Jeremias 49

Kannada Bible (GL_KANNADA) vs NVI

Sair da comparação
NVI Nova Versão Internacional
1 ಅಮ್ಮೋನ್ಯರ ವಿಷಯವಾಗಿ ಕರ್ತನು ಹೀಗೆ ಹೇಳುತ್ತಾನೆ--ಇಸ್ರಾಯೇಲಿಗೆ ಕುಮಾರರಿ ಲ್ಲವೋ? ಅವನಿಗೆ ಬಾಧ್ಯನಿಲ್ಲವೋ? ಅವರ ಅರಸನು ಗಾದನ್ನು ಬಾಧ್ಯವಾಗಿ ತಕ್ಕೊಳ್ಳುವದು ಯಾಕೆ? ಅವನ ಜನರು ಅದರ ಪಟ್ಟಣಗಳಲ್ಲಿ ವಾಸಮಾಡುವದು ಯಾಕೆ?
1 Acerca dos amonitas, assim diz o Senhor: "Por acaso Israel não tem filhos? Será que não tem herdeiros? Por que será então que Moloque se apossou de Gade? Por que seu povo vive nas cidades de Gade?
2 ಆದದರಿಂದ ಇಗೋ, ದಿನಗಳು ಬರುವ ವೆಂದು ಕರ್ತನು ಅನ್ನುತ್ತಾನೆ; ಆಗ ಅಮ್ಮೋನನ ಮಕ್ಕಳು ರಬ್ಬಾದಲ್ಲಿ ಯುದ್ಧದ ಆರ್ಭಟವನ್ನು ಕೇಳುವಂತೆ ನಾನು ಮಾಡುವೆನು; ಅದು ಹಾಳು ದಿಬ್ಬೆಯಾಗುವದು; ಅದರ ಕುಮಾರ್ತೆಯರು ಸಹ ಬೆಂಕಿಯಿಂದ ಸುಡಲ್ಪಡು ವರು; ಆಗ ಇಸ್ರಾಯೇಲು ತನ್ನ ಬಾಧ್ಯಸ್ಥರ ಬಾಧ್ಯ ವನ್ನು ಹೊಂದುವದೆಂದು ಕರ್ತನು ಹೇಳುತ್ತಾನೆ.
2 Portanto, certamente vêm os dias", declara o Senhor, "em que farei soar o grito de guerra contra Rabá dos amonitas; ela virá a ser uma pilha de ruínas, e os seus povoados ao redor serão incendiados. Então Israel expulsará aqueles que o expulsaram", diz o Senhor.
3 ಹೆಷ್ಬೋನೇ, ಗೋಳಾಡು; ಆಯಿ ಹಾಳಾಯಿತು; ರಬ್ಬಾದ ಕುಮಾರ್ತೆಯರೇ ಕೂಗಿರಿ; ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಬೇಲಿಗಳ ಬಳಿಯಲ್ಲಿ ಅತ್ತಿತ್ತ ಓಡಾಡಿರಿ; ಅವರ ಅರಸನೂ ಅವನ ಯಾಜಕರೂ ಅವನ ಪ್ರಧಾನರೂ ಒಟ್ಟಾಗಿ ಸೆರೆಗೆ ಹೋಗುವರು.
3 "Lamente, ó Hesbom, pois Ai está destruída! Gritem, ó moradores de Rabá! Ponham veste de lamento e chorem! Corram desorientados, pois Moloque irá para o exílio com os seus sacerdotes e os seus oficiais.
4 ಹಿಂತಿರುಗು, ಹಿಂಜರಿದು ಹೋದ ಮಗಳೇ, ನನ್ನ ಬಳಿಗೆ ಬರುವವರು ಯಾರೆಂದು ಹೇಳಿ ನಿನ್ನ ಬೊಕ್ಕಸ ಗಳಲ್ಲಿ ನಂಬಿಕೆ ಇಟ್ಟವಳೇ, ನಿನ್ನ ತಗ್ಗು ಹರಿದು ಹೋಗುತ್ತದಲ್ಲಾ? ತಗ್ಗುಗಳ ವಿಷಯ ಯಾಕೆ ಹೆಚ್ಚಳ ಪಡುತ್ತೀ?
