Jeremias 51
Kannada Bible (GL_KANNADA) vs ACF
ACF Almeida Corrigida Fiel
1 ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಬಾಬೆಲಿಗೆ ವಿರೋಧವಾಗಿಯೂ ನನಗೆದುರಾಗಿ ಎದ್ದಿರುವವರ ಮಧ್ಯದಲ್ಲಿ ವಾಸಿಸುವ ವರಿಗೆ ವಿರೋಧವಾಗಿಯೂ ನಾಶಮಾಡುವ ಗಾಳಿ ಯನ್ನು ಎಬ್ಬಿಸುತ್ತೇನೆ.
1 Assim diz o SENHOR: Eis que levantarei um vento destruidor contra babilônia, e contra os que habitam no meio dos que se levantam contra mim.
2 ಬಾಬೆಲಿಗೆ ತೂರುವವರನ್ನು ಕಳುಹಿಸುವೆನು; ಅವರು ಅದನ್ನು ತೂರಿ ಅದರ ದೇಶವನ್ನು ಬರಿದುಮಾಡುವರು; ದುರ್ದಿನದಲ್ಲಿ ಸುತ್ತಲಾಗಿ ಅದಕ್ಕೆ ವಿರೋಧವಾಗಿರುವರು.
2 E enviarei padejadores contra babilônia, que a padejarão, e despejarão a sua terra; porque virão contra ela em redor no dia da calamidade.
3 ಬಿಲ್ಲು ಬೊಗ್ಗಿಸುವವನಿಗೆ ವಿರೋಧವಾಗಿಯೂ ಕವಚದಲ್ಲಿ ತನ್ನನ್ನು ಹೆಚ್ಚಿಸಿ ಕೊಳ್ಳುವವನಿಗೆ ವಿರೋಧವಾಗಿಯೂ ಬಿಲ್ಲಿನವನು ತನ್ನ ಬಿಲ್ಲನ್ನು ಬೊಗ್ಗಿಸಲಿ; ಅದರ ಯೌವನಸ್ಥರನ್ನು ಕನಿಕರಿಸಬೇಡಿರಿ; ಅದರ ಸೈನ್ಯವನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿರಿ.
3 O flecheiro arme o seu arco contra o que arma o seu arco, e contra o que se exalta na sua couraça; e não perdoeis aos seus jovens; destruí a todo o seu exército.
4 ಈ ಪ್ರಕಾರ ಕಸ್ದೀಯರ ದೇಶದಲ್ಲಿ ಕೊಂದುಹಾಕಲ್ಪ ಟ್ಟವರೂ ಅದರ ಬೀದಿಗಳಲ್ಲಿ ತಿವಿಯಲ್ಪಟ್ಟವರೂ ಬೀಳುವರು.
4 E os mortos cairão na terra dos caldeus, e atravessados nas suas ruas.
5 ಅವರ ದೇಶವು ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾದ ಪಾಪದಿಂದ ತುಂಬಿದ್ದಾಗ್ಯೂ ಇಸ್ರಾಯೇಲಾದರೂ ಯೆಹೂದವಾದರೂ ತನ್ನ ದೇವರಾದ ಸೈನ್ಯಗಳ ಕರ್ತನಿಂದ ಬಿಡಲ್ಪಟ್ಟದ್ದಲ್ಲ.
5 Porque Israel e Judá não foram abandonados do seu Deus, do Senhor dos Exércitos, ainda que a sua terra esteja cheia de culpas contra o Santo de Israel.
6 ಬಾಬೆಲಿನೊಳಗಿಂದ ಓಡಿಹೋಗಿರಿ, ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳಲಿ; ಅದರ ಅಕ್ರಮದಲ್ಲಿ ನಾಶವಾಗ ಬೇಡಿರಿ; ಇದು ಕರ್ತನ ಪ್ರತಿದಂಡನೆಯ ಕಾಲವು; ಆತನೇ ಅದಕ್ಕೆ ಮುಯ್ಯಿಗೆಮುಯ್ಯಿ ಕೊಡುತ್ತಾನೆ.
6 Fugi do meio de babilônia, e livrai cada um a sua alma, e não vos destruais na sua maldade; porque este é o tempo da vingança do SENHOR; que lhe dará a sua recompensa.
7 ಬಾಬೆಲ್ ಕರ್ತನ ಕೈಯಲ್ಲಿ ಭೂಮಿಗೆಲ್ಲಾ ಅಮಲೇರಿ ಸಿದ ಚಿನ್ನದ ಪಾತ್ರೆಯಾಗಿತ್ತು; ಜನಾಂಗಗಳು ಅದರ ದ್ರಾಕ್ಷಾರಸವನ್ನು ಕುಡಿದವು; ಆದದರಿಂದ ಜನಾಂಗ ಗಳು ಹುಚ್ಚರಾದರು.
7 babilônia era um copo de ouro na mão do SENHOR, o qual embriagava a toda a terra; do seu vinho beberam as nações; por isso as nações enlouqueceram.
8 ಇದ್ದಕ್ಕಿದ್ದ ಹಾಗೆ ಬಾಬೆಲ್ ಬಿದ್ದು ಮುರಿಯಲ್ಪಟ್ಟಿದೆ; ಅದರ ವಿಷಯ ಗೋಳಾ ಡಿರಿ; ಅದರ ನೋವಿಗೆ ತೈಲ ತಕ್ಕೊಳ್ಳಿರಿ; ಒಂದು ವೇಳೆ ವಾಸಿಯಾದೀತು.
