Juízes 11
Kannada Bible (GL_KANNADA) vs NAA
NAA Nova Almeida Atualizada 2017
1 ಆದರೆ ಗಿಲ್ಯಾದ್ಯನಾದ ಯೆಫ್ತಾಹನು ಬಲಿಷ್ಠನಾದ ಪರಾಕ್ರಮಶಾಲಿಯಾಗಿ ದ್ದನು; ಅವನು ಸೂಳೆಯಲ್ಲಿ ಹುಟ್ಟಿದ ಗಿಲ್ಯಾದನ ಮಗನು.
1 Jefté, o gileadita, era homem valente, porém filho de uma prostituta. O pai dele se chamava Gileade.
2 ಇದಲ್ಲದೆ ಗಿಲ್ಯಾದನ ಹೆಂಡತಿ ಅವನಿಗೆ ಕುಮಾರರನ್ನು ಪಡೆದಳು. ಅವನ ಹೆಂಡತಿಯ ಮಕ್ಕಳು ದೊಡ್ಡವರಾದಾಗ ಅವರು ಯೆಫ್ತಾಹನಿಗೆ--ನೀನು ನಮ್ಮ ತಂದೆಯ ಮನೆಯ ಬಾಧ್ಯಸ್ಥನಲ್ಲ; ಯಾಕಂದರೆ ನೀನು ಪರಸ್ತ್ರೀಯ ಮಗನು ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
2 Gileade também teve filhos da sua esposa. Esses filhos cresceram e expulsaram Jefté, dizendo: — Você não herdará nada na casa de nosso pai, porque é filho de outra mulher.
3 ಆಗ ಯೆಫ್ತಾಹನು ತನ್ನ ಸಹೋದರರ ಬಳಿಯಿಂದ ಓಡಿಹೋಗಿ ಟೋಬ್ ದೇಶದಲ್ಲಿ ವಾಸವಾಗಿದ್ದನು; ಆ ಸ್ಥಳದ ನಿಷ್ಪ್ರಯೋಜಕ ಮನುಷ್ಯರು ಯೆಫ್ತಾಹನ ಬಳಿಗೆ ಕೂಡಿಕೊಂಡು ಅವನ ಸಂಗಡ ಹೊರಗೆ ಹೊರಡುತ್ತಿದ್ದರು.
3 Então Jefté fugiu da presença de seus irmãos e foi morar na terra de Tobe. Ali alguns homens sem valor se juntaram a ele e o seguiam.
4 ಕೆಲವು ದಿವಸಗಳಾದ ಮೇಲೆ ಆದದ್ದೇನಂದರೆ, ಅಮ್ಮೋನನ ಮಕ್ಕಳು ಇಸ್ರಾಯೇಲಿನ ಮೇಲೆ ಯುದ್ಧ ಮಾಡಿದರು.
4 Passado algum tempo, os filhos de Amom entraram em guerra contra Israel.
5 ಹೀಗೆ ಅವರು ಇಸ್ರಾಯೇಲಿನ ಮೇಲೆ ಯುದ್ಧಮಾಡುವಾಗ ಗಿಲ್ಯಾದಿನ ಹಿರಿಯರು ಯೆಫ್ತಾಹ ನನ್ನು ಟೋಬ್ ದೇಶದಿಂದ ಕರಕೊಂಡು ಬರಲು ಹೋಗಿ
5 Quando os filhos de Amom atacaram, os anciãos de Gileade foram buscar Jefté na terra de Tobe.
6 ಯೆಫ್ತಾಹನಿಗೆ--ನಾವು ಅಮ್ಮೋನನ ಮಕ್ಕಳ ಸಂಗಡ ಯುದ್ಧಮಾಡುವಂತೆ ನೀನು ಬಂದು ನಮ್ಮ ಸೈನ್ಯಾಧಿಪತಿಯಾಗಿರು ಅಂದರು.