4 Por que você se orgulha de seus vales? Por que se orgulha de seus vales tão frutíferos? Ó filha infiel! Você confia em suas riquezas e diz: ‘Quem me atacará? ’
5 ಇಗೋ, ನಾನು ನಿನ್ನ ಸುತ್ತಲಿರುವ ವರೆಲ್ಲರಿಂದ ನಿನ್ನ ಮೇಲೆ ಭಯವನ್ನು ಬರಮಾಡು ವೆನೆಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ. ಆಗ ನಿಮ್ಮಲ್ಲಿ ಒಬ್ಬೊಬ್ಬನು ಮುಂದಕ್ಕೆ ಓಡಿಸಲ್ಪಡುವನು; ಅಲೆದಾಡುವವನನ್ನು ಕೂಡಿಸುವವನೂ ಒಬ್ಬನೂ ಇರುವದಿಲ್ಲ.
5 Farei com que você tenha pavor de tudo o que está a sua volta", diz o Senhor, o Senhor dos Exércitos. "Vocês serão dispersos, cada um numa direção, e ninguém conseguirá reunir os fugitivos.
6 ಆದರೆ ತರುವಾಯ ಅಮ್ಮೋನನ ಮಕ್ಕಳನ್ನು ಸೆರೆಯಿಂದ ತಿರುಗಿ ತರುವೆನೆಂದು ಕರ್ತನು ಅನ್ನುತ್ತಾನೆ.
6 "Contudo, depois disso, restaurarei a sorte dos amonitas", declara o Senhor.
7 ಎದೋಮಿನ ವಿಷಯವಾಗಿ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ತೇಮಾನ್‌ನಲ್ಲಿ ಇನ್ನು ಮೇಲೆ ಜ್ಞಾನವಿರುವದಿಲ್ಲವೋ? ವಿವೇಕಿಗಳಿಂದ ಆಲೋಚ ನೆಯು ನಾಶವಾಯಿತೋ? ಅವರ ಜ್ಞಾನವು ಕಾಣದೆ ಹೋಯಿತೋ?
7 Acerca de Edom, assim diz o Senhor dos Exércitos: "Será que já não há mais sabedoria em Temã? Será que o conselho desapareceu dos prudentes? A sabedoria deles deteriorou-se?
8 ದೇದಾನಿನ ನಿವಾಸಿಗಳೇ, ಓಡಿ ಹೋಗಿರಿ, ತಿರುಗಿಕೊಳ್ಳಿರಿ, ಆಳವಾದ ಸ್ಥಳದಲ್ಲಿ ವಾಸಮಾಡಿರಿ. ಏಸಾವಿನ ಆಪತ್ತನ್ನೂ ನಾನು ಅವನನ್ನು ವಿಚಾರಿಸುವ ಕಾಲವನ್ನು ಅವನ ಮೇಲೆ ಬರಮಾಡು ತ್ತೇನೆ.
8 Voltem-se e fujam, escondam-se em cavernas profundas, vocês que moram em Dedã, pois trarei a ruína sobre Esaú na hora em que eu o castigar.
9 ದ್ರಾಕ್ಷೇ ಕೂಡಿಸುವವರು ನಿನ್ನ ಬಳಿಗೆ ಬಂದಿದ್ದರೆ ಹಕ್ಕಲನ್ನಾದರೂ ಉಳಿಸರೇ? ರಾತ್ರಿಯಲ್ಲಿ ಕಳ್ಳರು ಬಂದಿದ್ದರೆ ತಮಗೆ ಸಾಕಾಗುವಷ್ಟು ಕೆಡಿಸುವವರಲ್ಲವೇ?
9 Se os que colhem uvas viessem até você, não deixariam eles apenas umas poucas uvas? Se os ladrões viessem durante a noite, não roubariam apenas o quanto desejassem?
10 ಆದರೆ ನಾನು ಏಸಾವನನ್ನು ಬರಿದುಮಾಡಿದ್ದೇನೆ; ಅದರ ರಹಸ್ಯ ಸ್ಥಳಗಳನ್ನು ತೆರೆದಿದ್ದೇನೆ; ಅವನು ತನ್ನನ್ನು ತಾನೇ ಅಡಗಿಸಿಕೊಳ್ಳಲಾರನು; ಅವನ ಸಂತಾನವು ಹಾಳಾಯಿತು; ಅವನ ಸಹೋದರರೂ ನೆರೆಯವರೂ ಅವನೂ ಇಲ್ಲವಾದರು.