8 Num momento caiu babilônia, e ficou arruinada; lamentai por ela, tomai bálsamo para a sua dor, porventura sarará.
9 ನಾವು ಬಾಬೆಲನ್ನು ವಾಸಿಮಾಡುವದಕ್ಕಿದ್ದೆವು. ಆದರೆ ಅದು ವಾಸಿಯಾಗಲಿಲ್ಲ; ಅದನ್ನು ಬಿಡು, ನಮ್ಮ ಸ್ವಂತ ದೇಶಗಳಿಗೆ ಹೋಗೋಣ; ಅದರ ನ್ಯಾಯ ತೀರ್ವಿಕೆಯು ಆಕಾಶಗಳಿಗೆ ಮುಟ್ಟುತ್ತದೆ; ಆಕಾಶಗಳ ವರೆಗೂ ಏಳುತ್ತದೆ.
9 Queríamos curar babilônia, porém ela não sarou; deixai-a, e vamo-nos cada um para a sua terra; porque o seu juízo chegou até ao céu, e se elevou até às mais altas nuvens.
10 ಕರ್ತನು ನಮ್ಮ ನೀತಿಯನ್ನು ಹೊರಗೆ ತಂದಿದ್ದಾನೆ; ಬನ್ನಿ, ನಮ್ಮ ದೇವರಾದ ಕರ್ತನ ಕ್ರಿಯೆಯನ್ನು, ಚೀಯೋನಿನಲ್ಲಿ ಸಾರಿ ಹೇಳೋಣ.
10 O Senhor trouxe a nossa justiça à luz; vinde e contemos em Sião a obra do Senhor, nosso Deus.
11 ಬಾಣಗಳನ್ನು ಮೆರಗು ಮಾಡಿರಿ, ಡಾಲುಗಳನ್ನು ಕೂಡಿಸಿರಿ; ಕರ್ತನು ಮೇದ್ಯರ ಅರಸರ ಆತ್ಮವನ್ನು ಎಬ್ಬಿಸಿದ್ದಾನೆ; ಆತನ ಆಲೋಚನೆ ಬಾಬೆಲಿಗೆ ವಿರೋಧವಾಗಿ ಅದನ್ನು ನಾಶಮಾಡುವದಕ್ಕೆ ಇದೆ. ಇದು ಕರ್ತನ ಪ್ರತಿದಂಡ ನೆಯೂ ಆತನ ದೇವಾಲಯದ ಪ್ರತಿದಂಡನೆಯೂ ಆಗಿದೆ.
11 Aguçai as flechas, preparai os escudos; o SENHOR despertou o espírito dos reis da Média; porque o seu intento é contra babilônia para a destruir; porque esta é a vingança do SENHOR, a vingança do seu templo.
12 ಬಾಬೆಲಿನ ಗೋಡೆಯ ಮೇಲೆ ಧ್ವಜವನ್ನೆತ್ತಿರಿ, ಪಹರೆ ಬಲಪಡಿಸಿರಿ, ಕಾವಲುಗಾರರನ್ನು ನಿಲ್ಲಿಸಿರಿ; ಹೊಂಚಿ ಕೊಳ್ಳುವವರನ್ನು ಸಿದ್ಧಮಾಡಿರಿ; ಕರ್ತನು ಬಾಬೆಲಿನ ನಿವಾಸಿಗಳಿಗೆ ವಿರೋಧವಾಗಿ ತಾನು ಹೇಳಿದ್ದನ್ನು ಯೋಚಿಸಿ ಮಾಡಿದ್ದಾನೆ.
12 Arvorai um estandarte sobre os muros de babilônia, reforçai a guarda, colocai sentinelas, preparai as ciladas; porque como o SENHOR intentou, assim fez o que tinha falado contra os moradores de babilônia.
13 ಅನೇಕ ನೀರುಗಳ ಬಳಿಯಲ್ಲಿ ವಾಸವಾಗಿರುವವಳೇ, ಬಹಳ ದ್ರವ್ಯಗಳುಳ್ಳ ವಳೇ, ನಿನ್ನ ಅಂತ್ಯವೂ ನಿನ್ನ ದುರ್ಲಾಭದ ಅಳತೆಯೂ ಬಂತು.
13 Ó tu, que habitas sobre muitas águas, rica de tesouros, é chegado o teu fim, a medida da tua avareza.
14 ಸೈನ್ಯಗಳ ಕರ್ತನು--ನಿಶ್ಚಯ ವಾಗಿ ನಾನು ಹುಳಗಳಿಂದಾದ ಹಾಗೆ ಮನುಷ್ಯರಿಂದ ನಿನ್ನನ್ನು ತುಂಬಿಸುತ್ತೇನೆಂದು ಅವರು ನಿನಗೆ ವಿರೋಧ ವಾಗಿ ಆರ್ಭಟವನ್ನು ಎತ್ತುವರೆಂದು ತನ್ನ ಮೇಲೆ ಆಣೆ ಇಟ್ಟುಕೊಂಡಿದ್ದಾನೆ.
14 Jurou o Senhor dos Exércitos por si mesmo, dizendo: Ainda que te enchi de homens, como de lagarta, contudo levantarão gritaria contra ti.
15 ಆತನು ತನ್ನ ಶಕ್ತಿಯಿಂದ ಭೂಮಿಯನ್ನು ಉಂಟುಮಾಡಿ ತನ್ನ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ ತನ್ನ ವಿವೇಕದಿಂದ ಆಕಾಶವನ್ನು ವಿಸ್ತರಿಸಿದ್ದಾನೆ.
15 Ele fez a terra com o seu poder, e ordenou o mundo com a sua sabedoria, e estendeu os céus com o seu entendimento.
16 ಆತನು ತನ್ನ ಶಬ್ದವನ್ನು ಎತ್ತುವಾಗ ಆಕಾಶದಲ್ಲಿ ನೀರಿನ ಘೋಷವದೆ; ಆತನು ಭೂಮಿಯ ಅಂತ್ಯದಿಂದ ಹಬೆಯನ್ನು ಏರ ಮಾಡುತ್ತಾನೆ; ಮಳೆಯ ಸಂಗಡ ಮಿಂಚುಗಳನ್ನು ಮಾಡಿ ತನ್ನ ಭಂಡಾರಗಳೊ ಳಗಿಂದ ಗಾಳಿಯನ್ನು ಹೊರಗೆ ತರುತ್ತಾನೆ.
