alojaremos em Gabaa ou em Rama.
14 ಹಾಗೆಯೇ ಅವರು ದಾಟಿಹೋದರು. ಅವರು ಬೆನ್ಯಾವಿಾನನಿಗೆ ಸೇರಿದ ಗಿಬೆಯ ಬಳಿಗೆ ಬರುವಾಗ ಸೂರ್ಯ ಮುಳು ಗಿತು.
14 Prosseguiram, pois, o seu caminho, e o sol se punha, quando se encontravam perto de Gabaa de Benjamim.
15 ಆದದರಿಂದ ಅವರು ಗಿಬೆಯದಲ್ಲಿ ಇಳಿಯು ವದಕ್ಕೆ ಪ್ರವೇಶಿಸುವ ಹಾಗೆ ಅಲ್ಲಿಗೆ ತಿರುಗಿಕೊಂಡರು. ಅವನು ಪ್ರವೇಶಿಸಿದಾಗ ಮನೆಯಲ್ಲಿ ಇಳುಕೊಳ್ಳು ವದಕ್ಕೆ ಅವರನ್ನು ಯಾರೂ ಸೇರಿಸಿಕೊಳ್ಳದ್ದರಿಂದ ಅವನು ಆ ಪಟ್ಟಣದ ಬೀದಿಯಲ್ಲಿ ಕುಳಿತಿದ್ದನು.
15 Dirigiram-se para lá, a fim de passarem a noite. Tendo entrado na cidade, parou o levita na praça, e ninguém lhe ofereceu hospitalidade.
16 ಆಗ ಇಗೋ, ಒಬ್ಬ ಮುದುಕನು ತನ್ನ ಹೊಲದ ಕೆಲಸದಿಂದ ಸಂಜೆಯಲ್ಲಿ ಬಂದನು. ಆ ಮನುಷ್ಯನು ಎಫ್ರಾಯಾಮ್ ಬೆಟ್ಟದವನಾಗಿಯೂ ಗಿಬೆಯದಲ್ಲಿ ಪ್ರವಾಸಿಯಾಗಿಯೂ ಇದ್ದನು. ಆದರೆ ಅಲ್ಲಿರುವ ಜನರು ಬೆನ್ಯಾವಿಾನ್ಯರಾಗಿದ್ದರು.
16 Nisto apareceu um homem idoso que voltava do seu trabalho no campo, ao anoitecer. Era também da montanha de Efraim e habitava como forasteiro em Gabaa, cujos habitantes eram benjaminitas.
17 ಆ ಮುದುಕನು ತನ್ನ ಕಣ್ಣುಗಳನ್ನೆತ್ತಿ ಆ ಪಟ್ಟಣದ ಬೀದಿಯಲ್ಲಿ ಕುಳಿ ತಿದ್ದ ಮಾರ್ಗದವನನ್ನು ನೋಡಿ--ನೀನು ಎಲ್ಲಿಗೆ ಹೋಗುತ್ತೀ? ಎಲ್ಲಿಂದ ಬಂದೆ ಅಂದನು.
17 O velho, levantando os olhos, viu o levita na praça da cidade: Aonde vais?, disse-lhe ele, e de onde vens?
18 ಅವನು ಇವನಿಗೆ--ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯಾಮ್ ಬೆಟ್ಟದ ಪಾರ್ಶ್ವಕ್ಕೆ ಹಾದು ಹೋಗು ತ್ತೇವೆ. ನಾನು ಅಲ್ಲಿಯವನು; ಈಗ ಕರ್ತನ ಮನೆಗೆ ಹೋಗುತ್ತೇನೆ; ಆದರೆ ನನ್ನನ್ನು ಯಾರೂ ಮನೆಗೆ ಸೇರಿಸಿಕೊಳ್ಳಲಿಲ್ಲ.
18 Nós partimos, respondeu o levita, de Belém de Judá e vamos até ao fundo da montanha de Efraim, onde nasci. Acabo de deixar Belém de Judá para voltar à minha casa, mas ninguém me quer acolher,
19 ಆದರೂ ನಮ್ಮ ಕತ್ತೆಗಳಿಗೆ ಮೇವೂ ನನಗೂ ನಿನ್ನ ದಾಸಿಗೂ ನಿನ್ನ ಸೇವಕರ ಸಂಗಡ ಇರುವ ಯೌವನಸ್ಥನಿಗೂ ರೊಟ್ಟಿ ಮತ್ತು ದ್ರಾಕ್ಷಾರಸವು ಉಂಟು; ಏನೂ ಕೊರತೆ ಇಲ್ಲ ಅಂದನು.
19 embora tenhamos palha e feno para os nossos jumentos, pão e vinho para mim, tua serva e o jovem, teu servo; nada nos falta.
