Jeremias 32
Kannada Bible (GL_KANNADA) vs ACF
ACF Almeida Corrigida Fiel
1 ನೆಬೂಕದ್ನೆಚ್ಚರನ ಹದಿನೆಂಟನೇ ವರುಷವಾಗಿದ್ದ, ಚಿದ್ಕೀಯನ ಹತ್ತನೇ ವರುಷದಲ್ಲಿ ಯೆರೆವಿಾಯನಿಗೆ ಕರ್ತನಿಂದ ಉಂಟಾದ ವಾಕ್ಯವು.
1 A palavra que veio a Jeremias da parte do SENHOR, no ano décimo de Zedequias, rei de Judá, o qual foi o décimo oitavo de Nabucodonosor.
2 ಆಗ ಬಾಬೆಲಿನ ಅರಸನ ಸೈನ್ಯವು ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಿತ್ತು; ಪ್ರವಾದಿಯಾದ ಯೆರೆವಿಾಯನು ಯೆಹೂದದ ಅರಸನ ಮನೆಯಲ್ಲಿರುವ ಸೆರೆಮನೆಯ ಅಂಗಳದಲ್ಲಿ ಮುಚ್ಚಲ್ಪಟ್ಟನು.
2 Ora, nesse tempo o exército do rei de babilônia cercava Jerusalém; e Jeremias, o profeta, estava encerrado no pátio da guarda que estava na casa do rei de Judá;
3 ಯೆಹೂದದ ಅರಸನಾದ ಚಿದ್ಕೀಯನು ಯೆರೆವಿಾಯನಿಗೆ--ಕರ್ತನು ಹೇಳುವ ದೇನಂದರೆ--ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈಯಲ್ಲಿ ಕೊಡುತ್ತೇನೆ;
3 Porque Zedequias, rei de Judá, o tinha encerrado, dizendo: Por que profetizas tu, dizendo: Assim diz o SENHOR: Eis que entrego esta cidade na mão do rei de babilônia, e ele a tomará;
4 ಅವನು ಅದನ್ನು ವಶಪಡಿಸಿಕೊಳ್ಳುವನು; ಯೆಹೂದದ ಅರಸನಾದ ಚಿದ್ಕೀಯನು ಕಸ್ದೀಯರ ಕೈಗೆ ತಪ್ಪಿಸಿಕೊಳ್ಳದೆ ನಿಶ್ಚಯ ವಾಗಿ ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವನು, ಸಾಕ್ಷಾತ್ತಾಗಿ ಅವನ ಸಂಗಡ ಮಾತನಾಡುವನು; ಅವನ ಕಣ್ಣುಗಳು ಅವನ ಕಣ್ಣುಗಳನ್ನು ನೋಡುವವು.
4 E Zedequias, rei de Judá, não escapará das mãos dos caldeus; mas certamente será entregue na mão do rei de babilônia, e com ele falará boca a boca, e os seus olhos verão os dele;
5 ಅವನು ಚಿದ್ಕೀಯನನ್ನು ಬಾಬೆಲಿಗೆ ಒಯ್ಯುವನು, ನಾನು ಅವನನ್ನು ದರ್ಶಿಸುವ ವರೆಗೆ ಅಲ್ಲೇ ಇರುವನೆಂಬದಾಗಿ ಕರ್ತನು ಅನ್ನುತ್ತಾನೆ, ನೀವು ಕಸ್ದೀಯರ ಸಂಗಡ ಯುದ್ಧ ಮಾಡಿದಾಗ್ಯೂ ನಿಮಗೆ ಸಫಲವಾಗುವದಿಲ್ಲವೆಂದು ಯಾಕೆ ಪ್ರವಾದಿಸುತ್ತೀ ಎಂದು ಹೇಳಿ ಅವನನ್ನು ಸೆರೆಯಲ್ಲಿ ಹಾಕಿಸಿದನು.
5 E ele levará Zedequias para babilônia, e ali estará, até que eu o visite, diz o SENHOR e, ainda que pelejeis contra os caldeus, não ganhareis?