16 Fazendo ele ouvir a sua voz, grande estrondo de águas há nos céus, e faz subir os vapores desde o fim da terra; faz os relâmpagos com a chuva, e tira o vento dos seus tesouros,
17 ಮನುಷ್ಯ ರೆಲ್ಲರೂ ತಮ್ಮ ತಿಳುವಳಿಕೆಯಿಂದ ಮೂಢರಾಗಿದ್ದಾರೆ; ಎರಕ ಹೊಯ್ಯುವವರೆಲ್ಲರೂ ವಿಗ್ರಹದಿಂದ ನಾಚಿಕೆ ಪಡುತ್ತಾರೆ; ಅವರ ಎರಕದ ಬೊಂಬೆಗಳು ಸುಳ್ಳೇ; ಅವುಗಳಲ್ಲಿ ಉಸಿರು ಇಲ್ಲ.
17 Embrutecido é todo o homem, no seu conhecimento; envergonha-se todo o artífice da imagem de escultura; porque a sua imagem de fundição é mentira, e nelas não há espírito.
18 ಅವು ಮಾಯವೇ, ಮೋಸದ ಕೆಲಸವೇ; ಅವುಗಳ ವಿಚಾರಣೆಯ ಕಾಲದಲ್ಲಿ ನಾಶವಾಗುವವು.
18 Vaidade são, obra de enganos; no tempo da sua visitação perecerão.
19 ಯಾಕೋಬನ ಭಾಗವು ಇವುಗಳ ಹಾಗಲ್ಲ; ಆತನು ಎಲ್ಲವನ್ನು ರೂಪಿಸಿದವನೇ, ಆತನ ಸ್ವಾಸ್ತ್ಯದ ಕೋಲು ಇಸ್ರಾಯೇಲೇ; ಆತನ ಹೆಸರು ಸೈನ್ಯಗಳ ಕರ್ತನೇ.
19 Não é semelhante a estes a porção de Jacó; porque ele é o que formou tudo; e Israel é a tribo da sua herança; o Senhor dos Exércitos é o seu nome.
20 ನೀನು ನನ್ನ ಸುತ್ತಿಗೆಯೇ, ನನ್ನ ಯುದ್ಧದ ಆಯುಧಗಳೇ, ನಿನ್ನಿಂದ ಜನಾಂಗಗಳನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಾಜ್ಯಗಳನ್ನು ನಾಶಮಾಡುತ್ತೇನೆ;
20 Tu és meu machado de batalha e minhas armas de guerra, e por meio de ti despedaçarei as nações e por ti destruirei os reis;
21 ನಿನ್ನಿಂದ ಕುದುರೆಯನ್ನೂ ಅದರ ಮೇಲೆ ಹತ್ತಿದವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಥವನ್ನೂ ಅದರಲ್ಲಿ ಸವಾರಿ ಮಾಡುವವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ.
21 E por meio de ti despedaçarei o cavalo e o seu cavaleiro; e por meio de ti despedaçarei o carro e o que nele vai;
22 ನಿನ್ನಿಂದ ಗಂಡಸರನ್ನೂ ಹೆಂಗಸರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಕುರುಬನನ್ನೂ ಅವನ ಮಂದೆಯನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ.
22 E por meio de ti despedaçarei o homem e a mulher, e por meio de ti despedaçarei o velho e o moço, e por meio de ti despedaçarei o jovem e a virgem;
23 ನಿನ್ನಿಂದ ಹಿರಿಯರನ್ನೂ ಕಿರಿಯರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಯೌವನಸ್ಥನನ್ನೂ ಕನ್ನಿಕೆಯನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಒಕ್ಕಲಿಗನನ್ನೂ ಅವನ ನೊಗದ ಎತ್ತುಗಳನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಅಧಿಪತಿಗಳನ್ನೂ ಅಧಿಕಾರಿಗಳನ್ನೂ ಚೂರು ಚೂರಾಗಿ ಒಡೆದುಬಿಡು ತ್ತೇನೆ.
23 E por meio de ti despedaçarei o pastor e o seu rebanho, e por meio de ti despedaçarei o lavrador e a sua junta de bois, e por meio de ti despedaçarei os capitães e os magistrados.
24 ಬಾಬೆಲಿಗೂ ಕಸ್ದೀಯರ ನಿವಾಸಿಗಳೆಲ್ಲ ರಿಗೂ--ಅವರು ಚೀಯೋನಿನಲ್ಲಿ ನಿಮ್ಮ ಸನ್ನಿಧಿಯಲ್ಲಿ ಮಾಡಿದ ಕೇಡನ್ನೆಲ್ಲಾ ಸಲ್ಲಿಸುವೆನೆಂದು ಕರ್ತನು ಅನ್ನುತ್ತಾನೆ.
24 E pagarei a babilônia, e a todos os moradores da Caldéia, toda a maldade que fizeram em Sião, aos vossos olhos, diz o SENHOR.
25 ನಾಶಮಾಡುವ ಬೆಟ್ಟವೇ! ಭೂಮಿಯನ್ನೆಲ್ಲಾ ನಾಶಮಾಡುವಂಥಾದ್ದೇ! ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. ನಿನ್ನ ಮೇಲೆ ನನ್ನ ಕೈಯನ್ನು ಚಾಚಿ ಬಂಡೆಗಳ ಮೇಲಿನಿಂದ ನಿನ್ನನ್ನು ಹೊರಳಿಸಿ ನಿನ್ನನ್ನು ಸುಟ್ಟ ಬೆಟ್ಟವಾಗಿ ಮಾಡುತ್ತೇನೆ.