10 Mas eu despi Esaú e descobri os seus esconderijos, para que ele não mais se esconda. Os seus filhos, parentes e vizinhos foram destruídos. Ninguém restou para dizer:
11 ನಿನ್ನ ದಿಕ್ಕಿಲ್ಲದ ಮಕ್ಕಳನ್ನು ಬಿಡು; ನಾನೇ ರಕ್ಷಿಸುವೆನು; ನಿನ್ನ ವಿಧವೆಯರು ನನ್ನಲ್ಲಿ ನಂಬಿಕೆ ಇಡಲಿ.
11 ‘Deixe os seus órfãos; eu protegerei a vida deles. As suas viúvas também podem confiar em mim’ ".
12 ಕರ್ತನು ಹೀಗೆ ಹೇಳು ತ್ತಾನೆ--ಇಗೋ ಪಾತ್ರೆಯಲ್ಲಿ ಕುಡಿಯುವದಕ್ಕೆ ಯಾರಿಗೆ ನ್ಯಾಯತೀರ್ವಿಕೆ ಆಗಲಿಲ್ಲವೋ? ಅವರು ಸಹ ಕುಡಿದಿದ್ದಾರೆ; ಹಾಗಾದರೆ ನೀನು ಶುದ್ಧವಾಗಿ ಅಪರಾಧ ವಿಲ್ಲದೆ ಇರುವಿಯೋ? ಅಪರಾಧವಿಲ್ಲದೆ ಇರುವದಿಲ್ಲ ನಿಶ್ಚಯವಾಗಿ ಕುಡಿಯುವಿ.
12 Assim diz o Senhor: "Se aqueles para quem o cálice não era reservado tiveram que bebê-lo, por que você deveria ficar impune? Você não ficará sem castigo, mas irá bebê-lo.
13 ಬೊಚ್ರವು ಹಾಳೂ ನಿಂದೆಯೂ ಅಡವಿಯೂ ಶಾಪವೂ ಆಗುವದೆಂದು ಅದರ ಪಟ್ಟಣಗಳೆಲ್ಲಾ ಎಂದೆಂದಿಗೂ ಅಡವಿ ಸ್ಥಳಗಳಾ ಗುವವೆಂದೂ ನನ್ನ ಮೇಲೆ ಪ್ರಮಾಣ ಮಾಡಿಕೊಂಡಿದ್ದೇನೆಂದು ಕರ್ತನು ಅನ್ನುತ್ತಾನೆ.
13 Eu juro por mim mesmo", declara o Senhor, "que Bozra ficará em ruínas e desolada; ela se tornará objeto de afronta e de maldição, e todas as suas cidades serão ruínas para sempre".
14 ಕರ್ತನಿಂದ ನಾನು ಸುದ್ದಿಯನ್ನು ಕೇಳಿದ್ದೇನೆ; ಅನ್ಯಜನಾಂಗಗಳೊಳಗೆ ರಾಯಭಾರಿಯು ಕಳುಹಿಸಲ್ಪಟ್ಟಿದ್ದಾನೆ; ನೀವು ಒಟ್ಟು ಗೂಡಿಕೊಂಡು ಅದಕ್ಕೆ ವಿರೋಧವಾಗಿ ಬನ್ನಿರಿ, ಯುದ್ಧಕ್ಕಾಗಿ ಏಳಿರಿ.
14 Ouvi uma mensagem da parte do Senhor: Um mensageiro foi mandado às nações para dizer: "Reúnam-se para atacar Edom! Preparem-se para a batalha! "
15 ಇಗೋ, ನಿನ್ನನ್ನು ಅನ್ಯಜನಾಂಗ ಗಳಲ್ಲಿ ಹೀನವಾಗಿಯೂ ಮನುಷ್ಯರಲ್ಲಿ ತಿರಸ್ಕರಿಸಲ್ಪಟ್ಟವ ನನ್ನಾಗಿಯೂ ಮಾಡುವೆನು.
15 "Agora eu faço de você uma nação pequena entre as demais, desprezada pelos homens.