6 ಆಗ ಯೆರೆವಿಾಯನು ಹೇಳಿದ್ದೇನೆಂದರೆ--ಕರ್ತನ ವಾಕ್ಯವು ನನಗೆ ಬಂತು, ಹೇಗಂದರೆ--
6 Disse, pois, Jeremias: Veio a mim a palavra do Senhor, dizendo:
7 ಇಗೋ, ನಿನ್ನ ಚಿಕ್ಕಪ್ಪನಾದ ಶಲ್ಲೂಮನ ಮಗನಾದ ಹನಮೇಲನು ನಿನ್ನ ಬಳಿಗೆ ಬಂದು--ಅನಾತೋತಿನಲ್ಲಿರುವ ನನ್ನ ಹೊಲವನ್ನು ನಿನಗೋಸ್ಕರ ಕೊಂಡುಕೋ. ಅದನ್ನು ಕೊಂಡುಕೊಳ್ಳುವ ಹಾಗೆ ವಿಮೋಚಿಸುವ ಅಧಿಕಾರ ನಿನಗುಂಟು ಎಂದು ಹೇಳುವನು.
7 Eis que Hanameel, filho de Salum, teu tio, virá a ti dizendo: Compra para ti a minha herdade que está em Anatote, pois tens o direito de resgate para comprá-la.
8 ಹಾಗೆಯೇ ನನ್ನ ಚಿಕ್ಕಪ್ಪನ ಮಗನಾದ ಹನಮೇಲನು ಕರ್ತನ ವಾಕ್ಯದ ಪ್ರಕಾರ ನನ್ನ ಬಳಿಗೆ ಸೆರೆಮನೆಯ ಅಂಗಳಕ್ಕೆಬಂದು--ಬೆನ್ಯಾವಿಾನನ ದೇಶದ ಅನಾತೋತಿನಲ್ಲಿರುವ ನನ್ನ ಹೊಲವನ್ನು ನಿನಗೋಸ್ಕರ ಕೊಂಡುಕೋ, ಬಾಧ್ಯದ ಅಧಿಕಾರವೂ ವಿಮೋಚನೆಯೂ ನಿನ್ನದು; ಅದನ್ನು ನಿನಗೋಸ್ಕರ ಕೊಂಡುಕೋ ಎಂದು ಬೇಡಿಕೊಂಡು ಹೇಳಿದನು. ಆಗ ಅದು ಕರ್ತನ ವಾಕ್ಯವೆಂದು ನಾನು ತಿಳುಕೊಂಡೆನು.
8 Veio, pois, a mim Hanameel, filho de meu tio, segundo a palavra do Senhor, ao pátio da guarda, e me disse: Compra agora a minha herdade que está em Anatote, na terra de Benjamim; porque teu é o direito de herança, e tens o resgate; compra-a para ti. Então entendi que isto era a palavra do Senhor.
9 ಹಾಗೆ ನಾನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನಿಂದ ಅನಾತೋತಿನಲ್ಲಿದ್ದ ಹೊಲವನ್ನು ಕೊಂಡುಕೊಂಡು ಅವನಿಗೆ ಹದಿನೇಳು ಬೆಳ್ಳಿ ಶೇಕೆಲುಗಳನ್ನು ತೂಕ ಮಾಡಿ ಕ್ರಯಕೊಟ್ಟೆನು.
9 Comprei, pois, a herdade de Hanameel, filho de meu tio, a qual está em Anatote; e pesei-lhe o dinheiro, dezessete siclos de prata.
10 ನಾನು ಪತ್ರದಲ್ಲಿ ಬರೆದು, ಅದಕ್ಕೆ ಮುದ್ರೆ ಹಾಕಿ, ಸಾಕ್ಷಿಗಳನ್ನಿಟ್ಟು ಬೆಳ್ಳಿಯನ್ನು ತ್ರಾಸಿನಲ್ಲಿ ತೂಕ ಮಾಡಿ ದೆನು.
10 E assinei a escritura, e selei-a, e fiz confirmar por testemunhas; e pesei-lhe o dinheiro numa balança.
11 ಆಗ ನಾನು ಆಜ್ಞೆ ನಿಯಮಗಳ ಪ್ರಕಾರ ಮುದ್ರೆ ಹಾಕಿದ ಕ್ರಯಪತ್ರವನ್ನೂ ತೆರೆದಿರುವದನ್ನೂ ತಕ್ಕೊಂಡೆನು.