25 Eis-me aqui contra ti, ó monte destruidor, diz o Senhor, que destróis toda a terra; e estenderei a minha mão contra ti, e te revolverei das rochas, e farei de ti um monte de queima.
26 ಒಬ್ಬರೂ ನಿನ್ನಿಂದ ಮೂಲೆಯ ಕಲ್ಲನ್ನಾಗಲಿ, ಅಸ್ತಿವಾರದ ಕಲ್ಲನ್ನಾಗಲಿ ತೆಗೆಯರು; ನೀನು ಎಂದೆಂದಿಗೂ ಹಾಳಾಗುವಿ ಎಂದು ಕರ್ತನು ಅನ್ನುತ್ತಾನೆ.
26 E não tomarão de ti pedra para esquina, nem pedra para fundamentos, porque te tornarás em assolação perpétua, diz o Senhor.
27 ದೇಶದಲ್ಲಿ ಧ್ವಜವನ್ನೆತ್ತಿರಿ; ಜನಾಂಗಗಳಲ್ಲಿ ತುತೂರಿಯನ್ನೂದಿರಿ; ಅದಕ್ಕೆ ವಿರೋಧವಾಗಿ ಜನಾಂಗಗಳನ್ನು ಸಿದ್ಧಮಾಡಿರಿ; ಅರರಾಟ್, ಮಿನ್ನಿ, ಅಷ್ಕೆನಜ್ ರಾಜ್ಯಗಳನ್ನು ಅದಕ್ಕೆ ವಿರೋಧವಾಗಿ ಕರೆಯಿರಿ; ಅದಕ್ಕೆ ವಿರೋಧವಾಗಿ ಸೈನ್ಯಾಧಿಪತಿಯನ್ನು ನೇಮಿಸಿರಿ; ಬಿರುಸಾದ ಮಿಡತೆ ದಂಡಿನಂತೆ ಕುದುರೆ ಗಳನ್ನು ಬರಮಾಡಿರಿ.
27 Arvorai um estandarte na terra, tocai a buzina entre as nações, preparai as nações contra ela, convocai contra ela os reinos de Ararate, Mini, e Asquenaz; ordenai contra ela um capitão, fazei subir cavalos, como lagartas eriçadas.
28 ಅದಕ್ಕೆ ವಿರೋಧವಾಗಿ ಜನಾಂಗಗಳನ್ನೂ ಮೇದ್ಯರ ಅರಸರನ್ನೂ ಅದರ ಅಧಿಪತಿಗಳನ್ನೂ ಅಧಿಕಾರಿಗಳೆಲ್ಲರನ್ನೂ ಅವನ ರಾಜ್ಯದ ದೇಶವನ್ನೆಲ್ಲಾ ಸಿದ್ಧಮಾಡಿರಿ.
28 Preparai contra ela as nações, os reis da Média, os seus capitães, e todos os seus magistrados, e toda a terra do seu domínio.
29 ಆಗ ದೇಶವು ಕದಲಿ ವೇದನೆಪಡುವದು; ಬಾಬೆಲಿನ ದೇಶವನ್ನು ನಿವಾಸಿ ಇಲ್ಲದೆ ಹಾಳುಮಾಡುವ ವಿಷಯವಾಗಿ ಬಾಬೆಲಿಗೆ ವಿರೋಧವಾದ ಕರ್ತನ ಆಲೋಚನೆಗಳು ಮಾಡಲ್ಪಡು ವವು.
29 Então tremerá a terra, e doer-se-á, porque cada um dos desígnios do SENHOR está firme contra babilônia, para fazer da terra de babilônia uma desolação, sem habitantes.
30 ಬಾಬೆಲಿನ ಪರಾಕ್ರಮಶಾಲಿಗಳು ಯುದ್ಧ ಮಾಡುವದನ್ನು ಬಿಟ್ಟಿದ್ದಾರೆ; ಅವರ ಭದ್ರ ಸ್ಥಾನಗಳಲ್ಲಿ ನಿಲ್ಲುತ್ತಾರೆ; ಅವರ ಪರಾಕ್ರಮತನ ತಪ್ಪಿತು; ಅವರು ಹೆಂಗಸರಂತೆ ಅಬಲರಾದರು. ಅದರ ನಿವಾಸಗಳನ್ನು ಸುಟ್ಟಿದ್ದಾರೆ. ಅದರ ಅಗುಳಿಗಳು ಮುರಿಯಲ್ಪಟ್ಟಿವೆ.
30 Os poderosos de babilônia cessaram de pelejar, ficaram nas fortalezas, desfaleceu a sua força, tornaram-se como mulheres; incendiaram as suas moradas, quebrados foram os seus ferrolhos.
31 ಪಟ್ಟಣವು ಒಂದು ಕಡೆಯಲ್ಲಿ ಹಿಡಿಯಲ್ಪಟ್ಟಿದೆ ಎಂದೂ ದಾಟುವ ಸ್ಥಳಗಳು ವಶವಾದವೆಂದೂ ಬಿದಿರುಗಳು ಬೆಂಕಿಯಿಂದ ಸುಡಲ್ಪಟ್ಟಿವೆ ಎಂದೂ ಯುದ್ಧಸ್ಥರು ಗಾಬರಿ ಪಟ್ಟರೆಂದೂ
31 Um correio correrá ao encontro de outro correio, e um mensageiro ao encontro de outro mensageiro, para anunciar ao rei de babilônia que a sua cidade está tomada de todos os lados.