6 E disseram a Jefté: — Venha ser o nosso chefe, para podermos lutar contra os filhos de Amom.
7 ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ--ನನ್ನನ್ನು ಹಗೆಮಾಡಿ ನನ್ನ ತಂದೆಯ ಮನೆಯಿಂದ ಹೊರಡಿಸಿದವರು ನೀವ ಲ್ಲವೋ? ಈಗ ನಿಮಗೆ ಇಕ್ಕಟ್ಟು ಬಂದಿರುವಾಗ ನನ್ನ ಬಳಿಗೆ ಯಾಕೆ ಬಂದಿರಿ ಅಂದನು.
7 Porém Jefté disse aos anciãos de Gileade: — Vocês não são aqueles que me odiaram e me expulsaram da casa de meu pai? Por que vêm a mim agora, quando estão em aperto?
8 ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ--ನೀನು ನಮ್ಮೊಂದಿಗೆ ಬಂದು ಅಮ್ಮೋನನ ಮಕ್ಕಳಿಗೆ ವಿರೋಧವಾಗಿ ಯುದ್ಧಮಾಡಿ ಗಿಲ್ಯಾದಿನ ನಿವಾಸಿಗಳಾದ ನಮ್ಮೆಲ್ಲರಿಗೆ ನೀನು ತಲೆಯಾಗಿರುವ ಹಾಗೆ ಈಗ ನಿನ್ನ ಬಳಿಗೆ ತಿರಿಗಿ ಬಂದೆವು ಅಂದರು.
8 Os anciãos de Gileade responderam a Jefté: — É por isso que agora estamos voltando a você. Venha conosco e lute contra os filhos de Amom. Seja o nosso chefe sobre todos os moradores de Gileade.
9 ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ ಅಮ್ಮೋನನ ಮಕ್ಕಳಿಗೆ ವಿರೋ ಧವಾಗಿ ಯುದ್ಧಮಾಡುವದಕ್ಕೆ ನೀವು ತಿರಿಗಿ ನನ್ನನ್ನು ಮನೆಗೆ ಕರತಂದರೆ ಮತ್ತು ಕರ್ತನು ಅವರನ್ನು ನನ್ನ ಮುಂದೆ ಒಪ್ಪಿಸಿಕೊಟ್ಟರೆ ನಾನು ನಿಮಗೆ ನಾಯಕ ನಾಗಿರುವೆನೋ ಅನ್ನಲು
9 Então Jefté perguntou aos anciãos de Gileade: — Se vocês me fizerem voltar para combater os filhos de Amom, e o
10 ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ--ನಾವು ಈ ನಿನ್ನ ಮಾತಿನ ಹಾಗೆಯೇ ಮಾಡದೆ ಹೋದರೆ ಕರ್ತನು ನಮ್ಮ ಮತ್ತು ನಿನ್ನ ಮಧ್ಯದಲ್ಲಿ ಸಾಕ್ಷಿಯಾಗಿರಲಿ ಅಂದರು.
10 Os anciãos de Gileade responderam: — O
11 ಆಗ ಯೆಫ್ತಾ ಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು. ಆಗ ಜನರು ಅವನನ್ನು ತಮ್ಮ ಮೇಲೆ ನಾಯಕನ ನ್ನಾಗಿಯೂ ಅಧಿಪತಿಯನ್ನಾಗಿಯೂ ಇಟ್ಟುಕೊಂಡರು. ಯೆಫ್ತಾಹನು ತನ್ನ ಮಾತುಗಳನ್ನೆಲ್ಲಾ ಮಿಚ್ಪೆಯಲ್ಲಿ ಕರ್ತನ ಮುಂದೆ ಹೇಳಿದನು.
11 Então Jefté foi com os anciãos de Gileade, e o povo o pôs por cabeça e chefe sobre si. E Jefté proferiu todas as suas palavras diante do Senhor , em Mispa.