11 E tomei a escritura da compra, selada segundo a lei e os estatutos, e a cópia aberta.
12 ಆ ಕ್ರಯಪತ್ರವನ್ನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನ ಮುಂದೆಯೂ ಕ್ರಯಪತ್ರ ದಲ್ಲಿ ರುಜು ಹಾಕಿದ ಸಾಕ್ಷಿಗಳ ಮುಂದೆಯೂ ಸೆರೆ ಮನೆಯ ಅಂಗಳದಲ್ಲಿ ಕೂತುಕೊಂಡಿದ್ದ ಯೆಹೂದ್ಯ ರೆಲ್ಲರ ಮುಂದೆಯೂ ಮಹ್ಸೇಮನ ಮಗನಾದ ನೇರೀ ಯನ ಮಗನಾದ ಬಾರೂಕನಿಗೆ ಕೊಟ್ಟೆನು.
12 E dei a escritura da compra a Baruque, filho de Nerias, filho de Maaséias, na presença de Hanameel, filho de meu tio e na presença das testemunhas, que subscreveram a escritura da compra, e na presença de todos os judeus que se assentavam no pátio da guarda.
13 ಅವರ ಮುಂದೆ ನಾನು ಬಾರೂಕನಿಗೆ ಅಪ್ಪಣೆ ಕೊಟ್ಟದ್ದೇ ನಂದರೆ--
13 E dei ordem a Baruque, na presença deles, dizendo:
14 ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಈ ಪತ್ರಗಳನ್ನು ಅಂದರೆ ಮುದ್ರೆ ಹಾಕಿದ ಈ ಕ್ರಯಪತ್ರವನ್ನೂ ತೆರೆದಿರುವ ಈ ಪತ್ರವನ್ನೂ ತೆಗೆದು ಅವು ಬಹಳ ದಿವಸವಿರುವ ಹಾಗೆ ಅವುಗಳನ್ನು ಒಂದು ಮಣ್ಣಿನ ಪಾತ್ರೆಯಲ್ಲಿ ಇಡು.
14 Assim diz o Senhor dos Exércitos, o Deus de Israel: Toma estas escrituras, este auto de compra, tanto a selada, como a aberta, e coloca-as num vaso de barro, para que se possam conservar muitos dias.
15 ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು --ಈ ದೇಶದಲ್ಲಿ ತಿರುಗಿ ಮನೆಗಳೂ ಹೊಲಗಳೂ ದ್ರಾಕ್ಷೇ ತೋಟಗಳೂ ಸ್ವಾಧೀನವಾಗುವವೆಂದು ಹೇಳುತ್ತಾನೆ.
15 Porque assim diz o Senhor dos Exércitos, o Deus de Israel: Ainda se comprarão casas, e campos, e vinhas nesta terra.
16 ನಾನು ಆ ಕ್ರಯಪತ್ರವನ್ನು ನೇರೀಯನ ಮಗ ನಾದ ಬಾರೂಕನಿಗೆ ಕೊಟ್ಟ ಮೇಲೆ ಕರ್ತನಿಗೆ ಹೀಗೆ ಪ್ರಾರ್ಥನೆ ಮಾಡಿದೆನು--
16 E depois que dei a escritura da compra a Baruque, filho de Nerias, orei ao Senhor, dizendo:
17 ಓ ಕರ್ತನಾದ ದೇವರೇ, ಇಗೋ, ನೀನು ನಿನ್ನ ಮಹಾಬಲದಿಂದ ನಿನ್ನ ಕೈಚಾಚಿ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ್ದೀ; ನಿನಗೆ ಕಠಿಣವಾದ ಕಾರ್ಯ ಒಂದೂ ಇಲ್ಲ.
17 Ah Senhor DEUS! Eis que tu fizeste os céus e a terra com o teu grande poder, e com o teu braço estendido; nada há que te seja demasiado difícil;
18 ನೀನು ಸಾವಿರಾರು ತಲೆಗಳ ವರೆಗೆ ಪ್ರೀತಿ, ದಯೆ ತೋರಿಸಿ ತಂದೆಗಳ ಅಕ್ರಮವನ್ನು ಅವರ ತರುವಾಯ ಇರುವ ಅವರ ಮಕ್ಕಳ ಎದೆಯಲ್ಲಿ ಸಲ್ಲಿಸುವವನಾಗಿದ್ದೀ; ಮಹತ್ವ ವುಳ್ಳವನೂ ಪರಾಕ್ರಮವುಳ್ಳ ದೇವರೂ ಸೈನ್ಯಗಳ ಕರ್ತನೂ ಎಂಬದು ಆತನ ಹೆಸರು.
