Jeremias 22
Kannada Bible (GL_KANNADA) vs ARIB
ARIB Almeida Revisada Imprensa Bíblica
1 ಕರ್ತನು ಹೀಗೆ ಹೇಳುತ್ತಾನೆ--ಯೆಹೂದದ ಅರಸನ ಮನೆಗೆ ಇಳಿದು ಹೋಗಿ ಅಲ್ಲಿ ಈ ವಾಕ್ಯವನ್ನು ಹೇಳು.
1 Assim diz o Senhor: Desce à casa do rei de Judá, e anuncia ali esta palavra.
2 ಹೇಗಂದರೆ--ದಾವೀ ದನ ಸಿಂಹಾಸನದ ಮೇಲೆ ಕೂತುಕೊಳ್ಳುವ ಯೆಹೂದದ ಅರಸನೇ, ನೀನೂ ನಿನ್ನ ಸೇವಕರೂ ಈ ಬಾಗಿಲುಗಳಿಂದ ಪ್ರವೇಶಿಸುವ ನಿನ್ನ ಜನರೂ ಕರ್ತನ ವಾಕ್ಯವನ್ನು ಕೇಳಲಿ, ಕರ್ತನು ಹೇಳುವದೇನಂದರೆ--
2 E dize: Ouve a palavra do Senhor, ó rei de Judá, que te assentas no trono de Davi; ouvi, tu, e os teus servos, e o teu povo, que entrais por estas portas.
3 ನ್ಯಾಯವನ್ನೂ ನೀತಿಯನ್ನೂ ನಡಿಸಿರಿ; ಸುಲಿಗೆಯಾದ ವನನ್ನು ಬಲಾತ್ಕಾರಿಯ ಕೈಯೊಳಗಿಂದ ತಪ್ಪಿಸಿರಿ; ಪರದೇಶಸ್ಥನಿಗೆ ದಿಕ್ಕಿಲ್ಲದವನಿಗೆ ವಿಧವೆಗೆ ಉಪದ್ರವವ ನ್ನಾದರೂ ಬಲಾತ್ಕಾರವನ್ನಾದರೂ ಮಾಡಬೇಡಿರಿ; ಇಲ್ಲವೆ ಈ ಸ್ಥಳದಲ್ಲಿ ನಿರಪರಾಧದ ರಕ್ತವನ್ನು ಚೆಲ್ಲ ಬೇಡಿರಿ.
3 Assim diz o Senhor: Exercei o juízo e a justiça, e livrai o espoliado da mão do opressor. Não façais nenhum mal ou violência ao estrangeiro, nem ao órfão, nem a viúva; não derrameis sangue inocente neste lugar.
4 ನೀವು ನಿಶ್ಚಯವಾಗಿ ಈ ಕಾರ್ಯವನ್ನು ಮಾಡಿದರೆ ದಾವೀದನ ಸಿಂಹಾಸನದ ಮೇಲೆ ಕೂತುಕೊಳ್ಳು ವವರೂ ರಥಗಳಲ್ಲಿಯೂ ಕುದುರೆಗಳ ಮೇಲೆಯೂ ಸವಾರಿಮಾಡುವ ಅರಸರ ತಮ್ಮ ಸೇವಕರ ಜನರ ಸಹಿತವಾಗಿ, ಈ ಮನೆಯ ಬಾಗಿಲುಗಳಿಂದ ಪ್ರವೇಶಿಸು ವರು.
4 Pois se deveras cumprirdes esta palavra, entrarão pelas portas desta casa reis que se assentem sobre o trono de Davi, andando em carros e montados em cavalos, eles, e os seus servos, e o seu povo.
5 ನೀವು ಈ ವಾಕ್ಯಗಳನ್ನು ಕೇಳದೆಹೋದರೆ, ಈ ಮನೆ ಹಾಳಾಗುವದೆಂದು ನನ್ನ ಮೇಲೆ ಆಣೆ ಇಡುತ್ತೇನೆ ಎಂದು ಕರ್ತನು ಅನ್ನುತ್ತಾನೆ.
5 Mas se não derdes ouvidos a estas palavras, por mim mesmo tenho jurado, diz o Senhor, que esta casa se tornará em assolação.