12 ಅವನು ಅಮ್ಮೋನನ ಮಕ್ಕಳ ಅರಸನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ--ನೀನು ನನಗೆ ವಿರೋಧವಾಗಿ ನನ್ನ ಸಂಗಡ ಯುದ್ಧಮಾಡುವದಕ್ಕೆ ನನ್ನ ದೇಶದಲ್ಲಿ ಬರುವ ಕಾರಣವೇನು.
12 Jefté enviou mensageiros ao rei dos filhos de Amom, dizendo: — O que você tem contra mim, para vir e atacar a minha terra?
13 ಅಮ್ಮೋ ನನ ಮಕ್ಕಳ ಅರಸನು ಯೆಫ್ತಾಹನ ದೂತರಿಗೆ--ಇಸ್ರಾಯೇಲು ಐಗುಪ್ತದಿಂದ ಬರುವಾಗ ಅರ್ನೋನಿ ನಿಂದ ಯಬ್ಬೋಕಿನ ವರೆಗೂ ಮತ್ತು ಯೊರ್ದನಿನ ವರೆಗೂ ಇರುವ ನನ್ನ ದೇಶವನ್ನು ತಕ್ಕೊಂಡರು. ಆದದರಿಂದ ಈಗ ಅದನ್ನು ನನಗೆ ಸಮಾಧಾನವಾಗಿ ತಿರಿಗಿಕೊಡು ಅಂದನು.
13 O rei dos filhos de Amom respondeu aos mensageiros de Jefté: — É porque, quando Israel saiu do Egito, tomou a minha terra desde o Arnom até o Jaboque e até o Jordão. Devolva-me agora essa terra, pacificamente.
14 ಯೆಫ್ತಾಹನು ತಿರಿಗಿ ಅಮ್ಮೋನನ ಮಕ್ಕಳ ಅರಸನ ಬಳಿಗೆ ದೂತರನ್ನು ಕಳುಹಿಸಿ
14 Porém Jefté tornou a enviar mensageiros ao rei dos filhos de Amom,
15 ಅವರಿಗೆ--ಯೆಫ್ತಾಹನು ಹೇಳುವ ಮಾತು ಇದೇ--ಇಸ್ರಾಯೇಲ್ ಮೋವಾಬಿನ ದೇಶವನ್ನಾ ದರೂ ಅಮ್ಮೋನನ ಮಕ್ಕಳ ದೇಶವನ್ನಾದರೂ ತಕ್ಕೊಂಡ ದ್ದಿಲ್ಲ.
15 dizendo: — Assim diz Jefté: “Israel não tomou nem a terra dos moabitas nem a terra dos filhos de Amom.
16 ಆದರೆ ಇಸ್ರಾಯೇಲು ಐಗುಪ್ತದಿಂದ ಬರು ವಾಗ ಅರಣ್ಯದಲ್ಲಿ ಕೆಂಪು ಸಮುದ್ರದ ವರೆಗೆ ನಡೆದು ಕಾದೇಶಿಗೆ ಬಂದು
16 Porque, quando Israel saiu do Egito, andou pelo deserto até o mar Vermelho e chegou a Cades.
17 ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ--ನಾನು ನಿನ್ನ ದೇಶವನ್ನು ಹಾದು ಹೋಗಲು ಅಪ್ಪಣೆಆಗಬೇಕು ಎಂದು ಹೇಳಿದರು. ಆದರೆ ಎದೋಮಿನ ಅರಸನು ಕೇಳದೆ ಹೋದನು. ಅವರು ಮೋವಾಬಿನ ಅರಸನ ಬಳಿಗೂ ಹಾಗೆಯೇ ಕಳುಹಿಸಿದರು; ಅವನೂ ಒಪ್ಪದೆ ಹೋದನು. ಆದದ ರಿಂದ ಇಸ್ರಾಯೇಲ್ಯರು ಕಾದೇಶಿನಲ್ಲಿ ವಾಸಮಾಡಿದರು.