16 ಬಂಡೆಯ ಬಿರುಕು ಗಳಲ್ಲಿ ವಾಸಮಾಡುವವನೇ ಗುಡ್ಡದ ಕೊನೆಯನ್ನು ಹಿಡಿಯುವವನೇ, ನಿನ್ನ ಭಯಂಕರತ್ವವೂ ಹೃದಯದ ಗರ್ವವೂ ನಿನ್ನನ್ನು ಮೋಸಗೊಳಿಸಿದವು; ನೀನು ಹದ್ದಿನಂತೆ ನಿನ್ನ ಗೂಡನ್ನು ಎತ್ತರ ಮಾಡಿದರೂ ಅಲ್ಲಿಂದ ನಿನ್ನನ್ನು ಇಳಿಸುತ್ತೇನೆಂದು ಕರ್ತನು ಅನ್ನುತ್ತಾನೆ.
16 O pavor que você inspira e o orgulho de seu coração o enganaram, a você, que vive nas fendas das rochas, que ocupa os altos das colinas. Ainda que você, como a águia, faça o seu ninho nas alturas, de lá eu o derrubarei", declara o Senhor.
17 ಎದೋಮು ಸಹ ಹಾಳಾಗುವದು; ಅದರ ಬಳಿಯಲ್ಲಿ ಹಾದು ಹೋಗುವವರೆಲ್ಲರೂ ಅದರ ಎಲ್ಲಾ ಬಾಧೆಗಳ ವಿಷಯ ವಿಸ್ಮಯಪಟ್ಟು ಸಿಳ್ಳಿಡುವರು.
17 "Edom se tornará objeto de terror; todos os que por ali passarem ficarão chocados e zombarão por causa de todas as suas feridas.
18 ಸೊದೋಮ್‌ ಗೊಮೋರ ಅವುಗಳ ಸವಿಾಪ ದಲ್ಲಿದ್ದ ಪಟ್ಟಣಗಳೂ ಕೆಡವಲ್ಪಟ್ಟಾಗ ಹಾಗೆಯೇ ಅಲ್ಲಿ ಯಾವ ಮನುಷ್ಯನಾದರೂ ವಾಸಮಾಡುವದಿಲ್ಲ, ಅದರಲ್ಲಿ ಯಾವ ಮನುಷ್ಯನ ಪುತ್ರನಾದರೂ ತಂಗುವದಿಲ್ಲವೆಂದು ಕರ್ತನು ಅನ್ನುತ್ತಾನೆ.
18 Como a destruição de Sodoma e Gomorra, e as cidades vizinhas", diz o Senhor, "ninguém mais habitará ali, nenhum homem residirá nela.
19 ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ಉಬ್ಬುವಿಕೆಯಿಂದ ಬಲವಾದ ನಿವಾಸಕ್ಕೆ ವಿರೋಧವಾಗಿ ಏರಿ ಬರುವನು; ಆದರೆ ನಾನು ಅವನನ್ನು ಕ್ಷಣಮಾತ್ರದಲ್ಲಿ ಅದಕ್ಕೆ ದೂರವಾಗಿ ಓಡಿಹೋಗುವಂತೆ ಮಾಡುವೆನು. ನಾನು ಅದರ ಮೇಲೆ ನೇಮಿಸತಕ್ಕ ಆಯಲ್ಪಟ್ಟವನು ಯಾರು? ನನ್ನ ಹಾಗೆ ಯಾರು? ನನಗೆ ಕಾಲವನ್ನು ನೇಮಿಸು ವವನಾರು? ನನ್ನ ಮುಂದೆ ನಿಲ್ಲತಕ್ಕ ಕುರುಬನು ಯಾರು?
19 "Assim como um leão que sobe da mata do Jordão em direção aos pastos verdejantes, subitamente eu caçarei Edom para fora de sua terra. Quem é o escolhido que designarei para isso? Quem é como eu que possa me desafiar? E que pastor pode me resistir? "
20 ಆದದರಿಂದ ಕರ್ತನು ಎದೋಮಿಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೂ ತೇಮಾನಿನ ನಿವಾಸಿಗಳಿಗೆ ವಿರೋಧವಾಗಿ ಅವನು ಮಾಡಿದ ಯೋಚನೆಗಳನ್ನೂ ಕೇಳಿರಿ. ನಿಶ್ಚಯವಾಗಿ ಮಂದೆಯ ಮರಿಗಳು ಅವರನ್ನು ಎಳೆಯುವವು, ನಿಶ್ಚಯವಾಗಿ ಅವರ ನಿವಾಸವನ್ನು ಅವರ ಸಂಗಡ ಹಾಳುಮಾಡು ವನು.
20 Por isso, ouçam o que o Senhor planejou contra Edom, o que preparou contra os habitantes de Temã: Os menores do rebanho serão arrastados, e as pastagens ficarão devastadas por causa deles.