32 ಬಾಬೆಲಿನ ಅರಸನಿಗೆ ತಿಳಿಸುವದಕ್ಕೆ ಓಡುವವನು ಓಡುವವನನ್ನೂ ತಿಳಿಸುವವನು ತಿಳಿಸುವವನನ್ನೂ ಎದುರುಗೊಳ್ಳುವದಕ್ಕೆ ಓಡುವರು.
32 E os vaus estão ocupados, e os canaviais queimados a fogo; e os homens de guerra ficaram assombrados.
33 ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ತುಳಿಯುವ ವೇಳೆಯಲ್ಲಿ ಕಣವು ಹೇಗೋ, ಹಾಗೆಯೇ ಬಾಬೆಲಿನ ಮಗಳು ಇದ್ದಾಳೆ; ಇನ್ನು ಸ್ವಲ್ಪ ಹೊತ್ತಾದ ಮೇಲೆ ಅದಕ್ಕೆ ಸುಗ್ಗೀಕಾಲ ಬರುವದು.
33 Porque assim diz o SENHOR dos Exércitos, o Deus de Israel: A filha de babilônia é como uma eira, no tempo da debulha; ainda um pouco, e o tempo da sega lhe virá.
34 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನನ್ನನ್ನು ನುಂಗಿಬಿಟ್ಟಿದ್ದಾನೆ; ಜಜ್ಜಿದ್ದಾನೆ; ಬರಿದಾದ ಪಾತ್ರೆಯಾಗಿ ಮಾಡಿದ್ದಾನೆ; ಘಟಸರ್ಪದ ಹಾಗೆ ನುಂಗಿಬಿಟ್ಟಿದ್ದಾನೆ; ನನ್ನ ರಮ್ಯವಾದವುಗಳಿಂದ ತನ್ನ ಹೊಟ್ಟೆ ತುಂಬಿಸಿದ್ದಾನೆ; ನನ್ನನ್ನು ತಳ್ಳಿಬಿಟ್ಟಿದ್ದಾನೆ.
34 Nabucodonosor, rei de babilônia, devorou-me, colocou-me de lado, fez de mim um vaso vazio, como chacal me tragou, encheu o seu ventre das minhas delicadezas; lançou-me fora.
35 ನನಗೂ ನನ್ನ ಶರೀರಕ್ಕೂ ಮಾಡಿರುವ ಬಲಾತ್ಕಾರವು ಬಾಬೆಲಿನ ಮೇಲೆ ಇರಲಿ ಎಂದು ಚೀಯೋನಿನ ನಿವಾಸಿ ಹೇಳುವನು; ಕಸ್ದೀಯರ ನಿವಾಸಿಗಳ ಮೇಲೆ ನನ್ನ ರಕ್ತವು ಇರಲಿ ಎಂದು ಯೆರೂಸಲೇಮು ಹೇಳುವದು.
35 A violência que se fez a mim e à minha carne venha sobre babilônia, dirá a moradora de Sião; e o meu sangue caia sobre os moradores da Caldéia, dirá Jerusalém.
36 ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನ ನಿಮಿತ್ತ ವ್ಯಾಜ್ಯವಾಡುತ್ತೇನೆ; ನಿನಗೋಸ್ಕರ ಪ್ರತಿದಂಡನೆ ಮಾಡುತ್ತೇನೆ; ಅದರ ಸಮುದ್ರವನ್ನು ಒಣಗಿಸುತ್ತೇನೆ; ಅದರ ಬುಗ್ಗೆಯನ್ನು ಬತ್ತಿ ಹೋಗುವಂತೆ ಮಾಡುತ್ತೇನೆ;
36 Portanto, assim diz o Senhor: Eis que pleitearei a tua causa, e tomarei vingança por ti; e secarei o seu mar, e farei que se esgote o seu manancial.
37 ಬಾಬೆಲ್ ದಿಬ್ಬೆಗಳಾಗುವದು; ನಿವಾಸಿಗಳು ಇಲ್ಲದೆ ನರಿಗಳ ವಾಸಸ್ಥಳವೂ ಆಶ್ಚರ್ಯವೂ ಹಾಳೂ ಸಿಳ್ಳಿಡುವಿಕೆಯೂ ಆಗುವದು.
37 E babilônia se tornará em montões, morada de chacais, espanto e assobio, sem que haja quem nela habite.
38 ಅವರು ಸಿಂಹಗಳ ಹಾಗೆ ಒಟ್ಟಾಗಿ ಗರ್ಜಿಸುವರು, ಸಿಂಹದ ಮರಿಗಳ ಹಾಗೆ ಶಬ್ದ ಮಾಡುವರು.
38 Juntamente rugirão como filhos dos leões; bramarão como filhotes de leões.
39 ಅವರ ಉರಿಯಲ್ಲಿ ನಾನು ಅವರ ಔತಣವನ್ನು ಸಿದ್ಧಮಾಡುವೆನು; ಅವರು ಉಲ್ಲಾಸಿಸಿ ನಿತ್ಯವಾದ ನಿದ್ರೆಯನ್ನು ಮಾಡಿ ಎಚ್ಚರವಾಗದ ಹಾಗೆ ಅವರಿಗೆ ಅಮಲೇರಿಸುವೆನೆಂದು ಕರ್ತನು ಅನ್ನುತ್ತಾನೆ.
39 Estando eles excitados, lhes darei a sua bebida, e os embriagarei, para que andem saltando; porém dormirão um perpétuo sono, e não acordarão, diz o Senhor.
40 ಕುರಿಮರಿಗಳ ಹಾಗೆ ಟಗರು ಗಳ ಹೋತಗಳ ಹಾಗೆ ಅವರನ್ನು ಕೊಲೆಗೆ ಇಳಿಸುವೆನು.