17 Então Israel enviou mensageiros ao rei dos edomitas, dizendo: ‘Peço que você me deixe passar pela sua terra.’ Porém o rei dos edomitas não lhe deu ouvidos. Israel mandou pedir a mesma coisa ao rei dos moabitas, mas ele também não quis atender. E, assim, Israel ficou em Cades.
18 ಅರಣ್ಯದಲ್ಲಿ ನಡೆದು ಎದೋಮ್ ದೇಶವನ್ನೂ ಮೋವಾಬ್ ದೇಶವನ್ನೂ ಸುತ್ತಿಕೊಂಡು ಹೋಗಿ ಮೋವಾಬ್ ದೇಶದ ಪೂರ್ವ ದಿಕ್ಕಿಗೆ ಬಂದು ಮೋವಾಬಿನ ಮೇರೆಯೊಳಗೆ ಪ್ರವೇಶಿಸದೆ ಮೋವಾ ಬಿನ ಮೇರೆಯಾದ ಅರ್ನೋನಿನ ಆಚೆಯಲ್ಲಿ ಇಳು ಕೊಂಡರು.
18 Depois, andou pelo deserto, e rodeou a terra dos edomitas e a terra dos moabitas, e chegou a leste da terra destes, e acampou do outro lado do Arnom. Não entrou no território dos moabitas, porque o Arnom é a fronteira deles.
19 ಇಸ್ರಾಯೇಲು ಹೆಷ್ಬೋನಿನ ಅರಸನಾ ದಂಥ ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿದನು. ಅವರು--ನನ್ನ ಸ್ಥಳಕ್ಕೆ ನಿನ್ನ ದೇಶವನ್ನು ನಾವು ದಾಟಿಹೋಗುವದಕ್ಕೆ ಅಪ್ಪಣೆಕೊಡಬೇಕು ಅಂದರು.
19 Então Israel enviou mensageiros a Seom, rei dos amorreus, rei de Hesbom. Israel lhe disse: ‘Por favor, deixe-nos passar pela sua terra até o nosso destino.’
20 ಆದರೆ ಸೀಹೋ ನನು ತನ್ನ ಮೇರೆಯನ್ನು ದಾಟುವದಕ್ಕೆ ಇಸ್ರಾಯೇಲನ್ನು ನಂಬದೆ ತನ್ನ ಜನವನ್ನೆಲ್ಲಾ ಕೂಡಿಸಿ ಯಹಚಿನಲ್ಲಿ ದಂಡಿಳಿದು ಇಸ್ರಾಯೇಲಿಗೆ ವಿರೋಧವಾಗಿ ಯುದ್ಧ ಮಾಡಿದನು.
20 Porém Seom, não confiando em Israel, recusou deixá-lo passar pelo seu território; pelo contrário, reuniu todo o seu povo, acampou em Jaza, e lutou contra Israel.
21 ಆಗ ಇಸ್ರಾಯೇಲಿನ ದೇವರಾದ ಕರ್ತನು ಸೀಹೋನನನ್ನೂ ಅವನ ಸಕಲ ಜನರನ್ನೂ ಇಸ್ರಾಯೇಲಿನ ಕೈಯಲ್ಲಿ ಒಪ್ಪಿಸಿಕೊಟ್ಟನು. ಇವರು ಅವರನ್ನು ಹೊಡೆದುಬಿಟ್ಟರು. ಹಾಗೆಯೇ ಇಸ್ರಾಯೇ ಲ್ಯರು ಆ ದೇಶದಲ್ಲಿ ವಾಸಿಸಿದ್ದ ಅಮೋರಿಯರ ದೇಶ ವನ್ನೆಲ್ಲಾ ಸ್ವಾಧೀನಮಾಡಿಕೊಂಡರು.
21 O Senhor , Deus de Israel, entregou Seom e todo o seu povo nas mãos de Israel, que os derrotou. E Israel tomou posse das terras dos amorreus, que moravam naquele lugar.