21 ಅವರು ಬೀಳುವ ಶಬ್ದದಿಂದ ಭೂಮಿಯು ಕದಲುವದು ಅವರ ಕೂಗಿನ ಶಬ್ದವು ಕೆಂಪು ಸಮುದ್ರ ದಲ್ಲಿ ಕೇಳಬರುವದು.
21 Ao som de sua queda a terra tremerá; o grito deles ressoará até o mar Vermelho.
22 ಇಗೋ, ಅವನು ಹದ್ದಿನಂತೆ ಹಾರುವನು; ಬೊಚ್ರದ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು; ಎದೋಮಿನ ಪರಾಕ್ರಮ ಶಾಲಿಗಳ ಹೃದಯವು ಆ ದಿವಸದಲ್ಲಿ ಪ್ರಸವ ವೇದನೆಯುಳ್ಳ ಸ್ತ್ರೀಯ ಹೃದಯದ ಹಾಗೆ ಇರುವದು.
22 Vejam! Uma águia, subindo e planando, estende as asas sobre Bozra. Naquele dia, a coragem dos guerreiros de Edom será como a de uma mulher dando à luz.
23 ದಮಸ್ಕದ ವಿಷಯವಾಗಿ ಹಮಾತೂ ಅರ್ಪಾದೂ ನಾಚಿಕೆಪಡುತ್ತವೆ; ಕೆಟ್ಟ ಸುದ್ದಿಯನ್ನು ಕೇಳಿ ಅಧೈರ್ಯ ಪಟ್ಟಿವೆ. ಸಮುದ್ರದಂತೆ ಕಳವಳಪಡುತ್ತದೆ, ಅದು ಸಮ್ಮನಿರಲಾರದು.
23 Acerca de Damasco: "Hamate e Arpade estão atônitas, pois ouviram más notícias. Estão desencorajadas, perturbadas como o mar agitado.
24 ದಮಸ್ಕವು ನಿತ್ರಾಣವಾಯಿತು; ಓಡಿ ಹೋಗುವದಕ್ಕೆ ತಿರುಗಿಕೊಳ್ಳುತ್ತದೆ; ಭಯವು ಅದನ್ನು ಹಿಡುಕೊಂಡಿದೆ. ಹೆರುವ ಸ್ತ್ರೀಯ ಹಾಗೆ ಸಂಕಟವೂ ವೇದನೆಗಳೂ ಅದನ್ನು ಹಿಡಿದವೆ.
24 Damasco tornou-se frágil, ela se virou para fugir, e o pânico tomou conta dela; angústia e dor dela se apoderaram, dor como a de uma mulher em trabalho de parto.
25 ಹೊಗಳಿಕೆಯ ಪಟ್ಟಣವೂ ನನ್ನ ಸಂತೋಷದ ಪಟ್ಟಣವೂ ಬಿಡಲ್ಪಟ್ಟಿದೆಯಲ್ಲವೋ?
25 Como está abandonada a cidade famosa, a cidade da alegria!
26 ಆದದರಿಂದ ಅದರ ಯೌವನಸ್ಥರು ಚೌಕಗಳಲ್ಲಿ ಬೀಳುವರು; ಯುದ್ಧಸ್ಥರೆಲ್ಲರೂ ಆ ದಿನದಲ್ಲಿ ಕಡಿದುಹಾಕಲ್ಪಡುವರು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
26 Por isso, os seus jovens cairão nas ruas e todos os seus guerreiros se calarão naquele dia", declara o Senhor dos exércitos.
27 ನಾನು ದಮಸ್ಕದ ಗೋಡೆಯಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಬೆನ್‌ಹದದನ ಅರಮನೆಗಳನ್ನು ತಿಂದುಬಿಡುವದು.
27 "Porei fogo nas muralhas de Damasco, que consumirá as fortalezas de Ben-Hadade. "
28 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಹೊಡೆಯಲಿಕ್ಕಿರುವ ಕೇದಾರಿನ ವಿಷಯವಾಗಿಯೂ ಹಾಚೋರಿನ ರಾಜ್ಯಗಳ ವಿಷಯವಾಗಿಯೂ ಕರ್ತನು ಹೀಗೆ ಹೇಳುತ್ತಾನೆ--ಏಳಿರಿ, ಕೇದಾರಿನ ಬಳಿಗೆ ಏರಿ ಹೋಗಿರಿ! ಪೂರ್ವದಿಕ್ಕಿನ ಮನುಷ್ಯರನ್ನು ಸುಲು ಕೊಳ್ಳಿರಿ.