6 ಕರ್ತನು ಯೆಹೂದದ ಅರಸನ ಮನೆಗೆ ಹೀಗೆ ಹೇಳುತ್ತಾನೆ --ನೀನು ನನಗೆ ಗಿಲ್ಯಾದೂ ಲೆಬನೋನಿನ ತಲೆಯೂ ಆಗಿದ್ದೀ; ಆದರೂ ನಿಶ್ಚಯವಾಗಿ ನಿನ್ನನ್ನು ಅರಣ್ಯ ವಾಗಿಯೂ ನಿವಾಸಿಗಳಿಲ್ಲದ ಪಟ್ಟಣಗಳಾಗಿಯೂ ಮಾಡುವೆನು.
6 Pois assim diz o Senhor acerca da casa do rei de Judá: Tu és para mim Gileade, e a cabeça do Líbano; todavia certamente farei de ti um deserto e cidades desabitadas.
7 ನಿನಗೆ ವಿರೋಧವಾಗಿ ತಮ್ಮತಮ್ಮ ಆಯುಧಗಳಿಂದ ನಾಶಮಾಡುವವರನ್ನು ಸಿದ್ಧಮಾಡು ತ್ತೇನೆ; ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಕಡಿದು ಬೆಂಕಿಯಲ್ಲಿ ಹಾಕುವರು.
7 E prepararei contra ti destruidores, cada um com as suas armas; os quais cortarão os teus cedros escolhidos, e os lançarão no fogo.
8 ಅನೇಕ ಜನಾಂಗಗಳು ಈ ಪಟ್ಟಣವನ್ನು ಹಾದುಹೋಗುವರು, ಕರ್ತನು ಈ ದೊಡ್ಡ ಪಟ್ಟಣಕ್ಕೆ ಯಾಕೆ ಈ ಪ್ರಕಾರ ಮಾಡಿ ದ್ದಾನೆಂದು ನೆರೆಯವರು ಒಬ್ಬರಿಗೊಬ್ಬರು ಹೇಳಿಕೊಳ್ಳು ವರು.
8 E muitas nações passarão por esta cidade, e dirá cada um ao seu companheiro: Por que procedeu o Senhor assim com esta grande cidade?
9 ಆಗ ಅವರು--ತಮ್ಮ ದೇವರಾದ ಕರ್ತನ ಒಡಂಬಡಿಕೆಯನ್ನು ಬಿಟ್ಟು, ಬೇರೆ ದೇವರುಗಳಿಗೆ ನಮ ಸ್ಕರಿಸಿ ಸೇವಿಸಿದ್ದರಿಂದಲೇ ಎಂದು ಅವರು ಉತ್ತರ ಕೊಡುವರು.
9 Então responderão: Porque deixaram o pacto do Senhor seu Deus, e adoraram a outros deuses, e os serviram.
10 ಸತ್ತವನಿಗಾಗಿ ಅಳಬೇಡಿರಿ; ಅವನಿಗಾಗಿ ಗೋಳಾ ಡಬೇಡಿರಿ; ಹೊರಟುಹೋದವನಿಗಾಗಿ ಬಹಳವಾಗಿ ಅಳಿರಿ. ಅವನು ತಿರುಗಿ ಬರುವದೇ ಇಲ್ಲ. ತಾನು ಹುಟ್ಟಿದ ದೇಶವನ್ನು ಇನ್ನು ನೋಡುವದೇ ಇಲ್ಲ.
10 Não choreis o morto, nem o lastimeis; mas chorai amargamente aquele que sai; porque não voltará mais, nem verá a terra onde nasceu.
11 ಯೆಹೂದದ ಅರಸನಾದ ಯೋಷೀಯನ ಮಗನು ತನ್ನ ತಂದೆಯಾದ ಯೋಷೀಯನಿಗೆ ಬದಲಾಗಿ ಆಳಿದವನೂ ಈ ಸ್ಥಳವನ್ನು ಬಿಟ್ಟು ಹೋದವನೂ ಆದ ಶಲ್ಲೂಮನನ್ನು ಕುರಿತು ಕರ್ತನು ಹೀಗೆ ಹೇಳು ತ್ತಾನೆ--ಅವನು ಇನ್ನು ಇಲ್ಲಿಗೆ ತಿರುಗಿ ಬರುವದೇ ಇಲ್ಲ.
11 Pois assim diz o Senhor acerca de Salum, filho de Josias, rei de Judá, que reinou em lugar de Josias seu pai, que saiu deste lugar: Nunca mais voltará para cá,
12 ಅವರು ಅವನನ್ನು ಸೆರೆಯಾಗಿ ಒಯ್ದ ಸ್ಥಳದ ಲ್ಲಿಯೇ ಸಾಯುವನು; ಈ ದೇಶವನ್ನು ಇನ್ನು ನೋಡು ವದೇ ಇಲ್ಲ;
12 mas no lugar para onde o levaram cativo morrerá, e nunca mais verá esta terra.
