Juízes 10
Kannada Bible (GL_KANNADA) vs NVI
NVI Nova Versão Internacional
1 ಅಬೀಮೆಲೆಕನ ತರುವಾಯ ಇಸ್ಸಾಕಾರನ ಕುಲದ ದೋದೋವಿನ ಮಗನಾದ ಪೂವನ ಮಗನಾದ ತೋಲನು ಇಸ್ರಾಯೇಲ್ಯರನ್ನು ರಕ್ಷಿಸುವದಕ್ಕೆ ಎದ್ದನು. ಅವನು ಎಫ್ರಾಯಾಮ್ ಬೆಟ್ಟದ ಸೀಮೆಯ ಶಾವಿಾರದಲ್ಲಿ ವಾಸಮಾಡಿದನು.
1 Depois de Abimeleque, um homem de Issacar chamado Tolá, filho de Puá, filho de Dodô, levantou-se para libertar Israel. Ele morava em Samir, nos montes de Efraim,
2 ಇಸ್ರಾಯೇಲಿಗೆ ಇಪ್ಪತ್ತುಮೂರು ವರುಷ ನ್ಯಾಯ ತೀರಿಸಿದ ತರುವಾಯ ಅವನು ಸತ್ತು ಶಾವಿಾರಲ್ಲಿ ಹೂಣಲ್ಪಟ್ಟನು.
2 e liderou Israel durante vinte e três anos; então morreu e foi sepultado em Samir.
3 ಅವನ ತರುವಾಯ ಗಿಲ್ಯಾದ್ಯನಾದ ಯಾಯಾರನು ಎದ್ದು ಇಸ್ರಾಯೇಲ್ಯರಿಗೆ ಇಪ್ಪತ್ತೆರಡು ವರುಷ ನ್ಯಾಯತೀರಿಸಿದನು.
3 Depois dele veio Jair, de Gileade, que liderou Israel durante vinte e dois anos.
4 ಅವನಿಗೆ ಮೂವತ್ತು ಕತ್ತೇಮರಿಗಳ ಮೇಲೆ ಏರುವ ಮೂವತ್ತು ಮಂದಿ ಕುಮಾರರು ಇದ್ದರು. ಇವರಿಗೆ ಗಿಲ್ಯಾದ್ ದೇಶದಲ್ಲಿ ಮೂವತ್ತು ಪಟ್ಟಣಗಳಿದ್ದವು; ಅವುಗಳಿಗೆ ಈ ದಿನದ ವರೆಗೂ ಹವೋತ್ಯಾಯಾರೆಂಬ ಹೆಸರಿದೆ.
4 Teve trinta filhos, que montavam trinta jumentos. Eles tinham autoridade sobre trinta cidades, as quais até hoje são chamadas povoados de Jair e ficam em Gileade.
5 ಯಾಯಾ ರನು ಸತ್ತು ಕಾಮೋನಿನಲ್ಲಿ ಹೂಣಲ್ಪಟ್ಟನು.
5 Quando Jair morreu, foi sepultado em Camom.
6 ಆದರೆ ಇಸ್ರಾಯೇಲ್ ಮಕ್ಕಳು ತಿರಿಗಿ ಕರ್ತನ ಮುಂದೆ ಕೆಟ್ಟತನಮಾಡಿ ಬಾಳನನ್ನೂ ಅಷ್ಟೋರೆತನ್ನೂ ಸಿರಿಯಾ ದೇಶದ ದೇವರುಗಳನ್ನೂ ಚೀದೋನಿನ ದೇವರುಗಳನ್ನೂ ಮೋವಾಬಿನ ದೇವರುಗಳನ್ನೂ ಅಮ್ಮೋನನ ಮಕ್ಕಳ ದೇವರುಗಳನ್ನೂ ಫಿಲಿಷ್ಟಿಯರ ದೇವರುಗಳನ್ನೂ ಸೇವಿಸುವವರಾಗಿ ಕರ್ತನನ್ನು ಸೇವಿ ಸದೆ ಆತನನ್ನು ಬಿಟ್ಟು ಹೋದರು.