28 Acerca de Quedar e os reinos de Hazor, que Nabucodonosor, rei da Babilônia, derrotou, assim diz o Senhor: "Preparem-se, ataquem Quedar e destruam o povo do oriente.
29 ಅವರ ಗುಡಾರಗಳನ್ನೂ ಮಂದೆಗಳನ್ನೂ ತಕ್ಕೊಳ್ಳುವರು; ಅವರ ತೆರೆಗಳನ್ನೂ ಎಲ್ಲಾ ಪಾತ್ರೆ ಗಳನ್ನೂ ಒಂಟೆಗಳನ್ನೂ ವಶಮಾಡಿಕೊಳ್ಳುವರು; ಸುತ್ತಲೂ ಭಯವೆಂದು ಅವರಿಗೆ ಕೂಗುವರು.
29 Tomem suas tendas e seus rebanhos, suas cortinas com todos os seus utensílios e camelos. Gritam contra eles: ‘Há terror por todos os lados! ’
30 ಹಾಚೋರಿನ ನಿವಾಸಿಗಳೇ, ಓಡಿಹೋಗಿರಿ, ದೂರಕ್ಕೆ ಹೋಗಿಬಿಡಿರಿ, ಆಳವಾದ ಸ್ಥಳದಲ್ಲಿ ವಾಸ ವಾಗಿರ್ರಿ ಎಂದು ಕರ್ತನು ಅನ್ನುತ್ತಾನೆ. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಿಮಗೆ ವಿರೋಧವಾಗಿ ಆಲೋಚನೆಯನ್ನೂ ಕಲ್ಪನೆಯನ್ನೂ ಮಾಡಿದ್ದಾನೆ.
30 "Fujam rapidamente! Escondam-se em cavernas profundas, vocês habitantes de Hazor", diz o Senhor. "Nabucodonosor, rei da Babilônia, fez planos e projetos contra vocês.
31 ಏಳಿರಿ, ಭದ್ರವಾಗಿ ವಾಸಿಸುವ ಸುಖವುಳ್ಳ ಜನಾಂಗದ ಬಳಿಗೆ ಹೋಗಿರಿ ಎಂದು ಕರ್ತನು ಅನ್ನುತ್ತಾನೆ; ಅದಕ್ಕೆ ಬಾಗಲುಗಳು ಇಲ್ಲ; ಅಗುಳಿಗಳು ಇಲ್ಲ; ಏಕಾಂತವಾಗಿ ವಾಸಮಾಡುತ್ತದೆ.
31 "Preparem-se e ataquem uma nação que vive tranqüila e confiante", declara o Senhor, "uma nação que não tem portas nem trancas, e que vive sozinha.
32 ಅವರ ಒಂಟೆಗಳು ಕೊಳ್ಳೆಯಾಗುವವು, ದನಗಳ ಸಮೂಹವು ಸುಲಿಗೆಯಾಗುವವು; ದನಗಳ ಸಮೂಹವು ಸುಲಿಗೆ ಯಾಗುವದು; ಕಟ್ಟ ಕಡೆಯ ಮೂಲೆಗಳಲ್ಲಿ ಇರುವ ವರನ್ನು ಎಲ್ಲಾ ದಿಕ್ಕುಗಳಿಗೂ ಚದರಿಸುತ್ತೇನೆ; ಎಲ್ಲಾ ಕಡೆಯಿಂದ ಅವರನ್ನು ಸಂಹರಿಸುತ್ತೇನೆಂದು ಕರ್ತನು ಅನ್ನುತ್ತಾನೆ.
32 Seus camelos se tornarão despojo e suas grandes manadas, espólio. Espalharei ao vento aqueles que raspam a cabeça, e de todos os lados trarei a ruína deles", declara o Senhor.
33 ಹಾಚೋರು ಮೃಗಗಳ ನಿವಾಸವೂ ಎಂದೆಂದಿಗೂ ಹಾಳಾದ ಸ್ಥಳವೂ ಆಗುವದು; ಅಲ್ಲಿ ಯಾವನಾದರೂ ವಾಸಮಾಡುವದಿಲ್ಲ; ಅಲ್ಲಿ ಯಾವ ನರಪುತ್ರನಾದರೂ ತಂಗುವದಿಲ್ಲ.