40 Fá-los-ei descer como cordeiros à matança, como carneiros e bodes.
41 ಶೇಷಕ್ ಹೇಗೆ ಹಿಡಿಯಲ್ಪಟ್ಟಿದೆ, ಸಮಸ್ತ ಭೂಮಿಯ ಹೊಗಳಿಕೆಯು ಆಶ್ಚರ್ಯಗೊಂಡಿದೆ; ಬಾಬೆಲ್ ಜನಾಂಗಗಳೊಳಗೆ ಹೀಗೆ ವಿಸ್ಮಯಗೊಳಗಾಯಿತು!
41 Como foi tomada Sesaque, e apanhada de surpresa a glória de toda a terra! Como se tornou babilônia objeto de espanto entre as nações!
42 ಬಾಬೆಲಿನ ಮೇಲೆ ಸಮುದ್ರವು ಬಂತು; ಅದರ ತೆರೆಗಳ ಸಮೂಹದಿಂದ ಮುಚ್ಚಲ್ಪಟ್ಟಿದೆ.
42 O mar subiu sobre babilônia; com a multidão das suas ondas se cobriu.
43 ಅದರ ಪಟ್ಟಣಗಳು ಹಾಳಾದವು; ಅವು ಒಣನೆಲವೂ ಅಡವಿಯೂ ಯಾರೂ ವಾಸಮಾಡದೆ, ಮನುಷ್ಯನ ಮಗನು ಹಾದುಹೋಗದೆ ಇರುವ ದೇಶವೂ ಆಗಿವೆ.
43 Tornaram-se as suas cidades em desolação, terra seca e deserta, terra em que ninguém habita, nem passa por ela filho de homem.
44 ನಾನು ಬಾಬೆಲಿನಲ್ಲಿರುವ ಬೇಲ್‌ನನ್ನು ದಂಡಿಸಿ ಅವನು ನುಂಗಿದ್ದನ್ನು ಅವನ ಬಾಯೊಳಗಿಂದ ಹೊರಗೆ ತರಿಸುವೆನು; ಇನ್ನು ಮೇಲೆ ಜನಾಂಗಗಳು ಅವನ ಬಳಿಗೆ ಪ್ರವಾಹವಾಗಿ ಬರುವದಿಲ್ಲ; ಹೌದು, ಬಾಬೆಲಿನ ಗೋಡೆ ಬೀಳುವದು.
44 E castigarei a Bel em babilônia, e tirarei da sua boca o que tragou, e nunca mais concorrerão a ele as nações; também o muro de babilônia caiu.
45 ನನ್ನ ಜನರೇ, ಅದರೊಳಗಿಂದ ಹೊರಡಿರಿ; ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣವನ್ನು ಕರ್ತನ ಕೋಪದ ಉರಿಗೆ ತಪ್ಪಿಸಿರಿ.
45 Saí do meio dela, ó povo meu, e livrai cada um a sua alma do ardor da ira do Senhor.
46 ನಿಮ್ಮ ಹೃದಯವು ಕುಂದದ ಹಾಗೆ ದೇಶದಲ್ಲಿ ಕೇಳಲ್ಪಡುವ ಸುದ್ದಿಗೆ ನೀವು ಭಯಪಡದ ಹಾಗೆ ಒಂದು ವರುಷದಲ್ಲಿ ಒಂದು ಸುದ್ದಿಯೂ ಇನ್ನೊಂದು ವರುಷದಲ್ಲಿ ಇನ್ನೊಂದು ಸುದ್ದಿಯೂ ಬರುವದು; ದೇಶದಲ್ಲಿ ಬಲಾತ್ಕಾರವಿರು ವದು, ಆಳುವವನು ಆಳುವವನಿಗೆ ವಿರೋಧವಾಗಿರು ವನು.
46 E para que porventura não se enterneça o vosso coração, e não temais pelo rumor que se ouvir na terra; porque virá num ano um rumor, e depois noutro ano outro rumor; e haverá violência na terra, dominador contra dominador.
47 ಆದದರಿಂದ ಇಗೋ, ದಿನಗಳು ಬರುವವು; ಆಗ ನಾನು ಬಾಬೆಲಿನ ವಿಗ್ರಹಗಳಿಗೆ ನ್ಯಾಯತೀರಿ ಸುವೆನು. ಅದರ ದೇಶವೆಲ್ಲಾ ನಾಚಿಕೆಪಡುವದು; ಕೊಲ್ಲಲ್ಪಟ್ಟವರು ಅದರ ಮಧ್ಯದಲ್ಲಿ ಬೀಳುವರು.
47 Portanto, eis que vêm dias, em que farei juízo sobre as imagens de escultura de babilônia, e toda a sua terra será envergonhada, e todos os seus mortos cairão no meio dela.
48 ಆಗ ಆಕಾಶವೂ ಭೂಮಿಯೂ ಅವುಗಳಲ್ಲಿರುವ ಸಮಸ್ತವೂ ಬಾಬೆಲಿನ ವಿಷಯವಾಗಿ ಹಾಡುವೆವು. ಸೂರೆ ಮಾಡುವವರು ಉತ್ತರದಿಂದ ಅದಕ್ಕೆ ವಿರೋಧ ವಾಗಿ ಬರುವರೆಂದು ಕರ್ತನು ಅನ್ನುತ್ತಾನೆ.
48 E os céus e a terra, com tudo quanto neles há, jubilarão sobre babilônia; porque do norte lhe virão os destruidores, diz o SENHOR.
49 ಬಾಬೆಲು ಇಸ್ರಾಯೇಲಿನ ಕೊಲ್ಲಲ್ಪಟ್ಟವರನ್ನು ಬೀಳಿಸಿದ ಹಾಗೆ ಬಾಬೆಲಿನ ಸಮಸ್ತ ದೇಶದಲ್ಲಿ ಕೊಲ್ಲಲ್ಪಟ್ಟವರು ಬೀಳು ವರು.