13 ಅನೀತಿಯಿಂದ ತನ್ನ ಮನೆಯನ್ನು ಅನ್ಯಾಯದಿಂದ ತನ್ನ ಕೊಠಡಿಗಳನ್ನು ಕಟ್ಟಿಸಿಕೊಳ್ಳು ವವನಿಗೂ ಕೂಲಿಕೊಡದೆ ತನ್ನ ನೆರೆಯವನ ಕೈಯಿಂದ ಸುಮ್ಮನೆ ಕೆಲಸತಕ್ಕೊಳ್ಳುವವನಿಗೂ ಅಯ್ಯೋ!
13 Ai daquele que edifica a sua casa com iniqüidade, e os seus aposentos com injustiça; que se serve do trabalho do seu próximo sem remunerá-lo, e não lhe dá o salário;
14 ಅವನು--ನಾನು ವಿಸ್ತಾರವಾದ ಮನೆಯನ್ನೂ ವಿಶಾಲವಾದ ಕೊಠಡಿಗಳನ್ನೂ ಕಟ್ಟಿಕೊಳ್ಳುವೆನೆಂದು ಹೇಳಿ ಕಿಟಕಿಗಳನ್ನು ಕೊರೆದು ದೇವದಾರಿನ ಹಲಿಗೆ ಗಳನ್ನು ಹಾಕಿ ಕೆಂಪು ಬಣ್ಣವನ್ನು ಹಚ್ಚುವವನಿಗೂ ಅಯ್ಯೋ!
14 que diz: Edificarei para mim uma casa espaçosa, e aposentos largos; e que lhe abre janelas, forrando-a de cedro, e pintando-a de vermelhão.
15 ನೀನು ದೇವದಾರಿನಲ್ಲಿ ನಿನ್ನನ್ನು ಮುಚ್ಚಿ ಕೊಳ್ಳುವದರಿಂದ ದೊರೆತನ ಮಾಡುವಿಯೋ? ನಿನ್ನ ತಂದೆ ಉಂಡು, ಕುಡಿದು, ನ್ಯಾಯವನ್ನೂ ನೀತಿಯನ್ನೂ ಮಾಡಲಿಲ್ಲವೋ? ಆಗ ಅವನಿಗೆ ಒಳ್ಳೆಯದಾ ಗಲಿಲ್ಲವೋ?
15 Acaso reinarás tu, porque procuras exceder no uso de cedro? O teu pai não comeu e bebeu, e não exercitou o juízo e a justiça? Por isso lhe sucedeu bem.
16 ಬಡವನ ಮತ್ತು ದರಿದ್ರನ ನ್ಯಾಯ ವನ್ನು ತೀರಿಸಿದನು. ಆಗ ಒಳ್ಳೇದಾಯಿತು; ನನ್ನನ್ನು ತಿಳುಕೊಳ್ಳುವದು ಇದೇ ಅಲ್ಲವೋ ಎಂದು ಕರ್ತನು ಅನ್ನುತ್ತಾನೆ.
16 Julgou a causa do pobre e necessitado; então lhe sucedeu bem. Porventura não é isso conhecer-me? diz o Senhor.
17 ಆದರೆ ನಿನ್ನ ಕಣ್ಣುಗಳು ನಿನ್ನ ಹೃದಯವು ನಿನ್ನ ದುರ್ಲಾಭದ ಮೇಲೆ, ಅಪರಾಧವಿಲ್ಲದವನ ರಕ್ತ ಚೆಲ್ಲುವದರ ಮೇಲೆ ಮತ್ತು ಪೀಡೆಯನ್ನೂ ಬಲಾತ್ಕಾರವನ್ನೂ ಮಾಡುವದರ ಮೇಲೆಯೇ ಹೊರತು ಮತ್ತಾವದರ ಮೇಲೆಯೂ ಇರುವದಿಲ್ಲ.
17 Mas os teus olhos e o teu coração não atentam senão para a tua ganância, e para derramar sangue inocente, e para praticar a opressão e a violência.