22 ಅರ್ನೋನಿ ನಿಂದ ಯಬ್ಬೋಕಿನ ವರೆಗೂ ಅರಣ್ಯದಿಂದ ಯೊರ್ದ ನಿನ ವರೆಗೂ ಇರುವ ಅಮೋರಿಯರ ಮೇರೆಗಳನ್ನೆಲ್ಲಾ ಅವರು ಸ್ವಾಧೀನಮಾಡಿಕೊಂಡರು.
22 Os israelitas tomaram posse de todo o território dos amorreus, desde o Arnom até o Jaboque e desde o deserto até o Jordão.
23 ಈಗ ಇಸ್ರಾ ಯೇಲಿನ ದೇವರಾದ ಕರ್ತನು ಅಮೋರಿಯರನ್ನು ತನ್ನ ಜನವಾದ ಇಸ್ರಾಯೇಲಿನ ಮುಂದೆ ಹೊರಡಿಸಿ ರುವಾಗ ನೀನು ಆ ದೇಶವನ್ನು ಸ್ವಾಧೀನಮಾಡಿಕೊಳ್ಳು ವಿಯೋ?
23 Assim, o Senhor , Deus de Israel, expulsou os amorreus de diante do seu povo de Israel. E você pretende ser dono desta terra?
24 ನಿನ್ನ ದೇವರಾದ ಕೆಮೋಷನು ಸ್ವತಂತ್ರಿ ಸಿಕೊಳ್ಳಲು ನಿನಗೆ ಕೊಡುವ ದೇಶವನ್ನು ನೀನು ಸ್ವತಂತ್ರಿಸಿಕೊಳ್ಳುವದಿಲ್ಲವೋ? ಹಾಗೆಯೇ ನಮ್ಮ ದೇವರಾದ ಕರ್ತನು ಯಾರನ್ನು ನಮ್ಮ ಮುಂದೆ ಹೊರಡಿಸುವನೋ ಅವರನ್ನು ನಾವು ಸ್ವಾಧೀನಮಾಡಿ ಕೊಳ್ಳುವೆವು.
24 Não é fato que você considera como sua propriedade aquilo que Quemos, seu deus, lhe dá? Assim nós possuiremos o território de todos os que o Senhor , nosso Deus, expulsou de diante de nós.
25 ಈಗ ಚಿಪ್ಪೋರನ ಮಗನೂ ಮೋವಾ ಬಿನ ಅರಸನೂ ಆದ ಬಾಲಾಕನಿಗಿಂತ ಯಾವದ ರಲ್ಲಾದರೂ ನೀನು ಉತ್ತಮನೋ? ಅವನು ಇಸ್ರಾಯೇಲಿನ ವಿರೋಧವಾಗಿ ಯಾವಾಗಲಾದರೂ ವಿವಾದ ಮಾಡಿದನೋ? ಯಾವಾಗಲಾದರೂ ಅವರಿಗೆ ವಿರೋಧವಾಗಿ ಯುದ್ಧಮಾಡಿದನೋ?
25 Você pensa que é melhor do que Balaque, filho de Zipor, rei dos moabitas? Será que alguma vez ele entrou em conflito com Israel ou lutou contra ele?
26 ಇಸ್ರಾಯೇಲು ಹೆಷ್ಬೋನಿನಲ್ಲಿಯೂ ಅದರ ಗ್ರಾಮ ಗಳಲ್ಲಿಯೂ ಅರೋಯೇರಿನಲ್ಲಿಯೂ ಅದರ ಗ್ರಾಮ ಗಳಲ್ಲಿಯೂ ಅರ್ನೋನಿನ ತೀರವಾದ ಎಲ್ಲಾ ಪಟ್ಟಣ ಗಳಲ್ಲಿಯೂ ಮುನ್ನೂರು ವರುಷಗಳಿಂದ ವಾಸಿಸಿರು ವಾಗ ಇಷ್ಟರ ವರೆಗೆ ನೀವು ಅದನ್ನು ಬಿಡಿಸದೆ ಹೋದದ್ದೇನು?