49 Como babilônia fez cair mortos os de Israel, assim em babilônia cairão os mortos de toda a terra.
50 ಕತ್ತಿಗೆ ತಪ್ಪಿಸಿಕೊಂಡವರೇ, ನಡೆಯಿರಿ, ನಿಲ್ಲಬೇಡಿರಿ; ದೂರದಲ್ಲಿ ಕರ್ತನನ್ನು ಜ್ಞಾಪಕಮಾಡಿ ಕೊಳ್ಳಿರಿ, ಯೆರೂಸಲೇಮು ನಿಮ್ಮ ಮನಸ್ಸಿಗೆ ಬರಲಿ.
50 Vós, que escapastes da espada, ide-vos, não pareis; de longe lembrai-vos do Senhor, e suba Jerusalém a vossa mente.
51 ನಾಚಿಕೆಪಡುತ್ತೇವೆ, ನಿಂದೆಯನ್ನು ಕೇಳಿದ್ದೇವೆ; ಅವಮಾನ ನಮ್ಮ ಮುಖಗಳನ್ನು ಮುಚ್ಚಿದೆ; ಅನ್ಯರು ಕರ್ತನ ಆಲಯದ ಪರಿಶುದ್ಧ ಸ್ಥಳಗಳಲ್ಲಿ ಬಂದಿದ್ದಾರೆ.
51 Direis: Envergonhados estamos, porque ouvimos opróbrio; vergonha cobriu o nosso rosto, porquanto vieram estrangeiros contra os santuários da casa do Senhor.
52 ಆದದರಿಂದ ಇಗೋ, ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಅವಳ ಕೆತ್ತಿದ ವಿಗ್ರಹಗಳಿಗೆ ನ್ಯಾಯತೀರಿಸುತ್ತೇನೆ. ಅವಳ ದೇಶದಲ್ಲೆಲ್ಲಾ ಗಾಯಪಟ್ಟವರು ನರಳುವರು.
52 Portanto, eis que vêm dias, diz o Senhor, em que farei juízo sobre as suas imagens de escultura; e gemerão os feridos em toda a sua terra.
53 ಬಾಬೆಲ್ ಆಕಾಶಕ್ಕೆ ಏರಿದರೂ ಅದರ ಬಲದ ಉನ್ನತ ಸ್ಥಾನವನ್ನು ಭದ್ರಮಾಡಿದರೂ ಸೂರೆಮಾಡು ವವರು ನನ್ನಿಂದ ಅವಳಿಗೆ ವಿರೋಧವಾಗಿ ಬರುವರೆಂದು ಕರ್ತನು ಅನ್ನುತ್ತಾನೆ.
53 Ainda que babilônia subisse aos céus, e ainda que fortificasse a altura da sua fortaleza, todavia de mim virão destruidores sobre ela, diz o SENHOR.
54 ಬಾಬೆಲಿನಿಂದ ಕೂಗುವ ಶಬ್ದವು! ಕಸ್ದೀಯರ ದೇಶದಿಂದ ಮಹಾನಾಶನವು ಬರುವದು.
54 De babilônia se ouve clamor de grande destruição da terra dos caldeus;
55 ಕರ್ತನು ಬಾಬೆಲನ್ನು ಸೂರೆಮಾಡಿ ದ್ದಾನೆ; ಅವಳೊಳಗಿಂದ ಮಹಾ ಶಬ್ದವನ್ನು ತೆಗೆದುಹಾಕಿ ದ್ದಾನೆ; ಅವಳ ತೆರೆಗಳು ಬಹಳ ನೀರುಗಳ ಹಾಗೆ ಘೋಷಿಸುವಾಗ ಅವುಗಳ ಶಬ್ದದ ಧ್ವನಿ ಹೊರಟಿತು.
55 Porque o SENHOR tem destruído babilônia, e tem feito perecer nela a sua grande voz; quando as suas ondas bramam como muitas águas, é emitido o ruído da sua voz.
56 ಸೂರೆ ಮಾಡುವವನು ಅದರ ಮೇಲೆ ಅಂದರೆ ಬಾಬೆಲಿನ ಮೇಲೆಯೇ ಬಂದಿದ್ದಾನೆ; ಅದರ ಪರಾಕ್ರಮಶಾಲಿಗಳು ಹಿಡಿಯಲ್ಪಟ್ಟಿದ್ದಾರೆ; ಅವಳ ಬಿಲ್ಲುಗಳು ಮುರಿಯಲ್ಪಟ್ಟಿವೆ; ಪ್ರತಿದಂಡನೆಗಳ ದೇವರಾದ ಕರ್ತನು ನಿಶ್ಚಯವಾಗಿ ಮುಯ್ಯಿಗೆ ಮುಯ್ಯಿ ತೀರಿಸುವನು.
56 Porque o destruidor vem sobre ela, sobre babilônia, e os seus poderosos serão presos, já estão quebrados os seus arcos; porque o SENHOR, Deus das recompensas, certamente lhe retribuirá.
57 ಇದಲ್ಲದೆ ನಾನು ಅವಳ ಪ್ರಧಾನಿಗಳನ್ನೂ, ಜ್ಞಾನಿಗಳನ್ನೂ, ಅಧಿಪತಿಗಳನ್ನೂ, ಅಧಿಕಾರಿಗಳನ್ನೂ, ಪರಾಕ್ರಮಶಾಲಿಗಳನ್ನೂ, ಮತ್ತರಾಗಮಾಡುತ್ತೇನೆ; ಅವರು ನಿತ್ಯ ನಿದ್ರೆ ಮಾಡುವರು, ಎಚ್ಚರವಾಗುವದಿಲ್ಲವೆಂದು ಸೈನ್ಯಗಳ ಕರ್ತನೆಂಬ ಹೆಸರುಳ್ಳ ಅರಸನು ಅನ್ನುತ್ತಾನೆ.