20 ಆಗ ಆ ಮುದುಕನು ನಿನಗೆ ಸಮಾಧಾನವಾಗಲಿ, ನಿನ್ನ ಕೊರತೆಯೆಲ್ಲಾ ನನ್ನ ಮೇಲೆ ಇರಲಿ; ಹೇಗಾ ದರೂ ಬೀದಿಯೊಳಗೆ ಇಳುಕೊಳ್ಳಬೇಡವೆಂದು ಹೇಳಿ
20 O velho respondeu: A paz seja contigo. Dar-te-ei tudo o que for necessário; somente não passarás a noite na praça.
21 ಅವನನ್ನು ತನ್ನ ಮನೆಗೆ ಕರಕೊಂಡು ಹೋಗಿ ಕತ್ತೆಗಳಿಗೆ ಮೇವು ಹಾಕಿದನು. ಅವರು ತಮ್ಮ ಕಾಲು ಗಳನ್ನು ತೊಳೆದು ತಿಂದು ಕುಡಿದರು.
21 Fê-lo entrar em sua casa, e deu de comer aos jumentos. Os viajantes lavaram os pés, e foi-lhes servida a refeição.
22 ಅವರು ತಮ್ಮ ಹೃದಯವನ್ನು ಸಂತೋಷ ಪಡಿಸಿ ಕೊಳ್ಳುತ್ತಿರುವ ವೇಳೆಯಲ್ಲಿ ಇಗೋ, ಆ ಪಟ್ಟಣದ ಮನುಷ್ಯರಲ್ಲಿ ಬೆಲಿಯಾಳನ ಕೆಲವು ಕುಮಾರರು ಆ ಮನೆಯನ್ನು ಸುತ್ತಿಕೊಂಡು ಕದವನ್ನು ಬಡಿದು ಆ ಮನೆಯ ಯಜಮಾನನಾದ ಮುದುಕನಿಗೆ--ನಿನ್ನ ಮನೆಯಲ್ಲಿ ಬಂದ ಆ ಮನುಷ್ಯನನ್ನು ನಾವು ತಿಳು ಕೊಳ್ಳುವ ಹಾಗೆ, ಅವನನ್ನು ಹೊರಗೆ ತಾ ಎಂದು ಹೇಳಿದರು.
22 Enquanto restauravam as forças, vieram os habitantes da cidade, gente péssima, e, cercando a casa do velho, bateram violentamente à porta: Faze sair, gritaram eles ao velho, dono da casa, faze sair o homem que entrou em tua casa para que nós o conheçamos!
23 ಆಗ ಮನೆಯ ಯಜಮಾನನಾದ ಆ ಮನುಷ್ಯನು ಅವರ ಬಳಿಗೆ ಹೊರಟುಹೋಗಿ ಅವರಿಗೆ--ಹಾಗೆ ಮಾಡಬೇಡಿರಿ; ನನ್ನ ಸಹೋದರರೇ, ದಯಮಾಡಿ ಕೆಟ್ಟತನಮಾಡಬೇಡಿರಿ; ಆ ಮನುಷ್ಯನು ನನ್ನ ಮನೆಯಲ್ಲಿ ಪ್ರವೇಶಿಸಿದ್ದರಿಂದ ನೀವು ಅಂಥಾಬುದ್ಧಿಹೀನತೆಯನ್ನು ಮಾಡಬೇಡಿರಿ.
23 O velho saiu e foi ter com eles, dizendo: Não queirais, irmãos, cometer semelhante maldade, pois esse homem é hóspede de minha casa. Não pratiqueis tal infâmia.
24 ಇಗೋ, ಕನ್ನಿಕೆ ಯಾದ ನನ್ನ ಮಗಳನ್ನೂ ಅವನ ಉಪಪತ್ನಿಯನ್ನೂ ಹೊರಗೆ ತರುವೆನು; ನೀವು ಅವರನ್ನು ಕುಂದಿಸಿ ನಿಮಗೆ ಸರಿಯಾಗಿ ತೋರುವ ಹಾಗೆ ಅವರಿಗೆ ಮಾಡಿರಿ. ಆದರೆ ಈ ಮನುಷ್ಯನಿಗೆ ಅಂಥಾ ಬುದ್ಧಿಹೀನವಾದ ಕಾರ್ಯವನ್ನು ಮಾಡಬೇಡಿರಿ ಅಂದನು.
24 Eis aqui a minha filha virgem, e a concubina desse homem. Eu vo-las trarei, e vós podereis violá-las e fazer delas o que quiserdes; somente vos peço que não cometais contra esse homem uma ação tão infame.
25 ಆದರೆ ಆ ಮನುಷ್ಯರು ಅವನ ಮಾತನ್ನು ಕೇಳಲೊಲ್ಲದೆ ಹೋದರು. ಆದದರಿಂದ ಆ ಮನುಷ್ಯನು ತನ್ನ ಉಪ ಪತ್ನಿಯನ್ನು ಹಿಡಿದು ಹೊರಗೆ ಅವರ ಬಳಿಯಲ್ಲಿ ತಂದು ಬಿಟ್ಟನು; ಅವರು ಅವಳನ್ನು ತಿಳುಕೊಂಡು ಉದಯ ಕಾಲದ ಪರ್ಯಂತರ ರಾತ್ರಿಯೆಲ್ಲಾ ಅವಳನ್ನು ಕೆಡಿಸಿ ಉದಯವಾಗುವಾಗ ಅವಳನ್ನು ಬಿಟ್ಟುಬಿಟ್ಟರು.