26 Enquanto Israel morou durante trezentos anos em Hesbom e nas suas vilas, e em Aroer e nas suas vilas, e em todas as cidades que ficam às margens do Arnom, por que vocês, amonitas, não as recuperaram durante esse tempo?
27 ಆದದರಿಂದ ನಾನು ನಿನಗೆ ವಿರೋಧವಾಗಿ ಪಾಪಮಾಡಲಿಲ್ಲ. ನೀನೇ ನನ್ನ ಮೇಲೆ ಯುದ್ಧಮಾಡುವದರಿಂದ ನನಗೆ ಕೆಟ್ಟದ್ದನ್ನು ಮಾಡುತ್ತೀ. ನ್ಯಾಯಾಧಿಪತಿಯಾದ ಕರ್ತನು ಈಹೊತ್ತು ಇಸ್ರಾ ಯೇಲ್ ಮಕ್ಕಳಿಗೂ ಅಮ್ಮೋನನ ಮಕ್ಕಳಿಗೂ ಮಧ್ಯ ದಲ್ಲಿ ನ್ಯಾಯತೀರಿಸಲಿ.
27 Portanto, não sou eu quem pecou contra você! Porém você faz mal em lutar contra mim. O Senhor , que é juiz, julgue hoje entre os filhos de Israel e os filhos de Amom.”
28 ಹೀಗಿದ್ದರೂ ಯೆಪ್ತಾಹನು ಹೇಳಿ ಕಳುಹಿಸಿದ ಮಾತನ್ನು ಅಮ್ಮೋನನ ಅರಸನು ಕೇಳದೆ ಹೋದನು.
28 Porém o rei dos filhos de Amom não deu ouvidos à mensagem que Jefté lhe havia mandado.
29 ಆಗ ಕರ್ತನ ಆತ್ಮವು ಯೆಪ್ತಾಹನ ಮೇಲೆ ಬಂತು. ಅವನು ಗಿಲ್ಯಾದ್ ಮನಸ್ಸೆಯ ಸೀಮೆಗಳನ್ನು ದಾಟಿ ಹೋಗಿ ಗಿಲ್ಯಾದಿನಲ್ಲಿರುವ ಮಿಚ್ಪೆಗೆ ಬಂದು ಅಲ್ಲಿಂದ ಅಮ್ಮೋನನ ಮಕ್ಕಳೆದುರಿಗೆ ಹಾದುಹೋದನು.
29 Então o Espírito do Senhor veio sobre Jefté. Ele atravessou Gileade e Manassés e, passando por Mispa de Gileade, foi até os filhos de Amom.
30 ಯೆಪ್ತಾಹನು ಕರ್ತನಿಗೆ ಒಂದು ಪ್ರಮಾಣವನ್ನು ಮಾಡಿ--ನೀನು ಅಮ್ಮೋನನ ಮಕ್ಕಳನ್ನು ನನ್ನ ಕೈಯಲ್ಲಿ ತಪ್ಪದೆ ಒಪ್ಪಿಸಿಕೊಟ್ಟರೆ
30 Jefté fez um voto ao Senhor , dizendo: — Se, de fato, entregares os filhos de Amom nas minhas mãos,
31 ನಾನು ಅಮ್ಮೋನನ ಮಕ್ಕಳ ಬಳಿಯಿಂದ ಸಮಾಧಾನದಲ್ಲಿ ತಿರಿಗಿ ಬರುವಾಗ ನನ್ನ ಮನೆಯ ಬಾಗಲಿಂದ ನನ್ನನ್ನು ಎದುರುಗೊಳ್ಳಲು ಬರುವಂಥದ್ದು ನಿಜವಾಗಿ ಕರ್ತನದಾಗಿರುವದು. ಅದನ್ನು ದಹನಬಲಿಯಾಗಿ ಅರ್ಪಿಸುವೆನು ಅಂದನು.
31 quem primeiro sair da porta da minha casa para se encontrar comigo, quando eu voltar vitorioso sobre os filhos de Amom, esse será do Senhor , e eu o oferecerei em holocausto.