18 Tu que usas de benignidade com milhares, e retribuis a maldade dos pais ao seio dos filhos depois deles; o grande, o poderoso Deus cujo nome é o Senhor dos Exércitos;
19 ಆಲೋಚನೆ ಯಲ್ಲಿ ದೊಡ್ಡವನು ಕ್ರಿಯೆಯಲ್ಲಿ ಬಲಿಷ್ಠನು; ನಿನ್ನ ಕಣ್ಣುಗಳು ಮನುಷ್ಯರ ಮಕ್ಕಳ ಎಲ್ಲಾ ಮಾರ್ಗಗಳ ಮೇಲೆ ಒಬ್ಬೊಬ್ಬನಿಗೆ ಅವನವನ ಮಾರ್ಗದ ಪ್ರಕಾರ ವಾಗಿಯೂ ಅವನವನ ಕ್ರಿಯೆಗಳ ಫಲದ ಪ್ರಕಾರ ವಾಗಿಯೂ ಕೊಡುವ ಹಾಗೆ ತೆರೆದವೆ.
19 Grande em conselho, e magnífico em obras; porque os teus olhos estão abertos sobre todos os caminhos dos filhos dos homens, para dar a cada um segundo os seus caminhos e segundo o fruto das suas obras;
20 ನೀನು ಈ ದಿನದ ವರೆಗೂ ಐಗುಪ್ತ ದೇಶದಲ್ಲಿಯೂ ಇಸ್ರಾ ಯೇಲಿನಲ್ಲಿಯೂ ಮನುಷ್ಯರೊಳಗೆ ಗುರುತುಗಳನ್ನೂ ಲಕ್ಷಣಗಳನ್ನೂ ಇಟ್ಟಿದ್ದೀ; ಇಂದಿನ ಪ್ರಕಾರ ನಿನಗೆ ಹೆಸರನ್ನು ಉಂಟುಮಾಡಿಕೊಂಡಿದ್ದೀ.
20 Tu puseste sinais e maravilhas na terra do Egito até ao dia de hoje, tanto em Israel, como entre os outros homens, e te fizeste um nome, o qual tu tens neste dia.
21 ನಿನ್ನ ಜನರಾದ ಇಸ್ರಾಯೇಲನ್ನು ಗುರುತುಗಳಿಂದಲೂ ಲಕ್ಷಣಗಳಿಂ ದಲೂ ಬಲವಾದ ಕೈಯಿಂದಲೂ ಚಾಚಿದ ತೋಳಿ ನಿಂದಲೂ ಮಹಾಭಯದಿಂದಲೂ ಐಗುಪ್ತದೇಶದೊಳ ಗಿಂದ ಹೊರಗೆ ತಂದಿದ್ದೀ.
21 E tiraste o teu povo Israel da terra do Egito, com sinais e com maravilhas, e com mão forte, e com braço estendido, e com grande espanto,
22 ಅವರ ತಂದೆಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಹಾಲೂ ಜೇನೂ ಹರಿಯುವ ದೇಶವಾದ ಈ ದೇಶವನ್ನು ಅವರಿಗೆ ಕೊಟ್ಟಿದ್ದೀ.
22 E lhes deste esta terra, que juraste a seus pais que lhes havias de dar, terra que mana leite e mel.
23 ಅವರು ಅದರಲ್ಲಿ ಸೇರಿ ಅದನ್ನು ಸ್ವಾಧೀನಪಡಿಸಿಕೊಂಡರು; ಆದರೆ ಅವರು ನಿನ್ನ ಸ್ವರಕ್ಕೆ ಕಿವಿಗೊಡಲಿಲ್ಲ; ನಿನ್ನ ನ್ಯಾಯಪ್ರಮಾಣದಲ್ಲಿ ನಡಕೊಳ್ಳ ಲಿಲ್ಲ; ಮಾಡಬೇಕೆಂದು ನೀನು ಅವರಿಗೆ ಆಜ್ಞಾಪಿಸಿ ದ್ದನ್ನೆಲ್ಲಾ ಮಾಡಲಿಲ್ಲ. ಆದದರಿಂದ ಈ ಕೇಡನ್ನೆಲ್ಲಾ ಅವರಿಗೆ ಸಂಭವಿಸುವಂತೆ ಮಾಡಿದ್ದೀ.