18 ಆದದ ರಿಂದ ಯೋಷೀಯನ ಮಗನಾದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಕರ್ತನು ಹೀಗೆ ಹೇಳುತ್ತಾನೆ--ಅವರು ಅವನನ್ನು ಕುರಿತು ಗೋಳಾಡಿ--ಹಾ, ನನ್ನ ಸಹೋದರನೇ, ಹಾ, ನನ್ನ ಸಹೋದರಿಯೇ ಎಂದು ಅನ್ನುವದಿಲ್ಲ; ಹಾ, ದೊರೆಯೇ, ಹಾ, ಅವನ ವೈಭವವೇ ಎಂದು ಅವನನ್ನು ಕುರಿತು ಗೋಳಾಡುವದಿಲ್ಲ.
18 Portanto assim diz o Senhor acerca de Jeoiaquim, filho de Josias, rei de Judá: Não o lamentarão, dizendo: Ai, meu irmão! ou: Ai, minha irmã! nem o lamentarão, dizendo: Ai, Senhor! ou: Ai, sua majestade!
19 ಕತ್ತೆಯನ್ನು ಹೂಣಿಡುವ ಪ್ರಕಾರ ಅವನನ್ನು ಹೂಣಿಡುವರು; ಅವನನ್ನು ಎಳಕೊಂಡು ಹೋಗಿ ಯೆರೂಸಲೇಮಿನ ಬಾಗಿಲುಗಳ ಆಚೆಗೆ ಬಿಸಾಡುವರು.
19 Com a sepultura de jumento será sepultado, sendo arrastado e lançado fora das portas de Jerusalém.
20 ಲೆಬನೋನಿಗೆ ಹೋಗಿ ಕೂಗು, ಬಾಶಾನಿನಲ್ಲಿ ನಿನ್ನ ಸ್ವರವನ್ನೆತ್ತು, ದಾರಿಗಳಲ್ಲಿ ಕೂಗು, ನಿನ್ನ ಪ್ರಿಯರು ನಾಶವಾಗಿದ್ದಾರೆ.
20 Sobe ao Líbano, e clama, e levanta a tua voz em Basã, e clama desde Abarim; porque são destruídos todos os teus namorados.
21 ನಿನ್ನ ಏಳಿಗೆಯಲ್ಲಿ ನಿನ್ನ ಸಂಗಡ ಮಾತನಾಡಿದೆನು; ಆದರೆ--ನಾನು ಕೇಳುವದಿಲ್ಲ ಎಂದು ನೀನು ಹೇಳಿದಿ; ನನ್ನ ಸ್ವರಕ್ಕೆ ಕಿವಿಗೊಡದಿರು ವದೇ ನಿನ್ನ ಯೌವನದ ರೀತಿಯಾಗಿದೆ.
21 Falei contigo no tempo da tua prosperidade; mas tu disseste: Não escutarei. Este tem sido o teu caminho, desde a tua mocidade, o não obedeceres à minha voz.
22 ನಿನ್ನ ಕುರುಬರನ್ನೆಲ್ಲಾ ಗಾಳಿ ತಿಂದುಬಿಡುವದು; ನಿನ್ನ ಪ್ರಿಯರು ಸೆರೆಗೆ ಹೋಗುವರು; ನಿಶ್ಚಯವಾಗಿ ಆಗ ನಿನ್ನ ಎಲ್ಲಾ ಕೆಟ್ಟತನದ ನಿಮಿತ್ತ ನಿನಗೆ ನಾಚಿಕೆಯೂ ಅವಮಾನವೂ ಆಗುವದು.
22 O vento apascentará todos os teus pastores, e os teus namorados irão para o cativeiro; certamente então te confundirás,
23 ಓ ಲೆಬನೋನಿನಲ್ಲಿ ವಾಸಮಾಡು ವವಳೇ, ದೇವದಾರುಗಳಲ್ಲಿ ಗೂಡು ಮಾಡಿಕೊಂಡ ವಳೇ, ನಿನ್ನ ಮೇಲೆ ಬೇನೆಗಳೂ ಹೆರುವವಳಂತಿರುವ ವೇದನೆಯೂ ಬರುವಾಗ ಎಷ್ಟೋ ಸುಖಕರವಾಗಿರುವಿ.
23 e tu, que habitas no Líbano, aninhada nos cedros, como hás de gemer, quando te vierem as dores, os ais como da que está de parto!