32 ಹೀಗೆ ಯೆಪ್ತಾಹನು ಅಮ್ಮೋನನ ಮಕ್ಕಳ ಮೇಲೆ ಯುದ್ಧಮಾಡುವದಕ್ಕೆ ಅವರೆದುರಿಗೆ ಹೊರಟು ಹೋದನು. ಕರ್ತನು ಅವರನ್ನು ಅವನ ಕೈಯಲ್ಲಿ ಒಪ್ಪಿಸಿಕೊಟ್ಟನು.
32 Assim, Jefté foi de encontro aos filhos de Amom, para lutar contra eles, e o Senhor os entregou nas mãos de Jefté.
33 ಅವನು ಅವರನ್ನು ಅರೋಯೇರಿ ನಿಂದ ನೀನು ಮಿನ್ನೀತಿಗೆ ಹೋಗುವ ವರೆಗೆ ಇರುವ ಇಪ್ಪತ್ತು ಪಟ್ಟಣಗಳನ್ನು ದ್ರಾಕ್ಷೇ ತೋಟದ ಬೈಲಿನ ವರೆಗೂ ಮಹಾದೊಡ್ಡ ಸಂಹಾರದಿಂದ ಹೊಡೆದನು. ಹೀಗೆ ಅಮ್ಮೋನನ ಮಕ್ಕಳು ಇಸ್ರಾಯೇಲ್ ಮಕ್ಕಳ ಮುಂದೆ ತಗ್ಗಿಸಲ್ಪಟ್ಟರು.
33 Ele os derrotou desde Aroer até as proximidades de Minite — vinte cidades ao todo — e até Abel-Queramim. Foi uma grande derrota para os filhos de Amom, que, assim, foram subjugados pelos filhos de Israel.
34 ಯೆಪ್ತಾಹನು ಮಿಚ್ಪೆಯಲ್ಲಿರುವ ತನ್ನ ಮನೆಗೆ ಬರುವಾಗ ಇಗೋ, ಅವನ ಮಗಳು ದಮ್ಮಡಿಗಳ ಸಂಗಡವೂ ನಾಟ್ಯದ ಸಂಗಡವೂ ಅವನನ್ನು ಎದುರು ಗೊಳ್ಳಲು ಹೊರಟಳು. ಅವನಿಗೆ ಅವಳು ಒಬ್ಬಳೇ ಮಗಳು; ಅವಳ ಹೊರತಾಗಿ ಅವನಿಗೆ ಮಗನಾಗಲಿ ಮಗಳಾಗಲಿ ಇರಲಿಲ್ಲ.
34 Quando Jefté voltou para a sua casa, em Mispa, a filha saiu ao seu encontro, tocando o tamborim e dançando. E ela era filha única; ele não tinha outro filho nem filha.
35 ಅವನು ಅವಳನ್ನು ನೋಡಿ ದಾಗ ತನ್ನ ವಸ್ತ್ರಗಳನ್ನು ಹರಕೊಂಡು--ಅಯ್ಯೋ, ನನ್ನ ಕುಮಾರ್ತೆಯೇ, ನೀನು ನನ್ನನ್ನು ಬಹಳವಾಗಿ ಕುಂದಿಸಿದಿ. ನನ್ನನ್ನು ತೊಂದರೆಪಡಿಸುವವರಲ್ಲಿ ನೀನು ಒಬ್ಬಳಾದಿ. ಯಾಕಂದರೆ ನಾನು ಕರ್ತನಿಗೆ ನನ್ನ ಬಾಯಿ ತೆರೆದು ಪ್ರಮಾಣಮಾಡಿದೆನು; ಹಿಂದೆಗೆಯಲಾರೆನು ಅಂದನು.