25 Eles, porém, não o quiseram ouvir. Então o levita, vendo isso, trouxe-lhes sua concubina; eles a conheceram e abusaram dela durante a noite até pela manhã, e despediram-na ao amanhecer.
26 ಆ ಸ್ತ್ರೀ ಉದಯ ಕಾಲಕ್ಕೆ ಮುಂಚೆ ಬಂದು ಬೆಳಕಾಗುವ ಮಟ್ಟಿಗೂ ಅಲ್ಲಿ ತನ್ನ ಯಜಮಾನನು ಇರುವ ಮನೆಯ ಬಾಗಿಲ ಬಳಿಯಲ್ಲಿ ಬಿದ್ದಿದ್ದಳು.
26 Ao romper do dia, veio a mulher e caiu à porta da casa onde estava, o marido e ali ficou até que o dia clareasse.
27 ಅವಳ ಯಜ ಮಾನನು ಉದಯದಲ್ಲಿ ಎದ್ದು ಮನೆಯ ಬಾಗಲನ್ನು ತೆರೆದು ತನ್ನ ಮಾರ್ಗವಾಗಿ ಹೊರಡುವಾಗ ಇಗೋ, ತನ್ನ ಉಪಪತ್ನಿ ಮನೆಯ ಬಾಗಿಲ ಮುಂದೆ ತನ್ನ ಕೈಗಳನ್ನು ಹೊಸ್ತಿಲ ಮೇಲೆ ಇಟ್ಟವಳಾಗಿ ಬಿದ್ದಿದ್ದಳು.
27 Chegada a manhã, levantou-se o marido e, ao abrir a porta para continuar o seu caminho, eis que sua concubina jazia diante da porta, com as mãos estendidas sobre a soleira.
28 ಆಗ ಅವನು ಅವಳಿಗೆ--ಏಳು, ಹೋಗೋಣ ಅಂದನು. ಆದರೆ ಪ್ರತ್ಯುತ್ತರವೇನೂ ಇಲ್ಲದೆ ಹೋಯಿತು. ಆಗ ಆ ಮನುಷ್ಯನು ಅವಳನ್ನು ಕತ್ತೆಯ ಮೇಲೆ ಹಾಕಿಕೊಂಡು ತನ್ನ ಸ್ಥಳಕ್ಕೆ ಹೋದನು.
28 Levanta-te, disse-lhe ele, vamo-nos. Mas a mulher não lhe respondeu... tomou-a então, pô-la sobre o jumento e tomou o caminho de volta para a sua casa.
29 ಅವನು ತನ್ನ ಮನೆಗೆ ಹೋದಾಗ ಒಂದು ಕತ್ತಿಯನ್ನು ತೆಗೆದುಕೊಂಡು ತನ್ನ ಉಪಪತ್ನಿಯನ್ನು ಹಿಡಿದು ಎಲುಬುಗಳ ಸಂಗಡ ಹನ್ನೆರಡು ತುಂಡು ಗಳಾಗಿ ಕಡಿದು ಅವುಗಳನ್ನು ಇಸ್ರಾಯೇಲಿನ ಮೇರೆ ಗಳಿಗೆಲ್ಲಾ ಕಳುಹಿಸಿದನು.
29 Chegando à sua casa, tomou um cutelo, dividiu o cadáver de sua concubina, membro por membro, em doze partes, e enviou-as por todo o território de Israel.
30 ಆಗ ಅದನ್ನು ನೋಡುವ ವರೆಲ್ಲಾ--ಇಸ್ರಾಯೇಲ್ ಮಕ್ಕಳು ಐಗುಪ್ತದಿಂದ ಬಂದ ದಿವಸ ಮೊದಲುಗೊಂಡು ಈ ಪರ್ಯಂತರ ಇಂಥಾ ಕಾರ್ಯವು ಆದದ್ದೂ ಇಲ್ಲ, ಕಾಣಲ್ಪಟ್ಟದ್ದೂ ಇಲ್ಲ. ಈ ಸಂಗತಿಯನ್ನು ಮನಸ್ಸಿಗೆ ತಂದು ವಿಚಾರಿಸತಕ್ಕದ್ದು ಅಂದುಕೊಂಡರು.
30 Todos os que testemunharam aquilo, disseram: Jamais se fez ou se viu tal coisa, desde que Israel subiu do Egito até este dia. Ponderai bem isto, deliberei e pronunciai-vos!
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Juízes 19, comparar traduções ou montar um estudo — tudo direto pelo WhatsApp.