24 ಕರ್ತನು ಹೇಳುವದೇನಂದರೆ--ನನ್ನ ಜೀವ ದಾಣೆ, ಯೆಹೋಯಾಕೀಮನ ಮಗನಾದ ಯೆಹೂ ದದ ಅರಸನಾದ ಕೊನ್ಯನು ನನ್ನ ಬಲಗೈಯ ಮುದ್ರೆ ಯುಂಗರವಾಗಿದ್ದರೂ ನಿನ್ನನ್ನು ಅಲ್ಲಿಂದ ಕಿತ್ತುಹಾಕಿ
24 Vivo eu, diz o Senhor, ainda que Conias, filho de Jeoiaquim, rei de Judá, fosse o anel do selo da minha mão direita, contudo eu dali te arrancaria;
25 ನಿನ್ನ ಪ್ರಾಣವನ್ನು ಹುಡುಕುವವರ ಕೈಗೂ ನೀನು ಹೆದರಿಕೊಂಡವರ ಕೈಗೂ ಅಂದರೆ ಬಾಬೆಲಿನ ಅರಸ ನಾದ ನೆಬುಕದ್ನೆಚ್ಚರನ ಕೈಗೆ ಮತ್ತು ಕಸ್ದೀಯರ ಕೈಗೆ ಒಪ್ಪಿಸಿಬಿಡುತ್ತೇನೆ.
25 e te entregaria na mão dos que procuram tirar-te a vida, e na mão daqueles diante dos quais tu temes, a saber, na mão de Nabucodonosor, rei de Babilônia, e na mão dos caldeus.
26 ನಿನ್ನನ್ನೂ ನಿನ್ನ ಹೆತ್ತ ತಾಯಿ ಯನ್ನೂ ನೀವು ಹುಟ್ಟದಿರುವ ಬೇರೆ ದೇಶದಲ್ಲಿ ಎಸೆದು ಬಿಡುವೆನು; ಅಲ್ಲೇ ಸಾಯುವಿರಿ.
26 A ti e a tua mãe, que te deu à luz, lançar-vos-ei para uma terra estranha, em que não nascestes, e ali morrereis.
27 ಆದರೆ ಅವರು ತಿರುಗಿ ಬರುವದಕ್ಕೆ ಮನಸ್ಸು ಮಾಡುವ ದೇಶಕ್ಕೆ ಹಿಂತಿರುಗಲಾರರು.
27 Mas à terra para a qual eles almejam voltar, para lá não voltarão.
28 ಕೊನ್ಯನೆಂಬ ಈ ಮನುಷ್ಯನು ಹೀನವಾಗಿ ಒಡೆದು ಹೋದ ವಿಗ್ರಹವೋ? ಮೆಚ್ಚಿಕೆ ಇಲ್ಲದ ಪಾತ್ರೆಯೋ? ಯಾಕೆ ಅವನೂ ಅವನ ಸಂತಾನವೂ ಬಿಸಾಡಲ್ಪಟ್ಟು ತಮಗೆ ತಿಳಿಯದ ದೇಶಕ್ಕೆ ಹಾಕಲ್ಪಟ್ಟರು?
28 E este homem Conias algum vaso desprezado e quebrado, um vaso de que ninguém se agrada? Por que razão foram ele e a sua linhagem arremessados e arrojados para uma terra que não conhecem?
29 ಓ ಭೂಮಿಯೇ, ಭೂಮಿಯೇ, ಭೂಮಿಯೇ, ಕರ್ತನ ವಾಕ್ಯವನ್ನು ಕೇಳು.
29 Ó terra, terra, terra; ouve a palavra do Senhor.
30 ಕರ್ತನು ಹೀಗೆ ಹೇಳುತ್ತಾನೆ--ಈ ಮನುಷ್ಯನನ್ನು ಮಕ್ಕಳಿಲ್ಲದವನೆಂದೂ ತನ್ನ ದಿನಗಳಲ್ಲಿ ವೃದ್ಧಿಯಾಗುವ ಪುರುಷನಲ್ಲವೆಂದೂ ಬರೆ ಯಿರಿ; ಅವನ ಸಂತಾನದಲ್ಲಿ ಒಬ್ಬನಾದರೂ ದಾವೀದನ ಸಿಂಹಾಸನದಲ್ಲಿ ಕೂತುಕೊಂಡು ಯೆಹೂದದಲ್ಲಿ ಆಳುವ ಹಾಗೆ ಬಾಳುವದಿಲ್ಲ.
30 Assim diz o Senhor: Escrevei que este homem fica sem filhos, homem que não prosperará nos seus dias; pois nenhum da sua linhagem prosperará para assentar-se sobre o trono de Davi e reinar daqui em diante em Judá.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Jeremias 22, comparar traduções ou montar um estudo — tudo direto pelo WhatsApp.