35 Quando Jefté a viu, rasgou as suas roupas e disse: — Ah! Minha filha! Você me prostra por completo! Você passou a ser a causa da minha ruína, porque fiz um voto ao
36 ಅವಳು ಅವನಿಗೆ--ನನ್ನ ತಂದೆಯೇ, ಕರ್ತನು ಅಮ್ಮೋನನ ಮಕ್ಕಳಾದ ನಿನ್ನ ಶತ್ರುಗಳಿಗೆ ನಿನಗೋಸ್ಕರ ಮುಯ್ಯಿ ತೀರಿಸಿದ್ದರಿಂದ ಆತನಿಗೆ ನಿನ್ನ ಬಾಯಿಂದ ಹೊರಟ ಮಾತಿನ ಪ್ರಕಾರವೇ ನನಗೆ ಮಾಡು ಅಂದಳು.
36 E ela lhe disse: — Meu pai, você fez um voto ao
37 ಇದಲ್ಲದೆ ಅವಳು ತನ್ನ ತಂದೆಗೆ --ಈ ಕಾರ್ಯವು ನನಗೆ ಆಗಲಿ; ಆದರೆ ನಾನು ನನ್ನ ಗೆಳತಿಯರೊಡನೆ ನನ್ನ ಕನ್ಯಾಭಾವಕ್ಕೋಸ್ಕರ ಬೆಟ್ಟಗಳ ಮೇಲೆ ಹೋಗಿ ಗೋಳಾಡುವಂತೆ ಎರಡು ತಿಂಗಳುಗಳ ವರೆಗೆ ನನ್ನನ್ನು ಬಿಡು ಅಂದಳು.
37 E ela disse mais ao seu pai: — Que me seja concedido isto: deixa-me por dois meses, para que eu vá, e desça pelos montes, e chore a minha virgindade, eu e as minhas companheiras.
38 ಆಗ ಅವನು--ಎರಡು ತಿಂಗಳು ಹೋಗಿ ಬಾ ಎಂದು ಹೇಳಿ ಅವಳನ್ನು ಕಳುಹಿಸಿಬಿಟ್ಟನು. ಅವಳು ತನ್ನ ಗೆಳತಿ ಯರ ಸಂಗಡ ಹೋಗಿ ತನ್ನ ಕನ್ಯಾಭಾವಕ್ಕೋಸ್ಕರ ಬೆಟ್ಟಗಳ ಮೇಲೆ ಅತ್ತು,
38 E o pai consentiu, dizendo: — Vá. Deixou-a ir por dois meses. Então ela se foi com as suas companheiras e chorou a sua virgindade pelos montes.
39 ಎರಡು ತಿಂಗಳು ತೀರಿದಾಗ ತನ್ನ ತಂದೆಯ ಬಳಿಗೆ ಬಂದಳು. ಆಗ ಅವನು ಮಾಡಿದ್ದ ತನ್ನ ಪ್ರಮಾಣದ ಪ್ರಕಾರ ಅವಳಿಗೆ ಮಾಡಿದನು. ಅವಳು ಪುರುಷನನ್ನು ಅರಿಯದೆ ಇದ್ದಳು.
39 Ao fim dos dois meses, ela voltou para seu pai, que lhe fez segundo o voto que tinha feito. Assim, ela nunca teve relações com homem algum. Daqui veio o costume em Israel
40 ವರುಷಕ್ಕೆ ನಾಲ್ಕು ದಿವಸ ಇಸ್ರಾಯೇಲಿನ ಕುಮಾರ್ತೆಯರು ಹೋಗಿ ಗಿಲ್ಯಾದ್ಯನಾದ ಯೆಪ್ತಾಹನ ಮಗಳಿಗಾಗಿ ಗೋಳಾಡುವದು ಇಸ್ರಾಯೇಲಿನಲ್ಲಿ ಪದ್ಧತಿ ಆಯಿತು.
40 de as filhas de Israel saírem por quatro dias, todos os anos, a chorar pela filha de Jefté, o gileadita.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Juízes 11, comparar traduções ou montar um estudo — tudo direto pelo WhatsApp.