6 Mais uma vez os israelitas fizeram o que o Senhor reprova. Serviram aos baalins e aos postes sagrados, e aos deuses de Arã, aos deuses de Sidom, aos deuses de Moabe, aos deuses dos amonitas e aos deuses dos filisteus. E como os israelitas abandonaram o Senhor e não mais lhe prestaram culto,
7 ಆಗ ಕರ್ತನು ಇಸ್ರಾಯೇಲಿಗೆ ವಿರೋಧವಾಗಿ ಕೋಪಗೊಂಡು ಅವ ರನ್ನು ಫಿಲಿಷ್ಟಿಯರ ಕೈಗೂ ಅಮ್ಮೋನನ ಮಕ್ಕಳ ಕೈಗೂ ಮಾರಿಬಿಟ್ಟನು.
7 a ira do Senhor se acendeu contra eles. Ele os entregou nas mãos dos filisteus e dos amonitas,
8 ಆ ವರುಷ ಮೊದಲುಗೊಂಡ ಅವರು ಹದಿನೆಂಟು ವರುಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲ್ ಮಕ್ಕಳ ನ್ನೆಲ್ಲಾ ಬಾಧಿಸಿ ಕುಂದಿಸಿದರು.
8 que naquele ano os humilharam e os oprimiram. Durante dezoito anos oprimiram a todos os israelitas do lado leste do Jordão, em Gileade, terra dos amorreus.
9 ಇದಲ್ಲದೆ ಅಮ್ಮೋನನ ಮಕ್ಕಳು ಯೆಹೂದನಿಗೆ ಬೆನ್ಯಾವಿಾನರಿಗೆ ವಿರೋಧವಾ ಗಿಯೂ ಎಫ್ರಾಯಾಮ್ ಮನೆಗೆ ವಿರೋಧವಾಗಿಯೂ ಯುದ್ಧಮಾಡುವದಕ್ಕೆ ಯೊರ್ದನನ್ನು ದಾಟಿ ಬಂದರು. ಹೀಗೆ ಇಸ್ರಾಯೇಲಿಗೆ ಬಹುಸಂಕಟವಾಯಿತು.
9 Os amonitas também atravessaram o Jordão para lutar contra Judá, contra Benjamim e contra a tribo de Efraim; e grande angústia dominou Israel.
10 ಆಗ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಕೂಗಿ--ನಮ್ಮ ದೇವರನ್ನು ಬಿಟ್ಟು ಬಾಳನನ್ನು ಸೇವಿಸಿದ್ದರಿಂದ ನಾವು ನಿನಗೆ ವಿರೋಧವಾಗಿ ಪಾಪ ಮಾಡಿದೆವು ಅಂದರು.
10 Então os israelitas clamaram ao Senhor, dizendo: "Temos pecado contra ti, pois abandonamos o nosso Deus e prestamos culto aos baalins! "
11 ಕರ್ತನು ಇಸ್ರಾಯೇಲ್ ಮಕ್ಕಳಿಗೆ--ನಾನು ನಿಮ್ಮನ್ನು ಐಗುಪ್ತ್ಯರ ಕೈಯೊಳಗಿಂದಲೂ ಅಮೋರಿಯರ ಕೈಯೊ ಳಗಿಂದಲೂ ಅಮ್ಮೋನನ ಮಕ್ಕಳ ಕೈಯೊಳಗಿಂದಲೂ ಫಿಲಿಷ್ಟಿಯರ ಕೈಯೊಳಗಿಂದಲೂ ತಪ್ಪಿಸಿಬಿಡಲಿಲ್ಲವೋ?
11 O Senhor respondeu: "Quando os egípcios, os amorreus, os amonitas, os filisteus,
12 ಇದಲ್ಲದೆ ಚೀದೋನ್ಯರೂ ಅಮಾಲೇಕ್ಯರೂ ಮಾವೋನ್ಯರೂ ನಿಮ್ಮನ್ನು ಬಾಧೆಪಡಿಸುವಾಗ ನೀವು ನನಗೆ ಕೂಗಿದ್ದರಿಂದ ನಾನು ನಿಮ್ಮನ್ನು ಅವರ ಕೈಗೆ ತಪ್ಪಿಸಿ ರಕ್ಷಿಸಿದೆನು.
12 os sidônios, os amalequitas e os maonitas os oprimiram, e vocês clamaram a mim, e eu os libertei das mãos deles.