23 E entraram nela, e a possuíram, mas não obedeceram à tua voz, nem andaram na tua lei; tudo o que lhes mandaste que fizessem, eles não o fizeram; por isso ordenaste lhes sucedesse todo este mal.
24 ಇಗೋ, ಪರ್ವತಗಳು ಪಟ್ಟಣದ ಬಳಿಗೆ ಅದನ್ನು ಹಿಡಿಯುವ ಹಾಗೆ ಬಂದಿವೆ; ಪಟ್ಟಣವು ಅದಕ್ಕೆ ವಿರೋಧವಾಗಿ ಯುದ್ಧ ಮಾಡುವ ಕಸ್ದೀಯರ ಕೈಯಲ್ಲಿ ಕತ್ತಿ, ಕ್ಷಾಮ, ಜಾಡ್ಯಗಳ ಮೂಲಕವಾಗಿ ಒಪ್ಪಿಸಲ್ಪಟ್ಟಿದೆ; ನೀನು ಹೇಳಿದ್ದು ಉಂಟಾಯಿತು; ಇಗೋ, ನೀನು ಅದನ್ನು ನೋಡುತ್ತೀ.
24 Eis aqui os valados; já vieram contra a cidade para tomá-la, e a cidade está entregue na mão dos caldeus, que pelejam contra ela, pela espada, pela fome e pela pestilência; e o que disseste se cumpriu, e eis aqui o estás presenciando.
25 ಆದರೂ ಓ ಕರ್ತನಾದ ದೇವರೇ, ನೀನು ನನಗೆ--ಹೊಲವನ್ನು ಹಣಕ್ಕೆ ಕೊಂಡುಕೋ; ಸಾಕ್ಷಿಗಳನ್ನು ಇಡು ಎಂದು ಹೇಳಿದ್ದೀ; ಆದಾಗ್ಯೂ ಪಟ್ಟಣವು ಕಸ್ದೀಯರ ಕೈಯಲ್ಲಿ ಒಪ್ಪಿಸಲ್ಪಟ್ಟಿದೆಯಲ್ಲಾ?
25 Contudo tu me disseste, ó Senhor DEUS: Compra para ti o campo por dinheiro, e faze que o confirmem testemunhas, embora a cidade já esteja entregue na mão dos caldeus.
26 ಆಗ ಕರ್ತನ ವಾಕ್ಯವು ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ--
26 Então veio a palavra do Senhor a Jeremias, dizendo:
27 ಇಗೋ, ನಾನೇ ಕರ್ತನು, ಸಮಸ್ತ ಜನರ ದೇವರು; ನನಗೆ ಕಠಿಣವಾದ ಕಾರ್ಯ ಒಂದಾದರೂ ಉಂಟೋ?
27 Eis que eu sou o Senhor, o Deus de toda a carne; acaso haveria alguma coisa demasiado difícil para mim?
28 ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ಪಟ್ಟಣವನ್ನು ಕಸ್ದೀಯರ ಕೈಯಲ್ಲಿಯೂ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿಯೂ ಒಪ್ಪಿಸು ತ್ತೇನೆ; ಅವನು ಅದನ್ನು ವಶಪಡಿಸಿಕೊಳ್ಳುವನು.
28 Portanto assim diz o SENHOR: Eis que eu entrego esta cidade na mão dos caldeus, e na mão de Nabucodonosor, rei de babilônia, e ele a tomará.
29 ಈ ಪಟ್ಟಣಕ್ಕೆ ವಿರೋಧವಾಗಿ ಯುದ್ಧಮಾಡುವ ಕಸ್ದೀಯರು ಬಂದು ಈ ಪಟ್ಟಣಕ್ಕೆ ಬೆಂಕಿ ಹಚ್ಚಿ ಅದನ್ನೂ ಮತ್ತು ಯಾವ ಮನೆಗಳ ಮಾಳಿಗೆಗಳ ಮೇಲೆ ಬಾಳನಿಗೆ ಧೂಪವರ್ಪಿಸಿ ನನಗೆ ಕೋಪದ್ರೇಕ ಎಬ್ಬಿಸುವ ಹಾಗೆ ಬೇರೆ ದೇವರುಗಳಿಗೆ ಪಾನದ ಅರ್ಪಣೆಗಳನ್ನು ಹೊಯಿ ದಿದ್ದಾರೋ ಅವುಗಳನ್ನು ಸುಟ್ಟುಬಿಡುವರು.