33 "Hazor se tornará uma habitação de chacais, uma ruína para sempre. Ninguém mais habitará ali, nenhum homem residirá nela. "
34 ಯೆಹೂದದ ಅರಸನಾದ ಚಿದ್ಕೀಯನ ಆಳಿಕೆಯ ಆರಂಭದಲ್ಲಿ ಪ್ರವಾದಿಯಾದ ಯೆರೆವಿಾಯನಿಗೆ ಕರ್ತ ನಿಂದ ಏಲಾಮಿಗೆ ವಿರೋಧವಾಗಿ ಉಂಟಾದ ವಾಕ್ಯವು ಏನಂದರೆ--
34 Esta é a palavra do Senhor que veio ao profeta Jeremias acerca de Elão, no início do reinado de Zedequias, rei de Judá:
35 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ- ಇಗೋ, ನಾನು ಏಲಾಮಿನ ಬಿಲ್ಲನ್ನೂ ಅವರ ಪರಾ ಕ್ರಮವನ್ನೂ ಶ್ರೇಷ್ಠತ್ವವನ್ನೂ ಮುರಿಯುತ್ತೇನೆ.
35 Assim diz o Senhor dos Exércitos: "Vejam, quebrarei o arco de Elão, a base de seu poder.
36 ಆಕಾಶದ ನಾಲ್ಕು ಗಾಳಿಗಳನ್ನು ತಂದು ಅವರನ್ನು ಆ ಎಲ್ಲಾ ದಿಕ್ಕುಗಳ ಕಡೆಗೆ ಚದರಿಸುವೆನು; ಏಲಾಮಿ ನಿಂದ ಓಡಿಸಲ್ಪಟ್ಟವರು ಸೇರದ ಜನಾಂಗವು ಇರುವ ದಿಲ್ಲ.
36 Farei com que os quatro ventos, que vêm dos quatro cantos do céu, soprem contra Elão. E eu os dispersarei aos quatro ventos, e não haverá nenhuma nação para onde os exilados de Elão não forem.
37 ಏಲಾಮನ್ನು ಅವರ ಶತ್ರುಗಳ ಮುಂದೆಯೂ ಪ್ರಾಣವನ್ನು ಹುಡುಕುವವರ ಮುಂದೆಯೂ ಹೆದರ ಮಾಡುವೆನು; ಅವರ ಮೇಲೆ ಕೇಡನ್ನೂ ನನ್ನ ಕೋಪದ ಉಗ್ರವನ್ನೂ ಬರಮಾಡುವೆನೆಂದು ಕರ್ತನು ಅನ್ನುತ್ತಾನೆ; ಅವರನ್ನು ಮುಗಿಸಿ ಬಿಡುವವರೆಗೆ ಕತ್ತಿಯನ್ನು ಅವರ ಹಿಂದೆ ಕಳುಹಿಸುವೆನು.
37 Farei com que Elão trema diante dos seus inimigos, diante daqueles que desejam tirar-lhes a vida. Trarei a desgraça sobre eles, a minha ira ardente", declara o Senhor. "Farei com que a espada os persiga até que eu os tenha eliminado.
38 ಇದಲ್ಲದೆ ಏಲಾಮಿನಲ್ಲಿ ನನ್ನ ಸಿಂಹಾಸನವನ್ನಿಟ್ಟು, ಅದರೊಳಗಿಂದ ಅರಸನನ್ನೂ ಪ್ರಧಾನರನ್ನೂ ನಾಶಮಾಡುವೆನೆಂದು ಕರ್ತನು ಅನ್ನುತ್ತಾನೆ.
38 Porei meu trono em Elão e destruirei seu rei e líderes", declara o Senhor.
39 ಆದಾಗ್ಯೂ ಅಂತ್ಯ ದಿವಸಗಳಲ್ಲಿ ಆಗುವದೇನಂದರೆ--ನಾನು ಏಲಾಮಿನ ಸೆರೆಯನ್ನು ತಿರುಗಿ ತರುವೆನೆಂದು ಕರ್ತನು ಅನ್ನುತ್ತಾನೆ.
39 "Contudo restaurarei a sorte de Elão em dias vindouros", declara o Senhor.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Jeremias 49, comparar traduções ou montar um estudo — tudo direto pelo WhatsApp.