13 ಆದರೂ ನೀವು ನನ್ನನ್ನು ಬಿಟ್ಟು ಅನ್ಯದೇವರುಗಳನ್ನು ಸೇವಿಸಿದಿರಿ; ಆದಕಾರಣ ನಾನು ನಿಮ್ಮನ್ನು ಇನ್ನು ಮುಂದೆ ಬಿಡಿಸುವದಿಲ್ಲ.
13 Mas vocês me abandonaram e prestaram culto a outros deuses. Por isso não os livrarei mais.
14 ನೀವು ಹೋಗಿ ನಿಮಗೆ ನೀವೇ ಆರಿಸಿಕೊಂಡ ದೇವರುಗಳಿಗೆ ಕೂಗಿರಿ; ಅವರು ನಿಮ್ಮ ಸಂಕಟದ ಕಾಲದಲ್ಲಿ ನಿಮ್ಮನ್ನು ರಕ್ಷಿಸಲಿ ಅಂದನು.
14 Clamem aos deuses que vocês escolheram. Que eles os livrem na hora do aperto! "
15 ಇಸ್ರಾಯೇಲ್ ಮಕ್ಕಳು ಕರ್ತ ನಿಗೆ--ನಾವು ಪಾಪಮಾಡಿದೆವು; ನೀನು ನಿನ್ನ ಕಣ್ಣು ಗಳಿಗೆ ಒಳ್ಳೇದಾಗಿ ತೋರುವದೆಲ್ಲಾ ನಮಗೆ ಮಾಡು. ಆದರೆ ಈಹೊತ್ತು ನಮ್ಮನ್ನು ರಕ್ಷಿಸು ಎಂದು ಬೇಡಿ ಕೊಂಡರು.
15 Os israelitas, porém, disseram ao Senhor: "Nós pecamos. Faze conosco o que achares melhor, mas te rogamos, livra-nos agora".
16 ಅವರು ಅನ್ಯದೇವರುಗಳನ್ನು ತಮ್ಮ ಮಧ್ಯದಲ್ಲಿಂದ ತೊರೆದುಬಿಟ್ಟು ಕರ್ತನನ್ನು ಸೇವಿಸಿ ದರು. ಆಗ ಆತನ ಮನಸ್ಸು ಇಸ್ರಾಯೇಲಿನ ಕಷ್ಟ ಕ್ಕೋಸ್ಕರ ನೊಂದುಕೊಂಡಿತು.
16 Então eles se desfizeram dos deuses estrangeiros que havia entre eles e prestaram culto ao Senhor. E ele não pôde mais suportar o sofrimento de Israel.
17 ಅಮ್ಮೋನನ ಮಕ್ಕಳು ಏಕವಾಗಿ ಕೂಡಿಕೊಂಡು ಗಿಲ್ಯಾದಿನಲ್ಲಿ ದಂಡಿಳಿದರು. ಆದರೆ ಇಸ್ರಾಯೇಲ್ ಮಕ್ಕಳು ಏಕವಾಗಿ ಕೂಡಿ ಮಿಚ್ಪೆಯಲ್ಲಿ ದಂಡಿಳಿದರು.
17 Quando os amonitas foram convocados e acamparam em Gileade, os israelitas reuniram-se e acamparam em Mispá.
18 ಆಗ ಗಿಲ್ಯಾದಿನ ಜನರೂ ಪ್ರಧಾನರೂ ಒಬ್ಬರಿ ಗೊಬ್ಬರು--ಯಾವನು ಅಮ್ಮೋನನ ಮಕ್ಕಳ ಮೇಲೆ ಯುದ್ಧಮಾಡಲಾರಂಭಿಸುವನೋ ಅವನು ಗಿಲ್ಯಾದಿನ ನಿವಾಸಿಗಳಿಗೆಲ್ಲಾ ನಾಯಕನಾಗಿರುವನು ಎಂದು ಮಾತ ನಾಡಿಕೊಂಡರು.
18 Os líderes do povo de Gileade disseram uns aos outros: "Quem iniciar o ataque contra os amonitas será chefe dos que vivem em Gileade".
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Juízes 10, comparar traduções ou montar um estudo — tudo direto pelo WhatsApp.