57 E embriagarei os seus príncipes, e os seus sábios e os seus capitães, e os seus magistrados, e os seus poderosos; e dormirão um sono eterno, e não acordarão, diz o Rei, cujo nome é o Senhor dos Exércitos.
58 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಬಾಬೆಲಿನ ಅಗಲವಾದ ಗೋಡೆಗಳು ಸಂಪೂರ್ಣವಾಗಿ ಕೆಡವಲ್ಪ ಡುವವು; ಅವಳ ಎತ್ತರವಾದ ಬಾಗಲುಗಳು ಬೆಂಕಿ ಯಿಂದ ಸುಡಲ್ಪಡುವವು; ಜನರು ವ್ಯರ್ಥಕ್ಕಾಗಿಯೂ ಪ್ರಜೆಗಳು ಬೆಂಕಿಗಾಗಿಯೂ ಕಷ್ಟಪಟ್ಟು ಆಯಾಸ ಪಡುವರು.
58 Assim diz o SENHOR dos Exércitos: Os largos muros de babilônia serão totalmente derrubados, e as suas altas portas serão abrasadas pelo fogo; e trabalharão os povos em vão, e as nações no fogo, e eles se cansarão.
59 ಪ್ರವಾದಿಯಾದ ಯೆರೆವಿಾಯನು ಮಹ್ಸೇಯನ ಮಗನಾದ ನೇರೀಯನ ಮಗನಾದ ಸೆರಾಯನಿಗೆ, ಅವನು ಯೆಹೂದದ ಅರಸನಾದ ಚಿದ್ಕೀಯನ ಸಂಗಡ, ಇವನ ಆಳಿಕೆಯ ನಾಲ್ಕನೇ ವರುಷದಲ್ಲಿ ಬಾಬೆಲಿಗೆ ಹೋದಾಗ ಆಜ್ಞಾಪಿಸಿದ ವಾಕ್ಯವು. ಆ ಸೆರಾಯನು ಶಾಂತವಾದ ಪ್ರಧಾನಿಯಾಗಿದ್ದನು.
59 A palavra que Jeremias, o profeta, mandou a Seraías, filho de Nerias, filho de Maaséias, indo ele com Zedequias, rei de Judá, a babilônia, no quarto ano do seu reinado. E Seraías era o camareiro-mor.
60 ಹೀಗೆ ಯೆರೆವಿಾಯನು ಬಾಬೆಲಿನ ಮೇಲೆ ಬರುವ ಕೇಡನ್ನೆಲ್ಲಾ ಬಾಬೆಲಿಗೆ ವಿರೋಧವಾಗಿ ಬರೆದಿರುವ ಈ ವಾಕ್ಯಗಳನ್ನೆಲ್ಲಾ ಒಂದು ಪುಸ್ತಕದಲ್ಲಿ ಬರೆದನು.
60 Escreveu, pois, Jeremias num livro todo o mal que havia de vir sobre babilônia, a saber, todas estas palavras que estavam escritas contra babilônia.
61 ಯೆರೆವಿಾಯನು ಸೆರಾಯನಿಗೆ ಹೇಳಿದ್ದೇನಂದರೆ-- ನೀನು ಬಾಬೆಲಿಗೆ ಬಂದು
61 E disse Jeremias a Seraías: Quando chegares a babilônia, verás e lerás todas estas palavras.
62 ಈ ವಾಕ್ಯಗಳನ್ನೆಲ್ಲಾ ನೋಡಿ ಓದುತ್ತಿರುವಾಗ ಹೇಳತಕ್ಕದ್ದೇನಂದರೆ--ಓ ಕರ್ತನೇ, ಈ ಸ್ಥಳಕ್ಕೆ ವಿರೋಧವಾಗಿ ಅದರಲ್ಲಿ ಮನುಷ್ಯ ರಾಗಲಿ, ಮೃಗಗಳಾಗಲಿ ನಿವಾಸಿಗಳು ಎಂದಿಗೂ ಇರದ ಹಾಗೆಯೂ ಅದು ನಿತ್ಯವಾಗಿ ಹಾಳಾಗುವ ಹಾಗೆಯೂ ಅದನ್ನು ಕಡಿದುಬಿಡುತ್ತೇನೆಂದು ನೀನೇ ಮಾತನಾ ಡಿದ್ದೀ.
62 E dirás: Senhor, tu falaste contra este lugar, que o havias de desarraigar, até não ficar nele morador algum, nem homem nem animal, e que se tornaria em perpétua desolação.
63 ನೀನು ಈ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಅದಕ್ಕೆ ಕಲ್ಲುಕಟ್ಟಿ ಅದನ್ನು ಯೂಫ್ರೇಟೀಸಿನ ಮಧ್ಯದಲ್ಲಿ ಬಿಸಾಡಿ ಹೀಗೆ ಹೇಳು--ಈ ಪ್ರಕಾರ ಬಾಬೆಲ್ ಮುಳುಗಿಹೋಗುವದು;
63 E será que, acabando tu de ler este livro, atar-lhe-ás uma pedra e lançá-lo-ás no meio do Eufrates.
64 ನಾನು ಅವಳ ಮೇಲೆ ತರುವ ಕೇಡಿನೊಳಗಿಂದ ಏಳದು, ಅವರು ಆಯಾಸ ಪಡುವರು. ಇಲ್ಲಿಯ ತನಕ ಯೆರೆವಿಾಯನ ವಾಕ್ಯಗಳು.
64 E dirás: Assim será afundada babilônia, e não se levantará, por causa do mal que eu hei de trazer sobre ela; e eles se cansarão. Até aqui são as palavras de Jeremias.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Jeremias 51, comparar traduções ou montar um estudo — tudo direto pelo WhatsApp.