29 E os caldeus, que pelejam contra esta cidade, entrarão nela, e pôr-lhe-ão fogo, e queimarão, as casas sobre cujos terraços queimaram incenso a Baal e ofereceram libações a outros deuses, para me provocarem à ira.
30 ಇಸ್ರಾ ಯೇಲಿನ ಮಕ್ಕಳೂ ಯೆಹೂದದ ಮಕ್ಕಳೂ ತಮ್ಮ ಯೌವನದಾರಭ್ಯ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದ್ದಾರೆ; ಇಸ್ರಾಯೇಲಿನ ಮಕ್ಕಳು ತಮ್ಮ ಕೈ ಕೆಲಸಗಳಿಂದ ನನಗೆ ಕೋಪೋದ್ರೇಕವನ್ನೇ ಎಬ್ಬಿಸಿದ್ದಾರೆ ಎಂದು ಕರ್ತನು ಅನ್ನುತ್ತಾನೆ.
30 Porque os filhos de Israel e os filhos de Judá não fizeram senão mal aos meus olhos, desde a sua mocidade; porque os filhos de Israel nada fizeram senão provocar-me à ira com as obras das suas mãos, diz o Senhor.
31 ಈ ಪಟ್ಟಣವು ಅದು ಕಟ್ಟಲ್ಪಟ್ಟ ದಿನವು ಮೊದಲುಗೊಂಡು ಈ ದಿನದ ವರೆಗೂ ನನ್ನ ಕೋಪಕ್ಕೂ ಉಗ್ರಕ್ಕೂ ಗುರಿಯಾಗಿತ್ತು.
31 Porque para a minha ira e para o meu furor me tem sido esta cidade, desde o dia em que a edificaram, e até ao dia de hoje, para que a tirasse da minha presença;
32 ಇಸ್ರಾಯೇಲಿನ ಮಕ್ಕಳೂ ಯೆಹೂದನ ಮಕ್ಕಳೂ ಅವರ ಅರಸರೂ ಪ್ರಧಾನರೂ ಯಾಜಕರೂ ಪ್ರವಾದಿ ಗಳೂ ಯೆಹೂದದ ಜನರೂ ಯೆರೂಸಲೇಮಿನ ನಿವಾಸಿಗಳೂ ಸಹಿತವಾಗಿ ನನಗೆ ಕೋಪೋದ್ರೇಕ ಎಬ್ಬಿಸುವ ಹಾಗೆ ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತ ನಾನು ಆ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತೆಗೆದುಹಾಕಬೇಕು.
32 Por causa de toda a maldade dos filhos de Israel, e dos filhos de Judá, que fizeram, para me provocarem à ira, eles e os seus reis, os seus príncipes, os seus sacerdotes, e os seus profetas, como também os homens de Judá e os moradores de Jerusalém.
33 ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ; ಆದರೂ ನಾನು ಅವರಿಗೆ ಬೋಧಿಸಿದೆನು. ಬೆಳಿಗ್ಗೆ ಎದ್ದು ಬೋಧಿಸಿದೆನು, ಆದಾಗ್ಯೂ ಉಪದೇಶ ಹೊಂದುವದಕ್ಕೆ ಅವರು ಕಿವಿ ಗೊಡಲಿಲ್ಲ.
33 E viraram-me as costas, e não o rosto; ainda que eu os ensinava, madrugando e ensinando-os, contudo eles não deram ouvidos, para receberem o ensino.
34 ಆದರೆ ನನ್ನ ಹೆಸರಿನಿಂದ ಕರೆಯ ಲ್ಪಟ್ಟಿರುವ ಮನೆಯಲ್ಲಿ ಅದನ್ನು ಅಪವಿತ್ರ ಮಾಡುವ ಹಾಗೆ ತಮ್ಮ ಅಸಹ್ಯಗಳನ್ನು ಇಟ್ಟಿದ್ದಾರೆ.
34 Antes puseram as suas abominações na casa que se chama pelo meu nome, para a profanarem.
35 ತಮ್ಮ ಕುಮಾರ ಕುಮಾರ್ತೆಯರನ್ನು ಮೋಲೆಕನಿಗೆ ಬೆಂಕಿ ದಾಟಿಸುವ ಹಾಗೆ ಹಿನ್ನೋಮನ ಮಗನ ಉನ್ನತ ಸ್ಥಳಗಳನ್ನು ಕಟ್ಟಿಸಿದ್ದಾರೆ; ಅದನ್ನು ನಾನು ಅವರಿಗೆ ಆಜ್ಞಾಪಿಸಲಿಲ್ಲ; ಅಂಥಾ ಅಸಹ್ಯ ನಡಿಸಿ, ಯೆಹೂದ ವನ್ನು ಪಾಪ ಮಾಡಿಸುವದು ನನ್ನ ಮನಸ್ಸಿನೊಳಗೆ ಬರಲಿಲ್ಲ.
35 E edificaram os altos de Baal, que estão no Vale do Filho de Hinom, para fazerem passar seus filhos e suas filhas pelo fogo a Moloque; o que nunca lhes ordenei, nem veio ao meu coração, que fizessem tal abominação, para fazerem pecar a Judá.
36 ಹೀಗಾದರೂ ಈಗ ಅದು ಕತ್ತಿಯಿಂದಲೂ ಬರದಿಂದಲೂ ಜಾಡ್ಯದಿಂದಲೂ ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವದೆಂದು ನೀವು ಹೇಳುವ ಈ ಪಟ್ಟಣದ ವಿಷಯ ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ--
36 E por isso agora assim diz o SENHOR, o Deus de Israel, acerca desta cidade, da qual vós dizeis: Já está dada na mão do rei de babilônia, pela espada, pela fome, e pela pestilência:
37 ಇಗೋ, ನಾನು ನನ್ನ ಕೋಪ ದಲ್ಲಿಯೂ ಉಗ್ರದಲ್ಲಿಯೂ ಮಹಾ ರೌದ್ರದಲ್ಲಿಯೂ ಅವರನ್ನು ಓಡಿಸಿಬಿಟ್ಟ ಸಮಸ್ತ ದೇಶಗಳೊಳಗಿಂದ ಅವರನ್ನು ಕೂಡಿಸಿ ಈ ಸ್ಥಳಕ್ಕೆ ತಿರಿಗಿ ತಂದು ಭದ್ರವಾಗಿ ವಾಸಿಸುವಂತೆ ಮಾಡುವೆನು.
37 Eis que eu os congregarei de todas as terras, para onde os tenho lançado na minha ira, e no meu furor, e na minha grande indignação; e os tornarei a trazer a este lugar, e farei que habitem nele seguramente.
38 ಅವರು ನನಗೆ ಜನರಾಗಿರುವರು; ನಾನು ಅವರಿಗೆ ದೇವರಾಗಿರುವೆನು.
38 E eles serão o meu povo, e eu lhes serei o seu Deus;
39 ಅವರಿಗೂ ಅವರ ತರುವಾಯ ಅವರ ಮಕ್ಕಳಿಗೂ ಒಳ್ಳೇದಕ್ಕಾಗಿ ಅವರು ಯಾವಾಗಲೂ ನನಗೆ ಭಯ ಪಡುವ ಹಾಗೆ ಅವರಿಗೆ ಒಂದೇ ಹೃದಯವನ್ನೂ ಒಂದೇ ಮಾರ್ಗವನ್ನೂ ಕೊಡುವೆನು.
39 E lhes darei um mesmo coração, e um só caminho, para que me temam todos os dias, para seu bem, e o bem de seus filhos, depois deles.
40 ಅವರಿಗೆ ಒಳ್ಳೇದನ್ನು ಮಾಡುವ ಹಾಗೆ ನಾನು ತಿರುಗಿಸಿ ಬಿಡೆನೆಂದು ನಿತ್ಯವಾದ ಒಡಂಬಡಿಕೆಯನ್ನು ಅವರ ಸಂಗಡ ಮಾಡುತ್ತೇನೆ; ಅವರು ನನ್ನನ್ನು ಬಿಡದ ಹಾಗೆ ನನ್ನ ಭಯವನ್ನು ಅವರ ಹೃದಯಗಳಲ್ಲಿ ಇಡುತ್ತೇನೆ.
40 E farei com eles uma aliança eterna de não me desviar de fazer-lhes o bem; e porei o meu temor nos seus corações, para que nunca se apartem de mim.
41 ಹೌದು, ಅವರಿಗೆ ಒಳ್ಳೇದನ್ನು ಮಾಡುವದಕ್ಕೆ ಅವ ರೊಂದಿಗೆ ಆನಂದಪಡುವೆನು; ನಿಜವಾಗಿ ನನ್ನ ಪೂರ್ಣ ಹೃದಯದಿಂದಲೂ ನನ್ನ ಪೂರ್ಣ ಪ್ರಾಣದಿಂದಲೂ ಅವರನ್ನು ಈ ದೇಶದಲ್ಲಿ ನೆಡುತ್ತೇನೆ.
41 E alegrar-me-ei deles, fazendo-lhes bem; e plantá-los-ei nesta terra firmemente, com todo o meu coração e com toda a minha alma.
42 ಕರ್ತನು ಹೀಗೆ ಹೇಳುತ್ತಾನೆ--ನಾನು ಹೇಗೆ ಈ ಜನರ ಮೇಲೆ ದೊಡ್ಡ ಕೇಡನ್ನು ಬರಮಾಡಿದೆನೋ ಹಾಗೆಯೇ ನಾನು ಅವರಿಗೆ ವಾಗ್ದಾನದ ಮೇಲನ್ನೆಲ್ಲಾ ಅವರ ಮೇಲೆ ಬರಮಾಡುವೆನು.
42 Porque assim diz o Senhor: Como eu trouxe sobre este povo todo este grande mal, assim eu trarei sobre ele todo o bem que lhes tenho declarado.
43 ಯಾವದರ ವಿಷಯ--ಅದು ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾಯಿತು. ಕಸ್ದೀಯರ ಕೈಯಲ್ಲಿ ಒಪ್ಪಿಸಲ್ಪಟ್ಟಿದೆ ಎಂದು ನೀವು ಹೇಳುತ್ತೀರೋ ಆ ದೇಶದಲ್ಲಿ ಇನ್ನು ಹೊಲಗಳು ಕೊಂಡುಕೊಳ್ಳಲ್ಪಡುವವು.
43 E comprar-se-ão campos nesta terra, da qual vós dizeis: Está desolada, sem homens, sem animais; está entregue na mão dos caldeus.
44 ಬೆನ್ಯಾವಿಾನನ ದೇಶದ ಲ್ಲಿಯೂ ಯೆರೂಸಲೇಮಿನ ಪ್ರದೇಶಗಳಲ್ಲಿಯೂ ಯೆಹೂದದ ಪಟ್ಟಣಗಳಲ್ಲಿಯೂ ಬೆಟ್ಟದ ಪಟ್ಟಣಗಳ ಲ್ಲಿಯೂ ತಗ್ಗಿನ ಪಟ್ಟಣಗಳಲ್ಲಿಯೂ ದಕ್ಷಿಣದ ಪಟ್ಟಣಗಳ ಲ್ಲಿಯೂ ಹೊಲಗಳನ್ನು ಹಣಕ್ಕೆ ಕೊಂಡುಕೊಂಡು ಪತ್ರಗಳನ್ನು ಬರೆದು ಮುದ್ರೆ ಹಾಕಿ ಸಾಕ್ಷಿಗಳನ್ನು ಇಟ್ಟುಕೊಳ್ಳುವರು; ನಾನು ಅವರ ಸೆರೆಯಿಂದ ಹಿಂದಿರು ಗುವಂತೆ ಮಾಡುವೆನು ಎಂದು ಕರ್ತನು ಅನ್ನುತ್ತಾನೆ.
44 Comprarão campos por dinheiro, e assinarão as escrituras, e as selarão, e farão que confirmem testemunhas, na terra de Benjamim, e nos contornos de Jerusalém, e nas cidades de Judá, e nas cidades das montanhas, e nas cidades das planícies, e nas cidades do sul; porque os farei voltar do seu cativeiro, diz o Senhor.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Jeremias 32, comparar traduções ou montar um estudo — tudo direto pelo WhatsApp.